ಅಪ್ಪು ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತವೆ ಅವರ ಅ.ಗ.ಲಿ.ಕೆಯಿಂದ ನೊಂ.ದುಕೊಳ್ಳದ ಅಭಿಮಾನಿಗಳಿಲ್ಲ, ಅವರ ಪ್ರೀತಿ ವಿಶ್ವಾಸ ಅರಿಯದೆ ಇರುವ ಕನ್ನಡಿಗನಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಆ ಕೆಟ್ಟ ದಿನಕ್ಕೆ ಶಾಪ ಹಾಕಿದವರೆಷ್ಟೋ, ದೇವರ ಈ ಕ್ರೂ.ರ.ತ.ನಕ್ಕೆ ಕ್ರೋ.ಧ.ಗೊಂಡವರೆಷ್ಟೋ ಮಂದಿ ಈ ನೋ.ವನ್ನು ಇಂದಿಗೂ ಸಹಿಸಲಾಗದೆ ತಮ್ಮ ವೇದನೆಗಳನ್ನು ವಿಚಿತ್ರ ರೀತಿಯಲ್ಲಿ ಹೊರ ಹಾಕುತ್ತಿದ್ದಾರೆ. ಇತ್ತೀಚಿಗೆ ಒಬ್ಬ ಅಭಿಮಾನಿ ಅಪ್ಪು ಹುಡುಕಿ ಕೊಟ್ಟವರಿಗೆ ಪ್ರಪಂಚದಾದ್ಯಂತ ಪ್ರೀತಿ ವಿಶ್ವಾಸಗಳನ್ನು ನೀಡುವುದಾಗಿ ಕರ ಪತ್ರಗಳನ್ನು ಅಂಟಿಸಿ ತಮ್ಮ ನೋ.ವನ್ನು ಹೊರ ಹಾಕಿದ್ದರು. ಹಾಗೆ ಒಬ್ಬರು ವಯಸ್ಸಾದ ಅಂದರೆ 55 ರ ಆಸು ಪಾಸಿನ ವ್ಯಕ್ತಿಯೊಬ್ಬರು ಸ್ವಂತ ಹಾಡಿನ ಮೂಲಕ ಅಪ್ಪು ಅವರನ್ನು ನೆನೆದು ಅಭಿಮಾನಿಗಳನ್ನು ಗಮನ ಸೆಳೆದು ಸಂತಸ ಪಡಿಸಿದ್ದಾರೆ.
ಹೌದು ಅಪ್ಪು ಅವರ ವ್ಯಕ್ತಿತ್ವವೇ ಹಾಗಿತ್ತು ಅಭಿಮಾನಿ ದೇವರುಗಳ ಮನಸ್ಸನ್ನು ಎಂದಿಗೂ ನೋಯಿಸಿರಲಿಲ್ಲ ಅಲ್ಲದೇ ತಮ್ಮ ಮಗು ಮನಸಿನ ಮುಗ್ಧ ನಗುವಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದರು. ಅಪ್ಪು ಅವರ ಅ.ಗ.ಲಿ.ಕೆಯ ನೋ.ವನ್ನು ಮತ್ತಷ್ಟು ಹೆಚ್ಚು ಮಾಡಲೋಸುಗವೋ ಎಂಬಂತೆ ಹಿಂದೆ ಅಪ್ಪು ಮೀಡಿಯಾ ಮುಂದೆ ಮಾತನಾಡಿದ್ದ ಕೆಲ ವಿಡಿಯೋಗಳು ವೈರಲ್ ಆಗುತ್ತಿದ್ದು ಇದನ್ನು ನೋಡಿದ ಅಭಿಮಾನಿಗಳು ಅಪ್ಪು ಹೀಗೇಕೆ ಮಾಡಿದಿರಿ ಎಂದು ಮನಸ್ಸಲ್ಲಾದರೂ ಅಂದುಕೊಳ್ಳದೆ ಇರುವುದಿಲ್ಲ. ಇಂತಹ ಸಂಧಿಗ್ಧ ಪರಿಸ್ಥಿತಿಯನ್ನು ವಿಧಿ ನೀಡಿದ್ದಾನೆ ನಮಗೆ, ಇಷ್ಟೇ ಅಲ್ಲದೇ ಅಪ್ಪು ಅವರ ಎಂದಿಗೂ ಮಾಸದ ನಗುವೊಂದು ಅಭಿಮಾನಿಗಳನ್ನು ಕಾಡದೆ ಇರುವುದಿಲ್ಲ. ಅಂದು ಅಪ್ಪು ಅವರು ರಾಜಕೀಯದ ಬಗ್ಗೆ ಮಾತನಾಡಿದ್ದ ವಿಡಿಯೋ ಇಂದು ವೈರಲ್ ಆಗಿ ಅಭಿಮಾನಿಗಳ ಮನಸ್ಸು ಹಿಗ್ಗುವಂತೆ ಮಾಡಿ ಒಮ್ಮೆಲೆ ಕಣ್ಣೀರು ಜಾರುವಂತೆ ಮಾಡುತ್ತಿದೆ.
ವಿಡಿಯೋ ಒಂದರಲ್ಲಿ ಮೀಡಿಯದವರು ಅಪ್ಪು ಅವರನ್ನು ನೀವು ರಾಜಕೀಯಕ್ಕೆ ಹೋಗುವ ಪ್ಲಾನ್ ಏನಾದ್ರು ಇದಿಯಾ ಎಂದಾಗ ಅಪ್ಪು ಅವರು ಕ್ಷಣದಲ್ಲಿ ನೀಡಿರುವ ಉತ್ತರ ಇಂದು ಅಭಿಮಾನಿಗಳ ಹುಮ್ಮಸ್ಸಿಗೆ ಕಾರಣವಾಗಿದೆ ಎಂದರೆ ತಪ್ಪಲ್ಲ. ನನ್ನ ಮೇಲಿಟ್ಟಿರುವ ನಿಮ್ಮ ಪ್ರೀತಿ ವಿಶ್ವಾಸಗಳೇ ಇರಬೇಕಾದರೆ ರಾಜಕೀಯ ಯಾಕೆ ಬೇಕು ನಿಮ್ಮ ಪ್ರೀತಿ ವಿಶ್ವಾಸ ಒಂದೇ ಸಾಕು ಎನ್ನುವ ಅವರ ಉತ್ತರ ನಿಜಕ್ಕು ಅಭಿಮಾನಿಗಳು ಗರ್ವ ಪಡುವ ವಿಷಯ ಅಲ್ಲವೆ!? ನಾನು ಆಗಲೇ ನಿಮ್ಮ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದೇನೆ ಇನ್ನು ರಾಜಕೀಯದಿಂದ ನಂಗೇನು ಅವಶ್ಯಕತೆ ಎನ್ನುವ ಅವರ ಮಾತಿನ ಒಳಾರ್ಥಕ್ಕೆ ಪ್ರತಿಯೊಬ್ಬ ಕನ್ನಡಿಗನೂ ತಲೆ ಬಾಗಲೇಬೇಕು. ಏಕೆಂದರೆ ಇಂದು ತಮ್ಮ ಸ್ವಾರ್ಥ ಲಾಭಕ್ಕಾಗಿ ಜನರ ಪ್ರೀತಿ ವಿಶ್ವಾಸದ ಹೆಸರಿನಲ್ಲಿ ಎಷ್ಟೋ ಮಂದಿ ರಾಜಕೀಯಕ್ಕೆ ಹೋಗಿ ಜನರನ್ನು ಕಾಲಿನ ಕಸಕ್ಕಿಂತಲೂ ಕೀಳಾಗಿ ಕಾಣುವವರನ್ನು ನೋಡಿದ್ದೇವೆ ಇಂಥವರ ಮಧ್ಯೆ ನಮ್ಮ ಅಪ್ಪು ಎಂದಿಗೂ ರಾಜಕುಮಾರನೇ ಸರಿ.
ಅಪ್ಪು ಇಂದು ನಮ್ಮನ್ನು ದೈಹಿಕವಾಗಿ ಅ.ಗ.ಲಿದ್ದರೂ ಆತ್ಮಿಕವಾಗಿ ನಮ್ಮ ಅಂತರಂಗದ ನೆನಪಿನ ಬುತ್ತಿಯಲ್ಲಿ ಸದಾ ಚಿರಾಯು ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅಪ್ಪುರವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳಂತೆ ನಾವೂ ಸಹ ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಅಪ್ಪುರವರನ್ನು ಕಾಣಬಹುದು ಅಲ್ಲದೇ ಅಪ್ಪು ಅವರು ಕಂಡಿದ್ದ ಕನಸುಗಳು ಸಹ ಇವೇ ಅಲ್ಲವೆ. ಆದರೆ ಅಪ್ಪು ಅವರು ಎಲ್ಲಿಯೂ ಸಹ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಹೇಳಿಕೊಂಡವರಲ್ಲ ಅಷ್ಟೇ. ವಿದ್ಯಾದಾನ, ಅನ್ನದಾನ, ಗೋಶಾಲೆ ಇನ್ನು ಮುಂತಾದ ಚಟುವಟಿಕೆಗಳಿಗೆ ನಾಂದಿ ಹಾಡಿ ಸದ್ದಿಲ್ಲದೇ ಸೇವೆ ಮಾಡಿ ಅಪ್ಪು ಅವರು ಇಂದು ಅಮರರಾಗಿದ್ದಾರೆ. ರಾಜಕೀಯದಲ್ಲಿ ಇದ್ದವರೂ ಕೂಡ ಇಷ್ಟೊಂದು ಸಹಾಯ ಮಾಡುತ್ತಿರಲಿಲ್ಲವೇನೋ ಹಾಗಾಗಿ ರಾಜಕೀಯಕ್ಕಿಂತಲೂ ಕೂಡ ಜನಸೇವೆಯಲ್ಲಿ ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸವನ್ನು ಕಂಡ ಏಕೈಕ ವ್ಯಕ್ತಿ ಅಂದರೆ ಅದು ನಮ್ಮ ಅಪ್ಪು ಮಾತ್ರ. ನಿಮ್ಮ ಪ್ರಕಾರ ಅಪ್ಪು ರಾಜಕೀಯಕ್ಕೆ ಬಂದಿದ್ದರೆ ಏನಾಗುತ್ತಿತ್ತು. ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ಉತ್ತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.