Friday, June 9, 2023
HomeEntertainmentಸದ್ದಿಲ್ಲದೆ ಪ್ರೀತಿಸಿದ ಹುಡುಗಿ ಕೈ ಹಿಡಿದ ಪಾರು ಸೀರಿಯಲ್ ನಟ ಆದಿತ್ಯ ಅಲಿಯಾಸ್ ಶರತ್

ಸದ್ದಿಲ್ಲದೆ ಪ್ರೀತಿಸಿದ ಹುಡುಗಿ ಕೈ ಹಿಡಿದ ಪಾರು ಸೀರಿಯಲ್ ನಟ ಆದಿತ್ಯ ಅಲಿಯಾಸ್ ಶರತ್

 

ಕಿರುತೆರೆ ಧಾರವಾಹಿಗಳು ಮಹಿಳಾ ಅಭಿಮಾನಿಗಳ ಪಾಲಿಗೆ ತೀರ ಆತ್ಮೀಯ ವಿಷಯ. ಪ್ರತಿದಿನ ಕೂಡ ಅವರು ಟಿವಿ ಮುಂದೆ ಕುಳಿತು ಧಾರವಾಹಿಗಳನ್ನು ನೋಡುವುದರಿಂದ ಅಲ್ಲಿ ಬರುವ ಪಾತ್ರಗಳನ್ನು ತಮ್ಮ ಸುತ್ತಮುತ್ತ ಇರುವವರೇ ಎನ್ನುವಷ್ಟು ಹಚ್ಚಿಕೊಂಡು ಬಿಡುತ್ತಾರೆ.

ಸೀರಿಯಲ್ ಅಲ್ಲಿ ಅವರು ಒಂದು ಪಾತ್ರವನ್ನು ಮಾತ್ರ ನಟ ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ಮರೆತು ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆಯೇ ಎನ್ನುವಂತೆ ಗಾಢವಾಗಿ ಅದಕ್ಕೆ ತಲೆಕೆಡಿಸಿಕೊಂಡು ಬಿಡುವ ಇವರು ಅದನ್ನು ನಟಿಸುವ ಪಾತ್ರಗಳ ಕಲಾವಿದರ ಬಗ್ಗೆ ಕೂಡ ಬಹಳ ಪ್ರೀತಿ ತೋರುತ್ತಾರೆ.

ಈ ಸೀರಿಯಲ್ ಕಲಾವಿದರಲ್ಲಿ ಧಾರಾವಾಹಿಯ ನಾಯಕ ಮತ್ತು ನಾಯಕಿಗೆ ಸಿನಿಮಾ ಸ್ಟಾರ್ ಗಳಿಗೂ ಕಡಿಮೆ ಇಲ್ಲದಂತೆ ಅಭಿಮಾನಿಗಳು ಇರುತ್ತಾರೆ. ಈಗ ಈ ಅಭಿಮಾನಿಗಳ ಸಾಲಿನಲ್ಲಿ ಮಹಿಳೆಯರು ಮಾತ್ರ ಅಲ್ಲದೆ ಮಕ್ಕಳು ಮತ್ತು ಪುರುಷರುಗಳ ಸೇರಿದ್ದಾರೆ ಎನ್ನುವುದು ವಿಶೇಷ.

ಈಗೀಗ ಸೀರಿಯಲ್ ಲೋಕದಲ್ಲೂ ಕೂಡ ಬಹಳ ಮಾರ್ಪಾಡು ಆಗುತ್ತಿರುವುದರಿಂದ ಬಹಳ ಗ್ರಾಂಡ್ ಆಗಿ ಮೂಡಿ ಬರುವ ಧಾರಾವಾಹಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಜೊತೆ ಅಂಟಿಕೊಂಡಿರುವ ಕಥೆಗಳು ಆಗಿರುವ ಕಾರಣ ಮಹಿಳೆಯರಿಗೆ ಮಾತ್ರ ಸೀರಿಯಲ್ ಎನ್ನುತ್ತಿದ್ದ ಕಾಲ ಬದಲಾಗಿ ಪುರುಷರು, ವೃದ್ದರು, ಶಾಲಾ ಕಾಲೇಜು ಮಕ್ಕಳು ಎಲ್ಲರೂ ಸಹ ಈಗ ಸೀರಿಯಲ್ ಪ್ರಿಯರಾಗಿ ಬಿಟ್ಟಿದ್ದಾರೆ.

ಇನ್ನು ಧಾರಾವಾಹಿಯಲ್ಲಿ ನಟನೆ ಮಾಡುವ ಕಲಾವಿದರ ಬಗ್ಗೆ ಹೇಳುವುದಾದರೆ ನಾಯಕ ನಾಯಕಿ ಮತ್ತು ಖಳನಾಯಕ ಪಾತ್ರಗಳಿಗೆ ಮುಖ್ಯಸ್ಥಾನವಿರುತ್ತದೆ. ಸಿನಿಮಾಗಿಂತ ಬಹಳ ಹೆಚ್ಚಾಗಿಯೇ ಕಿರುತೆರೆಯ ತೆರೆ ಮೇಲೆ ಧಾರಾವಾಹಿ ನಾಯಕ ನಾಯಕಿಯರು ವಿಜೃಂಭಿಸುತ್ತಿರುತ್ತಾರೆ.

ಹಾಗಾಗಿ ತಮ್ಮ ಕನಸಿನ ನಾಯಕ ನಾಯಕಿಯನ್ನು ಊಳಿಸಿಕೊಳ್ಳುವವರು ಇವರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಾರೆ. ಇಂಥಹ ನಾಯಕರ ಸಾಲಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರವಾಹಿಯ ನಾಯಕನಟ ಆಗಿರುವ ಆದಿ ಕೂಡ ಮೊದಲ ಸಾಲಿನಲ್ಲಿ ಇದ್ದಾರೆ.

ಪತಿ ಎಂದರೆ ಆದಿತ್ಯ ಹಾಗೆ ಇರಬೇಕು, ಬಾಸ್ ಎಂದರೆ, ಇನಿಯ ಎಂದರೆ, ಮಗ ಎಂದರೆ, ಅಣ್ಣ ಎಂದರೆ ಆದಿ ರೀತಿ ಇರಬೇಕು ಎಂದು ಎಲ್ಲರೂ ಕೂಡ ಎಕ್ಸಾಂಪಲ್ ಕೊಡುತ್ತಿದ್ದಾರೆ. ಈ ರೀತಿ ನಾಯಕನ ಪಾತ್ರಕ್ಕೆ ಎಕ್ಸಾಂಪಲ್ ಆಗಿರುವ ಆದಿ ಅವರ ನಿಜವಾದ ಹೆಸರು ಶರತ್ ಪದ್ಮನಾಭ್.

ಈ ಹಿಂದೆ ಕಿರುತೆರೆಯ ಬೇರೆ ಧಾರಾವಾಹಿಗಳನ್ನು ನಟಿಸಿದ್ದರು ಕೂಡ ಪಾರು ಧಾರಾವಾಹಿ ಇವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗೆ ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಪಾರು ಧಾರವಾಹಿಯ ನಾಯಕನಟ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಮಹಿಳಾ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ್ದಾರೆ.

ತಾವು ಪ್ರೀತಿಸುತ್ತಿದ್ದ ಹುಡುಗಿಯ ಕೈ ಹಿಡಿದು ಶರತ್ ಅವರು ಎಂಗೇಜ್ಮೆಂಟ್ ಮಾಡಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಎಂಗೇಜ್ಮೆಂಟ್ ಗೆ ಪಾರು ಧಾರವಾಹಿಯ ಹೊಣೆ ಹೊತ್ತಿರುವ ಮತ್ತು ಶರತ್ ಅವರಿಗೆ ಬಹಳ ಆತ್ಮೀಯ ಆಗಿರುವ ದಿಲೀಪ್ ರಾಜ್ ದಂಪತಿ ಮತ್ತು ಝೀ ಧಾರವಾಹಿಗಳ ಕಲಾವಿದರುಗಳಾದ.

ಪ್ರೀತು, ಸೀತಾರಾ, ಪ್ರಿಯ ಜೆ ಆಚಾರ್ ಇನ್ನು ಮುಂತಾದವರು ಭಾಗಿ ಆಗಿದ್ದಾರೆ ಮುಂದಿನ ವರ್ಷ ಶೃಂಗೇರಿಯಲ್ಲಿ ಅದ್ದೂರಿಯಾಗಿ ಇವರಿಬ್ಬರ ವಿವಾಹ ಜರುಗಲಿದೆ ಎನ್ನುವ ಮಾತುಗಳು ಕೂಡ ಇವೆ. ಒಳ್ಳೊಳ್ಳೆ ಪ್ರಾಜೆಕ್ಟ್ಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಶರತ್ ರವರ ವೈವಾಹಿಕ ಜೀವನ ಕೂಡ ಅಷ್ಟೇ ಸುಖವಾಗಿರಲಿ ಎಂದು ಹರಸೋಣ.