ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಎಷ್ಟೇ ಸ್ವಚ್ಛವಾಗಿದ್ದರೂ ಎಷ್ಟೇ ಚೆನ್ನಾಗಿ ಇಟ್ಟುಕೊಂಡಿದ್ದರು ಸಂಜೆಯ ಸಮಯ ಸೊಳ್ಳೆಗಳ ಕಾಟ ಮಾತ್ರ ತಪ್ಪುವುದಿಲ್ಲ. ಹೌದು ಅದು ಎಲ್ಲಿಂದ ಬರುತ್ತದೆ ಎಂದು ಸಹ ಹೇಳಲು ಸಾಧ್ಯವಾಗುವುದಿಲ್ಲ. ಸಂಜೆಯ ಸಮಯ ಅದರಲ್ಲೂ ಅಕ್ಕ ಪಕ್ಕದ ಜಾಗಗಳಲ್ಲಿ ಏನಾದರೂ ಬೆಳೆದಿದ್ದರೆ ಅಥವಾ ಯಾವುದಾದರೂ ಚರಂಡಿ ನೀರು ರಸ್ತೆ ಬದಿಯ ನೀರು ಅಲ್ಲಲ್ಲಿ ನಿಂತುಕೊಂಡಿದ್ದರೆ ಅಂತಹ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.
ಆ ಜಾಗದಿಂದ ಸೊಳ್ಳೆಗಳು ಸಂಜೆ ಸಮಯ ಆದಂತೆ ನಮ್ಮ ಮನೆಯ ಒಳಗಡೆ ಬರಲು ಪ್ರಾರಂಭ ಮಾಡುತ್ತದೆ. ಇದರಿಂದ ಪ್ರತಿಯೊಬ್ಬರ ಆರೋಗ್ಯದಲ್ಲಿಯೂ ತೊಂದರೆ ಉಂಟಾಗುವುದಕ್ಕೆ ಕಾರಣವಾಗುತ್ತದೆ ಎಂದೇ ಹೇಳಬಹುದು. ಅದರಲ್ಲೂ ಅಕ್ಕ ಪಕ್ಕದ ಸ್ಥಳಗಳಲ್ಲಿ ಚರಂಡಿ ನೀರಿದ್ದರೆ, ಎಥೇಚ್ಛವಾಗಿ ಕಳೆ ಗಿಡಗಳು ಇದ್ದರೆ, ಹಾಗೂ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿಯೇ ಅಲ್ಲಲ್ಲಿ ಕಸದ ಗುಂಡಿಗಳು ಇದ್ದರೆ ಇಂತಹ ಸ್ಥಳಗಳಿಂದ ಸೊಳ್ಳೆಗಳು ಉದ್ಭವವಾಗುತ್ತದೆ.
ಆದ್ದರಿಂದ ಆದಷ್ಟು ಪ್ರತಿಯೊಬ್ಬರು ಮನೆಯ ಅಕ್ಕ ಪಕ್ಕ ಮನೆಯ ಸುತ್ತಲೂ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಗಮನಹರಿಸು ವುದು ಬಹಳ ಮುಖ್ಯವಾಗಿರುತ್ತದೆ. ಹೌದು ಇಲ್ಲವಾದರೆ ಸೊಳ್ಳೆಗಳು ನಿಮಗೆ ಕಚ್ಚುವ ಮೂಲಕ ಡೆಂಗ್ಯೂ ಮಲೇರಿಯಾ ಹೀಗೆ ಇನ್ನೂ ಹಲ ವಾರು ರೀತಿಯ ತೊಂದರೆಗಳನ್ನು ಅದು ಉಂಟು ಮಾಡುತ್ತದೆ. ಅದರಿಂದ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಅನಾರೋಗ್ಯ ಉಂಟಾಗುತ್ತದೆ ಆದ್ದರಿಂದ ಮನೆಯ ಅಕ್ಕಪಕ್ಕದ ಸ್ಥಳಗಳಲ್ಲಾಗಿರಬಹುದು, ನಿಮ್ಮ ಮನೆಯ ಒಳಭಾಗದಲ್ಲಾಗಿರಬಹುದು, ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನೀವು ಗಮನಹರಿಸಬೇಕಾಗುತ್ತದೆ.
ಅದರಲ್ಲಂತೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಸಂತತಿಯು ಹೆಚ್ಚಾಗುವುದರಿಂದ ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಈ ವಿಷಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಒಳ್ಳೆಯದು. ಹಾಗಾದರೆ ಈ ದಿನ ಮನೆಯಲ್ಲಿ ಏನಾದರೂ ಸೊಳ್ಳೆಗಳು ನೊಣಗಳು ಈ ರೀತಿ ಯಾದ ಸಣ್ಣಪುಟ್ಟ ಕ್ರಿಮಿ ಕೀಟಗಳು ಇದ್ದರೆ ಅದನ್ನು ಹೇಗೆ ಮನೆಯ ಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ದೂರ ಮಾಡಿಕೊಳ್ಳುವುದು ಹಾಗೂ ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ.
ಅದನ್ನು ಹೇಗೆ ಮಾಡುವುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಈಗ ನಾವು ಮಾಡುವಂತಹ ಈ ಒಂದು ವಿಧಾನ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಬದಲಿಗೆ ಇದರಿಂದ ಬರುವಂತಹ ಹೊಗೆ ಪರಿಮಳವು ಮನೆಯಲ್ಲಿರುವಂತಹ ಸೊಳ್ಳೆ ಕ್ರಿಮಿಕೀಟಗಳನ್ನು ನಾಶ ಮಾಡುತ್ತದೆ.
ಮೊದಲು ನಾಲ್ಕರಿಂದ ಐದು ಲವಂಗವನ್ನು ತೆಗೆದುಕೊಂಡು ಅದನ್ನು ಚನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಒಂದರಿಂದ ಎರಡು ಚಮಚ ಎಳ್ಳೆಣ್ಣೆ ಯನ್ನು ಮಿಶ್ರಣ ಮಾಡಿ ಅದನ್ನು ಕನಿಷ್ಠ ಪಕ್ಷ ಒಂದರಿಂದ ಎರಡು ಗಂಟೆಗಳು ಹಾಗೆ ಬಿಡಬೇಕು. ಆನಂತರ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಈರುಳ್ಳಿಯ ಮೇಲ್ಭಾಗದಲ್ಲಿ ಎಣ್ಣೆ ಹಾಕುವುದಕ್ಕೆ ಸ್ವಲ್ಪ ರಂದ್ರವನ್ನು ಮಾಡಿಕೊಳ್ಳ ಬೇಕು.
ಆ ಒಂದು ಜಾಗಕ್ಕೆ ಈ ಎಣ್ಣೆಯನ್ನು ಹಾಕಿ ಬತ್ತಿ ಹಾಕಿ ಮನೆಯಲ್ಲಿ ಸಂಜೆಯ ಸಮಯ ಹಚ್ಚುವುದರಿಂದ ಮನೆಯಲ್ಲಿರುವಂತಹ ಸೊಳ್ಳೆ ಕ್ರಿಮಿ ಕೀಟಗಳು ಸಂಪೂರ್ಣವಾಗಿ ನಾಶವಾಗುತ್ತದೆ. ಹೌದು ಲವಂಗ ದಲ್ಲಿ ಇರುವಂತಹ ಗುಣ ಹಾಗೂ ಎಳ್ಳೆಣ್ಣೆಯಲ್ಲಿರುವಂತಹ ಗುಣ ಸೊಳ್ಳೆ ಯನ್ನು ನಾಶಪಡಿಸುತ್ತದೆ ಎಂದೇ ಹೇಳಬಹುದು. ಇದರಿಂದ ಬರುವ ಪರಿಮಳವೂ ಕೂಡ ಮನೆಯನ್ನು ಸುಗಂಧಬರಿತವಾಗಿ ಇಡುತ್ತದೆ. ಬದಲಿಗೆ ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.