ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ಆರೋಗ್ಯವನ್ನು ನಾವೇ ಹೇಗೆ ಕಾಪಾಡಿಕೊಳ್ಳಬಹುದು ಹಾಗೂ ಯಾವ ಪದಾರ್ಥಗಳನ್ನು ನಾವು ಹೇಗೆ ಸೇವನೆ ಮಾಡುವುದರಿಂದ ಅದು ನಮ್ಮ ಯಾವ ಆರೋಗ್ಯ ಹೆಚ್ಚಿಸುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಕಾಮ ಕಸ್ತೂರಿ ಬೀಜಕ್ಕೆ ಕೆಂಪು ಕಲ್ಲು ಸಕ್ಕರೆ ಸೇರಿಸಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುವುದು.
* ಅಡುಗೆಯಲ್ಲಿ ಅರಿಷಿಣ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆಹಾರ ಸುಲಭವಾಗಿ ಜೀರ್ಣವಾಗುವುದು.
* ಹಾಲಿನೊಂದಿಗೆ ಅರಿಷಿಣ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಕೆಮ್ಮು ನೆಗಡಿ ನಿವಾರಣೆಯಾಗುತ್ತದೆ.
* ದುರ್ವಾಸನೆ ಬಾಯಿ ಉಳ್ಳವರು ಗೋರಂಟಿ ಗಿಡದ ಚಿಗುರೆಳೆಗಳನ್ನು ಚೆನ್ನಾಗಿ ಅಗಿದು ರಸ ಉಗುಳುತ್ತಿದ್ದರೆ ದುರ್ವಾಸನೆ ಇರುವುದಿಲ್ಲ.
* ಹಸಿ ಕೊಬ್ಬರಿಯಿಂದ ಹಾಲು ತೆಗೆದು ಗ್ಲಿಸರಿನ್ ಜೊತೆಗೇ ಬೆರೆಸಿ ಚರ್ಮಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.
ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!
* ಮೊಡವೆಗಳು ಇರುವವರು ಎಳನೀರಿನಲ್ಲಿ ದಿನಾಲೂ ಮುಖ ತೊಳೆ ಯುತಿದ್ದರೆ ಮೊಡವೆಗಳು ಮತ್ತು ಕಪ್ಪು ಕಲೆಗಳು ಮಾಯವಾಗುತ್ತವೆ.
* ತಾಯಿ ಹಾಲು ಕುಡಿಯುವ ಮಗುವಿಗೆ ಭೇಧಿಯಾಗುತ್ತಿದರೆ ಸಿಪ್ಪೆ ತೆಗೆದ ಸೇಬು ಹಣ್ಣನ್ನು ಚೆನ್ನಾಗಿ ಕಿವುಚಿ ಕೊಡುತ್ತಿದ್ದರೆ ಭೇಧಿ ನಿಂತು ಹೋಗುತ್ತದೆ.
* ರಕ್ತ ಹೀನತೆಯಿಂದ ಬಳಲುತಿದ್ದವರು ದ್ರಾಕ್ಷಾರಸದೊಂದಿಗೆ ಸ್ಪಲ್ಪ ಜೇನು ತುಪ್ಪ ಬೆರೆಸಿ ಸೇವಿಸಿದರೆ ರಕ್ತ ಹೀನತೆ ಇರುವುದಿಲ್ಲ.
* ಬಿಳಿ ಮೂಲಂಗಿಯ ರಸವನ್ನು ನಿಯಮಿತವಾಗಿ ಸೇವಿಸಿದರೆ ಶೀತ ಕೆಮ್ಮು ಹಾಗೂ ಮೂಲವ್ಯಾಧಿಗೆ ರಾಮಬಾಣ.
* ನಿಂಬೆರಸದಲ್ಲಿ ದಾಲ್ಟಿನ್ನಿಯನ್ನು ತೇಯ್ದು ಮೊಡವೆಗೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತದೆ.
* ನರ ದೌರ್ಬಲ್ಯ ಪೀಡಿತರಾಗಿದ್ದರೆ ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ನುಗ್ಗೆಕಾಯಿ, ನುಗ್ಗೆಸೊಪ್ಪು, ನುಗ್ಗೆಹೂಗಳನ್ನು ಸೇವಿಸಿ, ಆಹಾರದಲ್ಲಿ ನುಗ್ಗೆ, ಸ್ಪಲ್ಪ ಪ್ರಮಾಣದಲ್ಲಿ ನೆಲಗಡಲೆ ಬಾದಾಮಿ ಸೇವಿಸುವುದರಿಂದ ಹೃದಯ ರೋಗವನ್ನು ದೂರವಿಡಬಹುದು.
* ತುಂಬೆ ಸೊಪ್ಪಿನ ರಸವನ್ನು ತಲೆನೋವು ಇರುವವರು ಶುದ್ಧ ಕಿವಿಯಲ್ಲಿ ಬೆಳಗಿನ ಸಮಯ ಹನಿ ಹನಿಯಾಗಿ 2 ರಿಂದ 3 ಹನಿ ಬಿಟ್ಟರೆ ಅರೆ ತಲೆನೋವು ಇಲ್ಲದಂತಾಗುತ್ತದೆ.
ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!
* ತಲೆನೋವು ಇರುವವರು ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಸೇರಿಸಿ ಒಂದೆರಡು ಹನಿ ಮೂಗಿನಲ್ಲಿ ಹಿಂಡಿದರೆ ತಲೆನೋವು ಇಲ್ಲದಂತಾಗುತ್ತದೆ.
* ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಜಾಗಕ್ಕೇ ಸುಣ್ಣ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಹಚ್ಚಿರಿ.
* ಬಿಸಿ ಚಹಾಗೆ ನಿಂಬೆರಸ ಸೇರಿಸಿ ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಾಗುತ್ತದೆ. ನೆಗಡಿ ಗುಣವಾಗುತ್ತದೆ. ಟೀ ಬದಲು ನಿಂಬೆಹಣ್ಣಿನ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದಿನವೆಲ್ಲ ಉಲ್ಲಾಸದಿಂದ ಇರಬಹುದು.
* ಕೆಂಪು ದಾಸವಾಳವನ್ನು ಶುಭ್ರಗೊಳಿಸಿ ಅದರ ದಳ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ. ಅರಿಷಿಣ ಮತ್ತು ಬೇಳ್ಳುಳ್ಳಿ ಆಸ್ತಮಾ ರೋಗಿಗಳಿಗೆ ರಾಮಬಾಣವಿದ್ದಂತೆ. ಹಾಲಿನೊಂದಿಗೆ ಅರಿಷಿಣ ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯುವುದರಿಂದ ಆಸ್ತಮ ಕಡಿಮೆಯಾಗು ತ್ತದೆ.
* ಎಳೆ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತಿದ್ದರೆ. ಬಿಲ್ವ ಪತ್ರೆಯ ಎಲೆಯನ್ನು ಲೇಪಿಸಿ ಸಲ್ಪ ಸಮಯದ ನಂತರ ಸ್ನಾನ ಮಾಡಿದರೆ ಕೂದಲು ಕಪ್ಪಾಗುತ್ತದೆ.
ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.
* ಕೆಲವರಿಗೆ ಆಗಾಗ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತಿದ್ದರೆ ಅದರ ನಿವಾರಣೆಗೆ ಒಂದು ಲೋಟ ಮೇಕೆ ಹಾಲಿಗೆ ಒಂದು ಚಮಚ ಹಸಿ ಶುಂಠಿ ರಸವನ್ನು ಬೆರೆಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
* ಉರಿದ ಕಡಲೆಕಾಯಿಯನ್ನು ಬೆಲ್ಲದೊಂದಿಗೆ ಸೇವಿಸುವುದು ಗರ್ಭಿಣಿ ಯರಿಗೆ ಅತ್ಯುತ್ತಮ ಆಹಾರ ಕ್ಯಾರೆಟ್ ರಸಕ್ಕೆ ಅಥವಾ ಕ್ಯಾರೆಟ್ ಹೊಳುಗಳೊಂದಿಗೆ ನಿಂಬೆರಸ ಜೇನತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮುಖದ ಚರ್ಮ ಕಾಂತಿಯುತ ವಾಗುತ್ತದೆ.
* ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಕಸ್ತೂರಿ ಅರಿಶಿಣ ಪುಡಿ ಬೆರೆಸಿ ಮೈಗೆ ಹಚ್ಚಿಕೊಂಡು ಒಂದು ತಾಸಿನ ನಂತರ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.
* ಮಕ್ಕಳಿಗೆ ಮತ್ತು ಆರೋಗ್ಯವಂತ ವೃದ್ಧರಿಗೆ ಒಂದೊಂದು ಕಿತ್ತಳೆ ಹಣ್ಣನ್ನು ಕೊಡುತ್ತಾ ಬಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಮಧುಮೇಹ ರೋಗಿಗಳು ಕರಿಬೇವಿನ ಚಿಗುರೆಲೆಯೊಂದಿಗೆ ಒಂದೆ ರಡು ಬಿಲ್ವ ಪತ್ರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದ ರಿಂದ ಆರೋಗ್ಯಕ್ಕೆ ಉತ್ತಮ.