Home Useful Information ಯಾವುದೇ ಶ್ಯೂರಿಟಿ ಇಲ್ಲದೇ ಎಲ್ಲಾ ಸಾರ್ವಜನಿಕರಿಗೂ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯ ಕೇಂದ್ರ ಸರ್ಕಾರದಿಂದ ಹೋಸ ಯೋಜನೆ ಘೋಷಣೆ. ಈಗಲೇ ಅರ್ಜಿ ಸಲ್ಲಿಸಿ.

ಯಾವುದೇ ಶ್ಯೂರಿಟಿ ಇಲ್ಲದೇ ಎಲ್ಲಾ ಸಾರ್ವಜನಿಕರಿಗೂ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯ ಕೇಂದ್ರ ಸರ್ಕಾರದಿಂದ ಹೋಸ ಯೋಜನೆ ಘೋಷಣೆ. ಈಗಲೇ ಅರ್ಜಿ ಸಲ್ಲಿಸಿ.

0
ಯಾವುದೇ ಶ್ಯೂರಿಟಿ ಇಲ್ಲದೇ ಎಲ್ಲಾ ಸಾರ್ವಜನಿಕರಿಗೂ 10 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯ ಕೇಂದ್ರ ಸರ್ಕಾರದಿಂದ ಹೋಸ ಯೋಜನೆ ಘೋಷಣೆ. ಈಗಲೇ ಅರ್ಜಿ ಸಲ್ಲಿಸಿ.

 

ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ.

ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಪ್ರಾರಂಭಿಸಿದೆ. ಮುದ್ರಾ ಸಾಲ ಯೋಜನೆಯಡಿ ಸಣ್ಣ ವ್ಯಾಪಾರಿಗಳು ರೂ.10 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಯೋಜನೆಯಡಿ ಸಾಲಗಳನ್ನು ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, MFI ಗಳು ಮತ್ತು NBFC ಗಳ ಮೂಲಕ ಒದಗಿಸಲಾಗುತ್ತದೆ.

ಮುದ್ರಾ ಸಾಲ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಪ್ರಕ್ರಿಯೆ :
ಈ ಯೋಜನೆಯಡಿ ಸಾಲ‌ ಪಡೆಯಲಿಚ್ಚಿಸುವವರು ತಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಸಾಲ ಯೋಜನೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆ ನಮೂನೆಯೊಂದಿಗೆ ಸಾಲ ಪಡೆಯಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಹ ಸಲ್ಲಿಸಬೇಕು.
ಈ ಯೋಜನೆಯ ಮೂಲಕ ಸಾಲ ಪಡೆಯಲು ಆನ್ಲೈನ್ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದ್ದು ಕೆಳಗೆ ವಿವರಿಸಿದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು, ಮೊದಲು ಅಧಿಕೃತ ವೆಬ್ಸೈಟ್ udyamimitra.in ಗೆ ಭೇಟಿ ನೀಡಿ. ಅದರ ಮುಖಪುಟದಲ್ಲಿ ಮುದ್ರಾ ಲೋನ್ ಗೆ ಅನ್ವಯಿಸುವ ಲಿಂಕ್ ಅನ್ನು ಒತ್ತಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ. ನಂತರ ನಿಮ್ಮ ಫೋನ್ ಗೆ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್’ನ್ನ ಎಸ್ ಎಂ‌ಎಸ್ ಮೂಲಕ ಕಳುಹಿಸಲಾಗುತ್ತದೆ. ಇದರ ನಂತರ ಅರ್ಜಿ ನಮೂನೆಯನ್ನ ಸಂಪೂರ್ಣವಾಗಿ ಭರ್ತಿ ಮಾಡಿ. ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ ನಂತರ ಕ್ಯಾಪ್ಚಾ ನಮೂದಿಸಿ ಮತ್ತು ಸಲ್ಲಿಸಿ ನಿಮ್ಮ ಅರ್ಜಿ ನಮೂನೆಯನ್ನು ಸ್ವೀಕರಿಸಲಾಗುತ್ತದೆ.

ಸಾಲ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು.!

ಮೊದಲನೆಯಾಗಿ ಸಾಲ ಪಡೆಯಲು ಇಚ್ಚಿಸುವವರು ಸಂಪೂರ್ಣ ವ್ಯಾಪಾರ ಯೋಜನೆಯನ್ನು ಹೊಂದಿರಬೇಕು. ಇದರ ಜೊತೆಗೆ‌ ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಯಾವುದೇ ಇತರ ಅಗತ್ಯವಿರುವ ಯುಟಿಲಿಟಿ ಬಿಲ್‌, ನೀವು SC, ST ಅಥವಾ OBC ವರ್ಗಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣಪತ್ರವನ್ನು ಸಹ ಸಲ್ಲಿಸಬೇಕು. ಇದರೊಂದಿಗೆ ಈ ಸಾಲ ಪಡೆಯಲು 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ತಮ್ಮ ಆದಾಯ ಪ್ರಮಾಣಪತ್ರವನ್ನು ಸಹ ನೀಡಬೇಕು. ಅಲ್ಲದೆ ನಿಮ್ಮ ವ್ಯಾಪಾರ, ವಿಳಾಸ, ವ್ಯಾಪಾರದ ಯಾವುದೇ ಅಗತ್ಯ ಪುರಾವೆಗಳನ್ನು ನೀವು ಒದಗಿಸಬೇಕು.

ಮುದ್ರಾ ಸಾಲದ ಮೇಲಿನ ಬಡ್ಡಿ ದರಗಳ ವಿವರ-
ಈ ಯೋಜನೆಯಡಿ ಸಾಲ‌ ಪಡೆಯಲು ಯಾವುದೇ ಸ್ಥಿರ ಬಡ್ಡಿ ದರವಿಲ್ಲ. ಸಾಮಾನ್ಯವಾಗಿ ಕನಿಷ್ಠ ಬಡ್ಡಿ ದರವು 12% ಆಗಿದೆ. ಮುದ್ರಾ ಸಾಲ ಯೋಜನೆಯಡಿ ಸಣ್ಣ ವ್ಯಾಪಾರವನ್ಮು ಪ್ರಾರಂಭಿಸಲು ಗರಿಷ್ಠ 10 ಲಕ್ಷದವರೆಗೆ ಸುಲಭವಾಗಿ ಸಾಲವನ್ನ ಪಡೆಯಬಹುದಾಗಿದ್ದು ಎರವಲು ಪಡೆದ ಹಣವು ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕಾಗಿರುತ್ತದೆ.

LEAVE A REPLY

Please enter your comment!
Please enter your name here