ಪ್ರೇಮಲೋಕದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್ ಮತ್ತು ರಚಿತಾ ರಾಮ್ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಒಂದು ಕಾಲದಲ್ಲಿ ಪ್ರೇಮಲೋಕ ಸಿನಿಮಾದ ಹಾಡುಗಳು ಎಷ್ಟರ ಮಟ್ಟಿಗೆ ಕ್ರೇಜು ಹುಟ್ಟಿಸಿತು ಅಂದರೆ ಯಾರದೆ ಮನೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರಬಹುದು ಅಥವಾ ಇನ್ನಿತರ ಸಮಾರಂಭ ಇರಬಹುದು ಎಲ್ಲದರಲ್ಲಿಯೂ ಕೂಡ ಪ್ರೇಮಲೋಕದ ಹಾಡುಗಳೇ ರಾರಾಜಿಸುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸಿನಿಮಾ ಸಾಂಗ್ ಗಳು ಹಿಟ್ ಪಡೆದಿತ್ತು ಇನ್ನೇನು ಪ್ರೇಮಲೋಕ ತೆರೆಕಂಡು ನಾಲ್ಕು ದಶಕಗಳ ಹತ್ತಿರ ಆಗಿದೆ ಆದರೂ ಕೂಡ ಈ ಸಿನಿಮಾಗೆ ಇರುವಂತಹ ಕ್ರೇಜ್ ಬೇರೆ ಯಾವ ಸಿನಿಮಾಗಳಿಗೂ ಇಲ್ಲ ಅಂತ ಹೇಳಬಹುದು.
ಬರೋಬ್ಬರಿ 12 ಹಾಡುಗಳನ್ನು ಈ ಸಿನಿಮಾ ಒಳಗೊಂಡಿದೆ ಸದ್ಯಕ್ಕೆ ರವಿಚಂದ್ರನ್ ಅವರ ಕೇವಲ ಬೆಳ್ಳಿತರೆ ಮಾತ್ರವಲ್ಲದೆ ಕಿರುತೆಯನ್ನು ಕೂಡ ತಮ್ಮನ್ನು ತಾವು ಸಕ್ರಿಯವಾಗಿ ಇಟ್ಟುಕೊಂಡಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಡ್ರಾಮಾ ಜೂನಿಯರ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ರಚಿತಾ ರಾಮ್ ರವಿ ಚಂದ್ರನ್ ಹಾಗೂ ಲಕ್ಷ್ಮಿ ಅಮ್ಮನವರು ಮೂರು ಜನರು ಕೂಡ ಜಡ್ಜಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಒಂದು ಕಾರ್ಯಕ್ರಮವನ್ನು ನಿರೂಪಕ ಮಾಸ್ಟರ್ ಆನಂದ್ ಅವರು ನಿರೂಪಿಸಿಕೊಂಡು ಹೋಗಿದ್ದಾರೆ ಪ್ರತಿವಾರವೂ ಕೂಡ ವಿಭಿನ್ನ ಕಾನ್ಸೆಪ್ಟ್ ಗಳನ್ನು ಮಕ್ಕಳು ತೆಗೆದುಕೊಂಡು ಬಂದು ಆಕ್ಟ್ ಮಾಡುವ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ.
ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆ ರಚಿತಾ ರಾಮ್ ಅವರು ರವಿಚಂದ್ರನ್ ಅವರ ಜೊತೆ ಪ್ರೇಮ ಲೋಕದ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರವಿ ಮಾವ ಮಾತ್ರ ಈ ಒಂದು ಹಾಡಿನಲ್ಲಿ ಸಖತ್ ಆಗಿಯೇ ಡಾನ್ಸ್ ಮಾಡಿದ್ದಾರೆ ವಯಸ್ಸು 60ರ ಸಮೀಪವಾದರೂ ಕೂಡ 20ರ ಯುವಕರ ರೀತಿ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿದನು ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಇನ್ನು ರಚಿತಾ ರಾಮ್ ಬಗ್ಗೆ ಹೇಳುವ ಹಾಗೆಯೇ ಇಲ್ಲ ಅಭಿನಯ ಆಗಿರಬಹುದು ಡಾನ್ಸ್ ಆಗಿರಬಹುದು ಅಥವಾ ಆಕ್ಟಿಂಗ್ ಆಗಿರಬಹುದು ಎಲ್ಲದರಲ್ಲೂ ಕೂಡ ಪ್ರಾವೀಣ್ಯತೆಯನ್ನು ಪಡೆದುಕೊಂಡಿದ್ದಾರೆ.
ರವಿಚಂದ್ರನ್ ಜೊತೆ ಹೆಜ್ಜೆ ಹಾಕುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವು ಎಲ್ಲೆಡೆ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿರುವಂತಹ ಕಾರ್ಯಕ್ರಮವಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ನಿರತರಾಗಿರುವಂತಹ ಜಡ್ಜಸ್ ಗಳು ಪ್ರತಿವಾರವೂ ಕೂಡ ಮಕ್ಕಳ ಒಟ್ಟಿಗೆ ಅವರು ಕೂಡ ಒಂದು ಪರ್ಫಾರ್ಮೆನ್ಸ್ ಅನ್ನು ನೀಡುವುದರ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಎನರ್ಜಿ ಬೂಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಕಾರಣಕ್ಕಾಗಿ ರವಿಚಂದ್ರನ್ ಅವರು ಈ ವೇದಿಕೆಗೆ ಬರುವಂತಹ ಅತಿಥಿಗಳ ಜೊತೆ ಮತ್ತು ಜಡ್ಜ್ ಆಗಿ ಕಾಣಿಸಿಕೊಂಡಿರುವಂತಹ ರಚಿತಾ ರಾಮ್ ಅವರ ಜೊತೆ ನೃತ್ಯ ಮಾಡುವುದರ ಮೂಲಕ ಗಮನ ಸೆಳೆಯುತ್ತಾರೆ. ರಚಿತ ರಾಮ್ ರವಿ ಚಂದ್ರನ್ ಜೊತೆ ಡ್ಯಾನ್ಸ್ ಮಾಡಿದ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ನೀವು ಕೂಡ ಇಷ್ಟ ಪಡುತ್ತೀರಾ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಒಂದು ವೇಳೆ ನೀವು ಕೂಡ ರವಿ ಚಂದ್ರನ್ ಹಾಗೂ ರಚಿತ ರಾಮ್ ಅಭಿಮಾನಿ ಆಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ರಚಿತಾ ರವಿ ಚಂದ್ರನ್ ಎಂದು ಕಾಮೆಂಟ್ ಮಾಡಿ.