Home Blog Page 196

ಡ್ಯಾನಿಶ್ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಸಿಗಲಿದೆ 35,000 ವರೆಗೆ ಸ್ಕಾಲರ್ಶಿಪ್.!

 

2006 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಡ್ಯಾನಿಶ್ ಎಜುಕೇಶನ್ ಟ್ರಸ್ಟ್ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸ್ಕಾಲರ್ಶಿಪ್ ನೀಡಿ ನೆರವಾಗುತ್ತಿದೆ. ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವುದರ ಜೊತೆಗೆ ಅವರು ಉತ್ತಮವಾಗಿ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ. 2023-24ನೇ ಸಾಲಿನಲ್ಲಿ ವೃತಿಪರ ಕೋರ್ಸ್ ಗಳನ್ನು ಅಧ್ಯಯನ ಮಾಡಲು ದಾಖಲಾದ ವಿದ್ಯಾರ್ಥಿಗಳು ಕೆಲ ಕಂಡಿಶನ್ಗಳ ಜೊತೆ ಅರ್ಜಿಯನ್ನು ಸಲ್ಲಿಸಿ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

 

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:-
● 2023-24ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲನೇ ವರ್ಷದ ಕೋರ್ಸ್ ಗಳಿಗೆ ದಾಖಲಾಗಿರಬೇಕು.
● MBBS, BDS, BAMS, BUMS, BHMS – NEET 2022 ರ್ಯಾಂಕಿಂಗ್ 5 ಲಕ್ಷದೊಳಗೆ ಇರಬೇಕು.
● BVSc ಗಾಗಿ – KCET 2023 ಪಶುವೈದ್ಯಕೀಯ ರ್ಯಾಂಕ್ 50,000 ಒಳಗೆ ಇರಬೇಕು.
● BE/B.Tech – KCET 2023 ಇಂಜಿನಿಯರಿಂಗ್ ರ್ಯಾಂಕ್ 50,000 ಒಳಗೆ ಇರಬೇಕು.
● B.Pharma / Pharma D – KCET 2022 ಫಾರ್ಮಸಿ ರ್ಯಾಂಕ್ 50,000 ಒಳಗೆ ಇರಬೇಕು.
● B.Sc ನರ್ಸಿಂಗ್ ಮತ್ತು BPT (ಫಿಸಿಯೋಥೆರಪಿ) ಗೆ KEA 2022 ಮೂಲಕ ಮಾತ್ರ ಪ್ರವೇಶ ಪಡೆದಿರಬೇಕು .
● ಕಾನೂನು ಮತ್ತು ಪತ್ರಿಕೋದ್ಯಮ ಕೋರ್ಸ್‌ಗಳು ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
● BA B.Ed / BSc B.Ed / B.Ed ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
● ಪೋಷಕರು/ಪೋಷಕರ ವಾರ್ಷಿಕ ಆದಾಯ ರೂ.2.5 ಲಕ್ಷಕ್ಕಿಂತ ಹೆಚ್ಚಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಪಾಸ್‌ಪೋರ್ಟ್ ಗಾತ್ರದ ಫೋಟೋ
● ಅಂಕ ಪಟ್ಟಿಗಳು
● ಆಧಾರ್ ಕಾರ್ಡ್
● ಬ್ಯಾಂಕಿನ ಪಾಸ್ ಬುಕ್
● ಆದಾಯ ಪ್ರಮಾಣ ಪತ್ರ
● ಬಿಪಿಎಲ್ ಕಾರ್ಡ್
● ಶುಲ್ಕ ರಶೀದಿ

ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಡ್ಯಾನಿಶ್ ಟ್ರಸ್ಟಿನ ಅಧಿಕೃತ ವೆಬ್ಸೈಟ್ https://danishtrust.in/ ಗೆ ಭೇಟಿಕೊಡಬೇಕು.
● ನಂತರ Scholarship 2023-24 ಮೇಲೆ ಕ್ಲಿಕ್ ಮಾಡಿ ಸ್ಕಾಲರ್ಶಿಪ್ ಪೇಜ್ ಓಪನ್ ಆಗುತ್ತದೆ.
● Apply ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ನಂತರ ನಿಮ್ಮ ವೈಯಕ್ತಿಕ ವಿಷಯಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
● ನಿಮ್ಮ ಮೊಬೈಲ್ ಸಂಖ್ಯೆಯನ್ನು ರಿಜಿಸ್ಟರ್ ಮಾಡಿ OTP ಮೂಲಕ ವೇರಿಫೈ ಮಾಡಿಕೊಳ್ಳಿ
● ಹೇಳಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಸಂಪೂರ್ಣವಾದ ವಿವರಗಳನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
● ಡೌನ್ಲೋಡ್ pdf ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
●  ಡೌನ್ಲೋಡ್ ಮಾಡಿದ ಆನ್ಲೈನ್ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿ.
● ಟ್ರಸ್ಟ್ ವತಿಯಿಂದ ಅರ್ಜಿ ವೇರಿಫಿಕೇಷನ್ ಆದ ಬಳಿಕ ಸ್ಕಾಲರ್ಶಿಪ್ ವಿದ್ಯಾರ್ಥಿಗಳ ಖಾತೆಗೆ ಜಮೆ ಆಗುತ್ತದೆ.

ವಿಳಾಸ:-
ಡ್ಯಾನಿಶ್ ಎಜುಕೇಷನಲ್ ಟ್ರಸ್ಟ್,
ನಂ.85, ಶೆರಿಫ್ ಹೌಸ್, ರಿಚ್ಮಂಡ್ ರೋಡ್,
ರಿಚ್ಮಂಡ್ ಟೌನ್, ಬೆಂಗಳೂರು – 25
ದೂ. ಸಂಖ್ಯೆ: 080 41121281 / 6364356403

ಪ್ರಮುಖ ದಿನಾಂಕಗಳು:-
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2024.
ಹಾರ್ಡ್ ಕಾಪಿಯನ್ನು ಕಛೇರಿಗೆ ತಲುಪಿಸಲು ಕೊನೆಯ ದಿನಾಂಕ: 20.07.2024.

 

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್

ನಮ್ಮ ರಾಜ್ಯದಲ್ಲಿ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭ ಆಗಿವೆ. ಎಂದಿನಂತೆ ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಬಾಗಿ ಆಗುತ್ತಿದ್ದಾರೆ. ಆದರೆ ದೂರದ ಊರಿನ ಶಾಲೆ ಕಾಲೇಜಿಗೆ ಸೇರ್ಪಡೆ ಆಗಿ, ಮನೆಯಿಂದಲೇ ಪ್ರತಿದಿನ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಯಾಕೆಂದರೆ ಈ ರೀತಿ ಪ್ರತಿದಿನ ಸರಕಾರಿ ಬಸ್ ಗಳಲ್ಲಿ ಓಡಾಡುತ್ತಿದ್ದ ವಿದ್ಯಾರ್ಥಿಗಳು ಮೊದಲು ಪಾಸ್ ಪಡೆದುಕೊಳ್ಳಬೇಕಾಗಿತ್ತು.

ಕೆಲ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಕೆಲ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿ ಮಾಡಿಕೊಂಡು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮ ಪಾಸ್ ನೀಡುತ್ತಿತ್ತು. ಆದರೆ ಈಗ ಶಾಲಾ-ಕಾಲೇಜು ಆರಂಭವಾಗಿ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು ಕೂಡ ಈ ವರ್ಷದ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ.

ಇದುವರೆಗೆ ವಿದ್ಯಾರ್ಥಿಗಳು ತಾವು ಶಾಲಾ ಕಾಲೇಜಿಗೆ ದಾಖಲಾಗಿರುವ ಬಗ್ಗೆ ಗುರುತಿನ ಚೀಟಿ ಮತ್ತು ಅವರ ವೈಯಕ್ತಿಕ ವಿವರಗಳಿಗೆ ಸಂಬಂಧಪಟ್ಟ ಹಾಗೆ ಪುರಾವೆಗಳನ್ನು ಕೊಟ್ಟು ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡು ಈ ಉಚಿತ ಪಾಸ್ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ತಂತ್ರಾಂಶದ ಸಣ್ಣಪುಟ್ಟ ತೊಂದರೆಯಿಂದಾಗಿ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿಳಂಬ ಆಗಿದೆ.

ಈ ವೆಬ್ಸೈಟ್ ಅನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದ್ದು ಇದಕ್ಕಾಗಿ ಕೆಲ ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಕೂಡ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮ ಸುತ್ತೊಲೆಯನೊಂದನ್ನು ಹೊರಡಿಸಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿರುವ ಬಗ್ಗೆ ಮಾಹಿತಿ ತಿಳಿಸಿದೆ. ಇದರೊಂದಿಗೆ ಉಚಿತ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ ಕೆಲ ಪ್ರಮುಖ ಸೂಚನೆಗಳನ್ನು ಕೂಡ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಮುಖ್ಯ ಸಂಚಾರ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯು ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಈ ಮೇಲೆ ತಿಳಿಸಿದಂತೆ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲು ವೆಬ್ಸೈಟ್ ಸಿದ್ಧಗೊಳಿಸುತ್ತಿರುವ ಕಾರಣ 16-5-2023ರವರೆಗೆ ವಿದ್ಯಾರ್ಥಿಗಳು ಉಚಿತವಾಗಿ ನಗರ, ಹೊಲವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಪ್ರಯಾಣಿಸಬಹುದು.

ಆದರೆ ಕಂಡಕ್ಟರ್ಗಳು ಪರಿಶೀಲನೆ ಮಾಡುವ ವೇಳೆ ಕಳೆದ ವರ್ಷದ ಪಾಸ್ ಗಳನ್ನು ಇಟ್ಟುಕೊಂಡಿರುವ ವಿದ್ಯಾರ್ಥಿಗಳು ಅದನ್ನು ತೋರಿಸಬಹುದು, ಒಂದು ವೇಳೆ ಇಲ್ಲವಾದಲ್ಲಿ ಪ್ರಸಕ್ತ ವರ್ಷದ ಶೈಕ್ಷಣಿಕ ತರಗತಿಗೆ ದಾಖಲಾಗಿರುವ ಬಗ್ಗೆ ಶಾಲಾ ಕಾಲೇಜುಗಳು ನೀಡುವ ಐಡಿ ಕಾರ್ಡ್ ಅನ್ನು ಕೂಡ ತೋರಿಸಿ ಪ್ರಯಾಣ ಮಾಡಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಅವಕಾಶವೂ ಸುತ್ತೋಲೆಯಲ್ಲಿ ತಿಳಿಸಿರುವಂತೆ 15.06.2023ರ ವರೆಗೆ ಮಾತ್ರ ಲಭ್ಯವಿರಲಿದೆ.

ಈಗಾಗಲೇ ಶಕ್ತಿ ಯೋಜನೆ ಅಡಿ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ KSRTC &BMTC ಬಸ್ ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ವಿದ್ಯಾರ್ಥಿನಿಯರು ಕೂಡ ಇದಕ್ಕೆ ಸೇರುತ್ತಾರೆ. ನಂತರ ಇನ್ನುಳಿದ ವಿದ್ಯಾರ್ಥಿಗಳು ಎಂದಿನಂತೆ ದಾಖಲೆಗಳನ್ನು ಕೊಟ್ಟು ಸೇವಾ ಸಿಂಧು ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಿ ಉಚಿತ ಪಾಸ್ ಅಥವಾ ರಿಯಾಯಿತಿ ದರದಲ್ಲಿ ಪಾಸ್ ಪಡೆದುಕೊಂಡು ಓಡಾಡಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

RPF ಕಾನ್ಸ್ಟೇಬಲ್ ನೇಮಕಾತಿ 2023: 9000 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

 

ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ( RPF) ಜೂನ್ 2023 ರಲ್ಲಿ 9000 ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಜಾಹೀರಾತು ನೀಡಿದೆ. 10ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡಗಳು, ಲಭ್ಯವಿರುವ ಖಾಲಿ ಹುದ್ದೆಗಳು, ಅರ್ಜಿ ಕಾರ್ಯವಿಧಾನ, ಆಯ್ಕೆ ಪ್ರಕ್ರಿಯೆ ಮತ್ತು ಹುದ್ದೆಗಳಿಗೆ ಹೆಚ್ಚುವರಿ ಅವಶ್ಯಕತೆಗಳ ಬಗ್ಗೆ ಸಂಪೂರ್ಣ ವಿವರಗಳಿಗಾಗಿ ಈ ಲೇಖನವನ್ನು ಓದಿ.

RPF ಭಾರತೀಯ ರೈಲ್ವೆಯ ಮೀಸಲಾದ ಭದ್ರತಾ ಪಡೆ. ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅವರು ಕೆಲಸ ಮಾಡುತ್ತಾರೆ.

ಹುದ್ದೆಗಳ ಸಂಖ್ಯೆ
ಆರ್ಪಿಎಫ್ 9000 ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಜಾಹೀರಾತು ನೀಡಿದೆ. ಅರ್ಹತಾ ಮಾನದಂಡಗಳು:10 ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳು ಆರ್ಪಿಎಫ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆರ್ಪಿಎಫ್ ಕಾನ್ಸ್ಟೇಬಲ್ ನೇಮಕಾತಿ ವಯಸ್ಸಿನ ಮಿತಿ
* ವಯೋಮಿತಿ : 18 ವರ್ಷ
* ವಯೋಮಿತಿ : 25 ವರ್ಷ
* ಎಸ್ಸಿ/ ಎಸ್ಟಿ/ ಒಬಿಸಿ/ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ
ಆರ್ಪಿಎಫ್ ಕಾನ್ಸ್ಟೇಬಲ್ ನೇಮಕಾತಿಗೆ ಲಿಖಿತ ಮತ್ತು ದೈಹಿಕ ಪರೀಕ್ಷೆ ಎರಡೂ ಕಡ್ಡಾಯವಾಗಿದೆ.

ಅಪ್ಲಿಕೇಶನ್ಗಾಗಿ ವೆಬ್ಸೈಟ್
ಅಭ್ಯರ್ಥಿಗಳು ವೆಬ್ಸೈಟ್ಗೆ ಲಾಗಿನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು: rpf.indianrailways.gov.in ಅರ್ಜಿ ನಮೂನೆಯನ್ನು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರವೇಶಿಸಬಹುದು. ವೆಬ್ಸೈಟ್ನ ಮುಖಪುಟದಲ್ಲಿ “ನೇಮಕಾತಿ” ಅಥವಾ “Career”ವಿಭಾಗವನ್ನು ನೋಡಿ ಮತ್ತು ನಂತರ ಅದರಲ್ಲಿ ಉಲ್ಲೇಖಿಸಲಾದ ಸೂಚನೆಗಳನ್ನು ಅನುಸರಿಸಿ.

ಅರ್ಜಿ ಸಲ್ಲಿಸುವುದು ಹೇಗೆ?
* ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್ಪಿಎಫ್ನ ಅಧಿಕೃತ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಇಲ್ಲಿ ‘ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ’ ಮೇಲೆ ಕ್ಲಿಕ್ ಮಾಡಿ.
* ಅಗತ್ಯ ವಿವರಗಳನ್ನು ಭರ್ತಿ ಮಾಡಿ.
* ಪರೀಕ್ಷೆಗೆ ಆದ್ಯತೆಯ ಭಾಷೆ ಮತ್ತು ವಲಯವನ್ನು ಆರಿಸಿ.
* ಪಾವತಿ ಮಾಡಿ.
* ರಿಜಿಸ್ಟ್ರೇಶನ್ ಸ್ಲಿಪ್ ಅನ್ನು ಡೌನ್ಲೋಡ್ ಮಾಡಿ, ಅದರಲ್ಲಿ ನೋಂದಣಿ ಸಂಖ್ಯೆ ಇರುತ್ತದೆ.

ಪಠ್ಯಕ್ರಮ
ಪಠ್ಯಕ್ರಮವು ಅಂಕಗಣಿತ (ಗಣಿತ) ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆಯಂತಹ ವಿಷಯಗಳನ್ನು ಒಳಗೊಂಡಿದೆ.

ಪಿಇಟಿ ಸಾಮಾನ್ಯವಾಗಿ 1600 ಮೀಟರ್ ಓಟ, ಲಾಂಗ್ ಜಂಪ್, ಎತ್ತರ ಜಿಗಿತ ಮತ್ತು ಇತರ ದೈಹಿಕ ಸವಾಲುಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ಒಳಗೊಂಡಿದೆ.

ಸಂಬಳ
ಆರ್ಪಿಎಫ್ ಕಾನ್ಸ್ಟೇಬಲ್ ಸಾಮಾನ್ಯವಾಗಿ ತಿಂಗಳಿಗೆ 26,000 ರಿಂದ 32,000 ರೂ.ವರೆಗೆ ಗರಿಷ್ಠ ವೇತನವನ್ನು ಗಳಿಸುತ್ತಾರೆ. ಸರಾಸರಿ ಕನಿಷ್ಠ ವೇತನ 5,200 ರೂ.ಗಳಿಂದ 20,200 ರೂ.ಗಳವರೆಗೆ ಇರುತ್ತದೆ. ತಿಂಗಳಿಗೆ 2000 ರೂ.ಗಳ ಗ್ರೇಡ್ ಪೇಯೊಂದಿಗೆ.

ಪ್ರಮುಖ ದಿನಾಂಕಗಳು
ಅರ್ಜಿ ಪ್ರಕ್ರಿಯೆ ಜೂನ್ 2023 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ

ಅರ್ಜಿ ಶುಲ್ಕ
* ಎಸ್ಸಿ/ ಎಸ್ಟಿ/ ಮಾಜಿ ಸೈನಿಕ/ ಮಹಿಳೆ/ ಅಲ್ಪಸಂಖ್ಯಾತರು/ ಆರ್ಥಿಕವಾಗಿ ಹಿಂದುಳಿದ ವರ್ಗ: 250/- ರೂ.
* ಇತರ ಎಲ್ಲಾ ವರ್ಗಗಳಿಗೆ ರೂ. 500/- (ರೂ. 500 ಮಾತ್ರ)
* ನವೀಕರಣಗಳಿಗಾಗಿ ದಯವಿಟ್ಟು ವೆಬ್ ಸೈಟ್ ಗೆ ಭೇಟಿ ನೀಡಿ.

ಇಂದು ಜೇಷ್ಠ ಹುಣ್ಣಿಮೆ, ಈ ದಿನ ಈ ರೀತಿ ಪೂಜೆ ಮಾಡಿ ವ್ರತ ಮಾಡಿದ್ರೆ ವಿಶೇಷ ವಸ್ತುಗಳನ್ನು ದಾನ ನೀಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಿ ಗಂಡನ ಆಯಸ್ಸು ಹೆಚ್ಚುತ್ತೆ.!

 

ಪಂಚಾಂಗದ ಪ್ರಕಾರ ಕೆಲವು ವಿಶೇಷ ದಿನಗಳು ಇವೆ. ಈ ದಿನಗಳಂದು ವಿಶೇಷ ರೀತಿಯಲ್ಲಿ ನಮ್ಮ ಇಷ್ಟ ದೇವರು ಅಥವಾ ಕುಲ ದೇವರನ್ನು ಪೂಜಿಸಿದರೆ ಮತ್ತು ಈ ವಿಶೇಷ ದಿನಗಳಂದು ಕೆಲವು ವಿಶೇಷ ವ್ರತ ಮಾಡಿದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ನಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗುವ ಬಗ್ಗೆ ಹಿರಿಯರು ಹೇಳಿ ಹೋಗಿದ್ದಾರೆ.

ಅಂತಹದ್ದೇ ಒಂದು ದಿನ ಜೇಷ್ಠ ಹುಣ್ಣಿಮೆ. ಈ ಹುಣ್ಣಿಮೆಯ ದಿನದಂದು ವಟಸಾವಿತ್ರಿ ವ್ರತ ಮಾಡಿದರೆ ಜೊತೆಗೆ ಮನೆಯಲ್ಲಿ ದುರ್ಗಾದೇವಿ ಹಾಗೂ ಚಾಮುಂಡೇಶ್ವರಿಯನ್ನು ಆರಾಧನೆ ಮಾಡಿದರೆ ಮತ್ತು ಕೆಲವು ವಸ್ತುಗಳನ್ನು ದಾನ ಮಾಡಿದರೆ ಎಲ್ಲಾ ರೀತಿಯ ದಟ್ಟ ದರಿದ್ರಗಳು ದೂರ ಆಗಿ ಗಂಡನ ಆಯಸ್ಸು ಕೂಡ ಹೆಚ್ಚುತ್ತದೆ.

ಹುಣ್ಣಿಮೆಯ ದಿನ ಮನೆಯಲ್ಲಿರುವ ಚಾಮುಂಡೇಶ್ವರಿ ಅಥವಾ ದುರ್ಗಾದೇವಿ ಫೋಟೋ ಇಟ್ಟು ಅದಕ್ಕೆ ತರಕಾರಿ ಅಲಂಕಾರ ಮಾಡಿ ಶಾಕಂಬರಿ ಅವತಾರವನ್ನಾಗಿ ಕಂಡು ಪೂಜಿಸಬೇಕು. ಒಂದು ವೇಳೆ ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಫೋಟೋ ಇಲ್ಲದೆ ಇದ್ದಲ್ಲಿ ಒಂದು ಕಳಶ ಇಟ್ಟು ಅದಕ್ಕೆ ತರಕಾರಿ ಅಲಂಕಾರ ಮಾಡಿ ಅದನ್ನೇ ಶಾಕಂಬರಿ ದೇವಿ ಎಂದುಕೊಂಡು ಪೂಜಿಸಬಹುದು.

ಹುಣ್ಣಿಮೆ ದಿನದಂದು ಈ ರೀತಿ ಶಾಕಾಂಬರಿ ದೇವಿಯನ್ನು ಪೂಜೆ ಮಾಡಿದರೆ ಮನೆಯಲ್ಲಿ ಆರೋಗ್ಯ, ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನ ಸಮಸ್ಯೆ, ಸಂತಾನ ಸಮಸ್ಯೆ ಈ ರೀತಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಪರಿಹಾರ ಆಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.

ಅದೇ ರೀತಿಯಾಗಿ ಹುಣ್ಣಿಮೆಯ ದಿನದಂದು ವಟ ಸಾವಿತ್ರಿ ವ್ರತವನ್ನು ಮಾಡಿದರೆ ಬಹಳ ಒಳ್ಳೆಯದು. ಯಾಕೆಂದರೆ ಸತ್ಯವಾನ್ ಸಾವಿತ್ರಿಯೂ ವಟ ಎಂದರೆ ಆಲದ ಮರದ ಕೆಳಗೆ ಕುಳಿತು ಯಮನನ್ನು ಬೇಡಿ ಯಮನ ಜೊತೆ ಹೋರಾಡಿ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದು ದೀರ್ಘಸುಮಂಗಲಿ ಆದರು ಅದೇ ರೀತಿ ಸುಮಂಗಲಿಯರು ಹಾಗೂ ಕನ್ಯೆಯರು ತನ್ನ ಗಂಡನ ಆಯಸ್ಸಿಗಾಗಿ ಹಾಗೂ ಆತನ ಏಳಿಗೆಗಾಗಿ ಈ ವ್ರತವನ್ನು ಮಾಡಬಹುದು.

ಈ ವ್ರತ ಆಚರಿಸುವವರು ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಪೂಜೆ ಮಾಡಿ ಮನೆ ಹತ್ತಿರದಲ್ಲಿರುವ ಯಾವುದಾದರೂ ಆಲದ ಮರಕ್ಕೆ ಪೂಜೆ ಸಲ್ಲಿಸಲು ಹೋಗಬೇಕು. ಮನೆಯಿಂದಲೇ ಪೂಜಾ ಸಾಮಗ್ರಿ, ಶುದ್ಧ ನೀರು ಮುಖ್ಯವಾಗಿ ಅರಿಶಿನ ಕುಂಕುಮ ಹಚ್ಚಿದ ದಾರವನ್ನು ಕೂಡ ತಪ್ಪದೆ ತೆಗೆದುಕೊಂಡು ಹೋಗಬೇಕು.

ಆಲದ ಮರಕ್ಕೆ ಹೂವು ನೀರು ಇಟ್ಟು ಅರಿಶಿಣ ಕುಂಕುಮ ಹಚ್ಚಿ ಅರ್ಧ ಹೋಳಿನ ಕೊಬ್ಬರಿಯಲ್ಲಿ ತುಪ್ಪ ಅಥವಾ ದೀಪದ ಎಣ್ಣೆ ಹಾಕಿ ಬತ್ತಿ ಇಟ್ಟು ದೀಪ ಹಚ್ಚಿಟ್ಟು ತೆಗೆದುಕೊಂಡು ಹೋಗಿದ್ದ ಹಳದಿ ಹಾಗೂ ಕೆಂಪು ದಾರದಿಂದ ಮರವನ್ನು ಸುತ್ತುತ್ತಾ 108 ಪ್ರದಕ್ಷಿಣೆ ಹಾಕಬೇಕು. ಒಂದು ವೇಳೆ 108 ಬಾರಿ ಪ್ರದಕ್ಷಿಣೆ ಹಾಕಲು ಸಾಧ್ಯವಾಗದವರು ಒಂದು, ಮೂರು, ಐದು, ಒಂಬತ್ತು ಈ ರೀತಿ ಅವರ ಶಕ್ತಿಯನ್ನು ಸಾಮರ್ಥ್ಯಾನುಸಾರವಾಗಿ ಪ್ರದಕ್ಷಿಣೆ ಹಾಕಬಹುದು.

ಈ ಪೂಜೆಯನ್ನು ಆಲದ ಮರದ ಬಳಿ ಮಾಡುವುದರಿಂದ ಗಂಡನಿಗೆ ಶ್ರೇಯಸ್ಸು ಎನ್ನುವುದನ್ನು ಪದ್ಮ ಪುರಾಣದಲ್ಲಿ ತಿಳಿಸಲಾಗಿದೆ. ಅದೇ ರೀತಿ ಈ ಜೇಷ್ಠ ಹುಣ್ಣಿಮೆ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಕೂಡ ವಿಶೇಷವಾದ ಫಲಗಳು ಉಂಟಾಗುತ್ತದೆ. ಅವುಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ, ಯಾವೆಲ್ಲಾ ದಾಖಲೆಗಳು ಬೇಕು.? ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಕೊನೆಗೂ ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 2ನೇ ತಾರೀಕಿನಂದು ಈ ವರ್ಷ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕೊಟ್ಟಿದ್ದ ಮಾತಿನಂತೆ ಐದು ಅಧಿಕೃತ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಆದೇಶ ನೀಡಿದ್ದಾರೆ. ಎಲ್ಲಾ ಯೋಜನೆಗಳಿಗೆ ಇರುವ ಮಾರ್ಗಸೂಚಿಗಳು, ರೂಪರೇಷೆಗಳು ಮತ್ತು ಮಾನದಂಡಗಳನ್ನು ಕೂಡ ವಿವರವಾಗಿ ತಿಳಿಸಿ ಯಾವ ಯಾವ ಯೋಜನೆಗಳು ಯಾವೆಲ್ಲ ದಿನಾಂಕದಂದು ಲಾಂಚ್ ಆಗುತ್ತದೆ.

ಮತ್ತು ಯಾವೆಲ್ಲ ದಾಖಲೆಗಳನ್ನು ಫಲಾನುಭವಿಗಳು ಹೊಂದಿರಬೇಕು, ಯಾರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎನ್ನುವುದಕ್ಕೆ ಸಂಬಂಧಪಟ್ಟ ಹಾಗೆ ವಿವರವನ್ನು ಸಹ ತಿಳಿಸಿದ್ದಾರೆ. ಅಂತೆಯೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಬಗ್ಗೆ ಕೂಡ ಮಾತನಾಡಿರುವ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಈ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದಾದ್ಯಂತ ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಲಾಗುತ್ತದೆ. ಅಂದಿನಿಂದ ಪ್ರತಿ ತಿಂಗಳು 2000ರೂ. ಸಹಾಯಧನವು ಕುಟುಂಬ ನಿರ್ವಹಣೆಗಾಗಿ ಕುಟುಂಬದ ಒಡತಿಯ ಖಾತೆಗೆ ಹೋಗುತ್ತದೆ. ಈ ಯೋಜನೆಗೆ APL ಮತ್ತು BPL ಕಾರ್ಡ್ ಹೊಂದಿರುವ ಎಲ್ಲರೂ ಕೂಡ ಅರ್ಹರು.

ಒಂದೇ ಕುಟುಂಬದಲ್ಲಿ ಅತ್ತೆ, ಸೊಸೆ ಅಥವಾ ಹೆಚ್ಚು ಮಹಿಳೆಯರಿದ್ದರೆ ಆ ಕುಟುಂಬದಲ್ಲಿ ಕುಟುಂಬದ ಯಜಮಾನ ಯಾರು ಆಗಬೇಕು ಎನ್ನುವ ನಿರ್ಧಾರವನ್ನು ಕುಟುಂಬದ ತೀರ್ಮಾನಕ್ಕೆ ಬಿಟ್ಟಿರುತ್ತೇವೆ. 18 ವರ್ಷ ಪೂರೈಸಿದ ಯಾರು ಬೇಕಾದರೂ ಕುಟುಂಬದ ಯಜಮಾನ ಎಂದು ನೋಂದಾಯಿಸಿಕೊಂಡು ಅದಕ್ಕೆ ಪೂರಕವಾದ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

ಈಗಾಗಲೇ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಪಡೆಯುತ್ತಿರುವ ಮಹಿಳೆಯರಿದ್ದರೆ ಅಂದರೆ ವಿಧವೇ ವೇತನ, ಅಂಗವಿಕಲ ವೇತನ ಅಥವಾ ವೃದ್ಯಾಪ್ಯ ವೇತನವನ್ನು ಗೃಹಲಕ್ಷ್ಮಿಯರು ಪಡೆಯುತ್ತಿದ್ದರು ಕೂಡ ಅವರು ಸಹ ಗೃಹಲಕ್ಷ್ಮಿ ಯೋಜನೆಯ 2000ರೂ. ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು ಇದರ ಸಾಧಕ ಬಾಧಕಗಳ ವಿವರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳೇ ಜೂನ್ 15 ರಿಂದ ಜುಲೈ 15ನೇ ತಾರೀಖಿನವರೆಗೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ನಂತರ ಅವುಗಳ ಪರಿಶೀಲನೆ ಕೆಲಸವನ್ನು ಜುಲೈ 15 ರಿಂದ ಆಗಸ್ಟ್ 15 ರವರೆಗೆ ನಡೆಸಿ ಅರ್ಹ ಫಲಾನುಭವಿಗಳಿಗೆ ಆಗಸ್ಟ್ 15ರಂದು ನೇರ ವರ್ಗಾವಣೆ ಮೂಲಕ ಅವರ ಖಾತೆಗೆ ಹಣ ಜಮೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಫಲಾನುಭವಿಯೋ ಬ್ಯಾಂಕ್ ಅಕೌಂಟ್ ಹೊಂದಿರುವುದು ಕಡ್ಡಾಯ ಎನ್ನುವುದನ್ನು ಕೂಡ ಉಲ್ಲೇಖಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಆಗಬೇಕು ಎಂದರೆ ಕುಟುಂಬದ ಒಡತಿಯು ಕೆಲ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು. ಅವುಗಳು ಯಾವುದೆಂದರೆ, ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಹೊಂದಿರುವುದು ಮಾತ್ರ ಅಲ್ಲದೆ ಅವರ ಬ್ಯಾಂಕ್ ಅಕೌಂಟ್ ಝೀರೋ ಅಕೌಂಟ್ ಅಥವಾ ಸೇವಿಂಗ್ ಅಕೌಂಟ್ ಆಗಿರಬೇಕು. ಜಂಟಿ ಅಕೌಂಟ್ ಆಗಿದ್ದರೆ ಅದು ಮಾನ್ಯ ವಾಗುವುದಿಲ್ಲ. NCPI ಲಿಂಕ್ ಆಗಿರಬೇಕು ಅಂದರೆ ಆ ಅಕೌಂಟಿಗೆ ಆಧಾರ್ ಕಾರ್ಡ್ ಕೂಡ ಲಿಂಕ್ ಆಗಿರಬೇಕು ಇದು ಕೂಡ ಕಡ್ಡಾಯ ಎಂದು ತಿಳಿಸಿದ್ದಾರೆ.

ಇತ್ತೀಚಿನ ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆಯನ್ನು ಕೂಡ ಅರ್ಜಿ ಸಲ್ಲಿಸುವ ವೇಳೆ ಕೇಳಬಹುದು. ಶೀಘ್ರದಲ್ಲಿಯೇ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬಹುದು ಎನ್ನುವ ಬಗ್ಗೆ ಪ್ರತ್ಯೇಕ ಅಧಿಸೂಚನೆ ಸರ್ಕಾರದಿಂದ ಹೊರ ಬೀಳಲಿದೆ. ಆದ್ದರಿಂದ ಎಲ್ಲಾ ಮಹಿಳೆಯರು ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಕೃಷಿ ಚಟುವಟಿಕೆಗೆ ಖರೀದಿ ಮಾಡಿದ ಯಂತ್ರೋಪಕರಣಗಳ ಸಾಲ ಮನ್ನ ಯೋಜನೆಗೆ ಮುಂದಾದ ಸರ್ಕಾರ.!

 

ರೈತರುಗಳು ಬ್ಯಾಂಕುಗಳಲ್ಲಿ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ. ಕೃಷಿ ಮಾಡಲು ಬಂಡವಾಳ ಹಾಗೂ ಕೃಷಿಗೆ ಬೇಕಾದ ಸಂಪನ್ಮೂಲಗಳ ಖರೀದಿಯ ಅವಶ್ಯಕತೆಯಿಂದ ಈ ರೀತಿ ರೈತನ ಸಾಲ ಮಾಡಬೇಕಾಗುತ್ತದೆ. ವ್ಯಕ್ತಿಗಳು ಅಥವಾ ಖಾಸಗಿ ಸಂಸ್ಥೆಗಳ ಮೊರೆ ಹೋಗುವುದರಿಂದ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರವು ರೈತರಿಗಾಗಿಯೇ.

 

ಬ್ಯಾಂಕ್ಗಳಲ್ಲಿ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ ಕೆಲವು ಯೋಜನೆಗಳ ಮೂಲಕ ಕಡಿಮೆ ಬಡ್ಡಿದರಲ್ಲೇ ಅಥವಾ ಬಡ್ಡಿ ರಹಿತವಾಗಿ ಸಾಲ ಕೊಡುವುದರಿಂದ ತಮ್ಮ ದಾಖಲೆಗಳನ್ನು ಸಲ್ಲಿಸಿ ಕೃಷಿಸಾಲ ಪಡೆದಿರುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ಎಲ್ಲ ರೈತರು ಕೂಡ ತಾವು ಮಾಡಿದ್ದ ಸಾಲವನ್ನು ತೀರಿಸಲು ಆಗುವುದಿಲ್ಲ ಹಲವು ವರ್ಷಗಳವರೆಗೆ ಅದು ಬಾಕಿಯೇ ಇರುತ್ತದೆ.

ರೈತರು ತಮ್ಮ ಕೃಷಿ ಭೂಮಿಯನ್ನು ತೋಟಗಾರಿಕೆ ಕೃಷಿಗಾಗಿ ಬದಲಾಯಿಸಲು, ಪಂಪ್ಸೆಟ್ ನಿರ್ಮಿಸಲು, ಅಥವಾ ಪೈಪ್ ಲೈನ್ ಗಾಗಿ ಅಥವಾ ಕೃಷಿ ಚಟುವಟಿಕೆಗೆ ಬೇಕಾದ ಯಂತ್ರೋಪಕರಣಗಳ ಖರೀದಿಗೆ, ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕಗಳು ಇವುಗಳ ಖರೀದಿಗೆ, ಟ್ಯಾಕ್ಟರ್ ಖರೀದಿಗೆ ಇನ್ನು ಮುಂತಾದ ಅನೇಕ ವಿಷಯಕ್ಕೆ ಸಾಲ ಪಡೆಯುವ ಪರಿಸ್ಥಿತಿ ಬಂದಿರುತ್ತದೆ.

ಆದರೆ ಭಾರತದಲ್ಲಿ ಕೃಷಿ ಮಳೆ ಜೊತೆ ಆಡುವ ಜೂಜಾಟ ಇನಿಸಿರುವುದರಿಂದ ಇಷ್ಟೆಲ್ಲಾ ಬಂಡವಾಳ ಹಾಕಿರುವ ರೈತನಿಗೆ ಹಲವು ಬಾರಿ ನಿರೀಕ್ಷೆಯ ಫಲ ಸಿಗುವುದಿಲ್ಲ. ಹವಾಮಾನ ಬೈಪರೀತಗಳಿಂದ ಬೆಳೆ ಹಾಳಾಗುತ್ತದೆ. ಅಥವಾ ಬೆಳೆ ಬಂದ ಮೇಲೆ ಅದಕ್ಕೆ ಸರಿಯಾದ ಬೆಲೆ ಸಿಗದೆ ನಷ್ಟ ಹೊಂದುತ್ತಾನೆ. ಈ ಕಾರಣಗಳಿಂದ ತಾನು ಪಡೆದ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ.

ಕೆಲ ಸಮಯಗಳಲ್ಲಿ ಸರ್ಕಾರವು ರೈತರ ಪರವಾಗಿ ನಿಂತು ಹಲವು ವರ್ಷಗಳಿಂದ ರೈತರು ತೀರಿಸಲು ಸಾಧ್ಯವಾಗದ ಸಾಲ ಅಥವಾ ಸಾಲದ ಮೇಲಿರುವ ಬಡ್ಡಿಯನ್ನು ಮನ್ನಾ ಮಾಡುತ್ತದೆ. ಇದುವರೆಗೆ ಕರ್ನಾಟಕದಲ್ಲಿರುವ ರೈತರು ಅನೇಕ ಬಾರಿ ಈ ಸಾಲ ಮನ್ನಾ ಸಹಾಯದ ಅನುಕೂಲತೆಯನ್ನು ಪಡೆದಿದ್ದಾರೆ.

ಹಾಗಾಗಿ ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲೂ ಅಥವಾ ಹೊಸ ಸರ್ಕಾರ ಸ್ಥಾಪನೆ ಆದಾಗಲೂ ಅಥವಾ ಚುನಾವಣೆಗಳು ಬಂದಾಗ ಪ್ರಣಾಳಿಕೆಯಲ್ಲಿ ಆದರೂ ರೈತರ ಪರವಾಗಿ ಸಾಲ ಮನ್ನಾ ವಿಚಾರವಾಗಿ ರಾಜಕೀಯ ಪಕ್ಷಗಳು ಭರವಸೆ ಕೊಡುತ್ತವೆಯಾ ಎಂದು ನೋಡುತ್ತಿರುತ್ತಾರೆ. ಗೆದ್ದು ಅಧಿಕಾರ ಸ್ಥಾಪಿಸಿದ ಅನೇಕ ಸರ್ಕಾರಗಳು ರೈತರ ಪರವಾಗಿ ರೈತರ ಮೇಲೆ ಕಾಳಜಿ ಹೊಂದಿರುವುದನ್ನು ತೋರ್ಪಡಿಸುವುದಕ್ಕಾಗಿ ರೈತರ ನೆರವಿಗೆ ನಿಂತಿದ್ದಾರೆ.

ಬೆಳೆ ಸಾಲ, ಕೃಷಿ ಸಾಲ ಈ ರೀತಿ ರೈತರ ಸಾಲ ಮನ್ನಾ ಮಾಡಿ ಅವರನ್ನು ಋಣಮುಕ್ತಗೊಳಿಸಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿರುವ ನಿರುದ್ಯೋಗಿಗಳು, ಗೃಹಿಣಿಯರು ಮತ್ತು ಮಹಿಳೆಯರಿಗೆ ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ರೈತರ ಪರವಾಗಿಯೂ ಕೂಡ ಸಾಲ ಮನ್ನಾ ಮಾಡುವ ಚಿಂತನೆ ನಡೆಸುತ್ತದೆ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.

ಪ್ರತಿ ಬಾರಿ ಕೂಡ ರೈತರಿಂದ ತಮ್ಮ ಸಾಲ ಮನ್ನಾ ಮಾಡುವಂತೆ ಮನವಿ ಹೋಗುತ್ತಿರುವುದರಿಂದ ಸರ್ಕಾರವೂ ಕೂಡ 50,000ದ ವರೆಗಿನ ರೈತರ ಸಾಲ ಮನ್ನಾ ಮಾಡಲು ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿಗಳು ಕೂಡ ಇದೆ. ಆದರೆ ಅಂತಿಮವಾಗಿ ಸರ್ಕಾರದ ಕಡೆಯಿಂದ ಇದು ಘೋಷಣೆ ಆಗುವವರೆಗೂ ಕಾದು ನೋಡಬೇಕಾಗಿದೆ. ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ಮಾಡಿರುವುದರಿಂದ ನಮ್ಮ ರಾಜ್ಯದಲ್ಲೂ ಕೂಡ ಸರ್ಕಾರ ಇದೇ ನಿರ್ಧಾರಕ್ಕೆ ಬರಲಿ ಎನ್ನುವ ಆಸೆ ರೈತ ವರ್ಗಕ್ಕೆ.

 

ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?

 

ರಾಜ್ಯದ ರೈತರಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದ್ದ ಕಾರಣ ಕಳೆದ ಏಪ್ರಿಲ್ ತಿಂಗಳಿಂದ ಸರ್ಕಾರ ಪ್ರತಿ ಲೀಟರ್ ಗೆ ರೂ.3 ಸಹಾಯಧನವನ್ನು ನೀಡುವುದಕ್ಕೆ ಒಪ್ಪಿಕೊಂಡಿತ್ತು, ಅದರಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಸಹಾಯಧನವನ್ನು ಕೂಡ ನೀಡಿತ್ತು. ಏಪ್ರಿಲ್ ಮತ್ತು ಮೇ ತಿಂಗಳು ಬೇಸಿಗೆ ಆದ ಕಾರಣ ಈ ಎರಡು ತಿಂಗಳಿನಲ್ಲಿ ಪಶುಗಳಿಗೆ ತಕ್ಕ ಮೇವು ಸಿಗುತ್ತಿರಲಿಲ್ಲ, ಹಸಿರು ಮೇವು ಇರದ ಕಾರಣ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕುಂಠಿತವಾಗಿತ್ತು.

ಇದರೊಂದಿಗೆ ಹವಮಾನ ವೈಪರೀತ್ಯದಿಂದ ಹಸುಗಳ ಆರೋಗ್ಯವು ಹದಗೆಟ್ಟು ಹಾಲಿನ ಉತ್ಪಾದನೆಯು ತೀರ ಇಳಿಕೆ ಆಗಿತ್ತು. ಈ ಸಮಯದಲ್ಲಿ ಇದನ್ನೇ ಅವಲಂಬಿಸಿಕೊಂಡಿದ್ದ ರೈತರ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ಸದುದ್ದೇಶದಿಂದ ಸರ್ಕಾರ ಈ ರೀತಿ ಪ್ರತಿ ಲೀಟರ್ಗೆ ರೂ.3ಯನ್ನು ಹೆಚ್ಚಳ ಮಾಡಿತ್ತು.

ಬೆಂಗಳೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ಏಪ್ರಿಲ್ ತಿಂಗಳಲ್ಲಿ ಇದು ಅನೌನ್ಸ್ ಆಗಿತ್ತು ನಂತರ ಏಪ್ರಿಲ್ 1ರಿಂದ ಮೇ31ರವರೆಗೆ ಎಲ್ಲಾ ಹಾಲು ಉತ್ಪಾದಕರು ಕೂಡ ಈ ಹೆಚ್ಚುವರಿ ಹಣದ ಸಹಾಯವನ್ನು ಪಡೆದಿದ್ದರು. ಆದರೆ ಈಗ ಅರ್ಧದಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ಈ ಪ್ರೋತ್ಸಾಹ ಧನವನ್ನು 1.50ರೂ. ಪ್ರತಿ ಲೀಟರ್ ಗೆ ಕಡಿತಗೊಳಿಸಿದೆ.

ಈಗ ಎಲ್ಲೆಡೆ ಮಳೆ ಆಗಿದ್ದು ಹಸಿರು ಮೇವು ಸಹಾ ಲಭ್ಯವಾಗಿದೆ ಜೊತೆಗೆ ಹಾಲಿನ ಉತ್ಪಾದನೆಯು ಕೂಡ ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಆಗುತ್ತಿದೆ. ಸಹಾಯಧನವನ್ನು ಘೋಷಿಸುವ ಮುಂಚೆ ಹಾಗೂ ಆ ವೇಳೆಯಲ್ಲಿ13.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು ಆದರೆ ಈಗ 16 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ನಿರೀಕ್ಷೆಯನ್ನು ಮೀರಿ 2.50 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ.

ಈ ಕಾರಣದಿಂದಾಗಿಯೇ ಪ್ರೋತ್ಸಾಹಧನವನ್ನು ಕಡಿತ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮಂಡಳಿ ತಿಳಿಸಿದೆ. ಜೂನ್ 1ನೇ ತಾರೀಖಿನಿಂದ ಪರೀಷ್ಕೃತ ದರ ಅನ್ವಯಿಸಲಿದೆ. ಆದರೆ ಇದು ಬಮೂಲ್ ಎಂದರೆ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಊಟಕ್ಕೆ ಸೇರುವ ಜಿಲ್ಲೆಗಳ ರೈತರಿಗೆ ಅನ್ವಯವಾಗಲಿದೆ.

ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಒಳಪಡುತ್ತದೆ. ಈಗ ಈ ಜಿಲ್ಲೆಗಳಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ಪ್ರತಿನಿತ್ಯ ಹಾಲನ್ನು ಡೈರಿಗೆ ಹಾಕುವ ರೈತರಿಗೆ ಪ್ರತಿ ಲೀಟರ್ಗೆ 34.25 ರೂಪಾಯಿ ಸಿಗುತ್ತದೆ.

ಈ ರೀತಿ ಸರ್ಕಾರ ಹಾಲು ಉತ್ಪಾದನೆ ಮಾಡುವ ರೈತರ ಬೆಂಬಲಕ್ಕೆ ನಿಂತಿದ್ದು, ಅವರಿಗೆ ಅವಶ್ಯಕತೆ ಇರುವಾಗ ಸಹಾಯವನ್ನು ಮಾಡುತ್ತದೆ. ಸರ್ಕಾರ ಎರಡು ತಿಂಗಳು ನೀಡಿದ್ದ ಪ್ರೋತ್ಸಾಹ ಧನವನ್ನು ಈಗ ಕಡಿತ ಮಾಡಿದ್ದರು ಕೂಡ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಉತ್ತಮವಾದ ಅನುಕೂಲತೆಯನ್ನು ಮಾಡಿ ಕೊಡಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಕಳೆದ ಒಂದು ದಶಕದಿಂದ ಹಲವಾರು ಬಾರಿ ಈ ರೀತಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿ ಅನುಕೂಲ ಮಾಡಿರುವ ಉದಾಹರಣೆಗಳಿವೆ.

ಮುಂದೆಯೂ ಕೂಡ ಇದು ಹೀಗೆ ಮುಂದುವರೆಯುವ ಸಾಧ್ಯತೆ ಇದೆ. ಇಂತಹ ಉಪಯುಕ್ತ ಮಾಹಿತಿಯು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ರೈತರಿಗಷ್ಟೇ ಅಲ್ಲದೆ ರಾಜ್ಯದ ಎಲ್ಲಾ ರೈತರಿಗೂ ಕೂಡ ಅವಶ್ಯಕ ಮಾಹಿತಿ ಆಗಿದೆ. ಆದ್ದರಿಂದ ಈ ಮಾಹಿತಿಯನ್ನು ನಿಮ್ಮ ಕುಟುಂಬ ಹಾಗು ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ಕರ್ನಾಟಕದ ಎಲ್ಲ ರೈತರಿಗೂ ಈ ಮಾಹಿತಿ ತಲುಪುವಂತೆ ಮಾಡಿ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್, ಲೇಬರ್ ಕಾರ್ಡ್ ಹೊಂದಿರುವವರ ನೋಡಲೇಬೇಕಾದ ಸುದ್ದಿ ಇದು

ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿ ಲೇಬರ್ ಕಾರ್ಡ್ ಪಡೆದಿದ್ದರೆ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದು. ಕಳೆದ ಬಾರಿ BJP ಸರ್ಕಾರವು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದೆ.

 

ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿ ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ಅವರ ಕುಟುಂಬದವರಿಗೆ ಸ್ಕಾಲರ್ಶಿಪ್, ವಿದ್ಯಾರ್ಥಿ ಕಿಟ್, ಮದುವೆಗೆ ಪ್ರೋತ್ಸಾಹದಿನ, ಉಚಿತಪಡಿತರ, ಕೆಲವು ಕಾರ್ಮಿಕರಿಗೆ ವಸತಿ ಯೋಜನೆ ಸೇರಿದಂತೆ ಸಾಕಷ್ಟು ಅನುಕೂಲತೆಯನ್ನು ಸರ್ಕಾರ ಮಾಡಿಕೊಟ್ಟಿದೆ. ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಕೂಡ ತನ್ನ ಜನಪ್ರಿಯ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಹೊರತುಪಡಿಸಿ ಕಟ್ಟಡ ಕಾರ್ಮಿಕರ ಬಗ್ಗೆಯೂ ಕೂಡ ಗುಡ್ ನ್ಯೂಸ್ ನೀಡಿದೆ.

ಈಗ ಕರ್ನಾಟಕ ರಾಜ್ಯದ ಕಾರ್ಮಿಕ ಸಚಿವರು ಮತ್ತು ಮಂಡಳಿಯ ಅಧ್ಯಕ್ಷರು ಆಗಿರುವ ಶ್ರೀ ಸಂತೋಷ್ ಲಾಡ್ ಅವರು ಮತ್ತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂತಹ ಒಂದು ಸಿಹಿ ಸುದ್ದಿಯನ್ನು ಕಾರ್ಮಿಕ ವಲಯಕ್ಕೆ ನೀಡಿದ್ದಾರೆ. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರ ಆರೋಗ್ಯ ರಕ್ಷಣೆಯ ಬಗ್ಗೆ ಗಮನಹರಿಸಿರುವ ಸಚಿವರು ಮತ್ತು ಮಂತ್ರಿಗಳು ಈಗಾಗಲೇ ಅವರಿಗೆ ಸಿಗುತ್ತಿದ್ದ ಉಚಿತ ವೈದ್ಯಕೀಯ ಸೌಲಭ್ಯಗಳ ಜೊತೆ ವೈದ್ಯಕೀಯ ವಿಮೆ ಕೂಡ ನೀಡಲು ನಿರ್ಧಾರ ಮಾಡಿದ್ದಾರೆ.

ಕಟ್ಟಡ ಕಾರ್ಮಿಕರು ಅಥವಾ ಲೇಬರ್ ಕಾರ್ಡ್ ಅಲ್ಲಿ ನೋಂದಣಿ ಆಗಿರುವ ಅವರ ಕುಟುಂಬ ಸದಸ್ಯರಲ್ಲಿ ಯಾರೇ ಅನಾರೋಗ್ಯಕ್ಕೆ ಪೀಡಿತರಾಗಿದ್ದರು ಕೂಡ ಪ್ರತಿದಿನಕ್ಕೆ 300 ರೂಪಾಯಿಯ ಲೆಕ್ಕದಲ್ಲಿ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕನ ಖಾತೆಗೆ ಹಣ ಸರ್ಕಾರದಿಂದ ಜಮೆ ಆಗಲಿದೆ. ಅನಾರೋಗ್ಯ ಸಮಸ್ಯೆಗೆ ಪೀಡಿತರಾದಾಗ ಕಾರ್ಮಿಕನಿಗೆ ದುಡಿಯುವ ಶಕ್ತಿ ಇರುವುದಿಲ್ಲ, ಒಂದು ವೇಳೆ ಅವರ ಕುಟುಂಬಸ್ಥರು ಅನಾರೋಗ್ಯಕ್ಕೆ ಈಡಾದಾಗ ಆತನು ಅವರ ಹಾರೈಕೆ ಮಾಡುವುದನ್ನು ಬಿಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಈ ಕಾರಣಕ್ಕಾಗಿ ಅವನ ದಿನಗೂಲಿ ತಪ್ಪಬಾರದು ಎನ್ನುವ ಸದುದ್ದೇಶದಿಂದ ಇಂತಹದ ಮಹತ್ವದ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಇದನ್ನು ಪ್ರಕಟಣೆ ಮೂಲಕ ಕರ್ನಾಟಕದಲ್ಲಿರುವ ಎಲ್ಲಾ ಕಾರ್ಮಿಕ ವರ್ಗಕ್ಕೆ ತಿಳಿಸಲಾಗಿದೆ. ಇನ್ನು ಮುಂದೆ ಲೇಬರ್ ಕಾರ್ಡ್ ಹೊಂದಿರುವವರು ಅಥವಾ ಕುಟುಂಬದವರು ಯಾರೇ ಅನಾರೋಗ್ಯಕ್ಕೆ ತುತ್ತಾದರೂ ಅವರಿಗೆ ಪ್ರತಿದಿನದ ಲೆಕ್ಕದಲ್ಲಿ 300ರೂ. ವೈದ್ಯಕೀಯ ವಿಮೆ ಎಂದು ಸಿಗಲಿದೆ.

ಇದಕ್ಕಾಗಿ ಅವರು ಅರ್ಜಿ ಕೂಡ ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಅರ್ಜಿ ಸಲ್ಲಿಸಲು ಚಿಕಿತ್ಸೆ ಪಡೆದ ಆರು ತಿಂಗಳವರೆಗೂ ಕೂಡ ಅವಕಾಶ ನೀಡಲಾಗುತ್ತದೆ. ಸಂಬಂಧ ಪಟ್ಟ ವೈದ್ಯಕೀಯ ದಾಖಲೆಗಳು ಮತ್ತು ಇನ್ನಿತರವಾದ ಅಗತ್ಯ ವಿವರಗಳ ಜೊತೆ ಆನ್ಲೈನಲ್ಲಿ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಿದರು ಕೂಡ ಅವರು ಅನಾರೋಗ್ಯದಲ್ಲಿ ಇದ್ದಷ್ಟು ದಿನ ಅಥವಾ ಅವರು ಕುಟುಂಬಸ್ಥರ ಆರೈಕೆ ಮಾಡುತ್ತಿದ್ದ ಅಷ್ಟು ದಿನ ಪ್ರತಿ ದಿನಕ್ಕೆ 300 ರೂಪಾಯಿ ಲೆಕ್ಕದಲ್ಲಿ ಸರ್ಕಾರ ಅವರಿಗೆ ವಿಮೆ ಹಣವನ್ನು ನೀಡುತ್ತಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಕಾರ್ಮಿಕ ಕಲ್ಯಾಣ ಇಲಾಖೆಯ ಕಚೇರಿಗಳಿಗೆ ಭೇಟಿ ಕೊಡಬಹುದು ಅಥವಾ ಅಧಿಕೃತ ವೆಬ್ಸೈಟ್ ಗಳನ್ನು ಸರ್ಚ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

 

ದಿನಭವಿಷ್ಯ:- ಆಂಜನೇಯನ ಕೃಪಕಟಾಕ್ಷ ಈ 3 ರಾಶಿಯವರ ಮೇಲಿದೆ, ಅನಿರೀಕ್ಷಿತ ಧನಲಾಭ, ಅಂದುಕೊಂಡ ಕೆಲಸದಲ್ಲಿ ಜಯ

 

ಮೇಷ ರಾಶಿ:- ಇಂದು ನೀವು ಹಾಕಿಕೊಂಡ ಯೋಜನೆ ಪ್ರಕಾರ ಕೆಲಸಗಳನ್ನು ಮುಗಿಸಿ, ಇದರಿಂದ ನಿಮಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ವಾತಾವರಣವೂ ಉತ್ತಮವಾಗುತ್ತದೆ. ಇಂದು ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ.
ಶುಭ ಸಂಖ್ಯೆ: 03.

ವೃಷಭ ರಾಶಿ:- ವಿವಾದಗಳು ಇತ್ಯರ್ಥಗೊಂಡು ಮಾನಸಿಕ ನೆಮ್ಮದಿ ಮೂಡುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಸಿಗುತ್ತದೆ. ಇದು ಮಾತ್ರ ಅಲ್ಲದೆ ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದರೂ ಕೂಡ ನಿಮ್ಮ ಕಾರ್ಯ ವೈಖರಿ ಬಗ್ಗೆ ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ ಕೇಳಿ ಬರುತ್ತದೆ.
ಶುಭ ಸಂಖ್ಯೆ : 01.

ಮಿಥುನ ರಾಶಿ:- ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗೆ ಮತ್ತು ಹಳೆಯ ಸಮಸ್ಯೆಗಳಿಗೆ ಇಂದು ಪರಿಹಾರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಇಂದು ಓದಿನ ಬಗ್ಗೆ ಆಸಕ್ತಿ ಹೆಚ್ಚುತ್ತದೆ, ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಶುಭ ಸುದ್ದಿಯನ್ನು ಕೇಳುತ್ತಾರೆ.
ಶುಭ ಸಂಖ್ಯೆ : 07.

ಕಟಕ ರಾಶಿ:- ಬ್ಯಾಂಕ್ ಮತ್ತು ಹಣಕಾಸಿನ ವಹಿವಾಟು ನಡೆಸುವವರಿಗೆ ಇಂದು ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭ ಬರುವ ಸಾಧ್ಯತೆ ಇದೆ. ಆದರೆ ಚಿನ್ನ ಬೆಳ್ಳಿ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಸ್ವಲ್ಪ ತೊಡಕುಗಳು ಕಾಡುತ್ತವೆ. ಆದರೂ ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರುತ್ತದೆ.
ಶುಭ ಸಂಖ್ಯೆ : 02.

ಸಿಂಹ ರಾಶಿ:- ಕಳೆದು ಹೋದ ವಸ್ತು ಅಥವಾ ಬಹಳ ಹಿಂದೆ ಬೇರೆಯವರು ನಿಮ್ಮಿಂದ ಪಡೆದ ವಸ್ತು ಎಂದು ವಾಪಸ್ಸು ಬರುತ್ತದೆ. ಚರಾಸ್ತಿಗಳ ಖರೀದಿಯನ್ನು ಮಾಡುವಂತಹ ಯೋಗ ಕೂಡ ಈ ದಿನ ಇದೆ. ದೇವತಾ ಕಾರ್ಯಗಳಲ್ಲಿ ಕೂಡ ಭಾಗವಹಿಸುತ್ತೀರಿ ಮತ್ತು ಇದರಿಂದ ಮಾನಸಿಕ ನಿಮ್ಮದಿ ಪಡೆದುಕೊಳ್ಳುತ್ತೀರಿ.
ಶುಭ ಸಂಖ್ಯೆ : 8.

ಕನ್ಯಾ ರಾಶಿ:- ಸಾಹಿತ್ಯ ಸಂಗೀತ ಮುಂತಾದ ಕಲಾ ನೈಪುಣ್ಯತೆ ಹೊಂದಿರುವ ವ್ಯಕ್ತಿಗಳ ಜೊತೆ ದಿನಪೂರ್ತಿ ಒಡನಾಟ ಇರುತ್ತದೆ. ನಿಮ್ಮಲ್ಲಿ ಹೊಸ ಉತ್ಸಾಹವನ್ನು ಉಂಟು ಮಾಡುತ್ತದೆ. ರಿಯಲ್ ಎಸ್ಟೇಟ್ ಮತ್ತು ಭೂ ಸಂಬಂಧಿ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಆಗುವ ಸಾಧ್ಯತೆಗಳು ಇವೆ.
ಶುಭ ಸಂಖ್ಯೆ : 06.

ತುಲಾ ರಾಶಿ:- ಇಂದು ನಿಮ್ಮ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ. ವಾಹನಗಳ ಮಾರಾಟ ಮಾಡುವವರು ಮತ್ತು ರಿಪೇರಿ ಮಾಡುವವರಿಗೆ ಹೆಚ್ಚಿನ ವ್ಯಾಪಾರ ನಡೆದು ಅಧಿಕ ಲಾಭ ಆಗುತ್ತದೆ. ಕಾನೂನಿಗೆ ಸಂಬಂಧಪಟ್ಟ ವ್ಯವಹಾರಿಗಳಿಗೆ ಕೈ ಹಾಕುವುದಾದರೆ ಸಂಬಂಧಪಟ್ಟವರ ಸಲಹೆ ಪಡೆದು ಮುಂದುವರೆಯಿರಿ.
ಶುಭ ಸಂಖ್ಯೆ: 03.

ವೃಶ್ಚಿಕ ರಾಶಿ:- ಮನೆಯಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಉತ್ತಮವಾದ ಹಣಕಾಸಿನ ಪರಿಸ್ಥಿತಿ ಕೂಡ ಇರುತ್ತದೆ. ಸರ್ಕಾರಿ ನೌಕರರಿಗೆ ಬಿಡುವಿನ ದಿನವಾಗಿದ್ದರು ಉನ್ನತ ಹುದ್ದೆಯಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಚಾಣಾಕ್ಷತನದಿಂದ ಸಮಸ್ಯೆ ಪರಿಹಾರ ಮಾಡಿಕೊಳ್ಳುವಿರಿ.
ಶುಭ ಸಂಖ್ಯೆ : 09.

ಧನಸ್ಸು ರಾಶಿ:- ಕ್ರೀಡಾಪಟುಗಳಿಗೆ ಉತ್ತೇಜನ ಸಿಗುವ ಸಾಧ್ಯತೆಗಳು ಇವೆ, ಉತ್ತಮವಾಗಿ ಸಾಧನೆ ಮಾಡುವ ಅವಕಾಶಗಳು ಸೃಷ್ಟಿಯಾಗುತ್ತವೆ. ವಿಪರೀತವಾದ ಅನಾವಶ್ಯಕ ಮಾತುಗಳಿಂದ ನಿಮ್ಮ ಕೆಲಸಕ್ಕೆ ತೊಂದರೆ ಉಂಟಾಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ, ಎಲ್ಲೂ ಸಹ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಬೇಡಿ.
ಶುಭ ಸಂಖ್ಯೆ : 04.

ಮಕರ ರಾಶಿ:- ಕುಟುಂಬದ ಸದಸ್ಯರ ಜೊತೆ ಮೃದುವಾಗಿ ವರ್ತಿಸಿರಿ. ಮನಸ್ಸಿನಲ್ಲಿ ಎಷ್ಟೇ ದುಗುಢಗಳು ಇದ್ದರೂ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತೀರಿ. ಈ ದಿನ ನಿಮ್ಮ ಹಣಕಾಸಿನ ಆದಾಯವನ್ನು ತಂದು ಕೊಡುವ ಹೊಸ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ.
ಶುಭ ಸಂಖ್ಯೆ : 01.

ಕುಂಭ ರಾಶಿ:- ವರಮಾನದಲ್ಲಿ ಗಣನೀಯ ಸುಧಾರಣೆ ಇದೆ. ವಿದೇಶದಲ್ಲಿರುವ ಮಕ್ಕಳ ಅಥವಾ ಸ್ನೇಹಿತರ ಅಥವಾ ಸಂಬಂಧಿಕರ ಆಗಮನಕ್ಕಾಗಿ ಕಾಯುವಿರಿ. ಇಂದು ಗೃಹಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಸಮಯವನ್ನು ಕೊಡುತ್ತೀರಿ. ಇದು ನಿಮಗೆ ಬಹಳ ಆನಂದವನ್ನು ಕೂಡ ಉಂಟು ಮಾಡುತ್ತದೆ.
ಶುಭ ಸಂಖ್ಯೆ : 07.

ಮೀನ ರಾಶಿ:- ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳು ಇವೆ. ಸಂಶೋಧನೆಗೆ ಸಂಬಂಧಪಟ್ಟ ಉದ್ಯೋಗ ಮಾಡುತ್ತಾ ಇರುವವರಿಗೆ ಕೆಲಸದಲ್ಲಿ ಪ್ರಗತಿ ದೊರೆಯುತ್ತದೆ ಇದರ ಜೊತೆಗೆ ಈ ದಿನ ನೀವು ಮಾಡುವ ಕೆಲಸಗಳಿಗೆ ಪ್ರಶಂಸೆಯೂ ಕೂಡ ಸಿಗುತ್ತದೆ. ಈ ದಿನ ಬಹಳ ನಿರಾಳವಾಗಿ ಇರುತ್ತೀರಿ.
ಶುಭ ಸಂಖ್ಯೆ : 02.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ. ಬೇಕಾಗುವ ದಾಖಲೆ & ಅರ್ಹತೆಗಳೇನು ನೋಡಿ.!

0

 

ಕರ್ನಾಟಕ ರಾಜ್ಯದ ಜನತೆ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನೌನ್ಸ್ಮೆಂಟ್ ಇಂದು ನಡೆದಿದೆ. ಸಚಿವ ಸಂಪುಟದ ಜೊತೆ ಕ್ಯಾಬಿನೆಟ್ ಮೀಟಿಂಗ್ ನಡೆಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಸುದ್ದಿಗೋಷ್ಠಿ ನಡೆಸಿ 5 ಗ್ಯಾರಂಟಿ ಕಾರ್ಡ್ ಯೋಜನೆಗಳಿಗೂ ಇರುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ವಿವರವಾಗಿ ತಿಳಿಸಿದ್ದಾರೆ.

ಇದರಲ್ಲಿ ಎರಡನೇ ಗ್ಯಾರಂಟಿ ಕಾರ್ಡ್ ಆದ ಗೃಹಲಕ್ಷ್ಮಿ ಯೋಜನೆ ಅನೌನ್ಸ್ಮೆಂಟ್ ಬಗ್ಗೆ ಕರ್ನಾಟಕ ಎಲ್ಲಾ ಮಹಿಳೆಯರೂ ಕಾಯುತ್ತಿದ್ದರು. ಯಾಕೆಂದರೆ ಸರ್ಕಾರದ ವತಿಯಿಂದ ಇನ್ನು ಮುಂದೆ ಕುಟುಂಬದ ಯಜಮಾನಿಗೆ 2,000ರೂ. ಸಹಾಯಧನ ಸಿಗುತ್ತದೆ ಎಂದು ಹೇಳಿದ ಕಾರಣ ಒಂದು ಕುಟುಂಬದಲ್ಲಿ ಹೆಚ್ಚು ಮಹಿಳೆಯರಿದ್ದರೆ ಅತ್ತೆಗೆ ಸಿಗಲಿದೆಯೋ ಅಥವಾ ಸೊಸೆಗೆ ಸಿಗಲಿದೆಯೋ.

ಈಗಾಗಲೇ ಸರ್ಕಾರದಿಂದ ಯಾವುದಾದರೂ ಪಿಂಚಣಿ ಪಡೆಯುತ್ತಿದ್ದರೆ ಅವರಿಗೂ ಸಿಗುತ್ತದೆಯಾ, BPL ಕಾರ್ಡ್ ಹೊಂದಿದ್ದ ಕುಟುಂಬದ ಯಜಮಾನಿಗೆ ಮಾತ್ರ ಸಿಗುತ್ತದೆಯಾ ಎನ್ನುವ ಗೊಂದಲಗಳಿತ್ತು. ಈಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ.

ಇಂದಿನ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ ಪ್ರಮುಖ ಅಂಶಗಳು:-
● ಆಗಸ್ಟ್ 15 ರಂದು ಸ್ವತಂತ್ರ ದಿನಾಚರಣೆ ದಿನ ಗೃಹಲಕ್ಷ್ಮಿ ಯೋಜನೆಗೆ ಲಾಂಚ್ ಆಗುತ್ತದೆ.
● ಜೂನ್ 15ರಿಂದ ಜುಲೈ 15 ರ ತನಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ.

● ಕೆಲ ತಾಂತ್ರಿಕ ತೊಂದರೆ ಮತ್ತು ಇನ್ನು ಕರ್ನಾಟಕದಲ್ಲಿ ಎಷ್ಟೋ ಮಹಿಳೆಯರ ಅಕೌಂಟ್ ಹೊಂದಿರದ ಕಾರಣ ಯೋಜನೆ ಜಾರಿಗೆ ತಡವಾಗುತ್ತಿದೆ ಆದರೆ ಆಗಸ್ಟ್ ತಿಂಗಳಿಂದ ಪ್ರತಿ ತಿಂಗಳು ಕೂಡ ಕುಟುಂಬದ ಯಜಮಾನಿ ಖಾತೆಗೆ 2000 ರೂಪಾಯಿ DBT ಮೂಲಕ ನೇರವಾಗಿ ಮನೆ ಒಡತಿ ಖಾತೆಗೆ ಜಮೆ ಆಗಲಿದೆ.
● ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

● ಪೂರಕ ದಾಖಲೆಗಳಾಗಿ ಅರ್ಜಿಯಲ್ಲಿ ಕೇಳಿರುವ ವಿವರಗಳು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಕೂಡ ಕೊಡಬೇಕು.
● APL, BPL ಯಾವುದೇ ಭೇದ ಇಲ್ಲದೆ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗಲಿದೆ
● ಅತ್ತೆಗೆ ಸಿಗಬೇಕು ಅಥವಾ ಸೊಸೆಗೆ ಸಿಗಬೇಕು ಎನ್ನುವ ಯಾವುದೇ ಗೊಂದಲಗಳು ಇಲ್ಲ, ಕರ್ನಾಟಕದಲ್ಲಿ ಎಷ್ಟು ಕುಟುಂಬಗಳು ಇವೆ ಎನ್ನುವ ದಾಖಲೆ ಸರ್ಕಾರದ ಬಳಿ ಇದೆ.

ಆ ಕುಟುಂಬದ ಮಹಿಳೆಯರಲ್ಲಿ ಯಾರಿಗೆ ಹೋಗಬೇಕು ಎನ್ನುವುದನ್ನು ಕುಟುಂಬದವರೇ ನಿರ್ಧಾರ ಮಾಡಬೇಕು ಅರ್ಜಿ ಫಾರಂನಲ್ಲಿ ಇದರ ವಿವರ ಇರುತ್ತದೆ.
● ಫಲಾನುಭವಿಗೆ ಕಡ್ಡಾಯವಾಗಿ 18 ವರ್ಷ ತುಂಬಿರಬೇಕು.
● ಆಗಸ್ಟ್ 15ರವರೆಗೂ ಕೂಡ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯುತ್ತದೆ, ಮಹಿಳೆಯರು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ರೆಡಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಮುಖ್ಯವಾಗಿ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆ ಹೊಂದಿರಲೇಬೇಕು, ಅದಕ್ಕೆ ಆಧಾರ್ ಲಿಂಕ್ ಆಗಿರಬೇಕು.

●:ಈಗಾಗಲೇ ಮಹಿಳೆಯರು ವಿಧವೆ ವೇತನ ಅಥವಾ ವೃದ್ಯಾಪ ವೇತನ ಅಥವಾ ಅಂಗವಿಕಲ ವೇತನ ಈ ರೀತಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುತ್ತಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು. ಸಾಮಾಜಿಕ ಭದ್ರತೆ ಪಿಂಚಣಿ ಹೊರತುಪಡಿಸಿ ಪ್ರತಿ ತಿಂಗಳು 2000 ಸಹಾಯಧನವನ್ನು ನೀಡಲಾಗುತ್ತದೆ.
● ಇತ್ಯಾದಿ ಅಂಶಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು, ಮತ್ತು ಇನ್ನು ವಿವರವಾಗಿ ಆದೇಶ ಪತ್ರ ಹೊರಡಿಸಿ ತಿಳಿಸಲಾಗುವುದು ಎನ್ನುವ ಮಾಹಿತಿಯನ್ನು ಕೂಡ ತಿಳಿಸಿದರು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*