ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆ ಅಂದರೆ ನ್ಯಾಷನಲ್ ಫಿಶ್ ಡೆವಲಪ್ಮೆಂಟ್ ಬೋರ್ಡ್ (NFDB) ಹೊಸ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ಅಧಿಸೂಚನೆಯನ್ನು ಕೂಡ ಪ್ರಕಟ ಮಾಡಿದ್ದು ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ತಿಳಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸೂಚನೆಯಲ್ಲಿರುವ ನಿಯಮಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಈ ಅಂಕಣದಲ್ಲಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಅರ್ಜಿ ಶುಲ್ಕ, ಶೈಕ್ಷಣಿಕ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ವಯೋಮಾನ ಸಡಿಲಿಕೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನು ಮುಂತಾದ ವಿಷಯಗಳನ್ನು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯ ಅಧಿಕೃತ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
ಇಲಾಖೆ:- ಮೀನುಗಾರಿಕೆ ಇಲಾಖೆ
ಉದ್ಯೋಗ ಸಂಸ್ಥೆ:- ನ್ಯಾಷನಲ್ ಫಿಶ್ ಡೆವಲಪ್ಮೆಂಟ್ ಬೋರ್ಡ್ NFDB
ಹುದ್ದೆಗಳ ಸಂಖ್ಯೆ:- 04
ಹುದ್ದೆಗಳ ವಿವರ:-
● ತಾಂತ್ರಿಕ ಸಲಹೆಗಾರ – 01
● ಮೂಲಸೌಕರ್ಯ ಸಲಹೆಗಾರ – 01
● ಹಿಂದಿ ಸಲಹೆಗಾರ – 01
● ಐಟಿ ಸಲಹೆಗಾರ – 01
ವೇತನ ಶ್ರೇಣಿ:- ಮಾಸಿಕವಾಗಿ…
● ತಾಂತ್ರಿಕ ಸಲಹೆಗಾರ – 53,000ರೂ.
● ಮೂಲಸೌಕರ್ಯ ಸಲಹೆಗಾರ – 32,000ರೂ.
● ಹಿಂದಿ ಸಲಹೆಗಾರ – 53,000ರೂ.
● ಐಟಿ ಸಲಹೆಗಾರ – 53,000ರೂ.
ವೇತನ ಶ್ರೇಣಿ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
● ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು.
ವಯೋಮಿತಿ:-
NFDB ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಬೇಕು ಗರಿಷ್ಠ 30 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:-
● SC&ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಶುಲ್ಕ:- ಯಾವುದೇ ಅರ್ಜಿ ಶುಲ್ಕ ವಿಧಿಸಿರುವುದಿಲ್ಲ.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಹೋಗಿ ನೇಮಕಾತಿ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬೇಕು.
● ನಂತರ ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧ ಪಟ್ಟ ಎಲ್ಲಾ ಪುರಾವೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಪ್ರಕ್ರಿಯ ಪೂರ್ಣಗೊಂಡ ಬಳಿಕ ಅರ್ಜಿ ಸಂಖ್ಯೆ ಮತ್ತು ವಿನಂತಿ ಸಂಖ್ಯೆಗಳನ್ನು ದಾಖಲಿಸಿ ಇಟ್ಟುಕೊಳ್ಳಬೇಕು. ಅಥವಾ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇನ್ನಿತ್ಯಾದಿ ದಾಖಲೆಗಳು
ವೆಬ್ಸೈಟ್ ವಿಳಾಸ:- https://hfdb.gov.in.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 11.04.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10.05.2023