Sunday, June 4, 2023
HomeEntertainmentNikhil: ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡ ನಟ ನಿಖಿಲ್ ಕುಮಾರಸ್ವಾಮಿ, ಈ ವಿಡಿಯೋ ನೋಡಿ...

Nikhil: ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡ ನಟ ನಿಖಿಲ್ ಕುಮಾರಸ್ವಾಮಿ, ಈ ವಿಡಿಯೋ ನೋಡಿ ಮಗು ಎಷ್ಟು ಕ್ಯೂಟ್ ಆಗಿದೆ

.

ರಾಜಕೀಯ ದಿಗ್ಗಜರಾದ ಎಚ್‌ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾಸ್ವಾಮಿಯವರ ಪುತ್ರ ಮತ್ತು ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಮೊಮ್ಮಗ, ನಿಖಿಲ್ ಕುಮಾರಸ್ವಾಮಿ ಅವರು ಕನ್ನಡ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ನಟರಾಗಿ ಗುರುತಿಸಿಕೊಂಡಿದ್ದಾರೆ. ನಿಖಿಲ್ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಪ್ರಸ್ತುತ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಸದ್ಯ ನಿಖಿಲ್ ಕುಮಾರ್ ಸ್ವಾಮಿಯವರು ಯದುವೀರ ಚಿತ್ರದ ಶೂಟಿಂಗ್ ನಲ್ಲಿದ್ದು, ಕೆಲ ಪ್ರಾಜೆಕ್ಟ್ ಗಳು ಪೈಪ್ ಲೈನ್ ನಲ್ಲಿವೆ. ನಿಖಿಲ್ 2016 ರಲ್ಲಿ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅವರು ಇಲ್ಲಿಯವರೆಗೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.

ಜಾಗ್ವಾರ್ ಚಿತ್ರಕ್ಕಾಗಿ ನಿಖಿಲ್ ಕನ್ನಡದ ಅತ್ಯುತ್ತಮ ಚೊಚ್ಚಲ ನಟನಾಗಿ SIIMA ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರು ಜಾಗ್ವಾರ್ ಅಲ್ಲದೆ ಸೀತಾ ರಾಮ ಕಲ್ಯಾಣ, ರೈಡರ್, ಕುರುಕ್ಷೇತ್ರ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಯವರು ಕೊರೋನ ಸಂದರ್ಭದಲ್ಲಿ ರಾಜಕೀಯ ಮನೆತನದಿಂದ ಬಂದ ರೇವತಿಯವರನ್ನು ಮದುವೆಯಾದರೂ, ಈ ಕಾರಣ ಹೆಚ್ಚು ಜನಗಳನ್ನು ಸೇರಿಸದೆ ಕೇವಲ ಕುಟುಂಬಸ್ಥರ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟರು.

ಮದುವೆ ಆದ ನಂತರ ಅದ್ದೂರಿಯಾಗಿ ಆರಕ್ಷತೆಯನ್ನು ಕೂಡ ಮಾಡಿಕೊಂಡರು. ರೇವತಿಯವರು ನಿಖಿಲ್ ಕುಮಾರಸ್ವಾಮಿಯವರ ಮುದ್ದಾದ ಜೋಡಿಯು ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದರು. ರಾಜಕೀಯ ಹಾಗೂ ಸಿನಿಮಾರಂಗಗಳಲ್ಲಿ ಸದಾ ಆಕ್ಟಿವ್ ಆಗಿರುವ ನಿಖಿಲ್ ಕುಮಾರಸ್ವಾಮಿಯವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲೂ ಅಷ್ಟೇ ಆಕ್ಟಿವ್ ಆಗಿರುತ್ತಾರೆ.

ತಮ್ಮ ಕುಟುಂಬಸ್ಥರ ಹಾಗೂ ಅವರ ವಿಶೇಷ ದಿನಗಳ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಇರುತ್ತಾರೆ. ಮಗ ಹುಟ್ಟಿದ ಸಂಭ್ರಮಕ್ಕೆ ನಾಲ್ಕು ತಲೆಮಾರಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ ಇದೇ ಫೋಟೋದಲ್ಲಿ ದೇವೇಗೌಡರು, ಹೆಚ್. ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಮಗನು ಕೂಡ ಇದ್ದಾರೆ.

ಈ ಫೋಟೋಗೆ ಹೆಚ್ಚು ಲೈಕ್ಸ್ ಕೂಡ ಬಂದಿದೆ. ಇನ್ನು ನಿಖಿಲ್ ಕುಮಾರಸ್ವಾಮಿಯವರಿಗೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫ್ಯಾನ್ಸ್ ಫಾಲೋವರ್ಸ್ ಕೂಡ ಹೆಚ್ಚು ಇದ್ದಾರೆ. ಇತ್ತೀಚಿಗೆ ಕೆಲವು ದಿನಗಳ ಹಿಂದೆ ಕುಟುಂಬಸ್ಥರು, ರಾಜಕೀಯ ಸ್ನೇಹಿತರು ಹಾಗೂ ನಿಖಿಲ್ ಕುಮಾರಸ್ವಾಮಿಯವರ ಜೊತೆ ತಮ್ಮ ಮಗುವಿನ ನಾಮಕರಣವನ್ನು ಜೋರಾಗಿ ಆಚರಿಸಿದ್ದಾರೆ. ತಮ್ಮ ಮಗನಿಗೆ ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ.

ನವೆಂಬರ್ 14ನೇ ಮಕ್ಕಳ ದಿನಾಚಣೆಯ ದಿನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳ ದಿನಾಚರಣೆಯ ಅಂಗವಾಗಿ ತಮ್ಮ ಮಗನ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಆ ಫೋಟೋದಲ್ಲಿ ಅವ್ಯಾನ್ ರವರು ಬಿಳಿ ಶರ್ಟ್ ಜೊತೆಗೆ ನೀಲಿ ಬಣ್ಣದ ಡೆನಿಮ್ ತೊಟ್ಟಿ ಮಿಂಚುತ್ತಿದ್ದರು. ಇನ್ನು ಇವರ ತಂದೆ ನಿಖಿಲ್ ಹಾಗೂ ತಾಯಿ ರೇವತಿಯವರು ಕೂಡ ತಮ್ಮ ಮಗನ ತರಹ ಬಟ್ಟೆಯನ್ನು ಧರಿಸಿ ಕಂಗೊಳಿಸುತ್ತಿದ್ದರು.

ಇನ್ನು ಈ ಫೋಟೋಗಳು ಹೆಚ್ಚು ವೈರಲ್ ಆಗಿದೆ ಎಂದರೆ ಸುಳ್ಳಲ್ಲ ಹೌದು ಸ್ನೇಹಿತರೆ ಈ ಫೋಟೋಗಳಿಗೆ ಹೆಚ್ಚು ಕಾಮೆಂಟ್ಸ್ ಗಳು ಕೂಡ ಹರಿದು ಬರುತ್ತಿವೆ. ಕೆಲವು ಅಭಿಮಾನಿಗಳು ಅವ್ಯಾನ್ ಅನ್ನು ಜೂನಿಯರ್ ನಿಖಿಲ್ ಎಂದರೆ ಇನ್ನು ಕೆಲವರು ಮಗು ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.