ಎಲ್ಲರಿಗೂ ತಿಳಿದಿರುವಂತೆ ಹೊಸದಾಗಿ ಅಧಿಕಾರಕ್ಕೆ ಬಂದಿರುವಂತಹ ಅಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದರು. ಅದರಂತೆಯೇ ಅವರು ಆ ಐದು ಗ್ಯಾರಂಟಿಗಳನ್ನು ಸಹ ಅಧಿಕೃತವಾಗಿ ಚಾಲನೆಗೆ ತಂದಿದ್ದಾರೆ ಅಂದರೆ ಆ ಐದು ಗ್ಯಾರಂಟಿಗಳನ್ನು ಜನರು ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.
ಅದರಲ್ಲಿ ಈಗ ನಾವು ಹೇಳುವಂತಹ ಈ ಒಂದು ಗ್ಯಾರಂಟಿಯು ಕೂಡ ಒಂದಾಗಿದೆ ಅದೇನೆಂದರೆ ಪ್ರತಿಯೊಬ್ಬರಿಗೂ ಕೂಡ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ಹಾಕುವಂತಹ ಮಾಹಿತಿ ತಿಳಿಸಿದ್ದರು. ಅದರಂತೆಯೇ ಫಲಾನುಭವಿಗಳು ಈಗಾಗಲೇ ಇದರ ಪ್ರಯೋಜನ ಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!
ಆದರೆ ಕೆಲವೊಂದಷ್ಟು ಜನ ಇನ್ನೂ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿರಲಿಲ್ಲ ಹಾಗಾಗಿ ಆ ಒಂದು ಸಂದರ್ಭ ದಲ್ಲಿ ಹೊಸದಾಗಿ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡ್ ಅರ್ಜಿಯನ್ನು ಬ್ಲಾಕ್ ಮಾಡಲಾಗಿತ್ತು. ಆದರೆ ಈಗ ಆಹಾರ ಸಚಿವರಾಗಿರುವಂತಹ KH ಮುನಿಯಪ್ಪ ಅವರು ಪ್ರತಿಯೊಬ್ಬ ಗ್ರಾಹಕರಿಗೂ ಕೂಡ 2 ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಹಾಗಾದರೆ ಆ 2 ಭರ್ಜರಿ ಗುಡ್ ನ್ಯೂಸ್ ಯಾವುದು ಎಂದು ನೋಡುವುದಾದರೆ.
* ಇಲ್ಲಿವರೆಗೂ ಯಾರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿಲ್ಲವೋ ಅವರು ಹೊಸದಾಗಿ ಅರ್ಜಿ ಸಲ್ಲಿಸುವಂತಹ ಯೋಜನೆ.
* ಹಾಗೂ ಯಾರೆಲ್ಲಾ ಅರ್ಜಿ ಈಗಾಗಲೇ ಸಲ್ಲಿಸಿದ್ದೀರಾ ಅವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ವಿತರಿಸುತ್ತೇವೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿ:- ರೈತರಿಗೆ ಭರ್ಜರಿ ಗುಡ್ ನ್ಯೂಸ್ ₹2000 ಕಂತು ಜಮಾ.!
* ಆಹಾರ ಸಚಿವರಾಗಿರುವಂತಹ KH ಮುನಿಯಪ್ಪ ಅವರು ಯಾರೆಲ್ಲ ಈಗಾಗಲೇ ಎಪಿಎಲ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ್ದರು ಅವರೆಲ್ಲರಿಗೂ ಕೂಡ ರೇಷನ್ ಕಾರ್ಡ್ ಅನ್ನು ವಿತರಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ 2.95 ಲಕ್ಷ ಅರ್ಜಿ ಸಲ್ಲಿಸಿದ್ದು ಇವರೆಲ್ಲರಿಗೂ ಕೂಡ ಹೊಸದಾಗಿ ರೇಷನ್ ಕಾರ್ಡ್ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.
ಹಾಗಾಗಿ ಈ ಎಲ್ಲಾ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು. ಇದೇ ಮಾರ್ಚ್ 31ನೇ ತಾರೀಖಿನ ಒಳಗಾಗಿ ಉಳಿದ ಎಲ್ಲಾ ಅರ್ಜಿ ಪರಿಶೀಲನೆ ಮುಗಿಸಿ ತದನಂತರ ತಕ್ಷಣವೇ ಏಪ್ರಿಲ್ 1ನೇ ತಾರೀಖಿನ ನಂತರ ನಿಮಗೆಲ್ಲರಿಗೂ ರೇಷನ್ ಕಾರ್ಡ್ ತಲುಪಿಸುವಂತಹ ಕೆಲಸ ಮಾಡುತ್ತೇವೆ ಎನ್ನುವಂತಹ ಮಾಹಿತಿಯನ್ನು KH ಮುನಿಯಪ್ಪ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!
* ಇನ್ನು ಎರಡನೆಯದಾಗಿ ಯಾರು ಇನ್ನೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೋ ಅವರು ಹೊಸದಾಗಿ ಅರ್ಜಿಯನ್ನು ಹಾಕುವುದಕ್ಕೆ ಹೊಸ ಅರ್ಜಿ ಆಹ್ವಾನವನ್ನು ಸಹ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗಾಗಿ ಯಾರೆಲ್ಲ ಈಗಾಗಲೇ ಅರ್ಜಿ ಹಾಕಿದ್ದರೋ ಅವರೆಲ್ಲರ ರೇಷನ್ ಕಾರ್ಡ್ ವಿತರಿಸಿದ ತಕ್ಷಣವೇ ಹೊಸದಾಗಿ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಎಂಬ ಮಾಹಿತಿ ಯನ್ನು ತಿಳಿಸಿದ್ದಾರೆ.
ಹಾಗಾಗಿ ಯಾರೆಲ್ಲ ಇನ್ನೂ ಯಾವ ರೇಷನ್ ಕಾರ್ಡ್ ಪಡೆದುಕೊಂಡಿಲ್ಲವೋ ತಕ್ಷಣವೇ ಅರ್ಜಿಯನ್ನು ಹಾಕುವುದರ ಮೂಲಕ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವುದರ ಮೂಲಕ ನೀವು ಕೂಡ ಹಲವಾರು ರೀತಿಯ ಪ್ರಯೋಜನಗಳನ್ನು ಅಂದರೆ ಗೃಹಲಕ್ಷ್ಮಿ ಯೋಜನೆ ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎಂದು KH ಮುನಿಯಪ್ಪ ಅವರು ತಿಳಿಸಿದ್ದಾರೆ.