Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕನ್ನಡ ವರ್ಣಮಾಲೆಯನ್ನು ಕುತ್ತಿಗೆ ಮೇಲೆ ವಿಭಿನ್ನವಾಗಿ ಟ್ಯಾಟೋ ಹಾಕಿಸಿಕೊಂಡ ನಟಿ ಮನ್ವಿತಾ ಕಾಮತ್

Posted on January 3, 2023 By Kannada Trend News No Comments on ಕನ್ನಡ ವರ್ಣಮಾಲೆಯನ್ನು ಕುತ್ತಿಗೆ ಮೇಲೆ ವಿಭಿನ್ನವಾಗಿ ಟ್ಯಾಟೋ ಹಾಕಿಸಿಕೊಂಡ ನಟಿ ಮನ್ವಿತಾ ಕಾಮತ್

 

ಚಂದನ ವನದಲ್ಲಿ ಟಗರು ಪುಟ್ಟಿ ಎಂದು ಕರೆಸಿಕೊಳ್ಳುತ್ತಿರುವ ಮನ್ವಿತಾ ಹರೀಶ್ ಅವರು ಈಗಿನ ಯುವ ಪೀಳಿಗೆಯ ಫೇವರಿಟ್ ನಟಿ. ಕೆಂಡಸಂಪಿಗೆ ಸಿನಿಮಾದ ಗೌರಿ ಅಂತಹ ಹುಚ್ಚು ಪ್ರೇಮಿಯ ಪಾತ್ರಕ್ಕೂ ಸೈ, ಅಪ್ಪ ಐ ಲವ್ ಯು ಎಂದು ಹಾಡನ್ನು ಹಾಡುವ ಟ್ರಡಿಷನಲ್ ಹುಡುಗಿ ಆಗುವುದಕ್ಕೂ ಜೈ ಎನ್ನುವ ಮನ್ವಿತ ಹರೀಶ್ ಅವರು ಅಪ್ರತಿಮ ಸೌಂದರ್ಯ ಜೊತೆಗೆ ಅಷ್ಟೇ ಟ್ಯಾಲೆಂಟೆಡ್ ನಟಿ ಕೂಡ ಹೌದು. ಮನ್ವಿತ ಹರೀಶ್ ಅವರು ನಟಿಸಿರುವುದು ಕೆಲವೇ ಸಿನಿಮಾಗಳು ಆದರೂ ಕೂಡ ಎಲ್ಲರೂ ಗುರುತಿಸುವ, ಇಷ್ಟಪಡುವ, ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿಯ ಕ್ಯಾರೆಕ್ಟರ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾ ಜೊತೆಗೆ ಮಾಡಲಿಂಗ್ ಅಲ್ಲೂ ಆಸಕ್ತಿ ಹೊಂದಿರುವ ಇವರು ಆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಪೋಸ್ಟ್ ಗಳನ್ನು ಹಾಕಿ ತಮ್ಮ ಫಾಲವರ್ಸ್ ಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಅವರ ಖಾತೆಯಿಂದ ಹೊಸ ಫೋಟೋ ಪೋಸ್ಟ್ ಆಗಿದ್ದು. ಅದರಲ್ಲಿ ಅವರ ಕುತ್ತಿಗೆಯಲ್ಲಿ ಟ್ಯಾಟು ಇರುವುದು ಕಂಡು ಬಂದಿದೆ. ಸ್ವತಃ ಅವರೇ ಅದನ್ನು ಶೀರ್ಷಿಕೆಯೊಂದಿಗೆ ಬರೆದು ಹಂಚಿಕೊಂಡಿದ್ದು ಹೇಗಿದೆ ನನ್ನ ಕಾಜಲ್ ಶೇಡ್ ಟ್ಯಾಟೂ ಎಂದು ಕೇಳಿದ್ದಾರೆ.

ಟ್ಯಾಟು ಹಾಕಿಸಿಕೊಳ್ಳುವುದು ಈಗ ಟ್ರೆಡಿಂಗ್ ಆಗಿದೆ. ಈಗಿನ ಕಾಲದ ಎಲ್ಲಾ ಯುವಕರು ಸಹ ಸಣ್ಣದೋ ಅಥವಾ ದೊಡ್ಡದೋ ಟ್ಯಾಟು ಹಾಕಿಸಿಕೊಂಡಿಯೇ ಇರುತ್ತಾರೆ. ಇನ್ನು ಕೆಲವರು ಮುಂದುವರೆದು ಕೆಲವು ವಿಶೇಷ ಅರ್ಥಗಳನ್ನು ಸೂಚಿಸುವ ಚಿಹ್ನೆಗಳನ್ನು ಸಂಕೇತಗಳನ್ನು ಟ್ಯಾಟು ಹಾಕಿಸಿಕೊಳ್ಳುತ್ತಾರೆ. ಹಲವರಿಗೆ ಇಷ್ಟದ ದೇವರ ಚಿತ್ರವನ್ನೇ ಅಥವಾ ತನ್ನ ನೆಚ್ಚಿನ ಹೀರೋ ಸಿನಿಮಾ ಹೆಸರನ್ನು ಸ್ಟೈಲಾಗಿ ಅಥವಾ ಹೀರೋ ಫೇಸ್ ಅನ್ನೇ ಅಚ್ಚಿಸಿಕೊಳ್ಳುವ ಹುಚ್ಚು ಇದೆ.

ಕಳೆದ ತಿಂಗಳಷ್ಟೇ ಕಿರುತೆರೆಯ ನಟಿ ವೈಷ್ಣವಿ ಗೌಡ ಅವರು ಸಹ ಒಂದು ವಿಶೇಷವಾದ ಟ್ಯಾಟು ಹಾಕಿಸಿಕೊಂಡು ಅದನ್ನು ಅದರ ಅರ್ಥದ ಸಹಿತ ತಿಳಿಸಿ ಹಂಚಿಕೊಳ್ಳುವ ಮೂಲಕ ಸುದ್ದಿ ಆಗಿದ್ದರು. ಅವರ ಟ್ಯಾಟು ಬಹಳ ಆಕರ್ಷಣೀಯವಾಗಿತ್ತು. ಅದಾದ ಬಳಿಕ ಹಲವರು ಅದನ್ನೇ ಫಾಲೋ ಮಾಡಿದ್ದಾರೆ. ಇದೀಗ ನಟಿ ಮನ್ವಿತ ಹರೀಶ್ ಅವರು ಹಾಕಿಸಿಕೊಂಡಿರುವ ಟ್ಯಾಟೂ ಕೂಡ ಫೇಮಸ್ ಆಗುತ್ತಿದೆ. ಮನ್ವಿತ ಹರೀಶ್ ಅವರು ಕಾಜಲ್ ಶೇಡ್ ಅಲ್ಲಿ ಟ್ಯಾಟು ಹಾಕಿಸಿಕೊಂಡಿದ್ದಾರೆ ಅವರುಸಿಕೊಂಡು ಸ್ಟೈಲಿಶ್ ಆಗಿ ಟ್ಯಾಟು ಹಾಕಿಸಿಕೊಂಡಿದ್ದಾರೆ.

ಇದನ್ನು ಅವರು ಪೋಸ್ಟ್ ಮಾಡಿದ ತಕ್ಷಣವೇ 4000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ ಮತ್ತು ಹಲವರು ಕಾಮೆಂಟ್ ಗಳಲ್ಲಿ ಇವರ ಕನ್ನಡ ಅಭಿಮಾನದ ಕುರಿತು ಖುಷಿಪಟ್ಟು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈಗ ಅವರ ಹೊಸ ಫೋಟೋಗಳಲ್ಲಿ ಕುತ್ತಿಗೆ ಮೇಲೆ ಟ್ಯಾಟು ಇರುವುದನ್ನು ಕಾಣಬಹುದಾಗಿದೆ. ನಟಿ ಮನ್ವಿತ ಅವರು ಕಳೆದ ಕೆಲವು ದಿನಗಳಿಂದ ಸಿನಿಮಾಗಳ ಕುರಿತ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ರಾಮ್ ಕುಮಾರ್ ಜೊತೆ ಶಿವ 143 ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಮತ್ಯಾವ ಅವರ ಸಿನಿಮಾಗಳು ಬಿಡುಗಡೆ ಆಗಿಲ್ಲ.

ಆದರೆ ಕೈಯಲ್ಲಿ ಬಹಳ ಆಫರ್ ಗಳು ಇದ್ದು ಆ ಕುರಿತ ಕೆಲಸಗಳಲ್ಲಿ ತಲ್ಲೀನರಾಗಿದ್ದಾರೆ. ಕನ್ನಡದ ಹೆಮ್ಮೆಯ ನಟಿ ಎಂದು ಕರೆಸಿಕೊಳ್ಳುತ್ತಿರುವ ಈ ಕನ್ನಡ ಅಭಿಮಾನಿ ಹಾಗೂ ಅಚ್ಚ ಕನ್ನಡತಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಇನ್ನಷ್ಟು ಒಳ್ಳೊಳ್ಳೆ ಆಫರ್ಗಳು ಸಿಗಲಿ ಕನ್ನಡ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸುವಂತಹ ಪಾತ್ರಗಳು ಈಕೆ ಪಾಲಿಗೆ ದಕ್ಕಲಿ ಎಂದು ಹರಸೋಣ.

View this post on Instagram

A post shared by Manvita Harish Kamath (@realmanvitakamath)

Entertainment Tags:Manvitha Harish, Manvitha Kamath, Manvitha Kamath Tatto
WhatsApp Group Join Now
Telegram Group Join Now

Post navigation

Previous Post: ಕ್ರಾಂತಿ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುವುದಕ್ಕಿಂತ ಮುಂಚೆಯೇ ಓ.ಟಿ.ಟಿ ದಿನಾಂಕ ಘೋಷಣೆ. ಬ್ಯಾನ್ ಬಯಕೆ ಹೆದರಿ ಈ ರೀತಿ ಮಾಡ್ತಿದ್ದಾರ‌.?
Next Post: ಸ್ಟಾರ್ ಗಳ ಹಿಂದೆ ಯಾಕೆ ಯಾವಗ್ಲೂ ಇರ್ತಿರಾ.? ನಿಮ್ ಲೈಫ್ ನೀವು ನೋಡ್ಕೋಳೋದು ಕಲಿರಿ. ಅಪ್ಪು, ದರ್ಶನ್ ಹೆಸರಲ್ಲಿ ಫ್ಯಾನ್ಸ್ ವಾರ್ ಮಾಡೋರಿಗೆ ತಿರುಗೇಟು ಕೊಟ್ಟ ಡಾರ್ಲಿಂಗ್ ಕೃಷ್ಣ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore