Sunday, June 4, 2023
HomeEntertainmentನಟಿ ರಮ್ಯ ವಿರುದ್ಧ ದೂರು ದಾಖಲು, ಸಂಕಷ್ಟಕ್ಕೆ ಸಿಲುಕಿದ ರಮ್ಯ

ನಟಿ ರಮ್ಯ ವಿರುದ್ಧ ದೂರು ದಾಖಲು, ಸಂಕಷ್ಟಕ್ಕೆ ಸಿಲುಕಿದ ರಮ್ಯ

ರಮ್ಯ ನಿರ್ಮಾಣದ ಹೊಸ ಸಿನಿಮಾಗೆ ವಿಘ್ನ

ನಟಿ ರಮ್ಯ ನಿರ್ಮಾಣದ ಮೊದಲ ಸಿನಿಮಾ “ಸ್ವಾತಿ ಮುತ್ತಿನ ಮಳೆಹನಿಯೇ” ಚಿತ್ರಕ್ಕೆ ಸಂ.ಕ.ಷ್ಟ ರಮ್ಯ ವಿರುದ್ಧ ದೂರು ದಾಖಲು. ರಮ್ಯಾ ನಿರ್ಮಾಣದ ಸಿನಿಮಾಗೆ ಸಂಕಷ್ಟ, ರಕ್ಷಿತ್ ರಿಷಬ್ ನಂತರ ರಾಜ್ ಬಿ ಶೆಟ್ಟಿ ಮೇಲೂ ಹಕ್ಕು ಚ್ಯುತಿ ಆರೋಪ.

ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿಗಳು ಹಾಗೂ ಇಡೀ ಚಿತ್ರರಂಗಕ್ಕೆ ಸಂತಸ ತಂದಿದೆ. ಆದರೆ ನಾಯಕಿಗೂ ಮುಂಚೆ ಈ ಬಾರಿ ಅವರು ನಿರ್ಮಾಪಕಿ ಆಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ತಮ್ಮದೇ ಆದ ಆಪಲ್ ಬಾಕ್ಸ್ ಸಂಸ್ಥೆಯನ್ನು ನಿರ್ಮಾಣ ಮಾಡಿ ಅದರ ಮೊದಲ ಸಿನಿಮಾ ಆಗಿ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ವನ್ನು ಘೋಷಣೆ ಕೂಡ ಮಾಡಿದ್ದರು.

ನಿರ್ದೇಶನ ಜವಾಬ್ದಾರಿಯನ್ನು ರಾಜ್ ಬಿ ಶೆಟ್ಟಿ ಅವರಿಗೆ ವಹಿಸಿದ್ದರು. 45 ದಿನಗಳಲ್ಲಿ ಪೂರ್ತಿ ಚಿತ್ರೀಕರಣ ಮುಗಿಸಿ ದಾಖಲೆ ಕೂಡ ಮಾಡಿದ್ದರು ರಾಜ್ ಶೆಟ್ರು. ಇನ್ನೇನು ಮಂಜಿನ ಹನಿ ನೋಡಲು ಪ್ರೇಕ್ಷಕರು ಕೂಡ ಸಂತಸದಲ್ಲಿದ್ದರು. ಕೆಲವರು ಇದು ಶಾರ್ಟ್ ಮೂವಿ ಇರಬೇಕು ಹಾಗಾಗಿ ಇಷ್ಟು ಬೇಗ ಚಿತ್ರಿಕರಣ ಆಗಿದೆ ಎಂದು ಗೊಂದಲಕ್ಕೂ ಒಳಗಾಗಿದ್ದರು.

ಆದರೆ ಇದು ಓಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಪೂರ್ಣ ಪ್ರಮಾಣದ ಸಿನಿಮಾವೇ ಆಗಿದ್ದು ಚಿತ್ರೀಕರಣ ಮಾತ್ರ 45 ದಿನಗಳಲ್ಲಿ ಕಂಪ್ಲೀಟ್ ಆಗಿದೆ ಆದರೆ ಮುಂದುವರೆದ ಡಬ್ಬಿಂಗ್ ಹಾಗೂ ಇನ್ನಿತರ ತಾಂತ್ರಿಕ ವರ್ಗದ ಕೆಲಸಗಳು ಬಾಕಿ ಇದ್ದು ಮುಂದಿನ ವರ್ಷ ಖಂಡಿತವಾಗಿ ಪ್ರೇಕ್ಷಕರ ಎದುರು ಸಿನಿಮಾ ಬರಲಿದೆ.

ಆದರೆ ಇದೆಲ್ಲದರ ನಡುವೆ ಸಿನಿಮಾ ಟೈಟಲ್ ಮೇಲೆ ಆರಂಭವೊಂದು ಕೇಳಿ ಬಂದಿದೆ. ನೆನ್ನೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಿತ್ರಮಂಡಳಿ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದು ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ಟೈಟಲ್ ನಮಗೆ ಸೇರಬೇಕಿದ್ದು ಇದನ್ನು ರಾಜ್ ಬಿ ಶೆಟ್ಟಿ ಅನುಮತಿ ಇಲ್ಲದೆ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ.

ರಾಜೇಂದ್ರ ಸಿಂಗ್ ಬಾಬು ಅವರು ಹೇಳುತ್ತಿರುವ ಪ್ರಕಾರ ಅಂಬರೀಷ್ ಹಾಗೂ ಸುಹಾಸಿನಿ ಅವರ ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ಸೆಟ್ಟೇರಿತಂತೆ ಆದರೆ ಅದು ಪೂರ್ತಿಗೊಳ್ಳುವ ಮುನ್ನವೇ ಅಂಬಿ ಅವರು ಇಲ್ಲವಾದ ಕಾರಣ ಅದು ಅಲ್ಲಿಗೆ ನಿಂತಿದೆಯಂತೆ. ಆದರು ಇದರ ಸಂಪೂರ್ಣ ಹಕ್ಕು ನನಗೆ ಸೇರಿದ್ದು ಈಗಲೇ ಚಿತ್ರ ತಂಡ ಆ ಹೆಸರನ್ನು ಕೈಬಿಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ ಮುಂದಿನ ತೀರ್ಮಾನಗಳು ಏನಾಗಲಿದ್ಯೋ ಕಾದು ನೋಡಬೇಕಾಗಿದೆ. ಆದರೆ ನೆಟ್ಟಿಗರು ಮಾತ್ರ ಇಷ್ಟು ದಿನ ಸುಮ್ಮನಿದ್ದು ಈಗ ಚಿತ್ರ ಈ ಹಂತಕ್ಕೆ ಬಂದು ಪ್ರಚಾರ ಪಡೆದ ಮೇಲೆ ಈ ರೀತಿ ಮಾಡುತ್ತಿರುವುದು ತಪ್ಪು.

ಈಗಾಗಲೇ ಹಲವು ತಿಂಗಳಿಂದ ರಮ್ಯಾ ನಿರ್ಮಾಣದ ರಾಜ್ ಬಿ ಶೆಟ್ಟಿ ನಿರ್ದೇಶನದ ಸ್ವಾತಿಮುತ್ತಿನ ಮಳೆ ಹನಿ ಎಂದು ಸಾಕಷ್ಟು ಸುದ್ದಿಗಳು ಪ್ರಸಾರ ಆಗಿವೆ. ಕೊನೆ ಸಮಯದಲ್ಲಿ ಈ ರೀತಿ ಮಾಡುತ್ತಿರುವುದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಹಕ್ಕು ಚ್ಯುತಿ ಆರೋಪಗಳು ಬರುವುದು ಸರ್ವೇಸಾಮಾನ್ಯವಾಗಿ ಹೋಗಿದೆ.

ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಹಾಡಿಗೂ ಕೂಡ ಲಹರಿ ಆಡಿಯೋ ಸಂಸ್ಥೆಯಿಂದ ಈ ಆರೋಪ ಬಂದಿತ್ತು. ಈಗ ವಿಶ್ವ ದಾಖಲೆ ಮಾಡಿರುವ ಕಾಂತರಾ ಸಿನಿಮಾದ ವರಾಹ ರೂಪಂ ಹಾಡು ಕೂಡ ಈ ರೀತಿ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಹೊಂದಿತ್ತು. ಈಗ ಕರ್ನಾಟಕದ ತ್ರಿಬಲ್ ಆರ್ ಬಳಗದ ರಾಜ್ ಶೆಟ್ಟಿ ಅವರ ನಿಮ್ಮ ಮೇಲು ಸಹ ಆರೋಪ ಬಂದಿದೆ. ಎಲ್ಲವೂ ನಿರಾತಂಕವಾಗಿ ಕಳೆದು ಆದಷ್ಟು ಬೇಗ ಸಿನಿಮಾ ಪ್ರೇಕ್ಷಕರಿಗೆ ಸಿಗಲಿ ಎನ್ನುವುದಷ್ಟೇ ಕನ್ನಡಿಗರ ಆಶಯ.