Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂದು ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡು ಕೈ ಕೊಟ್ಟ ಹುಡುಗಿ ಇಂದು ಯಾರನ್ನು ಮದುವೆಯಾಗಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

Posted on December 13, 2022 By Kannada Trend News No Comments on ಅಂದು ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡು ಕೈ ಕೊಟ್ಟ ಹುಡುಗಿ ಇಂದು ಯಾರನ್ನು ಮದುವೆಯಾಗಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.
ಅಂದು ನಿಖಿಲ್ ಕುಮಾರಸ್ವಾಮಿ ಜೊತೆ ನಿಶ್ಚಿತಾರ್ಥ ಮುರಿದುಕೊಂಡಿದ್ದ ಸ್ವಾತಿ ಈಗ ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ.?

ನಿಖಿಲ್ ಕುಮಾರಸ್ವಾಮಿ ಅವರು ಕೊರನಾ ಲಾಕ್ ಡೌನ್ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು. ರೇವತಿ ಎನ್ನುವವರನ್ನು ಕೈಹಿಡಿದಿರುವ ನಿಖಿಲ್ ಕುಮಾರಸ್ವಾಮಿ ಅವರ ದಾಂಪತ್ಯಕ್ಕೆ ಎರಡು ವರ್ಷ ತುಂಬುತ್ತಿದ್ದು ಮುದ್ದಾದ ಗಂಡು ಮಗು ಕೂಡ ಇದೆ.

ಇತ್ತೀಚೆಗಷ್ಟೇ ಅದ್ದೂರಿಯಾಗಿ ಮಗುವಿಗೆ ನಾಮಕರಣ ಕಾರ್ಯಕ್ರಮ ಕೂಡ ಮಾಡಿ ಅವ್ಯಾನ್ ದೇವ್ ಎನ್ನುವ ಹೆಸರು ಕೂಡ ಇಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರ ಮೊಮ್ಮಗ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ.

ಕರ್ನಾಟಕದಲ್ಲಿ ಈ ರೀತಿ ವರ್ಚಸ್ಸು ಹೊಂದಿರುವ ಇವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಈಗಾಗಲೇ ಇವರ ನಟನೆಯ ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಕನ್ನಡದಲ್ಲಿ ಭರವಸೆಯ ನಾಯಕ ಎನಿಸಿಕೊಂಡಿದ್ದಾರೆ.

ಇಂತಹ ಒಬ್ಬ ಯಂಗ್ ಸೆಲೆಬ್ರಿಟಿ ಬಗ್ಗೆ ಸಾಕಷ್ಟು ಗಾಸಿಪ್ ಗಳು ಸೃಷ್ಟಿ ಆಗಿರುತ್ತವೆ ಮತ್ತು ಸಣ್ಣ ಪುಟ್ಟ ವಿಚಾರ ಕೂಡ ದೊಡ್ಡದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗುತ್ತದೆ. ಹೀಗೆ ರೇವತಿ ಅವರೊಂದಿಗೆ ಕುಮಾರಸ್ವಾಮಿ ಅವರ ವಿವಾಹವಾದ ಸಂದರ್ಭದಲ್ಲಿ ಈ ಹಿಂದೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.

ಆ ವಿಡಿಯೋದಲ್ಲಿ ಇದ್ದ ಹುಡುಗಿ ನಿರ್ಮಾಪಕ ಕೆ ಸಿ ಎಂ ಮೋಹನ್ ಅವರ ಮಗಳು ಸ್ವಾತಿ ಎನ್ನುವುದು ಎಲ್ಲರಿಗೂ ತಿಳಿಯಿತು. ಸ್ವಾತಿ ಅವರೊಂದಿಗೆ ನಿಖಿಲ್ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಆ ಎಂಗೇಜ್ಮೆಂಟ್ ವಿಡಿಯೋದಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಚೆನ್ನಮ್ಮ, ದೇವೇಗೌಡ ಅವರು ಸೇರಿದಂತೆ ಸಿನಿಮಾ ರಂಗದ ಅನೇಕರು ಕೂಡ ಕಾಣಸಿಗುತ್ತಾರೆ.

ಆದರೆ ಸ್ವಾತಿ ಅವರ ಬದಲು ರೇವತಿ ಅವರನ್ನು ನಿಖಿಲ್ ಯಾಕೆ ಮದುವೆಯಾದರು ಎನ್ನುವುದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. 2018ರಲ್ಲಿ ಸ್ವಾತಿ ಅವರೊಂದಿಗೆ ನಿಶ್ಚಿತಾರ್ಥ ನಡೆದಿತ್ತು ಆದರೆ ಹಲವು ದಿನಗಳು ಕಳೆದರೂ ಕೂಡ ಮದುವೆ ನಡೆಯದ ಕಾರಣ ಈ ನಿಶ್ಚಿತಾರ್ಥ ಬಿದ್ದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳಲು ಶುರು ಮಾಡಿದರು.

ಅದಕ್ಕೆ ಸಾಕ್ಷಿ ಅನ್ನುವಂತೆ ಇದ್ದಕ್ಕಿದ್ದ ಹಾಗೆ ರೇವತಿ ಅವರೊಂದಿಗೆ ಮದುವೆ ಕೂಡ ನಡೆದು ಹೋಯಿತು. ಇಷ್ಟೆಲ್ಲ ನಡೆದಿದ್ದರೂ ಸಹ ಇನ್ನೂ ಎರಡು ಕುಟುಂಬಗಳ ಕಡೆಯಿಂದ ಈ ಎಂಗೇಜ್ಮೆಂಟ್ ಮುರಿದು ಬಿದ್ದ ಬಗ್ಗೆ ಯಾರು ಸಹ ಮಾತನಾಡಿಲ್ಲ. ಇತ್ತ ನಿಖಿಲ್ ಕುಮಾರಸ್ವಾಮಿ ಅವರು ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬದುಕುತ್ತಿದ್ದಾರೆ.

ಈಗ ಮಾಜಿ ಪ್ರೇಯಸಿ ಸ್ವಾತಿ ಅವರು ಕೂಡ ಬೇರೆಯವರೊಂದಿಗೆ ಹಸೆಮಣೆಯಿರಿ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸ್ವಾತಿ ಅವರು ಕೈ ಹಿಡಿಯುತ್ತಿರುವ ಆ ವ್ಯಕ್ತಿ ನೆಹನೀಶ್. ಈತ ಮಾಜಿ ಮುಖ್ಯಮಂತ್ರಿ ಶ್ರೀಕಂಠಯ್ಯ ಅವರ ಮೊಮ್ಮಗನಾಗಿದ್ದಾರೆ, ಸದ್ಯಕ್ಕೆ ದೇವೇಗೌಡ ಅವರ ಕುಟುಂಬಕ್ಕೆ ರಾಜಕೀಯ ವಿರೋಧಿಗಳಾಗಿರುವ ಮನೆಗೆ ಕೆ ಸಿ ಎಂ ಮೋಹನ್ ಅವರು ತಮ್ಮ ಮಗಳನ್ನು ಕೊಟ್ಟಿದ್ದಾರೆ.

ಸೆಲೆಬ್ರಿಟಿ ಅವರ ಬದುಕಿನಲ್ಲಿ ಈ ರೀತಿ ಬ್ರೇಕಪ್ ಆಗುವುದು ನಿಶ್ಚಿತಾರ್ಥ ಮುಡಿದು ಬಿಡುವುದು ಡೈವೋರ್ಸ್ ಆಗುವುದು ಸದ್ಯದ ಜನರೇಶನ್ ಅಲ್ಲಿ ಸಹಜ ಪ್ರಕ್ರಿಯೆ ಆಗಿದೆ. ಆದದ್ದನ್ನೆಲ್ಲ ಮರೆತು ಸ್ವಾತಿ ಅವರು ಸಹಜವಾಗಿ ತಮ್ಮ ಮುಂದಿನ ಜೀವನದಲ್ಲಿ ಸಂತೋಷವನ್ನು ಕಾಣಲಿ ಎಂದು ಹರಸೋಣ.

Entertainment Tags:Nikhil Kumarswamy, Swathi
WhatsApp Group Join Now
Telegram Group Join Now

Post navigation

Previous Post: ಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತೊಡಿಸಿದ ಉಂಗುರದ ಮೌಲ್ಯ ಎಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಇದರ ಬೆಲೆ ಗೊತ್ತದ್ರೆ
Next Post: ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತು ಮತ್ತೆ ಹೊಸ ಸಿನಿಮಾ ಶುರು ಮಾಡಿದ ರವಿಮಾಮ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore