ಸಾಮಾನ್ಯ ಜನರಿಗೆ ಸೇರಿದಂತೆ ಎಲ್ಲರಿಗೂ ಕೂಡ ಕೆಲವು ಸರಕಾರದ ನಿಯಮಗಳು ಗೊತ್ತೇ ಇರುತ್ತವೆ, ಅದರಲ್ಲೂ ಆಸ್ತಿ ಕೊಂಡುಕೊಳ್ಳುವ ಮನೆ ಕಟ್ಟಿಸುವ ವಿಚಾರ ಬಂದಾಗ ಇದು ಕಾನೂನು ಬದ್ಧವಾಗಿಯೇ ನಡೆಯಬೇಕು ಇಲ್ಲವಾದಲ್ಲಿ ಮುಂದೆ ಒಂದು ದಿನ ನಮ್ಮ ಪ್ರಾಪರ್ಟಿ ಕೈತಪ್ಪಿ ಹೋಗಬಹುದು ಎನ್ನುವ ಎಚ್ಚರ ಇದ್ದೇ ಇರುತ್ತದೆ.
ಇಂತಹ ನಿಯಮಗಳಲ್ಲಿ ಒಂದು ಕೃಷಿ ಉದ್ದೇಶಕ್ಕಾಗಿ ಕೊಂಡುಕೊಂಡಿರುವ ಭೂಮಿಗಳನ್ನು ಅಥವಾ ಕೃಷಿ ಚಟುವಟಿಕೆ ನಡೆಸಲು ಇಟ್ಟುಕೊಂಡಿರುವ ಭೂಮಿಗಳನ್ನು ಸರ್ಕಾರದ ಅನುಮತಿ ಇಲ್ಲದೆ ಕನ್ವರ್ಷನ್ ಮಾಡಿ ಸೈಟ್ ಹಂಚಿಕೆ ಮಾಡಬಾರದು ಎನ್ನುವುದು. ಆದರೂ ನಗರ ಹಾಗೂ ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಅದೆಷ್ಟೋ ಜಮೀನುಗಳ ಮಾಲೀಕರಿಂದ ಕೆಲವೊಮ್ಮೆ ಇವುಗಳ ಉಲ್ಲಂಘನೆ ನಡೆಯುತ್ತಾ ಇರುತ್ತದೆ.
ಇದರಿಂದ ಮುಂದೆ ಆದ ತೊಡಕುಗಳ ಬಗ್ಗೆ ಅನೇಕ ರೀತಿಯ ಅರಿವು ಇದೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೊಂದಿಕೊಂಡಂತೆ ಇರುವ ಜಮೀನಿನ ಮಾಲೀಕರಿಗೆ ಭೂ ಕಂದಾಯ ಮತ್ತು ಭೂ ಮಾಪನ ಇಲಾಖೆ ಕಡೆಯಿಂದ ಭೂಮಿ ಪರಿವರ್ತನೆ ಕುರಿತಂತೆ ಸಾಕಷ್ಟು ಕಟ್ಟು ನಿಟ್ಟಿನ ನಿಯಮಗಳು ಇರುತ್ತವೆ.
ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!
ಅದೇನೆಂದರೆ ಈ ರೀತಿ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಹೊಂದಿಕೊಂಡಂತಹ ಜಮೀನಿನ ಮಾಲಿಕರು ಅನುಮತಿ ಇಲ್ಲದೆ ಯಾವುದೇ ನಗರಾಭಿವೃದ್ಧಿ ಅಥವಾ ಭೂ ಪರಿವರ್ತನೆ ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೆ ಫ್ಲಾಟ್ ಅಥವಾ ನಿವೇಶನಗಳನ್ನಾಗಿ ಬದಲಾಯಿಸಿ ಮಾರಾಟ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ, ಇದು ಗ್ರಾಮೀಣ ಭಾಗದಲ್ಲಿ ಕೂಡ ಗ್ರಾಮಗಳಿಗೆ ಹೊಂದಿಕೊಂಡಂತೆ ಜಮೀನುಗಳನ್ನು ಹೊಂದಿರುವ ರೈತರಿಗೂ ಕೂಡ ಅನ್ವಯಿಸುತ್ತಿತ್ತು. ಈಗ ಇದರ ಸಡಲಿಕೆ ಮಾಡಿ ರೈತರಿಗೆ ಸಿಹಿ ಸುದ್ದಿ ಕೊಡಲಾಗಿದೆ.
ಒಂದು ವೇಳೆ ಈ ರೀತಿ ಅನಿವಾರ್ಯ ಕಾರಣಗಳಿಂದ ಭೂ ಪರಿವರ್ತನೆ ಮಾಡಲೇ ಬೇಕಿದ್ದರೆ ಅಥವಾ ರೈತರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಜಮೀನುಗಳಲ್ಲಿ ವಸತಿ ಉದ್ದೇಶಕ್ಕಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅವುಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲು ಈ ಸಂಬಂಧ ಭೂ ಪರಿವರ್ತನೆ ಮಾಡಿಸಲು.
ಅದೇ ರೀತಿಯಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಂಬಂಧಿತ ನಗರಸಭೆ ಹಾಗೂ ಪುರಸಭೆಗಳಿಗೆ ಈ ಕೃಷಿ ಭೂಮಿಗಳನ್ನು ಪರಿವರ್ತನೆ ಮಾಡಿ ಬದಲಾಯಿಸಿಕೊಳ್ಳಲು ರೈತರಿಗೆ ಒಂದು ಅವಕಾಶವನ್ನು ಸರ್ಕಾರದ ಕಡೆಯಿಂದ ಮಾಡಿಕೊಡಲಾಗುತ್ತಿದೆ. ಈ ರೀತಿ ಭೂಮಿ ಪರಿವರ್ತನೆ ಮಾಡಲು ಅಫಿಡವಿಟ್ ಬೆಸ್ಟ್ ಕನ್ವರ್ಷನ್ ಹಾಗೂ ಮಾಸ್ಟರ್ ಪ್ಲಾನ್ ಬೆಲ್ಟ್ ಕನ್ವರ್ಷನ್ ತಂತ್ರಾಂಶದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಾಲಂ 95 ಸಬ್ಸ್ಕ್ರಿಪ್ಷನ್ 2ರಡಿ ಅವಕಾಶ ಕಲ್ಪಿಸಿಕೊಡಲಾಗಿದೆ.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ಇದರ ಪ್ರಯೋಜನವನ್ನು ಪಡೆಯಬೇಕಾದಂತಹ ಫಲಾನುಭವಿಗಳು ಕೂಡಲೇ ಸರ್ಕಾರದ ಆದೇಶದಂತೆ ಸಂಬಂಧಪಟ್ಟ ಭೂ ಕಂದಾಯ ಇಲಾಖೆ ಹಾಗು ಭೂ ಮಾಪನ ಇಲಾಖೆಯ ಕಚೇರಿಗಳಿಗೆ ಹೋಗಿ ಈ ವಿಭಾಗಗಳಿಗೆ ಪೂರಕ ದಾಖಲೆಗಳ ಸಮೇತ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಮತ್ತು ಇದಕ್ಕೆ ಸಂಬಂಧಿತವಾಗಿ ಸರ್ಕಾರ ವಿಧಿಸುವ ದಂಡ ಅಥವಾ ಶುಲ್ಕವನ್ನು ಕೂಡ ಪಾವತಿ ಮಾಡಬೇಕಾಗುತ್ತದೆ ಎನ್ನುವ ವಿಶೇಷ ಸೂಚನೆಯನ್ನು ಸರ್ಕಾರವು ಹೊರಡಿಸಿದೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಇದು ರಾಜ್ಯದ ನೂರಾರು ರೈತರಿಗೆ ಅನುಕೂಲವಾಗುವ ಸಾಧ್ಯತೆ ಇದೆ.