ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೊಖೊ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಇವರಲ್ಲದೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ಮನತುಂಬಿ ಹಾರೈಸಿದರು. ಚಿತ್ರ ಸಾಗಿ ಬಂದ ಕುರಿತು “ಜಂಟಲ್ ಮನ್” ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು.
ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ಲೋಕನಾಥ್ ಸಂತೋಷಪಟ್ಟರು. ಇದೊಂದು ಉತ್ತಮ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. ದೇಸಿ ಕ್ರೀಡೆ ಕುರಿತಾದ ಸಿನಿಮಾಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಹಾಗಾಗಿ ಖೊಖೊ ಅಂತಹ ಆಟವನ್ನು ನಾವು ಆಯ್ಕೆ ಮಾಡಿಕೊಂಡೆವು ಇದೇ ಇಪ್ಪತ್ಮೂರರಂದು ಚಿತ್ರ ತೆರೆಗೆ ಬರುತ್ತಿದೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದರು. ಈ ಚಿತ್ರದ “ಆಣೆ ಮಾಡಿ ಹೇಳುತ್ತೇನೆ ನಾನು ನಿನ್ನವಳು” ಎಂಬ ಹಾಡು ಬಹಳ ಪ್ರಖ್ಯಾತವಾಗಿದೆ.
ಅದರಲ್ಲೂ ಇನ್ಸ್ಟಾ ರೀಲ್ಸ್ ನಲ್ಲಿ ಈ ಹಾಡು ಅನೇಕ ಜನರಿಂದ ಬಳಕೆಯಾಗಿದೆ. ಅದಲ್ಲದೆ ಯೂಟ್ಯೂಬ್ ನಲ್ಲಿ ಕೂಡ ಬಹಳ ಜನರು ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಹಾಗೆ ಗುರು ಶಿಷ್ಯರು ಚಿತ್ರದ ತಂಡವು ತನ್ನ ಚಿತ್ರದ ಪ್ರಮೋಷನ್ ಗೆ ಝೀ ಕನ್ನಡದ ಜೋಡಿ ನಂಬರ್ ವನ್ ಕಾರ್ಯ ಕ್ರಮಕ್ಕೆ ಹೋದಾಗ ಜೋಡಿ ನಂಬರ್ ಒನ್ ರಿಯಾಲಿಟಿ ಶೋ ನ ಆಂಕರ್ ಶ್ವೇತಾ ಚಂಗಪ್ಪನವರು. ಹಾಗೂ ಅದೇ ಜೋಡಿ ನಂಬರ್ ವನ್ ಶೋ ನ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಳ್ವಿಕ ಅವಿನಾಶ್ ಅವರು ಹಾಗೂ ಗುರು ಶಿಷ್ಯರು ಚಿತ್ರದ ನಾಯಕಿ ನಿಶ್ವಿತಾ ನಾಯ್ಡು ರವರ ಜೊತೆ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಈ ರೀಲ್ಸ್ ನಲ್ಲಿ ಮೂವರು ತುಂಬಾ ಚೆನ್ನಾಗಿ ಸಂತೋಷದಿಂದ ಕುಣಿದಿದ್ದಾರೆ. ಇದಕ್ಕೆ ಬಹಳ ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಪೊಸಿಟಿವ್ ಆಗಿ ಬಂದಿದೆ. ಅದಕ್ಕೆ ಶ್ವೇತಾ ಚಂಗಪ್ಪನವರು ತಮ್ಮ ರೀಲ್ಸ್ ನಲ್ಲಿ ಈ ಹಾಡಿನ ಟ್ರೆಂಡ್ಸ್ ಜೊತೆ ನಾವು ರೀಲ್ಸ್ ಮಾಡಿದ್ದೇವೆ ಹಾಗೂ ಈ ಹಾಡು ತುಂಬಾ ಮುದ್ದಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಮುದ್ದಾದ ಹೆಂಗಸರ ಜೊತೆ ಕುಣಿದಿರುವುದು ಬಹಳ ಸಂತೋಷ ತಂದಿದೆ ಗುರು ಶಿಷ್ಯರ ತಂಡಕ್ಕೆ ಶುಭವನ್ನು ಕೋರಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.