ಸಿಂಹ ರಾಶಿಯವರಿಗೆ ಎರಡನೇ ಮನೆಯಲ್ಲಿ ಅಂದರೆ ಆರ್ಥಿಕ ಸ್ಥಾನದಲ್ಲಿ ಕೇತು ಇರುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ ಆದರೆ ಆ ಯಶಸ್ವಿಗೆ ಅವರು ಸಾಕಷ್ಟು ಪರಿಶ್ರಮದ ಜೊತೆಗೆ ಹಣವನ್ನು ಕೂಡ ಖರ್ಚು ಮಾಡಬೇಕು. ಇದೇ ಕಾರಣದಿಂದ ಇವರಿಗೆ ಈ ವರ್ಷ ಪೂರ್ತಿ ಹೆಚ್ಚು ಮ’ನ’ಸ್ತಾ’ಪಗಳಾಗುವ ಸಾಧ್ಯತೆ ಇದೆ.
ಅದರಲ್ಲೂ ಇವರು ಬಾಯಿ ತಪ್ಪಿ ಆಡುವ ಮಾತುಗಳಿಂದ ಇವರಿಗೆ ಸಮಸ್ಯೆಗಳು ಬಂದೊದಗುತ್ತವೆ ಹಾಗಾಗಿ ಮಾತು ಕೊಡುವ ಮುನ್ನ ಅಥವಾ ಮಾತನಾಡುವಾಗ ಎ’ಚ್ಚ’ರಿ’ಕೆ ಇರಲಿ. ಮಾತು ಮುತ್ತಾಗಿ ಹಾಗೂ ಮಾತೇ ಮೃ’ತ್ಯುವಾಗಿ ಈ ವರ್ಷ ನಿಮ್ಮನ್ನು ಕಾಡಲಿದೆ. ಅದರಲ್ಲೂ ರಾಜಕೀಯ ಕ್ಷೇತ್ರದವರಿಗೆ ಈ 2024 ಬಹಳ ಆಶ್ಚರ್ಯಕರ ಪರಿವರ್ತನೆಯನ್ನು ಉಂಟುಮಾಡುವಂತಹ ವರ್ಷವಾಗಿದೆ.
ಸಿಂಹ ರಾಶಿಯವರಿಗೆ ಕಳಸ್ತಸ್ಥಾನದಲ್ಲಿ ಶನಿ ಇರುವುದರಿಂದ ಸಿಂಹ ರಾಶಿ ಸೂರ್ಯ ರಾಶಿಯಾಗಿರುವ ಕಾರಣದಿಂದಲೂ ಶನಿಯ ಪ್ರಭಾವ ಇವರಿಗೆ ಒಳ್ಳೆಯ ಫಲಗಳನ್ನು ನೀಡುವುದಿಲ್ಲ. ನೇರವಾಗಿ ಶನಿಯ ದೃಷ್ಟಿ ಬೀಳುತ್ತಿರುವುದರಿಂದ ವೈವಾಹಿಕ ಜೀವನದಲ್ಲಿ ಬಹಳ ಸಮಸ್ಯೆಗಳಾಗುತ್ತವೆ.
ಸಣ್ಣ ಪುಟ್ಟ ವಿಚಾರಕ್ಕೆ ಕೋರ್ಟ್ ಮೆಟ್ಟಿಲು ತನಕ ಹೋಗಬೇಕಾಗಹುದು ಅಥವಾ ವಿವಾಹ ನಿಶ್ಚಯವಾಗಿ ನಿಶ್ಚಿತಾರ್ಥ ಆದ ಮೇಲೆ ಕೊನೆ ಹಂತದಲ್ಲಿ ಸಂಬಂಧ ಮುರಿದು ಬೀಳುವುದು ಇಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಈ ವಿಚಾರದಲ್ಲಿ ಹೆಜ್ಜೆ ಇಡುವಾಗ ಸಾಕಷ್ಟು ಜಾಗೃತಿ ಇರಲಿ ಅದೇ ರೀತಿ ಉದ್ಯೋಗದ ವಿಚಾರದಲ್ಲಿ ಕೂಡ ಸ್ವಲ್ಪ ತಾಳ್ಮೆ ಇರಲಿ.
ಯಾಕೆಂದರೆ ನಿಮಗೆ ಈಗಿರುವ ಸ್ಥಾನಕ್ಕಿಂತ ಅಥವಾ ವೇತನಕ್ಕಿಂತ ಹೆಚ್ಚಿನ ಮೌಲ್ಯದ ಆಫರ್ ಬರಬಹುದು ನೀವು ತಕ್ಷಣ ಒಪ್ಪಿಕೊಂಡು ಅಗ್ರಿಮೆಂಟ್ ಮಾಡಿಕೊಂಡರೆ ಅಗ್ರಿಮೆಂಟ್ ಆದ ಕೆಲವೇ ದಿನಗಳಲ್ಲಿ ಅದಕ್ಕಿಂತಲೂ ಬೆಸ್ಟ್ ಆಪ್ಷನ್ ಸಿಗುವ ಸಾಧ್ಯತೆ ಇರುತ್ತದೆ. ಶನಿಯ ಪ್ರಭಾವ ಈ ರೀತಿ ಕಾಡುವುದರಿಂದ ಯಾವುದೇ ಒಪ್ಪಂದಗಳಲ್ಲಿ ಸಿಕ್ಕಿ ಹಾಕಿಕೊಳ್ಳದಿರುವುದು ಉತ್ತಮ.
ವಿದೇಶಿ ಪ್ರಯಾಣ ಹಾಗೂ ವಿದೇಶಕ್ಕೆ ಹೋಗಿ ನೆಲೆಸಬೇಕು, ಉದ್ಯೋಗ ಮಾಡಬೇಕು, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ಕನಸು ಕಾಣುತ್ತಿರುವವರೆಗೂ ಕೂಡ ಇದು ಒಳ್ಳೆಯ ಅವಕಾಶವಾಗಿದೆ. ಗುರುವಿನ ಅನುಗ್ರಹ ಚೆನ್ನಾಗಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾಗಲಿ ಅಥವಾ ನಿಮ್ಮ ಉನ್ನತ ವಿದ್ಯಾಭ್ಯಾಸದ ಅಥವಾ ವೃತ್ತಿಗೆ ಸಂಬಂಧ ಪಟ್ಟ ಯಾವುದೇ ಪರೀಕ್ಷೆಗಳಿಗೆ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದೀರಿ.
ಈ ಬಗ್ಗೆ ನಿಮ್ಮ ಪ್ರಯತ್ನವನ್ನು ಹೆಚ್ಚಿಸುವುದು ನಿಮಗೆ ಉತ್ತಮ ಫಲಿತಾಂಶಗಳನ್ನು 2024ರಲ್ಲಿ ಕೊಡಲಿದೆ. ಈ ಮೇಲೆ ತಿಳಿಸಿದಂತೆ ರಾಜಕೀಯ, ರಾಜತಾಂತ್ರಿಕತೆ ಅಥವಾ ಸರ್ಕಾರಿ ಹುದ್ದೆಗಳನ್ನು ಹೊಂದಿರುವವರು ಅಥವಾ ಆಕಾಂಕ್ಷಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ, ನಿರೀಕ್ಷಿತ ಫಲಗಳನ್ನು ಪಡೆಯುತ್ತಾರೆ.
ಸೂರ್ಯನು ಪ್ರತಿ ತಿಂಗಳು ರಾಶಿಯಿಂದ ರಾಶಿಗೆ ಸ್ಥಾನಪಲ್ಲಟ ಮಾಡುವುದರಿಂದ ಸೂರ್ಯನು ವೃಷಭ ರಾಶಿ ಮಿಥುನ ರಾಶಿ ತುಲಾ ರಾಶಿ ಮಕರ ಹಾಗೂ ಕುಂಭ ರಾಶಿಗಳಿಗೆ ಪ್ರವೇಶ ಮಾಡಿದಾಗ ಅದರ ಪ್ರತಿಕೂಲ ಪರಿಣಾಮಗಳು ಕೂಡ ಈ ರಾಶಿಯವರ ಮೇಲೆ ಬೀಳುತ್ತಿರುತ್ತದೆ.
ಇವುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಿ 2024ಕ್ಕೆ ಪ್ರವೇಶ ಮಾಡಿ. 2024 ನಿಮಗೆ ಒಂದು ಜವಾಬ್ದಾರಿಗಿಂತ ವರ್ಷವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಯಾವುದೇ ಹೆಚ್ಚಿನ ಅ’ಪಾ’ಯ’ವಿದೆ ಉತ್ತಮವಾಗಿದ್ದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು ಅಷ್ಟೇ ಮತ್ತು ಈಗಾಗಲೇ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಿಸುತ್ತಿರುವವರಿಗೆ ಸ್ವಲ್ಪ ಸುಧಾರಣೆ ಕಂಡು ಬರಬಹುದು.
ಹಣಕಾಸಿನ ವಿಚಾರದಲ್ಲಿ ಕೂಡ ಪರಿಸ್ಥಿತಿ ಸಮಾಧಾನವಾಗಿರುತ್ತದೆ. ಹಾಗಾಗಿ ಯಾವುದೇ ಹೆಚ್ಚಿನ ಒತ್ತಡ ಇಲ್ಲದೆ ನಮ್ಮನ್ನು ಇನ್ನಷ್ಟು ಚುರುಕುಗೊಳಿಸುವಂತಹ ವರ್ಷ ಸಿಂಹ ರಾಶಿಯವರಿಗಾಗಿರುತ್ತದೆ, ಶುಭವಾಗಲಿ.