Home Blog Page 310

ನಿರೂಪಣೆಯಲ್ಲಿ ಅನುಶ್ರೀ ನೇ ಹಿಂದಿಕ್ಕಿದ ಶ್ವೇತಾ ಚಂಗಪ್ಪ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.? ಸಾಧನೆ ಅಂದ್ರೆ ಇದೇ ನೋಡಿ.

0

ಕಿರುತೆರೆ ಲೋಕದಲ್ಲಿ ಮಹಿಳಾ ಆಂಕರ್ ಗಳ ಸಾಲಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಅನುಶ್ರೀ ಅವರು ಈಗಾಗಲೇ ಅವರ ನಿರೂಪಣೆಯಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ. ಇವರ ಮಾತು ನಗು ಪಂಚ್ ಡಾನ್ಸ್ ಕಾಮಿಡಿ ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟ ಆಗಿದೆ ಹೀಗಾಗಿ ಸದಾ ಲವಲವಿಕೆಯಿಂದ ಎಲ್ಲರನ್ನು ನಗಿಸುತ್ತಾ ಕಾರ್ಯಕ್ರಮ ನಡೆಸಿಕೊಡುವ ಅನುಶ್ರೀ ಅವರು ತಮ್ಮ ನಿರೂಪಣೆಯಿಂದಲೇ ಹೆಚ್ಚು ಹೆಸರುವಾಸಿ. ಕಿರುತೆರೆಯ ರಿಯಾಲಿಟಿ ಶೋ ಗಳನ್ನು ನಡೆಸಿಕೊಡುವುದರ ಜೊತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವು ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಖ್ಯಾತಿಗೆ ಅನುಶ್ರೀ ಹೆಸರಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಇವರಿಗೆ ಪಾಪ್ಯುಲರ್ ಆಂಕರ್ ಎನ್ನುವ ಪ್ರಶಸ್ತಿ ಕೂಡ ಸಂದಿದೆ. ಆದರೆ ಇತ್ತೀಚೆಗೆ ಅನುಶ್ರೀ ಅವರನ್ನು ಹಿಂದಿಕ್ಕಿ ಮತ್ತೊಬ್ಬ ಜೀ ಕನ್ನಡ ವಾಹಿನಿಯ ಮಹಿಳಾ ಆಂಕರ್ ಬಹಳ ಫೇಮಸ್ ಆಗುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಕಿರುತೆರೆಯ ಪಾಪುಲರ್ ಫೇಸ್ ಶ್ವೇತ ಚಂಗಪ್ಪ ಅವರು. ಶ್ವೇತ ಚೆಂಗಪ್ಪ ಅವರು ಕೊಡಗಿನ ಚೆಲುವೆ. ಮದುವೆ ಆಗಿ ಮಗನಿದ್ದರೂ ಕೂಡ ಯಾವುದೇ ನಟಿಗೂ ಕಡಿಮೆ ಇಲ್ಲದಂತೆ ಬ್ಯೂಟಿ ಮೆಂಟಲ್ ಮಾಡಿರುವ ಶ್ವೇತ ಚಂಗಪ್ಪ ಅವರು ಇನ್ನು ಕೂಡ 18 ರ ಯುವತಿಯಂತೆ ಕಾಣುತ್ತಾರೆ. ಇವರು ಈಗಾಗಲೇ ಕಾದಂಬರಿ ಎನ್ನುವ ಮೇಗಾ ದಾರವಾಹಿಯಲ್ಲಿ ನಟಿಸಿ ಇವರ ಹೆಸರನ್ನು ಶ್ವೇತ ಎನ್ನುವ ಬದಲು ಕಾದಂಬರಿ ಎಂದು ಜನ ಗುರುತಿಸುವಷ್ಟು ಪ್ರೇಕ್ಷಕರ ಮನಸಿಗೆ ಹತ್ತಿರವಾಗಿದ್ದಾರೆ.

ಈ ಧಾರಾವಾಹಿ ಮುಗಿದು ದಶಕಗಳೇ ಕಳೆದರೂ ಕೂಡ ಆ ಪಾತ್ರದ ಪಾಪುಲರಿಟಿ ಇನ್ನು ಕಡಿಮೆ ಆಗಿಲ್ಲ. ಇದಾದ ಬಳಿಕ ವರ್ಷ ತಂಗಿಗಾಗಿ ಇನ್ನು ಮುಂತಾದ ಸಿನಿಮಾಗಳಲ್ಲಿ ತಂಗಿ ಪಾತ್ರದಲ್ಲಿ ದರ್ಶನ್ ಮತ್ತು ವಿಷ್ಣುವರ್ಧನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಬೆಳ್ಳಿತರೆ ಇವರ ಬದುಕಿಗೆ ಅಷ್ಟೊಂದು ಬೆಳಕು ತರಲಿಲ್ಲ ನಂತರ ಕಿರುತೆರೆ ಕಡೆಗೆ ಮುಖ ಮಾಡಿದ ಇವರು ಸಾಲಕ್ಕೊಂದು ಸಲಾಂ ಎನ್ನುವ ಮತ್ತು ಕುಣಿಯೋಣ ಬಾರ ಎನ್ನುವ ಡ್ಯಾನ್ಸಿಂಗ್ ಶೋ ಕೂಡ ನಡೆಸಿಕೊಟ್ಟರು. ಜೊತೆಗೆ ಕನ್ನಡದ ಮೂರನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ಭಾಗವಹಿಸಿದ್ದರು.

ನಂತರ ಸುವರ್ಣ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಿರುತೆಯಲ್ಲಿ ಮತ್ತೊಮ್ಮೆ ಇವರಿಗೆ ಹೆಸರು ತಂದು ಕೊಟ್ಟಿದ್ದು ಇವರು ಮಜಾ ಟಾಕೀಸ್ ಅಲ್ಲಿ ಒಬ್ಬ ಹಾಸ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದು. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಸೃಜನ್ ಅವರ ಪೇರ್ ಆಗಿ ರಾಣಿ ಎನ್ನುವ ಪಾತ್ರದಲ್ಲಿ ಶ್ವೇತ ಚಂಗಪ್ಪ ಅವರು ಜನರಿಗೆ ಬಹಳ ಇಷ್ಟ ಆಗಿದ್ದರು. ಸದ್ಯಕ್ಕೆ ತಮ್ಮ ಬಿಸಿನೆಸ್ ಹಾಗೂ ಯೌಟ್ಯೂಬ್ ಚಾನೆಲ್ ಜೊತೆಗೆ ಝೀ ಕನ್ನಡ ವಾಹಿನಿಯ ಮತ್ತೊಂದು ಹೆಸರಾಂತ ರಿಯಾಲಿಟಿ ಶೋ ಜೋಡಿ ನಂಬರ್ ಒನ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

ಈ ಶೋಗೆ ಸಂಭಾವನೆ ಆಗಿ ಪ್ರತಿ ಎಪಿಸೋಡಿಗೆ ಅನುಶ್ರೀ ಅವರು ಪಡೆಯುತ್ತಿದ್ದ ಸಂಭಾವನೆಗಿಂತ ಹೆಚ್ಚು ಹಣವನ್ನು ಶ್ವೇತ ಚಂಗಪ್ಪ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ. ಹೌದು ಅನುಶ್ರೀ ಅವರು ಒಂದು ಎಪಿಸೋಡ್ ನಡೆಸುವುದಕ್ಕೆ ಸುಮಾರು 80 ರಿಂದ ಒಂದು ಲಕ್ಷ ರೂಪಾಯಿ ಸಂಬಾವನೆ ಪಡೆಯುತ್ತಾರೆ. ಆದರೆ ಶ್ವೇತ ಚಂಗಪ್ಪನವರು ಒಂದು ಲಕ್ಷಕ್ಕೂ ಅಧಿಕ ಸಂಭವನೆ ಪಡೆಯುತ್ತಿದ್ದಾರಂತೆ ಅಲ್ಲದೆ ಇವರು ಬಹಳ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಕಾರಣ ಅನುಶ್ರೀ ಅವರಿಗೆ ಇವರು ಕಾಂಪಿಟೇಶನ್ ಅಗಲಿದ್ದಾರೆ ಎನ್ನುವ ಮಾತುಗಳನ್ನು ಕೂಡ ಜನ ಆಡುತ್ತಿದ್ದಾರೆ. ಸೌಂದರ್ಯದ ಜೊತೆಗೆ ಟ್ಯಾಲೆಂಟ್ ಎಂದಿಗೂ ಒಟ್ಟಿಗೆ ಇರುವುದಿಲ್ಲ ಎನ್ನುತ್ತಾರೆ ಅದಕ್ಕೆ ಅನ್ವರ್ಥದ ರೀತಿ ಇದ್ದರೆ ಶ್ವೇತ ಚಂಗಪ್ಪ ಅವರು. ನಿಮ್ಮ ಪ್ರಕಾರ ಬೆಸ್ಟ್ ಆಂಕರ್ ಯಾರು ಅನುಶ್ರೀನ ಅಥವಾ ಶ್ವೇತಾ ಚಂಗಪ್ಪನ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

0

ಕನ್ನಡದ ಕಲಾ ಕಂಠೀರವ, ಮೇರುನಟ ಅಣ್ಣಾವ್ರು ಎಂತಹ ಅದ್ಭುತ ಕಲಾವಿದ ಎನ್ನುವುದು ಪದಗಳಲ್ಲಿ ವಿವರಿಸುವ ಸಣ್ಣ ಮಾತಲ್ಲ. ಇಡೀ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟಕ್ಕೆ ಹೋಲಿಸಿದರೂ ಸಹ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಹೆಮ್ಮೆಯ ಡಾ. ರಾಜಕುಮಾರ್ ಅವರು ಮಾತ್ರ. ಮೂಲತಃ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಣ್ಣಾವ್ರು ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದ ನಂತರ ಕನ್ನಡದಲ್ಲಿ ಸಿನಿಮಾ ಯುಗ ಆರಂಭವಾಯಿತು ಎನ್ನಬಹುದು.

ಕನ್ನಡದ ಚಂದನ ವನ ಇಂದು ವಿಶ್ವ ಮಟ್ಟಕ್ಕೆ ದಾಖಲೆ ಮಾಡುತ್ತಿದೆ ಎಂದರೆ ಇದಕ್ಕೆ ಮೂಲವಾಗಿ ಅಡಿಪಾಯ ಹಾಕಿದವರೇ ಮುತ್ತುರಾಜ. ಅಭಿನಯದಲ್ಲಿ ಇವರೆಂತಹ ಭಯಂಕರ ನಟ ಎನ್ನುವುದನ್ನು ಹೇಳುವುದೇ ಬೇಡ ಅವರ ಸಿನಿಮಾಗಳನ್ನು ನೋಡಿದರೆ ಸಾಕು ನೋಡುವವರು ಮೈ ಮರೆತು ತಾವೂ ಸಹಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಪೊಲೀಸ್ ಪಾತ್ರವಾಗಲಿ, ಲಾಯರ್ ಪಾತ್ರವಾಗಲಿ, ಲೆಕ್ಚರರ್ ಪಾತ್ರವಾಗಲಿ, ರೈತನ ಪಾತ್ರವೇ ಆಗಲಿ ಅಥವಾ ರಾಜನ ಪಾತ್ರವೇ ಆಗಲಿ ಎಲ್ಲಾ ಪಾತ್ರಗಳಿಗೂ ಕೂಡ ಜೀವ ತುಂಬುತ್ತಿದ್ದರು ಅಣ್ಣಾವ್ರು.

ಅಣ್ಣಾವ್ರ ಬಾಯಿಯಲ್ಲಿ ಬರುತ್ತಿದ್ದ ಅದ್ಭುತವಾದ ಕನ್ನಡ ಅವರ ಸುಶ್ರಾವ್ಯ ಕಂಠ, ಪಾತ್ರಕ್ಕೆ ತಕ್ಕ ಹಾಗೆ ಹಾವಭಾವ ಎಲ್ಲವೂ ಕೂಡ ನೋಡುಗನನ್ನು ಮೋಡಿ ಮಾಡುತ್ತಿತ್ತು. ಅಭಿಮಾನಿಗಳನ್ನೇ ದೇವರು ಎಂದು ಇವರು ಕರೆದರೆ ಇಡೀ ಕರ್ನಾಟಕ ಇವರನ್ನು ಅಣ್ಣ ಎಂದು ಕರೆಯಿತು. ಇಂತಹ ಒಬ್ಬ ಅದ್ಭುತ ನಟನ ಜೊತೆ ಅಭಿನಯಿಸುವ ಅವಕಾಶ ಸಿಗುತ್ತದೆ ಎಂದರೆ ಯಾರು ಕೂಡ ಮಿಸ್ ಮಾಡಿಕೊಳ್ಳುವುದಿಲ್ಲ. ಇವರ ಸಿನಿಮಾದಲ್ಲಿ ಯಾವುದಾದರೂ ಸಣ್ಣ ಪಾತ್ರ ಸಿಕ್ಕರೂ ತಪ್ಪದೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.

ಆದರೆ ಈ ಒಬ್ಬ ನಟಿ ಮಾತ್ರ ಅಣ್ಣಾವ್ರ ಜೊತೆ ಅಭಿನಯಿಸುವ ಅದೃಷ್ಟವನ್ನು ತಾವಾಗೇ ಕಳೆದುಕೊಂಡಿದ್ದಾರೆ. ಇದು ಬೇರೆ ಯಾರು ಅಲ್ಲ ಕನ್ನಡದ ಕಣ್ಣೀರಿನ ನಟಿ ಎಂದ ಖ್ಯಾತಿ ಆಗಿರುವ ಶ್ರುತಿ ಅವರು. ಶೃತಿ ಅವರು ಇಂದು ಕರ್ನಾಟಕದ ಮನೆ ಮಗಳಂತೆ ಎಲ್ಲರಿಗೂ ಆಪ್ತರಾಗಿದ್ದಾರೆ ಯಾಕೆಂದರೆ ಇವರು ಅಭಿನಯಿಸುತ್ತಿದ್ದಿದ್ದು ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾ ಹಾಗೂ ಅದರಲ್ಲೂ ಸಾಂಸಾರಿಕ ಚಿತ್ರಗಳಲ್ಲಿ ಅಭಿನಯಿಸಿ ಹೆಣ್ಣುಮಕ್ಕಳ ಭಾವನೆಗಳನ್ನು ಕಷ್ಟಗಳನ್ನು ಎಲ್ಲರ ಕಣ್ಣು ಕಟ್ಟುವ ಹಾಗೆ ಅಭಿನಯಿಸಿ ತೋರಿಸುತ್ತಿದ್ದರು ಇವರು ಇಂದಿಗೂ ಕೂಡ ಅನೇಕರ ಫೇವರೆಟ್ ಹೀರೋಯಿನ್.

ಶಿವಣ್ಣ ಹಾಗೂ ರಾಘಣ್ಣನ ಜೊತೆ ನಾಯಕಿ ಆಗಿ ಅಭಿನಯಿಸಿರುವ ಶ್ರುತಿ ಅವರಿಗೆ ಅಣ್ಣಾವ್ರ ಜೊತೆ ಅಭಿನಯಿಸುವ ಅದೃಷ್ಟ ಕೂಡ ದೊರೆತಿತ್ತು. ಅದು ಕೂಡ ಅವರ ಜೀವನ ಚೈತ್ರ ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಶ್ರುತಿ ಅವರು ನಿಭಾಯಿಸಬೇಕಿತ್ತು ಆ ಪಾತ್ರಕ್ಕೆ ಸ್ವತಃ ಅಣ್ಣಾವ್ರೇ ಶ್ರುತಿ ಅವರನ್ನು ಸೂಚಿಸಿದ್ದರು. ಆದರೆ ಆ ಸಮಯದಲ್ಲಿ ಶ್ರುತಿ ಅವರು ಬಹಳ ಬ್ಯುಸಿ ಇದ್ದ ಕಾರಣ ಡೇಟ್ ಮ್ಯಾಚ್ ಆಗದೆ ಈ ಸಿನಿಮಾದಲ್ಲಿ ಅವರು ಅಭಿನಯಿಸಲು ಸಾಧ್ಯವಾಗಲಿಲ್ಲ ನಂತರ ಅವರ ಪಾತ್ರವನ್ನು ಬೇರೆ ಒಬ್ಬ ನಟಿ ಅಭಿನಯಿಸಿದರು.

ಆದರೆ ಆ ಬಗ್ಗೆ ಇಂದಿಗೂ ಕೂಡ ಪಶ್ಚಾತಾಪ ಪಡೆಯುವ ಶ್ರುತಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಇದರ ಬಗ್ಗೆ ಹೇಳಿಕೊಂಡು ಬೇಸರ ಪಟ್ಟಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ಅಣ್ಣಾವ್ರ ಜೊತೆ ಅಭಿನಯಿಸುವ ಮತ್ತೊಂದು ಅವಕಾಶ ಅವರಿಗೆ ಸಿಗಲೆ ಇಲ್ಲ ಅಂತ. ಸದ್ಯಕ್ಕೆ ಶೃತಿ ಅವರು ಕನ್ನಡದ ಕಿರುತೆರೆ ಕಾರ್ಯಕ್ರಮ ಒಂದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಣ್ಣಾವ್ರ ಜೊತೆ ಅಭಿನಯಿಸಬೇಕಾದರೆ ಪುಣ್ಯ ಮಾಡಿರಬೇಕು ಎಂದು ಕೆಲವು ನೆಟ್ಟಿಗರು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

0

ರಾಧಿಕಾ ಪಂಡಿತ್ ಮತ್ತು ಯಶ್ ಅವರು ಸ್ಯಾಂಡಲ್ವುಡ್ ಕಂಡ ಅದ್ಭುತ ಯಶಸ್ವಿ ಜೋಡಿ. ತೆರೆ ಮೇಲು ಕೂಡ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿವೆ ಮತ್ತು ಇಬ್ಬರು ಕೂಡ ಒಂದೇ ಸಮಯದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟವರಾಗಿದ್ದಾರೆ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇಬ್ಬರು ಭೇಟಿ ಆಗಿದ್ದರು, ಈ ಧಾರಾವಾಹಿಯಲ್ಲಿ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಅಭಿನಯಿಸಿದ್ದರೆ ಅವರ ಅಣ್ಣನ ಪಾತ್ರದಲ್ಲಿ ಯಶ್ ಅವರು ಕಾಣಿಸಿಕೊಂಡಿದ್ದರು.

ಆಗ ಪರಸ್ಪರ ಪರಿಚಯವಿದ್ದ ಈ ಎರಡು ಮುಖಗಳು ನಂತರ ಸ್ನೇಹಿತರಾಗಿ ಬದಲಾಗಿದ್ದು ಶಶಾಂಕ್ ಅವರ ನಿರ್ದೇಶನದ ಮೊಗ್ಗಿನ ಮನಸ್ಸು ಎನ್ನುವ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮೊದಲ ಬಾರಿಗೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಂಡರು. ಕಾಲೇಜು ಹುಡುಗಿಯರ ಕಥೆ ಹೇಳುವ ಸಿನಿಮಾ ವಾಗಿದ್ದರೂ ಕೂಡ ಸಿನಿಮಾದ ಪ್ರಮುಖ ಆಕರ್ಷಣೆ ಇವರಿಬ್ಬರ ಕಾಂಬಿನೇಷನ್ ಎಂದೇ ಹೇಳಬಹುದು. ನಂತರ ಇಬ್ಬರ ಅದೃಷ್ಟ ಬದಲಾಗಿ ಹೋಯಿತು.

ಅದೃಷ್ಟದ ಜೊತೆಗೆ ಇವರ ಸತತ ಪ್ರಯತ್ನ, ಹಠ, ಕನಸು ಎಲ್ಲವೂ ಕೂಡ ಇಂದು ಯಶ್ ಅವರು ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳೆಯುವುದಕ್ಕೆ ಕಾರಣ ಆಗಿದ್ದರೆ ಅವರ ಎಲ್ಲಾ ಕನಸುಗಳಿಗೆ ಸ್ಪೂರ್ತಿಯಾಗಿ ಹಾಗೂ ಬೆನ್ನೆಲುಬಾಗಿ ನಿಂತಿದ್ದು ಅವರ ಅರ್ಧಾಂಗಿ ರಾಧಿಕಾ ಪಂಡಿತ್ ಅವರು. ಇಬ್ಬರು ಸಿನಿಮಾ ಲೋಕದಲ್ಲಿ ಒಟ್ಟೊಟ್ಟಿಗೆ ಬೆಳೆಯುತ್ತಿದ್ದರು. ಯಶ್ ಅವರು ರಾಕಿಂಗ್ ಸ್ಟಾರ್ ಆಗಿ ತೆರೆ ಮೇಲೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದರೆ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ವುಡ್ನ ಲಕ್ಕಿ ಡಾಲ್ ಎಂದು ಕರೆಸಿಕೊಂಡರು. ಇವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ನಡೆಯಿತು.

ಈ ಮಧ್ಯೆ ಇಬ್ಬರೂ ಕೂಡ ಡ್ರಾಮಾ ಎನ್ನುವ ಸಿನಿಮಾದಲ್ಲಿ ಮತ್ತೊಮ್ಮೆ ಜೋಡಿ ಆಗಿ ಕಾಣಿಸಿಕೊಂಡರು. ಆ ಸಮಯದಲ್ಲಿ ಯಶ್ ಅವರಿಗೆ ರಾಧಿಕಾ ಪಂಡಿತ್ ಅವರ ಮೇಲೆ ಪ್ರೀತಿ ಆಗಿತ್ತು. ಆಗಲೇ ಅನೇಕರ ಬಳಿ ಹೇಳಿಸುವ ಪ್ರಯತ್ನ ಹಾಗೂ ಸಣ್ಣಪುಟ್ಟ ಕ್ಲೂ ಕೊಡುವ ಪ್ರಯತ್ನ ಮಾಡಿದರು ರಾಧಿಕಾ ಪಂಡಿತ್ ಅವರಿಗೆ ಅದು ಅರ್ಥವಾಗಲಿಲ್ಲವಂತೆ ಹಾಗಾಗಿ ಇನ್ನು ಕೂಡ ರಾಧಿಕಾ ಪಂಡಿತ್ ಅವರನ್ನು ಯಶ್ ಅವರು ಫೂಲ್ ಎನ್ನುತ್ತಾರೆ. ಅವರ ನಂಬರ್ ಅನ್ನು ಕೂಡ ಅದೇ ರೀತಿ ಸೇವ್ ಮಾಡಿಕೊಂಡಿದ್ದಾರಂತೆ.

ನಂತರ ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾಗಳಲ್ಲಿ ಇವರಿಬ್ಬರು ನಾಯಕ ಆಗಿ ಕಾಣಿಸಿಕೊಂಡರು. ಮಿಸಸ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಇವರಿಬ್ಬನು ನೋಡಿದ ಮೇಲೆ ಎಲ್ಲರಿಗೂ ಕೂಡ ಇವರಿಬ್ಬರು ನಿಜ ಜೀವನದಲ್ಲಿ ಕೂಡ ಜೋಡಿ ಆದರೆ ಎಷ್ಟು ಚೆಂದ ಎನಿಸುತ್ತಿತ್ತು. ಯಶ್ ಅವರು ಮೊದಲಿಗೆ ರಾಧಿಕಾ ಪಂಡಿತ್ ಅವರಿಗೆ ಪ್ರಪೋಸ್ ಮಾಡಿದರಂತೆ ಆದರೆ ಪ್ರಪೋಸ್ ಮಾಡಲು ಇವರಿಗೆ ಬಹಳ ಆತ್ಮವಿಶ್ವಾಸದ ಕೊರತೆ ಇತ್ತಂತೆ ಕಾರಣ ಅವರು ಪ್ರೀತಿ ಒಪ್ಪಿಕೊಳ್ಳದೆ ಹೋದರೆ ಇರುವ ಸ್ನೇಹವನ್ನು ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡುತ್ತಿತ್ತಂತೆ.

ಹಾಗಾಗಿ ರಾಧಿಕಾ ಪಂಡಿತ್ ಅವರ ಸ್ನೇಹ ಕಳೆದುಕೊಳ್ಳಲು ಯಶ್ ಅವರಿಗೆ ಇಷ್ಟ ಇಲ್ಲದ ಕಾರಣ ಬಹಳ ಯೋಚನೆ ಮಾಡಿ ಒಂದು ದಿನ ಪ್ರಪೋಸ್ ಮಾಡಿದರಂತೆ. ಯಶ್ ಅವರು ಪ್ರಪೋಸ್ ಮಾಡಿದ ತಕ್ಷಣ ರಾಧಿಕಾ ಪಂಡಿತ್ ಅವರು ಎಸ್ ಎಂದು ಹೇಳಲಿಲ್ಲ ಬದಲಿಗೆ ಸಮಯ ತೆಗೆದುಕೊಂಡು ಯೋಚಿಸಿ ನಂತರ ಪ್ರೀತಿ ಒಪ್ಪಿಕೊಂಡರಂತೆ ಇದೀಗ ಈ ಮುದ್ದಾದ ಜೋಡಿಗೆ ಮದುವೆಯಾಗಿ ಎರಡು ಮಕ್ಕಳು ಇದೆ. ಇಂದಿಗೂ ಪ್ರೀತಿಸಿ ಮದುವೆ ಆಗುವವರಿಗೆ ಇವರು ಮಾದರಿ ಜೋಡಿ ರೀತಿ ಇದ್ದಾರೆ. ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ದರ್ಶನ್ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಇದರ ನಿಖರ ಬೆಲೆ ತಿಳಿದ್ರೆ

0

ದರ್ಶನ್ ಫ್ಯಾನ್ಸ್ ಗಳಿಂದ ದಚ್ಚು ಎಂದು ಕರೆಸಿಕೊಳ್ಳುತ್ತಿದ್ದರೆ ಚಂದನ ವನ ಇವರಿಗೆ ಚಾಲೆಂಜಿಂಗ್ ಸ್ಟಾರ್ ಎನ್ನುವ ಪಟ್ಟಿ ಕೊಟ್ಟಿದೆ. ಕಾರಣ ಇವರು ತಮ್ಮ ಕೆರಿಯರ್ ಅನ್ನು ಫೇಸ್ ಮಾಡಿದ ರೀತಿ. ತಂದೆ ಹೆಸರಾಂತ ಖಳನಾಯಕ ಆಗಿದ್ದರು ಕೂಡ ದರ್ಶನ್ ಅವರ ಬಣ್ಣದ ಬದುಕು ಹಾಗೂ ದರ್ಶನ್ ಅವರ ಎಂಟ್ರಿ ಅಷ್ಟು ಸುಲಭವಾಗಿ ಇರಲಿಲ್ಲ. ಹೇಗೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗರು ಕನಸು ಕಾಣುತ್ತಾರೋ ಅದೇ ರೀತಿ ದರ್ಶನವರು ಬಣ್ಣದ ಬದುಕಿನ ಬಗ್ಗೆ ಕನಸು ಕಂಡು ಹೀರೋ ಆಗಬೇಕು ಎನ್ನುವ ಹಠವನ್ನು ತೊಟ್ಟು ಅದೇ ದಾರಿಯಲ್ಲಿ ಸಾಹಸ ಮಾಡಿ ತಮ್ಮ ಚಾಲೆಂಜ್ ಅನ್ನು ಗೆದ್ದು ಇಂದು ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ.

ಲೈಟ್ ಬಾಯ್ ಆಗಿದ್ದ ದರ್ಶನ್ ಇಂದ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ದರ್ಶನ್ ವರೆಗೆ ಅವರ ಬದುಕಿನ ಕಥೆಯೇ ರೋಚಕ. ದರ್ಶನ್ ಅವರು ಮೊದಲಿಗೆ ಲೈಟ್ ಬಾಯ್ ಆಗಿ ನಂತರ ಅಸಿಸ್ಟೆಂಟ್ ಕ್ಯಾಮರಮನ್ ಆಗಿ ಜೂನಿಯರ್ ಆರ್ಟಿಸ್ಟ್ ಆಗಿ ಮತ್ತು ಅತಿಥಿ ಪಾತ್ರದಲ್ಲಿ ಹಾಗೂ ಸಹ ಕಲಾವಿದನ ರೀತಿ ಪಾತ್ರ ಮಾಡುತ್ತಾ ಬಂದರು. ಮೆಜೆಸ್ಟಿಕ್ ನಂತರ ಕನ್ನಡದಲ್ಲಿ ಭರವಸೆಯ ನಾಯಕ ಆದರು. ಅಭಿನಯದಲ್ಲಿ ಇವರಿಗೆ ಇವರೇ ಸಾಟಿ ಇದಕ್ಕೆ ಸಾಕ್ಷಿ ಇವರು ಅಭಿನಯಿಸಿದ ನಮ್ಮ ಪ್ರೀತಿಯ ರಾಮು ಸಿನಿಮಾ.

ನಂತರ ಲಾಲಿ ಹಾಡು, ಸುಂಟರಗಾಳಿ, ಕಲಾಸಿಪಾಳ್ಯ, ಮಂಡ್ಯ, ಅಯ್ಯಾ, ಗಜ, ಸಾರಥಿ, ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ, ಯಜಮಾನ, ಬುಲ್ ಬುಲ್, ಅಂಬರೀಶ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಹಲವಾರು ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಇವರು ಈಗಲೂ ಕೈತುಂಬ ಹಲವು ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡು ಬ್ಯುಸಿ ಆಗಿದ್ದಾರೆ. ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಕನ್ನಡದಲ್ಲಿ ಬೇರೆ ಯಾವ ನಟನಿಗೂ ಇಲ್ಲ ಯಾಕೆಂದರೆ ದರ್ಶನ್ ಅವರ ನೇರ ನುಡಿ, ಅವರ ವ್ಯಕ್ತಿತ್ವ, ಅವರ ಗುಣ ಸ್ವಭಾವ ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟ ಆಗಿದೆ.

ಅಲ್ಲದೆ ಅಭಿಮಾನಿಗಳನ್ನು ಕೂಡ ತಮ್ಮ ಕುಟುಂಬದವರಷ್ಟೇ ಕಾಳಜಿ ಮಾಡುತ್ತಾರೆ ದರ್ಶನ್ ಅವರು. ಮತ್ತು ದರ್ಶನ್ ಅವರ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ದರ್ಶನ್ ಅವರಿಗೆ ಪ್ರಾಣಿಗಳನ್ನು ಕಂಡರೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ ಹಾಗೆ ಅವರಿಗೆ ದುಬಾರಿ ಕಾರುಗಳ ಬಗ್ಗೆಯೂ ಕೂಡ ಅಷ್ಟೇ ಆಸಕ್ತಿ ಇದೆ. ಈಗಾಗಲೇ ದರ್ಶನ್ ಬಳಿ ಹಲವು ಕಂಪನಿಯ ಕಾರುಗಳ ಕಲೆಕ್ಷನ್ಸ್ ಇದೆ ಇವುಗಳ ಜೊತೆ ಮತ್ತೊಂದು ಇವರ ಬಳಿ ಇರುವ ದುಬಾರಿ ವಸ್ತು ಈಗ ಸುದ್ದಿ ಆಗುತ್ತಿದೆ.

ಈ ತಿಂಗಳಲ್ಲಿ ಬೆಂಗಳೂರಿನ ಅರಮನೆಯಲ್ಲಿ ನಡೆದ ಸೈಮ ಅವಾರ್ಡ್ ಫಂಕ್ಷನ್ ಅಲ್ಲಿ ದರ್ಶನ್ ಅವರು ಸೇರಿದಂತೆ ಅಭಿಷೇಕ್ ಅಂಬರೀಶ್ ಡಾಲಿ ಧನಂಜಯ್ ಶಿವಣ್ಣ ಯಶ್ ಹೀಗೆ ಹಲವು ನಟರು ಭಾಗಿ ಆಗಿದ್ದರು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದ್ದು ಇದನ್ನು ಅಪ್ಪು ಅವರ ಸವಿನೆನಪಿನಲ್ಲಿ ನಡೆಸಿದ್ದಾರೆ. ಈಗ ಕಾರ್ಯಕ್ರಮದಲ್ಲಿ ದರ್ಶನ್ ಅವರು ಧರಿಸಿದ್ದ ವಾಚಿನ ಬಗ್ಗೆ ಚರ್ಚೆ ಆಗುತ್ತಿದೆ ಕಾರಣ ದರ್ಶನ್ ಅವರು ಧರಿಸಿದ್ದ ವಾಚಿನ ಬೆಲೆ ಬರೋಬ್ಬರಿ ಎರಡು ಕೋಟಿ ಬೆಲೆ ಬಾಳುವ ಹೈಬ್ಲೋಟ್ ಕಂಪನಿಯ ವಾಚ್ ಆಗಿದೆ ಇದರ ಬೆಲೆ ಕೇಳಿ ಎಲ್ಲರೂ ಶಾ-ಕ್ ಆಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಮದುವೆ ಆಗುವ ಹುಡುಗನ ಬಗ್ಗೆ ಕೊನೆಗೂ ಬಾಯಿ ಬಿಟ್ಟ ಅನುಶ್ರೀ.

0

ಅನುಶ್ರೀ ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಆಂಕರ್ ಎನ್ನುವ ಪಟ್ಟಕ್ಕೆ ಏರಿರುವ ಕನ್ನಡದ ಜನಪ್ರಿಯ ನಿರೂಪಕಿ ಅರಳು ಉರಿದ ಹಾಗೆ ಕನ್ನಡ ಮಾತನಾಡುವ ಮಾತಿನ ಮಲ್ಲಿ. ಮಾತು ಮಾತಿನ ನಡುವೆ ಪಂಚ್ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸುವ ಜಾಣೆ ಎಂತಹ ಕಾರ್ಯಕ್ರಮ ಆದರು ಕೊನೆವರೆಗೂ ಲವಲವಿಕೆಯಿಂದ ಇದ್ದು ಕಾರ್ಯಕ್ರಮ ಗೆಲ್ಲಿಸುವ ಗಟ್ಟಿಗಿತ್ತಿ. ಹುಟ್ಟಿದ್ದು ಮಂಗಳೂರಿನಲ್ಲಿ ಓದಿದ್ದು ಕಡಿಮೆ. ಚಿಕ್ಕ ವಯಸ್ಸಿನಲ್ಲಿ ತಂದೆಯಿಂದ ದೂರವಾದ ಕುಟುಂಬವಾದ ಕಾರಣ ತಮ್ಮ ಅಭಿಜಿತ್ ಹಾಗೂ ತಾಯಿ ಶಶಿಕಲಾ ಅವರ ಜವಾಬ್ದಾರಿ ಅನುಶ್ರೀ ಅವರ ಹೆಗಲಿಗೇರಿತ್ತು.

ಹೀಗಾಗಿ ಅತಿ ಬೇಗನೆ ಇವರು ಉದ್ಯೋಗದ ಕಡೆ ಮುಖ ಮಾಡಬೇಕಾಯಿತು. ಬಾಲ್ಯದಿಂದಲೂ ನಿರೂಪಕ್ಕೆ ಆಗುವ ಕನಸು ಕಾಡುತ್ತಿತ್ತು, ಹೀಗಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಚಿಕ್ಕದೊಂದು ಕಾರ್ಯಕ್ರಮಕ್ಕೆ ನಿರೂಪಕ್ಕೆ ಆಗಿ ಸೇರಿಕೊಂಡರು. ನಂತರ ಬೆಂಗಳೂರಿನತ್ತ ಬಂದ ಇವರಿಗೆ ತಮ್ಮ ಅದೃಷ್ಟದ ಬಾಗಿಲು ಅಲ್ಲಿಂದ ತೆರೆದುಕೊಂಡಿತ್ತು. ಈ ಟಿವಿಯಲ್ಲಿ ಪ್ರಸಾರವಾದ ಡಿಮ್ಯಾಂಡಪ್ಪ ಡಿಮ್ಯಾಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಳಿಕ ಕನ್ನಡದ ಬಹುತೇಕ ಚಾನೆಲ್ಗಳು ಇವರನ್ನು ನಿರೂಪಕ್ಕೆ ಹಾಕಿ ಆಹ್ವಾನಿಸಿದವು.

ಅದರಲ್ಲೂ ಜೀ ಕನ್ನಡ ವಾಹಿನಿಯ ಸರಿಗಮಪ ಸರಣಿಗಳು ಅನುಶ್ರೀ ಅವರ ಯಶಸ್ಸಿಗೆ ಹಿಡಿದ ಕೈಗನ್ನಡಿ. ಇದುವರೆಗೆ ನಡೆದಿರುವ ಅಷ್ಟೂ ಸೀಸನ್ ಗಳನ್ನೂ ಕೂಡ ನಡೆಸಿಕೊಟ್ಟಿರುವ ಇವರು ಡಿಕೆಡಿ ಡ್ಯಾನ್ಸಿಂಗ್ ಶೋ ಮತ್ತು ಇದರ ಜೊತೆ ಜೀ ಕನ್ನಡದ ಉಳಿದ ಕಾರ್ಯಕ್ರಮಗಳನ್ನು ಕೂಡ ಹೋಸ್ಟ್ ಮಾಡಿದ್ದಾರೆ. ಅಲ್ಲದೆ ಖಾಸಗಿಯಾಗಿ ಕೆಲವು ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಲ್ಲೂ ಕೂಡ ಪಾಲ್ಗೊಳ್ಳುವ ಇವರು ಇಡೀ ಕರ್ನಾಟಕಕ್ಕೆ ಮನೆ ಮಗಳಂತೆ ಹತ್ತಿರವಾಗಿ ಬಿಟ್ಟಿದ್ದಾರೆ. ಇಂದು ಕಿರುತೆರೆ ಪ್ರತಿ ಪ್ರೇಕ್ಷಕರಿಗೂ ಕೂಡ ಅನುಶ್ರೀ ಒಬ್ಬ ಅಕ್ಕಳಾಗಿ, ಸ್ನೇಹಿತೆಯಾಗಿ ತಮ್ಮ ಎದುರು ಮನೆ ಹುಡುಗಿಯಂತೆ ಕಾಣುತ್ತಾರೆ.

ಸಿನಿಮಾಗಳಲ್ಲೂ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡ ಇವರಿಗೆ ಬೆಳ್ಳಿತೆರೆ ಅಷ್ಟೊಂದು ಕೈ ಹಿಡಿಯಲಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ, ಕೆಲವೊಂದು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಇವರು ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರತಿಭೆ. ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ ಅನುಶ್ರೀ ಅವರು ಕನ್ನಡದ ಬಿಗ್ ಬಾಸ್ ಮೊದಲ ಆವೃತ್ತಿಯಲ್ಲಿಯೇ ಕಂಟೆಸ್ಟೆಂಟ್ ಆಗಿದ್ದರು. ಅಲ್ಲಿಂದಲೇ ಜನರು ಇವರ ವ್ಯಕ್ತಿತ್ವವನ್ನು ಇಷ್ಟಪಡಲು ಶುರು ಮಾಡಿದ್ದರು ಇಲ್ಲಿಯವರೆಗೆ ಸಾಲು ಸಾಲು ಗೆಲುವುಗಳನ್ನು ಕಂಡಿರುವ ಅನುಶ್ರೀ ಅವರು ಬದುಕಿನಲ್ಲಿ ಅಷ್ಟೇ ಕಷ್ಟದ ದಿನಗಳನ್ನು ಕೂಡ ಕಂಡಿದ್ದಾರೆ.

ಇಷ್ಟೆಲ್ಲ ಬ್ಯುಸಿ ಷೆಡ್ಯೂಲ್ ನಡುವೆ ತಮ್ಮದೇ ಆದ ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ಅವರು ಆಂಕರ್ ಅನುಶ್ರೀ ಎನ್ನುವ ಯೂಟ್ಯೂಬ್ ಚಾನೆಲ್ ಇಂದ ಕನ್ನಡದಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೆ ಅನುಶ್ರೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೇಳುವುದಾದರೆ ಅವರು ಎಲ್ಲೇ ಹೋದರು ಅವರ ಮದುವೆಯ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೀಗೆ ಇತ್ತೀಚೆಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಕೂಡ ಅದರ ಬಗ್ಗೆ ಪ್ರಶ್ನಿಸಲಾಗಿತ್ತು ಅದಕ್ಕೆ ಉತ್ತರ ನೀಡಿದ ಅನುಶ್ರೀ ಅವರು ಇನ್ನು ಬದುಕಿನಲ್ಲಿ ನೋಡುವುದು ಬಹಳಷ್ಟು ಇದೆ.

ಸಾಕಷ್ಟು ಪ್ರದೇಶಗಳಿಗೆ ನಾನು ಹೋಗಿಲ್ಲ ಇನ್ನೂ ನೂರಾರು ಊರುಗಳನ್ನು ಸುತ್ತಬೇಕಾಗಿದೆ ಹಾಗಾಗಿ ಇನ್ನೂ ಹತ್ತು ವರ್ಷಗಳವರೆಗೆ ಇದೇ ರೀತಿ ಇರುತ್ತೇನೆ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಕಂಕಣ ಭಾಗ್ಯ ಕೂಡಿ ಬಂದಾಗ ಅದು ನಡೆದೇ ನಡೆಯುತ್ತದೆ ಆದರೆ ನಾನು ಮದುವೆ ಆಗುವ ಹುಡುಗ ಬೆಳ್ಳಗೆ ಇರಬಾರದು ಅವನಿಗೆ ಡ್ರೆಸ್ ಸೆನ್ಸ್ ಕೂಡ ಇರಬಾರದು ನಾನು ಹೇಳಿದ್ದಕ್ಕೆಲ್ಲ ಹೂ ಎನ್ನುವ ಹುಡುಗ ನನಗೆ ಬೇಡ, ನನ್ನನ್ನು ವಿರೋಧ ಮಾಡುವ ಹುಡುಗ ಬೇಕು ಆದರೆ ಅವನಿಗೆ ಹಾಡು ಕುಣಿತ ಬರಬೇಕು ಎಂದಿದ್ದಾರೆ.

ಮೈ ಮೇಲೆ ಬಟ್ಟೆ ಇಲ್ಲದೆ ಕೇವಲ ಟವಲ್ ಸುತ್ತಿಕೊಂಡು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ವಧು ವರ, ಈ ಫೋಟೋ ನೋಡಿದರೆ ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.

0

ಇತ್ತೀಚಿನ ದಿನದಲ್ಲಿ ಫ್ಯಾಶನ್ ಎಂಬುವುದು ಯಾವ ರೀತಿ ಮಾರು ಹೋಗಿದೆ ಅಂದರೆ ಫ್ಯಾಷನ್ ಗಾಗಿ ಮಾನ ಮರ್ಯಾದೆ ಎಲ್ಲವನ್ನು ಕೂಡ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಮೊದಲೆಲ್ಲ ಮದುವೆ ಅಂದರೆ ಒಂದು ಸಂಭ್ರಮ ಅಷ್ಟೇ ಅಲ್ಲದೆ ಅದನ್ನು ಒಂದು ಆಚರಣೆ ಹಾಗೂ ಸಂಪ್ರದಾಯ ಎಂದು ಕರೆಯುತ್ತಿದ್ದರು. ಇನ್ನು ಮದುವೆ ಸಾಕು ತಿಂಗಳುಗಟ್ಟಲೆ ಆ ಮನೆಯಲ್ಲಿ ಮಾಡುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಮದುವೆ ಎಂದರೆ ಕೇವಲ ಎರಡೇ ದಿನದಲ್ಲಿ ಮುಗಿದು ಹೋಗುವಂತಹ ಒಂದು ಆಚರಣೆಯಾಗಿದೆ.

ಅದರಲ್ಲಿಯೂ ಕೂಡ ಹಿಂದಿನ ಕಾಲದ ಸಂಸ್ಕೃತಿ ಸಂಪ್ರದಾಯ ಎಲ್ಲವನ್ನು ಬಿಟ್ಟು ಇತ್ತೀಚಿನ ದಿನದಲ್ಲಿ ಇರುವಂತಹ ಪ್ರಚಲಿತ ಫ್ಯಾಶನ್ ಅನ್ನು ಈ ಮದುವೆಗೆ ಹೋಲಿಕೆ ಮಾಡಿಕೊಳ್ಳಲಾಗುತ್ತಿದೆ. ಹೌದು ಈಗಂತೂ ಮದುವೆ ಅಂದರೆ ಸಾಕು ಪ್ರಿ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ನೂರಾರು ಬಗೆಯ ವೆಡ್ಡಿಂಗ್ ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಈ ಫೋಟೋಶೂಟ್ ಗಳ ಬಗ್ಗೆ ಇರುವಂತಹ ಕ್ರೇಜ್ ಬೇರೆ ಯಾವುದಕ್ಕೂ ಇಲ್ಲ ಅಂತ ಹೇಳಬಹುದು. ಫೋಟೋಶೂಟ್ ಮಾಡಿಸಿದರೆ ಮಾತ್ರ ಮದುವೆ ಆಗಿದೆ ಎಂಬ ಗೀಳು ಇಂದಿನ ಯುವಜನತೆಯ ಮನಸ್ಸಿನಲ್ಲಿ ಬೇರುರಿದೆ.

ಮದುವೆಗೂ ಮುಂಚೆ ಫೋಟೋ ತೆಗೆಸಿದರೆ ಅರ್ಧ ಮದುವೆ ಆದಂತೆಯೇ ಎಂಬುದು ವಧು ವರರ ಅಭಿಪ್ರಾಯವಾಗಿದೆ, ಇನ್ನೂ ಫೋಟೋಶೂಟ್ ಮಾಡಿಸುವುದಕ್ಕೆ ನದಿಗೆ ಹೋಗುವುದು ಸರೋವರದ ಬಳಿ ನಿಂತುಕೊಳ್ಳುವುದು ಕಾಡುಮೆಡು ಅಲೆಯುವುದು ಎತ್ತರದ ಪ್ರದೇಶಕ್ಕೆ ಹೋಗುವುದು ಈ ರೀತಿ ನಾನಾ ರೀತಿಯಾದಂತಹ ಸಾಹಸಗಳನ್ನು ಮಾಡಿದ್ದು ಅದನ್ನು ನೀವು ನೋಡೇ ಇದ್ದೀರಾ. ಕೆಲವೊಮ್ಮೆ ಇಂತಹ ಅ.ಪಾ.ಯ.ಕಾ.ರಿ ಫೋಟೋಶೂಟ್ ಮಾಡಿಸುವುದಕ್ಕೆ ಹೋಗಿ ಪ್ರಾ.ಣ ಕಳೆದುಕೊಂಡಂತಹ ಅದೆಷ್ಟೋ ಜೋಡಿಯ ಬಗ್ಗೆಯೂ ಕೂಡ ನೀವು ಕೇಳಿದ್ದೀರಾ.

ಆದರೆ ಇಲ್ಲೊಂದು ಜೋಡಿ ಮಾತ್ರ ಬಹಳ ವಿಭಿನ್ನ ಮಾದರಿಯ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ ಹೌದು ಮೈಮೇಲೆ ಬಟ್ಟೆ ಇಲ್ಲದೆ ಕೇವಲ ಟವಲ್ ಅನ್ನು ಸುತ್ತಿಕೊಂಡು ಫೋಟೋಶೂಟ್ ಮಾಡಿಸಿದಂತಹ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಈ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋ ನೋಡಿದಂತಹ ನಿಟ್ಟಿಗುರು ನಿಜಕ್ಕೂ ಆ.ಕ್ರೋ.ಶ.ವನ್ನು ವ್ಯಕ್ತಪಡಿಸುತ್ತಿದ್ದರೆ ನಮ್ಮ ಸಂಸ್ಕೃತಿ ಸಂಪ್ರದಾಯವನ್ನೆಲ್ಲ ಇವರು ಹಾಳು ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ.

ಏಕೆಂದರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮದುವೆಯಾಗುವಂತಹ ಜೋಡಿ ತಮ್ಮ ಸಂಗಾತಿಯ ಬಗ್ಗೆ ಒಲವನ್ನು ಇಟ್ಟುಕೊಳ್ಳಬೇಕಾಗಿರುತ್ತದೆ ಆದರೆ ಆ ಒಲವನ್ನು ಸಾರ್ವಜನಿಕವಾಗಿ ತೋರ್ಪಡಿಸಿದರೆ ಅದು ಅಸಹ್ಯ ಹುಟ್ಟಿಸುವಂತೆ ಮಾಡುತ್ತದೆ. ಈ ಜೋಡಿಯು ಕೂಡ ಕೆಲವು ಸಂಪ್ರದಾಯವನ್ನು ಮೈ ಮರೆತು ತಮಗೆ ಇಷ್ಟ ಬಂದ ರೀತಿಯಲ್ಲಿ ನಡೆದುಕೊಂಡಿದ್ದಾರೆ ವರ ಮತ್ತು ವಧು ಇಬ್ಬರು ಕೂಡ ಟವಲ್ ನಲ್ಲಿಯೇ ವಿಭಿನ್ನ ಮಾದರಿಯ ಪೋಸ್ ನೀಡುವುದರ ಮೂಲಕ ಫೋಟೋಶೂಟ್ ಮಾಡಿಸಿದ್ದಾರೆ.

ಇದು ಯಾವ ಮಾದರಿಯ ಫೋಟೋಶೂಟ್ ಎಂಬುವುದೇ ಇದೀಗ ನೆಟ್ಟಿಗರ ಪ್ರಶ್ನೆಯಾಗಿದೆ ಫೋಟೋಶೂಟ್ ಮಾಡಿಸುವುದು ಒಳ್ಳೆಯದು ಆದರೆ ಈ ರೀತಿ ಅರ್ಥ ಬದ್ಧವಲ್ಲದ ಫೋಟೋಶೂಟ್ ಮಾಡಿಸುವುದರಿಂದ ಹೆಣ್ತನಕ್ಕೆ ಅಪಮಾನ ಮಾಡಿದಂತಾಗುತ್ತದೆ. ಈ ಫೋಟೋ ನೋಡಿದರೆ ಹೆಮ್ಮೆ ಅಂತೂ ಅನಿಸಿದೆ ಇಲ್ಲ ಮುಜುಗರವನ್ನು ತರಿಸುವಂತಿದೆ ಯುವ ಜನತೆ ವಿದ್ಯಾವಂತ ರಾಗುತ್ತಿರುವುದಾಗಿ ತಮ್ಮ ಅವಿವೇಕಿತನವನ್ನು ಕೂಡ ತೋರಿಸುತ್ತಿದ್ದಾರೆ ಎಂಬುದಕ್ಕೆ ಈ ಫೋಟೋಶೂಟ್ ಸಾಕ್ಷಿ ಅಂತಾನೆ ಹೇಳಬಹುದು.

ಒಟ್ಟಾರೆಯಾಗಿ ಹೊಸ ಬಾಳಿನ ಹೊಸ್ತಿಲಲ್ಲಿ ಸುಖ ಸಂಸಾರವನ್ನು ನಡೆಸಬೇಕಾದಂತಹ ದಂಪತಿಗಳು ಇದೀಗ ಸಾರ್ವಜನಿಕ ವಲಯದಲ್ಲಿ ಇಂತಹ ಕೃತ್ಯವನ್ನು ನಿಜಕ್ಕೂ ಕೂಡ ಶೋಚನೀಯ ಪರಿಸ್ಥಿತಿ ಅಂತಾನೆ ಹೇಳಬಹುದು. ಇನ್ನಾದರೂ ಯುವ ಜನತೆ ಈ ಒಂದು ಫೋಟೋಶೂಟ್ ಎಂಬ ಗೀಳಿನಿಂದ ಹೊರಬರುವುದು ಉತ್ತಮ ಫೋಟೋಶೂಟ್ ಮಾಡಿಸುವುದು ತಪ್ಪಲ್ಲ ಆದರೆ ಮುಜುಗರ ತರಿಸುವಂತಹ ಫೋಟೋಶೂಟ್ ಮಾಡಿಸುವುದು ತಪ್ಪು ಎಂಬುದು ನಮ್ಮ ಅಭಿಪ್ರಾಯ. ಈ ಫೋಟೋಸ್ ನೋಡಿದರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಯಾವುದೇ ಅವಾರ್ಡ್ ಫಂಕ್ಷನ್ ಗೆ ಹೋಗದ ನಟ ದರ್ಶನ್ ಸೈಮಾ ಅವಾರ್ಡ್ ಫಂಕ್ಷನ್ ಗೆ ಮಾತ್ರ ಹೋಗಿದ್ದು ಯಾಕೆ ಗೊತ್ತಾ.? ನಿಜಕ್ಕೂ ಬೆಚ್ಚಿ ಬೀಳ್ತೀರ ಇದರ ಹಿಂದಿರುವ ಉದ್ದೇಶ ಗೊತ್ತಾದ್ರೆ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ ಬರುವುದು ನೇರವಾದಿ ನೇರ ವ್ಯಕ್ತಿತ್ವವನ್ನು ಒಳಗೊಂಡಿರುವಂತಹ ವ್ಯಕ್ತಿ ಇದ್ದ ವಿಚಾರವನ್ನು ಇದ್ದ ಹಾಗೆ ಮುಖಕ್ಕೆ ಒಡೆದ ಹಾಗೆ ಹೇಳಿ ಬಿಡುತ್ತಾರೆ. ಅವರಿಗೆ ಒಳಗೊಂದು ಹೊರಗೊಂದು ಈ ರೀತಿ ನಟಕಾ ಮಾಡುವುದಕ್ಕೆ ಬರುವುದಿಲ್ಲ ಈ ಕಾರಣಕ್ಕಾಗಿಯೇ ಬಹಳಷ್ಟು ಜನರಿಗೆ ನಟ ದರ್ಶನ್ ಅವರು ಇಷ್ಟ ಆಗುತ್ತಾರೆ. ಇನ್ನು ಪ್ರೀತಿಸುವವರು ಎಷ್ಟು ಜನ ಇರುತ್ತಾರೆ ದ್ವೇಷ ಮಾಡುವವರು ಕೂಡ ಅಷ್ಟೇ ಜನ ಇರುತ್ತಾರೆ ಇದಕ್ಕೆ ಉದಾಹರಣೆ ಅಂದರೆ ನಟ ದರ್ಶನ್ ಅವರು ಮಾಧ್ಯಮಗಳು ಬ್ಯಾನ್ ಮಾಡಿರುವುದು.

ಇದೆಲ್ಲವೂ ಒಂದು ಕಡೆಯಾದರೆ ಇದೀಗ ನಟ ದರ್ಶನವರು ಮತ್ತೊಂದು ಸುದ್ದಿಗೆ ಗುರಿಯಾಗಿದ್ದಾರೆ. ಹೌದು ಕಳೆದ 10 ವರ್ಷಗಳಿಂದ ದರ್ಶನವರು ಯಾವುದೇ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸುತ್ತಿಲ್ಲ ಎಲ್ಲಾ ನಟ ನಟಿಯರು ಕೂಡ ಪ್ರತಿ ವರ್ಷವೂ ನಡೆಯುವಂತಹ ಸೈಮಾ ಅವಾರ್ಡ್ ಫಂಕ್ಷನ್ ಆಗಿರಬಹುದು ಅಥವಾ ಐಫಾ ಫಂಕ್ಷನ್ ಆಗಿರಬಹುದು ಹೀಗೆ ಸ್ಯಾಂಡಲ್ವುಡ್ ಗೆ ಮತ್ತು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಯಾವುದೇ ಕಾರ್ಯಕ್ರಮವಾದರೂ ಕೂಡ ಅದರಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ ಪ್ರಶಸ್ತಿ ದೊರೆಯದೆ ಇದ್ದರೂ ಕೂಡ ಅವರಿಗೆ ಬಂದಂತಹ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ ಆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಆದರೆ ನಟ ದರ್ಶನವರು ಮಾತ್ರ ಯಾವುದೇ ಕಾರ್ಯಕ್ರಮಕ್ಕೂ ಕೂಡ ಹೋಗುವುದಿಲ್ಲ ಇಂಟರ್ನ್ಯಾಷನಲ್ ಇರಲಿ ನಮ್ಮ ಕರ್ನಾಟಕದಲ್ಲಿಯ ಮಾಡುವಂತಹ ಅವಾರ್ಡ್ ಫಂಕ್ಷನ್ ಗಳಿಗೂ ಕೂಡ ಇವರು ತೆರಳುವುದಿಲ್ಲ. ಅಷ್ಟಕ್ಕೂ ದರ್ಶನ್ ಅವರು ಯಾಕೆ ಈ ರೀತಿ ಅವಾರ್ಡ್ ಫಂಕ್ಷನ್ ಗಳಿಂದ ದೂರ ಉಳಿಯುತ್ತಾರೆ ಎಂಬುದನ್ನು ನೋಡುವುದಾದರೆ. ದರ್ಶನ್ ಅವರು ಯಾವಾಗಲೂ ಆತ್ಮಗೌರವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಯಾವಾಗಲೂ ಅವರ್ ಫಂಕ್ಷನ್ಗಳಿಗೆ ನಾವು ಹೊರ ದೇಶಕ್ಕೆ ಅಥವಾ ಹೊರ ರಾಜ್ಯಕ್ಕೆ ಹೋಗಬೇಕಾಗುತ್ತದೆ ಅದರ ಬದಲು ನಮ್ಮ ರಾಜ್ಯದಲ್ಲಿಯೇ ಅವಾರ್ಡ್ ಫಂಕ್ಷನ್ ಏರ್ಪಡಿಸಿ ಎಂದು ಹೇಳಿಕೊಂಡಿದ್ದರು.

ಹೌದು ಕಳೆದ ಎರಡು ವರ್ಷಗಳ ಹಿಂದೆ ಯಜಮಾನ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಮಾಧ್ಯಮದಲ್ಲಿ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದಂತಹ ದರ್ಶನ್ ಅವರಿಗೆ ನಿರೂಪಕರು ಒಂದು ಪ್ರಶ್ನೆಯನ್ನು ಕೇಳುತ್ತಾರೆ. ನೀವು ಏಕೆ ಅವಾರ್ಡ್ ಫಂಕ್ಷನ್ಗಳಿಗೆ ತೆರಳುವುದಿಲ್ಲ ಅಂತ ಆಗ ಖಡಕ್ಕಾಗಿ ಹೇಳಿದಂತಹ ದರ್ಶನ್ ನಾವು ಬೇರೆ ರಾಜ್ಯಕ್ಕೆ ಹೋಗಿ ಅಥವಾ ಬೇರೆ ದೇಶಕ್ಕೆ ಹೋಗಿ ಯಾರೋ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಯಾವುದೋ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವುದು ನಮ್ಮ ಹೆಸರು ಬಂದಾಗ ಹೋಗಿ ಅವಾರ್ಡ್ ಫಂಕ್ಷನ್ಸ್ ಸ್ವೀಕರಿಸಿದ ಇವೆಲ್ಲ ನನಗೆ ಇಷ್ಟವಿಲ್ಲ.

ನಮ್ಮ ರಾಜ್ಯಕ್ಕೆ ಬಂದು ಅವಾರ್ಡ್ ಫಂಕ್ಷನ್ ಏರ್ಪಡಿಸಲಿ ಅಷ್ಟೇ ಅಲ್ಲದೆ ನಮ್ಮ ಕಲಾವಿದರಿಗೆ ನಮ್ಮ ನಟ ನಟಿಯರಿಗೆ ಮೊದಲ ಸಾಲಿನಲ್ಲಿ ಸ್ಥಾನವನ್ನು ನೀಡಲಿ ಆಗ ಮಾತ್ರ ನಾನು ಅವಾರ್ಡ್ ಫಂಕ್ಷನ್ಗಳಿಗೆ ತೆರಳುತ್ತೇನೆ ಅಲ್ಲಿಯವರೆಗೂ ಕೂಡ ನಾನು ಯಾವುದೇ ಫಂಕ್ಷನ್ ಗೆ ತೆರಳುವುದಿಲ್ಲ ಅವಾರ್ಡನ್ನು ಕೂಡ ಸ್ವೀಕರಿಸುವುದಿಲ್ಲ ಎಂದು ಹೇಳಿಕೊಂಡಿರುತ್ತಾರೆ. ಅದರಂತೆ ದರ್ಶನ್ ಕೂಡ ಕೊಟ್ಟ ಮಾತಿಗೆ ತಪ್ಪದೆ ಯಾವುದೇ ಫಂಕ್ಷನ್ಗಳಿಗೂ ಕೂಡ ಹೋಗುತ್ತಿರಲಿಲ್ಲ ಅಷ್ಟೇ ಅಲ್ಲದೆ ಅವರ ಪಾಲಿಗೆ ಬಂದಂತಹ ಅವಾರ್ಡ್ ಗಳನ್ನು ಬೇರೆಯವರು ಸ್ವೀಕರಿಸಿದ್ದರು.

ಆದರೆ ಈ ಬಾರಿ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ಫಂಕ್ಷನ್ ಅನ್ನು ಆಯೋಜಿಸಲಾಗುತ್ತದೆ ಅಷ್ಟೇ ಅಲ್ಲದೆ ದರ್ಶನ್ ಅವರ ಮನೆಗೆ ಬಂದು ಆಹ್ವಾನ ಪತ್ರಿಕೆಯನ್ನು ಕೊಟ್ಟು ಮೊದಲ ಸಾಲಿನಲ್ಲಿ ಅವರಿಗೆ ಸ್ಥಾನವನ್ನು ನಿಗದಿ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ದರ್ಶನ್ ಅವರು ಯಾವುದೇ ಅವಾರ್ಡ್ ಫಂಕ್ಷನ್ ನಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಮೊದಲ ಬಾರಿಗೆ ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಕಾಣಿಸಿಕೊಂಡಿದ್ದರೆ. ನಿಜಕ್ಕೂ ಇವರ ಹಠವನ್ನು ನಾವೆಲ್ಲರೂ ಮೆಚ್ಚಲೇಬೇಕು ಇಂದು ಕನ್ನಡಿಗರಿಗೆ ಸ್ಥಾನಮಾನ ಗೌರವ ಸಿಕ್ಕಿದೆ ಅಂದರೆ ಅದಕ್ಕೆ ದರ್ಶನ್ ಅವರೇ ಕರಣ ಅಂತ ಹೇಳಬಹುದು. ಸದ್ಯಕ್ಕೆ ದರ್ಶನ್ ಅವರು ನಿರೂಪಕರ ಜೊತೆ ಮಾತನಾಡಿದಂತಹ ಆ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ನಟ ಅನಿರುದ್ಧ ಅವರು ಹೊರ ಬಂದಿದ್ದಾರೆ ನಿರ್ಮಾಪಕರು ನಿರ್ದೇಶಕರು ಹಾಗೂ ಅನಿರುದ್ ನಡುವೆ ನಡೆದಂತಹ ಮಾತಿನ ಚಿಕಮಕಿಯಿಂದ ಅನಿರುದ್ಧ ಅವರನ್ನು ಧಾರವಾಹಿ ತಂಡದಿಂದ ಹೊರ ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಯಾವುದೇ ಧಾರಾವಾಹಿ ಆಗಿರಬಹುದು ಮನೋರಂಜನ ಕ್ಷೇತ್ರ ಆಗಿರಬಹುದು ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಸಮಾರಂಭಗಳಿಗೆ ಅನಿರುಧ್ ಅವರನ್ನು ಸೇರಿಸಿಕೊಳ್ಳಬಾರದು ಅವರನ್ನು ಕಿರುತೆರೆಯಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರವಾಹಿ ತಂಡದ ನಿರ್ಮಾಪಕರು ಮತ್ತು ನಿರ್ದೇಶಕರು ಕಿರುತರೆ ಸಂಘಟನೆಗಳಿಗೆ ಮನವಿಯನ್ನು ಮಾಡಿಕೊಂಡಿದ್ದರು.

ಅಷ್ಟೇ ಅಲ್ಲದೆ ಇದಾಗಲೇ ಅನಿರುದ್ಧ ಅವರ ಪಾತ್ರಕ್ಕೆ ನಟ ಹರೀಶ್ ರಾಜ್ ಅವರನ್ನು ಕರೆತರಲಾಗಿದೆ ಹೌದು ಅನಿರುದ್ಧ ಅವರ ಪಾತ್ರವನ್ನು ಬದಲಾಯಿಸುವುದಕ್ಕಾಗಿ ಕಥೆಯಲ್ಲಿ ಬದಲಾವಣೆ ಮಾಡಿ ಆರ್ಯವರ್ಧನ್ ಗೆ ಆ.ಕ್ಸಿ.ಡೆಂ.ಟ್ ಆಗಿದೆ ಎಂಬ ಕಥೆಯನ್ನು ಹೇಳಿದ್ದು ಆತನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ ಎಂಬ ಕಥೆಯನ್ನು ಕಟ್ಟಿ ಇದೀಗ ಹರೀಶ್ ರಾಜ್ ಅವರನ್ನು ಅನಿರುಧ್ ಅವರ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇದೀಗ ಅನಿರುದ್ಧ ವರು ಸಂಪೂರ್ಣವಾಗಿ ಕಿರುತೆರೆಯಿಂದ ದೂರ ಉಳಿದಿದ್ದಾರೆ ಇದರ ಬೆನ್ನಲ್ಲೇ ಇದೀಗ ಮತ್ತೊಂದು ವಿಚಾರಕ್ಕೆ ಅನಿರುಧ್ ಅವರು ಸುದ್ದಿಯಾಗಿದ್ದಾರೆ ಹೌದು.

ಈಗಾಗಲೇ ಓಟಿಟಿಯಲ್ಲಿ ಮಿನಿ ಬಿಗ್ ಬಾಸ್ ಪ್ರಾರಂಭವಾಗಿದ್ದು ಸುಮಾರು ಒಂದು ತಿಂಗಳೇ ಆಗಿದೆ ಅಷ್ಟೇ ಅಲ್ಲದೆ ಇದೆ ಕೊನೆಯ ವಾರ ಈ ಬಿಗ್ ಬಾಸ್ ಕಾರ್ಯಕ್ರಮವು ಕೂಡ ಮುಕ್ತಾಯವಾಗಲಿದೆ. ಹಾಗಾಗಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆ ಬಿಗ್ ಬಾಸ್ ಸೀಸನ್ 9 ಪ್ರಾರಂಭ ಮಾಡಬೇಕು ಅಂತ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಬಿಗ್ ಬಾಸ್ 9 ರ ಪ್ರೋಮೊ ಶೂಟಿಂಗ್ ಕೂಡ ಮುಕ್ತಾಯವಾಗಿದೆ ಈ ಒಂದು ಪ್ರೋಮವನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಹಂಚಿಕೊಳ್ಳಲಾಗಿದೆ.

ಇವೆಲ್ಲವನ್ನೂ ನೋಡುತ್ತಿದ್ದರೆ ಈಗಾಗಲೇ ಬಿಗ್ ಬಾಸ್ ಸೀಸನ್ 9 ಕ್ಕೆ ಬರುವಂತಹ ಸ್ಪರ್ಧೆಗಳನ್ನು ಆಯ್ಕೆ ಮಾಡಲಾಗಿದೆ ಎಂಬ ವಿಚಾರ ಬಿದ್ದಿದೆ. ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ಹೊರ ಹಾಕಿದ ನಂತರ ಅವರಿಗೆ ಯಾವುದೇ ರೀತಿಯಾದಂತಹ ಅವಿಕಾಶವಿಲ್ಲ ಇನ್ನು ಮುಂದೆ ಅವರು ಕಿರುತೆರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕೆಲವು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದ ನಂತರ ಇದೀಗ ಬಿಗ್ ಬಾಸ್ ನಲ್ಲಿ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತಹ ಪೋಸ್ಟರ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದಂತಹ ಕೆಲವು ಅಭಿಮಾನಿಗಳು ಧಾರವಾಹಿ ತಂಡದಿಂದ ಹೊರ ಬಂದ ನಂತರ ಅನಿರುದ್ಧ ಅವರಿಗೆ ಒಂದು ಬ್ರೇಕ್ ಬೇಕಾಗಿದೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಇವರ ಲೈಫ್ ಗೆ ಒಂದು ಟರ್ನಿಂಗ್ ಪಾಯಿಂಟ್ ಆಗಲಿದೆ ಹಾಗಾಗಿ ಬಿಗ್ ಬಾಸ್ ನಲ್ಲಿ ಇವರು ಸ್ಪರ್ಧಿಸುವುದು ಉತ್ತಮ ಎಂದು ಹೇಳಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಅನಿರುಧ್ ಆಗಲಿ ಅಥವಾ ಬಿಗ್ ಬಾಸ್ ತಂಡವಾಗಲಿ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆಗಲು ಎಲ್ಲಿಯೂ ಕೂಡ ಸುಳಿವನ್ನು ಬಿಟ್ಟು ಕೊಟ್ಟಿಲ್ಲ.

ಹಾಗಾಗಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಅನಿರುಧ್ ಅವರು ಕಾಣಿಸಿಕೊಳ್ಳಲಿದ್ದಾರ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಅಂತು ಅನಿರುಧ್ ಅವರು ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾಹಿತಿಗಳು ಮಾತ್ರ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಪ್ರಕಾರ ಅನಿರುಧ್ ಬಿಗ್ ಬಾಸ್ ಮನೆಗೆ ಹೋಗುವುದು ಸೂಕ್ತ ನಾ ಅಥವಾ ಇಲ್ಲವಾ ಎಂಬುದನ್ನು ತಿಳಿಸಿ.

ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಧಾರಾವಾಹಿಗಳು ನಮ್ಮ ಜೀವನದ ಒಂದು ಭಾಗವಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಏಕೆಂದರೆ ಪ್ರತಿಯೊಬ್ಬರೂ ಕೂಡ ಸಂಜೆ 5:00 ಗಂಟೆ ಆದರೆ ಸಾಕು ಟಿವಿ ಮುಂದೆ ಹಾಜರಾಗಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರಲಿ ಅಥವಾ ಅವರ ಮನಸ್ಸಿಗೆ ಎಷ್ಟೇ ರೀತಿಯಾದಂತಹ ಬೇಸರವಿರಲಿ ಇವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿ ಧಾರವಾಹಿಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಾರೆ ಅದರಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ ಅಂತ ಹೇಳಬಹುದು.

ಸಂಜೆ ಐದರಿಂದ ಹಿಡಿದು ರಾತ್ರಿ ಹನ್ನೊಂದು ಗಂಟೆಯವರೆಗೂ ಪ್ರಸಾರವಾಗುವಂತಹ ಎಲ್ಲ ಧಾರಾವಾಹಿಗಳನ್ನು ನೋಡುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬೆಳ್ಳಿ ತೆರೆಗಿಂತ ಕಿರುತೆರೆಗೆ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಅಂತ ಹೇಳಬಹುದು. ವಾರವಿಡೀ ಧಾರವಾಹಿಗಳ ದರ್ಬಾರು ಆದರೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳು ಇನ್ನಿತರ ಡ್ಯಾನ್ಸಿಂಗ್ ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಾರೆ ಈ ಕಾರಣಕ್ಕಾಗಿಯೇ ಬೆಳ್ಳಿತೆರೆಗಿಂತ ಕಿರುತೆರೆ ಹೆಚ್ಚು ಸದ್ದು ಮಾಡುತ್ತಿರುವುದು.

ಮಹಿಳೆಯರು ಈ ಧಾರಾವಾಹಿಗೆ ಎಷ್ಟು ಅಡಿಕ್ಟ್ ಆಗಿದ್ದಾರೆ ಅಂದರೆ ಒಂದು ದಿನದ ಈ ನೋಡಿಲ್ಲ ಅಂದರೆ ಸಾಕು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡ ರೀತಿ ಆಡುತ್ತಾರೆ ಅಷ್ಟರ ಮಟ್ಟಿಗೆ ಈ ಧಾರಾವಾಹಿಯಲ್ಲಿ ಇನ್ವಾಲ್ವಾಗಿರುತ್ತಾರೆ. ಹಾಗಾಗಿ ಈ ಧಾರಾವಾಹಿಗಳು ಅವರ ಜೀವನದ ಒಂದು ಭಾಗವಾಗಿದೆ ಇನ್ನು ಸಾಮಾನ್ಯವಾಗಿ ತಮ್ಮ ನೆಚ್ಚಿನ ಧಾರಾವಾಹಿಗಳು ಮುಕ್ತಾಯವಾಗುತ್ತಿದೆ ಎಂಬ ವಿಚಾರವನ್ನು ಕೇಳಿದಾಗ ಸಾಮಾನ್ಯವಾಗಿ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಾರೆ.

ಆದರೆ ಈ ಬಾರಿ ಧಾರವಾಹಿ ಪ್ರಿಯರಿಗೆ ದೊಡ್ಡ ಆ.ಘಾ.ತ.ವೇ ಎದುರಾಗಿದೆ ಕಾರಣ ಏಕೆಂದರೆ ಈ ಬಾರಿ ಒಂದು ಧಾರಾವಾಹಿ ಮುಕ್ತಾಯವಾಗುತ್ತಿಲ್ಲ ಬದಲಿಗೆ ಸಾಲು ಸಾಲು ಧಾರಾವಾಹಿಗಳು ಮುಕ್ತಾಯವಾಗುತ್ತಿದೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ನಾಲ್ಕು ಧಾರವಾಹಿಗಳು ಕೂಡ ಮುಕ್ತಾಯವಾಗುತ್ತಿದೆ ಎಂಬ ಮಾಹಿತಿಯು ಇದೀಗ ಲಭ್ಯವಾಗುತ್ತಿದೆ. ಅಷ್ಟಕ್ಕು ಈ ಧಾರಾವಾಹಿಗಳು ಯಾಕೆ ಮುಕ್ತಾಯವಾಗುತ್ತಿದೆ ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ.

ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿದ್ದು ಮುಕ್ತಾಯದ ಹಂತಕ್ಕೂ ಕೂಡ ಬಂದಿದೆ ಅಷ್ಟೇ ಅಲ್ಲದೆ ಬಿಗ್ ಬಾಸ್ ಸೀಸನ್ 9 ಪ್ರಾರಂಭ ಮಾಡಬೇಕಿದೆ. ಆದಕಾರಣ ಕಡಿಮೆ ಟಿಆರ್‌ಪಿ ಗಳಿಸುವಂತಹ ಧಾರವಾಹಿಗಳನ್ನು ಮುಕ್ತಾಯ ಮಾಡಿ ಆ ಒಂದು ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಅಂತ ಇದೀಗ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದಂತಹ ಪರಮೇಶ್ ಗುಂಡಲ್ಕರ್ ಅವರು ತೀರ್ಮಾನ ಮಾಡಿದ್ದಾರಂತೆ. ಈ ಕಾರಣಕ್ಕಾಗಿ ನಾಲ್ಕು ಧಾರವಾಹಿಗಳು ಕೂಡ ಮುಕ್ತಾಯವಾಗುತ್ತಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಅಷ್ಟಕ್ಕೂ ಮುಕ್ತಾಯವಾಗುತ್ತಿರುವಂತಹ ಧಾರಾವಾಹಿಗಳು ಯಾವುದು ಎಂಬುದನ್ನು ನೋಡುವುದಾದರೆ ಮಂಗಳ ಗೌರಿ ಧಾರವಾಹಿ, ಎರಡನೆಯದಾಗಿ ನಮ್ಮನೆ ಯುವರಾಣಿ, ಮೂರನೇದಾಗಿ ನನ್ನರಸಿ ರಾದೆ, ನಾಲ್ಕನೆಯದಾಗಿ ಕನ್ಯಾಕುಮಾರಿ ಧಾರವಾಹಿ ಈ ನಾಲ್ಕು ಧಾರವಾಹಿಗಳು ಕೂಡ ಇದೀಗ ಟಿ ಆರ್ ಪಿ ಯಲ್ಲಿ ತುಂಬಾ ಕಡಿಮೆ ಮಟ್ಟದ ರಾಂಕಿಂಗ್ ಅನ್ನು ಪಡೆದುಕೊಂಡಿದೆ ಆದ ಕಾರಣ ಈ ಧಾರಾವಾಹಿಯನ್ನು ಮುಕ್ತಾಯಗೊಳಿಸಿ ಈ ಜಾಗಕ್ಕೆ ಬಿಗ್ ಬಾಸ್ ಸೀಸನ್ 9 ರಂದು ಪ್ರಸಾರ ಮಾಡಬೇಕು ಎಂಬ ನಿರ್ಧಾರವನ್ನು ಮಾಡಿದೆಯಂತೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಧಾರವಾಹಿ ಅಭಿಮಾನಿಗಳು ಮುಕ್ತಾಯ ಮಾಡಬೇಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರಂತೆ ಇನ್ನು ಕೆಲವು ಬಿಗ್ ಬಾಸ್ ಅಭಿಮಾನಿಗಳು ಮಾತ್ರ ಪ್ರಸಾರವಾಗಲಿ ಅಂತ ಹೇಳುತ್ತಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಯಾವ ರೀತಿಯಾದಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನಿಮ್ಮ ಪ್ರಕಾರ ಧಾರವಾಹಿಗಳು ಮುಂದುವರಿಯಬೇಕಾ ಅಥವಾ ಆ ಜಾಗದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗಬೇಕಾ ಎಂಬುದನ್ನು ತಿಳಿಸಿ.

ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.

0

ಪ್ರೇಮಲೋಕದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್ ಮತ್ತು ರಚಿತಾ ರಾಮ್ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಒಂದು ಕಾಲದಲ್ಲಿ ಪ್ರೇಮಲೋಕ ಸಿನಿಮಾದ ಹಾಡುಗಳು ಎಷ್ಟರ ಮಟ್ಟಿಗೆ ಕ್ರೇಜು ಹುಟ್ಟಿಸಿತು ಅಂದರೆ ಯಾರದೆ ಮನೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರಬಹುದು ಅಥವಾ ಇನ್ನಿತರ ಸಮಾರಂಭ ಇರಬಹುದು ಎಲ್ಲದರಲ್ಲಿಯೂ ಕೂಡ ಪ್ರೇಮಲೋಕದ ಹಾಡುಗಳೇ ರಾರಾಜಿಸುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸಿನಿಮಾ ಸಾಂಗ್ ಗಳು ಹಿಟ್ ಪಡೆದಿತ್ತು ಇನ್ನೇನು ಪ್ರೇಮಲೋಕ ತೆರೆಕಂಡು ನಾಲ್ಕು ದಶಕಗಳ ಹತ್ತಿರ ಆಗಿದೆ ಆದರೂ ಕೂಡ ಈ ಸಿನಿಮಾಗೆ ಇರುವಂತಹ ಕ್ರೇಜ್ ಬೇರೆ ಯಾವ ಸಿನಿಮಾಗಳಿಗೂ ಇಲ್ಲ ಅಂತ ಹೇಳಬಹುದು.

ಬರೋಬ್ಬರಿ 12 ಹಾಡುಗಳನ್ನು ಈ ಸಿನಿಮಾ ಒಳಗೊಂಡಿದೆ ಸದ್ಯಕ್ಕೆ ರವಿಚಂದ್ರನ್ ಅವರ ಕೇವಲ ಬೆಳ್ಳಿತರೆ ಮಾತ್ರವಲ್ಲದೆ ಕಿರುತೆಯನ್ನು ಕೂಡ ತಮ್ಮನ್ನು ತಾವು ಸಕ್ರಿಯವಾಗಿ ಇಟ್ಟುಕೊಂಡಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಡ್ರಾಮಾ ಜೂನಿಯರ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರಚಿತಾ ರಾಮ್ ರವಿ ಚಂದ್ರನ್ ಹಾಗೂ ಲಕ್ಷ್ಮಿ ಅಮ್ಮನವರು ಮೂರು ಜನರು ಕೂಡ ಜಡ್ಜಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಒಂದು ಕಾರ್ಯಕ್ರಮವನ್ನು ನಿರೂಪಕ ಮಾಸ್ಟರ್ ಆನಂದ್ ಅವರು ನಿರೂಪಿಸಿಕೊಂಡು ಹೋಗಿದ್ದಾರೆ ಪ್ರತಿವಾರವೂ ಕೂಡ ವಿಭಿನ್ನ ಕಾನ್ಸೆಪ್ಟ್ ಗಳನ್ನು ಮಕ್ಕಳು ತೆಗೆದುಕೊಂಡು ಬಂದು ಆಕ್ಟ್ ಮಾಡುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ.

ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ರಚಿತಾ ರಾಮ್ ಅವರು ರವಿಚಂದ್ರನ್ ಅವರ ಜೊತೆ ಪ್ರೇಮ ಲೋಕದ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರವಿ ಮಾವ ಮಾತ್ರ ಈ ಒಂದು ಹಾಡಿನಲ್ಲಿ ಸಖತ್ ಆಗಿಯೇ ಡಾನ್ಸ್ ಮಾಡಿದ್ದಾರೆ ವಯಸ್ಸು 60ರ ಸಮೀಪವಾದರೂ ಕೂಡ 20ರ ಯುವಕರ ರೀತಿ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿದನು ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಇನ್ನು ರಚಿತಾ ರಾಮ್ ಬಗ್ಗೆ ಹೇಳುವ ಹಾಗೆಯೇ ಇಲ್ಲ ಅಭಿನಯ ಆಗಿರಬಹುದು ಡಾನ್ಸ್ ಆಗಿರಬಹುದು ಅಥವಾ ಆಕ್ಟಿಂಗ್ ಆಗಿರಬಹುದು ಎಲ್ಲದರಲ್ಲೂ ಕೂಡ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದಾರೆ.

ರವಿಚಂದ್ರನ್ ಜೊತೆ ಹೆಜ್ಜೆ ಹಾಕುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವು ಎಲ್ಲೆಡೆ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿರುವಂತಹ ಕಾರ್ಯಕ್ರಮವಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ನಿರತರಾಗಿರುವಂತಹ ಜಡ್ಜಸ್ ಗಳು ಪ್ರತಿವಾರವೂ ಕೂಡ ಮಕ್ಕಳ ಒಟ್ಟಿಗೆ ಅವರು ಕೂಡ ಒಂದು ಪರ್ಫಾರ್ಮೆನ್ಸ್ ಅನ್ನು ನೀಡುವುದರ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಎನರ್ಜಿ ಬೂಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಕಾರಣಕ್ಕಾಗಿ ರವಿಚಂದ್ರನ್ ಅವರು ಈ ವೇದಿಕೆಗೆ ಬರುವಂತಹ ಅತಿಥಿಗಳ ಜೊತೆ ಮತ್ತು ಜಡ್ಜ್ ಆಗಿ ಕಾಣಿಸಿಕೊಂಡಿರುವಂತಹ ರಚಿತಾ ರಾಮ್ ಅವರ ಜೊತೆ ನೃತ್ಯ ಮಾಡುವುದರ ಮೂಲಕ ಗಮನ ಸೆಳೆಯುತ್ತಾರೆ. ರಚಿತ ರಾಮ್ ರವಿ ಚಂದ್ರನ್ ಜೊತೆ ಡ್ಯಾನ್ಸ್ ಮಾಡಿದ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ನೀವು ಕೂಡ ಇಷ್ಟ ಪಡುತ್ತೀರಾ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಒಂದು ವೇಳೆ ನೀವು ಕೂಡ ರವಿ ಚಂದ್ರನ್ ಹಾಗೂ ರಚಿತ ರಾಮ್ ಅಭಿಮಾನಿ ಆಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ರಚಿತಾ ರವಿ ಚಂದ್ರನ್ ಎಂದು ಕಾಮೆಂಟ್ ಮಾಡಿ.