Home Useful Information ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

0
ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!

 

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಸ್ನಾನ ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆದರೆ ಆ ತಪ್ಪುಗಳು ಯಾವುದು ಎಂದು ಸಹ ನಮಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ನಾವು ಆ ತಪ್ಪನ್ನು ಸರಿ ಎನ್ನುವ ಹಾಗೆ ಮಾಡುತ್ತಿರುತ್ತೇವೆ ಆದರೆ ಆ ರೀತಿ ಅನುಸರಿಸುವುದರಿಂದ ಯಾವ ಕೆಲವು ಸಮಸ್ಯೆಗಳು ಉಂಟಾ ಗುತ್ತದೆ ಎನ್ನುವ ಆಲೋಚನೆಯನ್ನು ಸಹ ನಾವು ಮಾಡುವುದಿಲ್ಲ.

ಆದ್ದರಿಂದ ಸ್ನಾನ ಮಾಡುವಂತಹ ಸಮಯದಲ್ಲಿ ಕೆಲವೊಂದಷ್ಟು ಉತ್ತಮವಾದ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು ಹಾಗೇನಾದರೂ ನಾವು ಅದನ್ನು ಅನುಸರಿಸದೇ ಇದ್ದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅಂದರೆ ತೊಂದರೆಗ ಳನ್ನು ಅನುಭವಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಸ್ನಾನ ಮಾಡುವ ಸಮಯದಲ್ಲಿ ನಾವು ಯಾವ ರೀತಿಯ ತಪ್ಪುಗಳನ್ನು ಮಾಡುತಿದ್ದೇವೆ ಹಾಗೂ ಅದನ್ನು ಯಾವ ವಿಧಾನದಲ್ಲಿ ಸರಿಪಡಿಸಿಕೊಳ್ಳಬೇಕು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ತಲೆ ಸ್ನಾನ ಮಾಡುವಂತಹ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಶಾಂಪೂವನ್ನು ನೇರವಾಗಿ ನಮ್ಮ ತಲೆ ಕೂದಲಿಗೆ ಹಚ್ಚುತ್ತೇವೆ. ಆದರೆ ಆ ರೀತಿ ಹಚ್ಚುವುದರಿಂದ ಶಾಂಪೂವಿನಲ್ಲಿ ಇರುವ ಕೆಮಿಕಲ್ ಗಳು ನಮ್ಮ ತಲೆಕೂದಲಿನ ಬುಡಕ್ಕೆ ಹೋಗಿ ಸೇರುತ್ತದೆ.

ಇದರಿಂದ ತಲೆ ಕೂದಲು ಬೇಗ ಕೆಂಚಾಗುತ್ತದೆ ಹಾಗೂ ತಲೆಕೂದಲು ಕೂಡ ಉದುರುವುದಕ್ಕೆ ಪ್ರಾರಂಭವಾಗುತ್ತದೆ. ಆದ್ದರಿಂದ ಶಾಂಪೂ ಬಳಸುವ ಮೊದಲು ಅದನ್ನು ಒಂದು ಚಿಕ್ಕ ಬೌಲಿಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಆನಂತರ ಅದನ್ನು ಹಚ್ಚಿ ತಲೆ ಸ್ನಾನ ಮಾಡುವುದರಿಂದ ತಲೆ ಕೂದಲಿಗೆ ಯಾವುದೇ ರೀತಿಯಾದ ತೊಂದರೆ ಉಂಟಾಗುವುದಿಲ್ಲ.

* ಪದೇ ಪದೇ ನಾವು ಸ್ನಾನ ಮಾಡುವಂತಹ ಸಮಯದಲ್ಲಿ ಅತಿ ಹೆಚ್ಚು ಸಾಬೂನನ್ನು ಬಳಸುವುದರಿಂದ ನಮ್ಮ ಚರ್ಮದಲ್ಲಿ ಇರುವಂತಹ ಎಣ್ಣೆಯ ಅಂಶ ನಾಶವಾಗುತ್ತದೆ. ಇದರಿಂದ ನಮ್ಮ ಚರ್ಮ ಒಣಗಿದಂತೆ ಕಾಣುತ್ತದೆ. ಆದ್ದರಿಂದ ನಿಯಮಿತವಾಗಿ ಸಾಬೂನನ್ನು ಬಳಸುವುದು ಒಳ್ಳೆಯದು. ಅದರ ಬದಲು ಕಡಲೆ ಹಿಟ್ಟು ಅಕ್ಕಿ ಹಿಟ್ಟಿನಿಂದ ಸ್ನಾನ ಮಾಡುವುದು ಉತ್ತಮ ಹಾಗೂ ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

* ಸಾಮಾನ್ಯವಾಗಿ ಕೆಲವೊಂದಷ್ಟು ಜನ ಸ್ನಾನಕ್ಕೆ ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಹೆಚ್ಚು ಸಮಯ ತೆಗೆದು ಕೊಂಡು ಸ್ನಾನ ಮಾಡಬಾರದು ಈ ರೀತಿ ಮಾಡುವುದರಿಂದ ನಮ್ಮ ಚರ್ಮದಲ್ಲಿ ರುವಂತಹ ಮಾಯಿಶ್ಚರೈಸರ್ ನಾಶವಾಗುತ್ತದೆ ಹಾಗಾಗಿ ಸ್ನಾನಕ್ಕೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಮಾಡಬೇಡಿ.

* ತುಂಬಾ ಬಿಸಿ ಇರುವಂತಹ ನೀರಿನಿಂದ ಸ್ನಾನ ಮಾಡಬೇಡಿ ಇದರಿಂದ ನಿಮ್ಮ ತ್ವಚೆ ಮತ್ತು ಕೂದಲು ಹಾಳಾಗುತ್ತದೆ. ಹಾಗೂ ಇದರಿಂದ ಕೂದಲಿಗೆ ಹಾನಿ ಉಂಟಾಗಿ ಕೂದಲು ಉದುರುವುದು ಕೂಡ ಪ್ರಾರಂಭವಾ ಗುತ್ತದೆ.
* ತಲೆ ಕೂದಲನ್ನು ಚೆನ್ನಾಗಿ ತೊಳೆಯಬೇಕು ಹಾಗೇನಾದರೂ ನೀವು ತೊಳೆಯದಿದ್ದರೆ ತಲೆಯಲ್ಲಿ ಹೊಟ್ಟು ಹೆಚ್ಚಾಗಿ ಬೇಗ ಬಿಳಿ ಕೂದಲು ಬರುವುದಕ್ಕೆ ಪ್ರಾರಂಭವಾಗುತ್ತದೆ.

* ಊಟ ಮಾಡಿದ ತಕ್ಷಣ ಸ್ನಾನ ಮಾಡಬೇಡಿ ಇದರಿಂದ ದೇಹದ ರಕ್ತ ಪರಿಚಲನೆ ಸರಾಗವಾಗಿ ಆಗುವುದಿಲ್ಲ.
* ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ತಲೆ ಸ್ನಾನ ಮಾಡಬೇಡಿ ಇದರಿಂದ ತಲೆ ಕೂದಲಿಗೆ ಹಾನಿ ಉಂಟಾಗುತ್ತದೆ.
* ಸ್ನಾನ ಮಾಡುವಾಗ ಮೈ ಕೈಯನ್ನು ಜೋರಾಗಿ ಉಜ್ಜಿ ತಿಕ್ಕಿ ಸ್ನಾನ ಮಾಡಬಾರದು ಈ ರೀತಿ ಮಾಡುವುದರಿಂದ ನಮ್ಮ ಚರ್ಮದಲ್ಲಿರು ವಂತಹ ಒಳ್ಳೆಯ ಸತ್ವಗಳು ನಾಶವಾಗುತ್ತದೆ. ಆದ್ದರಿಂದ ಮೃದುವಾಗಿರು ವಂತಹ ವಸ್ತುವಿನಿಂದ ಮೈ ಉಜ್ಜಿ ಸ್ನಾನ ಮಾಡುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

LEAVE A REPLY

Please enter your comment!
Please enter your name here