ತೆಲುಗಿನ ಸ್ಟಾರ್ ಹೀರೋ ನಾಗಾರ್ಜುನ್ ಟಾಲಿವುಡ್ ನ ಎವರ್ ಗ್ರೀನ್ ಹೀರೋ. ತಮ್ಮ ಮಕ್ಕಳಾದ ನಾಗ ಚೈತನ್ಯ ಅಕ್ಕಿನೇನಿ ಮತ್ತು ಅಖಿಲ್ ಲಕ್ಕಿನೇನಿ ಕೂಡ ಸಿನಿಮಾ ರಂಗಕ್ಕೆ ಹೀರೋಗಳಾಗಿ ಲಾಂಚ್ ಆಗಿ ಮಿಂಚುತ್ತಿದ್ದರು ಇನ್ನೂ ಕೂಡ ನಾಗರ್ಜುನ್ ಅವರಿಗೆ ನಾಯಕನಾಗಿ ನಟಿಸಲು ಅಷ್ಟೇ ಬೇಡಿಕೆ ಇದೆ. ಈ ರೀತಿ ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಾಗಾರ್ಜುನ್ ಅವರಿಗೆ ಇನ್ನೂ ಅನೇಕ ವರ್ಷ ಇಂತಹದೇ ಬೇಡಿಕೆ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ನಾಗಾರ್ಜುನ ಮಕ್ಕಳಾದ ನಾಗಚೈತನ್ಯ ಮತ್ತು ಅಖಿಲ್ ಅವರು ನಾಗಾರ್ಜುನ ಅವರ ಬೇರೆ ಬೇರೆ ಪತ್ನಿಯರ ಮಕ್ಕಳು. ರಾಮ ನಾಯ್ಡು ಅವರ ಮಗಳಾದ ಲಕ್ಷ್ಮಿ ಪುತ್ರ ನಾಗಚೈತನ್ಯ. ನಾಗಚೈತನ್ಯ ಹುಟ್ಟಿದ ಕೆಲವೇ ದಿನಗಳಿಂದ ವೈಯಕ್ತಿಕ ಕಾರಣಗಳಿಂದ ಪತಿ ಪತ್ನಿ ವಿಚ್ಛೇದನ ಪಡೆದಿದ್ದರು ಆ ಸಮಯದಲ್ಲಿ ಮೂಲತಃ ಬೆಂಗಾಳಿ ನಟಿಯಾದ ಅಮಲ ನಾಗಾರ್ಜುನ್ ಅವರ ಲೈಫ್ ಗೆ ಎಂಟ್ರಿ ಕೊಡುತ್ತಾರೆ.
ಅಮಲಾ ಅವರು ಮೊದಲು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡು ಬಹುತೇಕ ಎಲ್ಲಾ ತಮಿಳು ಸೂಪರ್ ಸ್ಟಾರ್ಗಳ ಜೊತೆ ಅಭಿನಯಿಸುತ್ತಾರೆ ನಂತರ ತೆಲುಗು ಇಂಡಸ್ಟ್ರಿ ಕಡೆ ಬಂದ ಇವರು ನಾಗಾರ್ಜುನ ಜೊತೆ ಶಿವ ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಆ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರುತ್ತದೆ. ನಂತರ ಅದನ್ನು ಮದುವೆ ಹಂತಕ್ಕೂ ತೆಗೆದುಕೊಂಡ ಹೋದ ಈ ದಂಪತಿಗಳಿಗೆ ಅಖಿಲ್ ಅಕ್ಕಿನೇನಿ ಮಗನಾಗಿದ್ದಾರೆ.
ಅಮಲ ಅವರು ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದ್ದಾಗಲೇ ಚಿತ್ರರಂಗದಿಂದ ದೂರ ಉಳಿದು ಕುಟುಂಬದ ಕಡೆ ಗಮನಕೊಟ್ಟರು. ಪ್ರಾಣಿಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಇವರು ಅವುಗಳಿಗಾಗಿ ಒಂದು ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯತ್ತ ತಮ್ಮ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಈ ರೀತಿ ಸಮಾಜ ಸೇವೆ ಮಾಡುವವರನ್ನು ನಾವು ಬೇರೆ ದೃಷ್ಟಿಕೋನದಿಂದ ನೋಡುತ್ತೇವೆ. ಯಾಕೆಂದರೆ ಅವರ ಜೀವನವು ಬಹಳ ಸರಳವಾಗಿರುತ್ತದೆ. ಉದಾಹರಣೆಯಾಗಿ ನಮ್ಮ ಕನ್ನಡದ ಹೆಮ್ಮೆಯ ಲೇಖಕಿ ಮತ್ತು ಇನ್ಫೋಸಿಸ್ ಒಡತಿ ಸುಧಾ ಮೂರ್ತಿ ಅವರನ್ನು ಹೆಸರಿಸಬಹುದು. ಸುಧಾ ಮೂರ್ತಿ ಅವರನ್ನು ಕಂಡಾಗಲಿಲ್ಲ ಕೋಟಿ ಕೋಟಿ ಒಡತಿ ಆಗಿದ್ದರೂ ಎಷ್ಟು ಸರಳವಾಗಿದ್ದರೆ ಜೊತೆಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ.
ಇದೇ ರೀತಿ ದಾರಿಯನ್ನು ಅಮಲಾ ಅವರು ಹಿಡಿದಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕೋಟಿ ಕೋಟಿ ಆಸ್ತಿಗೆ ಯಜಮಾನಿ ಆಗಿದ್ದರೂ ಕೂಡ ಅಮಲ ಅವರು ಎಂದು ಕೂಡ ಶೋ ಆಫ್ ಮಾಡಿದವರಲ್ಲ. ಚೂರು ಬಂಗಾರ ಕೂಡ ಧರಿಸಲು ಅವರು ಇಚ್ಛೆಪಡುವುದಿಲ್ಲ. ಇತ್ತೀಚಿಗಿನ ಅವರ ಯಾವ ಫೋಟೋ ನೋಡಿದರು ಕೂಡ ಅವರು ಬಹಳ ಸಿಂಪಲ್ ಆಗಿ ಇರುತ್ತಾರೆ. ಆದರೆ ಹಲವರು ಇದಕ್ಕೆ ಅವರಿಗೆ ಸ್ಕಿನ್ ಅಲರ್ಜಿ ಇರುವುದೇ ಕಾರಣ ಎಂದು ಹೇಳುತ್ತಿದ್ದಾರೆ.
ಚಿನ್ನ ಹಾಕಿದರೆ ರಾಶಸ್ ಆಗುತ್ತದೆ ಎನ್ನುವ ಕಾರಣಕ್ಕಾಗಿ ಅವರು ಚಿನ್ನ ಧರಿಸುತ್ತಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಅವರು ತಮ್ಮ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಂಡಿದ್ದಾರೆ. ಸಮಾಜಮುಖಿಯಾಗಿ ಸಮಾಜಸೇವೆಯಲ್ಲಿ ತೊಡಗಿತಕೊಂಡ ಮೇಲೆ ಈ ರೀತಿ ಸರಳವಾಗಿ ಬದುಕುವುದನ್ನು ಅವರು ಅಳವಡಿಸಿಕೊಂಡಿರುವ ಕಾರಣ ಇದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.