ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಸಿಂಧೂರ ಲಕ್ಷ್ಮಣ ಸಿನಿಮಾದ ಬಗ್ಗೆ ಮಾತುಕತೆ ಶುರು ಆಗಿತ್ತು. ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಅವರೇ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು ಮತ್ತು ದರ್ಶನ್ ಅವರೇ ಈ ಸಿನಿಮಾದಲ್ಲಿ ನಾಯಕನಾಗಬೇಕು ಎಂದು ಕೂಡ ಅವರು ಆಸೆ ಪಟ್ಟಿದ್ದರು.
ಸುಧೀರ್ ಅವರ ಪುತ್ರ ತರುಣ್ ಸುಧೀರ್ ಅವರೇ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಆದರೆ ಕಳೆದ ವರ್ಷ ದರ್ಶನ್ ಮತ್ತು ಉಮಾಪತಿ ಮದುವೆ ಇದ್ದ ಸ್ನೇಹ ಬಿರುಕು ಬಿಟ್ಟಿದೆ. ಇವರಿಬ್ಬರು ಈಗ ಕಿತ್ತಾಕೊಂಡಿಕೊಂಡುವ ಕಾರಣ ಒಬ್ಬರಿಗೊಬ್ಬರು ಮುಖ ನೋಡಿದಷ್ಟು ದೂರವಾಗಿ ಹೋಗಿದ್ದಾರೆ ಹಾಗಾಗಿ ದರ್ಶನ್ ಈ ಚಿತ್ರದಲ್ಲಿ ಯಲ್ಲಿ ಇರುತ್ತಾರೋ ಇಲ್ಲವೋ ಎನ್ನುವ ಅನುಮಾನಗಳು ಎಲ್ಲರಿಗೂ ಇದೆ.
ಆದರೆ ನಿರ್ಮಾಪಕ ಉಮಾಪತಿ ಮಾತ್ರ ಸಿನಿಮಾ ಇಂದ ಹಿಂದೆ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಬದಲಾಗಿ ಸಿನಿಮಾದ ನಾಯಕನನ್ನು ಬದಲಾಯಿಸಿದರೂ ಸಿನಿಮಾ ಮಾಡಿ ತೀರುವ ದೃಢ ನಿರ್ಧಾರದಲ್ಲಿದ್ದಾರೆ. ಹಾಗಾದರೆ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಡಾಲಿ ಧನಂಜಯ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ.
ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳ ಪ್ರಕಾರ ಡಾಲಿ ಧನಂಜಯ ಅವರನ್ನೇ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ಕಾಣಲು ಚಿತ್ರತಂಡ ನಿರ್ಧರಿಸಿದೆಯಂತೆ. ಆದರೆ ಈ ಬಗ್ಗೆ ಡಾಲಿ ಧನಂಜಯ್ ಆಗಲಿ ನಿರ್ಮಾಪಕ ಉಮಾಪತಿ ಆಗಲಿ ನಿರ್ದೇಶಕರಾದ ತರುಣ್ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ ಆದರೆ ಈ ಬಗ್ಗೆ ಇದೇ ನಿಜ ಎನ್ನುವ ಮಟ್ಟಿಗೆ ಸುದ್ದಿ ಹರಿದಾಡುತ್ತಿರುವುದಂತೂ ನಿಜ.
ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಪಾಲಿನ ಜನರಿಗೆ ಸಿಂಧೂರ ಲಕ್ಷ್ಮಣ ಎಂದರೆ ಒಂದು ಹೆಮ್ಮೆ. ಸ್ವತಂತ್ರ ಸೇನಾನಿ ಸಿಂಧೂರ ಲಕ್ಷ್ಮಣ ಅವರು ಬ್ರಿಟಿಷರಿಗೆ ಬೆವರಳಿಸಿದ ಒಬ್ಬ ದಂಡನಾಯಕ, ಬಡವರನ್ನು ಶೋಷಣೆ ಮಾಡುತ್ತಿದ್ದ ಬ್ರಿಟಿಷರ ಕಾಯ್ದೆಗಳ ವಿರುದ್ಧ ಬಂಡಾಯ ಎದ್ದು ಶ್ರೀಮಂತರ ದವಲತ್ತಿನ ಎದುರು ನಿಂತು ಹೋರಾಟ ಮಾಡಿದ ದಟ್ಟ ಧೈರ್ಯವಂತ.
ಸಿಂಧೂರ ಲಕ್ಷ್ಮಣನನ್ನು ಉತ್ತರ ಕರ್ನಾಟಕದ ಮಂದಿ ಬಹಳ ಗೌರವಿಸುತ್ತಾರೆ, ದೇವರ ಸಮಾನವಾಗಿ ಕಾಣುತ್ತಾರೆ. ಇವರ ಕಥೆ ಕುರಿತಾಗಿ ಸಾಕಷ್ಟು ನಾಟಕಗಳು ಕೂಡ ರಂಗಭೂಮಿ ಕಲಾವಿದರಿಂದ ಮೂಡಿಬಂದಿವೆ. ನಮ್ಮ ಕರ್ನಾಟಕದ ಹೆಮ್ಮೆಯ ಕಲಾವಿದ ದಿವಂಗತ ಸುಧೀರ್ ಅವರು ಕೂಡ ಸಿಂಧೂರ ಲಕ್ಷ್ಮಣ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.
ಈಗಾಗಲೇ ಸಂಗೊಳ್ಳಿ ರಾಯಣ್ಣನಂತಹ ಪಾತ್ರ ಮಾಡಿ ಗೆದ್ದಿರುವ ದರ್ಶನ್ ಅವರು ಈ ಪಾತ್ರ ಮಾಡಿದರೆ ಚೆನ್ನಾಗಿ ಹೊಂದಿಕೆ ಆಗುತ್ತದೆ ಎನ್ನುವುದು ಎಲ್ಲರ ಅನಿಸಿಕೆ ಆಗಿತ್ತು. ಇದಕ್ಕೆ ದರ್ಶನವರು ಕೂಡ ಒಪ್ಪಿದರು, ನಂತರ ಆದ ಬೆಳವಣಿಗೆಗಳಿಂದ ಡಾಲಿ ಹೆಸರು ಕೇಳಿ ಬರುತ್ತಿದ್ದು ಡಾಲಿ ಸಹಾ ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಒಪ್ಪಿಕೊಂಡು ಬಿಜಿ ಆಗಿ ಹೋಗಿದ್ದಾರೆ.
ಇದೆಲ್ಲ ಮುಗಿದ ಬಳಿಕ ಲಕ್ಷ್ಮಣ ಚಿತ್ರ ಸೆಟ್ಟಿರುವ ಸಾಧ್ಯತೆ ಇದೆ ಇತ್ತ ನಿರ್ಮಾಪಕ ಉಮಾಪತಿ ಅವರು ಕೂಡ ಚುನಾವಣೆ ಅಲ್ಲಿ ನಿಲ್ಲುವ ಕಡೆ ಹೆಚ್ಚು ಆಸಕ್ತಿ ವಹಿಸುತ್ತಿದ್ದು ಇದೆಲ್ಲ ಮುಗಿದ ಬಳಿಕ ಅವರು ಸಹ ಈ ಬಗ್ಗೆ ಗಮನ ಹರಿಸಲಿದ್ದಾರೆ. ಉಗ್ರಂ ಮತ್ತು ಕೆಜಿಎಫ್ ಚಾಪ್ಟರ್ ಒನ್ ನಲ್ಲಿ ಕೆಲಸ ಮಾಡಿದ್ದ ಪುನೀತ್ ನಾಗವರ್ಮ ಅವರು ಕಥೆ ಕುರಿತು ಸಂಶೋಧನೆ ನಡೆಸುತ್ತಿದ್ದು ಅತ್ಯುತ್ತಮ ಸ್ಕ್ರೀನ್ ಪ್ಲೇ ರೆಡಿ ಮಾಡುತ್ತಿದ್ದಾರೆ. ಅಂದುಕೊಂಡಂತೆ ಎಲ್ಲವೂ ಆದರೆ ಮತ್ತೊಬ್ಬ ಸ್ವತಂತ್ರ ಸೇನಾನಿಯ ದೃಶ್ಯ ವೈಭವವನ್ನು ಸಿನಿಮಾ ಮಂದಿರದಲ್ಲಿ ನೋಡಿ ಕಣ್ತುಂಬಿಕೊಂಡು ಧನ್ಯರಾಗುವ ಭಾಗ್ಯ ಕನ್ನಡದ ಸಿನಿ ಪ್ರೇಕ್ಷಕರಿಗೆ ಸಿಗಲಿದೆ.