Home Blog Page 103

ಡಯಾಬಿಟಿಸ್ ಮತ್ತು ದೇಹದ ತೂಕ ಕಡಿಮೆ ಆಗಬೇಕಾ ಇವುಗಳನ್ನು ತಿನ್ನಿರಿ, ಈ ರೀತಿ ಆಹಾರ ಕ್ರಮ ರೂಢಿಸಿಕೊಂಡರೆ ಹೆಲ್ತ್ ನಂಬರ್ 1 ಆಗುತ್ತದೆ.!

 

ಈಗಿನ ಕಾಲದಲ್ಲಿ ಅನಾರೋಗ್ಯಕ್ಕಿಂತ ಹೆಚ್ಚಾಗಿ ದೇಹದ ಡಿಸ್ ಆರ್ಡರ್‌ ಗಳೇ ಹೆಚ್ಚು ಎಂದು ಹೇಳಬಹುದು. ಥೈರೆಡ್, BP, ಶುಗರ್ ಈ ರೀತಿ ದೀರ್ಘಕಾಲದವರೆಗೆ ಮೆಡಿಸನ್ ತೆಗೆದುಕೊಳ್ಳಬೇಕಾದ ಸಮಸ್ಯೆಗಳನ್ನು ಕಾಯಿಲೆಗಳು ಎನ್ನುವುದರ ಬದಲು ಡಿಸ್ ಆರ್ಡರ್ ಗಳು ಎಂದು ಹೇಳಬಹುದು. ಇವುಗಳಿಗೆ ನಿರಂತರವಾಗಿ ಮೆಡಿಸನ್ ತೆಗೆದುಕೊಳ್ಳುವುದರಿಂದ ಲಿವರ್ ಹಾಳಾಗುತ್ತದೆ ಆ ಮೂಲಕ ಇನ್ನಷ್ಟು ದೇಹದಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ.

ಇದನ್ನು ತಪ್ಪಿಸುವ ಸಲುವಾಗಿ ನ್ಯಾಚುರಲ್ ಆಗಿ ನಾವು ಔಷಧಿ ರಹಿತವಾಗಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಯಾವುದೇ ಮೆಡಿಸನ್ ಇಲ್ಲದೆ ಕೇವಲ ಒಂದೇ ತಿಂಗಳಿನಲ್ಲಿ ಉತ್ತಮವಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದರಿಂದ ನೂರಕ್ಕೆ ನೂರರಷ್ಟು ಈ ಕಾಯಿಲೆಯನ್ನು ಗುಣ ಮಾಡಿಕೊಳ್ಳಬಹುದು. ಅದಕ್ಕಾಗಿ ನಿಮ್ಮ ದಿನಚರ್ಯ ಈ ರೀತಿ ಇರಲಿ.

ಬೆಳಗ್ಗೆ ಆದಷ್ಟು ಬೇಗ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಸೂರ್ಯೋದಯಕ್ಕಿಂತ ಬೇಗ ಏಳಿ, ಎದ್ದ ಕೂಡಲೇ ನಿತ್ಯ ಕರ್ಮಗಳನ್ನು ಮುಗಿಸಿ ಬೆಚ್ಚಗಿನ ನೀರಿನಲ್ಲಿ ಅರ್ಧ ಹೋಳು ನಿಂಬೆಹಣ್ಣು ಹಾಕಿಕೊಂಡು ಕುಡಿಯಿರಿ. ಇದಾದ ಬಳಿಕ ಮೆಡಿಟೇಶನ್ ಮಾಡಬೇಕು ಮೆಡಿಟೇಶನ್ ಮಾಡಿದಾಗ ನಮ್ಮ ದೇಹದ ಎಲ್ಲಾ ಗ್ರಂಥಿಗಳ ಹಾರ್ಮೋನ್ ಸರ್ವಿಸುವಿಕೆ ಸಲೀಸಾಗಿ ಆಗುತ್ತದೆ.

ಈ ರೀತಿ ಗ್ರಂಥಿಗಳು ಆಕ್ಟಿವೇಟ್ ಆದಾಗ ಆಟೋಮೆಟಿಕ್ ಆಗಿಶದೇಹ ಸರಿಯಾದ ಸ್ಥಿತಿಗೆ ಬರುತ್ತದೆ. ಯೋಗ ಹಾಗೂ ಪ್ರಾಣಾಯಾಮ ಅದರಲ್ಲೂ ಪ್ರಾಣಾಯಾಮದಲ್ಲಿ ‌ಬಸ್ತಿಕ ಪ್ರಾಣಾಯಾಮ, ಕಪಾಲಬಾತಿ ಹಾಗೂ ಅಲೋಮ ವಿಲೋಮವನ್ನು ತಲಾ 40 ರಿಂದ 50 ಬಾರಿ ಮಾಡಿ.

ಬೆಳಗಿನ ಟಿಫನ್ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮೊದಲಿಗೆ ಪ್ರಿ ಬಯೋಟೆಕ್ ತೆಗೆದುಕೊಳ್ಳಬೇಕು ಶುಂಠಿ, ಬೆಳ್ಳುಳ್ಳಿ ಹಾಗೂ ಮೆಂತ್ತೆ ಪ್ರಿ ಬಯೋಟಿಕ್ ಗಳಾಗಿವೆ. ಇದರೊಂದಿಗೆ ಅಗಸೆ ಬೀಜ ಹಾಕಿದ ಮಜ್ಜಿಗೆಯನ್ನು ಕುಡಿಯಬೇಕು. ಬಳಿಕ ಹಸಿವಿದ್ದರೆ ಹಣ್ಣುಗಳ ಸಲಾಡ್ ಸೇವಿಸಬಹುದು ಅದರಲ್ಲೂ ನಾಟಿ ಹಣ್ಣುಗಳ ಸೇವನೆ ಬಹಳ ಉತ್ತಮ ಸಾಧ್ಯವಾದರೆ ಹೊಟ್ಟೆ ತುಂಬ ಇದನ್ನೇ ತಿನ್ನಿ ಆದರೆ ಶುಗರ್ ಇರುವವರು ಬಾಳೆಹಣ್ಣು ಮಾತ್ರ ತಿನ್ನಬಾರದು.

ಇದಾದ ಮೇಲೆ ಅನೇಕರಿಗೆ ಹಸಿವು ಇರುವುದಿಲ್ಲ. ಮಧ್ಯಾಹ್ನದ ಊಟಕ್ಕೂ ಮುನ್ನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಮಧ್ಯಾನ್ನದ ಊಟ ಹೇಗಿರಬೇಕು ಎಂದರೆ ತಟ್ಟೆಯಲ್ಲಿ ಅರ್ಧಭಾಗ ಧಾನ್ಯಗಳಾದ ರಾಗಿ ಜೋಳ ಗೋಧಿ ಅಕ್ಕಿ, ಸಿರಿಧಾನ್ಯದಿಂದ ಮಾಡಿದಂತಹ ಆಹಾರ ಪದಾರ್ಥಗಳು ಇರಬೇಕು.

ಆದರೆ ಯಾರು ದೈಹಿಕ ಶ್ರಮ ಉಪಯೋಗಿಸಿ ಕೆಲಸ ಮಾಡುತ್ತಾರೋ ಅವರು ಮಾತ್ರ ಅರ್ಧಕ್ಕಿಂತ ಹೆಚ್ಚು ಭಾಗ ಏಕದಳ ಧಾನ್ಯಗಳಿಂದ ಮಾಡಿದ ಪದಾರ್ಥ ಸೇವಿಸಬೇಕು. ಅವರನ್ನು ಹೊರತುಪಡಿಸಿ ಉಳಿದವರು ಅರ್ಧ ಭಾಗ ಏಕದಳ ಧಾನ್ಯಗಳ ಆಹಾರ ಪದಾರ್ಥ ಉಳಿದ ಭಾಗದಲ್ಲಿ ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಇರಬೇಕು.

ಸಕ್ಕರೆ ಕಾಯಿಲೆ ಇರುವವರು ಏಕದಳ ಧಾನ್ಯಗಳಿಗೆ 25% ಮಾತ್ರ ಜಾಗ ನೀಡಬೇಕು ಸಂಜೆ ಸಮಯ ಸ್ನಾಕ್ಸ್ ಗಾಗಿ ಜಂಕ್ ಫುಡ್ ಗಳನ್ನು ತಿನ್ನುವುದು ಬಿಟ್ಟು ಹಸಿವಿದ್ದರೆ ಮಾತ್ರ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಹುದು. ಆದರೆ ಹಸಿವಿಲ್ಲದೆ ಯಾವುದೇ ಸಮಯದಲ್ಲಿ ಏನನ್ನು ಕೂಡ ಸುಖಾಸುಮ್ಮನೆ ತಿನ್ನಬಾರದು.

ರಾತ್ರಿ ಕೂಡ ಊಟಕ್ಕೂ ಮುನ್ನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿದು ರಾತ್ರಿ ಸಮಯದಲ್ಲೂ ಕೂಡ ಈ ಮೇಲೆ ತಿಳಿಸಿದ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು ಅದರಲ್ಲೂ ರಾತ್ರಿ ಹೊತ್ತು ಆಹಾರ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದರೆ ಇನ್ನೂ ಒಳ್ಳೆಯದು.

ಊಟದ ಬದಲು ಬೇಯಿಸಿದ ಜೋಳ ಅಥವಾ ಸಲಾಡ್ ಗಳು ಅಥವಾ ಸೂಪ್ ಇನ್ಯಾವುದೇ ಲೈಟ್ ಫುಡ್ ಗಳನ್ನು ಸೇವಿಸಿದರೆ ಅದು ಉತ್ತಮ. ಆದಷ್ಟು ಸಕ್ಕರೆ ಉಪ್ಪು ಮತ್ತು ಎಣ್ಣೆ ಬಳಕೆಯನ್ನು ಕಡಿಮೆ ಮಾಡಬೇಕು ಹೀಗಿದ್ದಾಗ ನ್ಯಾಚುರಲ್ ಆಗಿ ನೀವು ಸಣ್ಣವಾಗುತ್ತೀರಿ ಮತ್ತು ನಿಮಗಿರುವ ಥೈರಾಯಿಡ್ , BP, ಶುಗರ್, ಡಿಸ್ ಆರ್ಡರ್ ಗಳು ಕಂಟ್ರೋಲ್ ಗೆ ಬರುತ್ತವೆ.

ರಕ್ತ ಹೀನತೆ, ವಿಟಮಿನ್ B12 ಕೊರತೆ ಉಂಟಾಗಲು ಕಾರಣ ಮತ್ತು ಪರಿಹಾರ.!

 

ಈಗ ಎಲ್ಲೆಡೆ ರಕ್ತಹೀನತೆ ಮತ್ತು ವಿಟಮಿನ್ ಗಳ ಡಿಫಿಷಿಯನ್ಸಿ ಕಾಯಿಲೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಸಂಶೋಧನೆಗಳು ಹೇಳುವ ಪ್ರಕಾರ ಭಾರತದಲ್ಲಿ 90% ಮಹಿಳೆಯರು ಅನಿಮಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ ರಕ್ತಹೀನತೆ ಹಲವಾರು ಕಾಯಿಲೆ ಕಾರಣಗಳಿಂದ ಉಂಟಾಗುತ್ತದೆ.

ಯಾವುದಾದರೂ ಅ’ಪ’ಘಾ’ತ’ವಾಗಿ ರಕ್ತ ಹಾನಿಯಾದಾಗ ಅಥವಾ ರಕ್ತಕಣಗಳ ವಿಘಟನೆಯಲ್ಲಿ ಅನಾರೋಗ್ಯವಾದಾಗ ಈ ಸಮಸ್ಯೆ ಆಗುತ್ತದೆ. ಇದರೊಂದಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದ್ದರೆ ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು ಕೂಡ ನಮ್ಮ ಆ ಪೋಷಕಾಂಶಗಳು ಸರಿಯಾಗಿ ರಕ್ತ ಸೇರುವುದಿಲ್ಲ. ಅನೇಕ ಲಕ್ಷಣಗಳ ಮೂಲಕ ನಾವು ರಕ್ತ ಹೀನತೆಯನ್ನು ಗುರುತಿಸಬಹುದು.

ತಲೆ ಕೂದಲು ಉದುರುವುದು, ಉಗುರು ಪೇಲವವಾಗುವುದು, ವಿಪರೀತವಾಗಿ ಸುಸ್ತಾಗುವುದು, ಮುಖ ಕೈಕಾಲು ಊದಿಕೊಂಡಂತೆ ಆಗುವುದು, ನರಗಳ ಸೆಳೆತ, ಮೀನ ಖಂಡಗಳಲ್ಲಿ ನೋವು, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಉಸಿರಾಡಲು ಸಮಸ್ಯೆ ಆಗುವುದು ಇನ್ನು ಮುಂತಾದ ಅನೇಕ ಲಕ್ಷಣಗಳು ಕಂಡುಬರುತ್ತದೆ.

ದೇಹಕ್ಕೆ ರಕ್ತ ಮಾತ್ರವಲ್ಲದೆ ಅನೇಕ ವಿಟಮಿನ್, ಪ್ರೋಟೀನ್, ಕ್ಯಾಲ್ಸಿಯಂ ಇನ್ನು ಮುಂತಾದ ನ್ಯೂಟ್ರಿಷಿಯನ್ ಗಳ ಅವಶ್ಯಕತೆ ಇರುತ್ತದೆ. ಅವುಗಳ ಡಿಫಿಷಿಯನ್ಸಿ ಕೂಡ ಆಗಿರುತ್ತದೆ. ಇದ್ಯಾವುದನ್ನೂ ನಿರ್ಲಕ್ಷಿಸದೆ ತಕ್ಷಣವೇ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಬಹಳ ನ್ಯಾಚುರಲ್ ಆಗಿ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.

ಹೇಗೆಂದರೆ ಮೊದಲಿಗೆ ನಮಗೆ ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ರಕ್ತ ಹೀನತೆ ಆಗಿದೆಯೇ ಎನ್ನುವುದನ್ನು ಕಂಡು ಹಿಡಿದು ಅದನ್ನು ಗುಣಪಡಿಸಿಕೊಳ್ಳಬೇಕು, ಸಾಮಾನ್ಯವಾಗಿ ಜೀರ್ಣಕ್ರಿಯೆಯಲ್ಲಿ ಹೈಪೋ ಅಸಿಡಿಟಿ ಅಥವಾ ಹೈಪರ್ ಅಸಿಡಿಟಿ ಆದಾಗ ನಾವು ತಿಂದ ಆಹಾರದಲ್ಲಿರುವ ಪೋಷಕಾಂಶವು ಸರಿಯಾಗಿ ಅಬ್ಸರ್ವ್ ಆಗುವುದಿಲ್ಲ.

ಮೊದಲು ಆ ಸಮಸ್ಯೆಯನ್ನು ಕಂಟ್ರೋಲ್ ಗೆ ತರಬೇಕು. ನಾವು ತಿನ್ನುವ ಆಹಾರದ ಕ್ರಮ ಬಹಳ ಪ್ರಮುಖವಾದ ಮಹತ್ವ ವಹಿಸುತ್ತದೆ. ರಾಂಗ್ ಕಾಂಬಿನೇಷನ್ ಆಹಾರಗಳ ಸೇವನೆ, ವಿಪರೀತವಾದ ಚಹಾ ಕಾಫಿ ಸೇವನೆ, ಆಲ್ಕೋಹಾಲ್ ಸೇವನೆ ಇವುಗಳು ಸ್ವಯಂ ಕೃತ್ಯ ಅಪರಾಧಗಳಾಗಿದ್ದು ನಾವು ತಿಂದ ಆಹಾರವನ್ನು ಸರಿಯಾಗಿ ಅಬ್ಸರ್ ಆಗದಂತೆ ತಡೆಯುತ್ತವೆ.

ಇವುಗಳನ್ನು ತಿಳಿದುಕೊಂಡು ದೂರ ಇಡಬೇಕು. ಕೆಲವರಿಗೆ ಗ್ಲೂಟೇನ್ ಅಂದರೆ ಮೈದಾ, ಗೋಧಿ ಹಿಟ್ಟಿನ ಪದಾರ್ಥಗಳನ್ನು ಸೇವಿಸಿದಾಗ ಎದೆ ಉರಿ ಬರುತ್ತದೆ, ಅಸಿಡಿಟಿ ಹೆಚ್ಚಾಗುತ್ತದೆ. ಈ ಗ್ಲೂಟೆನ್ ಪದಾರ್ಥಗಳು ಆಹಾರವು ಜೀರ್ಣವಾಗಿ ರಕ್ತಕ್ಕೆ ಸೇರುವ ಪ್ರಕ್ರಿಯೆಗೆ ಡಿಸ್ಟರ್ಬ್ ಮಾಡುತ್ತದೆ.

ಹಾಗಾಗಿ ಬೇಕರಿ ಉತ್ಪನ್ನಗಳಿಂದ, ಮೈದಾ ಹಾಗೂ ಗೋಧಿ ಪದಾರ್ಥಗಳಿಂದ, ಜಂಕ್ ಫುಡ್ ಗಳಿಂದ ದೂರ ಇರಬೇಕು. ಇದರ ಬದಲು ಈಗ ನಾವು ಹೇಳುವ ಈ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಿ, ನ್ಯಾಚುರಲ್ ಆಗಿ ನಿಮ್ಮ ರಕ್ತಹೀನತೆ ಸರಿ ಹೋಗುತ್ತದೆ.

ದೇಹಕ್ಕೆ ಹಲವು ರೀತಿಯ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಅವುಗಳು ಸರಿಯಾಗಿ ದೇಹಕ್ಕೆ ಸೇರಿದಾಗ ರಕ್ತ ಹೀನತೆ ಸಮಸ್ಯೆ ಆಗುವುದಿಲ್ಲ. ಇದೆಲ್ಲವೂ ಸಿಗಬೇಕು ಎಂದರೆ ನಾವು ಪೋಷಕಾಂಶಯುಕ್ತ ಆಹಾರ ಪದಾರ್ಥ ಸೇವಿಸಬೇಕು. ಹಸಿರು ಸೊಪ್ಪುಗಳಲ್ಲಿ ಯಥೇಚ್ಛವಾಗಿ ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ ಜಿಂಕ್ ಐರನ್ ಅಂಶಗಳಿರುತ್ತವೆ.

ತಪ್ಪದೇ ಪ್ರತಿನಿತ್ಯವೂ ಒಳ್ಳೆಯ ಪ್ರಮಾಣದಲ್ಲಿ ಸೊಪ್ಪಿನ ಪಲ್ಯ ಸೇವನೆ ಮಾಡಬೇಕು. ಸೊಪ್ಪುಗಳನ್ನು ನುಗ್ಗೆ ಸೊಪ್ಪು ಬಹಳ ಉತ್ತಮ ಅದರ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಎಲ್ಲಾ ರೀತಿಯ ತರಕಾರಿಗಳನ್ನು ಸೇವಿಸಬೇಕು ಅದರಲ್ಲೂ ಬೀಟ್ರೋಟ್ ಜ್ಯೂಸ್ ಕುಡಿಯುವುದು ಉತ್ತಮ ಹಾಗೂ ಹಣ್ಣುಗಳ ಸೇವನೆ ಮತ್ತು ಡ್ರೈ ಫ್ರೂಟ್ಸ್ ಗಳ ಸೇವನೆ ಬೆಸ್ಟ್.

ದಾಳಿಂಬೆ ಹಣ್ಣಿನಲ್ಲಿ ರಕ್ತಹೀನತೆಗೆ ಪರಿಹಾರ ಇದೆ ನೆಲ್ಲಿಕಾಯಿ, ಕಿತ್ತಾಳೆ, ನಿಂಬೆ, ಸಿಟ್ರಿಕ್ ಆಸಿಡ್ ಹೇರಳವಾಗಿರುವ ಹಣ್ಣುಗಳನ್ನು ಸೇವಿಸಿದರೆ ಅವು ರಕ್ತ ಶುದ್ಧಿಯಾಗಲು, ವೃದ್ಧಿಯಾಗಲು ಪ್ರಚೋದನೆ ಮಾಡುತ್ತವೆ. ಎಲ್ಲ ರೀತಿಯ ಧಾನ್ಯಗಳನ್ನು ಕೂಡ ಮೊಳಕೆ ಕಟ್ಟಿ ತಿನ್ನಬೇಕು.

ಹಾಲು ಮೊಸರು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಅಥವಾ ವಾಕಿಂಗ್, ಧ್ಯಾನ, ಮೆಡಿಟೇಶನ್ ಗೆ ಸ್ವಲ್ಪ ಸಮಯ ಮೀಸಲಿಡಬೇಕು ಈ ರೀತಿ ಮಾಡುವುದರಿಂದ ಆಶ್ಚರ್ಯಕರ ರೀತಿಯಲ್ಲಿ ಆರೋಗ್ಯ ಬದಲಾಗಿರುತ್ತದೆ.

ಈ 5 ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇ ಬಾರದು ನೆನಪಿರಲಿ.!

 

ಮದುವೆ, ಸಂಬಂಧ, ಕುಟುಂಬ, ಸಂಸಾರ ಹೀಗೆಂದ ಮೇಲೆ ಅಲ್ಲಿ ಎಲ್ಲಾ ವಿಚಾರಗಳು ಕೂಡ ಬರುತ್ತವೆ. ಒಂದು ಕುಟುಂಬದ ಏಳಿಗೆಗಾಗಿ ದುಡಿಯುವ ವಿಚಾರ, ವಂಶೋದ್ಧಾರಕ್ಕಾಗಿ ಸಂತಾನ ಪಡೆಯುವ ವಿಚಾರ, ಮನೆಯ ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರ ಕಲಿಸುವ ವಿಚಾರ, ಇದು ಸೇರಿದಂತೆ ಅನೇಕ ಸೂಕ್ಷ್ಮ ವಿಚಾರಗಳು ಇರುತ್ತವೆ.

ಇದನ್ನು ಸರಿಯಾದ ರೀತಿಯಲ್ಲಿ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಿ ನಾವು ಸಾರ್ಥಕ ರೀತಿಯಲ್ಲಿ ಜೀವನ ನಡೆಸಬೇಕು ಎಂದರೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿದರೆ ಸಾಕು. ಯಾಕೆಂದರೆ ಎಲ್ಲವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹಾಗೂ ನಮ್ಮ ಮಾನಸಿಕ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡೆ ಈ ರೀತಿಯ ಪದ್ಧತಿಗಳನ್ನು ಮಾಡಿರುತ್ತಾರೆ.

ಆದರೆ ನಾವು ಅದನ್ನು ಅರ್ಧಂಬರ್ಧ ತಿಳಿದುಕೊಂಡು ಅಥವಾ ನಾವೇ ಬುದ್ಧಿವಂತರು ಎಂದುಕೊಂಡು ಹಿರಿಯರು ಹೇಳಿದ್ದನ್ನು ನಿರ್ಲಕ್ಷಿಸುತ್ತೇವೆ. ಇದೇ ಕಾರಣದಿಂದ ಇಂದು ಕಂಡು ಕೇಳರಿಯದ ಆರೋಗ್ಯ ಸಮಸ್ಯೆಗಳಿಗೆ ನಾವು ಗುರಿಯಾಗಿ ದುಡಿದ ಹಣದಲ್ಲಿ ಹೆಚ್ಚಿನ ಭಾಗವನ್ನು ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದೇವೆ.

ಆಗಿನ ಕಾಲಕ್ಕಿಂತ ಹೆಚ್ಚು ಸಂಪಾದನೆ ಮಾಡಿದರು ಕುಟುಂಬದ ಶಾಂತಿ ಇಲ್ಲದೆ ಸಂಬಂಧಗಳಲ್ಲಿ ನಂಬಿಕೆ ಇಲ್ಲದೆ ನರಳುತ್ತಿದ್ದೇವೆ ಕೈ ತುಂಬಾ ದುಡಿದರು ಕೂಡ ಹಣ ಸಾಲದೆ ಸಾಲ ಮಾಡಿ ಸಮಸ್ಯೆಗೆ ಸಿಲುಕುತ್ತಿದ್ದೇನೆ. ನಮ್ಮ ಮಕ್ಕಳು ಇಂದು ನಮ್ಮ ಮಾತು ಕೇಳದಂತಾಗಿದ್‌ದಾರೆ. ಬಹಳ ಚಿಕ್ಕ ವಯಸ್ಸಿಗೆ ಮಕ್ಕಳು ಹೆತ್ತವರ ಮೇಲೆ ಕೋ’ಪಗೊಳ್ಳುತ್ತಿದ್ದಾರೆ ಹಾಗೂ ದ್ವೇ’ಷಿಸಲು ಶುರು ಮಾಡುತ್ತಿದ್ದಾರೆ.

ಇದಕ್ಕೆಲ್ಲ ಮೂಲ ಕಾರಣ ಕುಟುಂಬ ವ್ಯವಸ್ಥೆಗೆ ಇದ್ದ ಒಂದು ಅಚ್ಚುಕಟ್ಟಾದ ಬುನಾದಿಯೇ ಬಿದ್ದು ಹೋಗುತ್ತಿರುವುದು ಎಂದರೆ ಆ ಮಾತು ತಪ್ಪಾಗಲಾರದು ಎನ್ನುವುದು ನಮ್ಮ ಭಾವನೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಸಾಧ್ಯವಾದಷ್ಟು ನಮ್ಮ ಸಂಸ್ಕೃತಿಯನ್ನು ನಮ್ಮ ಪರಂಪರೆಯಲ್ಲಿ ಪುರಾಣಗಳಲ್ಲಿ ಉಲ್ಲೇಖಿಸಿರುವುದನ್ನು ಅರಿತು ಅವರ ದೃಷ್ಟಿಕೋನವನ್ನು ಅರ್ಥೈಸಿಕೊಂಡು ಆ ಪ್ರಕಾರವಾಗಿ ಬದುಕಿದರೆ ಬದುಕು ಸರಳ.

ಯಾವ ವಿಷಯದ ಬಗ್ಗೆಯೂ ಕೂಡ ಮುಚ್ಚು ಮರೆ ಇಲ್ಲದೆ ವಿಸ್ತಾರವಾಗಿ ಎಲ್ಲವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ರೀತಿ ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ದಂಪತಿಗಳು ಶೃಂಗಾರದ ವಿಚಾರದಲ್ಲಿ ಮಾಡುವ ತಪ್ಪುಗಳಿಂದ ಮನೆಗೆ ಕಷ್ಟಕಾರ್ಪಣ್ಯಗಳು, ಅನಾರೋಗ್ಯ ಸಮಸ್ಯೆಗಳು ಹಾಗೂ ಕೆಟ್ಟ ಸಂತಾನಗಳನ್ನು ಪಡೆಯಲು ಕಾರಣರಾಗುತ್ತಾರೆ.

ಹೀಗಾಗಬಾರದು ಎನ್ನುವ ಕಾರಣಕ್ಕೆ ಕೆಲ ಸಮಯಗಳಲ್ಲಿ ದಂಪತಿಗಳು ಶೃಂಗಾರದಲ್ಲಿ ತೊಡಗಬಾರದು ಎನ್ನುವುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಆ ಪ್ರಕಾರವಾಗಿ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳು ಸಂಚರಿಸುವ ಸಮಯ, ಆ ಕಾಲದಲ್ಲಿ ಹಾಗೂ ಸಂಜೆ ಗೋಧೂಳಿ ಸಮಯವು ಕೂಡ ಪವಿತ್ರವಾದ ಸಮಯ ಆ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು.

ಹಬ್ಬ ಆಚರಣೆ ವ್ರತ ಮುಂತಾದವುಗಳನ್ನು ಆಚರಿಸುವ ಶುಭ ಸಂದರ್ಭದಲ್ಲಿ ಶೃಂಗಾರದಲ್ಲಿ ತೊಡಗಿ ಆ ಪಾವಿತ್ರತೆ ಹಾಳು ಮಾಡಬಾರದು, ದಂಪತಿಗಳಲ್ಲಿ ಅನಾರೋಗ್ಯ ಸಮಸ್ಯೆ ಇದ್ದಾಗ ಅಥವಾ ಅವರ ಮನಸ್ಸು ಶಾಂತವಾಗಿ ಇಲ್ಲದೆ ಇರುವಾಗ ಬಲವಂತವಾಗಿ ಶೃಂಗಾರದಲ್ಲಿ ತೊಡಗಬಾರದು.

ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಐದು ದಿನಗಳವರೆಗೆ ಹಾಗೂ ಗರ್ಭಿಣಿ ಆದಾಗ ಯಾವುದೇ ಕಾರಣಕ್ಕೂ ಶೃಂಗಾರದಲ್ಲಿ ತೊಡಗಬಾರದು. ಯಾವುದೇ ಗ್ರಹಣ ಕಾಲದಲ್ಲೂ ಕೂಡ ಶೃಂಗಾರ ನಿಷಿದ್ಧ. ಇದು ಎರಡು ದೇಹಗಳ ವಿಚಾರವಾಗದೆ ಆತ್ಮಗಳ ಮಿಲನವಾದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮತ್ತು ಸಂಬಂಧಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು.

ಈ ಪ್ರಕ್ರಿಯೆ ಆದಮೇಲೆ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ, ಸ್ನಾನ ಇತ್ಯಾದಿ ಕಾರ್ಯಗಳನ್ನು ಮಾಡದೆ ದಿನದ ಚಟುವಟಿಕೆಯನ್ನು ಆರಂಭಿಸುವಂತಿಲ್ಲ. ಹೆಣ್ಣು ಮಕ್ಕಳು ಮನೆಯ ಇತರ ಕೆಲಸಗಳಾಗಲಿ, ಅಡುಗೆ ಕೆಲಸವನ್ನಾಗಲಿ ಮಾಡುವಂತಿಲ್ಲ. ಬೆಳಗ್ಗೆ ಎದ್ದು ಶುದ್ದಿಯಾಗಿ ನಂತರವಷ್ಟೇ ದೀಪಾರಾಧನೆ ಮಾಡಿ ಮನೆ ಕೆಲಸದಲ್ಲಿ ತೊಡಗಬೇಕು. ಹೀಗಿದ್ದಾಗ ಮಾತ್ರ ಮನೆ ಏಳಿಗೆ ಆಗುತ್ತದೆ.

ಮಂಗಳಮುಖಿಯರ ಶಾಪ ತಟ್ಟುವುದು ನಿಜಾನಾ.?, ಹಣ ಕೇಳಿದಾಗ ಕೊಡದೆ ಇದ್ದರೆ ಕಂಟಕವಾಗುತ್ತದಾ.?

ಮಂಗಳಮುಖಿಯರನ್ನು ಅರ್ಧನಾರೀಶ್ವರ ಎಂದು ಕೆಲವರು ಗೌರವ ಕೊಡುತ್ತಾರೆ. ಆದರೆ ಈ ಸಮಾಜದಲ್ಲಿ ಅನೇಕರು ಮಂಗಳಮುಖಿಯರು ಎಂದರೆ ಕೇವಲವಾಗಿ ನೋಡುವವರು ಇದ್ದಾರೆ. ಯಾಕೆಂದರೆ ಅವರು ನೋಡಿದ ಕಡೆಯೆಲ್ಲ ಸಿಗುತ್ತಾರೆ, ರೈಲ್ವೆ ಸ್ಟೇಷನ್ಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಟ್ರಾಫಿಕ್ ಸಿಗ್ನಲ್ ನಲ್ಲಿ ಬಂದು ಹಣಕ್ಕಾಗಿ ಪೀಡಿಸುತ್ತಾರೆ.

ಎಂದು ಅವರ ಮೇಲೆ ಹೆಚ್ಚಿನವರಿಗೆ ಕೋ’ಪ ಆದರೆ ಅವರಿಗೆ ಸೂಕ್ತವಾದ ಸ್ಥಾನಮಾನಗಳನ್ನು ಸಮಾಜ ನೀಡಿ ಉದ್ಯೋಗವಕಾಶ ಕೊಡದ ಕಾರಣ ಅನಿವಾರ್ಯವಾಗಿ ಜೀವನ ನಿರ್ವಹಣೆಗೆ ಅವರು ಇಂತಹ ಸ್ಥಿತಿ ತಲುಪಿದ್ದಾರೆ ಎಂದು ಭಾವಿಸಬಹುದು.

ಮಂಗಳಮುಖಿಯರು ಕೂಡ ಭಗವಂತನ ಸೃಷ್ಟಿ ಅವರಿಗೂ ಕೂಡ ಎಲ್ಲರಂತೆ ಪ್ರೀತಿ ಗೌರವ ನೀಡಬೇಕು, ಅವರು ಹಣ ಕೇಳಿದಾಗ ಅದರಿಂದ ಅವರಿಗೂ ಒಳ್ಳೆಯದಾಗುತ್ತದೆ ನಮಗೂ ಒಳ್ಳೆಯದಾಗುತ್ತದೆ. ಕೊಡದೆ ಇದ್ದರೆ ಶಾ’ಪ ಹಾಕುತ್ತಾರೆ, ಈ ಶಾ’ಪ ನಿಜವಾಗುತ್ತದಾ ಅಥವಾ ಅವರ ದರ್ಶನವಾದರೆ ಅದು ಒಳ್ಳೆಯದಾ ಕೆಟ್ಟದ್ದಾ ಎನ್ನುವ ಅನುಮಾನ ಅನೇಕರಿಗೆ ಇದೆ, ಅದಕ್ಕೆ ಉತ್ತರ ಹೀಗಿದೆ ನೋಡಿ.

ನೀವು ಯಾವುದಾದರು ಮುಖ್ಯವಾದ ಕೆಲಸಕ್ಕಾಗಿ ಮನೆಯಿಂದ ಹೊರಟು ಮಾರ್ಗಮಧ್ಯದಲ್ಲಿ ಮಂಗಳಮುಖಿಯರ ದರ್ಶನವಾದರೆ ಅದು ಶುಭಫಲ ಎಂದು ಹೇಳಲಾಗುತ್ತದೆ. ಮಂಗಳಮುಖಿಯರ ದರ್ಶನದಿಂದ ಯಾವುದೇ ರೀತಿಯ ಕೆಟ್ಟದಾಗುವುದಿಲ್ಲ, ಅವರ ಆಶೀರ್ವಾದ ಪಡೆದುಕೊಳ್ಳುವುದರಿಂದ ಖಂಡಿತವಾಗಿಯೂ ನೀವು ಹೋಗುವ ಕಾರ್ಯ ಕೈಗೂಡುತ್ತದೆ.

ಹಾಗಾಗಿ ನಿಮ್ಮ ಕಣ್ಣೆದುರಿಗೆ ಅವರು ಕಂಡಾಗ ಬೇಸರವಾಗಬೇಡಿ ಮತ್ತು ಅವರು ಹಣ ಕೇಳಿದಾಗ ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ಹೇಳಬೇಡಿ. ಅವರ ಕೇಳುವ ಮುಂಚೆ ನೀವಾಗಿಯೇ ನಿಮ್ಮ ಕೈಲಾದಷ್ಟು ಹಣ ಅಥವಾ ನಿಮ್ಮ ಬಳಿ ಇರುವ ಹಣ್ಣು ಹಂಪಲು ಇನ್ಯಾವುದೇ ಅವರಿಗೆ ಅನುಕೂಲಕರವಾಗುವಂತಹ ವಸ್ತುಗಳನ್ನು ನೀಡಿ ಇದರಿಂದ ಅವರು ಮನಸಾರೆ ಸಂತೋಷಪಟ್ಟು ನಿಮ್ಮನ್ನು ಹರಸುತ್ತಾರೆ.

ಆ ಆಶಿರ್ವಾದವು ಭಗವಂತನ ಆಶೀರ್ವಾದದಷ್ಟೇ ಶುದ್ಧವಾಗಿರುತ್ತದೆ. ಒಂದು ವೇಳೆ ಅವರೇ ನಿಮ್ಮನ್ನು ಪೀಡಿಸಿ ಹಣ ತೆಗೆದುಕೊಂಡು ಕೋ’ಪ ಮಾಡಿಕೊಳ್ಳಬೇಡಿ ನಿಮ್ಮ ಪರಿಸ್ಥಿತಿ ಹೇಳಿ ಸಂಬಾಳಿಸಿ ಕೈಲಾದಷ್ಟು ಸಹಾಯ ಮಾಡಿ ಖಾಲಿ ಮಾತ್ರ ಕಳುಹಿಸಬೇಡಿ. ಅನೇಕ ಮಂಗಳಮುಖಿಯರು ಹಣ ತೆಗೆದುಕೊಂಡು ಹಾಗೆ ಹೋಗಿ ಬಿಡುವುದಿಲ್ಲ.

ನೀವು ಹಣ ಕೊಟ್ಟ ಮೇಲೆ ಒಂದು ನಾಣ್ಯವನ್ನು ದೃಷ್ಟಿ ತೆಗೆದು ಇದನ್ನು ಇಟ್ಟುಕೊಳ್ಳಿ ಹಣ ವೃದ್ಧಿಯಾಗುತ್ತದೆ ಎಂದು ಕೊಡುತ್ತಾರೆ. ಎಷ್ಟೋ ಜನರಿಗೆ ಅದು ನಿಜವಾಗಿದೆ ಹಾಗಾಗಿ ಬೇಡ ಎಂದು ಹೇಳುವುದು ಅಥವಾ ತಾತ್ಸಾರ ಮಾಡುವುದು ಮಾಡಬೇಡಿ. ನಂಬಿಕೆ ಇಲ್ಲದಿದ್ದರೂ ಅವರ ಸಂತೋಷಕ್ಕೆ ತೆಗೆದುಕೊಳ್ಳಿ ಖಂಡಿತವಾಗಿಯೂ ಅವರು ಹೇಳಿದಂತೆ ಆಗುತ್ತದೆ.

ಹಲವರು ಮಂಗಳಮುಖಿಯರನ್ನು ಕೆಟ್ಟ ದೃಷ್ಟಿಯಲ್ಲಿ ಕಾಮ ದೃಷ್ಟಿಯಲ್ಲಿ ನೋಡುತ್ತಾರೆ, ಇದಕ್ಕಿಂತ ಘೋರವಾದ ಪಾಪ ಮತ್ತೊಂದು ಇಲ್ಲ ಎಂದು ಹೇಳಬಹುದು. ಮದುವೆ ಮನೆಗಳಿಗೆ ಅಥವಾ ಗೃಹಪ್ರವೇಶದ ಮನೆಗಳಿಗೆ ಗುಂಪು ಕಟ್ಟಿಕೊಂಡು ಮಂಗಳಮುಖಿಯರು ಬರುತ್ತಾರೆ ಬಂದವರು ಇಂತಿಷ್ಟು ಹಣ ಬೇಕು ಎಷ್ಟು ದೊಡ್ಡ ಮನೆ ಕಟ್ಟಿದ್ದೀರ ಇಷ್ಟು ಹಣ ಕೊಡಿ ಎಂದೆಲ್ಲ ಡಿಮ್ಯಾಂಡ್ ಮಾಡುತ್ತಾರೆ.

ಆಗಲೂ ಒಮ್ಮೊಮ್ಮೆ ತಾಳ್ಮೆ ನಮಗೆ ಕೆಡುತ್ತದೆ ಅವರನ್ನು ಬೈದು ಹೊರಗಡೆ ಬಿಡುವವರಿದ್ದಾರೆ. ಆ ಸಮಯದಲ್ಲಿ ಅವರೇನಾದರೂ ಶಾ’ಪ ಕೊಟ್ಟರೆ ನಿಮ್ಮ ಮನೆಗೆ ಗೃಹ ದೋಷ, ಸ್ತ್ರೀ ದೋಷ, ವಾಸ್ತುದೋಷ ಮುಂತಾದ ದೋಷಗಳು ಅಂಟಿಕೊಳ್ಳುತ್ತವೆ. ಅದರ ಬದಲು ಅವರಿಗೆ ನಿಮ್ಮ ಕೈಲಾದಷ್ಟು ಹಣ ಕೊಟ್ಟು ಸತ್ಕರಿಸಿ ಬಹಳ ಒಳ್ಳೆಯದಾಗುತ್ತದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ನೇರ ನೇಮಕಾತಿ, ದ್ವಿತೀಯ ಪಿಯುಸಿ ಆಗಿದ್ರೆ ಸಾಕು ಸರ್ಕಾರಿ ಹುದ್ದೆ ಫಿಕ್ಸ್.! ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!

0

ಕರ್ನಾಟಕ ಅರಣ್ಯ ಇಲಾಖೆಯಿಂದ (Karnataka Forest Department) ಮತ್ತೊಮ್ಮೆ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಬಿದ್ದಿದೆ. ಈ ಬಾರಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಗಸ್ತು ಅರಣ್ಯ ಪಾಲಕ ಗ್ರೂಪ್ ಸಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಧಿಸೂಚನೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವ ಕರ್ನಾಟಕ ರಾಜ್ಯದ ಯಾವುದೇ ಮಹಿಳಾ ಅಥವಾ ಪುರುಷ ಅಭ್ಯರ್ಥಿಯು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಗಳಿಗೆ ಒಳಪಟ್ಟು ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯಲ್ಲಿ ತಿಳಿಸಿರುವ ಕೆಲವು ಪ್ರಮುಖ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ನೇಮಕಾತಿ ಸಂಸ್ಥೆ:- ಕರ್ನಾಟಕ ಅರಣ್ಯ ಇಲಾಖೆ…
ಹುದ್ದೆ ಹೆಸರು:- ಗಸ್ತು ಅರಣ್ಯಪಾಲಕ (ಅರಣ್ಯ ರಕ್ಷಕ)
ಒಟ್ಟು ಹುದ್ದೆಗಳ ಸಂಖ್ಯೆ:- 540 ಹುದ್ದೆಗಳು.
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.23,500 ರಿಂದ ರೂ.47,650 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಇನ್ನಿತರ ಮಾನದಂಡಗಳು:-

* ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ PUC ವಿದ್ಯಾರ್ಹತೆ ಅಥವಾ PUC ವಿದ್ಯಾರ್ಹತೆಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಶಾರೀರಿಕ ಮಾನದಂಡಗಳು (ದೇಹದಾಢ್ಯತೆ):-
1. ಎತ್ತರ ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 163cm, ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದವರಿಗೆ 152cm, ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಎತ್ತರ ಕನಿಷ್ಠ 150cm ಮತ್ತು ಕನಿಷ್ಠ ತೂಕ 40Kg ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ಎತ್ತರ 145cm ಮತ್ತು ಕನಿಷ್ಠ ತೂಕ 38 Kg.

2. ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ ಎದೆ ಸುತ್ತಳತೆ ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79cm, ಎದೆ ಕನಿಷ್ಠ ಹಿಗ್ಗುವಿಕೆ 5cm. ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಾಮಾನ್ಯ ಸ್ಥಿತಿಯಲ್ಲಿ ಎದೆ ಸುತ್ತಳತೆ 74cm, ಎದೆ ಕನಿಷ್ಠ ಹಿಗ್ಗುವಿಕೆ 5cm.

ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ವಿವರ:-

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 27 ವರ್ಷಗಳು
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷಗಳು
* SC/ST, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 32 ವರ್ಷಗಳು.

ಅರ್ಜಿ ಶುಲ್ಕ:-

* ಸಾಮಾನ್ಯ ವರ್ಗದ ಮತ್ತು 2A, 2B, 3A, 3B ಪುರುಷ ಅಭ್ಯರ್ಥಿಗಳಿಗೆ ರೂ.220
* ಸಾಮಾನ್ಯ ವರ್ಗದ ಮತ್ತು 2A, 2B, 3A, 3B ಮಹಿಳಾ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.120
* SC/ST ಮತ್ತು ಪ್ರವರ್ಗ -1 ರ ಪುರುಷ ಅಭ್ಯರ್ಥಿಗಳಿಗೆ ರೂ.120
* SC/ST ಮತ್ತು ಪ್ರವರ್ಗ – 1ರ ಮಹಿಳಾ ಹಾಗೂ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.70
* ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಇ-ಚಲನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:-

* https://aranya.gov.in/ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ವಿವರಗಳನ್ನು ತುಂಬಿಸಿ ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು.

ಆಯ್ಕೆ ವಿಧಾನ:-

* ಅಧಿಸೂಚನೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಶಾರೀರಿಕ ಮಾನದಂಡಗಳ ಪರೀಕ್ಷೆ, ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ ನಡೆಸಲಾಗುವುದು.
* ಅದರಲ್ಲಿ ತೇರ್ಗಡೆ ಆದ ಅಭ್ಯರ್ಥಿಗಳಿಗೆ ವಸ್ತುನಿಷ್ಠ ಮಾದರಿ ಅಪ್ಟಿಟ್ಯೂಡ್ ಪರೀಕ್ಷೆ ನಡೆಸಲಾಗುವುದು.
* ನಂತರ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಸದರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಡಿಸೆಂಬರ್ 01, 2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2023
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜನವರಿ 05, 2024.

ಮುಟ್ಟು ನಿಲ್ಲುವ ಸಮಯದಲ್ಲಿ ಈ ಸಮಸ್ಯೆಗಳು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ.!

 

ಹೆಣ್ಣು ಮಕ್ಕಳ ದೇಹದಲ್ಲಿ ಆಗುವ ಅಷ್ಟು ಬದಲಾವಣೆಗಳು ಗಂಡಿನ ದೇಹದಲ್ಲಿ ಆಗುವುದಿಲ್ಲ. ಹೆಣ್ಣು ಬೆಳಿಯುತ್ತಾ ಹೋದಂತೆ ಆಕೆ ಋತುಮತಿಯಾದಾಗ, ಋತುಚಕ್ರ ನಡೆಯುತ್ತಿರುವಾಗ ಹಾಗೆ ಋತುಚಕ್ರ ನಿಲ್ಲುವ ಸಮಯದಲ್ಲಿ ದೇಹದಲ್ಲಿ ಹಲವಾರು ಹಾರ್ಮೋನ್ ವೇರಿಯೇಶನ್ ಗಳು ಕಂಡು ಬರುತ್ತವೆ ಹೇಗೆ ಹದಿಹರೆಯದವರಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆಯೋ ಹಾಗೆ ಮುಟ್ಟು ನಿಲ್ಲುವ ಸಮಯದಲ್ಲೂ ಕೂಡ ಮಹಿಳೆಯಲ್ಲೂ ಸಾಕಷ್ಟು ಸೂಕ್ಷ್ಮತೆಗಳು ಕಾಣಸಿಗುತ್ತವೆ.

ಈ ಲಕ್ಷಣಗಳನ್ನು perimenopause ಎಂದು ಕರೆಯುತ್ತಾರೆ. ಈ ಲಕ್ಷಣಗಳು ಐದು ವರ್ಷಗಳ ಕಾಲ ಅವರಿಗೆ ಕಾಣಿಸಿಕೊಳ್ಳುತ್ತವೆ. ಮುಟ್ಟು ನಿಲ್ಲುವ ಸಮಯದ ಹಿಂದಿನ ಐದು ವರ್ಷಗಳು ಅಂದರೆ ಸಾಮಾನ್ಯವಾಗಿ 48ನೇ ವಯಸ್ಸಿನಿಂದ 53ರ ವಯಸ್ಸಿನ ತನಕ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಅದುವರೆಗೂ ಚೆನ್ನಾಗಿ ಇದ್ದವರು ತೀರ ಸಪ್ಪೆಯಾಗಿರುತ್ತಾರೆ. ಒಂದು ದಿನ ಹೆಚ್ಚು ಊಟ ಮಾಡಿದರೆ ಒಂದು ದಿನ ಊಟವೇ ಬೇಡ ಎನ್ನುತ್ತಾರೆ. ಮೊದಲಿನಷ್ಟು ಯಾವುದರಲ್ಲೂ ಆಸಕ್ತಿ ಇಲ್ಲ, ಲವಲವಿಕೆಯಿಂದ ಇರಲು ಆಗುವುದಿಲ್ಲ. ದೇಹವು ಕೂಡ ಆಕ್ಟಿವ್ ಆಗಿ ಇರುವುದಿಲ್ಲ. ರಾತ್ರಿ ಹೊತ್ತು ಮಧ್ಯ ಮಧ್ಯ ಎಚ್ಚರ ಆಗುತ್ತಿರುತ್ತದೆ, ನಿದ್ರೆ ಸರಿಯಾಗಿ ಬರುವುದಿಲ್ಲ, ಚಿಕ್ಕ ಚಿಕ್ಕ ವಿಷಯಕ್ಕೆ ಭಯ ಪಡುತ್ತಾರೆ.

ಹೊರಗೆ ಆಗುವ ವಿಷಯಗಳು ಅವರನ್ನು ವಿಪರೀತವಿಗಿ ನೆಗೆಟಿವ್ ಆಗಿ ಚಿಂತೆ ಮಾಡುವಂತೆ ಮಾಡುತ್ತವೆ. ಸಣ್ಣ ಸಣ್ಣ ಮಾತುಗಳನ್ನು ಕೂಡ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ ಅದುವರೆಗೂ ಕುಟುಂಬದ ಎಲ್ಲರ ಬಗ್ಗೆ ಗಮನ ತೆಗೆದುಕೊಂಡು ಎಲ್ಲರ ಆರೈಕೆ ಮಾಡುತ್ತಿದ್ದವರು ಈಗ ಇದ್ದಕ್ಕಿದ್ದಂತೆ ಮಂಕಾಗಿ ಮೌನಿಗಳಾಗಿ ಬಿಡುತ್ತಾರೆ. ಒಳಗೊಳಗೆ ಆ’ತಂ’ಕ ಪಡುತ್ತಾರೆ.

ಒಬ್ಬರೇ ದುಃ’ಖಿಸುತ್ತಾರೆ, ಜೋರು ಶಬ್ದ ಆದರೆ ಯಾರಾದರೂ ಏನಾದರೂ ತಿರುಗಿಸಿ ಹೇಳಿದರೂ ಮೊದಲ ರೀತಿ ಪ್ರತಿಕ್ರಿಯಸಲಾಗದೆ ಡಿಪ್ರೆಷನ್ ಗೆ ಹೋಗುತ್ತಾರೆ. ಇದೆಲ್ಲವೂ ಕೂಡ ಅವರ ದೇಹದಲ್ಲಿ ಹಾಗೂ ಹಾರ್ಮೋನ್ ಕೊರತೆಗಳಿಂದ ಮತ್ತು ಆ ಸಮಯದಲ್ಲಿ ದೇಹಕ್ಕೆ ಬೇಕಾಗಿರುವ ಕೆಲ ಪೋಷಕಾಂಶಗಳು ಕೊರತೆ ಆದಾಗ ಉಂಟಾಗುವ ಸಾಮಾನ್ಯ ಸಮಸ್ಯೆಗಳೇ ಆಗಿವೆ.

ಈ ಲಕ್ಷಣಗಳು ಕಾಣಿಸಿಕೊಂಡಾಗ ಮಹಿಳೆಯರು ಅದನ್ನು ಅರಿತು ಅದನ್ನು ಸೂಕ್ಷ್ಮತೆಯಿಂದ ಗಮನಿಸಿಕೊಂಡು ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆ ಮಾಡಿಕೊಂಡು ದೇಹವನ್ನು ಆರಾಮವಾಗಿ ಇಟ್ಟುಕೊಂಡರೆ ಸಮಸ್ಯೆ ಇಲ್ಲ. ಆದರೆ ಅನೇಕರಿಗೆ ಇದು ಬಹಳ ತೊಂದರೆ ಕೊಡುತ್ತಿರುತ್ತದೆ. ಆಗ ಹೊರಗೆಯಿಂದ ಅವರಿಗೆ ಹಾರ್ಮೋನ್ಸ್ ಸಪ್ಲಿಮೆಂಟ್ ಕೊಡಬೇಕಾಗುತ್ತದೆ.

ಕೆಲವರಿಗೆ ಆ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಥೆರಪಿ ಮಾಡಿದರೆ ಇನ್ನು ಕೆಲವರಿಗೆ ಪ್ರೊಜೆಸ್ಟಿರಾನ್ ಪಿಲ್ಸ್ ಅವಶ್ಯಕತೆ ಕೂಡ ಇರುತ್ತದ. ಈ ಥೆರಪಿಯ ಅವಶ್ಯಕತೆ ಇಲ್ಲದವರಿಗೆ ಮಾಡಿದರೆ ಎಷ್ಟು ತೊಂದರೆಯೂ ಹಾಗೆ ಅವಶ್ಯಕತೆ ಇದ್ದವರಿಗೆ ಸಿಗದೇ ಹೋದರೆ ಅಷ್ಟೇ ಪ್ರಮಾಣದ ತೊಂದರೆ ಇದೆ.

ಹಾಗಾಗಿ ಈ ಸಮಸ್ಯೆಗಳಾದಾಗ ಮಹಿಳೆಯರು ಯಾವುದೇ ಮುಜುಗರ ಇಲ್ಲದೆ ಹತ್ತಿರದಲ್ಲಿರುವ ಮಹಿಳಾ ವೈದ್ಯರನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಅವರಿಗೆ ಹಾರ್ಮೋನ್ಸ್ ಅವಶ್ಯಕತೆ ಇದ್ದರೆ ಕಿಡ್ನಿ ಫಂಕ್ಷನ್, ಲಿವರ್ ಫಂಕ್ಷನ್ ‌, ಬ್ಲೆಡ್ ಫ್ಲೋ ಮುಂತಾದ ಅಂಗಗಳ ಕಾರ್ಯ ಚಟುವಟಿಕೆ ಬಗ್ಗೆ ಟೆಸ್ಟ್ ಮಾಡಿ ತಿಳಿದುಕೊಂಡು ಅವರ ದೇಹವನ್ನು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯನ್ನು ವೈದ್ಯರು ಸೂಚಿಸುತ್ತಾರೆ.

ಮಲ್ಟಿ ವಿಟಮಿನ್ ಡಿಫಿಷಿಯನ್ಸಿ, ಕ್ಯಾಲ್ಸಿಯಂ ಮೆಗ್ನೇಶಿಯಂ ಝಿಂಕ್ ಮುಂತಾದ ಪೋಷಕಾಂಶಗಳ ಕೊರತೆಯೂ ಇರುತ್ತದೆ ಆಗ ಅದರ ಸಪ್ಲಿಮೆಂಟ್ ಕೂಡ ಕೊಡಬೇಕಾಗುತ್ತದೆ ಅಥವಾ ಹೊರಗಿನಿಂದ ಊಟ ತಿಂಡಿ ಉತ್ತಮ ವಾತಾವರಣ ವ್ಯಾಯಾಮ ಸೂರ್ಯನ ಬೆಳಕು ಇವುಗಳಿಂದ ಇದರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸೂಚಿಸಲಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆ ಸಮಯದಲ್ಲಿ ಕುಟುಂಬದ ಸಹಕಾರ ಸಾಂತ್ವನ ಕೂಡ ಮುಖ್ಯ ನಿಮ್ಮ ಮನೆಯ ಮಹಿಳೆಯರಿಗೆ ಈ ಸಮಸ್ಯೆ ಇದ್ದರೆ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಲು ತಿಳಿಸಿ.

ರಾಜ್ಯದ ಜನತೆಗೆ ಸಿಹಿಸುದ್ಧಿ, ಗ್ಯಾರೆಂಟಿ ಇಲ್ಲದೆ ಕೇಂದ್ರ ಸರ್ಕಾರದಿಂದ 50,000 ರವರೆಗೆ ಸಾಲ ಸೌಲಭ್ಯ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ…

ದೇಶದ ಜನತೆಗೆ ಕೇಂದ್ರ ಸರ್ಕಾರವು (Central government) ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಕಳೆದ ಕೆಲವು ವರ್ಷಗಳಿಂದ ಬಾರಿ ಮುನ್ನಡೆಯಲ್ಲಿರುವ ಪ್ರಧಾನಮಂತ್ರಿ ಆತ್ಮ ನಿರ್ಭಯ ಭಾರತ (Atma Nirbar Bharath) ಧ್ಯೇಯದಡಿ ರಾಜ್ಯದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ (PM Swanidhi Scheme) ಯಾವುದೇ ಗ್ಯಾರೆಂಟಿ ಇಲ್ಲದೆ ರೂ.50,000ದವರೆಗೂ ಕೂಡ ಅರ್ಹರಿಗೆ ಸಾಲ (loan) ಸೌಲಭ್ಯ ನೀಡಲು ಸರ್ಕಾರವು ಅರ್ಜಿ ಆಹ್ವಾನ ಮಾಡಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಎನ್ನುವುದರ ಕುರಿತು ಪ್ರಮುಖ ವಿಚಾರಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಬೀದಿ ಬಳಿ ವ್ಯಾಪಾರ ಮಾಡುವಂತಹ ಆಧಾರ ಇಲ್ಲದೇ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಯಾವುದೇ ದಾಖಲೆ ಪತ್ರ ಇಲ್ಲದಿದ್ದರೂ ಕೂಡ ಸಾಲ ಸೌಲಭ್ಯವನ್ನು ನೀಡುವ ಯೋಜನೆ ಇದಾಗಿದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಹಣ್ಣು ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಹೂವು ವ್ಯಾಪಾರಿಗಳು, ದಿನಗೂಲಿಗಳು, ನ್ಯೂಸ್ ಪೇಪರ್ ಹಾಕುವವರು, ಹಾಲು ಮಾರಾಟ ಮಾಡುವವರು, ಮೀನು ಮಾರಾಟಗಾರರು, ದಿನಗೂಲಿಗೆ ದುಡಿಯುವ ಗುಜರಿಗಳು ಮುಂತಾದ ಪ್ರತಿದಿನವೂ ರಸ್ತೆ ಬಳಿ ನಿಂತು ವ್ಯಾಪಾರ ಮಾಡುವಂತಹವರು ಅರ್ಜಿ ಸಲ್ಲಿಸಬಹುದು.

ಈ ಮೇಲೆ ತಿಳಿಸಿದ ವರ್ಗಕ್ಕೆ ಸೇರುವವರು ಪ್ರಧಾನಮಂತ್ರಿ ಸ್ವಯ ನಿಧಿ ಯೋಜನೆಯ ಅನುಕೂಲತೆ ಪಡೆಯಲು ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ಸ್ವನಿಧಿ ಪೋರ್ಟಲ್ ಗೆ ಹೋಗಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಒಂದು ಮಾಹಿತಿಯನ್ನು ಸ್ವತಃ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುತ್ತದೆ ಎನ್ನುವ ವಿಷಯವನ್ನು ಕೂಡ ತಿಳಿಸಿದ್ದಾರೆ. ಈ ಯೋಜನೆ ಮೂಲಕ ಸಿಗುವ ಅನುದಾನ ಎಷ್ಟು ಎಂದು ನೋಡುವುದಾದರೆ ಮೊದಲ ಬಾರಿಗೆ ರೂ.10,000ಗಳನ್ನು ಅರ್ಹ ಫಲಾನುಭವಿಗಳಿಗೆ ಸಾಲವನ್ನಾಗಿ ನೀಡಲಾಗುತ್ತದೆ, ಇದಕ್ಕೆ ಎಂಟು ತಿಂಗಳ ಕಾಲಾವಕಾಶ ಇರುತ್ತದೆ.

8 ತಿಂಗಳುಗಳಲ್ಲಿ ಈ ಸಾಲವನ್ನು ಫಲಾನುಭವಿಗಳು ತೀರಿಸಿದ್ದಲ್ಲಿ 18 ತಿಂಗಳ ಅವಧಿಗೆ 20000 ರೂ.ಗಳನ್ನು ಮತ್ತೆ ಸಾಲವಾಗಿ ನೀಡಲಾಗುತ್ತದೆ. ಈ ಸಾಲವೂ ಮುಗಿದ ಬಳಿಕ 36 ತಿಂಗಳುಗಳ ಕಾಲಾವಕಾಶದಲ್ಲಿ ಅವರಿಗೆ 50,000ರೂ. ಗಳನ್ನು ನೀಡಲಾಗುತ್ತದೆ. ಈ ಸಾಲವನ್ನು ಕೂಡ 36 ಕಂತುಗಳ ಸಮಯದೊಳಗೆ ಅವರು ತೀರಿಸಬೇಕು.

ಸರ್ಕಾರದಿಂದ ಸಿಗುತ್ತಿರುವ ಒಂದು ಅತ್ಯುತ್ತಮ ಯೋಜನೆ ಇದಾಗಿದ್ದು ಆರ್ಥಿಕವಾಗಿ ಬಹಳ ಕಷ್ಟದಲ್ಲಿರುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಆಯಾ ಪುರಸಭೆ, ನಗರಸಭೆ ಅಥವಾ ತಾಲೂಕು ಕಾರ್ಯಾಲಯ ಜಿಲ್ಲಾ ಕಾರ್ಯಲಯಳಿಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಹರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದವರು ನಿಜವಾಗಿಯೂ ಅನುದಾನ ಪಡೆಯಲು ಅರ್ಹ ಎನ್ನುವುದನ್ನು ಕಂಡುಹಿಡಿದು ಹಣ ವರ್ಗಾವಣೆ ಮಾಡುವ ಜವಾಬ್ದಾರಿಯು ನಗರ ಸಭೆ ಹಾಗೂ ಪುರಸಭೆ ವ್ಯಾಪ್ತಿಗೆ ಬರುವ ಅಧಿಕಾರಗಳದ್ದೇ ಆಗಿರುತ್ತದೆ. ಅರ್ಜಿ ಪರಿಶೀಲನೆ ನಡೆದು ಅನುಮೋದನೆಯಾದರೆ ಅಂತಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತದೆ. ಅವಶ್ಯಕತೆ ಇರುವವರಿಗೆಲ್ಲಾ ಯೋಜನೆ ಮಾಹಿತಿ ತಲುಪಿಸುವ ಸಲುವಾಗಿ ಪರಿಚಯಸ್ಥರು ಹಾಗೂ ಸ್ನೇಹಿತರ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

https://youtu.be/ZeiLv6VxuZ4?si=2EFW-Swot54BcY_A

ಆರೋಗ್ಯವಾಗಿ ಜೀವಿಸುವುದಕ್ಕೆ ಕೆಲವು ಉಪಯುಕ್ತವಾದ ಟಿಪ್ಸ್ ಗಳು…

 

ಈಗಿನ ಕಾಲದಲ್ಲಿ ನಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ತಪ್ಪಾದ ಆಹಾರ ಪದ್ಧತಿ ಹಾಗೂ ಕಳಪೆ ಗುಣಮಟ್ಟದ ಜೀವನ ಶೈಲಿಗೆ ಕಾರಣವಾಗಿದೆ ಎಂದು ಹೇಳಬಹುದು. ಇವುಗಳನ್ನು ಸರಿಪಡಿಸಿಕೊಂಡರೆ ವಿನಾಕಾರಣ ನೋ’ವಿನಿಂದ ನರಳುವ ಹಾಗೂ ಹಣ ಖರ್ಚಾಗುವ ಸಮಸ್ಯೆ ತಪ್ಪುತ್ತದೆ. ಹಾಗಾಗಿ ಕೆಲ ಉಪಯುಕ್ತ ಹೆಲ್ತ್ ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ ತಪ್ಪದೆ ಪಾಲಿಸಿ ಆರೋಗ್ಯದಿಂದಿರಿ.

* ಎಲ್ಲರಿಗೂ ಕೂಡ ಒಂದೇ ರೀತಿಯಾದ ದೇಹ ಇರುವುದಿಲ್ಲ ದೇಹದ ಆಕಾರ, ಗಾತ್ರ, ಶಕ್ತಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಹಾಗಾಗಿ ನಮ್ಮ ಕೈಲಿ ಎಷ್ಟು ಆಗುತ್ತದೆ ಅಷ್ಟು ಕೆಲಸವನ್ನು ಮಾತ್ರ ಮಾಡಬೇಕು. ದೈಹಿಕವಾಗಿಯಾಗಲಿ ಮಾನಸಿಕವಾಗಿಯಾಗಲಿ ಅತಿ ಹೆಚ್ಚು ಒತ್ತಡ ಆಗುವಂತಹ ಕೆಲಸಗಳನ್ನು ಒಪ್ಪಿಕೊಂಡು ಆಯಾಸ ಪಟ್ಟು ಅನಾರೋಗ್ಯ ಮಾಡಿಕೊಳ್ಳಬಾರದು

* ಪ್ರತಿದಿನವೂ ಕನಿಷ್ಠ 30 ನಿಮಿಷಗಳ ಆದರೂ ವ್ಯಾಯಾಮ ಮಾಡುವುದು ಬಹಳ ಒಳ್ಳೆಯ ಅಭ್ಯಾಸ ಹಾಗೆಯೇ ತಮ್ಮ ವಯಸಿಗೆ ಅನುಗುಣವಾಗಿ ವ್ಯಾಯಾಮವನ್ನು ಮಾಡಬೇಕು.
* ರಾತ್ರಿ ಸಮಯ ಎಣ್ಣೆಯಲ್ಲಿ ಕರಿದ ಅಥವಾ ಹೆಚ್ಚು ಮಸಾಲೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು

* ಮಲಗುವ ಕೋಣೆ ಯಥೇಚ್ಛವಾಗಿ ಗಾಳಿ ಬೆಳಕು ಬರುವ ರೀತಿ ಇರಬೇಕು.
* ತಂಪಾದ ಪಾನೀಯಗಳಿಂದ ದೇಹಕ್ಕೆ ಯಾವುದೇ ರೀತಿಯ ಕ್ಯಾಲೋರಿ ಸಿಗುವುದಿಲ್ಲ ಬದಲಾಗಿ ದೇಹದ ತೂಕ ಹೆಚ್ಚಾಗುತ್ತದೆ, ಹಾಗಾಗಿ ಈ ಅಭ್ಯಾಸವನ್ನು ತ್ಯಜಿಸುವುದೇ ಒಳ್ಳೆಯದು.
* ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಲ್ಲಿರಬೇಕು.

* ಆಲ್ಕೋಹಾಲ್ ಸೇವನೆಯ ದು’ಶ್ಚ’ಟವನ್ನು ತ್ಯಜಿಸುವುದು ದೇಹಕ್ಕೆ ಬಹಳ ಒಳ್ಳೆಯದು, ಜೀರ್ಣಕ್ರಿಯೆಯ ಕ್ರಮ ತಪ್ಪುವುದಕ್ಕೆ ಧೂಮಪಾನ ಹಾಗೂ ಮಧ್ಯಪಾನದ ಅಭ್ಯಾಸವೇ ಕಾರಣ
* ಆಹಾರದಲ್ಲಿ ಮೊಳಕೆ ಕಟ್ಟಿದ ಧಾನ್ಯಗಳು, ಹಸಿರು ತರಕಾರಿಗಳು, ಸೊಪ್ಪು ಹಾಗೂ ಹಣ್ಣುಗಳ ಬಳಕೆ ಇರಬೇಕು.
* ಹುಳಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ

* ಆತಂಕ ಕಡಿಮೆ ಮಾಡುವ ಮಾತ್ರೆಗಳು ಹಾಗೂ ನಿದ್ರೆ ಮಾತ್ರೆಗಳ ಅಭ್ಯಾಸ ಮಾಡಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇವುಗಳ ಅಡಿಕ್ಷನ್ ನಿಂದ ಆರೋಗ್ಯ ಹದಗೆಡುತ್ತದೆ. ಪಾರ್ಶ್ವ ವಾಯು ಪೀಡಿತರಾಗುವ ಅಥವಾ ಮ.ರಣಾಂತಿಕ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆಯೂ ಬರುತ್ತದೆ.
* ಆದಷ್ಟು ಶಾಂತಿಯಿಂದ ಇರಬೇಕು. ಕೋ’ಪ ತಾಪಗಳನ್ನು ದೂರ ಮಾಡಿ ಎಲ್ಲರೊಡನೆ ಸದಾ ನಗುನಗುತ್ತಾ ಸಂತೋಷದಿಂದ ದಿನವನ್ನು ಕಳೆಯಬೇಕು.

* ಪ್ರತಿ ನಿತ್ಯವೂ ಎರಡು ಬಾರಿ ಹಲ್ಲುಜ್ಜಬೇಕು ಮತ್ತು ಪ್ರತಿನಿತ್ಯ ಸ್ನಾನ ಮಾಡಿ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
* ಕುಳಿತುಕೊಳ್ಳುವ ಭಂಗಿ ‌, ಓಡಾಡುವ ರೀತಿ ಎಲ್ಲವೂ ಕೂಡ ಸರಿಯಾಗಿ ಇರಬೇಕು. ಪ್ರತಿಕ್ಷಣವೂ ಕೂಡ ಆತ್ಮವಿಶ್ವಾಸದಿಂದ ಬದುಕಬೇಕು.
* ಎಷ್ಟೇ ಇಷ್ಟದ ಆಹಾರ ಆಗಿದ್ದರೂ ಕೂಡ ಮಿತಿಗಿಂತ ಹೆಚ್ಚು ಸೇವಿಸಬಾರದು.

* ಮಲ ವಿಸರ್ಜನೆ ಮಾಡಲು ಇಂಡಿಯನ್ ಟಾಯ್ಲೆಟ್ ರೀತಿಯ ವ್ಯವಸ್ಥೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ
* ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಹೊರಗೆ ಶುದ್ಧವಾದ ಗಾಳಿಯಲ್ಲಿ ಓಡಾಡಬೇಕು
* ಗಂಧಕ, ಕರ್ಪೂರ, ತುಳಸಿ ಗಿಡ, ಧೂಪ, ಶ್ರೀಗಂಧ, ಬೇವಿನಕಡ್ಡಿ ಇವುಗಳಿಂದ ಹೊಗೆ ಹಾಕಿ ಮನೆಯ ವಾತಾವರಣವನ್ನು ಶುದ್ಧೀಕರಣ ಮಾಡಬೇಕು.

* ಮನೆ ಸುತ್ತ ಗೋವಿನ ಸಗಣಿಯಿಂದ ಸಾರಿಸಿ ನೈರ್ಮಲ್ಯವಾಗಿಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಮನೆಗೆ ಅಟ್ರಾಕ್ಟ್ ಆಗುವುದಿಲ್ಲ ಹಾಗೂ ಬ್ಯಾಕ್ಟೀರಿಯಾ ವೈರಸ್ ಗಳಂತಹ ಸೂಕ್ಷ್ಮ ಜೀವಗಳಿಂದಲೂ ಮನೆಗೆ ರಕ್ಷಣೆ ಸಿಗುತ್ತದೆ.
* ಮೆದುಳು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳ ಅಭ್ಯಾಸವನ್ನು ಮಾಡಿಕೊಳ್ಳಬಾರದು.

* ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬಾರದು, ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಬೆಚ್ಚಗಿರುವ ನೀರಿನಲ್ಲಿ ತೆಗೆದುಕೊಳ್ಳಬೇಕು.
* ವಾರಕ್ಕೆ ಒಂದು ದಿನ ಆದರೂ ಉಪವಾಸ ಇರುವ ರೂಢಿ ಮಾಡಿಕೊಳ್ಳಿ.
* ನಮ್ಮ ಆರೋಗ್ಯವನ್ನು ಹಾಳು ಮಾಡುವ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ದಿನದಲ್ಲಿ ಆರು ಬಾರಿ ಮೂತ್ರ ವಿಸರ್ಜನೆ ಹಾಗೂ 2 ಬಾರಿಯಾದರೂ ಮಲವಿಸರ್ಜನೆ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.

ರಕ್ತನಾಳಗಳ ಉಬ್ಬುವಿಕೆ (ವೆರಿಕೋಸ್ ವೇನ್ಸ್), ನೀಲಿ ನರಗಳ ಬಗ್ಗೆ ಎಚ್ಚರ ತಪ್ಪಿದ್ದರೆ ಎಂತಹ ಅ’ಪಾ’ಯ ಗೊತ್ತಾ? ಈ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸುವ ಮನೆಮದ್ದು ಇದು.!

 

ಕೆಲವರ ಕಾಲುಗಳಲ್ಲಿ ನರಗಳು ಹಸಿರು ಬಣ್ಣದಲ್ಲಿ ಅಥವಾ ಕಪ್ಪು ಬಣ್ಣದಲ್ಲಿ ಊದಿಕೊಂಡಿರುವುದನ್ನು ಕಾಣುತ್ತೇವೆ. ಕಾಣಿಸದೆ ಇದ್ದರೂ ಬಹಳ ಓದಿಕೊಂಡು ನೋವು ಕೊಡುತ್ತಿರುತ್ತವೆ ಕೆಲವರಿಗೆ ವೆರಿಕೋಸ್ ವೇನ್ಸ್ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ.

ವೆರಿಕೋಸ್ ವೆನ್ಸ್ ಸಮಸ್ಯೆಯಿಂದ ಬಹಳ ಜನರು ನರಳುತ್ತಿದ್ದು ಇತ್ತೀಚೆಗೆ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಯುರ್ವೇದದಲ್ಲಿ ಇರುವ ಸುಲಭವಾದ ಪರಿಹಾರಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

ಆದರೆ ಯಾವುದೇ ಕಾಯಿಲೆ ಆದರು ಕಾಯಿಲೆ ಬರುವುದಕ್ಕೆ ಕಾರಣವನ್ನು ತಿಳಿದುಕೊಂಡರೆ ಅರ್ಧ ಕಾಯಿಲೆ ವಾಸಿ ಆದಂತೆಯೇ ಸರಿ. ಈ ರೀತಿಯಾಗಲು ಕಾರಣವೇನೆಂದರೆ ರಕ್ತನಾಳಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಬ್ಲಾಕೇಜ್ ಗಳು ಆಗುವುದು.

ಈ ರೀತಿ ಹೃದಯದಿಂದ ರಕ್ತನಾಳಕ್ಕೆ, ರಕ್ತನಾಳದಿಂದ ಹೃದಯಕ್ಕೆ ರಕ್ತ ಸಂಚಾರಕ್ಕೆ ಅಡೆತಡೆ ಉಂಟುಮಾಡುವ ವಿಷಯವೇನೆಂದರೆ ನಮ್ಮ ದೇಹದಲ್ಲಿ ಇರುವ ವಾತ ಹಾಗೂ ಪಿತ್ತ ವಿಕಾರಗಳು. ನಾವು ಸೇವಿಸುವ ಆಹಾರ ಮತ್ತು ಬದುಕುವ ರೀತಿಯಲ್ಲಿ ತಪ್ಪಾಗಿರುವುದು ಇದಕ್ಕೆ ಮುಖ್ಯ ಕಾರಣ.

ಆಯುರ್ವೇದ ಹೇಳುವ ಪ್ರಕಾರ ಸರಿಯಾದ ದಿನಚರಿಯವನ್ನು ಪಾಲಿಸದೆ ಇದ್ದಾಗ ಅಜೀರ್ಣ ಮಲಬದ್ಧತೆ ಇತ್ಯಾದಿಗಳು ಉಂಟಾಗಿ ಇದರಿಂದ ದೇಹದಲ್ಲಿ ವಾತ ಹಾಗೂ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ಇವು ರಕ್ತನಾಳಗಳಿಗೆ ಸೇರಿ ಬ್ಲಾಕೆಜ್ ಉಂಟು ಮಾಡಿ ಹೃದಯದಿಂದ ದೂರವಿರುವ ರಕ್ತನಾಳಗಳಿಗೆ ರಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತವೆ.

ರಕ್ತನಾಳಗಳ ಊದಿಕೊಳ್ಳುವಿಕೆ, ನೋ’ವು, ರಕ್ತನಾಳಗಳ ಒಡೆದುಹೋಗುವಿಕೆಗೂ ಕೂಡ ಕಾರಣ ಆಗಬಹುದು ಇದನ್ನು ಕಂಟ್ರೋಲ್ ಮಾಡುವುದು ಹೇಗೆ ಎಂದರೆ ನಮ್ಮ ಜೀವನ ಶೈಲಿಯನ್ನು ಸರಿಪಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದರಿಂದ ಪಿತ್ತ ವಿಕಾರಗಳನ್ನು ಕಡಿಮೆಗೊಳಿಸಬಹುದು.

ಹಾಗೆಯೇ ಬೆಳಿಗ್ಗೆ ಬೇಗ ಎದ್ದು ಯೋಗ ಪ್ರಾಣಾಯಾಮ ವ್ಯಾಯಾಮ ಧ್ಯಾನ ಇತ್ಯಾದಿಗಳಲ್ಲಿ ಸಾಧ್ಯವಾದಷ್ಟು ತೊಡಗಿ ಕೊಳ್ಳಬೇಕು. ನಾವು ಸೇವಿಸುವ ಆಹಾರ ಶುದ್ಧವಾಗಿರಬೇಕು. ಕಾಫಿ, ಚಹಾ, ಬೇಕರಿ ಉತ್ಪನ್ನಗಳು ಇತ್ಯಾದಿಗಳಿಂದ ಸಂಪೂರ್ಣವಾಗಿ ದೂರ ಇರಬೇಕು ಇದರಿಂದಲೇ ಗ್ಯಾಸ್ಟ್ರಿಕ್ ಹಾಗೂ ಅಜೀರ್ಣತೆ ಉಂಟಾಗುತ್ತಿರುವುದು.

ಧೂಮಪಾನ ಮಧ್ಯಪಾನ ಗುಟ್ಕಾ ಇಂತಹ ದುಶ್ಚಟಗಳಿಂದ ಹೊರಬರಬೇಕು. ಇಷ್ಟಾದರೆ ಸಲೀಸಾಗಿ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ. ಇದರ ಜೊತೆಗೆ ಈಗಾಗಲೇ ವೆರಿಕೋಸ್ ವೆನ್ಸ್ ಆಗಿದ್ದರೆ ಬೇಗ ಗುಣವಾಗಲು ಆಯುರ್ವೇದಿಕ್ ಟಿಪ್ಸ್ ಹೀಗಿದೆ ನೋಡಿ.

1. ಜೀರಿಗೆ ಹಾಗೂ ಓಂಕಾಳು ಇವೆರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಬೆಲ್ಲದ ಜೊತೆ ಸೇರಿಸಿ ಸಣ್ಣ ಗುಲಗಂಜಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಈ ಉಂಡೆಗಳನ್ನು ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಎರಡೆರಡು ಉಂಡೆಗಳಾಗಿ ಸೇವಿಸಿದರೆ ದೇಹದಲ್ಲಿರುವ ಕಲ್ಮಶಗಳೆಲ್ಲ ದೇಹದಿಂದ ಹೊರ ಹೋಗಲು ಇದು ಸಹಾಯ ಮಾಡುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರು ಬೆಲ್ಲದ ಬದಲು ಶುಂಠಿರಸ ಹಾಗೂ ನಿಂಬೆ ರಸದೊಂದಿಗೆ ಸೇವಿಸಬೇಕು.

2. ಅಭ್ಯಂಗ ಸ್ನಾನವನ್ನು ಕನಿಷ್ಠ 15 ದಿನಗಳಿಗೆ ಒಮ್ಮೆಯಾದರೂ ಮಾಡಬೇಕು, ಈ ರೀತಿ ಮಾಡುವುದರಿಂದ ನರನಾಡಿಗಳು ಕ್ರಿಯಾಶೀಲಗೊಳ್ಳುತ್ತವೆ. ಆಗ ನರನಾಡಿಗಳಲ್ಲಿ ಬ್ಲಾಕೆಜ್ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ.

3. ಯಾವಾಗಲೂ ನಿಂತುಕೊಂಡು ಇರುವುದು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಈ ಸಮಸ್ಯೆ ಹೆಚ್ಚು. ಯಾಕೆಂದರೆ ಆ ರೀತಿ ಇದ್ದಾಗ ರಕ್ತ ಸಂಚಾರಕ್ಕೆ ಹೆಚ್ಚು ಅಡ್ಡಿ ಆಗುತ್ತದೆ ಜೊತೆಗೆ ಭೂಮಿಯ ಗುರುತ್ವಾಕರ್ಷಣೆ ಕೂಡ ಕೆಳಮುಖವಾಗಿ ಸೆಳೆಯುವುದರಿಂದ ವಿನಾಕಾರಣ ನಿಂತುಕೊಂಡಿರುವುದು ಇಂತಹ ಅಭ್ಯಾಸಗಳನ್ನು ತಪ್ಪಿಸಿ.

4. ವೆರಿಕೋಸ್ ವೇನ್ಸ್ ಸಮಸ್ಯೆಯಿಂದ ಬಹಳ ನರಳುತ್ತಿದ್ದರೆ ನಿತ್ಯ ಪುಷ್ಪದ ಎಲೆ ಹಾಗೂ ಹೂವು, ಅಲೋವೆರಾ ಮತ್ತು ಉತ್ತ್ರಾಣಿಯನ್ನು ಚೆನ್ನಾಗಿ ಅರೆದು ಆ ಮಿಶ್ರಣವನ್ನು ಎಳ್ಳೆಣ್ಣೆಗೆ ಹಾಕಿ ನೀರಿನಾಂಶ ಹೋಗುವವರೆಗೂ ಕುದಿಸಿ ಈ ರೀತಿ ನರಗಳು ಊದಿಕೊಂಡಿರುವ ಕಡೆ, ನಿಧಾನವಾಗಿ ಮಸಾಜ್ ಮಾಡಬೇಕು ಆಗ ಸಮಸ್ಯೆ ಕಂಟ್ರೋಲ್ ಗೆ ಬರುತ್ತದೆ.

https://youtu.be/TdKF-WgycFc?si=YlJC2o_HvJKNcG44

ಕಣ್ಣಿನ ಯಾವುದೇ ಸಮಸ್ಯೆಗಳಿದ್ದರೂ ಕೇವಲ 21 ದಿನಗಳಲ್ಲಿಯೇ ಪರಿಹಾರ.!

 

ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ದೃಷ್ಟಿ ಇಲ್ಲದವರ ಪ್ರಪಂಚ ಎಷ್ಟು ಕ’ಷ್ಟ ಒಂದು ರೀತಿ. ಒಂದು ವೇಳೆ ಹುಟ್ಟಿನಿಂದ ಕಣ್ಣಿಲ್ಲದಿದ್ದವರು ಕೂಡ ಹೇಗೋ ಬದುಕಿ ಬಿಡಬಹುದು ಆದರೆ ಇರುವಷ್ಟು ದಿನ ಕಣ್ಣಿನಿಂದ ಸುಖ ಹಾಗೂ ಆನಂದವನ್ನು ಅನುಭವಿಸಿ ನಂತರ ಕಣ್ಣು ಕಾಣದಂತಾದರೆ ಅದು ಕೊಡುವ ನೋ’ವು ಅಷ್ಟಿಷ್ಟಲ್ಲ.

ಕೆಲವೊಮ್ಮೆ ನಮ್ಮ ಸ್ವಯಂಕೃತ್ಯ ಅಪರಾಧಗಳಿಂದ ಕೂಡ ನಮ್ಮ ಕಣ್ಣಿನ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡಿರುತ್ತೇವೆ. ಕಣ್ಣಿಗೆ ಬೇಕಾದ ಪೋಷಕಾಂಶಗಳು ಆಹಾರಗಳ ಸೇವನೆಯನ್ನು ಕಡೆಗಣಿಸುವುದು, ಕಣ್ಣಿಗೆ ರೆಸ್ಟ್ ಕೊಡದೆ ಇರುವುದು ಯಾವಾಗಲೂ ಟಿವಿ ಮೊಬೈಲ್ ಪರದೆಗಳನ್ನು ಲಿಮಿಟ್ ಇಲ್ಲದೆ ನೋಡಿ ಕಣ್ಣನ್ನು ಹಾಳು ಮಾಡಿಕೊಳ್ಳುವುದು.

ಅಥವಾ ವಾತಾವರಣದ ಧೂಳು, ಕಲ್ಮಶಗಳಿಂದ ಕಣ್ಣಿಗೆ ಹಾನಿ ಆಗಿರುವುದು ಅಥವಾ ಇನ್ಯಾವುದೋ ಔಷಧೀಯ ಸೈಡ್ ಎಫೆಕ್ಟ್ ಇನ್ನು ಮುಂತಾದ ಕಾರಣಗಳಿಂದಾಗಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಪೊರೆಬರುವುದು, ಕಣ್ಣು ಮಂದವಾಗಿ ಕಾಣುವುದು.

ಅಥವಾ ಎರಡೆರಡಾಗಿ ಕಾಣುವುದು ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಕಲರ್ ಬ್ಲೈಂಡ್ ನೆಸ್, ಕಣ್ಣಿನ ಉರಿ, ಕಣ್ಣಿನಲ್ಲಿ ಬಿಳಿ ಕೂರುವುದು ಇನ್ನೂ ಮುಂತಾದ ಹತ್ತಾರು ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ತೊಂದರೆ ಇದ್ದಾಗ ಕೆಲವರು ಮೆಡಿಕಲ್ ಗಳಲ್ಲಿ ಸಿಗುವ ಯಾವುದಾದರೂ ಔಷಧಿ ಖರೀದಿಸಿ ಟ್ರೈ ಮಾಡಿ ನೋಡುತ್ತಾರೆ.

ಇನ್ನು ಕೆಲವರು ಇದು ವರ್ಕ್ ಆಗದೆ ಇದ್ದಾಗ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ, ಇಷ್ಟಾದ ಮೇಲೂ ಸಂಪೂರ್ಣವಾಗಿ ಸಮಸ್ಯೆಯಿಂದ ಹೊರಬರಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಹೀಗಾದಾಗ ಆಯುರ್ವೇದದಲ್ಲಿ ಸಿಗುವ ಒಂದು ಅದ್ಭುತವಾದ ಮೆಡಿಸನ್ ಉಪಯೋಗಿಸಿ. ಈ ಮೆಡಿಸನ್ ನಿಂದ ನೀವು ಕೇವಲ 21 ದಿನಗಳಲ್ಲಿ ಸಂಪೂರ್ಣವಾಗಿ ನಿಮ್ಮ ಯಾವುದೇ ಕಣ್ಣಿನ ಸಮಸ್ಯೆ ಇದ್ದರೂ ಅದರಿಂದ ಗುಣವಾಗಬಹುದು ಎನ್ನುವ ನೂರಕ್ಕೆ ನೂರರಷ್ಟು ಭರವಸೆಯನ್ನು ಈ ಮೆಡಿಸನ್ ನೀಡುತ್ತದೆ.

ದಿವ್ಯ ನೇತ್ರ ಬಿಂದು ಎಂದು ಹೇಳಲಾಗುವ ಈ ಔಷಧಿಯು ಬಹುತೇಕ ಆಯುರ್ವೇದಿಕ್ ಅಂಗಡಿಯಲ್ಲಿ ಸಿಗುತ್ತದೆ. ಒಂದು ವೇಳೆ ಸಿಗದೇ ಇದ್ದಾಗ ನಾವು ಈ ಅಂಕಣದ ಕೊನೆಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೀವು ವಿಚಾರಿಸಿ ಔಷಧಿಯನ್ನು ಖರೀದಿ ಮಾಡಬಹುದು. ಅಲೋವೆರಾ, ವಿಭಿತಕಿ, ಶತಬಿರಾ ಮುಂತಾದ ಗಿಡಮೂಲಿಕೆಗಳಿಂದಾಗಿ ಈ ಔಷಧಿಯನ್ನು ತಯಾರು ಮಾಡಲಾಗಿದೆ.

ಇದನ್ನು ಕಣ್ಣಿಗೆ ಎರಡು ಹನಿ ಹಾಕಿಕೊಂಡ ತಕ್ಷಣ ಸ್ವಲ್ಪ ಉರಿ ಬರುತ್ತದೆ ಮತ್ತು ಕಣ್ಣು ಮರಳು ಮರುಳಾದ ರೀತಿ ಆಗುತ್ತದೆ. ಹಾಗೆಯೇ ಸ್ವಲ್ಪ ಹೊತ್ತಿಗೆ ಇದು ಕಡಿಮೆ ಆಗಿಬಿಡುತ್ತದೆ. ಕಣ್ಣಿನಿಂದ ನೀರು ಅಥವಾ ಬಿಳಿ ರೂಪದ ದ್ರವ ಆಚೆ ಬರುತ್ತದೆ. ಹೀಗಾಗಿದೆ ಎಂದರೆ ನಿಮ್ಮ ಕಣ್ಣಲ್ಲಿರುವ ಕಲ್ಮಶಗಳು ಆಚೆ ಬರುತ್ತಿದೆ ಕಣ್ಣು ಕ್ರಿಯಾಶೀಲಗೊಳ್ಳುತ್ತಿದೆ ಎಂದು ಅರ್ಥ. ಲೆನ್ಸ್ ಹಾಕಿಸಿಕೊಂಡಿರುವವರು ಯಾವುದೇ ಕಾರಣಕ್ಕೂ ಈ ಔಷಧಿಯನ್ನು ಬಳಸದೇ ಇರುವುದು ಉತ್ತಮ.

ಯಾಕೆಂದರೆ ಅವರಿಗೆ ಇದು ವರ್ಕ್ ಆಗುವುದಿಲ್ಲ ಅದನ್ನು ಹೊರತುಪಡಿಸಿ ಯಾವುದೇ ವಯಸ್ಸಿನ ಯಾರೇ ಬೇಕಾದರೂ ಈ ಶುದ್ಧವಾದ ಆಯುರ್ವೇದಿಕ್ ಔಷಧಿ ಬಳಸಬಹುದು. ಇದನ್ನು ಬಳಸಿದ ಮೇಲೆ ದಿನದಲ್ಲಿ ಆರೇಳು ಬಾರಿ ಶುದ್ಧ ನೀರಿನಿಂದ ಕಣ್ಣನ್ನು ತೊಳೆಯುತ್ತಿರಬೇಕು. ಖಂಡಿತವಾಗಿಯೂ ನಿಮ್ಮ ಸಮಸ್ಯೆಯಿಂದ ಹೊರಬರುವುದರಲ್ಲಿ ಯಾವುದೇ ಅನುಮಾನ ಇಲ್ಲ, ಆದರೆ ನಂತರದ ದಿನಗಳಲ್ಲಿ ಮತ್ತೆ ನಿರ್ಲಕ್ಷ ಮಾಡದೆ ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

https://youtu.be/Ei231CqqwKo?si=i6CT7k19eu65kIYD