Home Blog Page 172

ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

0

 

ಕುಟುಂಬದ ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದು:-

● ಮೂರು ತಲೆಮಾರಿನಿಂದ ವರ್ಗಾವಣೆ ಆಗಿಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದರಿಂದ ಪಿತ್ರಾಜಿತವಾಗಿ ಬಂದ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಹಕ್ಕು ಇರುತ್ತದೆ. ಹಾಗಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಕೇಳಬಹುದು.
● ಒಂದು ಕೂಡು ಕುಟುಂಬದಲ್ಲಿ ತಂದೆ ತಂದೆಯ ಸಹೋದರರು ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದಾಗ ಒಟ್ಟು ಕುಟುಂಬದ ಸದಸ್ಯರು ಗಳಿಸಿದ ಆಸ್ತಿಯಲ್ಲಿಯೂ ಕೂಡ ಹೆಣ್ಣುಮಕ್ಕಳಿಗೆ ಸಮಾನವಾದ ಅಧಿಕಾರ ಇರುತ್ತದೆ.

● ಕೂಡ ಕುಟುಂಬದ ಯಾವುದೋ ಒಬ್ಬ ಸದಸ್ಯ ತನ್ನ ಸ್ವಂತ ದುಡಿಮೆಯಿಂದ ಆಸ್ತಿ ಒಂದನ್ನು ಖರೀದಿಸಿ ಅದರ ಅನುಭೋಗವನ್ನು ಕೂಡು ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರೆ ಕೂಡು ಕುಟುಂಬದ ಎಲ್ಲರೂ ಎಷ್ಟು ಲಾಭ ಪಡೆಯುತ್ತಿದ್ದಾರೋ ಆ ಕುಟುಂಬದ ಹೆಣ್ಣು ಮಕ್ಕಳಿಗೂ ಕೂಡ ಅದರಲ್ಲಿ ಅಷ್ಟೇ ಹಕ್ಕು ಇರುತ್ತದೆ.
● ಒಟ್ಟು ಕುಟುಂಬದ ಆಸ್ತಿಯ ಬಂಡವಾಳದಿಂದ ಖರೀದಿಸಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಅಷ್ಟೇ ಅಧಿಕಾರ ಇರುತ್ತದೆ.

● ಪಿತ್ರಾರ್ಜಿತ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ಆ ಹಣದಿಂದ ಬೇರೆ ಆಸ್ತಿ ಖರೀದಿ ಮಾಡಿದ್ದರೆ ಖರೀದಿ ಮಾಡಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಹಕ್ಕು ಇರುತ್ತದೆ.
● 2005ರಲ್ಲಿ ಕಾನೂನು ತಿದ್ದುಪಡಿಯಾದ ಸಮಯದಲ್ಲಿ ವಿಭಾಗ ಆಗದೆ ಉಳಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಹಕ್ಕು ಇರುತ್ತದೆ.

ಈ ಸುದ್ದಿ ನೋಡಿ:- ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

● 2005ರ ಕಾನೂನು ತಿದ್ದುಪಡಿ ಆದಮೇಲೆ ಕುಟುಂಬದ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ತಿಳಿಸದಂತೆ ಆ ಆಸ್ತಿಯನ್ನು ವಿಭಾಗ ಮಾಡಿಕೊಂಡಿದ್ದರೆ, ಹೆಣ್ಣು ಮಕ್ಕಳಿಂದ ಹಕ್ಕು ಬಿಡುಗಡೆ ಪತ್ರ ಪಡೆದಿಲ್ಲ, ಯಾವುದೇ ರೀತಿ ಸಹಿ ಕೂಡ ಪಡೆದಿಲ್ಲ ಎಂದರೆ ಆಗಲು ಕೂಡ ಹೆಣ್ಣು ಮಕ್ಕಳು ಆ ಆಸ್ತಿಯ ಮೇಲೆ ಹಕ್ಕು ಹೊಂದಿರುತ್ತಾರೆ.

ಯಾವ ಆಸ್ತಿಗಳ ಮೇಲೆ ಹೆಣ್ಣು ಮಕ್ಕಳಿಗೆ ಅಧಿಕಾರ ಇರುವುದಿಲ್ಲ:-
● ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ. ತಾಯಿಗೆ ಅವರ ತವರು ಮನೆಯಿಂದ ಬಂದ ಆಸ್ತಿಗೆ ತಾಯಿಯೇ ಯಜಮಾನಿ ಆಗಿರುತ್ತಾರೆ, ಆ ಆಸ್ತಿಯನ್ನು ತಾಯಿಯು ಯಾರಿಗೆ ಬೇಕಾದರೂ ಕೊಡಬಹುದು. ಅದರಲ್ಲಿ ಹೆಣ್ಣು ಮಕ್ಕಳು ತಮಗೂ ಪಾಲಿದೆ ಎಂದು ಕೇಳಲು ಸಾಧ್ಯವಿಲ್ಲ.

● ತಂದೆಗೆ ಆ ಆಸ್ತಿಯು, ಅವರ ತಾಯಿಯಿಂದ ಅಂದರೆ ನಿಮ್ಮ ಅಜ್ಜಿಯಿಂದ ಬಂದಿದ್ದರೆ ಅ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಪಾಲು ಬೇಕು ಎಂದು ಕೇಳಲು ಸಾಧ್ಯವಿಲ್ಲ.
● ತಂದೆಗೆ ವೀಲ್ ಮೂಲಕ ಅಥವಾ ದಾನದ ಮೂಲಕ ಯಾವುದಾದರು ಆಸ್ತಿ ಬಂದಿದ್ದರೆ ಅದರಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಲು ಬರುವುದಿಲ್ಲ.

ಈ ಸುದ್ದಿ ನೋಡಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

● ತಂದೆಗೆ ಸರ್ಕಾರದಿಂದ ಮಂಜೂರಾದ ಆಸ್ತಿಗಳಲ್ಲಿ ತಂದೆ ಬದುಕಿರುವಾಗಲೇ ಹೆಣ್ಣುಮಕ್ಕಳಿಗೆ ಅದರಲ್ಲಿ ಪಾಲು ಕೇಳಲು ಅಧಿಕಾರ ಇರುವುದಿಲ್ಲ.
● ತಂದೆಯು ತನ್ನ ಸ್ವಂತ ದುಡಿಮೆಯಿಂದ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದಂತಹ ಆಸ್ತಿಗಳಲ್ಲಿ ತಂದೆಯ ಜೀವಿತಾವಧಿಯಲ್ಲಿ ಮಗಳು ಪಾಲು ಕೇಳಲು ಸಾಧ್ಯವಿಲ್ಲ. ಆದರೆ ತಂದೆಯ ಮರಣದ ನಂತರ ಅದು ಯಾರಿಗೆ ಸೇರಬೇಕು ಎಂದು ವಿಲ್ ಮಾಡದೆ ಹೋಗಿದ್ದಲ್ಲಿ ಅಥವಾ ಯಾರಿಗೂ ತಮ್ಮ ಆಸ್ತಿಯ ಹಕ್ಕನ್ನು ವರ್ಗಾವಣೆ ಮಾಡದೆ ಹೋಗಿದ್ದಲ್ಲಿ, ತಂದೆಯ ಎಲ್ಲ ಮಕ್ಕಳು ಅದರಲ್ಲಿ ಸಮಾನ ಹಕ್ಕುದಾರರಾಗಿರುತ್ತಾರೆ.

● 2005ಕ್ಕೂ ಮುಂಚೆಯೇ ಆಸ್ತಿ ವಿಭಾಗ ಆಗಿದ್ದರೆ ತಂದೆ ಹಾಗೂ ಗಂಡು ಮಕ್ಕಳು ಅದರ ಪಾಲುಗಳನ್ನು ಪಡೆದುಕೊಂಡಿದ್ದರೆ ಆ ಆಸ್ತಿಯ ಮೇಲೆ ಹೆಣ್ಣು ಮಕ್ಕಳು ಹಕ್ಕು ಕೇಳಲು ಬರುವುದಿಲ್ಲ.
● ಕೂಡು ಕುಟುಂಬದ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಆಸ್ತಿಯ ಬದಲು ಬೇರೆ ಯಾವುದಾದರೂ ಉಡುಗೊರೆ ಪಡೆದು ಆಸ್ತಿ ಮೇಲಿನ ಹಕ್ಕನ್ನು ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಟ್ಟುಕೊಟ್ಟಿದರೆ ಆಗಲು ಹೆಣ್ಣು ಮಕ್ಕಳು ಮತ್ತೆ ಬಂದು ಪಾಲು ಕೇಳಲು ಸಾಧ್ಯವಿಲ್ಲ.

ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

0

 

ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತದೆ ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಯೋಜನೆಗಳು ಹೆಚ್ಚಾಗಿ ಕಾಣ ಸಿಗುತ್ತವೆ ಜನರು ತಾವು ದುಡಿದ ಹಣದಲ್ಲಿ ಕೊಂಚ ಹಣವನ್ನಾದರೂ ಉಳಿಸಿ ತಮ್ಮ ಭವಿಷ್ಯಕ್ಕೆ ಅದನ್ನು ಉಪಯೋಗವಾಗುವಂತೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾರೆ.

ಉಳಿತಾಯ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ ಆದರೆ ಅದನ್ನು ಹೇಗೆ ಉಳಿತಾಯ ಮಾಡಬೇಕು ಎಲ್ಲಿ ಇಟ್ಟರೆ ಹಣ ದುಪ್ಪಟ್ಟಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇರುವುದಿಲ್ಲ ಈ ಲೇಖನದ ಮೂಲಕ ಸರ್ಕಾರ ಹೊಸದಾಗಿ ಹೂಡಿಕೆ ಮಾಡಲು ಬಯಸಿದ ಹೂಡಿಕೆದಾರರಿಗೆ ಹೊಸ ಪೋಸ್ಟ್ ಆಫೀಸ್ ಯೋಜನೆಯನ್ನು ತಂದಿದೆ ಈ ವಿಚಾರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಸುದ್ದಿ ನೋಡಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ಹಣವನ್ನು ಎಲ್ಲಿ ಉಳಿತಾಯ ಮಾಡಿದರೆ ಒಳಿತು ಎಂಬುದು ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ ಆದರೆ ಕೇಂದ್ರ ಸರ್ಕಾರದ ಒಡೆತನದಲ್ಲಿ ಬರುವ ಸಂಸ್ಥೆಗಳಲ್ಲಿ ಉಳಿತಾಯ ಮಾಡಿದರೆ ನಿಮ್ಮ ಹಣಕ್ಕೆ ಯಾವುದೇ ಮೋಸವಾಗುವುದಿಲ್ಲ ಪೋಸ್ಟ್ ಆಫೀಸ್ ಕೂಡ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ್ದು ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ವೇಳೆ ಭಯಪಡುವ ಯಾವುದೇ ಅಗತ್ಯವಿಲ್ಲ

ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಹಣ ಸೇಫ್ ಆಗಿರುತ್ತದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದಿಂದ ಪೋಸ್ಟ್ ಆಫೀಸ್ನಲ್ಲಿ ಜನರು ಹಣ ಹೂಡಿಕೆ ಮಾಡಲೆಂದು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ಹಣದ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಇತ್ತೀಚಿಗೆ ಹೆಚ್ಚು ಮಾಡಿದೆ.

ಈ ಸುದ್ದಿ ನೋಡಿ:- ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!

ಜನರ ಉಳಿತಾಯದ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ ಪೋಸ್ಟ್ ಆಫೀಸ್ನ ಈ ಹೊಸ ಯೋಜನೆಗಳಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳು ಆಗಲಿವೆ

ಸರ್ಕಾರ ಈಗಾಗಲೇ ಪೋಸ್ಟ್ ಆಫೀಸ್ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಇದೀಗ ‘ಗ್ರಾಮ ಸುರಕ್ಷಾ ಯೋಜನೆ’ ಎನ್ನುವ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಕೇಂದ್ರ ಸರ್ಕಾರದ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಕಡಿಮೆ ಹಣವನ್ನು ಠೇವಣಿಯಲ್ಲಿ ಇಟ್ಟು ಹೆಚ್ಚು ಲಾಭವನ್ನು ಗಳಿಸಬಹುದು ಈ ರೀತಿ ಹಣವನ್ನು ಠೇವಣಿ ಇಡುವುದಕ್ಕೆ ಸರ್ಕಾರ ಕೆಲವು ನಿಯಮ ಮಾರ್ಗಸೂಚಿ ವಯಸ್ಸಿನ ಮಿತಿ ಇಡಲಾಗಿದೆ

ಗ್ರಾಮ ಸುರಕ್ಷಾ ಯೋಜನೆಗೆ ಸೇರುವವರಿಗೆ ಇರಬೇಕಾದ ಅರ್ಹತೆಗಳು ಮತ್ತು ಅದರಿಂದ ಸಿಗುವ ಸೌಕರ್ಯಗಳು:-

* ಗ್ರಾಮ ಸುರಕ್ಷಾ ಯೋಜನೆಗೆ ಸೇರಲು ಇಷ್ಟಪಡುವ ಜನರ ವಯಸ್ಸು 19 ರಿಂದ 55 ವರ್ಷದ ಒಳಗೆ ಇರಬೇಕು
* ಗ್ರಾಮ ಸುರಕ್ಷಾ ಯೋಜನೆಯಲ್ಲಿ 10,000 ಗಳಿಂದ 10 ಲಕ್ಷ ರೂಪಾಯಿಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು
* ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಿ ನಾಲ್ಕು ವರ್ಷದ ನಂತರ ಕವರೇಜ್ ಸೌಲಭ್ಯದ ಮೇಲೆ ಸಾಲ ದೊರೆಯುತ್ತದೆ.

* ಗ್ರಾಮ ಸುರಕ್ಷಾ ಯೋಜನೆಯಲ್ಲಿ ಐವತ್ತು ರೂಪಾಯಿಗಳನ್ನು ಉಳಿತಾಯ ಮಾಡಬೇಕು. ಒಂದು ತಿಂಗಳಿಗೆ 1515 ರೂಪಾಯಿ ಉಳಿಕೆ ಮಾಡಿದಂತೆ ಆಗುತ್ತದೆ. ಈ ಯೋಜನೆ ಮೆಚುರಿಟಿಗೆ ಬರುವ ವೇಳೆ ಆ ಹಣ 35 ಲಕ್ಷ ಆಗಿರುತ್ತದೆ
* ಗ್ರಾಮ ಸುರಕ್ಷಾ ಯೋಜನೆ 1,000 ರೂಪಾಯಿಗೆ ಶೇಕಡ 60ರಷ್ಟು ಬೋನಸ್ ಹಣವನ್ನು ನೀಡುತ್ತಾರೆ ಆದರೆ ಈ ಯೋಜನೆಗೆ ಸೇರಿ 5 ವರ್ಷದ ಒಳಗೆ ಈ ಯೋಜನೆಯನ್ನು ನೀವು ಬಿಟ್ಟರೆ ಅದಕ್ಕೆ ಬೋನಸ್ ದೊರೆಯುವುದಿಲ್ಲ

ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

0

 

ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿದೆ ಚುನಾವಣೆಗು ಮೊದಲು ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಭಾಗ್ಯಗಳ ಬಗ್ಗೆ ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಹಲವಾರು ತಿಂಗಳುಗಳಿಂದ ಯೋಚಿಸುತ್ತಿದ್ದ ಕಾಂಗ್ರೆಸ್ ಸರ್ಕಾರದ ವಕ್ದಾರ ಸಿಎಂ ಸಿದ್ದರಾಮಯ್ಯನವರು ನಿಧಾನವಾಗಿ ಒಂದರ ಹಿಂದೆ ಒಂದು ಭಾಗ್ಯಗಳನ್ನು ಜಾರಿಗೊಳಿಸುತ್ತಿದ್ದಾರೆ.

ಈ ಪಂಚ ಭಾಗ್ಯಗಳಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಎಲ್ಲವು ಮುಖ್ಯವಾಗಿವೆ ಸಾಕಷ್ಟು ಜನರು ಇಂದು ರೇಷನ್ ಕಾರ್ಡಿಗೆ ಸೇರುವವರಿದ್ದಾರೆ ಅವರಿಗೆ ಈ ಯೋಜನೆಗಳ ಫಲಾನುಭವಿಗಳಾಗಲು ಅರ್ಹತೆ ಸಿಗುವುದಿಲ್ಲ ಹಾಗಾಗಿ ಹೊಸ ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸ್ವೀಕಾರ ಮಾಡುವ ಕೆಲಸವನ್ನು ಸರ್ಕಾರ ಶುರುಮಾಡಿದೆ.

ಈ ಸುದ್ದಿ ನೋಡಿ:- 

ಕಂದಾಯ ಸಚಿವ ಕೃಷ್ಣಭೈರೇಗೌಡ ಈ ಹಿಂದೆ ತಾನು ಸಂಪುಟದಲ್ಲಿ ಹೊಸ ರೇಷನ್ ಕಾರ್ಡ್ ಗಳ ನೋಂದಣಿ ಬಗ್ಗೆ ಚರ್ಚೆ ಮಾಡಿ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದರು ಅಷ್ಟೇ ಅಲ್ಲದೆ ಕಾಂಗ್ರೆಸ್ ನ ಯು ಬಿ ಬಣಕಾರ್ ಹೊಸ ರೇಷನ್ ಕಾರ್ಡ್ ಕೊಡುವ ಹಾಗೂ ಅದರಲ್ಲಿ ಸೇರ್ಪಡೆಯನ್ನು ಮಾಡಿಕೊಳ್ಳುವ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದ ಶೇಕಡಾ 60ರಷ್ಟು ಬಿಪಿಎಲ್ ಕಾರ್ಡುಗಳನ್ನು ನೀಡಬೇಕಾಗಿತ್ತು, ಆದರೆ ಶೇಕಡ 80ರಷ್ಟು ಬಿಪಿಎಲ್ ಕಾರ್ಡುಗಳನ್ನು ವಿತರಿಸಿದ್ದಾರೆ. ಆರೋಗ್ಯದ ವಿಚಾರದಲ್ಲಿ ಅಷ್ಟೇ ಅಲ್ಲದೆ ಹೊಸ ಹೊಸ ಯೋಜನೆಗಳ ಅಲಾನುಭವಿಗಳಾಗಲು ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿದೆ ಹಾಗಾಗಿ ಜನರು ಕೂಡ ರೇಷನ್ ಕಾರ್ಡ್ ನೋಂದಣಿಯ ಬಗ್ಗೆ ಬೇಡಿಕೆಯನ್ನು ಇಡುತ್ತಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿ ಇದ್ದ ಕಾರಣ ರೇಷನ್ ಕಾರ್ಡಿಗೆ ಹೊಸ ಸೇರ್ಪಡೆ ಹಾಗೂ ತಿದ್ದುಪಡಿಯನ್ನು ನಿಲ್ಲಿಸಲಾಗಿತ್ತು ಎಲೆಕ್ಷನ್ ಮುಗಿದು ಈಗಾಗಲೇ ಎರಡು ತಿಂಗಳು ಕಳೆದಿದೆ ಆದರೂ ಕೂಡ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಟ್ಟಿಲ್ಲ ಇದರಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಪಡಿತರ ಚೀಟಿಯ ಅರ್ಜಿ ಆಹ್ವಾನವನ್ನು ನಿಲ್ಲಿಸಿರುವುದರಿಂದ ಮಧ್ಯವರ್ತಿಗಳಿಗೆ ಸಾಕಷ್ಟು ಲಾಭವಾಗುತ್ತಿದೆ. ರೇಷನ್ ಕಾರ್ಡ್ ಅರ್ಜಿ ಆಹ್ವಾನವನ್ನು ನಾಡಕಛೇರಿ ಗ್ರಾಮ ಒನ್ ಸೈಬರ್ ಕೇಂದ್ರಗಳಲ್ಲಿ ಬಂದ್ ಮಾಡಿದ್ದಾರೆ ಹಾಗಾಗಿ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೇಷನ್ ಕಾರ್ಡ್ ಗೆ ಹೊಸ ಸೇರ್ಪಡೆ ಮಾಡಲು ತಿದ್ದುಪಡಿ ಮಾಡಲು ಅಲೆಯುತ್ತಿದ್ದಾರೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಕೆಲವರು ಅರ್ಜಿ ಹಾಕಿಸಿಕೊಡುತ್ತೇವೆ ಎಂದು ಹೇಳಿ ಹಣದ ಸುಲಿಗೆಯನ್ನು ಮಾಡುತ್ತಿದ್ದಾರೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಹಾಗು ತಿದ್ದುಪಡಿ ಬಂದ್ ಆಗಿರುವ ಕಾರಣದಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೊಸ ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ ಸರ್ಕಾರದ ಹಲವು ಸೇವೆಗಳಿಂದ ವಂಚಿತರಾಗುತ್ತಿದ್ದಾರೆ ಅನಾರೋಗ್ಯದ ಸಮಯದಲ್ಲಿ ಪಡಿತರ ಚೀಟಿಯ ಮೂಲಕ ಕಡಿಮೆ ಹಣವನ್ನು ಪಾವತಿ ಮಾಡಬಹುದಾಗಿತ್ತು ಆದರೆ ಈಗ ಪಡಿತರ ಚೀಟಿ ಇಲ್ಲದೆ ರೋಗಿಗಳು ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೆ ಪಡಿತರ ಚೀಟಿ ಇಲ್ಲದೆ ವಿದ್ಯಾರ್ಥಿ ನಿಲಯಗಳಿಗೆ ಸೇರಲು ಸಾಧ್ಯವಾಗುವುದಿಲ್ಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮುಂತಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಹಲವಾರು ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಿದ್ದಾರೆ ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ ಈ ಎಲ್ಲಾ ವಿಚಾರಗಳನ್ನು ಮನಗಂಡ ಅಧಿಕಾರಿಗಳು ಸದ್ಯದಲ್ಲೇ ರೇಷನ್ ಕಾರ್ಡ್ ಅರ್ಜಿ ಪ್ರಾರಂಭಿಸುವ ಸಲುವಾಗಿ ಚರ್ಚಿಸುತ್ತಿದ್ದಾರೆ.

ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!

0

 

 

ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳ (Electric Vehicle) ಬಳಕೆ ಉತ್ತೇಜಿಸಲು ಸರ್ಕಾರ (Government) ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ, ಒಂದೆಡೆ ಭಾರತದಲ್ಲಿ ಈ ರೀತಿ ಎಲೆಕ್ಟ್ರಿಕಲ್ ವಾಹನಗಳನ್ನು ಉತ್ಪಾದನೆ ಮಾಡುವಂತಹ ಕಂಪನಿಗಳಿಗೆ ನೆರವು ನೀಡಿ, ಜನಸಾಮಾನ್ಯರಿಗೂ ಕೂಡ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸಲಿ ಎನ್ನುವ ಕಾರಣದಿಂದ ಗ್ರಾಹಕರಿಗೂ ಸಬ್ಸಿಡಿ (Subsidy) ಸೌಲಭ್ಯ ಕೊಟ್ಟು ಸಹಾಯ ಮಾಡುತ್ತಿದೆ.

ಸರ್ಕಾರದ ಈ ಯೋಜನೆ ಹಿಂದಿನ ಮೂಲ ಉದ್ದೇಶ ಭಾರತದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಬೇಕು ಎನ್ನುವುದು ಎಂದರೆ ತಪ್ಪಾಗಲಾರದು, ಇದರೊಂದಿಗೆ ಪರೋಕ್ಷವಾಗಿ ಇಂಧನ ತೈಲಗಳ ಕೊರತೆಯನ್ನು ನೀಗಿಸುವುದು ಸಹ ಆಗಿದೆ. ಈ ರೀತಿ ನಾನು ಉದ್ದೇಶಕ್ಕಾಗಿ ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರ್ ಬಳಸುವವರಿಗೆ ಸರ್ಕಾರ ಉತ್ತೇಜನ ಕೊಡುತ್ತಿದೆ.

ಈಗಾಗಲೇ ಇರುವ ಇಂಧನ ಚಾಲಿತ ವಾಹನಗಳನ್ನು ಎಲೆಕ್ಟ್ರಿಕಲ್ ವಾಹನಗಳನ್ನಾಗಿ ಕನ್ವರ್ಟ್ ಮಾಡಲು ಕೂಡ ಸರ್ಕಾರ ಆಸಕ್ತಿ ತೋರಿದೆ. ಒಟ್ಟಿನಲ್ಲಿ 2027 ಕಾಲಘಟ್ಟಕ್ಕೆ ಭಾರತದಲ್ಲಿ ರಸ್ತೆ ಮೇಲೆ ಸಂಚರಿಸುವ ವಾಹನಗಳಲ್ಲಿ 30% ಅಧಿಕ ಎಲೆಕ್ಟ್ರಿಕಲ್ ವಾಹನಗಳೇ ಇರಬೇಕು ನಿಧಾನವಾಗಿ ಆ ಪ್ರಮಾಣ ಇನ್ನೂ ಹೆಚ್ಚು ಮಾಡಬೇಕು ಎನ್ನುವುದು ಸರ್ಕಾರದ ಮಹತ್ವದ ಆಶಯ.

ಎಲೆಕ್ಟ್ರಿಕಲ್ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಭಾರತದಲ್ಲಿ ಮೊದಲ ಬಾರಿಗೆ ಮಾರ್ಕೆಟ್ ಗೆ ಬಂದಾಗಲೂ ಕೂಡ fame Subsidy 2 ಬಗ್ಗೆ ಕ್ರಮ ಕೈಗೊಂಡು ಸರ್ಕಾರ ನೆರವು ನೀಡುತ್ತಲೇ ಬಂದಿದೆ. ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಬಳಕೆಗೆ ಬ್ರೇಕ್ ಹಾಕಿ ಆ ಪ್ರಮಾಣವನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೆಲ ದಿನಗಳಾದ ನಂತರ ಈ ಸಬ್ಸಿಡಿ ಯೋಜನೆಗೆ ಬ್ರೇಕ್ ಬಿದ್ದಿತ್ತು.

ಭಾರತ ಸರ್ಕಾರ Fame Subsidy 2 ಅನ್ನು ಪರಿಚಯಿಸಿದ ವೇಳೆ ಅದರ ಅನ್ವಯ ಎಲೆಕ್ಟ್ರಿಕ್ ಕಾರುಗಳ 1kwh ಮೇಲೆ ಹತ್ತು ಸಾವಿರ ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿತ್ತು. ಆದರೆ ಈ ಪ್ರಯೋಜನವನ್ನು ಪಡೆಯಬೇಕೆಂದರೆ ಖರೀದಿಸುವ ಎಲೆಕ್ಟ್ರಿಕ್ ಬೈಕ್ ಅಥವಾ ಕಾರ್ ಗಳು 50% ಭಾರತದಲ್ಲಿ ನಿರ್ಮಿತವಾಗಿರ ಬೇಕಾಗಿತ್ತು. ಕೆಲವೊಂದು ಎಲೆಕ್ಟ್ರಿಕ್ ವಾಹನಗಳ ಕಂಪನಿಗಳು ವಿದೇಶಗಳಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಅವುಗಳನ್ನು ಭಾರತದಲ್ಲಿ ಫಿಕ್ಸ್ ಮಾಡಿ ಮಾರಾಟ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದವು.

ಈ ಸುದ್ದಿ ನೋಡಿ;- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

ಈ ರೀತಿ ಚಟುವಟಿಕೆಗಳ ಮೇಲೆ ಭಾರತ ಸರ್ಕಾರ ನಿರ್ಬಂಧವನ್ನು ಹೇರಿತ್ತು. ಅದೇ ಸಮಯದಲ್ಲಿ fame Subsidy 2 ಅನ್ನು ನಿಲ್ಲಿಸಿತ್ತು.
ಆದರೆ ಈಗ ಕೇಳಿ ಬರುತ್ತಿರುವ ಸದ್ಯದ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೇಲೆ Fame Subsidy 3 ಅನ್ನು ನೀಡುವಂತಹ ಮೊದವ ಪ್ರಯತ್ನವನ್ನು ಮಾಡಲು ಹೊರಟಿದೆ ಎಂಬುದಾಗಿ ತಿಳಿದು ಬಂದಿದೆ.

ಈ ಬಾರಿ ಸಿಗಬಹುದಾದ ಸಬ್ಸಿಡಿ ಮೊತ್ತದ ರಿಯಾಯಿತಿಯನ್ನು ಏನಿರಬಹುದು ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಗಳು ಸಿಕ್ಕಿಲ್ಲ ಆದರೆ ಹಿಂದಿಗಿಂತಲೂ ಹೆಚ್ಚಿನ ಹಣವನ್ನು ಈ ಬಾರಿ ಸಬ್ಸಿಡಿ ರೂಪದಲ್ಲಿ ಸರ್ಕಾರ ನೀಡಲು ನಿರ್ಧರಿಸಿ ಎಂದಷ್ಟೇ ತಿಳಿದು ಬಂದಿದೆ. ಹಾಗೆಯೇ ಈ ಬಾರಿ ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲೆ ಕೂಡ ಈ ನಿಯಮವನ್ನು ಅಳವಡಿಸುವ ಸಿದ್ಧತೆ ನಡೆಯುತ್ತಿದೆ ಎಂಬುದಾಗಿ ಕೂಡ ಮಾಹಿತಿ ದೊರೆತಿದೆ. ಒಂದು ವೇಳೆ ಮತ್ತೊಮ್ಮೆ ಸರ್ಕಾರದ ಸಬ್ಸಿಡಿ ಸಿಕ್ಕರೆ ಮಧ್ಯಮ ವರ್ಗದವರಿಗೆ ಬಹಳ ಅನುಕೂಲ ಆಗಲಿದೆ, ಈ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಆಗುವವರೆಗೂ ಕೂಡ ಕಾದು ನೋಡೋಣ.

ಕಾಂಗ್ರೆಸ್ ಸರ್ಕಾರದಿಂದ ಮತ್ತಷ್ಟು ಯೋಜನೆಗಳ ಘೋಷಣೆ, ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷದವರೆಗೆ ಉಚಿತ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 20 ಲಕ್ಷದವರೆಗೆ ಸಾಲ ಸೌಲಭ್ಯ.!

0

ರಾಜ್ಯದಲ್ಲಿ ಈಗ ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly election-2023) ರಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು (Congress) ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಪ್ರಣಾಳಿಕೆಯಲ್ಲಿ (Manifesto) ಬಳಸಿದ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyaranty Scheme) ಘೋಷಣೆಗಳೇ ಕಾರಣ ಎಂದು ವಿರೋಧ ಪಕ್ಷಗಳು ಮತ್ತು ಜನಸಾಮಾನ್ಯರು ಮಾತನಾಡುತ್ತಲೇ ಇದ್ದಾರೆ.

ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಪಕ್ಷವು ಕೂಡ ಆ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಂತ ಹಂತವಾಗಿ ಎಲ್ಲಾ ಗ್ಯಾರಂಟಿ ಯೋಜನೆಗಳಿಗೂ ಅರ್ಜಿ ಆಹ್ವಾನ ಮಾಡಿ ಆಶ್ವಾಸನೆಗಳನ್ನು ಈಡೇಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂದೆನಿಸಿಕೊಂಡಿದೆ. ಆದರೆ ಇದೆಲ್ಲವೂ ಕೂಡ ಚುನಾವಣೆಯಲ್ಲಿ ಘೋಷಿಸಿದ ಯೋಜನೆಗಳಾಗಿವೆ.

ಈ ಸುದ್ದಿ ನೋಡಿ:- SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

ಇದರ ಹೊರತಾಗಿಯೂ ಕೂಡ ಕಾಂಗ್ರೆಸ್ ಸರ್ಕಾರವು 2023-24ನೇ ಸಾಲಿನ ರಾಜ್ಯಸರ್ಕಾರದ ಬಜೆಟ್ ಮಂಡನೆ ಮಾಡಿ ಹಲವು ಯೋಜನೆಗಳಿಗೆ (State budget) ಅನುದಾನವನ್ನು ನೀಡಿದೆ. ಇದೇ ರೀತಿಯಾಗಿ BJP ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಕೆಲವು ಯೋಜನೆಗಳಿಗೆ ತಿಲಾಂಜಲಿಯನ್ನು ಸಹಾ ನೀಡಿದೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಹೊರತಾಗಿ ಜಾರಿಗೆ ತಂದಿರುವ ಇನ್ನಷ್ಟು ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

ಇದರಲ್ಲಿ ಯುವ ಜನತೆಗೆ, ಸ್ವಂತ ಉದ್ದಿಮೆಯನ್ನು ಆರಂಭಿಸಬೇಕೆನ್ನುವವರಿಗೆ, ಹಿಂದುಳಿದ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೂ ಆರ್ಥಿಕ ನೆರವನ್ನು ನೀಡುವಂತಹ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

● ಅರಿವು ಯೋಜನೆ(Arivu Scheme) :- ಈ ಯೋಜನೆಯ ಮೂಲಕ ವೈದ್ಯಕೀಯ ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ವಾರ್ಷಿಕವಾಗಿ 2% ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದಾಗಿದೆ.

● ವಿದ್ಯಾಸಿರಿ ಯೋಜನೆ(Vidhyasiri Scheme) :- ಹಳ್ಳಿಗಾಡಿನಿಂದ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳನ್ನು ಅವಲಂಬಿಸಿರುತ್ತಾರೆ. ಕೆಲ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಥಿ ನಿಲಯದಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದರೂ ಸೀಟ್ ಸಿಗದೆ ಇದ್ದಲ್ಲಿ ಅಂತಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಖರ್ಚಿಗಾಗಿ ವಾರ್ಷಿಕವಾಗಿ 15 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ.

● ಮೆಟ್ರಿಕ್ ನಂತರದ ವಿದ್ಯಾಭ್ಯಾಸವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಈ ಹಿಂದೆ BJP ಸರ್ಕಾರ ಇದ್ದಾಗ ಇದಕ್ಕೆ ಅನುದಾನ ಸಿಕ್ಕಿರಲಿಲ್ಲ ಈಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವು ಇದನ್ನು ಈ ವರ್ಷದಿಂದ ಮುಂದುವರಿಸುತ್ತಿದೆ.

● ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛೆ ಪಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 20 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸರ್ಕಾರ ಸಾಲ ನೀಡುತ್ತದೆ.

● ವಿದ್ಯಾರ್ಥಿ ನಿಲಯಗಳಲ್ಲಿರುವ ಹೆಣ್ಣು ಮಕ್ಕಳಿಗೆ ಶುಚಿ ಸಂಭ್ರಮ ಕಿಟ್ ನೀಡಲಾಗುತ್ತಿತ್ತು ಈ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.

● ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನತೆಗೆ ಸ್ವಂತ ಉದ್ಯಮ ನಡೆಸುವುದಕ್ಕಾಗಿ ನಾಲ್ಕು ಚಕ್ರದ ಗೂಡ್ಸ್ ವಾಹನಗಳನ್ನು ಖರೀದಿಸಲು ಬಯಸಿದರೆ 3 ಲಕ್ಷ ಸಹಾಯಧನ ನೀಡಲು ನಿರ್ಧರಿಸಿದೆ.

● ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಂತ ಉದ್ಯಮ ಮಾಡಲು ಇಚ್ಛಿಸುವ ಹಿಂದುಳಿದ ವರ್ಗದ ಯುವ ಜನತೆ ಸಾಲ ಪಡೆದಿದ್ದರೆ ವಾಣಿಜ್ಯ ಬ್ಯಾಂಕುಗಳ ಮೂಲಕ 1 ಲಕ್ಷದವರೆಗೆ ಸಹಾಯಧನ ನೀಡಲು ನಿರ್ಧರಿಸಿದೆ.

● ಸೇವ ವಲಯಗಳಲ್ಲಿ (Service Sector) ಉದ್ಯಮ ಆರಂಭಿಸಲು ಇಚ್ಛಿಸುವ ಹಿಂದುಳಿದ ವರ್ಗಗಳಾದ ಪ್ರವರ್ಗ 1, ಪ್ರವರ್ಗ 2A ಗೆ ಸೇರಿದ ಯುವಜನತೆಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೂಲಕ 10 ಕೋಟಿಯವರೆಗೆ ಸಾಲವನ್ನು ಶೇಕಡ 6% ಅಲ್ಲಿ ನೀಡಲಿದೆ.

ಈ ರಾಶಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ, ಸಿಂಹ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತಾ.?

0

 

ಈ ಭೂಮಿ ಮೇಲೆ ಇರುವ ಒಬ್ಬ ವ್ಯಕ್ತಿಗಿಂತ ಮತ್ತು ಒಬ್ಬ ವ್ಯಕ್ತಿ ಬಹಳ ವಿಭಿನ್ನ. ಮನುಷ್ಯಂದ ಮನುಷ್ಯನಿಗೆ ಆತನ ಗುಣ ನಡತೆ ಸ್ವಭಾವ ಆಚಾರ ವಿಚಾರಗಳಿಂದ ಹಿಡಿದು ಆಸಕ್ತಿ ತನಕಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಸೃಷ್ಟಿಯ ವಿಸ್ಮಯ ಎಂದರು ಕೂಡ ತಪ್ಪಾಗಲಾರದು ಅಥವಾ ಭಗವಂತನ ಇಚ್ಛೆಯೇ ಹೀಗಿದೆ ಎಂದು ನಂಬಲುಬಹುದು. ಮನುಷ್ಯ ಹುಟ್ಟಿದ ಘಳಿಗೆ, ಸಮಯ ಮತ್ತು ರಾಶಿ ಹಾಗೂ ನಕ್ಷತ್ರದ ಆಧಾರದ ಮೇಲೆ.

ಅವರ ಗುಣಸ್ವಭಾವಗಳು ಮತ್ತು ಭವಿಷ್ಯ ನಿರ್ಧಾರ ಆಗುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಬಹಳ ಹಿಂದಿಯೇ ತಿಳಿಸಿದ್ದಾರೆ. ಈ ರಾಶಿ ಭವಿಷ್ಯದ ಆಧಾರದ ಮೇಲೆ ದ್ವಾದಶ ರಾಶಿಗಳಲ್ಲಿ 12 ರಾಶಿಗಳಿಗೂ ಕೂಡ ಪ್ರತಿ ರಾಶಿಗಳಿಗೂ ಅವರದ್ದೇ ಆದ ಒಂದಷ್ಟು ಗುಣಗಳು ಇರುತ್ತವೆ. ಇವುಗಳಲ್ಲಿ ಸಿಂಹ ರಾಶಿಯವರ ಗುಣಲಕ್ಷಣಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಈ ಸುದ್ದಿ ನೋಡಿ:- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

ಸಿಂಹ ರಾಶಿಯನ್ನು ರಾಜ ರಾಶಿಯೆಂದೇ ಕರೆಯಬಹುದು. ಯಾಕೆಂದರೆ, ಕಾಡಿನ ರಾಜ ಸಿಂಹ ಹೇಗೋ ಹಾಗೆ ಸಿಂಹ ರಾಶಿಯಲ್ಲಿ ಹುಟ್ಟಿದವರ ಗುಣಲಕ್ಷಣಗಳು ಕೂಡ ಅದನ್ನೇ ಹೋಲುತ್ತದೆ. ಇವರು ಎಲ್ಲರ ಮಧ್ಯೆ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸಿಂಹನಂತೆ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.

ಹಾಗೂ ಆ ಸ್ಥಾನಕ್ಕೆ ಧಕ್ಕೆ ಬರದ ರೀತಿ ಗಂಭೀರವಾಗಿದ್ದು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಶ್ವಾಸಿಯಾಗಿರುತ್ತಾರೆ ಸಿಂಹ ರಾಶಿಯವರು ಹೇಳಿದ ಮಾತು ವೇದವಾಕ್ಯ ಎನ್ನುವಂತಿರುತ್ತದೆ. ಅದೇ ರೀತಿ ಅವರ ಬದುಕನ್ನು ಕಳೆಯುತ್ತಾರೆ. ತುಂಬಾ ಪಾರದರ್ಶಕವಾದ ಇವರ ಗುಣ ಸ್ವಭಾವವನ್ನು ಮೆಚ್ಚಿ ಎದುರಿಗಿರುವ ಯಾರೇ ಆದರೂ ಇವರ ವ್ಯಕ್ತಿತ್ವಕ್ಕೆ ಸೋಲುತ್ತಾರೆ.

ಬಹಳ ಆತ್ಮವಿಶ್ವಾಸ ಹೊಂದಿರುವ ಇವರು ಯಾವುದೇ ವಿಷಯವನ್ನು ಅಷ್ಟು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ. ಜೀವನದಲ್ಲಿ ತಮ್ಮದೇ ಆದ ಹಠಕ್ಕೆ ಬಿದ್ದು ನಿಶ್ಚಯಿಸಿದ್ದನ್ನು ಪೂರ್ತಿ ಮಾಡಿ ತೀರುತ್ತಾರೆ. ಸಿಂಹ ರಾಶಿಯವರು ದೈಹಿಕವಾಗಿ ಕೂಡ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿರುತ್ತಾರೆ ಹಾಗೂ ಮಾನಸಿಕರಾಗಿಯೂ ಕೂಡ ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವಂತಹ ಮನುಷ್ಯರಾಗಿರುತ್ತಾರೆ.

ಈ ಸುದ್ದಿ ನೋಡಿ:- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಚಿಂತೆ ಬೇಡ, ಮನೆಯಿಂದಲೇ ಅರ್ಜಿ ಹಾಕಬಹುದು ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ತಮ್ಮ ಬಳಿ ಸಮಸ್ಯೆಯನ್ನು ಕೇಳಿಕೊಂಡು ಬರುವವರಿಗೆ ಸರಿಯಾದ ನ್ಯಾಯಯುತವಾದ ತೀರ್ಮಾನವನ್ನು ಕೂಡ ಕೊಟ್ಟು ಕಳಿಸುವಂತಹ ವಿಶೇಷ ಗುಣ ಇವರಲ್ಲಿ ಇರುತ್ತದೆ. ಇವರು ಹೇಳುವ ಯಾವುದೇ ಮಾತನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳ ಬಹುದಾದಂತಹ ಅಪಾರಜ್ಞಾನವೂ, ಮುಂದಾಲೋಚನೆ ಮಾಡುವಂತಹ ಗುಣವು ಇವರಲ್ಲಿ ಇರುತ್ತದೆ.

ಸಿಂಹ ರಾಶಿಯವರು 10 ಜನಗಳ ಮಧ್ಯೆ ಇದ್ದರೆ ಕೂಡ ಆಕರ್ಷಣೆಯಾಗುವಂತಹ ವಿಶೇಷ ಶಕ್ತಿಯನ್ನು ಹೊಂದಿರುತ್ತಾರೆ. 12 ರಾಶಿಗಳಲ್ಲಿ ಬಹಳ ವಿಶೇಷವಾದ ಗುಣಸ್ವಭಾವವನ್ನು ಹೊಂದಿರುವವರು ಸಿಂಹ ರಾಶಿಯವರಾಗಿರುತ್ತಾರೆ. ತುಂಬಾ ಸ್ಪಷ್ಟ ನಿಲುಗಳನ್ನು ಇಟ್ಟುಕೊಂಡಿರುವ ಇವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಕೂಡ ಅಲ್ಲಿ ಉನ್ನತ ಸ್ಥಾನಕ್ಕೆ ಇರಲು ಪ್ರಯತ್ನಿಸುತ್ತಾರೆ.

ಕೌಟುಂಬಿಕ ವಿಚಾರದಲ್ಲೂ ಕೂಡ ಕುಟುಂಬದಲ್ಲೇ ಇವರ ಮಾತೆ ಅಂತಿಮವಾಗಿರುತ್ತದೆ. ಆದರೆ ವೈವಾಹಿಕ ಜೀವನದಲ್ಲಿ ಇವರು ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಇವರು ನೋಡಲು ಎಷ್ಟೇ ಒರಟಾಗಿ ಕಂಡರೂ ಕೂಡ ಅಷ್ಟೇ ಮೃದುವಾದ ಮನಸ್ಸುಳವರಾಗಿರುತ್ತಾರೆ ಸ್ನೇಹಿತರು ಕಡಿಮೆ ಇದ್ದರೂ ಶ್ರೇಷ್ಠರಾದವರೊಂದಿಗೆ ಆತ್ಮೀಯವಾಗಿರುತ್ತಾರೆ. ಇವರಿಗೆ ದ್ರೋಹ ಮಾಡಿದವರಿಗು ಕೂಡ ಕ್ಷಮಿಸುವಂತಹ ಉದಾತ್ತ ಗುಣವನ್ನು ಹೊಂದಿದ್ದಾರೆ. ಅವರ ಧರ್ಮ ನಿಷ್ಠೆಯೇ
ಅವರನ್ನು ಸದಾ ಕಾಯುತ್ತದೆ.

SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

0

 

ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ತನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಒಂದೊಳ್ಳೆ ಕಂಪನಿಯಲ್ಲಿ ಅತಿ ಹೆಚ್ಚು ವೇತನವನ್ನು ಪಡೆಯುವ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಹಂಬಲ ಇರುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ತಾವು ಸರ್ಕಾರಿ ಹುದ್ದೆ (Government job) ಕಟ್ಟಿಸಿಕೊಂಡು ಈ ಮೂಲಕ ಸರ್ಕಾರಕ್ಕೆ ಹಾಗೂ ಜನರಿಗೆ ಸೇವೆ ಮಾಡಬೇಕು ಎಂದು ಬಯಸಿರುತ್ತಾರೆ.
.
ಈ ರೀತಿ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಾಗಿರುವವರಿಗೆ (Aspirents) ಪ್ರತಿ ವರ್ಷವೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ನಡೆಸಿ ಸೂಕ್ತ ಅಭ್ಯರ್ಥಿಗಳನ್ನು ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತದೆ. ಈಗ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಧಿಸೂಚನೆ ಹೊರಡಿಸಿ (SSC recruitments) ವಿವಿಧ ವಿಭಾಗದಲ್ಲಿ ಖಾಲಿ ಇರುವ 1324 ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದೆ.

ಈ ಹುದ್ದೆಗಳಿಗೆ ಅರ್ಹತೆ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಪರೀಕ್ಷೆಗಳನ್ನು ಎದುರಿಸಿ ಹುದ್ದೆ ಗಿಟ್ಟಿಸಿಕೊಳ್ಳಬಹುದು. ದೇಶದ ಎಲ್ಲಾ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಹೊರಡಿಸಿರುವ ಅಧಿಸೂಚನೆಯಲ್ಲಿರುವ ವಿದ್ಯಾರ್ಹತೆ ಮತ್ತು ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.

ಹಾಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಳಲಾಗುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ, ಆಯ್ಕೆಯಾಗುವವರಿಗೆ ಸಿಗುವ ವೇತನ ಇತ್ಯಾದಿ ವಿವರಗಳನ್ನು ತಿಳಿಸಿಕೊಡುತ್ತಿದ್ದೇವೆ.

ನೇಮಕಾತಿ ಸಂಸ್ಥೆ:- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC).
ಹುದ್ದೆಗಳ ಹೆಸರು:- ಜೂನಿಯರ್ ಇಂಜಿನಿಯರ್ (JE) ಸಿವಿಲ್ ಇಂಜಿನಿಯರ್ (Civil)
ಮೆಕಾನಿಕ್ ಇಂಜಿನಿಯರ್ (Mechanical)
ಇಲೆಕ್ಟ್ರಾನಿಕ್ ಇಂಜಿನಿಯರ್ (Electronics)

ಒಟ್ಟು ಹುದ್ದೆಗಳ ಸಂಖ್ಯೆ:- 1324.
ಉದ್ಯೋಗ ಸ್ಥಳ:- ಭಾರತದಾತ್ಯಂತ.
ವೇತನ ಶ್ರೇಣಿ:- 35,400 ರಿಂದ 1,12,400.

ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿದ್ಯಾಸಂಸ್ಥೆಯಿಂದ ಸಿವಿಲ್ / ಮೆಕ್ಯಾನಿಕಲ್/ ಇಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

ವಯೋಮಿತಿ:-
● ಸೆಂಟ್ರಲ್ ಪಬ್ಲಿಕ್ ವರ್ಕ್ ಡಿಪಾರ್ಟ್ಮೆಂಟ್ ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 32 ವರ್ಷಗಳು.
● ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 30 ವರ್ಷಗಳು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಶುಲ್ಕ:-
● ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.
● SC/ST ಮತ್ತು ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
● ಉಳಿದ ಅಭ್ಯರ್ಥಿಗಳಿಗೆ 100ರೂ.

ಪರೀಕ್ಷಾ ಕೇಂದ್ರಗಳು:-
ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು ಶಿವಮೊಗ್ಗ, ಹುಬ್ಬಳ್ಳಿ, ಕಲ್ಬುರ್ಗಿ, ಮಂಗಳೂರು, ಉಡುಪಿ ಮತ್ತು ಬೆಳಗಾವಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು SSC ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ಅರ್ಜಿ ಫಾರಂ ನಲ್ಲಿ ಕೇಳುವ ವಿವರಗಳಲ್ಲಿ ಸರಿಯಾದ ಮಾಹಿತಿಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಶುಲ್ಕ ಪಾವತಿಯಾದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ.
● ಭವಿಷ್ಯದ ಬಳಕೆಗಾಗಿ ಸಲ್ಲಿಸಿರುವ ರೆಫರೆನ್ಸ್ ನಂಬರನ್ನು ಬರೆದು ಇಟ್ಟುಕೊಳ್ಳಬೇಕು ಅಥವಾ ಅರ್ಜಿ ಸಲ್ಲಿಕೆ ಪತ್ರವನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.

ಪ್ರಮುಖ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು e-mail ID
● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ನಿವಾಸ ದೃಢೀಕರಣ ಪತ್ರ
● ಇನ್ನಿತರ ಪ್ರಮುಖ ದಾಖಲೆಗಳು.

ಆಯ್ಕೆ ವಿಧಾನ:-
● ಕಂಪ್ಯೂಟರ್ ಆಧಾರಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 26.07.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16.08.2023
● ಅರ್ಜಿ ಶುಲ್ಕ ಪಾವತಿಗೆ ಕಡೇ ದಿನಾಂಕ – 16.08.2023.

ನೀವು ಮಂತ್ರಾಲಯಕ್ಕೆ ಹೋದಾಗ ತಪ್ಪದೆ ರಾಯರ ಬಳಿ ಇದನ್ನು ಬೇಡಿಕೊಳ್ಳಿ.!

0

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಗುರುರಾಯರ ಪವಾಡದ ಹಲವಾರು ಕಥೆಗಳು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಯಾರು ಏನು ಬೇಕು ಎಂದು ಬೇಡಿಕೊಳ್ಳುತ್ತಾರೋ ಅದೆಲ್ಲವನ್ನು ಸಹ ಗುರುರಾಯರು ಕರುಣಿಸುತ್ತಾರೆ ಹೌದು. ಅದು ಕೇವಲ ಹಣಕಾಸು ಆಗಿರಲಿ ಅವರ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುವುದಾಗಿರಲಿ, ನಿಮ್ಮ ಇಷ್ಟಾರ್ಥ ಗಳು ನೆರವೇರುವುದಾಗಿರಲಿ, ಹೀಗೆ ಪ್ರತಿಯೊಂದು ಕೂಡ ಅವರು ಅಂದುಕೊಂಡ ಹಾಗೆ ಎಲ್ಲವೂ ಕೂಡ ನೆರವೇರುತ್ತದೆ.

ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ದೂರದ ಊರುಗಳಿಂದ ದೇಶ ವಿದೇಶಗಳಿಂದ ಗುರುರಾಯರ ದರ್ಶನವನ್ನು ಪಡೆಯಲು ಬರುತ್ತಾರೆ. ಅದೇ ರೀತಿಯಾಗಿ ಗುರುರಾಯರು ಪ್ರತಿಯೊಬ್ಬರಿಗೂ ಕೂಡ ತಾವು ಅಂದುಕೊಂಡಂತಹ ಪ್ರತಿಯೊಂದು ಇಷ್ಟಾರ್ಥಗಳನ್ನು ಕೂಡ ನೆರವೇರಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದಲೇ ಪ್ರತಿಯೊಬ್ಬರು ಗುರುರಾಯರನ್ನು ಎಷ್ಟು ನಂಬಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಸುದ್ದಿ ನೋಡಿ:- ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

ಹೌದು ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಗುರುರಾಯರ ದರ್ಶನವನ್ನು ಪಡೆಯಬೇಕು ಎಂದು ರಾಯರ ಬೃಂದಾವನಕ್ಕೆ ಹೋಗು ತ್ತಾರೆ ಆದರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ. ಬೃಂದಾವನದಲ್ಲಿ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾ ದಂತಹ ಇಷ್ಟಾರ್ಥಗಳನ್ನು ಬೇಡಿಕೊಳ್ಳುವುದಿಲ್ಲ.

ಕೆಲವೊಂದಷ್ಟು ಜನ ತಮ್ಮ ಆರೋಗ್ಯದಲ್ಲಿ ಇರುವಂತಹ ಸಮಸ್ಯೆಯನ್ನು ದೂರ ಮಾಡುವಂತೆ ರಾಯರನ್ನು ಕೇಳಿಕೊಂಡರೆ ಮತ್ತಷ್ಟು ಜನ ನಮ್ಮ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರಲಿ ಎನ್ನುವಂತೆ ಕೇಳುತ್ತಾರೆ. ಇನ್ನು ಕೆಲವೊಂದಷ್ಟು ಜನ ತಮ್ಮ ಮದುವೆಯ ವಿಚಾರವಾಗಿ, ಸಂತಾನದ ವಿಚಾರವಾಗಿ, ಹೀಗೆ ಅವರವರ ಇಷ್ಟಾರ್ಥಗಳನ್ನು ಹೇಳಿಕೊಳ್ಳುವುದರ ಮೂಲಕ ರಾಯರ ದರ್ಶನವನ್ನು ಪಡೆಯಲು ಬೃಂದಾವನಕ್ಕೆ ಬರುತ್ತಾರೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಮೊದಲು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ತಾಪತ್ರಯಗಳು ಇಲ್ಲದೆ ಇರಬೇಕು ಎಂದರೆ. ಮೊದಲು ಅವನಿಗೆ ನೆಮ್ಮದಿ ಸಿಗಬೇಕು. ಹೌದು ಪ್ರತಿಯೊಬ್ಬ ಮನುಷ್ಯ ನಿಗೆ ತನ್ನ ಜೀವನದಲ್ಲಿ ಎಷ್ಟೇ ಹಣಕಾಸು ಎಷ್ಟೇ ಶ್ರೀಮಂತಿಕೆ ಇದ್ದರೂ ಕೂಡ ಕೆಲವೊಮ್ಮೆ ಅವನ ಮನಸ್ಸಿನಲ್ಲಿ ನೆಮ್ಮದಿಯೇ ಇರುವುದಿಲ್ಲ.

ಹೌದು ಹಣಕಾಸು ನಮಗೆ ನೆಮ್ಮದಿಯನ್ನು ಉಂಟುಮಾಡುವುದಿಲ್ಲ. ಬದಲಿಗೆ ನಮ್ಮ ಮನಸ್ಸನ್ನು ಹಾಳುಮಾಡುತ್ತದೆ. ಅಂದರೆ ಪ್ರತಿಯೊಂದ ಕ್ಕೂ ಕೂಡ ಹೆಚ್ಚು ಚಿಂತೆ ಮಾಡುವುದು, ಬೇಡದೆ ಇರುವಂತಹ ವಿಷಯ ದ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು, ಈ ರೀತಿಯಾಗಿ ಮಾಡುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ರಾಯರ ಸನ್ನಿಧಾನಕ್ಕೆ ಹೋದ ಮೇಲೆ ಅಲ್ಲಿ ನಮಗೆ ಹಣಕಾಸು ಬೇಕು ನಮಗೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಬರಬೇಕು ಹೀಗೆಂದು ಕೇಳುವುದು ತಪ್ಪು.

ಬದಲಿಗೆ ಪ್ರತಿಯೊಬ್ಬರೂ ಕೂಡ ರಾಯರ ದರ್ಶನವನ್ನು ಪಡೆಯಲು ಹೋದಂತಹ ಸಂದರ್ಭದಲ್ಲಿ ರಾಯರೇ ನನಗೆ ಯಾವುದೇ ರೀತಿಯ ಹಣಕಾಸಿನ ಅವಶ್ಯಕತೆ ಇಲ್ಲ ಬದಲಿಗೆ ನೀವು ತೋರಿಸಿದಂತಹ ಹಾದಿ ಯಲ್ಲಿ ನಾನು ನಡೆಯುತ್ತೇನೆ. ನನಗೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುವ ಹಾಗೆ ಮಾಡಿ ಎಂದು ಕೇಳಿಕೊಳ್ಳಬೇಕು. ಯಾವುದೇ ಒಬ್ಬ ಮನುಷ್ಯ ಎಷ್ಟೇ ಹಣಕಾಸು ಇದ್ದರೂ ಕೂಡ ಅವನ ಮನಸ್ಸಿಗೆ ನೆಮ್ಮದಿ ಎನ್ನುವುದು ಇರುವುದಿಲ್ಲ.

ಅದರಿಂದ ಅವನು ತನ್ನ ಜೀವನಪರ್ಯಂತ ಹೆಚ್ಚು ಆಲೋಚನೆಯನ್ನು ಮಾಡುತ್ತಾ ಹೆಚ್ಚು ವಿಚಾರದ ಬಗ್ಗೆ ಚಿಂತೆಯನ್ನು ಮಾಡುತ್ತಾ ಇರುತ್ತಾರೆ. ಇದರಿಂದ ಅವನ ಮನಸಿಗೆ ನೆಮ್ಮದಿ ಸಿಗುವು ದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ರಾಯರ ಸನ್ನಿಧಾನಕ್ಕೆ ಹೋ ದಂತಹ ಸಮಯದಲ್ಲಿ ರಾಯರನ್ನು ನನಗೆ ನನ್ನ ದೇಹಕ್ಕೆ ಯಾವುದೇ ಸುಖ ಶಾಂತಿ ಬೇಡ, ಬದಲಿಗೆ ನನ್ನ ಮನಸ್ಸಿಗೆ ನನಗೆ ನೆಮ್ಮದಿ ಸಿಗುವ ಹಾಗೆ ನನಗೆ ಅನುಗ್ರಹಿಸು ತಂದೆ ಎಂದು ಕೇಳಿಕೊಳ್ಳುವುದು ಶ್ರೇಯಸ್ಸು.

ಈ ನಾಲ್ಕು ಜನರು ಸಾಯುವವರೆಗೂ ಬಡವರಾಗಿಯೇ ಇರುತ್ತಾರೆ.!

0

 

ಗರುಡ ಪುರಾಣದಲ್ಲಿ ಮಾನವನ ಕೆಲವು ಅಭ್ಯಾಸಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಈ ಅಭ್ಯಾಸಗಳಿಂದಾಗಿ ಮನುಷ್ಯನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗು ಇದರೊಂದಿಗೆ ಹಣದ ಕೊರತೆಯಿಂದ ಬಡತನವೂ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸಿಕೊಳ್ಳುವುದು ಅವಶ್ಯಕವಾಗಿದೆ.

* ಗರುಡ ಪುರಾಣದ ಪ್ರಕಾರ ಯಾವಾಗಲೂ ಇತರರ ನ್ಯೂನತೆಗಳನ್ನು ಕಂಡುಹಿಡಿಯುವವರು ಸಮಸ್ಯೆಗಳನ್ನು ಎದುರಿಸುತ್ತಾರಂತೆ. ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವಮಾನ ಮಾಡುವ ಜನರ ಮೇಲೆ ತಾಯಿ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳಂತೆ. ಇಂತಹವರ ಮನೆಗೆ ಎಂದಿಗೂ ಲಕ್ಷ್ಮಿದೇವಿ ಪ್ರವೇಶಿಸುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಕಾರಣಕ್ಕೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಬೇರೆಯವರ ನ್ಯೂನತೆಗಳನ್ನು ಕಂಡುಹಿಡಿಯುವುದು ತಪ್ಪು.

ಈ ಸುದ್ದಿ ನೋಡಿ:- ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸುಲಭ ವಿಧಾನ

ಹಾಗೂ ಕೆಲವೊಂದು ಸಂದರ್ಭದಲ್ಲಿ ಬೇರೆಯವರ ಮನಸ್ಸನ್ನು ನೋಯ ಸುವುದು ಕೂಡ ತಪ್ಪು. ಅದರ ಒಂದು ಮಾತಿನಿಂದ ನಾವು ಮುಂದಿನ ದಿನಗಳಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಅಂದರೆ ನಾವು ಅವರ ಮನಸ್ಸನ್ನು ನೋಯಿಸಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ನಾವು ಅನುಭವಿಸಬೇಕಾಗುತ್ತದೆ ಆದ್ದರಿಂದ ಯಾರೂ ಕೂಡ ಯಾರ ಬಗ್ಗೆಯೂ ಎಂತಹದ್ದೇ ಪರಿಸ್ಥಿತಿಯಲ್ಲೂ ಮಾತನಾಡಬಾರದು.

* ಯಾವುದೇ ಒಬ್ಬ ವ್ಯಕ್ತಿಗೆ ಹಣ ಬಂದರೆ ಆತನು ಎಂದಿಗೂ ಹೆಮ್ಮೆಪಡಬಾರದು. ಗರುಡ ಪುರಾಣದ ಪ್ರಕಾರ, ಹಣದ ಬಗ್ಗೆ ಹೆಮ್ಮೆ ಪಡುವ ಜನರ ಬೌದ್ಧಿಕ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ ಮತ್ತು ಕ್ರಮೇಣ ಬಡತನವು ಹರಡಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಎಂತದ್ದೇ ಪರಿಸ್ಥಿತಿಯಲ್ಲಿ ಹಣ ಇದ್ದರೂ ಇಲ್ಲದೆ ಇದ್ದರೂ ಒಂದೇ ರೀತಿಯಾಗಿ ಇರಬೇಕು.

ಹಾಗೂ ಹಣ ಇದ್ದಂತಹ ಸಮಯದಲ್ಲಿ ಒಂದು ರೀತಿಯ ಭಾವನೆ, ಹಣ ಇಲ್ಲದೆ ಇರುವಂತಹ ಸಮಯದಲ್ಲಿ ಒಂದು ರೀತಿಯ ಭಾವನೆಯನ್ನು ಹೊಂದಬಾರದು. ಅದರಲ್ಲೂ ಹಣ ಇಲ್ಲದೆ ಇರುವವರನ್ನು ಯಾವುದೇ ಕಾರಣಕ್ಕೂ ನಾವು ಹೀಯಾಳಿಸಿ ಮಾತನಾಡಬಾರದು. ಹಾಗೂ ನಮ್ಮ ಬಳಿ ಹಣ ಇದೆ ಎಂದು ಗರ್ವವನ್ನು ಸಹ ಪಡಬಾರದು. ಅದರಿಂದ ಮುಂದಿನ ದಿನದಲ್ಲಿ ನಾವೇ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಹಣ ಇದ್ದರೂ ಇಲ್ಲದೆ ಇದ್ದರೂ ಒಂದೇ ರೀತಿಯ ಗುಣ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ.

* ಯಾರ ಮನೆಯಲ್ಲಿ ಶುಚಿತ್ವವಿರುತ್ತದೋ ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿದೇವಿಯು ನೆಲೆಸುತ್ತಾಳಂತೆ. ಹೀಗಾಗಿ ಮನೆಯಲ್ಲಿ ಯಾವಾಗಲೂ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರತಿದಿನ ಸ್ನಾನದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸುವುದು ಸಹ ಅವಶ್ಯಕ. ತಾಯಿ ಲಕ್ಷ್ಮಿದೇವಿ ಕೊಳಕು ಬಟ್ಟೆ ಧರಿಸಿದ್ದಕ್ಕೆ ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳಂತೆ.

ಯಾವುದೇ ಒಬ್ಬ ಮನುಷ್ಯ ಎಂಥದ್ದೇ ಪರಿಸ್ಥಿತಿಯಲ್ಲಿ ಇದ್ದರೂ ಸರಿ ಶುಚಿತ್ವವಾಗಿ ಇರುವುದು ಬಹಳ ಮುಖ್ಯ ಹಾಗೂ ಸದಾಕಾಲ ದೇವರನ್ನು ನೆನಪಿಸಿಕೊಳ್ಳುತ್ತಾ ದೇವರ ಆರಾಧನೆಯನ್ನು ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆಗ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯು ತ್ತಾಳೆ ಬದಲಿಗೆ ಕೊಳಕಾಗಿ ಯಾವುದೇ ದೇವರ ಪೂಜೆ ಆರಾಧನೆ ಮಾಡದೆ ಇದ್ದರೆ ತಾಯಿ ಲಕ್ಷ್ಮಿ ದೇವಿ ನಿಮಗೆ ಒಲಿಯುವುದಿಲ್ಲ.

ಬೆಳಗ್ಗೆ ಬೇಗ ಏಳುವುದು ಕೂಡ ಮಂಗಳಕರ ಎಂದು ಶಾಸ್ತ್ರ ಪುರಾಣ ದಲ್ಲಿ ಹೇಳಲಾಗಿದೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮುಂಜಾನೆ ಬೇಗ ಎದ್ದು ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಸಂತೋಷವಾಗಿರುತ್ತಾಳೆ. ದೀರ್ಘಕಾಲದವರೆಗೆ ಮಲಗುವ ವ್ಯಕ್ತಿಗಳು ಯಾವಾಗಲೂ ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ವಿಷಯಗಳು.!

0

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಪ್ರತಿಯೊಂದು ವಿಷಯ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಆ ವಿಷಯಗಳು ಅವರಿಗೆ ಒಂದಲ್ಲ ಒಂದು ಸಮಯದಲ್ಲಿ ಅನುಕೂಲ ವಾಗುತ್ತದೆ. ಆದರೆ ಕೆಲವೊಂದಷ್ಟು ಜನ ಇಂತಹ ವಿಷಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಆದರೆ ಅವರಿಗೆ ಅಂತಹ ಒಂದು ಪರಿಸ್ಥಿತಿ ಬಂದಾಗ ಆ ಒಂದು ಪರಿಸ್ಥಿತಿಯಲ್ಲಿ ಅದಕ್ಕೆ ಪರಿಹಾರವನ್ನು ಹೇಗೆ ಕಂಡುಕೊಳ್ಳುವುದು ಎನ್ನುವುದು ಸಹ ತಿಳಿಯುವುದಿಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ವಿಷಯವಾಗಿರಬಹುದು ಆ ಒಂದು ವಿಷಯದ ಬಗ್ಗೆ ಆ ಒಂದು ಸಂದರ್ಭದಲ್ಲಿ ಯಾವ ಮಾಹಿತಿಗಳು ನಿಮಗೆ ಸಿಗುತ್ತದೆಯೋ ಅದನ್ನು ನೀವು ಕಲಿತುಕೊಳ್ಳುವುದು ಒಳ್ಳೆಯದು ಏಕೆ ಎಂದರೆ ಅಂತಹ ವಿಷಯಗಳು ಒಂದಲ್ಲ ಒಂದು ಸಮಯದಲ್ಲಿ ತುಂಬಾ ಅನುಕೂಲಕ್ಕೆ ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ

ಯಾವುದೇ ಒಂದು ವಿಷಯದ ಬಗ್ಗೆ ಆದರೂ ಸರಿಯೇ ಅದನ್ನು ಕುಲಂಕುಶವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೌದು ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಮಾಡುವಂತಹ ಕೆಲಸದ ವಿಚಾರವಾ ಗಿರಬಹುದು ಅಥವಾ ಹಣಕಾಸಿನ ವಿಚಾರವಾಗಿರಬಹುದು ಅಥವಾ ನಾವು ಯಾವ ವಸ್ತುವನ್ನು ಹೇಗೆ ಉಪಯೋಗಿಸಿದರೆ ಅದು ನಮಗೆ ತುಂಬಾ ಅನುಕೂಲವಾಗುತ್ತದೆ ಆ ಸಮಸ್ಯೆಯನ್ನು ಹೇಗೆ ಸರಿಪಡಿಸಿ ಕೊಳ್ಳುವುದು ಹೀಗೆ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಒಳ್ಳೆಯದು.

ಹಾಗಾದರೆ ಈ ದಿನ ಯಾವ ಕೆಲವು ವಿಚಾರಗಳು ನಮಗೆ ತುಂಬಾ ಅನುಕೂಲವಾಗು ತ್ತದೆ ಆ ಒಂದು ಸನ್ನಿವೇಶವನ್ನು ನಾವು ಹೇಗೆ ಸರಿಪಡಿಸಿಕೊಳ್ಳಬಹುದು ಅಂತಹ ಮಾಹಿತಿಗಳು ಯಾವುದು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

• ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿದರೆ ಕೂದಲು ಬೆಳ್ಳಗಾಗುವುದಿಲ್ಲ ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.
• ನಿಂಬೆರಸ ಮತ್ತು ತುಪ್ಪವನ್ನು ಉಪಯೋಗಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
• ರಾತ್ರಿ ಮಲಗುವ ಮುನ್ನ ಒಣ ದ್ರಾಕ್ಷಿ ಸೇವಿಸಿದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
• ಬೆಳಗಿನ ತಿಂಡಿಗೆ ಏಲಕ್ಕಿ ಬಳಸುವುದರಿಂದ ಉಸಿರಾಟ ಸರಾಗವಾಗು ತ್ತದೆ.

• ಮೂಲಂಗಿ ರಸವನ್ನು ತೆಗೆದುಕೊಳ್ಳುವುದರಿಂದ ಪಿತ್ತ ಕಡಿಮೆಯಾಗು ತ್ತದೆ.
• ಪ್ರತಿದಿನ ಟೊಮೊಟೊ ತಿನ್ನುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.
• ರಾತ್ರಿ ಸಮಯ ಅನ್ನ ಹೆಚ್ಚು ಸೇವನೆ ಮಾಡಿದರೆ ದಪ್ಪ ಆಗುವಿರಿ.
• ಬಿಳಿ ಉಪ್ಪು ಉಪಯೋಗಿಸಿದರೆ ಹೃದಯ ದುರ್ಬಲವಾಗುತ್ತದೆ.
• ಬೆಳಿಗ್ಗೆ ಎದ್ದ ತಕ್ಷಣ ಹಸಿರು ಹುಲ್ಲು ಅಥವಾ ಹಸಿರು ಬಣ್ಣದ ವಸ್ತು ನೋಡಿದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.
• ಮಕ್ಕಳಿಗೆ ಹಲ್ಲು ಬಿದ್ದಾಗ ಆ ಜಗದಲ್ಲಿ ಟೊಮೊಟೊ ರಸವನ್ನು ಹಚ್ಚಿದರೆ ಹಲ್ಲು ಬೇಗ ಬರುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ಅದ ರಲ್ಲೂ ಆರೋಗ್ಯದ ದೃಷ್ಟಿಯಿಂದ ಇಂತಹ ಕೆಲವೊಂದಷ್ಟು ಮನೆಮದ್ದು ಗಳನ್ನು ಮಾಡಿ ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತೆ ಹಾಗೂ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಆರೋಗ್ಯದ ವಿಚಾರವಾಗಿ ಇರುವಂತಹ ಮಾಹಿತಿಗಳನ್ನು ತಿಳಿದು ಕೊಂಡು ನಿಮ್ಮ ಅಕ್ಕ ಪಕ್ಕದಲ್ಲಿ ಇರುವಂತಹ ಜನರಿಗೂ ಕೂಡ ತಿಳಿ ಹೇಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

* ಇದರ ಜೊತೆ ಬಹಳ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ಆರೋಗ್ಯ ದ ದೃಷ್ಟಿಯಿಂದ ತಮ್ಮ ಜೀವನ ಶೈಲಿ ಹಾಗೂ ಆಹಾರ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹೌದು ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿ ಹಾಗೂ ನಾವು ಅನುಸರಿಸುವ ಜೀವನ ಶೈಲಿಯಿಂದಲೇ ನಮ್ಮ ಆರೋಗ್ಯ ಹಾಳಾಗುತ್ತಿರುವುದು.