ಪಡಿತರ ಚೀಟಿ ಎನ್ನುವುದು ಪ್ರತಿ ಕುಟುಂಬ ಹೊಂದಿರಲೇಬೇಕಾದ ಒಂದು ದಾಖಲೆ ಪತ್ರ. ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ಕೂಡ ಒಳಗೊಂಡ ಗುರುತಿನ ಚೀಟಿ ಇದಾಗಿದ್ದು, ಇದನ್ನು ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ನೀಡುತ್ತದೆ. ಈ ಪಡಿತರ ಚೀಟಿ ಮೂಲಕ ಕುಟುಂಬದ ಸ್ಥಿತಿಗತಿಯನ್ನು ನಿರ್ಧರಿಸಬಹುದು. ಆ ಕಾರಣ ಇವುಗಳನ್ನು ಸರ್ಕಾರದ ಅನೇಕ ಯೋಜನೆಗಳ ಭಾಗವಾಗಿ ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಯಾಗಿ ಕೇಳಲಾಗುತ್ತದೆ.
ರೇಷನ್ ಕಾರ್ಡ್ ಗಳು ಪ್ರಮುಖವಾಗಿ ಬಳಕೆ ಆಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವಂತಹ ಉಚಿತ ಪಡಿತರವನ್ನು ಪಡೆಯಲು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತವಾಗಿ ಅಕ್ಕಿ, ರಾಗಿ, ಗೋಧಿ ಯಂತಹ ಧಾನ್ಯಗಳನ್ನು ನೀಡುತ್ತಿದ್ದು ಕೈಗೆಟಕುವ ಬೆಲೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಕೂಡ ನೀಡುತ್ತಿವೆ.
ರೇಷನ್ ಕಾರ್ಡನ್ನು ಒಂದು ಮನದಂಡವಾಗಿ ಬಳಸಿ, ರೇಷನ್ ಕಾರ್ಡ್ ಅಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪಡಿತರವನ್ನು ನೀಡಲಾಗುತ್ತಿದೆ. ಕರ್ನಾಟಕ ಜೊತೆಗೆ ಇತ್ತೀಚೆಗೆ ಸ್ಥಾಪಿತವಾದ ಹೊಸ ಸರ್ಕಾರ ನೀಡುತ್ತಿರುವ ಉಚಿತ 10 ಕೆಜಿ ಅಕ್ಕಿ ಮತ್ತು ಮನೆಯ ಯಜಮಾನಿಗೆ 2000ರೂ. ಸಹಾಯಧನ ಕೊಡುವ ಗೃಹಲಕ್ಷ್ಮಿ ಯೋಜನೆ, ಮುಂತಾದವುಗಳಿಗೂ ಕೂಡ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ.
ಇಷ್ಟೆಲ್ಲ ಪ್ರಾಮುಖ್ಯತೆ ರೇಷನ್ ಕಾರ್ಡ್ ಹೊಂದಿರುವುದರಿಂದ ಈಗ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆಯು ಈ ರೀತಿ ರೇಷನ್ ಕಾರ್ಡ್ ವಿತರಣೆ ಮಾಡುವ ಅಧಿಕಾರವನ್ನು ಹೊಂದಿತ್ತು. ಆದರೆ ಇದಕ್ಕೆ ಅರ್ಜಿ ಆಹ್ವಾನ ಮಾಡುವ ಪ್ರಕ್ರಿಯೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತ ಮಾಡಿತ್ತು.
ಈಗ ಮತ್ತೊಮ್ಮೆ ಜೂನ್ 25 ರಿಂದ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ. ಹೊಸದಾಗಿ ಮದುವೆ ಆಗಿರುವ ದಂಪತಿಗಳು ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದಾದರೆ ಅಥವಾ ರೇಷನ್ ಕಾರ್ಡ್ ನಲ್ಲಿ ಇರುವವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಅಥವಾ ಸೇರಿಸುವ ಪ್ರಕ್ರಿಯೆಗೆ ಅಥವಾ ರೇಷನ್ ಕಾರ್ಡ್ ನ ತಿದ್ದುಪಡಿಗೆ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕೂಡ ಮಾಡಿಕೊಟ್ಟಿದೆ.
ಕೆಲ ಪ್ರಮುಖ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಆನ್ಲೈನ್ ಅಲ್ಲಿಯೇ ರೇಷನ್ ಕಾರ್ಡ್ ಪಡೆಯಬಹುದು. ಕುಟುಂಬದ ಆದಾಯದ ಮೇಲೆ ಆ ಕುಟುಂಬಸ್ಥರು APL, BPL ಅಥವಾ AAY ಯಾವ ಕಾರ್ಡ್ ಗೆ ಅರ್ಹರು ಎನ್ನುವುದು ನಿರ್ಧಾರ ಆಗುತ್ತದೆ.
ರೇಷನ್ ಕಾರ್ಡ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
● kar.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಇ- ಸೇವೆಗಳು ಎನ್ನುವುದನ್ನು ಆಯ್ಕೆ ಮಾಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
ಅಥವಾ ನೇರವಾಗಿ
● https://ahara.kar.nic./home/Eservices ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಇ- ಪಡಿತರ ಚೀಟಿ ಎನ್ನುವ ಆಪ್ಷನ್ ಅನ್ನು ಆಯ್ಕೆ ಮಾಡಿ ಹೊಸ ಪಡಿತರಕ್ಕಾಗಿ ಅರ್ಜಿ ಎನ್ನುವಲ್ಲಿ ಕ್ಲಿಕ್ ಮಾಡಿ.
● ಅರ್ಜಿ ಫಾರಂ ಭರ್ತಿ ಮಾಡಿ ನಿಮ್ಮ ಆಯ್ಕೆ ಭಾಷೆ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ ಕೇಳಲಾಗುವ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ವೋಟರ್ ಐಡಿ
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ವಯಸ್ಸಿನ ಪ್ರಮಾಣ ಪತ್ರ
● ಡ್ರೈವಿಂಗ್ ಲೈಸೆನ್ಸ್
● ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಸ್ವಯಂ ಘೋಷಿತ ಪ್ರಮಾಣ ಪತ್ರ
● ಕುಟುಂಬಸ್ಥರ ಬಯೋಮೆಟ್ರಿಕ್ ಮಾಹಿತಿಗಳು.