ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ನರ ದೌರ್ಬಲ್ಯ, ನರ ಸೆಳೆತ ಸುಸ್ತು ಹಾಗೂ ಶಕ್ತಿ ಇಲ್ಲದೆ ಇರುವುದು. ಹೀಗೆ ಇನ್ನೂ ಹಲವಾರು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದು ಹೆಚ್ಚಿನ ಜನ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ.
ಆದರೆ ಈಗ ನಾವು ಹೇಳುವ ಈ ಒಂದು ವಿಧಾನವನ್ನು ನೀವು ಅನುಸರಿಸುವುದರಿಂದ ಜೀವನ ಪರ್ಯಂತ ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ನಿಮ್ಮ ಹತ್ತಿರವೂ ಕೂಡ ಬರದ ಹಾಗೆ ನೋಡಿಕೊಳ್ಳಬಹುದು ಹೌದು.
ಎಷ್ಟೇ ನಿಶಕ್ತಿ ಸುಸ್ತು ಇದ್ದರೂ ಅವೆಲ್ಲವನ್ನು ಸಹ ಈ ಒಂದು ಮನೆ ಮದ್ದು ಗುಣ ಪಡಿಸುತ್ತದೆ. ಹಾಗಾದರೆ ಈ ದಿನ ಇಷ್ಟೆಲ್ಲಾ ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಆ ಪದಾರ್ಥ ಯಾವುದು ಅದರ ಗುಣ ಧರ್ಮ ಏನು ಹಾಗೂ ಅದನ್ನು ಯಾವ ರೀತಿಯಾಗಿ ಉಪಯೋಗಿಸ ಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಹೌದು ಆ ಒಂದು ಪದಾರ್ಥವೇ ಅಶ್ವಗಂಧ. ಹಾಗಾದರೆ ಈ ಅಶ್ವಗಂಧ ಯಾವ ರಸ ಸ್ವಾದವನ್ನು ಹೊಂದಿದೆ ಎಂದು ನೋಡುವುದಾದರೆ. ಮಧುರ, ತಿಕ್ತ, ಮತ್ತು ಕಷಾಯ ಸ್ವಾದಗಳನ್ನು ಇದು ಹೊಂದಿದೆ. ಮಧುರ ಎಂದರೆ ಸಿಹಿ ಅಂಶ ಹಾಗೂ ತಿಕ್ತ ಎಂದರೆ ಕಹಿ ಮತ್ತು ಕಷಾಯ ಎಂದರೆ ಒಗರು ಈ ಮೂರು ರಸರುಚಿಗಳನ್ನು ಅಶ್ವಗಂಧ ಹೊಂದಿದೆ.
* ಇನ್ನು ಇದರ ವೀರ್ಯ ಗುಣ ನೋಡುವುದಾದರೆ ಇದೊಂದು ಉಷ್ಣ ವೀರ್ಯ ದ್ರವ್ಯ ಗುಣ ಧರ್ಮವನ್ನು ಹೊಂದಿರುವಂಥ ಪದಾರ್ಥವಾಗಿದೆ.
* ಹಾಗೆಯೇ ಇದರ ವಿಶೇಷ ಗುಣಗಳು ಸ್ನಿಗ್ಧ ಮತ್ತು ಲಘು. ಇದು ಶರೀರದಲ್ಲಿ ಸ್ನಿಗ್ಧತೆಯನ್ನು ಮತ್ತು ಲಘುತ್ವವನ್ನು ಹೆಚ್ಚಿಸುತ್ತದೆ.
ಹಾಗಾದರೆ ಇದು ಯಾವ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ನೋಡುವುದಾದರೆ.
* ವಾತ ಮತ್ತು ಕಫಗಳನ್ನು ಸಮತೋಲನದಲ್ಲಿಡುವಂತಹ ಶಕ್ತಿಯನ್ನು ಈ ಅಶ್ವಗಂಧ ಹೊಂದಿದೆ.
ಹಾಗೂ ಈ ಅಶ್ವಗಂಧದ ಲಾಭಗಳು ಏನು ಎಂದು ನೋಡುವುದಾದರೆ.
* ಇದು ವಾತ ಮತ್ತು ಕಫದಿಂದ ಬರುವಂತಹ ರೋಗಗಳನ್ನು ದೂರ ಮಾಡುವಲ್ಲಿ ಇದು ಬಹಳ ಪ್ರಮುಖವಾಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ಹಾಗಾದರೆ ಅಶ್ವಗಂಧವನ್ನು ಯಾವ ಯಾವ ರೋಗಗಳಲ್ಲಿ ಯಾವ ರೀತಿಯಾಗಿ ಉಪಯೋಗಿಸಬೇಕು ಎಂದು ನೋಡುವುದಾದರೆ.
* ಯಾರಿಗೆ ಎದೆಯಲ್ಲಿ ಕಫ ಕಟ್ಟಿಕೊಳ್ಳುವುದು, ಉಸಿರಾಟದ ಸಮಸ್ಯೆ ನ್ಯುಮೋನಿಯಾ ಹಾಗೂ ಟಿವಿ ಎನ್ನುವಂತಹ ಸಮಸ್ಯೆಗಳೇನಾದರೂ ಇದ್ದರೆ ಅಂತವರು ಹಾಗೂ ಯಾವುದೇ ರೀತಿಯಲ್ಲಿ ಧಾತು ಕ್ಷಯವಾಗಿ ಕ್ಷಯ ಸಂಭವಿಸಿದೆ ಎಂದರೆ ಅದನ್ನು ಕ್ಷಯರೋಗ ಎಂದು ಕರೆಯು ತ್ತೇವೆ. ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ಕೂಡ ಈ ಅಶ್ವ ಗಂಧದ ರಸಾಯನವನ್ನು ಸೇವನೆ ಮಾಡಬಹುದು.
* ಯಾರಿಗೆ ಮಾಂಸಖಂಡಗಳಲ್ಲಿ ನಿಶಕ್ತಿ ನರ ದೌರ್ಬಲ್ಯತೆ, ಕೈಕಾಲು ಗಳಲ್ಲಿ ಬಲ ಇಲ್ಲದೆ ಇರುವುದು, ಮೆದುಳಿನ ನಿಷ್ಕ್ರಿಯತೆ, ಹಾಗೂ ಕಣ್ಣಿನ ನರನಾಡಿಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಅಂತವರು ಅಶ್ವಗಂಧ ವನ್ನು ದಿನಕ್ಕೆ ಒಂದು ಚಮಚದಂತೆ ಸೇವನೆ ಮಾಡಬೇಕು. ಇದರ ಅನುಪಾನವಾಗಿ ಹಾಲು ಮತ್ತು ತುಪ್ಪದ ಜೊತೆ ಸೇವನೆ ಮಾಡಬಹುದು ಇದರಿಂದ ಪಿತ್ತದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವು ದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.