Sunday, May 28, 2023
HomeEntertainmentಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತೊಡಿಸಿದ ಉಂಗುರದ ಮೌಲ್ಯ ಎಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ...

ಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತೊಡಿಸಿದ ಉಂಗುರದ ಮೌಲ್ಯ ಎಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಇದರ ಬೆಲೆ ಗೊತ್ತದ್ರೆ

ಸಖತ್ ಸದ್ದು ಮಾಡ್ತಿದೆ ಅಭಿಷೇಕ್ ಅಂಬರೀಶ್ ಅವಿವಾಗೆ ತೊಡಿಸಿದ ಉಂಗುರದ ಬೆಲೆ

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರ ಸಾಕಷ್ಟು ತಿಂಗಳಿಂದ ಚರ್ಚೆಯಲ್ಲಿತ್ತು. ಸುಮಲತಾ ಹಾಗೂ ಅಭಿಷೇಕ್ ಹೋದ ಕಡೆಯಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಅಲ್ಲದೆ ಅಭಿಷೇಕ್ ಅವರು ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ‌‌.

ಎನ್ನುವ ಮಾತುಗಳು ಹಾಗೂ ಸುಮಲತಾ ಅಂಬರೀಶ್ ಅವರೇ ತಮ್ಮ ಮನೆ ಸೊಸೆಯನ್ನು ಸೆಲೆಕ್ಟ್ ಮಾಡುತ್ತಾರೆ ಅಮ್ಮ ಹೇಳಿದ ಹುಡುಗಿಗೆ ಅಭಿಷೇಕ್ ತಾಳಿ ಕಟ್ಟಲಿದ್ದಾರೆ ಎನ್ನುವ ರೀತಿಯ ಸುದ್ದಿಗಳು ಪ್ರಚಲಿತದಲ್ಲಿದ್ದವು.

ಭಾನುವಾರ ಖಾಸಗಿ ಹೋಟೆಲ್ ಒಂದರಲ್ಲಿ ಕುಟುಂಬಸ್ಥರ ಹಾಗೂ ಸ್ನೇಹಿತರ ಆಪ್ತ ವಲಯದ ಎದುರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಈ ಎಲ್ಲಾ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ ಅಭಿಷೇಕ್ ಅಂಬರೀಶ್ ಅವರು. ಅಭಿಷೇಕ್ ಅಂಬರೀಶ್ ಅವರು ಕೈ ಹಿಡಿದಿರುವ ಹುಡುಗಿಯ ಹೆಸರು ಅವಿವಾ ಬಿದ್ದಪ್ಪ.

ಕೊಡಗಿನ ಮೂಲದವರಾದ ಇವರ ತಂದೆ ಪ್ರಸಾದ್ ಬಿದಪ್ಪ ಈಗ ಭಾರತದ ಫ್ಯಾಷನ್ ಡಿಸೈನಿಂಗ್ ಲೋಕದಲ್ಲಿ ಗಣ್ಯ ಸ್ಥಾನದಲ್ಲಿದ್ದು ಫ್ಯಾಶನ್ ಗುರು ಎಂದೆ ಪ್ರಖ್ಯಾತಿ ಹೊಂದಿದ್ದಾರೆ. ಫ್ಯಾಷನ್ ಕೊರಿಯೋಗ್ರಾಫರ್ ಮತ್ತು ಮಾಡೆಲ್ ಆಗಿ ಹೆಸರು ಮಾಡಿರುವ ಇವರ ಪುತ್ರಿ ಅವಿಭಾ ಬಿದ್ದಪ್ಪ ಅವರನ್ನು ಅಭಿಷೇಕ್ ಅಂಬರೀಶ್ ಅವರು ಕೈ ಹಿಡಿಯುತ್ತಿದ್ದಾರೆ.

ಅವಿವಾ ಹಾಗೂ ಅಭಿಷೇಕ್ ಅವರು ಸಾಕಷ್ಟು ವರ್ಷಗಳಿಂದ ಡೇಟಿಂಗ್ ಅಲ್ಲಿ ಇದ್ದರು ಇದೀಗ ಪ್ರೀತಿಯಾಗಿ ಕುಟುಂಬಸ್ಥರ ಒಪ್ಪಿಗೆ ಪಡೆದು ಸಾಂಪ್ರದಾಯ ಬದ್ಧವಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಲಂಡನ್ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಹಿಂದಿರುಗಿರುವ ಅವಿವಾ ಅವರು ಅಪ್ಪನಂತೆ ಫ್ಯಾಶನ್ ಡಿಸೈನಿಂಗ್ ಅನ್ನು ಕೆರಿಯರ್ ಆಗಿ ಆಯ್ದುಕೊಂಡಿದ್ದಾರೆ.

ಅವಿಭಾ ಅವರು ಕೂಡ ಮಾಡೆಲ್ ಆಗಿದ್ದು ಅಲೆ ಎನ್ನುವ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಕೂಡ ಅಭಿನಯಿಸಿದ್ದಾರೆ ಅಲ್ಲದೆ ಪ್ರಸಾದ್ ಬಿದಪ್ಪ ಅಸೋಸಿಯೇಷನ್ ನ ನಿರ್ದೇಶಕಿ ಕೂಡ ಆಗಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಮತ್ತು ಸಿನಿಮಾರಂಗದ ಹಲವರು ಭಾಗಿಯಾಗಿದ್ದರು.

ದರ್ಶನ್, ಯಶ್ ಮತ್ತು ರಾಧಿಕಾ ಪಂಡಿತ್, ಪ್ರಜ್ವಲ್ ದೇವರಾಜ್ ಹಾಗು ರಾಗಿಣಿ, ಗುರುಕಿರಣ್ ದಂಪತಿ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯ ಕೋರಿದ್ದಾರೆ. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅವಿವಾ ಅವರು ದೇವಲೋಕದಂತೆ ಕಾಣುತ್ತಿದ್ದರು.

ಅಭಿಷೇಕ್ ಅವರು ವಜ್ರದ ಉಂಗುರವನ್ನು ಅವಿವಾ ಅವರಿಗೆ ತೊಡಿಸಿ ಮುತ್ತನಿಟ್ಟು ಬದುಕು ಪೂರ್ತಿ ಜೊತೆ ಇರುವ ಭರವಸೆಯನ್ನು ನೀಡಿದ್ದಾರೆ. ಇನ್ನು ಈಕೆಗೆ ತೊಡಿಸಿರುವ ವಜ್ರದ ಉಂಗುರದ ಮೌಲ್ಯ ಎಲ್ಲೆಡೆ ಚರ್ಚೆ ಆಗುತ್ತಿದ್ದು ಇದರ ಬೆಲೆ ಕೇಳಿದ ಕನ್ನಡದ ಜನತೆ ಶಾಕ್ ಆಗಿದ್ದಾರೆ.

ಅಭಿಷೇಕ್ ಅವರು ಅವಿವಾ ಅವರಿಗೆ ತೊಡಿಸಿರುವ ಉಂಗುರ ಅನ್ನು ಸುಮಲತಾ ಅವರ ಸೆಲೆಕ್ಟ್ ಮಾಡಿದ್ದು ಪುಣೆಯಲ್ಲಿ ಆರ್ಡರ್ ಕೊಟ್ಟು ಮಾಡಿಸಿದ್ದಾರಂತೆ. ಈ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷಗಳಾಗಿದ್ದು ಭಾವಿ ಸೊಸೆಗೆ ಅತ್ತೆಯ ಮೊದಲ ಸೆಲೆಕ್ಷನ್ ಎಂದೇ ಹೇಳಬಹುದು.

ಈ ಜೋಡಿಯು ಮುಂದಿನ ವರ್ಷ ಹಸಿ ಮನೆ ಏರಲಿದ್ದಾರೆ. ಈಗಷ್ಟೇ ಅಭಿಷೇಕ್ ಅಂಬರೀಶ್ ಅವರ ನಟನೆಯ ಕಾಳಿ ಚಿತ್ರದ ಸೆಟ್ಟೇರಿದೆ. ಅಲ್ಲದೆ ಬ್ಯಾಡ್ ಮ್ಯಾನರ್ಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಮುಂದಿನ ವರ್ಷ ಅಭಿಷೇಕ್ ಬದುಕಲ್ಲಿ ವೈಯಕ್ತಿಕವಾಗಿ ಹಾಗೂ ಸಿನಿಮಾ ಬದುಕಲ್ಲಿ ಶುಭ ತರುವ ವರ್ಷ ಎಂದೇ ಹೇಳಬಹುದು.