Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

Posted on September 11, 2023 By Kannada Trend News No Comments on ರೇಷನ್ ವಿತರಣೆಯಲ್ಲಿ ಹೊಸ ಬದಲಾವಣೆ, ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರದ ಮಹತ್ವದ ನಿರ್ಧಾರ, ಈ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಪಡೆಯಲು ಸರ್ವೆ.!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ (guarantee Scheme) ಪೈಕಿ ಮಹತ್ವಕಾಂಕ್ಷೆ ಯೋಜನೆಯದ ಅನ್ನಭಾಗ್ಯ ಯೋಜನೆಯಡಿ (Annabhagya) BPL ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಸದಸ್ಯನಿಗೂ ಕೂಡ 10Kg ಉಚಿತ ಪಡಿತರವನ್ನು (10 Kg free ration) ನೀಡಬೇಕು ಎನ್ನುವುದು ಸರ್ಕಾರದ ಅಭಿಲಾಷೆಯಾಗಿತ್ತು.

ಆದರೆ ಆ ಮಟ್ಟದಲ್ಲಿ ದಾಸ್ತಾನು ಲಭ್ಯವಾಗದ ಕಾರಣ ಈಗ ಬದಲಿ ಕ್ರಮವನ್ನು ಸರ್ಕಾರ ಅನುಸರಿಸುತ್ತಿದೆ. ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ನೆರವು ಸಿಗದ ಕಾರಣ ಅಕ್ಕಿ ದಾಸ್ತಾನು ಲಭ್ಯವಾಗುವ ತನಕವೂ ಕೂಡ ಕೇಂದ್ರ ಸರ್ಕಾರದಂತೆ ಎಂದಿನಂತೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ ಒಬ್ಬ ಸದಸ್ಯನಿಗೆ 170 ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ (Annabhagya amount transfer through dbt ) ವರ್ಗಾವಣೆ ಮಾಡುತ್ತಿದೆ.

ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!

ಜುಲೈ ತಿಂಗಳಿನಿಂದ ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿದ್ದು ಅದರಂತೆ ಕೋಟ್ಯಂತರ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೂಡ ಇದೇ ರೀತಿ 5Kg ಅಕ್ಕಿ ಹಾಗೂ 5Kg ಅಕ್ಕಿ ಬದಲಿಗೆ ಹಣ ಹಾಕುವ ಪ್ರಕ್ರಿಯೆ ಮುಂದುವರೆದಿದೆ.

ಆದರೆ ಇತ್ತೀಚೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food Minister K.H Muniyappa) ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಶೀಘ್ರದಲ್ಲಿ ಅಕ್ಕಿ ವ್ಯವಸ್ಥೆ ಆಗಲಿದೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಅಕ್ಕಿ ಖರೀದಿ ಕುರಿತು ಮಾತನಾಡಿದ್ದೇವೆ. ಸಾಧ್ಯವಾದರೆ ನಮ್ಮ ಬಜೆಟ್ ಗೆ ತಕ್ಕ ಬೆಲೆಯಲ್ಲಿ ಅವರು ಅಕ್ಕಿ ನೀಡಲು ಒಪ್ಪಿದರೆ ಸೆಪ್ಟೆಂಬರ್ ತಿಂಗಳಿಂದಲೇ ಪೂರ್ತಿ 10 ಕೆಜಿ ಪಡಿತರವನ್ನೇ ವಿತರಣೆ ಮಾಡಲು ನಿರ್ಧಾರ ಮಾಡಿದ್ದೇವೆ.

ಇನ್ಮುಂದೆ ಆಸ್ಪತ್ರೆಯಲ್ಲಿ 1 ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ, ಜಾರಿಗೆ ಬಂತು 100% ಕ್ಲೈಮ್ ಯೋಜನೆ.!

10 ಕೆಜಿ ಅಕ್ಕಿ ಬದಲಿಗೆ 8Kg ಅಕ್ಕಿ ಹಾಗೂ 2Kg ಆಯಾ ಭಾಗಗಳಲ್ಲಿ ಬಳಸುವ ಪ್ರಮುಖ ಧಾನ್ಯಗಳಾದ ರಾಗಿ ಅಥವಾ ಜೋಳವನ್ನು ನೀಡುವ ಬಗ್ಗೆ ಕೂಡ ಚಿಂತನೆ ನಡೆಸುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಬರದ ಭೀತಿ ಕಾಣುತ್ತಿರುವುದರಿಂದ ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಆಗಿರುವ 114 ತಾಲೂಕಿನ ಫಲಾನುಭವಿಗಳಿಗಾದರೂ ಪೂರ್ತಿ 10Kg ಅಕ್ಕಿಯನ್ನೇ ಬಿಡುಗಡೆ ನೀಡಿದರೆ ಅನುಕೂಲವಾಗುತ್ತದೆ ಎಂದು ಚರ್ಚೆಯಾಗುತ್ತಿದ್ದೆ ಎನ್ನುವ ಸುದ್ದಿ ಕೂಡ ಇತ್ತು.

ಆದರೆ ಕಳೆದ ಮೂರು ದಿನಗಳಿಂದ ಈ ಕುರಿತು ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದೆ. ಅಕ್ಕಿ ಹಣ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಹೆಚ್ಚುವರಿ ಅಕ್ಕಿ ಹಣವನ್ನು ಪಡೆಯುತ್ತಿರುವುದರಿಂದ ಅದು ಇನ್ನಿತರ ಆಹಾರ ಧಾನ್ಯಗಳನ್ನು ಖರೀದಿಸಲು ಅನುಕೂಲವಾಗುತ್ತದೆ ಆ ಹಣವನ್ನು ವ್ಯರ್ಥ ಮಾಡದೆ ಆಹಾರಕ್ಕಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದರು.

ಪಿತ್ರಾಜಿತ ಆಸ್ತಿಯಲ್ಲಿ ಎರಡನೇ ಹೆಂಡತಿಯ ಮಕ್ಕಳಿಗೆ ಸಮಭಾಗ ಇದೆಯಾ.?

ಅನೇಕರಿಗೆ ಈ ವ್ಯವಸ್ಥೆ ಪೂರಕವಾಗಿದೆ ಎನ್ನುವ ಭಾವನೆ ಮೂಡಿರುವ ಕಾರಣ ಮತ್ತೊಂದೆಡೆ ಅಕ್ಕಿ ಒದಗಿಸುವುದು ಕಷ್ಟವಾಗುತ್ತಿರುವ ಕಾರಣ ಮಹತ್ವದ ನಿರ್ಧಾರಕ್ಕೆ ಬಂದಿರುವ ಸರ್ಕಾರ ಜಿಲ್ಲಾ ಮಟ್ಟದಲ್ಲಿ ಮನೆ ಮನೆಗೆ ತೆರಳಿದ ಫಲಾನುಭವಿಗಳ ಜೊತೆ ಚರ್ಚಿಸಿ ಸರ್ವೆ (Servey) ಮಾಡಿ ವರದಿ ತಿಳಿಸಲು ಸೂಚಿಸಿದೆ. ಅಕ್ಕಿ ಬೇಕೋ ಅಥವಾ ಹಣ ಬೇಕೋ ಎನ್ನುವುದನ್ನು ಫಲಾನುಭವಿಗಳ ನಿರ್ಧಾರಕ್ಕೆ ಬಿಟ್ಟಿದ್ದು ಸರ್ವೆ ವರದಿ ಬಂದ ನಂತರ ಆ ಪ್ರಕಾರವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ಹೊಸ ಆದೇಶ ಜಾರಿ.! ನಿಗದಿತ ದಿನಾಂಕದೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ರೆ ದಂಡ ಫಿಕ್ಸ್.!
Next Post: ನಿಮ್ಮ ಮನೆಗಳಲ್ಲೂ ಕೂಡ ಕಡಜ ಗೂಡು ಕಟ್ಟುತ್ತಿದೆಯಾ ಹಾಗಾದರೆ ನೀವು ಈ ವಿಚಾರ ತಿಳಿದುಕೊಳ್ಳಲೇಬೇಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore