Sunday, June 4, 2023
HomeViral Newsಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್...

ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.

 

ಬಹುಭಾಷ ನಟಿ ಪವಿತ್ರ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ಮತ್ತು ಹೆಸರಾಂತ ನಿರ್ದೇಶಕಿ ವಿಜಯ ನಿರ್ಮಲ ಅವರ ಹಿರಿಯ ಮಗ ನರೇಶ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದವು. ಕೆಲ ದಿನಗಳಿಗಂತೂ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಇದೇ ಹಾಟ್ ಟಾಪಿಕ್ ಆಗಿತ್ತು. ನಂತರ ಮೈಸೂರಿನಲ್ಲಿ ಹೋಟೆಲ್ ರೂಮ್ನಲ್ಲಿ ನರೇಶ್ ಮೂರನೇ ಪತ್ನಿ ರಮ್ಯ ಬಂದು ಮಾಡಿದ ಹೈಡ್ರಾಮ ಎಪಿಸೋಡ್ ಗಟ್ಟಲೇ ಪ್ರಸಾರವಾಗಿದ್ದವು.

ಇಷ್ಟಾದ ಬಳಿಕ ಎಲ್ಲೂ ಸದ್ದಿಲ್ಲದೆ ಇದ್ದ ಈ ಇಬ್ಬರ ಜೋಡಿ ಈ ವರ್ಷ 2023 ರನ್ನು ಹೊಸ ರೀತಿ ಆರಂಭಿಸಿ ತಾವಿಬ್ಬರೂ ಸದ್ಯದಲ್ಲೇ ಮದುವೆ ಮೂಲಕ ಒಂದಾಗಲಿದ್ದೇವೆ ಎನ್ನುವ ಸೂಚನೆಯನ್ನು ಕೂಡ ಕೊಟ್ಟು ಪ್ರೀ ವೆಡ್ ಶೂಟ್ ರೀತಿಯ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಇಂದು ಇದಕ್ಕಿದ್ದಂತೇ ಸೋಶಿಯಲ್ ಮೀಡಿಯಾದಲ್ಲೆಲ್ಲಾ ನರೇಶ್ ಮತ್ತು ಪವಿತ್ರ ಲೋಕೇಶ್ ಅವರ ಮದುವೆ ಆಗಿರುವ ಹೊಸ ವಿಡಿಯೋಗಳು ಸದ್ದು ಮಾಡುತ್ತಿವೆ.

ಇದು ಯಾವುದೋ ಸಿನಿಮಾದ ಶೂಟಿಂಗ್ ಇರಬಹುದಾ ಅಥವಾ ನಿಜವಾದ ಮದುವೆಯ ಎನ್ನುವಷ್ಟರ ಮಟ್ಟಿಗೆ ಮದುವೆಯ ಕ್ಷಣಗಳನ್ನು ಅದ್ಭುತವಾಗಿ ಸೆರಿ ಹಿಡಿಯಲಾಗಿದ್ದು, ಶಾಸ್ತ್ರೋಕ್ತವಾಗಿ ಹಸೆಮಣೆ ಮೇಲೆ ಇಬ್ಬರು ಕಂಕಣ ಕಟ್ಟಿಕೊಂಡು, ಕೈ ಕೈ ಹಿಡಿದು ಶಾಸ್ತ್ರ ಮಾಡುತ್ತಿರುವ ಮತ್ತು ಸಪ್ತಪದಿ ತುಳಿಯುತ್ತಿರುವ ಕ್ಷಣಗಳು ಸೇರಿದಂತೆ ಮದುವೆ ಝಲಕ್ ತೋರಿರುವ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಇಂದು ತೆಲುಗು ನಿರ್ಮಾಪಕ ಮತ್ತು ನಟ ನರೇಶ್ ಅವರೇ, ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಹೊಸ ಸಂಚಲವನ್ನು ಸೃಷ್ಟಿ ಮಾಡಿದ್ದಾರೆ ಇಷ್ಟಾಗಿದೆ ತಡ ಇದೇ ಇಂದಿನ ಟ್ರೆಂಡಿಂಗ್ ಸುದ್ದಿ ಆಗಿ ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ ಬದುಕಿನ ಅರ್ಧಕ್ಕಿಂತಲೂ ಹೆಚ್ಚಿನ ಜೀವನ ಸವೆಸಿರುವ ಈ ಜೋಡಿಗಳು ಈಗ ಮದುವೆ ಆಗಲು ಮಾಡಿರುವ ನಿರ್ಧಾರ ಎಲ್ಲರಿಗೂ ಆಶ್ಚರ್ಯ ತರದೇ ಇರಲಾರದು.

ಇದಕ್ಕಿಂತ ಆಶ್ಚರ್ಯ ಆಗುವ ವಿಷಯ ಏನೆಂದರೆ ಈಗ ಮದುವೆ ಆಗುತ್ತಿರುವ ಈ ಮಧುಮಗ ನರೇಶ್ ಅವರಿಗೆ ಇದು ನಾಲ್ಕನೇ ಮದುವೆ ಆಗಿದೆ, ಜೊತೆಗೆ ಕನ್ನಡ ಮೂಲದಿಂದ ತನ್ನ ಕೆರಿಯರ್ ಶುರು ಮಾಡಿ ಈಗ ಪರಭಾಷೆಗಳಲ್ಲಿ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ಕನ್ನಡದ ನಟಿ ಪವಿತ್ರ ಲೋಕೇಶ್ ಅವರಿಗೆ ಇದು ಎರಡನೇ ವಿವಾಹ ಆಗಿದೆ. ಇವರಿಬ್ಬರಿಗೂ ವಿವಾಹಕ್ಕೆ ಹೊರತಾಗಿ ಸ್ನೇಹಕ್ಕೂ ಮಿಗಿಲಾಗಿ ಸಂಬಂಧ ಇದೆ ಎಂದು ಕಳೆದ ವರ್ಷ ನರೇಶ್ ಮೂರನೇ ಪತ್ನಿ ರಮ್ಯ ಮೀಡಿಯಾಗಳ ಮುಂದೆ ಬಂದು ಬಹಿರಂಗವಾಗಿ ಎಲ್ಲವನ್ನು ವರದಿ ಒಪ್ಪಿಸಿದ್ದರು.

ಆ ಅಕ್ರಮ ಸಂಬಂಧದ ಬಗ್ಗೆ ತಮ್ಮ ಆ.ಕ್ರೋ.ಶ ಹೊರಹಾಕಿದ್ದರು. ಈಗ ಎಲ್ಲರ ಬಾಯಿ ಮುಚ್ಚಿಸಲೋ ಅಥವಾ ಸ್ವ ಇಚ್ಛೆಯಿಂದಲೋ ಸತಿಪತಿಗಳಾಗೆ ಬಾಳಲು ಹಸೆಮಣೆ ಹತ್ತಿದ್ದಾರೆ. ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋ ಅಲ್ಲಿ ಆಪ್ತರ ಸ್ನೇಹಿತರು ಮತ್ತು ಕುಟುಂಬಸ್ಥರಸ್ತೆಗಷ್ಟೇ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕನ್ನಡ ಮತ್ತು ತೆಲುಗು ಇಂಡಸ್ಟ್ರಿಯನ್ನೇ ಶೇಕ್ ಮಾಡಿದ್ದ ಈ ಜೋಡಿಯ ಸುದ್ದಿ ಈಗ ಮದುವೆ ಆಗುವ ಮೂಲಕ ಮತ್ತೊಂದು ರೀತಿಯ ಶಾಕ್ ಕೂಡ ನೀಡಿದೆ. ಇವರಿಬ್ಬರ ಮದುವೆ ಬಗ್ಗೆ ನೀವು ಸಹ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ.