Home Blog Page 197

ಕಷ್ಟ ಬಂದಾಗ ಕೊರಗಜ್ಜನನ್ನು ನೆನೆದು ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಈ ರೀತಿ ಹರಕೆ ಕಟ್ಟಿಕೊಳ್ಳಿ.! 3 ದಿನದಲ್ಲಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.!

0

 

ತುಳುನಾಡಿನ ಆರಾಧ್ಯ ದೈವ ವಾಗಿರುವಂತಹ ಕೊರಗಜ್ಜನನ್ನು ಅಲ್ಲಿಯ ಜನರು ಭಕ್ತಿಯಿಂದ ಪೂಜಿಸುತ್ತಾರೆ ಹಾಗೂ ಅವರು ಏನೇ ಕಷ್ಟ ಬಂದರೂ ಕೂಡ ಅಜ್ಜನನ್ನು ನೆನೆದರೆ ಸಾಕು ಅವರ ಕಷ್ಟವೆಲ್ಲವೂ ಕೂಡ ದೂರವಾಗುತ್ತದೆ ಎಂದೇ ಅಲ್ಲಿನ ಜನರು ನಂಬಿದ್ದಾರೆ.ಅದೇ ರೀತಿಯಾಗಿ ಕೊರಗಜ್ಜ ಅಲ್ಲಿಯ ಜನರಿಗೆ ಎಲ್ಲಾ ರೀತಿಯಲ್ಲಿಯೂ ಕೂಡ ಒಳ್ಳೆಯದನ್ನೇ ಮಾಡುತ್ತಿದ್ದಾರೆ.

 

ಹಾಗೂ ಅಜ್ಜನನ್ನು ಕಷ್ಟದ ಸಮಯ ಗಳಲ್ಲಿ ನೆನಪಿಸಿಕೊಂಡರೆ ಸಾಕು ಅವರ ಕಷ್ಟ ದೂರವಾಗುತ್ತದೆ ಎಂದೇ ಹೇಳಬಹುದು. ಅಲ್ಲಿಯ ಜನ ಯಾವುದೇ ರೀತಿಯ ತಪ್ಪನ್ನು ಮಾಡಿದರೆ ಅಲ್ಲಿ ಯಾರು ಕೂಡ ಬೇರೆಯವರು ಶಿಕ್ಷೆ ಕೊಡುವಂತಿಲ್ಲ ಬದಲಿಗೆ ಅಜ್ಜನೇ ಅವರಿಗೆ ಶಿಕ್ಷೆಯನ್ನು ಕೊಡುತ್ತಾನೆ.

ಮನೆಯಲ್ಲಿರುವಂತಹ ಯಾವುದೇ ಸಮಸ್ಯೆಗಳನ್ನು ಅಂದರೆ ನೀವೇನಾ ದರೂ ಬೆಲೆ ಬಾಳುವಂತಹ ಆಭರಣಗಳನ್ನು ಕಳೆದುಕೊಂಡಿದ್ದರೆ, ಅನಾರೋಗ್ಯದ ಸಮಸ್ಯೆ, ವಾಮಾಚಾರ ಮಾಡಿದ್ದರೆ ಹೀಗೆ ಇನ್ಯಾವುದೇ ರೀತಿಯ ಸಮಸ್ಯೆ ಎದುರಾಗಿದ್ದರು ಕೂಡ ಆ ಸಮಸ್ಯೆಗಳನ್ನು ಅಜ್ಜನ ಬಳಿ ಹೇಳುತ್ತಾ ನೀವು ಹರಕೆ ಮಾಡಿದರೆ ಸಾಕು ನೀವು ಕಳೆದುಕೊಂಡಿರು ವಂತಹ ಬೆಲೆಬಾಳುವ ಆಭರಣಗಳು ನಿಮಗೆ ತಲುಪುತ್ತದೆ ಎಂದೇ ಹೇಳಬಹುದು.

ಅದರಲ್ಲೂ ಬೇರೆಯವರು ಯಾರಾದರೂ ಕಳ್ಳತನ ಮಾಡಿದ್ದರೆ ಅವರಾಗಿಯೇ ಬಂದು ಅಜ್ಜನಲ್ಲಿ ಕ್ಷಮೆಯನ್ನು ಕೇಳುತ್ತಾರೆ. ಈ ರೀತಿಯಾದಂತಹ ಘಟನೆಗಳು ಅಲ್ಲಿ ಹಲವಾರು ಬಾರಿ ನಡೆದಿದೆ ಅದೇ ರೀತಿಯಾಗಿ ಈ ರೀತಿಯಾಗಿ ತಪ್ಪು ಮಾಡಿದವರಿಗೆ ಅಲ್ಲಿ ಕೋರ್ಟ್ ಮೆಟ್ಟಿಲೇರಿಸುವುದಿಲ್ಲ ಬದಲಿಗೆ ಎಲ್ಲರೂ ಕೂಡ ಅಜ್ಜನ ಸನ್ನಿಧಾನದಲ್ಲಿಯೇ ಆ ವ್ಯಕ್ತಿಗೆ ತಕ್ಕ ಶಿಕ್ಷೆಯನ್ನು ಕೊಡುತ್ತಾರೆ.

ಯಾರೇ ಏನೇ ಕಷ್ಟ ಎಂದು ಹೋದರು ಕೂಡ ಅಜ್ಜ ಯಾವುದನ್ನು ಕೂಡ ಇಲ್ಲ ಎಂದು ಹೇಳುವುದಿಲ್ಲ. ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಅಜ್ಜನಲ್ಲಿ ಹರಕೆ ಕಟ್ಟಿ ಬರುತ್ತಾರೆ. ಅದೇ ರೀತಿಯಾಗಿ ತಮ್ಮ ಹರಕೆ ಸಂಪೂರ್ಣವಾದ ನಂತರ ಅಜ್ಜನಿಗೆ ಇಷ್ಟವಾದಂತ ಚಕ್ಕಲಿ ಹಾಗೂ ಶೇಂದಿ ತಂಬಾಕು ಈ ರೀತಿಯಾದ ಪದಾರ್ಥಗಳನ್ನು ಕೊಡುವುದರ ಮೂಲಕ ಅಜ್ಜನಲ್ಲಿ ಹರಕೆಯನ್ನು ಒಪ್ಪಿಸಿ ಬರುತ್ತಾರೆ.

ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಅಜ್ಜನ ಮೂಲ ಸಾನಿಧ್ಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ನೀವು ಹರಕೆ ಮಾಡಿದರೆ, ನಿಮ್ಮ ಎಲ್ಲ ಸಂಕಷ್ಟಗಳು ಕೂಡ ದೂರವಾಗುತ್ತದೆ ಹಾಗಾದರೆ ಈ ದಿನ ಕೇವಲ ಒಂದು ರೂಪಾಯಿ ನಾಣ್ಯದಿಂದ ಹೇಗೆ ಅಜ್ಜನಲ್ಲಿ ಹರಕೆಯನ್ನು ಕಟ್ಟಿಕೊಳ್ಳುವುದು ಎಂದು ತಿಳಿಯೋಣ.

ಮನೆಯ ಸದಸ್ಯರಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾಗಿದ್ದರೆ ಅಥವಾ ಯಾರಿಗೆ ಹಣಕಾಸಿನ ತೊಂದರೆ ಇರುತ್ತದೆ ಅಥವಾ ಬೇರೆ ಯಾರಾದರೂ ನಿಮ್ಮ ಮೇಲೆ ವಾಮಾಚಾರ ಮಾಡಿದರೆ ಅವರು ಒಂದು ರೂಪಾಯಿ ನಾಣ್ಯವನ್ನು ಹಿಡಿದು ನಿಮ್ಮ ತಲೆಯಿಂದ 9 ಬಾರಿ ದೃಷ್ಟಿ ತೆಗೆಯ ಬೇಕು ನಂತರ ಅದನ್ನು ಹಿಡಿದು ಅಜ್ಜನನ್ನು ಪ್ರಾರ್ಥಿಸುತ್ತಾ.

ನನ್ನಲ್ಲಿರುವ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಅಜ್ಜ ನನ್ನ ಸಮಸ್ಯೆ ದೂರ ಆದ ತಕ್ಷಣ ನಿಮ್ಮ ಮೂಲ ಕ್ಷೇತ್ರವಾದಂತಹ ಕುತ್ತಾರಿಗೆ ಬಂದು ನಾನು ಈ ಹರಕೆಯನ್ನು ಒಪ್ಪಿಸಿ ಬರುತ್ತೇನೆ ಎಂದು ಪ್ರಾರ್ಥನೆ ಮಾಡಿ. ಈ ರೀತಿಯಾಗಿ ನೀವು ಸಂಜೆಯ ಸಮಯ ಮಾಡಿ ಹರಕೆ ಕಟ್ಟಿ ಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ರಕ್ಷಣಾ ಇಲಾಖೆಯಲ್ಲಿ ಉದ್ಯೋಗವಕಾಶ, 10ನೇ ತರಗತಿಯಾಗಿದ್ದರು ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…

0

ಕರ್ನಾಟಕದಾತ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿಸುದ್ದಿ. ಯಾಕೆಂದರೆ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಇರುವ ಖಾಲಿ ಇರುವ ಸಂಸ್ಥೆಯಲ್ಲಿ ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಭಾರತದಾದ್ಯಂತ ಇರುವ ಎಲ್ಲಾ ಹತ್ತನೇ ತರಗತಿ ಮತ್ತು ITI ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ವಯಸ್ಸಿನ ವಿಚಾರದಲ್ಲಿ ಕೂಡ ಬಾರಿ ವಿನಾಯಿತಿ ಇದೆ. 15 ವರ್ಷ ವಯಸ್ಸಿನವರು ಕೂಡ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ಪಡೆಯಬಹುದಾಗಿದೆ. ಆಕರ್ಷಕ ಸ್ಟೈಫಂಡ್ ಪಡೆಯುವ ಸೌಲಭ್ಯವೂ ಲಭ್ಯವಿದೆ.

ಆದ್ದರಿಂದ ಈ ಅಂಕಣದಲ್ಲಿ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆ ಹಾಗೂ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಇದನ್ನು ಓದಿದ ಬಳಿಕ ಆಸಕ್ತರು ಅರ್ಜಿ ಸಲ್ಲಿಸಿ ಹುದ್ದೆ ಪಡೆದುಕೊಳ್ಳಿ.

ಇಲಾಖೆ:- ರಕ್ಷಣಾ ಇಲಾಖೆ
ಉದ್ಯೋಗ ಸಂಸ್ಥೆ:- ಹೆವಿ ವೆಹಿಕಲ್ಸ್ ಫ್ಯಾಕ್ಟರಿ,
ಯೂನಿಟ್ ಆಫ್ ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಗೌರ್ಮೆಂಟ್ ಆಫ್ ಇಂಡಿಯಾ ಎಂಟರ್ಪ್ರೈಸಸ್.

ಉದ್ಯೋಗ ಸ್ಥಳ:- ತಮಿಳುನಾಡು.
ಒಟ್ಟು ಹುದ್ದೆಗಳ ಸಂಖ್ಯೆ:- 168.

ಹುದ್ದೆಗಳ ವಿವರ:-
● ಫಿಟ್ಟರ್ (NON ITI ) – 32
● ಮೆಕ್ಯಾನಿಸ್ಟ್ (NON ITI ) – 36
● ವೆಲ್ಡರ್ (NON ITI ) – 24
● ಎಲೆಕ್ಟ್ರಿಷಿಯನ್ (EX ITI ) – 10
● ಮೆಕ್ಯಾನಿಕ್ (EX ITI) – 38
● ವೆಲ್ಡರ್ (EX ITI ) – 28

ಸ್ಟೈಫಂಡ್ – ಆಯಾ ಗ್ರೇಡ್ ಗೆ ಅನುಸಾರವಾಗಿ ಪ್ರತಿ ತಿಂಗಳು 6,000 ರಿಂದ 8,050 ತರಬೇತಿ ಭತ್ಯೆಯಾಗಿ ಸಿಗಲಿದೆ.

ಶೈಕ್ಷಣಿಕ ವಿದ್ಯಾರ್ಹತೆ:-
● ಹೆವಿ ವೆಹಿಕಲ್ಸ್ ಫ್ಯಾಕ್ಟರಿ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳು SSLC, 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ITI ಅನ್ನು ಪೂರ್ತಿಗೊಳಿಸಿರಬೇಕು.
● SSLC ಪರೀಕ್ಷೆಯಲ್ಲಿಕನಿಷ್ಠ 50% ಅಂಕದೊಂದಿಗೆ ಪಾಸ್ ಆಗಿರುವುದು ಕಡ್ಡಾಯವಾಗಿದೆ.

ವಯೋಮಿತಿ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ ಕನಿಷ್ಠ ವಯೋಮಾನ 15 ವರ್ಷಗಳು.
● ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 24 ವರ್ಷಗಳು.
● OBC ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು.
● SC/ST ಗೆ ಸೇರಿದ ಅಭ್ಯರ್ಥಿಗಳಿಗೆ 29 ವರ್ಷಗಳು.

ಅರ್ಜಿ ಶುಲ್ಕ:-
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ 100 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.
● SC/ST ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಮರುಪಾವತಿಯಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮತ್ತು ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರು ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು
●:ಆಫ್ಲೈನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:-
ಚೀಫ್ ಜನರಲ್ ಮ್ಯಾನೇಜರ್,
ಹೆವಿ ವೆಹಿಕಲ್ಸ್ ಫ್ಯಾಕ್ಟರಿ,
ಅವಡಿ, ಚೆನ್ನೈ – 600054
ತಮಿಳುನಾಡು.

ಪ್ರಮುಖ ದಿನಾಂಕಗಳು:-
● ಅಧಿಸೂಚನೆ ಹೊರಡಿಸಿದ ದಿನಾಂಕ :- 10.06.2023
● ಅರ್ಜಿ ಸಲ್ಲಿಸುವಿಕೆ ಆರಂಭ ದಿನಾಂಕ :- 15.05.2023
● ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ :- 16.06.2023.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ರಾತ್ರಿ ಮಲಗುವಾಗ 1 ರೂಪಾಯಿ ನಾಣ್ಯವನ್ನು ಈ ಜಾಗದಲ್ಲಿ ಇಟ್ಟು ಮಲಗಿ ಸಾಕು, ನಿಮ್ಮ ಬಡತನ ಕಳೆದು ಶ್ರೀಮಂತರಾಗುತ್ತಿರಾ.!

0

 

ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲಾ ಒಂದು ಸಮಸ್ಯೆ ಇರುತ್ತದೆ. ಕೆಲವೊಮ್ಮೆ ನಮ್ಮ ತಪ್ಪಿನಿಂದ ನಾವು ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುತ್ತೇವೆ ಇದಕ್ಕೆ ಬೇಗ ಪರಿಹಾರ ಸಿಗುತ್ತದೆ ಸಹ ಇದನ್ನು ಹೇಗಾದರೂ ಮಾಡಿ ಪರಿಹಾರ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ತಪ್ಪುಗಳು ಏನು ಇಲ್ಲದಿದ್ದರೂ ಕೂಡ ಸಮಸ್ಯೆಗಳು ಬಂದು ಬಾಧಿಸುತ್ತವೆ. ಕೆಲವು ಸಮಸ್ಯೆಗಳಿಗೆ ಎಷ್ಟೇ ಪರಿಹಾರ ಹುಡುಕಿದರೂ ಕೂಡ ಅದು ಸಾಲ್ವ್ ಆಗುವುದಿಲ್ಲ.

 

ಬದಲಾಗಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಈ ರೀತಿ ಪದೇ ಪದೇ ಸಮಸ್ಯೆಗಳು ನಮ್ಮನ್ನು ಕಾಡಿ ನಮ್ಮ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಎಂದರೆ ಅದು ಹಿತಶತ್ರುಗಳ ದೃಷ್ಟಿಯಿಂದ ಆಗಿರುತ್ತದೆ. ಜೀವನದಲ್ಲಿ ನಾವು ಒಳ್ಳೆಯ ಹಂತಕ್ಕೆ ಬೆಳೆದಾಗ ಕುಟುಂಬದ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಕುಟುಂಬದಲ್ಲಿ ಸಂಬಂಧಗಳು ಹಾಳಾಗಿ ಕಿರಿಕಿರಿ ಶುರು ಆಗುತ್ತದೆ.

ಗಂಡ ಹೆಂಡತಿ ನಡುವೆ ಜಗಳ ಆಗುತ್ತದೆ. ಮಕ್ಕಳಿಗೆ ಓದುವ ಆಸಕ್ತಿ ಹೋಗುತ್ತದೆ, ಸಾಲ ಭಾದೆ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ವಿಪರೀತ ಕಾಡುತ್ತವೆ. ಈ ರೀತಿ ದೃಷ್ಟಿ ದೋಷಗಳಿಂದ ಆದ ಸಮಸ್ಯೆಗಳಿಗೆ ಮನೆಯಲ್ಲಿ ನಾವು ಸರಳ ತಂತ್ರಗಳನ್ನು ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸರಳ ಪರಿಹಾರಗಳನ್ನು ಮಾಡಿ ಸಮಸ್ಯೆಯಿಂದ ಆಚೆ ಬರಬಹುದು.

ಆದರೆ ನೂರಕ್ಕೆ ನೂರರಷ್ಟು ನಂಬಿಕೆಯಿಂದ ದೇವರ ಮೇಲೆ ಹೊಣೆ ಹಾಕಿ ನಮಗೆ ಬಂದ ಕಷ್ಟವನ್ನು ಎದುರಿಸುತ್ತೇವೆ ಇದನ್ನು ಪರಿಹಾರ ಮಾಡಿಕೊಳ್ಳುವ ಶಕ್ತಿ ಕೊಡು, ಮಾರ್ಗ ತಿಳಿಸಿ ಎಂದು ಪ್ರಾರ್ಥಿಸಿ ನಂತರ ಈ ತಂತ್ರವು ಫಲಿಸುವಂತೆ ಮಾಡಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿ ಇದನ್ನು ಮಾಡಬೇಕು. ಈ ರೀತಿ ನಿಮ್ಮ ಕುಟುಂಬದಲ್ಲೂ ಕೂಡ ಪದೇಪದೇ ಇಲ್ಲ ಸಲ್ಲದ ವಿಷಯಕ್ಕೆ ಸಮಸ್ಯೆ ಹಾಕಿ ನೆಮ್ಮದಿ ಹಾಳಾಗುತ್ತಿದ್ದರೆ ನಿಮ್ಮ ಕುಟುಂಬಕ್ಕಾಗಿರುವ ಕೆಟ್ಟ ದೃಷ್ಟಿಯನ್ನು ಕಳೆಯಲು ಈ ಒಂದು ತಂತ್ರವನ್ನು ಪಾಲಿಸಿ.

ಒಂದು ದಿನ ಮನೆಯನ್ನು ಶುದ್ಧ ಮಾಡಿ ನೀವು ಮಡಿ ಉಟ್ಟುಕೊಂಡು ದೇವರ ಪೂಜೆ ಮಾಡಿ ನಂತರ ಒಂದು ಕೆಂಪುವಸ್ತ್ರವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಲೋಟ ಉಪ್ಪನ್ನು ಹಾಕಿ ನಂತರ ಐದು ನಾಣ್ಯಗಳನ್ನು ಹಾಕಿ ಜೊತೆಗೆ ಮೂರು ರೀತಿಯ ಹೂವನ್ನು ಇಟ್ಟು ಅರಿಶಿನ ಕುಂಕುಮ ಕೂಡ ಹಾಕಿ ಒಂದು ತುಳಸಿ ಎಲೆಯನ್ನು ಕೂಡ ಹಾಕಿ.

ನಂತರ ಇದನ್ನು ಗಂಟು ಕಟ್ಟಿ ದೇವರಕೋಣೆಯಲ್ಲಿ ಇಟ್ಟು ಭಕ್ತಿಯಿಂದ ಪ್ರತಿದಿನವೂ ಕೂಡ ಮೂರು ವಾರಗಳವರೆಗೆ ಹೂವ ನೀರು ಇಟ್ಟು ಪೂಜೆ ಮಾಡಿ. ಮೂರು ವಾರಗಳವರೆಗೆ ದೇವರ ಕೋಣೆಯಲ್ಲಿ ಅಥವಾ ನೀವು ನಿಮ್ಮ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪ್ರತಿನಿತ್ಯವೂ ಕೂಡ ತಪ್ಪಿದೇ ಹೂವ ನೀರು ಇಟ್ಟು ಪೂಜೆ ಮಾಡಿ.

ಮೂರುವಾರ ಆದ ಬಳಿಕ ಇದನ್ನು ತೆಗೆದು ಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಟ್ಟು ಬನ್ನಿ. ಇಷ್ಟು ಮಾಡಿದರೆ ನಿಮ್ಮ ಮನೆಗಾಗಿರುವ ಕೆಟ್ಟ ದೃಷ್ಟಿ ಪರಿಹಾರವಾಗಲು ಆರಂಭಿಸುತ್ತದೆ. ಹೆಚ್ಚಿನ ಜನರು ಹಣಕಾಸಿನ ಸಮಸ್ಯೆ ಇದ್ದಾಗ ಅದರ ಪರಿಹಾರಕ್ಕಾಗಿ ಈ ತಂತ್ರವನ್ನು ಮಾಡುತ್ತಾರೆ. ಮನೆಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ನಿವಾರಣೆ ಆದರೆ ಕುಟುಂಬದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654

ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತಾ.? ಈ ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

0

 

ಇದುವರೆಗೆ ಎಲ್ಲರೂ ಕೂಡ ಬಿದ್ದು ಬಿಲ್ ಕಟ್ಟುವಾಗ ಮಾತ್ರ ಒಂದು ತಿಂಗಳಿಗೆ ಎಷ್ಟು ಚಾರ್ಜಸ್ ಬಂದಿದೆ ಎಂದು ನೋಡುತ್ತಿದ್ದರೆ ಹೊರತು ಅದರಲ್ಲಿರುವ ಅಂಕಿ ಅಂಶಗಳ ಬಗ್ಗೆ ಗಮನ ಕೊಟ್ಟಿದ್ದು ತೀರಾ ಕಡಿಮೆ. ಎಲ್ಲೋ ಕೆಲವೊಂದಿಷ್ಟು ಮಂದಿ ಮಾತ್ರ ವಿದ್ಯುತ್ ದರ ಹೆಚ್ಚಾದಾಗ ವಿಡಿಯೋದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ಹೆಚ್ಚು ಚರ್ಚೆ ಆದಾಗ ಯೂನಿಟ್ ಎನ್ನುವ ಪದವನ್ನು ಕೇಳಿರಬಹುದು ಅಷ್ಟೇ.

 

ಆದರೆ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ತನ್ನು ಪ್ರತಿ ಕುಟುಂಬಕ್ಕೂ ಉಚಿತವಾಗಿ ಕೊಡುವುದಾಗಿ ಹೇಳಿತ ಅಲ್ಲಿಂದ ಎಲ್ಲರೂ ತಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತಿದೆ ಎಂದು ತಲೆ ಕೆಡಿಸಿಕೊಂಡು ಲೆಕ್ಕ ನೋಡುತ್ತಿದ್ದಾರೆ. ಅಲ್ಲದೆ ಹಳೆಯ ತಿಂಗಳುಗಳ ಕರೆಂಟ್ ಬಿಲ್ ತೆಗೆದು ಇದುವರೆಗೂ ನಾವು ಪ್ರತಿ ತಿಂಗಳು ಎಷ್ಟು ಯೂನಿಟ್ ವಿದ್ಯುತ್ ಖರ್ಚು ಮಾಡಿದ್ದಕ್ಕಾಗಿ ಎಷ್ಟು ಹಣ ಕಟ್ಟಿದ್ದು ಎನ್ನುವ ಲೆಕ್ಕ ನೋಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರವು ಚುನಾವಣೆ ಪ್ರಚಾರ ವೇಳೆ ಕೊಟ್ಟಿದ್ದ ಮಾತಿನಂತೆ ಕರ್ನಾಟಕವನ್ನು ಕತ್ತಲೆಯಿಂದ ಮುಕ್ತ ಮಾಡುವ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಅಡಿ ಇನ್ನು ಮುಂದೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡಲಿದೆ. ಇದಕ್ಕೆ ತಾತ್ವಿಕ ಆದೇಶ ಪತ್ರ ಹೊರ ಬಿದ್ದಿದ್ದರು ಕೂಡ ಅಧಿಕೃತ ಆದೇಶ ಪತ್ರ ಹಾಗೂ ಇದರ ಮಾರ್ಗಸೂಚಿಗಳು ಮತ್ತು ಕಂಡಿಶನ್ ಗಳ ಬಗ್ಗೆ ಜೂನ್ 1ನೇ ತಾರೀಖಿನಂದು ಪ್ರತ್ಯೇಕ ಆದೇಶ ಪತ್ರ ಹೊರಡಿಸಿ ತಿಳಿಸಲಿದ್ದೇವೆ ಎಂದು ಮುಖ್ಯಮಂತ್ರಿಗಳು ಕಾಲಾವಕಾಶ ತೆಗೆದುಕೊಂಡಿದ್ದಾರೆ.

ಈಗ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಸ್ಥರು ಕೂಡ ತಮಗೂ ಇದು ಫ್ರೀಯಾಗಿ ಸಿಗಲಿದೆಯಾ ಎಂದು ಕ್ರಾಸ್ ಚೆಕ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಕೂಡ ನಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚು ಮಾಡುತಿದ್ದೇವೆ ಎನ್ನುವ ಲೆಕ್ಕ ಸಿಕ್ಕರೆ ತಿಂಗಳಿಗೆ 200 ಯೂನಿಟ್ ಒಳಗೆ ಬಳಕೆ ಮಾಡಲು ಜನರಿಗೂ ಕೂಡ ಅನುಕೂಲ ಆಗುತ್ತದೆ. ಅದಕ್ಕಾಗಿ ಈ ಅಂಕಣದಲ್ಲಿ ಪ್ರತಿದಿನವೂ ನಾವು ಹೇಗೆ ನಮ್ಮ ಮೀಟರ್ ಬಾಕ್ಸ್ ನೋಡಿ ನಾವು ಬಳಸಿರುವ ವಿದ್ಯುತ್ತನ್ನು ಲೆಕ್ಕ ಹಾಕಬಹುದು ಎನ್ನುವ ಸುಲಭ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ.

ಮೊದಲೆಲ್ಲ ವೀಲ್ ರನ್ನಿಂಗ್ ರೀತಿಯಲ್ಲಿ ಕರೆಂಟ್ ಬಿಲ್ ರನ್ ಆಗುತ್ತಿತ್ತು. ಈಗ ನಾವು ಓಡಿಸುತ್ತಿರುವ ವಿದ್ಯುತ್ ಲೆಕ್ಕಾಚಾರ ಡಿಜಿಟಲ್ ಮಾಪನದ ಮೂಲಕ ಅಳೆಯಲ್ಪಡುತ್ತಿದೆ. ಇದರಲ್ಲಿ ಹಲವಾರು ಅಕ್ಷರಗಳು ಓಡುತ್ತಿರುತ್ತದೆ ಐದು ನಿಮಿಷಗಳ ಕಾಲ ನಾವು ಮೀಟರ್ ಬಾಕ್ಸ್ ನೋಡುವದರಿಂದ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಯಾಕೆಂದರೆ, ಇಂಗ್ಲೀಷ್ ನ A ಅಕ್ಷರದಿಂದ ಬರುವುದು ಎಷ್ಟು ಆಂಪೈರ್ ವಿದ್ಯುತ್ ಎನ್ನುವುದನ್ನು ಸೂಚಿಸುತ್ತದೆ ನಂತರ ದಿನಾಂಕ ಬರುತ್ತದೆ ಪ್ರತಿದಿನವೂ ಕೂಡ ಇದು ಬದಲಾಗುತ್ತಿರುತ್ತದೆ.

ಇದರಲ್ಲಿ ದಿನಾಂಕ ತಿಂಗಳು ಹಾಗೂ ಇಸವಿ ಕೂಡ ಕೂಡಿರುತ್ತದೆ ನಂತರ ಬರುವುದೇ Kw/h. ಇದು ಎಷ್ಟು ವಿದ್ಯುತ್ ರನ್ ಆಗುತ್ತಿದೆ ಎಂದು ತೋರುತ್ತದೆ ಇದು ಪ್ರತಿಕ್ಷಣಕ್ಕೂ ಬದಲಾಗುತ್ತದೆ. ವಿದ್ಯುತ್ ಬಿಲ್ ಸಂಗ್ರಹಕಾರರು ಬಂದಾಗ ಅವರು ಇದೆಲ್ಲವನ್ನು ಒಟ್ಟಾರೆಯಾಗಿ ಒಂದು ತಿಂಗಳಿಗೆ ಲೆಕ್ಕ ಹಾಕಿ ಕರೆಂಟ್ ಬಿಲ್ಲನ್ನು ಕೊಟ್ಟು ನಮಗೆ ಹೋಗುತ್ತಾರೆ. ಹೀಗೆ ಪ್ರತಿದಿನವೂ ಕೂಡ ವಿದ್ಯುತ್ ಮಾಪನದಲ್ಲಿ ರನ್ ಆಗುವ ಸಂಖ್ಯೆಯನ್ನು ಬರೆದಿಟ್ಟುಕೊಂಡು ಮರುದಿನದ ಅಂತ್ಯದಲ್ಲಿ ಕೂಡ ಅದನ್ನು ಬರೆದಿಟ್ಟುಕೊಂಡು ಹಿಂದಿನ ದಿನದ ಕೌಂಟನ್ನು ಕಳೆದರೆ ಈ ದಿನ ಎಷ್ಟು ವಿದ್ಯುತ್ ಬಳಕೆ ಮಾಡಿದ್ದೇವೆ ಎನ್ನುವ ಲೆಕ್ಕ ಸಿಗುತ್ತದೆ.

 

ನೇಲ್ ಕಟರ್ ನಲ್ಲಿರುವ ಎಕ್ಸ್ಟ್ರಾ ಕಟರ್ ಗಳನ್ನು ಏನಕ್ಕೆ ಬಳಸುತ್ತಾರೆ ಗೊತ್ತ.?

0

 

 

ಪ್ರತಿನಿತ್ಯ ಬಳಸುವ ಎಷ್ಟೋ ವಸ್ತುಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನವನ್ನು ಕೊಟ್ಟಿರುವುದಿಲ್ಲ. ಅತಿ ಹೆಚ್ಚಾಗಿ ಬಳಸುವ ವಸ್ತುಗಳ ಸಂಪೂರ್ಣ ಮಾಹಿತಿಯು ನಮಗೆ ಗೊತ್ತಿರುವುದೇ ಇಲ್ಲ. ಯಾರಾದರೂ ಅಚಾನಕ್ಕಾಗಿ ಪ್ರಶ್ನೆ ಕೇಳಿದಾಗ ಮಾತ್ರ ಅಯ್ಯೋ ಇಷ್ಟು ದಿನಗಳ ವರೆಗೆ ನಾವು ಇದರ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲವಲ್ಲ ಎನಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ನಾವು ಪ್ರತಿನಿತ್ಯ ಬಳಸುವ ಒಂದು ಅವಶ್ಯಕತೆ ಎಂದರೆ ಅದು ನೇಲ್ ಕಟರ್.

ಪ್ರತಿನಿತ್ಯ ಕೂಡ ನಾವು ಇದನಕ ಬಳಸಲಿಲ್ಲ ಎಂದರೂ ಸಹಾ ವಾರಕ್ಕೊಮ್ಮೆ ಆದರೂ ಪ್ರತಿಯೊಬ್ಬರೂ ಕೂಡ ಇದನ್ನು ಬಳಸೇ ಬಳಸುತ್ತಾರೆ. ಈ ರೀತಿ ನೇಲ್ ಕಟರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನಮಗೆ ಗೊತ್ತಿದೆಯೇ ಎಂದರೆ ಖಂಡಿತವಾಗಿ ಗೊತ್ತುವುದಿಲ್ಲ. ಇದನ್ನು ನಾವು ಬರಿ ಉಗರು ಕತ್ತರಿಸುವುದಕ್ಕೆ ಮಾತ್ರ ಉಪಯೋಗಿಸುತ್ತಿರುತ್ತೇವೆ.

ಈ ರೀತಿ ನೇಲ್ ಕಟರ್ ಮೂಲಕ ನೇಲ್ ಕಟ್ ಮಾಡುವುದನ್ನು ಮಾತ್ರ ಅಲ್ಲದೆ ಬೇರೆ ಉಪಯೋಗಗಳನ್ನು ಕೂಡ ಪಡೆದುಕೊಳ್ಳಬಹುದು. ನೇಲ್ ಕಟರ್ ಅಲ್ಲಿ ನೇಲ್ ಕಟ್ ಮಾಡುವ ಸಾಧನದ ಜೊತೆಗೆ ಇನ್ನು ಎರಡು ಮೂರು ಬ್ಲೇಡ್ಗಳು ಇರುವುದನ್ನು ನಾವು ಕಾಣಬಹುದು. ಇದರಲ್ಲಿ ಒಂದು ಹೆಣ್ಣು ಮಕ್ಕಳು ತಮ್ಮ ನೇಲ್ ಅನ್ನು ಶಾರ್ಪ್ ಮಾಡಿಕೊಳ್ಳಲು ಬಳಸುವ ಸಾಧನ ಆಗಿರುತ್ತದೆ.

ಅದನ್ನು ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಬ್ಬರು ಕೂಡ ಬಳಸುತ್ತಾರೆ. ಉಗುರನ್ನು ಕಟ್ ಮಾಡಿದ ಮೇಲೆ ಅದನ್ನು ಸರಿಯಾಗಿ ಫಿನಿಶಿಂಗ್ ಮಾಡಲು ಈ ಶಾರ್ಪರನ್ನು ಬಳಸಿಕೊಳ್ಳುತ್ತಾರೆ. ಅದನ್ನು ಹೊರತುಪಡಿಸಿ ಇನ್ನೂ ಎರಡು ಹೆಚ್ಚುವರಿ ಆಗಿ ಬ್ಲೇಡ್ ಗಳು ಅಥವಾ ಬ್ಲೇಡ್ ರೂಪದ ಸಾಧನವನ್ನು ನಾವು ಕಾಣಬಹುದು. ಮಕ್ಕಳಲ್ಲಿ ನೇಲ್ ಕಟರ್ ಅಲ್ಲಿ ಇದು ಇಲ್ಲದೆ ಇದ್ದರೂ ದೊಡ್ಡವರ ನೇಲ್ ಕಟರ್ ಅಲ್ಲಿ ಖಂಡಿತವಾಗಿಯೂ ಇರುತ್ತದೆ.

ಮತ್ತೆರಡು ಸಾಧನಗಳಲ್ಲಿ ಒಂದು ಚಾಕುವಿನ ರೀತಿ ವಿನ್ಯಾಸವನ್ನು ಹೊಂದಿರುತ್ತದೆ, ಇದನ್ನು ಚಿಕ್ಕ ಚಾಕು ಎಂದು ಕೂಡ ಕರೆಯಬಹುದು. ಚಾಕುವಿನಷ್ಟೇ ಶಾರ್ಪ್ ಆಗಿ ಇಲ್ಲದಿದ್ದರೂ ಕೂಡ ಇದು ಚಾಕುವಿನ ರೀತಿಯೇ ಇದೆ. ಇದನ್ನು ಕೊಟ್ಟಿರುವ ಕಾರಣ ಉಗುರಿನಲ್ಲಿ ಯಾವುದಾದರೂ ಸಣ್ಣ ವಸ್ತು ಸಿಕ್ಕಿಹಾಕಿಕೊಂಡಿದ್ದಾರೆ ಅದನ್ನು ತೆಗೆಯಲು ಇದನ್ನು ಬಳಸಬಹುದು ಅಥವಾ ಉಗುರಿನ ಕೊಳೆಯನ್ನು ಕೂಡ ತೆರೆಯಲು ಇದನ್ನು ಬಳಸಬಹುದು.

ಜೊತೆಗೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ದೃಷ್ಟಿಯಿಂದ ಕೂಡ ಇದನ್ನು ಕೊಡಲಾಗಿದೆ ಎನ್ನಬಹುದು. ಯಾಕೆಂದರೆ ಚಾಕುವನ್ನು ಇಟ್ಟುಕೊಂಡು ಹೋಗಲಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಪರ್ಸಲ್ಲಿ ನೇಲ್ ಕಟರ್ ಇರುವುದರಿಂದ ಅವರಿಗೆ ಸಮಸ್ಯೆ ಆದ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಇದನ್ನು ಬಳಸಲಿ ಎನ್ನುವ ಉದ್ದೇಶದಿಂದ ಮ್ಯಾನುಫ್ಯಾಕ್ಚರಿಂಗ್ ಅಲ್ಲಿ ಈ ರೀತಿ ಡಿಸೈನ್ ಮಾಡಲಾಗಿದೆ.

ಇನ್ನೊಂದು ಬಾಟಲ್ ಓಪನರ್ ರೀತಿ ಇರುತ್ತದೆ. ಇದು ನಾವು ಹೊರಗೆ ಹೋದಾಗ ಓಪನರ್ ಸಿಗದೆ ಪರದಾಡುವ ಕಷ್ಟವನ್ನು ತಪ್ಪಿಸುತ್ತದೆ. ಇದನ್ನು ಬಾಟಲುಗಳನ್ನು ಓಪನ್ ಮಾಡಲು ಬಳಸಬಹುದು. ಇದರಿಂದಲೂ ಕೂಡ ಉಗುರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದನ್ನು ಸುಲಭವಾಗಿ ತೆಗೆಯಬಹುದು.

ಈ ರೀತಿಯಾಗಿ ಒಂದು ವಸ್ತು ಒಂದಕ್ಕಿಂತ ಹೆಚ್ಚು ಕೆಲಸಕ್ಕೆ ಉಪಯೋಗಕ್ಕೆ ಬರಲಿ ಎನ್ನುವ ಉದ್ದೇಶದಿಂದ ಈ ರೀತಿ ಡಿಸೈನ್ ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ಇನ್ನು ಬೇರೆ ಉದ್ದೇಶಗಳಾಗಿ ಇವುಗಳನ್ನು ನೀವು ಬಳಸುತ್ತಿದ್ದರೆ ಅದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಅಡ್ರೆಸ್ ತಿದ್ದುಪಡಿ ಮಾಡುವ ವಿಧಾನ.!

0

 

ಜನನ ಮತ್ತು ಮರಣ ನೋಂದಣಿ ಮಾಡಿಸುವುದು ಈಗ ಭಾರತದಲ್ಲಿ ಕಡ್ಡಾಯ ಕಾನೂನಾಗಿದೆ. ಈ ದಾಖಲೆ ಪತ್ರಗಳು ಒಂದಲ್ಲ ಒಂದು ಕಾರಣಕ್ಕಾಗಿ ಬಳಕೆ ಆಗುತ್ತವೆ. ಮಗುವಿನ ಶಾಲೆ ದಾಖಲಾತಿಯಿಂದ ಹಿಡಿದು ಹಲವಾರು ವಿಷಯಗಳಿಗೆ ಮುಖ್ಯ ಆಧಾರವಾಗಿ ಈ ಜನನ ಪ್ರಮಾಣ ಪತ್ರವನ್ನು ಪಡೆಯಲು ಜನನ ನೋಂದಣಿಯನ್ನು ಮಗು ಹುಟ್ಟಿದ ಸಮಯದಲ್ಲಿಯೇ ಪ್ರತಿಯೊಬ್ಬ ಪೋಷಕರು ಕೂಡ ಮಾಡಬೇಕು.

 

ಈ ರೀತಿ ಪಡೆದ ಜನನ ಪ್ರಮಾಣ ಪತ್ರದಲ್ಲಿ ಹಲವಾರು ದೋಷಗಳು ಉಂಟಾಗಿರುತ್ತವೆ. ಕೆಲವೊಮ್ಮೆ ಮಗುವಿನ ಹೆಸರನ್ನೇ ತಿದ್ದುಪಡಿ ಮಾಡಸಬೇಕಾದ ಸಂದರ್ಭ ಬರುತ್ತದೆ, ಕೆಲವೊಮ್ಮೆ ಪೋಷಕರ ಹೆಸರುಗಳು ತಪ್ಪಾಗಿ ಎಂಟ್ರಿ ಆಗಿರುತ್ತವೆ ಅಥವಾ ವಿಳಾಸವನ್ನು ಬದಲಾಯಿಸುವ ಸನ್ನಿವೇಶ ಬರುತ್ತದೆ. ಇಂತಹ ಸಮಯಗಳಲ್ಲಿ ಯಾವೆಲ್ಲಾ ತಿದ್ದುಪಡಿಗಳಿಗೆ ಕಾನೂನಿನಲ್ಲಿ ಅವಕಾಶ ಇದೆ ಮತ್ತು ಅದನ್ನು ಹೇಗೆ ಮಾಡಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಜನನ ಪ್ರಮಾಣ ಪತ್ರದಲ್ಲಿ ಈ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಬಹುದು:-
● ಮಗುವಿನ ಹೆಸರು ತಿದ್ದುಪಡಿ ಮತ್ತು ಮಗುವಿನ ಹೆಸರಿನ ಬದಲಾವಣೆ.
● ತಂದೆ ಮತ್ತು ತಾಯಿಯ ಹೆಸರು ತಿದ್ದುಪಡಿ
● ವಿಳಾಸ ತಿದ್ದುಪಡಿ

ಜನನ ಪ್ರಮಾಣ ಪತ್ರ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:-
● ಈ ಹಿಂದೆ ಮಾಡಿಸಿರುವ ಮಗುವಿನ ಹಳೆಯ ಜನನ ಪ್ರಮಾಣ ಪತ್ರ
● ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
● ಒಂದು ಈ ಸ್ಟ್ಯಾಂಪ್ ಪೇಪರ್ ಅಫಿಡವಿಟ್ ಮಾಡಿಸಬೇಕು.
● ಆ ಅಫಿಡವಿಟ್ ಅಲ್ಲಿ ತಿದ್ದುಪಡಿ ಯಾವ ಕಾರಣಕ್ಕಾಗಿ ಮಾಡಿಸುತ್ತಿದ್ದೀರಾ ಈ ಹಿಂದೆ ಜನನ ಪ್ರಮಾಣ ಪತ್ರದಲ್ಲಿ ಅದು ಯಾವ ರೀತಿ ಇತ್ತು ಈಗ ಅದರಲ್ಲಿ ಏನೇನು ತಿದ್ದುಪಡಿ ಆಗಬೇಕು ಎನ್ನುವುದೆಲ್ಲವನ್ನು ಕೂಡ ಸರಿಯಾಗಿ ಬರೆಯಬೇಕು, ಅದರಲ್ಲೂ ಮುಖ್ಯವಾಗಿ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ ನೋಡಿಕೊಳ್ಳಬೇಕು

● ಪುರಸಭೆ ಅಥವಾ ಸಿವಿಲ್ ಕೋರ್ಟ್ ಬಳಿ ಇರುವ ಅಂಗಡಿಗಳಲ್ಲಿ ಈ ಅಫಿಡವಿಟ್ ಮಾಡಿಕೊಡುತ್ತಾರೆ.
● ಜನನ ಪ್ರಮಾಣ ಪತ್ರ ತಿದ್ದುಪಡಿಗಾಗಿಯೇ ಒಂದು ಅರ್ಜಿ ಸಿಗುತ್ತದೆ ಅದನ್ನು ಸಹ ಭರ್ತಿ ಮಾಡಿ ಇವುಗಳ ಜೊತೆ ಸಲ್ಲಿಸಬೇಕು. ಈ ಅರ್ಜಿಯೂ ಸಹ ಪುರಸಭೆ ಅಥವಾ ನಗರಸಭೆಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳಲ್ಲಿ ಸಿಗುತ್ತದೆ.

ತಿದ್ದುಪಡಿ ಪ್ರಕ್ರಿಯೆ:-
● ಈ ರೀತಿ ಭರ್ತಿ ಮಾಡಿದ ಅರ್ಜಿ ಹಾಗೂ ಅದಕ್ಕೆ ಪೂರಕವಾಗಿ ಬೇಕಾದ ದಾಖಲೆಗಳನ್ನು ತೆಗೆದುಕೊಂಡು ನೀವು ಎಲ್ಲಿ ಜನನ ಪ್ರಮಾಣ ಪತ್ರ ಮಾಡಿಸಿದ್ದೀರಿ ಆ ಕಚೇರಿಗೆ ಹೋಗಬೇಕು.
● ಆ ಕಚೇರಿಯಲ್ಲಿಯೇ ಬರ್ತ್ ಸರ್ಟಿಫಿಕೇಟ್ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಕೆ ಆದ ಬಳಿಕ ಪುರಸಭೆ ಆಗಿದ್ದರೆ ನಿಮಗೆ ತಿದ್ದುಪಡಿ ಆದ ಜನನಪ್ರಮಾಣ ಪತ್ರವು ಬೇಗ ಸಿಗುತ್ತದೆ, ಮಹಾನಗರ ಪಾಲಿಕೆಯ ಆಗಿದ್ದರೆ ಸ್ವಲ್ಪ ವಿಳಂಬವಾಗಿ ನಿಮ್ಮ ಜನನ ಪ್ರಮಾಣ ಪತ್ರ ಸಿಗುತ್ತದೆ.

● ನೀವು ಅರ್ಜಿ ಸಲ್ಲಿಸಿದ ಏಳು ದಿನದ ಒಳಗೆ ನಿಮಗೆ ತಿದ್ದುಪಡಿ ಆಗಿ ಹೊಸ ಜನನ ಪ್ರಮಾಣ ಪತ್ರ ಸಿಗುತ್ತದೆ.
● ಪ್ರತಿಪುಟಕ್ಕೂ 5 ರಿಂದ 7 ರೂಪಾಯಿ ಸರ್ಕಾರದಿಂದ ಶುಲ್ಕ ವಿಧಿಸುತ್ತಾರೆ. ನಿಮಗೆ ಎಷ್ಟು ಪ್ರತಿ ಬೇಕು ಅಷ್ಟು ಹಣ ಪಾವತಿ ಮಾಡಿ ಜನನ ಪ್ರಮಾಣ ಪತ್ರಗಳ ಪ್ರತಿ ಪಡೆದುಕೊಳ್ಳಬಹುದು.
ಜನನ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಿಸುವ ಪ್ರಕ್ರಿಯೆಯು ಈ ರೀತಿ ಇರುತ್ತದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

 

APL ರೇಷನ್ ಕಾರ್ಡ್ ರದ್ದು ಪಡಿಸಿ BPL ರೇಷನ್ ಕಾರ್ಡ್ ಮಾಡಿಸುವುದು ಹೇಗೆ ಗೊತ್ತಾ.?

0

 

ಕರ್ನಾಟಕದಲ್ಲಿ ಮೂರು ರೀತಿಯ ರೇಷನ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ. ಅದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಶ್ರೀಮಂತರಿಗೆ APL ರೇಷನ್ ಕಾರ್ಡ್ ಕೊಡಲಾಗುತ್ತದೆ. ಅತಿ ಬಡತನದಿಂದ ಬಳಲುತ್ತಾ ಇರುವವರಿಗೆ AAY ರೇಷನ್ ಕಾರ್ಡ್ ಅಂದರೆ ಅಂತ್ಯೋದಯ ಪಡಿತರ ಚೀಟಿಯನ್ನು ನೀಡಲಾಗುತ್ತದೆ.

 

ಆದರೆ ಕೆಲವೊಮ್ಮೆ APL ಕಾರ್ಡ್ ಇದ್ದವರು ತಮ್ಮ ಕಾರ್ಡನ್ನು BPL ಕಾರ್ಡಿಗೆ ಬದಲಾಯಿಸುವ ಪರಿಸ್ಥಿತಿ ಬರುತ್ತದೆ. ಇಂತಹ ಸಮಯದಲ್ಲಿ APL ಕಾರ್ಡನ್ನು ಹೇಗೆ BPL ಕಾರ್ಡ್ ಗೆ ವರ್ಗಾಯಿಸಬೇಕು ಅಥವಾ ತಮಗಿರುವ APL ಕಾರ್ಡನ್ನು ಹೇಗೆ ರದ್ದು ಮಾಡಬೇಕು ಎನ್ನುವ ಮಾಹಿತಿ ಎಲ್ಲರಿಗೂ ತಿಳಿದಿರುವುದಿಲ್ಲ.

ಅದಕ್ಕಾಗಿ ಈ ಅಂಕಣದಲ್ಲಿ ಈ ಮಾಹಿತಿ ಜೊತೆ ಈ ರೀತಿ APL ಕಾರ್ಡನ್ನು ರದ್ದು ಮಾಡಿ BPL ಕಾರ್ಡ್ ಪಡೆಯುವುದರಿಂದ ಏನೆಲ್ಲಾ ಅನುಕೂಲಗಳು ಸಿಗಲಿವೆ ಎನ್ನುವುದನ್ನು ತಿಳಿಸುತ್ತಿದ್ದೇವೆ. ಇದರ ಜೊತೆ APL ಕಾರ್ಡ್ ಅನ್ನು ರದ್ದುಪಡಿಸಲು ದಾಖಲೆಗಳು ಏನೇನು ಕೊಡಬೇಕು ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಕೂಡ ತಿಳಿಸಿಕೊಡುತ್ತಿದ್ದೇವೆ.

ಅಂದುಕೊಂಡಂತೆ APL ಕಾರ್ಡನ್ನು ರದ್ದುಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ, APL ಕಾರ್ಡನ್ನು ಯಾಕೆ ರದ್ದುಪಡಿಸಬೇಕು ಎನ್ನುವುದಕ್ಕೆ ಸೂಕ್ತ ಕಾರಣವನ್ನು ಕೊಟ್ಟು ಅರ್ಜಿ ಬರೆದು ಸರ್ಕಾರಕ್ಕೆ ಸಲ್ಲಿಸಬೇಕು, ಉದ್ದೇಶ ಸರಿಯಾಗಿದ್ದರೆ ಮಾತ್ರ ಇದಕ್ಕೆ ಅನುಮತಿ ಸಿಗುತ್ತದೆ.

APL ಕಾರ್ಡ್ ರದ್ದುಪಡಿಸಲು ಬೇಕಾಗುವ ದಾಖಲೆಗಳು:-
● APL ಕಾರ್ಡ್ ಅಲ್ಲಿ ಇರುವ ಕುಟುಂಬದ ಯಜಮಾನರ ಆಧಾರ್ ಕಾರ್ಡ್ ಪ್ರತಿ.
● ಒರಿಜಿನಲ್ APL ರೇಷನ್ ಕಾರ್ಡ್
● 20 ರೂಪಾಯಿಯ ಇ-ಸ್ಟ್ಯಾಂಪ್ ಪೇಪರ್ ಅಲ್ಲಿ ಘೋಷಣಾ ಪತ್ರ ಬರೆದು ವಕೀಲರಿಂದ ನೋಟರಿ ಮಾಡಿಸಿಕೊಳ್ಳಬೇಕು.
● ಕೃಷಿ ಅಧಿಕಾರಿಗಳಿಂದ ಪಡೆದ ಕೃಷಿ ಧೃಡೀಕರಣ ಪತ್ರ (ಈ ವರದಿಯನ್ನು ಪಡೆಯಲು ನಿಮ್ಮ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನು ಇಲ್ಲವೆಂದು ಅಥವಾ ಒಂದು ವೇಳೆ ಜಮೀನು ಇದ್ದಲ್ಲಿ ವಿಸ್ತೀರ್ಣ ಎಷ್ಟಿದೆ ಎಂದು ಧೃಡೀಕರಿಸುವ ಪತ್ರ ತೆಗೆದುಕೊಳ್ಳಬೇಕು).
● ಬಿಳಿ ಹಾಳೆಯಲ್ಲಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಬರೆಯಬೇಕು.

ಅರ್ಜಿ ಬರೆಯುವ ವಿಧಾನ:-
● ಗೆ, ವಿಳಾಸದಲ್ಲಿ ತಹಶೀಲ್ದಾರ್ ಕಚೇರಿ ಎಂದು ಬರೆದು ನಿಮ್ಮ ಜಿಲ್ಲೆಯ ಮತ್ತು ಗ್ರಾಮದ ಹೆಸರನ್ನು ಬರೆಯಿರಿ.
● ವಿಷಯ APL ಕಾರ್ಡ್ ರದ್ದು ಪಡಿಸುವ ಬಗ್ಗೆ ಎಂದು ಬರೆಯಿರಿ.
● ನಂತರ ವಿವರವಾಗಿ ನಿಮ್ಮ ಹೆಸರು ಬರೆದು ನೀವು ಕೃಷಿ ಭೂಮಿ ಹೊಂದಿಲ್ಲದಿದ್ದರೂ ಅಥವಾ ಹೊಂದಿದ್ದರೆ ವಿಸ್ತೀರ್ಣವನ್ನು ಬರೆದು ನೀವು ಕಚ್ಚಾ ಮನೆ ಹೊಂದಿರುವ ಕಾರಣ ಬಡತನ ರೇಖೆಗಿಂತ ಕಡಿಮೆ ಇದ್ದರೂ BPL ಕಾರ್ಡಿಗೆ ಅರ್ಜಿ ಸಲ್ಲಿಸಿದಾಗ ತಪ್ಪಾಗಿ APL ಕಾರ್ಡ್ ಮಂಜೂರು ಆಗಿದೆ. ಆದ್ದರಿಂದ ಇದನ್ನು ರದ್ದುಪಡಿಸಿ BPL ಕಾರ್ಡನ್ನು ನೀಡಿ ಸರ್ಕಾರದ ಅನುದಾನಗಳನ್ನು ಪಡೆಯಲು ಅನುಮತಿ ಮಾಡಿಕೊಳ್ಳಬೇಕು ಎಂದು ಕೇಳಿಕೊಳ್ಳಬೇಕು.

● ಎಡಭಾಗದಲ್ಲಿ ಇದಕ್ಕೆ ನೀವು ಪೂರಕವಾಗಿ ನೀಡುತ್ತಿರುವ ಎಲ್ಲಾ ದಾಖಲೆಗಳನ್ನು ಲಗತ್ತುಗಳು ಎಂದು ಬರೆದು ಅವುಗಳ ಹೆಸರನ್ನು ಬರೆಯಬೇಕು.
● ಬಲಭಾಗದಲ್ಲಿ ಧನ್ಯವಾದಗಳೊಂದಿಗೆ ಎಂದು ಬರೆದು ನಿಮ್ಮ ಸಹಿಯನ್ನು ಮಾಡಬೇಕು.

ಈ ರೀತಿಯಾಗಿ ಅರ್ಜಿ ಬರೆದು ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡು ಲಗತ್ತಿಸಿ ನಿಮ್ಮ ತಹಶೀಲ್ದಾರ್ ಕಚೇರಿಯ ಇನ್ವಾರ್ಡ್ ವಿಭಾಗಕ್ಕೆ ಸಲ್ಲಿಸಿದರೆ ಅಧಿಕಾರಿಗಳು ಅರ್ಜಿ ಸ್ವೀಕರಿಸಿ, ನಿಮ್ಮ ಅರ್ಜಿ ಪರಿಶೀಲಿಸಿ, ನಿಮ್ಮ ಮನವಿ ಸರಿಯಾಗಿದ್ದರೆ APL ಕಾರ್ಡ್ ಅನ್ನು ರದ್ದು ಮಾಡಿ BPL ಕಾರ್ಡ್ ಗೆ ಶಿಫಾರಸು ಮಾಡುತ್ತಾರೆ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲ ಸಂತಾನ ಈ ವಾರಗಳಲ್ಲಿ ಜನಿಸಿದ್ದರೆ ಹೆತ್ತವರು ಕೋಟ್ಯಾಧೀಶರಾಗುತ್ತಾರೆ.!

0

 

ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರವು ಈ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇದೆ ಹಾಗೂ ಇದು ಸತ್ಯ ಎನ್ನುವಂತೆ ಜೊತೆಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಪಾಲಿಸುವುದರಿಂದ ಕೆಲವು ಕಷ್ಟ ಸುಖಗಳ ಮುನ್ಸೂಚಿಗಳು ಸಿಗುತ್ತದೆ ಎನ್ನುವುದು ಹಲವರಿಗೆ ಅನುಭವ ಆಗಿದೆ. ಆದ್ದರಿಂದ ಇವುಗಳನ್ನು ಹೊಂದಾಣಿಕೆ ಮಾಡಿಕೊಂಡು ಹೆಸರು ಇಡುವುದು, ಶುಭ ಕಾರ್ಯಗಳನ್ನು ಆರಂಭಿಸುವುದು ಇತ್ಯಾದಿಗಳನ್ನು ಮಾಡುತ್ತಾರೆ.

 

ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿ ನಕ್ಷತ್ರ ಇವುಗಳನ್ನು ಆಧಾರವಾಗಿಟ್ಟುಕೊಂಡು ಹುಟ್ಟಿದ ವಾರದ ಆಧಾರದ ಮೇಲೆ ಸಹ ಭವಿಷ್ಯವನ್ನು ಊಹಿಸಬಹುದು. ಪ್ರತಿಯೊಂದು ನಕ್ಷತ್ರಗಳಿಗೂ ಪ್ರತಿಯೊಂದು ರಾಶಿಗಳಿಗೂ ಕೂಡ ಅವರದ್ದೇ ಆದ ಅಧಿಪತಿಗಳು ಇರುತ್ತಾರೆ. ಹೀಗೆ ನಕ್ಷತ್ರಾಧಿಪತಿ, ರಾಶ್ಯಾಧಿಪತಿ ಇವುಗಳ ಲೆಕ್ಕಾಚಾರ ಸರಿಯಾಗಿ ಹಾಕಿ ತಿಳಿದುಕೊಂಡಿದ್ದೆ ಆದಲ್ಲಿ ಜೀವನದ ಅನೇಕ ಒಳ್ಳೆಯ ಕೆಟ್ಟ ಘಟನೆಗಳ ಮುನ್ಸೂಚನೆಯನ್ನು ತಿಳಿದುಕೊಳ್ಳಬಹುದು.

ಮನೆಯಲ್ಲಿ ಮಗು ಹುಟ್ಟಿದ ವಾರವು ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಗಳಲ್ಲಿ ಹುಟ್ಟಿದವರ ಗುಣಲಕ್ಷಣಗಳು ಮತ್ತು ಅವರು ತರುವ ಅದೃಷ್ಟಗಳು ಬೇರೆ ಬೇರೆ ರೀತಿ ಇರುತ್ತದೆ. ಇದೆಲ್ಲವೂ ಕೂಡ ಸರಿಯಾಗಿ ವರ್ಕ್ ಆಗಬೇಕು ಎಂದರೆ ಮಗುವಿಗೆ ಇಡುವ ಹೆಸರು ಅರ್ಥಬದ್ಧವಾಗಿರಬೇಕು, ಸ್ಟ್ರಾಂಗ್ ಆಗಿರಬೇಕು.

ಹಾಗೆಯೇ ಆ ನೇಮ್ ನಂಬರ್ ಸರಿಯಾಗಿ ಇರಬೇಕು. ಈ ರೀತಿ ಆದಾಗ ವಾರದ ಆಧಾರದ ಮೇಲೆ ಆ ಕುಟುಂಬದ ಭವಿಷ್ಯ ಹೇಗಿದೆ ಎನ್ನುವ ಮಾಹಿತಿ ಹೀಗಿದೆ. ಅದರಲ್ಲೂ ಮೊದಲ ಸಂತಾನವು ಮನೆಗೆ ಬಂದಾಗ ಮನೆ ನಂದನವನ ವಾಗಿರುತ್ತದೆ. ಏಕೆಂದರೆ ಎಲ್ಲರೂ ಸಹ ಈ ರೀತಿ ಮೊದಲ ಮಗುವನ್ನು ಆಗಮನಕ್ಕಾಗಿ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಈ ಮಗು ಬರುವ ಆಧಾರದ ಮೇಲೆ ಆ ಕುಟುಂಬದ ಭವಿಷ್ಯ ನಿರ್ಧಾರ ಆಗುತ್ತದೆ. ಈ ಪ್ರಕಾರವಾಗಿ ಸೋಮವಾರದಂದು ಮಗು ಹುಟ್ಟಿ ಆ ಮಗು ಹೆಣ್ಣು ಮಗು ಆಗಿದ್ದರೆ ಐದರಿಂದ ಆರು ವರ್ಷಗಳು ತಂದೆಗೆ ಸಮಸ್ಯೆ ಇರುತ್ತದೆ. ಸೋಮವಾರದಂದು ಮಗ ಹುಟ್ಟಿದರೆ ತಂದೆಗೆ ವಿಪರೀತ ಯೋಗ ಇರುತ್ತದೆ. ಮಂಗಳವಾರದಂದು ಮಗಳು ಹುಟ್ಟಿದರೆ ತಂದೆಗೆ ಹಾಗೂ ಕುಟುಂಬಕ್ಕೆ ಯೋಗ ಇರುತ್ತದೆ.

ಮದುವೆ ನಂತರ ಗಂಡನಿಗೂ ಸಹ ಆ ಯೋಗ ಬರುತ್ತದೆ. ಬುಧವಾರದಂದು ಮಗ ಹುಟ್ಟಿದರೆ ಆ ಮಗ ಕುಟುಂಬದಿಂದ ವಿದ್ಯಾಭ್ಯಾಸ ಅಥವಾ ಉದ್ಯೋಗದ ಕಾರಣಕ್ಕೆ ದೂರ ಇರುತ್ತಾರೆ. ಆದರೂ ಸಹ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅವರು ಜೀವನದಲ್ಲಿ ಏಳಿಗೆ ಕಾಣುತ್ತಾರೆ. ಗುರುವಾರದಂದು ಮಗ ಅಥವಾ ಮಗಳು ಹುಟ್ಟಿದರೆ ಏಳು ವರ್ಷದಿಂದ ಆ ಕುಟುಂಬಕ್ಕೆ ಹಾಗೂ ಹೆತ್ತವರಿಗೆ ಅದೃಷ್ಟ ಶುರು ಆಗುತ್ತದೆ, ಆದರೆ ನೇಮ್ ನಂಬರ್ ಸರಿಯಾಗಿ ಇರಬೇಕು.

ಶುಕ್ರವಾರದಂದು ಮಗಳು ಜನಿಸಿದರೆ ತಂದೆಗೆ ವಿಪರೀತವಾದ ಆರ್ಥಿಕ ಯೋಗ ಇರುತ್ತದೆ. ಈ ವಾರದಂದು ಮಗ ಜನಿಸಿದರು ಕೂಡ ತಂದೆಗೆ ಬಹಳ ಅದೃಷ್ಟ ಖುಲಾಯಿಸುತ್ತದೆ. ಬಹಳ ವರ್ಷಗಳ ತನಕ ಈ ಸಕ್ಸಸ್ ಅನ್ನು ತಡೆಯಲು ಯಾರಿಗೂ ಕೂಡ ಸಾಧ್ಯವಾಗುವುದಿಲ್ಲ. ಶನಿವಾರದಂದು ಮಗ ಅಥವಾ ಮಗಳು ಜನಿಸಿದರೆ ನಿಧಾನವಾಗಿ ಅವರಿಗೆ ಅದೃಷ್ಟ ಶುರುವಾಗುತ್ತದೆ.

ಆದರೆ ಮಕ್ಕಳ ಹೆಸರಿನಿಂದ ಹಿಡಿದು ಅವರ ಬದುಕಿನಲ್ಲಿ ಆಗಾಗ ಆಗುವ ಘಟನೆಗಳನ್ನು ಗಮನಿಸಿ ಯಾವುದಾದರೂ ಸೂಕ್ಷ್ಮಾತಿಸೂಕ್ಷ್ಮ ದೋಷಗಳಿದ್ದರೆ ಪರಿಹಾರ ಮಾಡಿಸಬೇಕು. ಒಂದು ವೇಳೆ ಈ ವಾರಗಳ ಜನಿಸಿದವರಿಗೆ ಇದು ಅನ್ವಯ ಆಗುತ್ತಿಲ್ಲ ಎಂದರೆ ಅವರ ಹೆಸರಿನಲ್ಲಿ ದೋಷ ಇರುತ್ತದೆ, ಮನೆದೇವರಗಳ ಹರಕೆಗಳು ಬಾಕಿ ಇರುತ್ತವೆ, ಅಥವಾ ಮದುವೆ ದಿನಾಂಕದಲ್ಲಿ ದೋಷಗಳು ಇರುತ್ತವೆ. ಇವುಗಳ ಪರಿಹಾರ ಮಾಡಿಕೊಂಡರೆ ಬಳಿಕ ಎಲ್ಲವೂ ಸುಧಾರಿಸುತ್ತದೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?

0

 

ಈಗ ಕಾನೂನಿನಲ್ಲಿ ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ತಿದ್ದುಪಡಿ ಪ್ರಕಾರ ತಂದೆಯ ಆಸ್ತಿಯಲ್ಲಿ ಹೆಣ್ಣು ಹೆಣ್ಣು ಮಕ್ಕಳಿಗೂ ಕೂಡ ಸಮಾನ ಪಾಲು ಕೊಡಬೇಕು ಎನ್ನುವುದು ತೀರ್ಮಾನವಾಗಿದೆ. ಹೀಗಿದ್ದರೂ ಕೂಡ ಕೆಲವೊಂದು ಸನ್ನಿವೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಅವರ ತಂದೆ ಆಸ್ತಿ ಸಿಗುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳು ಈಗ ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಕೇಸ್ ಹಾಕಿಕೊಂಡು ಅಣ್ಣ-ತಮ್ಮಂದಿರ ಜೊತೆ ತಂದೆಯ ಆಸ್ತಿ ವಿಚಾರಕ್ಕೆ ಕಲಹ ಮಾಡಿಕೊಂಡಿದ್ದಾರೆ.

ಆದರೆ ಇದಕ್ಕೂ ಮುನ್ನ ಹೆಣ್ಣು ಮಕ್ಕಳು ಯಾವ ಯಾವ ಸನ್ನಿವೇಶಗಳಲ್ಲಿ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಅದಕ್ಕಾಗಿ ಈ ಅಂಕಣದಲ್ಲಿ ಕಾನೂನಿನ ಬಗ್ಗೆ ಕೆಲ ಪ್ರಮುಖ ವಿಷಯಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುತಿದ್ದೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಕೂಡು ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹುಟ್ಟಿದಾಗಲಿಂದಲೇ ಹಕ್ಕು ಇರುತ್ತದೆ. ಒಬ್ಬ ತಂದೆಯು ಅವರ ಸ್ವಾಧೀನದಲ್ಲಿರುವ ಆಸ್ತಿಯನ್ನು ಅವರ ತಂದೆ ಅಥವಾ ತಾತನಿಂದ ಪಡೆದಿದ್ದರೆ ಅಂತಹ ಆಸ್ತಿಗಳಲ್ಲಿ ಹೆಣ್ಣು ಮಕ್ಕಳಿಗೆ ಮನೆಯಲ್ಲಿರುವ ಗಂಡು ಮಕ್ಕಳಷ್ಟೇ ಸಮಾನ ಉತ್ತರಾಧಿಕಾರದ ಹಕ್ಕು ಇರುತ್ತದೆ.

ಆದರೆ ಹೆಣ್ಣು ಮಗಳ ತಂದೆಯು ತನ್ನ ಜೀವಿತಾವಧಿಯಲ್ಲಿ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅದು ಅವರ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ ಅಂತ ಆಸ್ತಿಯನ್ನು ಅವರು ಯಾವುದೇ ಅವರ ಇಷ್ಟದ ಹೆಣ್ಣು ಮಕ್ಕಳಿಗೆ ಅಥವಾ ಗಂಡು ಮಕ್ಕಳಿಗೆ ಅಥವಾ ಇನ್ನಾರಿಗಾದರೂ ಕೊಡಬಹುದು. ಹಾಗಾಗಿ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಅವರ ಜೀವತಾವಧಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದೆ ಎಂದು ಹೇಳಲು ಬರುವುದಿಲ್ಲ.

ಕೋರ್ಟಿನಲ್ಲಿ ಕೇಸ್ ಹಾಕಿ ಆಸ್ತಿ ಕೇಳುವ ಅವಕಾಶವೂ ಇರುವುದಿಲ್ಲ. ಇದೇ ನಿಯಮ ಗಂಡು ಮಕ್ಕಳಿಗೂ ಕೂಡ ಅನ್ವಯಿಸುತ್ತದೆ. ಇದರ ಜೊತೆಗೆ ಅವಿಭಜಿತ ಕುಟುಂಬದಲ್ಲಿ ತಂದೆಯ ಆಸ್ತಿಯು ಕುಟುಂಬದ ಸದಸ್ಯರ ನಡುವೆ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳು ತಮಗಿರುವ ಪಾಲನ್ನು ಪ್ರೀತಿ ವಿಶ್ವಾಸಕ್ಕಾಗಿ ಅಣ್ಣನ ತಮ್ಮನಿಗೆ ಬಿಟ್ಟುಕೊಟ್ಟಿದ್ದರೆ ಆಸ್ತಿಯ ಹಕ್ಕಿನ ಮೇಲಿರುವ ವರ್ಗಾವಣೆಯನ್ನು ರಿಲೀಸ್ ಡೀಡ್ ಮಾಡುವ ಮೂಲಕ ಬಿಡುಗಡೆ ಮಾಡಿಕೊಟ್ಟಿದ್ದರೆ.

ಅಥವಾ ಆಸ್ತಿಗೆ ಸಮಾನವಾದ ಬೇರೊಂದು ಆಸ್ತಿಯನ್ನು ಉಡುಗೊರೆ ರೂಪದಲ್ಲಿ ಪಡೆದು ಹಕ್ಕು ಪತ್ರ ಬಿಡುಗಡೆ ಮಾಡಿ ಕೊಟ್ಟಿದ್ದರೆ ಅಂತಹ ಸಮಯದಲ್ಲೂ ಕೂಡ ಮರಳಿ ಅವರು ತಮ್ಮ ಪಾಲಿನ ಆಸ್ತಿಯನ್ನು ಕೇಳಲು ಬರುವುದಿಲ್ಲ. 2005ಕ್ಕೂ ಮೊದಲೇ ಆಸ್ತಿ ಪಾರ್ಟಿಷನ್ ಆಗಿದ್ದರೆ ಕುಟುಂಬ ಸದಸ್ಯರ ನಡುವೆ ತಂದೆ ಆಸ್ತಿಯು ವಿಭಾಗ ಆಗಿ ಹೋಗಿದ್ದರೆ ಈಗ ಅದರ ಮೇಲೆ ಹೆಣ್ಣು ಮಕ್ಕಳು ಕೇಸ್ ಹಾಕಿ ಆಸ್ತಿ ಕೇಳಲು ಆಗುವುದಿಲ್ಲ.

2005ಕ್ಕೂ ಮೊದಲು ತಂದೆಯ ಆಸ್ತಿಯು ಅಣ್ಣ ತಮ್ಮಂದಿರಗಳ ನಡುವೆ ವಿಭಾಗವಾಗಿ ಈಗ ಅವರ ಹೆಸರಿನಲ್ಲಿ ಅದು ರಿಜಿಸ್ಟರ್ ಕೂಡ ಆಗಿ ಹೋಗಿದ್ದರೆ, ಮತ್ತು ಆಗ ವಿಭಾಗ ಆಗುವ ಸಮಯದಲ್ಲಿ ಹೆಣ್ಣು ಮಕ್ಕಳು ಬಾಯಿಮಾತಿನಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಕೂಡ ಈಗ ಅದನ್ನು ತಿರುಗಿಸುವಂತಿಲ್ಲ. ಈಗ ಅದರ ಮೇಲೆ ಅವರು ಕೇಸ್ ಹಾಕಿದರೂ ಕೂಡ ತಂದೆಯ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಹಾಗಾಗಿ ಈ ರೀತಿ ಯಾವುದಾದರೂ ಕಾನೂನಿನ ತೊಡಕು ನಿಮಗೆ ಉಂಟಾಗಿದ್ದರೆ ನಿಮ್ಮ ಪರಿಚಯದ ವಕೀಲರನ್ನು ಸಂಪರ್ಕಿಸುವ ಮೂಲಕ ಸಮಸ್ಯೆಯ ಬಗ್ಗೆ ಚರ್ಚಿಸಿ, ನಂತರ ಕಾನೂನಿನ ನೆರವು ಪಡೆದುಕೊಳ್ಳಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

 

10th ಪಾಸ್ ಆದವರಿಗೆ ಸರ್ವೆ ಇಲಾಖೆಯಲ್ಲಿ ಹುದ್ದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸಂಬಳ 63,200/-

0

 

ಸರ್ವೆ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಹಾಗೂ SSLC ಪಾಸಾದವ್ರು ಅರ್ಜಿ ಸಲ್ಲಿಸಬಹುದಾಗಿದೆ. ಹೌದು, ಸರ್ವೆ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮೋಟಾರ್ ಡ್ರೈವರ್, ವಿವಿಧ ಮೆಕಾನಿಕಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

* ಇಲಾಖೆ ಹೆಸರು: ಸರ್ವೆ ಆಫ್ ಇಂಡಿಯಾ 2023
* ಒಟ್ಟು ಹುದ್ದೆಗಳು: 21 ಹುದ್ದೆಗಳು

ವಿದ್ಯಾರ್ಹತೆ
ಸರ್ವೆ ಆಫ್ ಇಂಡಿಯಾ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 10ನೇ ತರಗತಿ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ
* ಎಸ್ ಸಿ /ಎಸ್ ಟಿ ಅಭ್ಯರ್ಥಿಗಳಿಗೆ 05 ವರ್ಷ
* ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ

ವೇತನಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19900/- ರಿಂದ ರೂ.63200/- ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಾಕ್ಟಿಕಲ್ ಟೆಸ್ಟ್ ಸ್ಕಿಲ್ ಟೆಸ್ಟ್ ಡ್ರೈವಿಂಗ್ ಟೆಸ್ಟ್ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 24 ಏಪ್ರಿಲ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮೇ 2023

ಜಿಲ್ಲಾವಾರು ಉದ್ಯೋಗಗಳು
ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್
ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಲಬುರಗಿ, ಕಾರವಾರ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮಂಗಳೂರು,
ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ಯಾದಗಿರಿ.

ಅರ್ಹತೆಗಳು
* ಮೆಟ್ರಿಕ್ಯುಲೇಷನ್ / 10 ನೇ ತರಗತಿ ಪಾಸ್.
* ಹಿಂದಿ / ಇಂಗ್ಲಿಷ್ ಜ್ಞಾನ.
* ಭಾರೀ ಮತ್ತು ಲಘು ವಾಹನಗಳಿಗೆ ಮಾನ್ಯವಾದ ಚಾಲನಾ ಪರವಾನಗಿಯನ್ನು ಹೊಂದಿರಬೇಕು.
* ಫಿಟ್ಟರ್‌ನ ಕೆಲಸಗಳ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರಬೇಕು ಮತ್ತು ಮೋಟಾರ್ ಮೆಕ್ಯಾನಿಕ್‌ನ ಕರ್ತವ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು.
* ಅಪೇಕ್ಷಣೀಯ – ಯಾವುದೇ ದುರಸ್ತಿ ಕಾರ್ಯಾಗಾರ / ಗ್ಯಾರೇಜ್‌ನಲ್ಲಿ ಮೋಟಾರ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ ಕನಿಷ್ಠ 01 ವರ್ಷದ ಅನುಭವ.

ಆಯ್ಕೆ ಪ್ರಕ್ರಿಯೆ
* ಲಿಖಿತ ಪರೀಕ್ಷೆ
* ಪ್ರಾಯೋಗಿಕ / ಕೌಶಲ್ಯ ಪರೀಕ್ಷೆ

ಅರ್ಜಿ ಸಲ್ಲಿಸುವುದು ಹೇಗೆ?
* ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.
* ಒಂದು ಸ್ವಯಂ ವಿಳಾಸದ 10X22 ಸೆಂ ಗಾತ್ರದ ಲಕೋಟೆಯೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸರಿಯಾಗಿ ಅಂಟಿಸಿ. 22/- ಅದರ ಮೇಲೆ ಅಂಚೆ ಚೀಟಿ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳು / ಪ್ರಮಾಣಪತ್ರಗಳ ದೃಢೀಕರಿಸಿದ ಫೋಟೋ ಪ್ರತಿಗಳು.
* ಭರ್ತಿ ಮಾಡಿದ ಅರ್ಜಿಯನ್ನು ಲಗತ್ತಿಸಲಾದ ಕಛೇರಿಗಳು / ಜಿಯೋ-ಸ್ಪೇಷಿಯಲ್ ಡೇಟಾ ಸೆಂಟರ್‌ಗಳಿಗೆ ತಿಳಿಸಲಾಗಿದೆ.
* ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 31/05/2023.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*