1. ನೀವು ಶ್ರೀಮಂತರಾಗಬೇಕು ಎಂದಿದ್ದರೆ ಮೊದಲು ಹಣಕ್ಕಾಗಿ ಕೆಲಸ ಮಾಡುವುದನ್ನು ಬಿಡಿ:- ಈ ಮಾತು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದರ ಅರ್ಥವನ್ನು ಮೊದಲು ತಿಳಿದುಕೊಳ್ಳಿ. ನೀವು ಯಾವುದಾದರೂ ಕೆಲಸವನ್ನು ಹಣಕ್ಕಾಗಿ ಮಾಡುತಿದ್ದರೆ ನೀವು ವರ್ಕರ್ ಆಗಿರುತ್ತೀರಿ ಅದರ ಬದಲು ನೀವು ಕೆಲಸವನ್ನು ಆಸಕ್ತಿಯಿಂದ ಮಾಡಿದಾಗ ಅದು ನಿಮ್ಮ ಕಲೆ ಆಗುತ್ತದೆ. ಮುಂದೆ ಕಲೆ ಕರಗತವಾದರೆ ನೀವು ಅದನ್ನು ನಿಮ್ಮ ಸ್ವಂತಕ್ಕಾಗಿ ಬಳಸಿ ಉದ್ಯಮನ್ನಾಗಿ ಮಾಡಿಕೊಳ್ಳಬಹುದು. ಆದರೆ ನೀವು ವರ್ಕರ್ ಎನ್ನುವ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಯಾವುದರ ಬಗ್ಗೆಯೂ ಆಸಕ್ತಿ ಬರದೇ ಹೋಗುತ್ತದೆ.
2. ಹಣದ ಬಗ್ಗೆ ಮೊದಲು ಕಲಿಯಿರಿ:- ಇದರ ಅರ್ಥ ಏನೆಂದರೆ ನೀವು ತಿಂಗಳುಪೂರ್ತಿ ದುಡಿದು ತಿಂಗಳ ಅಂತ್ಯದಲ್ಲಿ ಬಂದ ಸಂಬಳವನ್ನು ನಿಮ್ಮ ಬಿಲ್ ಗಳ ಪಾವತಿಗಾಗಿ ಖರ್ಚು ಮಾಡುತ್ತಿದ್ದರೆ, ನೀವು ಎಷ್ಟೇ ವರ್ಷ ದುಡಿದರೂ ಕೂಡ ಇದೇ ರೀತಿ ಇರುತ್ತಿದ್ದೀರಿ. ನಿಮ್ಮ ಹಣಕಾಸಿನ ಪರಿಸ್ಥಿತಿ ಬದಲಾಗಿ ಶ್ರೀಮಂತರಾಗಬೇಕು ಎಂದರೆ ನೀವು ಹಣ ಬಂದ ತಕ್ಷಣ ಮೊದಲು ಹೂಡಿಕೆ ಮಾಡುವುದನ್ನು ಕಲಿಯಬೇಕು ಮತ್ತು ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದರ ಕುರಿತು ನಿಮಗೆ ಅರಿವಿರಬೇಕು. ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಬೇಕು ಮತ್ತು ಏನೇ ಖರೀದಿ ಮಾಡಿದರೂ ಮುಂದಾಲೋಚನೆ ಇರಬೇಕು, ಆಗಿದ್ದಾಗ ಮಾತ್ರ ಬೇಗ ಶ್ರೀಮಂತರಾಗಬಹುದು.
ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.!
3. ನಿಮ್ಮ ಪಾಡಿಗೆ ನೀವು ಇರುವುದನ್ನು ಕಲಿಯಬೇಕು:- ಶ್ರೀಮಂತರಾಗಲೇಬೇಕು ಎನ್ನುವ ಮನಸ್ಥಿತಿ ಇದ್ದರೆ ಹಣಕಾಸಿನ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿ ಇರಬೇಕು. ಆಗ ನೀವು ನಿಮ್ಮ ಆದಾಯ ವ್ಯಯಗಳ ಬಗ್ಗೆ ಹೆಚ್ಚು ಗಮನಹರಿಸುತ್ತೀರಿ. ಕೆಲವೊಮ್ಮೆ ನೀವು ಖರ್ಚು ಮಾಡಬೇಕಾದ ಅಗತ್ಯ ಇಲ್ಲದಿದ್ದರೂ ದೊಡ್ಡಸ್ಥಿಕೆಗಾಗಿ ಹಣ ವ್ಯಯ ಮಾಡುವ ಚಟವಿರುತ್ತದೆ, ಅದನ್ನು ಬಿಟ್ಟು ನಿಮ್ಮ ಗುರಿಯತ್ತ ನಡೆಯುವುದನ್ನು ಮಾತ್ರ ಮಾಡಿ.
4. ಕಲಿಯುವುದಕ್ಕಾಗಿ ದುಡಿಯುವುದನ್ನು ಕಲಿಯಿರಿ:- ಹಣ ಎಲ್ಲರಿಗೂ ಅವಶ್ಯಕ ಆದರೆ ಸದ್ಯಕ್ಕೆ ಯಾವುದೋ ಒಂದು ಪರಿಸ್ಥಿತಿಯಲ್ಲಿ ನೀವು ಸಂಬಳಕ್ಕೆ ದುಡಿಯಲು ಆಗುವುದಿಲ್ಲ ಆದರೆ ಆ ಕೆಲಸ ಮಾಡುವುದರಿಂದ ಮುಂದೆ ಒಂದು ದಿನ ದೊಡ್ಡ ಲಾಭವಾಗುತ್ತದೆ ಎನ್ನುವ ವಿಷಯ ಗೊತ್ತಿದ್ದರೆ ಅದಕ್ಕಾಗಿ ನೀವು ಡೆಡಿಕೇಟ್ ಆಗಿರಲು ತಯಾರಾಗಿರಿ. ಯಾಕೆಂದರೆ ಮುಂದೆ ಅದು ನಿಮ್ಮನ್ನು ಈಗಿರುವ ಸ್ಥಾನದಿಂದ ಎಷ್ಟೋ ಪಟ್ಟು ಎತ್ತರಕ್ಕೆ ಕೊಂಡೊಯ್ಯುವ ಆಪ್ಷನ್ ಆಗಿರಬಹುದು. ಆದರೆ ನೀವು ಯಾವ ವಿಷಯವನ್ನು ಆಯ್ಕೆ ಮಾಡುತ್ತಿದ್ದೀರಿ ಎನ್ನುವುದನ್ನು ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!
5. ಎಲ್ಲದರಿಂದಲೂ ಹಣ ಮಾಡುವ ಮನಸ್ಥಿತಿ ಇರಬೇಕು:- ಶ್ರೀಮಂತರ ಮಕ್ಕಳು ಹುಟ್ಟಿನಿಂದಲೇ ಇದನ್ನು ಕಲಿತಿರುತ್ತಾರೆ. ಯಾಕೆಂದರೆ ಅವರು ಯಾವಾಗಲೂ ಹಣ ಮಾಡುವ ಮನಸ್ಥಿತಿಯಲ್ಲಿ ಇರುತ್ತಾರೆ ನೀವು ಒಬ್ಬ ಶ್ರೀಮಂತರ ಮಗ ಹಾಗೂ ಒಬ್ಬ ಬಡವನ ಮಗನಿಗೆ ಬಲೂನ್ ತೆಗೆದುಕೊಳ್ಳಲು ಇಪ್ಪತ್ತು ರೂಪಾಯಿ ಕೊಟ್ಟರೆ ಬಡವರ ಮಗನ ಬಲೂನ್ ಖರೀದಿಸಿ ಬಹುಶಃ ಆಟ ಆಡಿ ಖುಷಿ ಪಡಬಹುದು ಅದು ಕೂಡ ಆ ವಯಸ್ಸಿಗೆ ಒಳ್ಳೆಯದೇ ಆದರೆ ಶ್ರೀಮಂತರ ಮಗ ಆ ಬಲೂನ್ ಗೆ ಗಾಳಿ ಊದಿ ಹೆಚ್ಚು ಹಣಕ್ಕೆ ಮಾರಾಟ ಮಾಡಿ ಲಾಭ ಮಾಡುವ ಮನಸ್ಸು ಮಾಡಿರುತ್ತಾನೆ. ಇಂತಹ ಮನಸ್ಥಿತಿ ಇದ್ದಲ್ಲಿ ಶ್ರೀಮಂತರಾಗುವುದು ಸುಲಭ
6. ನಿಮ್ಮ ಅಡೆತಡೆಗಳಿಂದ ದೂರ ಬನ್ನಿ:- ನೀವೇನಾದರೂ ಹಣ ಮಾಡುವ ಸಲುವಾಗಿ ಯಾವುದೋ ಒಂದು ದೊಡ್ಡ ಕೆಲಸಕ್ಕೆ ಕೈ ಹಾಕಬೇಕು ಎಂದು ಇದ್ದರೆ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನಿಮಗಿರುವ ಭಯ, ಗೊಂದಲ, ಸೋಮಾರಿತನ, ದುಶ್ಚಟಗಳು ಇವುಗಳಿಂದ ಹೊರಬಂದು ಬಹಳ ಕ’ಷ್ಟ ಪಡಿ. ಆದರೆ ನಿರ್ಧಾರ ಮಾಡುವುದು ಅಷ್ಟು ಸುಲಭವಲ್ಲ. ನೀವು ಆಯ್ಕೆ ಮಾಡುತ್ತಿರುವ ನಿರ್ಧಾರದಿಂದ ನೀವು ಸೋತರು ನಿಮ್ಮ ಜೀವನದಲ್ಲಿ ದೊಡ್ಡ ನ’ಷ್ಟವೇನು ಆಗುವುದಿಲ್ಲ ಎನ್ನುವುದಾದರೆ ಧೈರ್ಯದಿಂದ ಅದನ್ನು ಮಾಡಿ. ಒಂದು ವೇಳೆ ಇದೊಂದು ದೊಡ್ಡ ಪರಿಣಾಮ ಬೀರುವ ಅ’ಪಾ’ಯದಂತಹ ನಿರ್ಧಾರವಾಗಿದ್ದರೆ ಕೆಲಸ ಬಿಟ್ಟು ಅದಕ್ಕೆ ಇಳಿಯುವ ಬದಲು ಕೆಲಸ ಮಾಡುತ್ತಲೇ ಅದನ್ನು ಪ್ರಯತ್ನಿಸಿ ನೋಡಿ.