ತಲೆ ಸುತ್ತು, ವಾಂತಿ, ಬೆಳಿಗ್ಗೆ ಬೆಡ್ ಮೇಲಿಂದ ಏಳೋಕೆ ಆಗಲ್ಲ ನನಗೀಗಾ 2 ತಿಂಗಳು ಎಂಬ ವಿಚಾರ ಹೇಳಿಕೊಂಡ ನಿವೇದಿತಾ ಗೌಡ. ಇಷ್ಟು ದಿನ ಮುಚ್ಚಿಟ್ಟ ಸತ್ಯ ವೇದಿಕೆ ಮೇಲೆ ಬಹಿರಂಗ.

ನಿವೇದಿತ ಗೌಡ ಕಿರುತೆರೆಯಲ್ಲಿ ಸದಾ ಬಿಸಿ ಆಗಿರುವ ನಟಿ. ಬಿಗ್ ಬಾಸ್(Bignoss) ಮುಗಿದ ನಂತರ ಹಲವಾರು ಸ್ಮಾಲ್ ಸ್ಕೀನ್ ನ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಜ ರಾಣಿ(RajaRani) ಕಾರ್ಯಕ್ರಮದಲ್ಲೂ ಕೂಡ ಪತಿ ಚಂದನ್ ಶೆಟ್ಟಿ(Chandam shetty) ಅವರ ಜೊತೆ ಪಾಲ್ಗೊಂಡಿದ್ದರು. ಇದು ಮುಗಿದ ತಕ್ಷಣವೇ ಗಿಚ್ಚ ಗಿಲಿ ಗಿಲಿ(Gichcha giligili) ಎನ್ನುವ ಕಾಮಿಡಿ ಶೋ ಪ್ರಸಾರವಾಯಿತು.

ಅದರಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಬಾಗಿಯಾಗಿದ್ದ ಇವರು ತಮ್ಮ ಮಾತುಗಳಿಂದ ಡೈಲಾಗ್ ಡೆಲಿವರಿಯಿಂದ ಮತ್ತೊಮ್ಮೆ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದ್ದರು. ಇದೀಗ ಗಿಚ್ಚ ಗಿಲಿ ಗಿಲಿ 2 ಶುರು ಆಗಿದೆ. ಇದರಲ್ಲಿ ಮೆಂಟರ್ ಆಗಲು ಬಂದ ನಿವೇದಿತಾ ಗೌಡ ಅವರಿಗೆ ಅತಿಥಿ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿದೆ. ಒಟ್ಟಿನಲ್ಲಿ ಕಿರುತೆರೆಯ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ನಿವೇದಿತ ಗೌಡ ಅವರು ಇದ್ದೇ ಇರುತ್ತಾರೆ ಎನ್ನಬಹುದು.

ಇದರ ಜೊತೆಗೆ ಇತ್ತೀಚೆಗೆ ಮಿಸಸ್ ಇಂಡಿಯಾ(Mrs India) ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ 2022 ಇದನ್ನು ಮಡಿಗೇರಿಸಿಕೊಂಡರು. ಈ ಅವಾರ್ಡ್ ಬಂದ ಬಳಿಕ ಇವರಿಗೆ ಸಿನಿಮಾರಂಗದಲ್ಲೂ ಕೂಡ ಆಫರ್ ಬರುತ್ತದೆಯಂತೆ. ಸದ್ಯಕ್ಕೆ ಒಂದು ತೆಲುಗು(Thelugu) ಸಿನಿಮಾಗೆ ನಾಯಕಿ ಆಗಲು ಒಪ್ಪಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಚಂದನ್ ಶೆಟ್ಟಿ ಜೊತೆಗೆ ಸದಾ ಒಂದಲ್ಲ ಒಂದು ರೀಲ್ಸ್ ಮಾಡುವ ಮೂಲಕ ಫಾಲೋವರ್ಸ್ ಅನ್ನು ಮನೋರಂಜಿಸುತ್ತಿರುತ್ತಾರೆ.

ಇತ್ತೀಚೆಗೆ ಅವರಿಬ್ಬರೂ ಫಾದರ್ ಎನ್ನುವ ವಿಷಯಕ್ಕೆ ಕಾಮಿಡಿ ಮಾಡಿದ್ದು ಎಲ್ಲರಿಗೂ ಇಷ್ಟ ಆಗಿತ್ತು ಮತ್ತು ಪರೋಕ್ಷವಾಗಿ ಇವರು ತಂದೆ-ತಾಯಿ ಆಗುತ್ತಿರುವುದನ್ನು ಈ ರೀತಿ ಹೇಳಿಕೊಳ್ಳುತ್ತಿದ್ದಾ ಎನ್ನುವ ಅನುಮಾನವನ್ನು ಹುಟ್ಟು ಹಾಕಿತ್ತು. ಈ ಬಗ್ಗೆ ಚಂದನ್ ಅವರೇ ಉತ್ತರ ಕೊಟ್ಟಿದ್ದು ನಾವಿಬ್ಬರು ಬಹಳ ಬ್ಯುಸಿ ಆಗಿದ್ದೇವೆ ಇನ್ನು ಮಗು ಮಾಡಿಕೊಳ್ಳುವುದರ ಬಗ್ಗೆ ಯೋಚಿಸಿಲ್ಲ ಅಲ್ಲದೆ ನಿವಿಗೆ ಮಗು ಆದರೆ ಅದನ್ನು ನಾನೇ ನೋಡಿಕೊಳ್ಳಬೇಕಾಗುತ್ತದೆ.

ನಾವಿನ್ನು ಅದಕ್ಕೆ ತಯಾರಾಗಿಲ್ಲ ಎಂದು ಸ್ಪಷ್ಟನೆ ಕೊಡುವ ಮೂಲಕ ತಾವು ಹೇಳಿದ್ದು ಬರೀ ಜೋಕ್ ಅಷ್ಟೇ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಇದಾದ ಬಳಿಕ ಮತ್ತೊಮ್ಮೆ ಇವರು ತಂದೆ ತಾಯಿ ಆಗುತ್ತಿರುವ ವಿಷಯ ವೇದಿಕೆ ಮೇಲೆ ಚರ್ಚೆ ಆಗುತ್ತಿದೆ. ಅದು ಕೂಡ ಈಗ ನಿವೇದಿತಾ ಗೌಡ ಅವರ ಪಾಲ್ಗೊಳ್ಳುತ್ತಿರುವ ಗಿಚ್ಚಗಿಲಿಗಿಲಿ ಕಾರ್ಯಕ್ರಮದ ವೇದಿಕೆ ಮೇಲೆ. ಈ ವೇದಿಕೆಗೆ ನಿವೇದಿತಾ ಹೋದಾಗ ಅವರಿಗೆ ಎರಡು ತಟ್ಟೆಯಲ್ಲಿ ಹುಣಸೆಹಣ್ಣನ್ನು ಕೊಡಲಾಗಿದೆ.

ನಿರಂಜನ್ ನೋಡಿ ಅದನ್ನು ಏನು ಎಂದು ಕೇಳಿದಾಗ ಒಂದು ಬಟ್ಟೆ ತೆಗೆದಿರುವ ಹುಣಸೆಹಣ್ಣು ಇನ್ನೊಂದು ಬಟ್ಟೆ ಹಾಕಿರುವ ಹುಣಸೆಹಣ್ಣು ಎಂದು ಕಾಮಿಡಿ ಆಗಿ ಉತ್ತರ ನೀಡಿದ್ದಾರೆ. ಇದು ಯಾಕೆ ಎಂದು ಕೇಳಿದಾಗ ನಿವೇದಿತಾ ಗೌಡ ಅವರು ನಾನು ಪ್ರಗ್ನೆಂಟ್ ಎಂದು ಹೇಳಿಕೊಂಡಿದ್ದಾರೆ. ನನಗೆ ತಲೆ ಸುತ್ತುತ್ತಿದೆ, ಸುಸ್ತಾಗುತ್ತಿದೆ, ಹುಳಿ ತಿನ್ನಬೇಕು ಎನಿಸುತ್ತಿದೆ, ಬೆಳಗ್ಗೆ ಎದ್ದ ವಾಮಿಟ್ ಬರುವ ರೀತಿ ಆಗುತ್ತದೆ ಎಂದಿದ್ದಾರೆ ಇದನ್ನು ಕೇಳಿ ಅಲ್ಲಿಂದವರೆಲ್ಲ ಶಾ-ಕ್ ಆಗಿದ್ದಾರೆ.

ನಿವಿ ನಿಜವಾಗಲೂ ಪ್ರೇಗ್ನೆಂಟ್ ಆಗಿದ್ದಾರ ಎಂದು ಎಲ್ಲರಿಗೂ ಅನುಮಾನ ಮೂಡುತ್ತಿದೆ ಆದರೆ ಸದ್ಯಕ್ಕೆ ಇದು ಗಿಚ್ಚ ಗಿಲಿಗಿಲಿ ಕಾರ್ಯಕ್ರಮದ ಪ್ರೊಮೋ ಅಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ಸಿಗಬೇಕು ಎಂದರೆ ವಾರಾಂತ್ಯದ ಕಾರ್ಯಕ್ರಮದ ಎಪಿಸೋಡ್ ಅನ್ನು ನೋಡಬೇಕು. ಪ್ರೋಮೋ ನೋಡಿದ ಹಲವರು ನಿವೇದಿತ ಗೌಡ ಅವರು ಸುಮ್ಮನೆ ಎಲ್ಲರನ್ನು ಅಟ್ರಾಕ್ಟ್ ಮಾಡುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅಷ್ಟೇ ಇದು ಶುದ್ದ ಸುಳ್ಳು ಎನ್ನುತ್ತಿದ್ದಾರೆ.

Leave a Comment

WhatsApp Group Join Now
Telegram Group Join Now