ದ್ವಿತೀಯ PUC ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟ. SSLC ಮುಗಿದ ಬಳಿಕ ಜೀವನದ ಗುರಿ ನಿರ್ಧರಿಸಿಕೊಳ್ಳುವ ಮಕ್ಕಳುಗಳು PUC ಹಂತವನ್ನು ಕೂಡ ಕನ್ಫ್ಯೂಷನ್ ಅಲ್ಲಿಗೆ ದಾಟಬೇಕಾಗುತ್ತದೆ. PUC ಆದ ಬಳಿಕ ಅವರು ಬಯಸುವ ಕ್ಷೇತ್ರಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಬಹುದು. ತಮ್ಮ ಇಚ್ಛೆಯ ಒಂದು ಫೀಲ್ಡ್ ಅನ್ನು ಮುಟ್ಟಲು ಪಿಯುಸಿ ಕೊನೆಯ ಹಂತ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಏನು ಅಥವಾ ತಾವು ಏನಾಗಬೇಕು ಎನ್ನುವುದನ್ನು ಅಲ್ಲೇ ನಿರ್ಧಾರ ಮಾಡಿಬಿಡುತ್ತಾರೆ.
ತಾವು ವೈದ್ಯರಾಗಬೇಕೋ, ವಕೀಲರಾಗಬೇಕೋ ಅಥವಾ ಇಂಜಿನಿಯರಿಂಗ್ ಆಗಬೇಕೋ ಅಥವಾ ಚಾರ್ಟೆಡ್ ಅಕೌಂಟ್ ಆಗಬೇಕೋ ಎನ್ನುವುದು ಅಲ್ಲಿ ಫಿಲ್ಟರ್ ಆಗಿಬಿಡುತ್ತದೆ. ಕೆಲವೊಮ್ಮೆ ಈ ನಿರ್ಧಾರ ವಿದ್ಯಾರ್ಥಿಗಳ ಕೈಲಿ ಇರುವುದಿಲ್ಲ ಬದಲಾಗಿ ಪೋಷಕರ ಒತ್ತಾಯದ ಅಥವಾ ಆಸಕ್ತಿ ಅನುಸಾರವಾಗಿ ವಿದ್ಯಾರ್ಥಿಗಳು ಕನಸು ಕಟ್ಟಿಕೊಳ್ಳುತ್ತಾರೆ.
ಪಿಯುಸಿಯಲ್ಲಿ ವಿಜ್ಞಾನ ಓದಿದ ವಿದ್ಯಾರ್ಥಿಗಳು ತಾವು ಇಂಜಿನಿಯರಿಂಗ್ ಕ್ಷೇತ್ರ ಆರಿಸಿ ಹೋಗಬೇಕಾ ಅಥವಾ ವೈದ್ಯಲೋಕದಂತಹ ಸೇವಾ ವಲಯಕ್ಕೆ ಸೇರಬೇಕಾ ಎನ್ನುವುದು ಬರೆಯುವ CETಯಲ್ಲಿ ಬರುವ ರ್ಯಾಂಕಿಂಗ್ ಮೇಲೆ ನಿರ್ಧಾರ ಆಗುತ್ತದೆ. ಅದರಿಂದ ಪ್ರತಿಯೊಬ್ಬ ವಿಜ್ಞಾನ ವಿದ್ಯಾರ್ಥಿ ಕೂಡ ಸಿಇಟಿ ಬರೆಯುತ್ತಾರೆ. ಪಡೆದ ಅಂಕಗಳ ಆಧಾರದ ಮೇಲೆ ಸೀಟುಗಳ ಹಂಚಿಕೆ ಆಗುತ್ತದೆ.
ಸರ್ಕಾರಿ ಸೀಟುಗಳು ಬೇಕು ಅಥವಾ ತಮ್ಮ ಇಚ್ಛೆಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕು ಎಂದರೆ ಈ ರೀತಿ CETಯಲ್ಲಿ ಪಡೆವ ಅಂಕಗಳು ಬಹಳ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ದ್ವಿತೀಯ PUC ಅಭ್ಯಾಸ ನಡೆಸುವಾಗಲೇ CETಗೂ ಕೂಡ ತಯಾರಾಗಿ ಒಟ್ಟೊಟ್ಟಿಗೆ ಟ್ಯೂಷನ್ ಪಡೆದು ತಯಾರಾಗುತ್ತಾರೆ. ಸಾಮಾನ್ಯವಾಗಿ CET ಪ್ರಶ್ನೆ ಪತ್ರಿಕೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಎರಡು ವರ್ಷಗಳು ಓದಿದ ವಿಷಯದ ಕುರಿತೇ ಪ್ರಶ್ನೆಗಳು ಬರುತ್ತವೆ.
MCQ ಆಧಾರಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಈ ಪರೀಕ್ಷೆಯನ್ನು ದ್ವಿತೀಯ PUC ಪಾಸ್ ಆದ ಮೇಲೆ ಬರೆಯಬೇಕು ಎನ್ನುವ ನಿಯಮ ಇಲ್ಲ. ದ್ವಿತೀಯ PUC ಪರೀಕ್ಷೆ ಮಾರ್ಚ್ ತಿಂಗಳಲ್ಲಿಯೇ ಮುಗಿದು ಹೋಗಿರುತ್ತದೆ. ಮೇ ತಿಂಗಳ ಮೊದಲ ವಾರ ಅಥವಾ ಮಧ್ಯದಲ್ಲಿ ಪ್ರತಿ ವರ್ಷ CET ಎಕ್ಸಾಮ್ ಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ಸಮಯಕ್ಕಾಗಲೇ ದ್ವಿತೀಯ PUC ರಿಸಲ್ಟ್ ಕೂಡ ಬಂದು ಬಿಟ್ಟಿರುತ್ತದೆ. ಕೆಲವರು ಅನುತ್ತೀರ್ಣರಾಗಿ ಹೋಗಿರುತ್ತಾರೆ.
ಆದರೆ ಅವರು CET ಬರೆಯಲು ಪ್ರಿಪೇರ್ ಆಗಿರುತ್ತಾರೆ. ಹಾಗೆ CETಗೆ ಅರ್ಜಿ ಕೂಡ ಸಲ್ಲಿಸಿ ಆಗಿರುತ್ತದೆ ಮತ್ತು ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಿದೆ ಎನ್ನುವ ಕಾರಣಕ್ಕೆ ಪೂರಕ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ ಆಗ ಅವರು ಆ ವರ್ಷ ಸಿಟಿ ಬರೆಯಬೇಕು ಬರೆಯಬಾರದು ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕೆ ಈ ವರ್ಷ ಪೂರಕ ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಹಕಿ ಎಸ್.ರಮ್ಯ ಅವರು ಈ ಕುರಿತು ಮಹತ್ವದ ಸುದ್ದಿ ಹಂಚಿಕೊಂಡಿದ್ದಾರೆ.
ಅದೇನೆಂದರೆ ಮೇ 20 ಮತ್ತು 21ನೇ ತಾರೀಕು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಈ ನಡುವೆ ಪೂರಕ ಪರೀಕ್ಷೆ ತೆಗೆದುಕೊಳ್ಳು ವಿದ್ಯಾರ್ಥಿಗಳು ಕೂಡ ಸಿಇಟಿ ಪರೀಕ್ಷೆಗೆ ಹಾಜರಾಗಬೇಕು ಎಂದು ಪಿಯು ಬೋರ್ಡ್ ನಿರ್ದೇಶಕಿ ಎಸ್ ರಮ್ಯಾ ಅವರು ಸ್ಪಷ್ಟ ಪಡಿಸಿದ್ದಾರೆ. ವಿದ್ಯಾರ್ಥಿಗಳು CET ಪರೀಕ್ಷೆಗೆ ಹಾಜರಾಗಿದ್ದರೆ ಮಾತ್ರ ಅವರ ಪೂರಕ ಪರೀಕ್ಷೆ ಅಂಕಗಳನ್ನು ಸೀಟುಗಳ ಹಂಚಿಕೆಗೆ ಪರಿಗಣನೆಗೆ ತೆಗೆದುಕೊಳ್ಳವುದು ಎಂದು ತಿಳಿಸಿದ್ದಾರೆ. ಆದ್ದರಿಂದ ತಪ್ಪದೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೆಲ್ಲ ಸಿಇಟಿ ಪರೀಕ್ಷೆ ಬರೆಯಿರಿ.