ಜೀವನದಲ್ಲಿ ನಾವು ಕೆಲವು ವಿಷಯಗಳನ್ನು ನಮ್ಮ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ ಜೊತೆಗೆ ಸಂತೋಷದ ಕ್ಷಣಗಳನ್ನು ಅವರೊಂದಿಗೆ ಶೇರ್ ಮಾಡಿಕೊಂಡು ಇನ್ನಷ್ಟು ಖುಷಿಪಡುತ್ತೇವೆ ಆದರೆ ಕೆಲವು ವಿಷಯಗಳಿವೆ ಅವುಗಳನ್ನು ಆಪ್ತರೊಂದಿಗೆ ಆಗಲಿ ಅಥವಾ ಇನ್ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ.
ಹಾಗಾದರೆ ಅವು ಯಾವ ವಿಚಾರಗಳು ಎಂಬುವುದನ್ನು ಈ ದಿನ ತಿಳಿಯೋಣ.
* ಜೀವನದ ಮುಂದಿನ ಯೋಚನೆ ಏನು ಅಂತ ಯಾರೊಂದಿಗೂ ಹೇಳ ಬೇಡಿ ಯಾಕೆಂದರೆ ಕೆಲವು ಜನರು ನಿಮ್ಮ ಯೋಚನೆಗಳನ್ನು ಹಾಳು ಮಾಡುವುದಕ್ಕೆ ಅಂತಾನೆ ಕಾಯ್ತಾ ಇರುತ್ತಾರೆ. ಜೊತೆ ನೀವು ಜೀವನ ದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಿದ್ದೀರಿ ಅಂದರೆ ಕಾಲೆಳೆಯುವ ಜನರೇ ಜಾಸ್ತಿ ಇರುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ನೀವು ನಿಮ್ಮ ಕೆಲವೊಂದಷ್ಟು ಯೋಚನೆಗಳನ್ನು ಯಾರೊಂದಿಗೂ ಹೇಳಿಕೊಳ್ಳದೆ ಇರುವುದು ಒಳ್ಳೆಯದು.
ಈ ಸುದ್ದಿ ಓದಿ:- Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!
* ನಿಮ್ಮ ದೌರ್ಬಲ್ಯದ ಬಗ್ಗೆ ಹೇಳಬೇಡಿ ಯಾಕೆ ಎಂದರೆ ಕಾಲ ಇದ್ದಂತೆಯೇ ಇರುವುದಿಲ್ಲ. ಬದಲಾಗುತ್ತಾ ಹೋಗುತ್ತೆ ನಿಮ್ಮ ದೌರ್ಬಲ್ಯ ಅವರಿಗೆ ಬಲವಾದ ಆಯುಧ ಆಗಬಹುದು. ನಿಮ್ಮ ದೌರ್ಬಲ್ಯ ಉಪ ಯೋಗಿಸಿಕೊಂಡು ನಿಮ್ಮನ್ನು ಟೀಕಿಸಬಹುದು. ನಿಮ್ಮನ್ನು ಅಸಹ್ಯವಾಗಿ ಕಾಣಬಹುದು ಅಥವ ನಿಮ್ಮನ್ನು ಇವನ ಕೈಯಲ್ಲಿ ಏನು ಸಾಧ್ಯವಾಗುವುದಿಲ್ಲ ಎಂದು ನಿಮ್ಮನ್ನು ಟೀಕಿಸಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ನೀವು ನಿಮ್ಮಲ್ಲಿರುವಂತಹ ದೌರ್ಬಲ್ಯವನ್ನು ಹೇಳಿಕೊಳ್ಳ ಬಾರದು.
* ನಿಮ್ಮ ವೈಫಲ್ಯದ ಬಗ್ಗೆ ಹೇಳಬೇಡಿ ಅಕಸ್ಮಾತ್ ಹೇಳಿದರೆ ಅವರು ನಿಮ್ಮನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ನೀವು ಯಾವುದರಲ್ಲೂ ಯಶಸ್ಸು ಸಾಧಿಸುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಕೆಲವೊಂದಷ್ಟು ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಅಂತ ನೋಡಿ.!
ಕೆಲವೊಂದಷ್ಟು ಜನ ಕೆಲವೊಂದರಲ್ಲಿ ಸಫಲರಾದರೆ ಇನ್ನೂ ಕೆಲವೊಂದಷ್ಟು ಜನ ಕೆಲವೊಂದಷ್ಟು ವಿಚಾರಗಳಲ್ಲಿ ವಿಫಲರಾಗುತ್ತಾರೆ ಆದ್ದರಿಂದ ಯಾವುದೇ ಸಂದರ್ಭದಲ್ಲಿಯೂ ಕೂಡ ನಿಮ್ಮ ಸಫಲದ ಬಗ್ಗೆ ಆಗಲಿ ನಿಮ್ಮ ವೈಫಲ್ಯದ ಬಗ್ಗೆ ಆಗಲಿ ಹೇಳಿಕೊಳ್ಳಬೇಡಿ.
* ನಿಮ್ಮ ಗುಟ್ಟುಗಳನ್ನು ಬೇರೆಯವರಿಗೆ ಹೇಳಬೇಡಿ ಇದು ಬಹಳ ಮುಖ್ಯವಾದ ವಿಷಯ ಯಾಕೆಂದರೆ ನಿಮ್ಮ ಜೊತೆ ಯಾರು ಎಷ್ಟೇ ಆಪ್ತವಾಗಿದ್ದರೂ ಸಹ ನಿಮ್ಮ ಗುಟ್ಟುಗಳನ್ನು ಅವರೊಂದಿಗೂ ಹೇಳಬೇಡಿ. ಅವರು ಮತ್ತೊಬ್ಬರಿಗೆ ಹೇಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಆದಷ್ಟು ಮೌನವಾಗಿ ಕೆಲಸ ಮಾಡಿ. ನಾವು ಎಷ್ಟು ಮೌನವಾಗಿ ಇರುತ್ತೇವೋ ನಮಗೆ ಅಷ್ಟೇ ನೆಮ್ಮದಿಯು ಸಹ ಇರುತ್ತದೆ.
* ನಿಮ್ಮ ಆದಾಯದ ಬಗ್ಗೆ ಹೇಳಬೇಡಿ. ಹೌದು ಪುರುಷರೇ ನಿಮಗೆ ಆದಾಯ ಎಲ್ಲಿಂದ ಬರುತ್ತೆ ಎಷ್ಟು ಬರುತ್ತೆ ಎಂಬ ವಿಷಯವನ್ನು ಯಾರೊಂದಿಗೂ ಸಹ ಹೇಳಬೇಡಿ ಅದನ್ನು ಕೇಳಿ ಅವರು ಹೊಟ್ಟೆ ಕಿಚ್ಚು ಪಡಬಹುದು.
ಈ ಸುದ್ದಿ ಓದಿ:- ಈ ಯೋಗವನ್ನು ಮಾಡಿದ್ರೆ ಮಂಡಿ ನೋವು ಮಾಯವಾಗುತ್ತೆ.!
* ನಿಮ್ಮ ಮುಂದಿನ ನಡೆ ಏನು ಎಂಬುದನ್ನು ಹೇಳಬೇಡಿ ಯಾವಾಗಲೂ ಮೌನವಾಗಿ ಕೆಲಸ ಮಾಡಿ. ಯಶಸ್ಸು ಸಿಕ್ಕ ಬಳಿಕ ಕೂಡ ತೋರ್ಪಡಿಕೆ ಮಾಡಿ ಸಂಬ್ರಮಿಸಬಾರದು. ಈ ಜಗತ್ತಿನಲ್ಲಿ ಕೆಟ್ಟ ದೃಷ್ಟಿ ಕೆಟ್ಟ ಕಣ್ಣುಗಳು ಜಾಸ್ತಿ ಇರುವುದರಿಂದ ನಿಮ್ಮನ್ನು ಉರಳಿಸಬೇಕೆಂದೇ ಕಾಯುತ್ತಿರುತ್ತಾರೆ
* ನಿಮ್ಮ ಪ್ರೇಮ ಜೀವನದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಬೇಡಿ ಇದು ಅತೀ ಮುಖ್ಯವಾದ ವಿಷಯ ನೀವು ನಿಮ್ಮ ಸಂಗಾತಿಯೊಂದಿಗೆ ಎಷ್ಟು ಚೆನ್ನಾಗಿದ್ದೀರಿ ಎಂದು ಯಾರೊಂದಿಗೂ ಹೇಳಬೇಡಿ ಯಾಕೆಂದರೆ ಕೆಲವು ಜನರು ನಿಮ್ಮ ಬಾಂಧವ್ಯವನ್ನು ಹಾಳು ಮಾಡೋ ಉದ್ದೇಶದಲ್ಲಿಯೇ ಇರುತ್ತಾರೆ.
* ಯಾರನ್ನೂ ಸುಲಭವಾಗಿ ನಂಬಬೇಡಿ ಇದು ಬಣ್ಣ ಬಣ್ಣದ ಪುಪಂಚ ನಿನ್ನೊಂದಿಗೆ ಮಾತಾಡುವವರೆಲ್ಲಾ ನಿನ್ನ ನಂಬಿರುವುದಿಲ್ಲ ತಿಳಿದಿರಲಿ. ನಿನ್ನ ಬಗ್ಗೆ ಅನುಕಂಪ ತೋರಿಸುವವರೆಲ್ಲಾ ನಿನ್ನವರಲ್ಲ ಅರಿವಿರಲಿ ನಂಬಿದವರೆಲ್ಲಾ ನಂಬಿಕೆಗೆ ಅರ್ಹರಾಗಿರುವುದಿಲ್ಲ.