Sunday, June 4, 2023
HomeViral NewsBJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ...

BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.

 

ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಸದ್ದು ಜೋರಾಗಿ ಇದೆ. ಎಲ್ಲಾ ಪಕ್ಷಗಳು ಕೂಡ ಜನರ ಮತಗಳಿಸಲು ಸಾಕಷ್ಟು ತಂತ್ರಗಳನ್ನು ಹೂಡುತ್ತಿವೆ. ಎಲೆಕ್ಷನ್ ಬಂದಾಗ ಸ್ಟಾರ್ ಪ್ರಚಾರಕರ ಮನ ಒಲಿಸಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಕೇಳಿಕೊಳ್ಳುವುದು ಮಾಮೂಲು. ಸದ್ಯಕ್ಕೀಗ ಮೊನ್ನೆಯಿಂದ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿರುವುದು ರಾಜ್ಯದಲ್ಲಿ ಭಾರಿ ರಾಜಕೀಯ ಸಂಚಲನ ಉಂಟು ಮಾಡಿದೆ.

ಬಿಜೆಪಿ ಪಕ್ಷವನ್ನು ಸೇರುವ ಬಗ್ಗೆ ಅವರು ಸ್ಪಷ್ಟತೆ ಕೊಡದೆ ಬಸವರಾಜ್ ಬೊಮ್ಮಾಯಿ ಅವರ ಸ್ನೇಹ ಬಾಂಧವ್ಯಕ್ಕೆ ಬೆಲೆಕೊಟ್ಟು ಅವರಿಗಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿರುವುದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಚರ್ಚೆಗಳು ಜೋರಾಗಿದ್ದು ಇದರಿಂದ ಬಿಜೆಪಿ ಪಕ್ಷಕ್ಕೆ ಎಷ್ಟು ಅಡ್ವಾಂಟೇಜ್ ಮತ್ತು ಡಿಸ್ ಅಡ್ವಾನ್ಟೇಜ್ ಆಗಲಿದೆ ಎನ್ನುವ ಬಗ್ಗೆ ಡಿಸ್ಕಶನ್ ನಡೆಯುತ್ತಿದೆ.

ಕೆಲವರು ಸುದೀಪ್ ಅವರ ಈ ನಿರ್ಧಾರದಿಂದ ಎಸ್ಟಿ ಸಮುದಾಯದ ಸಾಕಷ್ಟು ಮತಗಳು ಈ ಬಾರಿ ಬಿಜೆಪಿಗೆ ಬೀಳದೆ, ಬಸವರಾಜ್ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದರಿಂದ ಅದು ಪರೋಕ್ಷವಾಗಿ ಬಿಜೆಪಿ ಪ್ರಚಾರ ಮಾಡಿದ ರೀತಿ ಆಯ್ತು ಇದರಿಂದ ಬಿಜೆಪಿಗೆ ದೊಡ್ಡ ಲಾಭ ಸಿಗಲಿದೆ ಎಂದು ಲೆಕ್ಕ ಹಾಕಿದ್ದರೆ ಇನ್ನು ಕೆಲವರು ಸಿನಿಮಾ ಲೆಕ್ಕಾಚಾರವೇ ಬೇರೆ ರಾಜಕೀಯ ಬೇರೆ ಸುದೀಪ್ ಅವರ ಪ್ರಚಾರ ಇಲ್ಲಿ ಯಾವ ಕೆಲಸವೂ ಮಾಡಲಾರದು.

ಸುದೀಪ್ ಅವರು ಕೆಲವು ಕ್ಷೇತ್ರಗಳಲ್ಲಿ ಮಾತ್ರ ಬಂದು ಪ್ರಚಾರ ಮಾಡುವುದರಿಂದ ಅಷ್ಟೇನು ದೊಡ್ಡ ಮಟ್ಟದ ಬದಲಾವಣೆ ಕಂಡುಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಇದೆ ಪ್ರಶ್ನೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಕೂಡ ಎದುರಾಗಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಧ್ಯಮದವರು ಈ ಪ್ರಶ್ನೆಯನ್ನು ಇಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ದೊಡ್ಡ ಫ್ಯಾನ್ಸ್ ಬಳಗ ಹೊಂದಿರುವ ಸ್ಟಾರ್ ಗಳು ಬಂದು ಪಕ್ಷಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ.

ಈಗಾಗಲೇ ಸುದೀಪ್ ಅವರು ಬಿಜೆಪಿ ಪಕ್ಷ ಸೇರಿದ್ದಾರೆ ಅದರ ಬಗ್ಗೆ ಮತ್ತು ಸ್ಟಾರ್ ಪ್ರಚಾರಕರ ಪ್ರಭಾವ ರಾಜಕೀಯದಲ್ಲಿ ಎಷ್ಟು ಕೆಲಸ ಮಾಡಲಿದೆ ಎನ್ನುವುದರ ಬಗ್ಗೆ ಮತ್ತು ನೀವು ಸಹ ಈ ಬಗ್ಗೆ ತಯಾರಿ ಮಾಡಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅವರು ಕೊಟ್ಟ ಉತ್ತರ ಈ ರೀತಿ ಇತ್ತು. ಸುದೀಪ್ ಅವರು ಎಲ್ಲಿಯೂ ಕೂಡ ತಾವು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲ.

ಅವರು ಬಸವರಾಜ್ ಬೊಮ್ಮಾಯಿ ಅವರ ಸ್ನೇಹಕ್ಕೆ ಸಂಬಂಧಕ್ಕೆ ಆತ್ಮೀಯತೆಗೆ ಬೆಲೆಕೊಟ್ಟು ಅವರ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಅದು ಅವರ ವೈಯಕ್ತಿಕ ಇದರ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ದೊಡ್ಡ ಸ್ಟಾರ್ ಗಳು ಅವರೇ ನಮ್ಮ ಬಲ. ಮತ್ತು ಮಾಜಿ ಪ್ರಧಾನಿ ದೇವೇಗೌಡರಾದ ನಮ್ಮ ತಾತ ಅವರು ಅತಿ ದೊಡ್ಡ ಸ್ಟಾರ್ ಪ್ರಚಾರಕರು ಅವರೇ ನಮ್ಮ ಶಕ್ತಿ, ಅವರೇ ನಮ್ಮ ಪಕ್ಷದ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ನಮ್ಮ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಯಾವ ಸ್ಟಾರ್ ಗಳ ಮನ ಒಲಿಸಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ, ಯಾರ ಜೊತೆಗೆ ಈ ಬಗ್ಗೆ ಮಾತುಕತೆ ಆಡಿಲ್ಲ ಎಂದಿದ್ದಾರೆ.