ಮದುವೆ ಪ್ರಮಾಣ ಪತ್ರವೂ ಪ್ರತಿಯೊಂದು ವೈವಾಹಿತರಿಗೆ ಮುಖ್ಯ ದಾಖಲೆಯಾಗಿದೆ ತಮ್ಮ ವೈವಾಹಿಕ ಸ್ಥಿತಿಯನ್ನು ಎತ್ತಿ ಹಿಡಿಯುವ ಮುಖ್ಯ ಕಾನೂನು ದಾಖಲೆಯಾಗಿದ್ದು ಹಿಂದೂ ವಿವಾಹ 125 ರ ಕಾಯ್ದೆ ಅಡಿಯಲ್ಲಿ ಈ ಸೇವೆ ನೋಂದಣಿ ಮಾಡಬಹುದಾಗಿದೆ. ದಂಪತಿಗಳಿಗೆ ಕಾನೂನು ಬದ್ಧ ವೈವಾಹಿಕ ಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ ಮತ್ತು ಪ್ರಮಾಣ ಪತ್ರದಿಂದ ಪಾಸ್ಪೋರ್ಟ್ ಪಡೆಯಲು ಮತ್ತು ಹೊಸ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡುತ್ತದೆ.
ಹಾಗೂ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಮದುವೆ ಅಥವಾ ತಮ್ಮ ಮಕ್ಕಳ ಮದುವೆ ಮಾಡುವಂತಹ ಸಂದರ್ಭದಲ್ಲಿ ತಮ್ಮ ಇಲಾಖೆಯ ವತಿಯಿಂದ ಉಚಿತವಾಗಿ ಸಿಗುವಂತಹ 60 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಮದುವೆ ನೋಂದಣಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ.
ಈ ಸುದ್ದಿ ಓದಿ:- ಮಕರ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಜಾತಕದಲ್ಲಿ ಇದೆಯಾ.? ಇಲ್ಲಿದೆ ನೋಡಿ ಮಾಹಿತಿ.!
ಇಲ್ಲವಾದರೆ ಅವರು ಕರ್ನಾಟಕ ಕಟ್ಟಡ ಕಾರ್ಮಿಕ ಮಂಡಳಿಯ ಕಡೆಯಿಂದ ಸಿಗುವಂತಹ ಉಚಿತವಾದ 60 ಸಾವಿರ ರೂಪಾಯಿ ಹಣವನ್ನು ಪಡೆಯುವುದಕ್ಕೆ ಆಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮದುವೆ ನೋಂದಣಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಹಾಗೂ ಈ ಅರ್ಜಿ ಸಲ್ಲಿಸುವುದಕ್ಕೆ ಯಾವುದನ್ನು ದಾಖಲಾತಿಗಳು ಬೇಕಾಗುತ್ತದೆ.
ಎಲ್ಲಿ ಹೋಗಿ ನೀವು ಈ ಅರ್ಜಿ ಸಲ್ಲಿಸಬೇಕು ಹಾಗೂ ಈ ಅರ್ಜಿಯನ್ನು ಮಾಡಿಸುವುದರಿಂದ ಏನೆಲ್ಲಾ ಪ್ರಯೋಜನಗಳಿದೆ ಯಾವುದೆಲ್ಲ ಕೆಲಸಕ್ಕೆ ಇದರ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ಮದುವೆ ನೋಂದಣಿ ಪ್ರಮಾಣ ಪತ್ರ ಮಾಡಿಸುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ನೋಡುವುದಾದರೆ.
* ಮೂರು ಪೇಜ್ ಇರುವಂತಹ ಅರ್ಜಿ ನಮೂನೆ.
* ಹುಡುಗ ಮತ್ತು ಹುಡುಗಿಯ ಸಂಪೂರ್ಣವಾದ ವಿಳಾಸ ಹೊಂದಿರುವಂತಹ ಆಧಾರ್ ಕಾರ್ಡ್.
* ಮೂಲ ಮದುವೆ ಆಮಂತ್ರಣ ಪತ್ರಿಕೆ
* ವಧು ಮತ್ತು ವರನ ವಯಸ್ಸಿನ ಪುರಾವೆ ಅಂದರೆ 10ನೇ ತರಗತಿ ಉತ್ತೀರ್ಣರಾಗಿರುವಂತಹ ಅವರ ಮಾರ್ಕ್ಸ್ ಕಾರ್ಡ್ ಹಾಗೂ ಅದರ ಮೇಲೆ ಇರುವಂತಹ ಅವರ ಜನ್ಮ ದಿನಾಂಕ. ಅಥವಾ ಇಬ್ಬರ ಶಾಲಾ ವರ್ಗಾವಣೆ ಪತ್ರ ಕಡ್ಡಾಯವಾಗಿ ಇರುವಂತದ್ದು.
* ವಧು ಮತ್ತು ವರನ ಪಾಸ್ಪೋರ್ಟ್ ಅಳತೆ 2 ಭಾವಚಿತ್ರ.
* ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್.
* ಇಬ್ಬರು ಒಟ್ಟಿಗೆ ನಿಂತು ತೆಗೆಸಿರುವಂತಹ ಆರು ಭಾವಚಿತ್ರಗಳು.
* ವಧು ಮತ್ತು ವರನ ಮದುವೆ ಉಡುಪು ಧರಿಸಿರುವ ಎರಡು ಭಾವಚಿತ್ರಗಳು ಮತ್ತು ಮದುವೆ ಸಮಾರಂಭದಲ್ಲಿ ಮೇಲಾಗಿ ಅವರ ಕುಟುಂಬದೊಂದಿಗೆ ಭಾಗವಹಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣುವಂತಹ ಭಾವಚಿತ್ರ.
* ಮದುವೆ ಸಮಾರಂಭದಲ್ಲಿ ಮುಖ್ಯವಾಗಿ ಭಾಗವಹಿಸಿದಂತಹ ಮೂರು ಸದಸ್ಯರ ಸಂಪೂರ್ಣ ವಿಳಾಸ.
ಈ ಸುದ್ದಿ ಓದಿ:- ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಎಳನೀರು ಅಂಗಡಿ ಹಾಕಿದರೆ ಎಷ್ಟು ದುಡಿಯಬಹುದು ಗೊತ್ತಾ.?
ಹೀಗೆ ಇಷ್ಟು ದಾಖಲಾತಿಗಳನ್ನು ನೀವು ತೆಗೆದುಕೊಂಡು ನಿಮ್ಮ ಹತ್ತಿರದ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಮದುವೆ ಪ್ರಮಾಣ ಪತ್ರವನ್ನು ಕೇವಲ 2 ರಿಂದ 3 ಗಂಟೆಯ ಒಳಗಾಗಿ ನೀವು ಪಡೆದುಕೊಳ್ಳಬಹುದಾ ಗಿದೆ. ಇದಕ್ಕೆ ಇಂತಿಷ್ಟು ಹಣವನ್ನು ಸಹ ನೀವು ಕಟ್ಟಬೇಕಾಗುತ್ತದೆ ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಸರಿಯಾದಂತಹ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಸುಲಭವಾಗಿ ಈ ಒಂದು ಮದುವೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.
ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದರಿಂದ ನಿಮ್ಮ ಕೆಲವೊಂದು ಕೆಲಸ ಕಾರ್ಯಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಕೆಲವು ಸಂದರ್ಭಗಳಲ್ಲಿ ಆಸ್ತಿ ಖರೀದಿ ಮತ್ತು ಜಂಟಿ ವ್ಯವಹಾರಗಳಲ್ಲಿ ಮದುವೆ ಪ್ರಮಾಣ ಪತ್ರವೂ ಅತಿ ಮುಖ್ಯವಾದ ದಾಖಲೆಯಾಗಿದೆ. ಹಾಗೂ ಹೋಂ ಲೋನ್ ಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಮದುವೆ ಪ್ರಮಾಣ ಪತ್ರವೂ ಮುಖ್ಯವಾಗುತ್ತದೆ.