Home Blog Page 313

ಬಟ್ಟೆ ಇಲ್ಲದೆ ಕೆಸರಿನಲ್ಲಿ ಹೊರಳಾಡಿ ಫೋಟೋಶೂಟ್ ಮಾಡಿಸಿದ ನವ ಜೋಡಿ, ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ವೈರಲ್ ವಿಡಿಯೋ ನೋಡಿ

ಮೊದಲೆಲ್ಲ ವಿದೇಶದಲ್ಲಿ ಈ ರೀತಿ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಫೇಮಸ್ ಆಗಿತ್ತು ಇದೀಗ ನಮ್ಮ ದೇಶದಲ್ಲಿ ವಿದೇಶಗಳನ್ನು ಮೀರಿಸುವಷ್ಟು ಮಟ್ಟಕ್ಕೆ ಈ ಪ್ರೀ ವೆಡ್ಡಿಂಗ್ ಶೂಟ್ ಅನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಹಿಂದಿನಿಂದಲೂ ಕೂಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದಕ್ಕೆ ಬಹಳ ಮಹತ್ವದ ಸ್ಥಾನವಿದೆ. ಹೀಗಾಗಿ ಪ್ರತಿಯೊಬ್ಬ ಜೀವನ ನಿಜವಾಗಿ ಆರಂಭ ಆಗುವುದೇ ಮದುವೆಯಿಂದ ಎನ್ನುವ ನಂಬಿಕೆಗಳು ನಮ್ಮಲ್ಲಿ ಫಲವಾಗಿ ಬೇರೂರಿವೆ.

ಹಾಗೂ ಇಂತಹ ಸಂದರ್ಭಗಳನ್ನು ಸದಾ ಕಾಲ ನೆನಪಿನಲ್ಲಿ ಇರುವಂತೆ ಹಚ್ಚ ಹಸಿರಾಗಿಟ್ಟುಕೊಳ್ಳಲು ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ಮೆಮೊರಿಗಳನ್ನು ಇದರಲ್ಲಿ ತುಂಬಿಸಲು ಹಾಗೂ ಅವುಗಳನ್ನು ಹಾಗೆ ಉಳಿಸಿಕೊಳ್ಳಲು ಜನರು ಆಸೆಪಡುತ್ತಾರೆ ಇಂತಹ ಒಂದು ಆಸೆಯಿಂದ ಹುಟ್ಟಿಕೊಂಡಿದೆ ಫೋಟೋಶೂಟ್ಗಳು. ಅದೆಲ್ಲ ಮದುವೆ ದಿನದ ಮಧುರ ಕ್ಷಣಗಳನ್ನು ಫೋಟೋ ತೆಗೆಸಿ ಅಥವಾ ವಿಡಿಯೋ ಮಾಡಿಸಿ ಸೆರೆ ಹಿಡಿಯುತ್ತಿದ್ದರು ಈಗ ಪ್ರೀ ವೆಡ್ಡಿಂಗ್ ಶೂಟ್ ಎನ್ನುವುದು ವಿಶೇಷ ರೀತಿಯಲ್ಲಿ ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ.

ಯಾವುದೇ ಸಿನಿಮಾದ ಟ್ರೈಲರ್ ಕಡಿಮೆ ಇಲ್ಲದಂತೆ ಜನರು ಚಿತ್ರಿಸಿಕೊಳ್ಳುತ್ತಿದ್ದಾರೆ. ಅದು ಇವುಗಳನ್ನೇ ಬಳಸಿಕೊಂಡು ವೆಡ್ಡಿಂಗ್ ಕಾರ್ಡ್ ಗಳನ್ನು ಇನ್ವಿಟೇಶನ್ ಕಾರ್ಡ್ ಗಳನ್ನು ಈ ವಿಡಿಯೋಗಳ ಫೋಟೋಗಳ ಮೂಲಕ ಹಂಚಲು ಎಲ್ಲರಿಗೂ ತಲುಪಲು ಆಸೆ ಪಡುತ್ತಾರೆ. ನಮ್ಮ ಜೀವನದ ಹೀರೋಗಳು ಹೀರೋಯಿನ್ ಗಳು ನಾವು ಮತ್ತು ನಮ್ಮ ಪೇರ್ ಆದಮೇಲೆ ನಾವು ಕೂಡ ಸಿನಿಮಾದಲ್ಲಿ ಹೀರೋಯಿನ್ ರೀತಿ ನಿಜ ಜೀವನದಲ್ಲಿ ಕೆಲವು ಕ್ಷಣಗಳನ್ನು ಕಳೆದು ಅವುಗಳನ್ನು ಸೆರಿ ಹಿಡಿದು ಉಳಿಸಿಕೊಳ್ಳಬೇಕು ಎನ್ನುವುದು ಈ ರೀತಿ ಜೋಡಿಗಳ ಮನಸ್ಸಿನಲ್ಲಿ ಇರುವ ಭಾವನೆ ಎಂದೇ ಹೇಳಬಹುದು.

ಜೊತೆಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವುದರಿಂದ ಫೇಸ್ಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್ ಮುಂತಾದ ಕಡೆ ಇವುಗಳನ್ನು ಹಂಚಿಕೊಳ್ಳಲು ಜನರು ಹಾತೊರೆಯುತ್ತಾರೆ. ಹೀಗೆ ಈ ಕಾರಣದಿಂದ ಕೂಡ ಜನರು ಪ್ರಿವೆಡ್ ಶೂಟ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಈ ರೀತಿ ಪ್ರಿ ವೆಡ್ಡಿಂಗ್ ಶೂಟ್ ವಿಶೇಷವಾಗಿರಬೇಕು ಎಂದು ಹೊಸ ಹೊಸ ಐಡಿಯಾಗಳ ಮೂಲಕ ಒಬ್ಬರಿಗಿಂತ ಒಬ್ಬರು ವಿಶೇಷವಾಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

ಒಮ್ಮೊಮ್ಮೆ ಬಹಳ ಅಟ್ರಾಕ್ಟಿವ್ ಆಗಿ ಸುಂದರವಾಗಿ ಫೋಟೋಶೂಟ್ ಮಾಡಿಸಿಕೊಂಡ ಜೋಡಿಗಳ ಫೋಟೋಗಳು ವೈರಲ್ ಆಗಿ ಅವರುಗಳು ಫೇಮಸ್ ಆಗಿದ್ದು ಇದೆ ಹಾಗೆ ಜನರಿಗೆ ಮುಜುಗರ ತರುವ ರೀತಿ ಫೋಟೋಶೂಟ್ ಮಾಡಿಸಿಕೊಂಡು ವಿವಾದ ಮಾಡಿಕೊಂಡ ಜೋಡಿಗಳ ಬಗ್ಗೆ ಕೂಡ ನಾವು ನೋಡಿದ್ದೇವೆ ಕೇಳಿದ್ದೇವೆ. ಕೆಲವೊಮ್ಮೆ ಇಂತಹ ಪ್ರಿ ವೆಡ್ ಶೂಟ್ ಫೋಟೋ ತೆಗೆಸಿಕೊಳ್ಳಲು ಕೆಲವು ಅಪಾಯಕರ ಜಾಗಗಳಿಗೆ ಹೋಗಿ ಪ್ರಾಣ ಕಳೆದುಕೊಂಡ ಜೋಡಿಗಳ ಬಗ್ಗೆಯೂ ಕೇಳಿದ್ದೇವೆ.

ಈಗ ಮತ್ತೊಂದು ರೀತಿಯ ಪ್ರಿವೆಡ್ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಇದರಲ್ಲಿ ಮೈತುಂಬ ಬರಿ ಕೆಸರನ್ನೇ ಮೆತ್ತುಕೊಂಡು ಗದ್ದೆಯಲ್ಲಿ ಹೊರಳಾಡಿ ನವ ಜೋಡಿ ಒಂದು ಫೋಟೋಶೂಟ್ ಮಾಡಿಸಿಕೊಂಡಿದೆ ಈ ಹಿಂದೆ ಕೇರಳದ ಜೋಡಿ ಎಂದು ಹಳ್ಳಿ ಸೊಗಡಿನಲ್ಲಿ ಫೋಟೋಶೂಟ್ ಮಾಡಿಸಿತ್ತು ಈಗ ಅದೇ ಮಾದರಿಯಲ್ಲಿ ಆದರೆ ಬಹಳ ವಿಚಿತ್ರವಾಗಿ ತುಂಬಾ ಕೆಸರು ಮೆತ್ತುಕೊಂಡು ಈ ಜೋಡಿ ಫೋಟೋ ತೆಗೆಸಿಕೊಳ್ಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.

ಸೋಶಿಯಲ್ ಮೀಡಿಯ ಬಂದ ಮೇಲೆ ಈ ಟ್ರೋಲ್ ಎನ್ನುವುದು ಕೂಡ ಅದರ ಜೊತೆಜೊತೆಗೆ ಬೆಳೆಯುತ್ತಿದೆ ಎಂದೇ ಹೇಳಬಹುದು. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾದ ಮೇಲೆ ಪ್ರತಿಯೊಬ್ಬರ ಆಕ್ಟಿವಿಟಿ ಮೇಲೆ ಎಲ್ಲರ ಗಮನ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿಗಳ ಮೇಲೆ ತುಸು ಹೆಚ್ಚಾಗಿ ಇರುತ್ತದೆ. ಗೊತ್ತಿಲ್ಲದೆ ಮಾಡುವ ಎಷ್ಟೋ ಅವಾಂತರಗಳು ಈ ರೀತಿ ಟ್ರೋಲ್ ಮಾಡುವವರಿಗೆ ಆಹಾರ ಆಗಿಬಿಡುತ್ತದೆ. ಈ ರೀತಿ ಟ್ರೋಲ್ ಆಗುವುದು ನಟ, ನಟಿ ಹಾಗೂ ಸೆಲೆಬ್ರಿಟಿಗಳಿಗೆ ಹೊಸದೇನಲ್ಲ ಅದರಲ್ಲೂ ರಶ್ಮಿಕ ಮಂದಣ್ಣ ಅವರಂತೂ ಟ್ರೋಲಿಗಳಿಗೆ ವರ್ಷದ ಕೂಳು ಎಂದೇ ಹೇಳಬಹುದು.

ವರ್ಷ ಪೂರ್ತಿ ಅವರ ಪ್ರತಿಯೊಂದು ವಿಷಯವನ್ನು ಗಮನಿಸಿ ಅದರಲ್ಲಿ ಕೊಂಕು ಹುಡುಕಿ ಟ್ರೋಲ್ ಮಾಡುತ್ತಾ ಟ್ರೋಲಿಗಳು ತಮ್ಮ ಹೊಟ್ಟೆಪಾಡು ತುಂಬಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಕಡಿಮೆ ಏನಿಲ್ಲ ಅವರು ನಡೆದುಕೊಳ್ಳುವ ಕೆಲವು ವರ್ತನೆಗಳನ್ನಂತೂ ಖಂಡಿತ ಟ್ರೋಲ್ ಮಾಡಲೇಬೇಕು ರಶ್ಮಿಕಾ ಮಂದಣ್ಣ ಯಾವಾಗ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಂಡರು ಹಾಗೂ ನಡೆದಿದ್ದ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಬಿಟ್ಟರು ಅಂದಿನಿಂದ ಕರುನಾಡಲ್ಲಿ ರಶ್ಮಿಕ ಮಂದಣ್ಣ ವಿರುದ್ಧದ ಒಂದು ದೊಡ್ಡ ಬಳಗವೇ ಇದೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಟೋಲ್ ಮಾಡಿದಷ್ಟು ಬೇರೊಬ್ಬ ಯಾವ ಹೀರೋಯಿನ್ ಗೂ ಕೂಡ ಟ್ರೊಲ್ ಮಾಡಿಲ್ಲ ಎಂದೇ ಹೇಳಬಹುದು.

ಆಮೇಲೆ ಅವರು ನಡೆದುಕೊಂಡ ಒಂದೊಂದು ರೀತಿಯೂ ಕೂಡ ಅವರೇ ಅವರಿಂದ ಮಾಡಿಕೊಂಡ ಎಡವಟ್ಟುಗಳಾಗಿವೆ. ಮೊದಲೆಲ್ಲ ಇವುಗಳ ಬಗ್ಗೆ ಬಹಳ ಡಿಸ್ಟರ್ಬ್ ಆಗುತ್ತಿದ್ದರು ಹಾಗೂ ಲೈವ್ ಬಂದು ಟ್ರೋಲ್ ಮಾಡುವವರ ಬಗ್ಗೆ ಮಾತನಾಡುತ್ತಿದ್ದ ರಶ್ಮಿಕ ಮಂದಣ್ಣ ಈಗಂತೂ ಇಂತಹ ಟ್ರೋಲ್ ಗಳಿಗೆ ಕ್ಯಾರೆ ಎನ್ನುವುದಿಲ್ಲ. ನ್ಯಾಷನಲ್ ಕ್ರಶ್ ಎಂದು ಹೆಸರು ಪಡೆದಿರುವ ರಶ್ಮಿಕ ಮಂದಣ್ಣ ಈಗ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಸಿನಿಮಾರಂಗದಲ್ಲೂ ಕೂಡ ಬಹಳ ಬೇಡಿಕೆಯ ನಟಿ. ಬಹುತೇಕ ಈ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳ ಜೊತೆ ಹೀರೋಯಿನ್ ಆಗಿ ನಟಿಸುವ ಅದೃಷ್ಟ ಪಡೆದುಕೊಂಡಿರುವ.

ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿ ಆಗಿದ್ದು ಈಗ ಹಿಂದಿ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಈಗಾಗಲೇ ರಶ್ಮಿಕಾ ಮಂದಣ್ಣ ಅವರ ಮೊದಲ ಹಿಂದಿ ಸಿನಿಮಾ ಗುಡ್ ಬೈ ಚಿತ್ರೀಕರಣ ಪೂರ್ತಿಗೊಂಡು ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದರ ಟ್ರೈಲರ್ ಲಾಂಚ್ ಕಾರ್ಯಕ್ರಮ ಗಣೇಶ ಹಬ್ಬದ ದಿನದಂದು ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮ ಬಗ್ಗೆ ಎರಡು ಮಾತಿಲ್ಲ ಆದರೆ ರಶ್ಮಿಕ ಮಂದಣ್ಣ ಅಂದು ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು ಆದರೆ ಬಟ್ಟೆಯನ್ನು ಅಷ್ಟೊಂದು ಮಾಡರ್ನ್ ಆಗಿ ಇರಲಿಲ್ಲ ಅದೇ ಬಟ್ಟೆ ಧರಿಸಿ ಚಿತ್ರತಂಡದ ಜೊತೆ ಅಲ್ಲೇ ಹತ್ತಿರದಲ್ಲಿದ್ದ ಗಣೇಶನ ದರ್ಶನ ಪಡೆಯಲು ರಶ್ಮಿಕ ಮಂದಣ್ಣ ಹೋಗಿದ್ದರು.

ಈಗ ಟ್ರೋಲಿಗರು ರಶ್ಮಿಕ ಮಂದಣ್ಣ ಧರಿಸಿದ್ದ ಬಟ್ಟೆಯ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ ರಶ್ಮಿಕ ಮಂದಣ್ಣ ಧರಿಸಿದ್ದ ಉಡುಪು ಆ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಉಳಿದ ನಟಿಯರ ಬಟ್ಟೆಗಳ ಜೊತೆ ಹೋಲಿಸಿದರೆ ಹೆಚ್ಚು ಗಂಭೀರವಾಗಿತ್ತು ಅದರಲ್ಲಿ ಹೆಚ್ಚು ಅಂಗಾಂಗ ಪ್ರದರ್ಶನವೇನು ಆಗುತ್ತಿರಲಿಲ್ಲ ಆದರೂ ಕೂಡ ಅದೇ ಬಟ್ಟೆ ಧರಿಸಿ ಗಣೇಶನ ದರ್ಶನ ಪಡೆದ ಕಾರಣ ರಶ್ಮಿಕಾ ಟ್ರೋಲ್ ಆಗುತ್ತಿದ್ದಾರೆ. ಖಾಸಗಿ ಜೀವನದಲ್ಲಿ ಅವರು ಯಾವ ರೀತಿ ಬೇಕಾದರೂ ಇರಲಿ ಆದರೆ ಕೆಲವು ಧಾರ್ಮಿಕ ವಿಚಾರಗಳಿಗೆ ಸಂಬಂಧ ಪಟ್ಟ ಹಾಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದು ಉತ್ತಮ ಎಂಬುವುದು ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ

ಅನಾರೋಗ್ಯದಿಂದ ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ.

ಕನ್ನಡದ ಹಿರಿಯ ನಟಿ ಲೀಲಾವತಿಯವರಿಗೆ ಅನಾರೋಗ್ಯ ಸಮಸ್ಯೆ ಕಂಡು ಬಂದಿದ್ದರಿಂದ ಕಳೆದ 15 ದಿನದಿಂದ ಆರೋಗ್ಯದಲ್ಲಿ ತೀ.ವ್ರ ಸಮಸ್ಯೆ ಉಂಟಾಗಿದೆ ಈ ಕಾರಣ ಹಾಸಿಗೆಯನ್ನು ಹಿಡಿದಿದ್ದಾರೆ. ಲೀಲಾವತಿಯವರ ಸಂಪೂರ್ಣ ಆರೋಗ್ಯ ಜವಾಬ್ದಾರಿ ಯೋಗ ಕ್ಷೇಮವನ್ನು ವಿನೋದ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಕನ್ನಡ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟಂತಹ ಕೆಲವು ನಾಯಕ ನಟರು ಪೋಷಕ ನಟರು ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸುವುದಕ್ಕೆ ನೆಲಮಂಗಲದ ಸಮೀಪದಲ್ಲಿ ಇರುವಂತಹ ಗ್ರಾಮ ಒಂದಕ್ಕೆ ಭೇಟಿ ನೀಡಿ ಲೀಲಾವತಿಯ ಮನೆಗೆ ಬಂದು ಅವರ ಆರೋಗ್ಯವನ್ನು ವಿಚಾರಿಸಿದರೆ.

ಈ ಸಮಯದಲ್ಲಿ ಲೀಲಾವತಿಯವರು ತುಂಬಾನೇ ಭಾವುಕರಾಗಿ ನನ್ನ ಮಗನನ್ನು ಕೈಬಿಡಬೇಡಿ ದಯವಿಟ್ಟು ನನ್ನ ಮಗನನ್ನು ಮುಂದೆ ನೋಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಎಂತವರ ಕಣ್ಣಲ್ಲಾದರೂ ಕೂಡ ನೀರು ಬರುತ್ತದೆ ಅಷ್ಟಕ್ಕು ಲೀಲಾವತಿಯವರು ಈ ರೀತಿ ಪರಿಪರಿಯಾಗಿ ಯಾಕೆ ಬೇಡುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡುವುದಾದರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಲೀಲಾವತಿ ಅವರಿಗೆ ವಿನೋದ್ ರಾಜಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರೋ ಬಂಧು ಮಿತ್ರರಾದರು ಅಥವಾ ಸಂಬಂಧಿಕರಾಗಲಿ ಇಲ್ಲ.

ಚಿತ್ರರಂಗವೇ ಇವರ ಕುಟುಂಬವಾಗಿದೆ ಮೊದಲಿನಿಂದಲೂ ಕೂಡ ಚಿತ್ರರಂಗವನ್ನೇ ತನ್ನ ಸ್ವಂತ ಕುಟುಂಬ ಎಂದು ಭಾವಿಸಿಕೊಂಡು ಬಂದಿದೆ ಆದರೆ ಚಿತ್ರರಂಗದವರು ಲೀಲಾವತಿ ಅವರಿಗೆ ಮಾಡಿದಷ್ಟು ಅನ್ಯಾಯ ಮತ್ಯಾವ ನಟಿಗೂ ಮಾಡಿಲ್ಲ ಅಂತಾನೇ ಹೇಳಬಹುದು. ಹೌದು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತಾ ಹೋದರೆ ದೊಡ್ಡ ಕಥೆಯನ್ನೇ ಬರೆಯಬಹುದು. ಆದರೆ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಸದ್ಯಕ್ಕೆ ಲೀಲಾವತಿ ಅವರ ಆರೋಗ್ಯದ ಬಗ್ಗೆ ಹಾಗೂ ವಿನೋದ್ ರಾಜಕುಮಾರ್ ಅವರ ಬಗ್ಗೆ ಮಾತ್ರ ಇಲ್ಲಿ ತಿಳಿಸುತ್ತೇವೆ ನೋಡಿ.

ಲೀಲಾವತಿ ಅವರು ಸುಮಾರು ಇಲ್ಲಿಯವರೆಗೂ ಕೂಡ 500ಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಪೋಷಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಇನ್ನು ಇವರ ಮಗ ವಿನೋದ್ ರಾಜ್ ಅವರು ಕೂಡ ಅದ್ಭುತ ಡ್ಯಾನ್ಸರ್ ಅದ್ಭುತ ಕಲೆಗಾರ ನಾಯಕ ನಟನು ಕೂಡ ಹೌದು. 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಅಂದರೆ ಸಿಕ್ಕಾಪಟ್ಟೆ ಕ್ರೇಜ್ ಏಕೆಂದರೆ ಚಿತ್ರರಂಗದಲ್ಲಿ ಇವರ ರೀತಿಯಲ್ಲಿ ಯಾರಿಂದಲೂ ಕೂಡ ಡ್ಯಾನ್ಸ್ ಮಾಡುವುದಕ್ಕೆ ಸಾಧ್ಯವಿರಲಿಲ್ಲ. ಅಷ್ಟು ಚಾಕು ಚಕ್ಯತೆಯನ್ನು ಡಾನ್ಸ್ ನಲ್ಲಿ ಒಳಗೊಂಡಿದ್ದರು ಕೆಲವು ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದರು.

ಆದರೆ ಅದೃಷ್ಟ ಎಂಬುದು ಕೈ ಹಿಡಿದರು ಕೂಡ ಚಿತ್ರರಂಗದಲ್ಲಿ ಇದ್ದಂತಹ ಕೆಲವು ವ್ಯಕ್ತಿಗಳು ಇವರನ್ನು ತುಳಿಯುವುದಕ್ಕಾಗಿ ಕಾದು ಕುಳಿತಿದ್ದರು ಅವರು ಹಾಕಿಕೊಂಡಂತಹ ಯೋಜನೆಯ ಪ್ರಕಾರ ವಿನೋದ್ ರಾಜಕುಮಾರ್ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದರೆ. ಇದಕ್ಕೆ ಕಾರಣ ಯಾರು ಎಂಬುದು ನಿಮಗೆ ಈಗಾಗಲೇ ತಿಳಿದೆ ಇದೆ ಈ ಕಾರಣಕ್ಕಾಗಿ ಲೀಲಾವತಿಯವರು ಇಂತಹ ಇಳಿವಯಸ್ಸಿನಲ್ಲಿಯೂ ಕೂಡ ತಮ್ಮ ಮಗನ ಬಗ್ಗೆ ಚಿಂತೆ ಮಾಡುತ್ತಿದ್ದರೆ. ಒಂದು ವೇಳೆ ನಾನು ವಿ.ಧಿ.ವ.ಶ.ರಾದರೆ ನನ್ನ ಮಗ ಒಬ್ಬಂಟಿಯಾಗುತ್ತಾನೆ ಈತನಿಗೆ ಹಿಂದು ಮುಂದು ಯಾರೂ ಇಲ್ಲ ಮದುವೆಯೂ ಕೂಡ ಆಗಿಲ್ಲ.

ಹಾಗಾಗಿ ದಯವಿಟ್ಟು ಚಿತ್ರರಂಗದವರು ಇವನನ್ನು ಇನ್ನು ಮುಂದೆಯಾದರೂ ನೋಡಿಕೊಳ್ಳಿ ಅರ್ಧಕ್ಕೆ ಕೈ ಬಿಡಬೇಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಿಜಕ್ಕೂ ಕೂಡ ಒಂದು ಕ್ಷಣ ಮನಸ್ಸು ವಿಚಲಿತವಾಗುವಂತಹ ವಾತಾವರಣವನ್ನು ಮಾರ್ಪಡಿಸುತ್ತದೆ. ಎಷ್ಟು ಹಣವಿದ್ದರೇನು ಎಷ್ಟು ಹೆಸರಿದ್ದರೇನು ಕೊನೆಯ ಗಳಿಗೆಯಲ್ಲಿ ಬಂಧು ಬಳಗ ಇಲ್ಲದೆ ಇದ್ದರೆ ಎಂತಹ ನರಕವನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಲೀಲಾವತಿಯವರು ಇದೀಗ ಮನಗೊಂಡಿದ್ದಾರೆ. ಇಂತಹ ನೋವು ಯಾತನೆ ತನ್ನ ಮಗನಿಗೆ ಬರಬಾರದು ಎಂದು ತಾಯಿಯ ಹೃದಯ ಆಸೆ ಪಡುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ತಂದೆಯಂತೆಯೇ ಮಕ್ಕಳು ಸಹ ಆದರ್ಶ ಬಾಳ್ವೆ ನಡೆಸುತ್ತಿದ್ದಾರೆ..! ಅಪ್ಪು ಮಕ್ಕಳ ಈ ಸಾಧನೆ ನೋಡಿ ನಿಜಕ್ಕೂ ಹೆಮ್ಮೆ ಅನಿಸುತ್ತೆ.

ಅಪ್ಪು ಅವರು ತಮ್ಮ ದೇಹವನ್ನಷ್ಟೇ ಅಲ್ಲದೇ ತಮ್ಮನ್ನು ಪ್ರೀತಿಸುತ್ತಿದ್ದ ಪ್ರೀತಿಯ ಅಭಿಮಾನಿಗಳು ಹಾಗೂ ಕರುನಾಡಿನ ಜನತೆಯನ್ನು ಅ.ಗ.ಲಿ ಒಂದು ವರ್ಷದ ಸನಿಹವಾಗುತ್ತಿದ್ದು ಇಂದಿಗೂ ಅಪ್ಪು ಅವರ ಅಕಾಲಿಕ ಮ.ರ.ಣ.ಕ್ಕೆ ಮರುಗದ ಕನ್ನಡಿಗರಿಲ್ಲ. ಕಳೆದ ತಿಂಗಳಿನಲ್ಲಿ ಆಗಸ್ಟ್ 15 ರಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಂದೆ ತಾಯಿಗಳ ಪ್ರತಿಮೆಯೊಂದಿಗೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಿ ಅಪ್ಪು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಬಿಂಬಿಸುವ ಕೆಲವು ಚಿತ್ರಣಗಳು ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ ಶೋಭೆಯನ್ನು ಹೆಚ್ಚಿಸಿತ್ತು.

ಇದಿಷ್ಟೇ ಸಾಕು ಅಪ್ಪು ಅವರ ಸರಳತೆ ಮುಗ್ಧತೆಯ ಶ್ರೀಮಂತಿಕೆಯನ್ನು ಪ್ರಚುರ ಪಡಿಸಿ ಅಭಿಮಾನ ಮೆರೆಯಲು. ಇಂದಿಗೂ ಸಹ ಅಪ್ಪು ಅಜರಾಮರರಾಗಿದ್ದು ಅಪ್ಪು ಅವರ ಗುಣಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಪ್ಪುರನ್ನು ಕಾಣ ಬಹುದಾಗಿದೆ. ತಮ್ಮ ಬದುಕಿನ ದಿನಗಳಲ್ಲಿ ಅಪ್ಪು ಅವರು ಸಾಮಾನ್ಯವಾಗಿ ಎಲ್ಲಿಯೂ ಯಾರ ಜೊತೆಯೂ ಸಹ ತಮ್ಮ ಕಾರ್ಯ ವೈಖರಿಯನ್ನಾಗಲಿ ತಮ್ಮ ಸಾಮಾಜಿಕ ಸೇವೆಗಳನ್ನಾಗಲಿ ಹಂಚಿಕೊಂಡಿಲ್ಲ. ಅದರ ಫಲವೇ ಇಂದು ಅಪ್ಪು ಅವರು ಸ.ತ್ತ ನಂತರವೂ ಅಮರರಾಗಿ ಉಳಿಯಲು ಕಾರಣ ಎಂದರೆ ಅತಿಶಯೋಕ್ತಿ ಅಲ್ಲ.

ಅವರ ಈ ಗುಣಗಳೇ ಹೆಚ್ಚು ಜನರನ್ನು ಆಕರ್ಷಿಸಲು ಕಾರಣವಾಗಿದ್ದು ಈ ಕಲಿಯುಗದಲ್ಲಿ ಇಂತಹ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ವಿಶೇಷ ಮಾನ್ಯತೆಗೆ ಪಾತ್ರರಾಗುತ್ತಾರೆ. ಅಪ್ಪು ಅವರು ಮನೆಯಲ್ಲಿಯೂ ಸಹ ತಮ್ಮ ಕುಟುಂಬದ ಜೊತೆಗೆ ಹೊರಗಿನ ಸಮಾಜದ ಜೊತೆ ಹೇಗೆ ಇರುತ್ತಿದ್ದರೋ ಹಾಗೆಯೇ ತಮ್ಮ ಕುಟುಂಬದಲ್ಲಿ ಅನ್ಯೋನ್ಯತೆಯಿಂದ ಇದ್ದು ತಮ್ಮ ಮಕ್ಕಳನ್ನು ಶಿಸ್ತು ಸರಳತೆಯಿಂದ ಬೆಳೆಸಿದ್ದಾರೆ ಎನ್ನುವುದನ್ನು ಅವರ ಮಕ್ಕಳನ್ನು ನೋಡಿದರೆ ತಿಳಿಯುತ್ತದೆ. ಅವರ ಮಕ್ಕಳು ಯಾವುದೇ ಮಾಧ್ಯಮ ಅಥವಾ ಕಾರ್ಯಕ್ರಮಗಳಲ್ಲಿ ಇಂದಿಗೂ ಸಹ ಕಾಣಿಸಿಕೊಳ್ಳದೆ ತಂದೆ ಹಾಕಿದ ಹೆಜ್ಜೆಯ ಮೇಲೆ ತಮ್ಮ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಅಪ್ಪು ಅವರ ಒಬ್ಬ ಪುತ್ರಿ ವಿದೇಶದಲ್ಲಿ ಓದುತ್ತಿದ್ದು ಈಕೆ ತನ್ನ ಸ್ವಂತ ಹಣದಿಂದ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾಳೆ ಎನ್ನುವುದು ವಿಸ್ಮಯ ಸಂಗತಿ ಏಕೆಂದರೆ ಒಬ್ಬ ದೊಡ್ಡ ಸ್ಟಾರ್ ಪುತ್ರಿಯಾಗಿ ಅವರ ಮೇಲೆ ಅವಲಂಬಿತವಾಗದೆ ತಮ್ಮ ಕಾಲ ಮೇಲೆ ತಾನು ನಿಂತು ತಮ್ಮ ಸಂಪಾದನೆ ಹಣದಿಂದ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತಿದ್ದಾಳೆ. ಸಂಪಾದನೆ ಎಂದರೆ ಯಾವುದೋ ಪಾರ್ಟ್ ಟೈಮ್ ಜಾಬ್ ಅಥವಾ ಫುಲ್ ಟೈಮ್ ಜಾಬ್ ಮಾಡುತ್ತಿರ ಬಹುದೆಂದು ತಿಳಿಯಬೇಡಿ ಈಕೆ ತಮ್ಮ ವಿದ್ಯಾಭ್ಯಾಸದಲ್ಲಿ ಶೇಕಡಾ 90 ರಷ್ಟು ಅಂಕವನ್ನು ಗಳಿಸಿ ಅಲ್ಲಿನ ಪ್ರತಿಷ್ಠಿತ ಕಾಲೇಜಿನ ಸ್ಕಾಲರ್ಷಿಪ್ ಗೆ ಪಾತ್ರರಾಗಿದ್ದಾರೆ.

ಈ ಸ್ಕ್ಯಾಲರ್ಷಿಪ್ ನ ಹಣದಿಂದ ತಮ್ಮ ಖರ್ಚನ್ನು ನೀಗಿಸುತ್ತಿದ್ದಾರೆ ಇಂತಹ ಸರಳತೆಯ ಬುದ್ದಿಯನ್ನು ಹೊಂದಿರುವ ಅಪ್ಪು ಅವರ ಪುತ್ರಿಯರು ತಮ್ಮ ತಂದೆಯಂತೆಯೇ ಸರಳ ಮನೋಭಾವನೆ ಹೊಂದಿದ್ದು ಅವರ ಹೆಸರಿಗೆ ಧಕ್ಕೆ ಆಗದ ರೀತಿಯಲ್ಲಿ ನಡೆಯುತ್ತಿದ್ದು ಅಪ್ಪು ಅವರ ಪ್ರೀತಿಯನ್ನು ಅಶ್ವಿನಿ ಪುನೀತ್ ಅವರು ತಮ್ಮ ಮಕ್ಕಳಿಗೆ ನೀಡುತ್ತಿದ್ದಾರೆ. ಅಪ್ಪು ಅವರು ತಮ್ಮ ಮಕ್ಕಳಿಗೆ ಶಿಸ್ತು ಸಂಯಮ ಕಲಿಸಿರುವುದಲ್ಲದೆ ಅಷ್ಟೇ ಪ್ರೀತಿ ವಿಶ್ವಾಸಗಳನ್ನು ನೀಡಿ ಬೆಳೆಸಿದ್ದಾರೆ. ತಮ್ಮ ಕುಟುಂಬ ಹಾಗೂ ಸಮಾಜ ಎರಡನ್ನೂ ಸಹ ಒಂದೇ ಭಾವನೆ ಪ್ರೀತಿಯಿಂದ ನೋಡುತ್ತಿದ್ದ ಅಪ್ಪು ಅವರು ಇಂದು ಎಲ್ಲರ ಮನ ಮನೆಗಳಲ್ಲಿ ಪ್ರೀತಿಯ ಅಪ್ಪುವಾಗಿ ರಾರಾಜಿಸಿ ಅಮರತ್ವ ಪಡೆದಿದ್ದಾರೆ. ಅಪ್ಪು ಮಕ್ಕಳ ಈ ಸಾಧನೆಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು ತಪ್ಪಿದರೆ ಮತ್ತೊಬ್ಬರು ಮಾಡುತ್ತಲೇ ಬರುತ್ತಿದ್ದು.

ಅಪ್ಪು ಅಭಿಮಾನಿಗಳಿಗೂ ಸಹ ಇದೇ ರೀತಿಯಲ್ಲಿ ಅಪ್ಪು ಅವರ ಹೆಸರು ಬಳಸಿಕೊಂಡೋ ಇಲ್ಲ ಅವರು ಇಲ್ಲ ಎಂದು ತಿಳಿಯದೇ ತಪ್ಪು ಮಾಡುವ ಕೆಲಸಗಳು ಆಗುತ್ತಿವೆ. ಈ ಬೆಂಗಳೂರು ಫುಟ್ ಬಾಲ್ ಕ್ಲಬ್ ಫೇಸ್ಬುಕ್ ನಲ್ಲಿ ಬೆಂಗಳೂರು fc ಎನ್ನುವ ಫೇಸ್ಬುಕ್ ಖಾತೆ ಹೊಂದಿದ್ದು ಇದರ ಮೂಲಕ ತಮ್ಮ ಕ್ರೀಡಾ ಜೆರ್ಸಿಯನ್ನು ಪ್ರಮೋಟ್ ಮಾಡುವ ಸಲುವಾಗಿ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗೂ ಯಶ್ ಅವರು ಜೆರ್ಸಿ ತೊಟ್ಟಿರುವಂತೆ ಎಡಿಟ್ ಮಾಡಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಇವರಂತೆ ಯಾರೂ ಇಲ್ಲ ಎನ್ನುವ ಕ್ಯಾಪ್ಶನ್ ಬಳಸಿ ಹಂಚಿಕೊಂಡಿದ್ದಾರೆ.

ಇವರ ಈ ರೀತಿಯ ಪೋಸ್ಟ್ ನಿಂದ ಸಹಜವಾಗಿಯೇ ಯಶ್ ಸುದೀಪ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿ ಖುಷಿ ಪಟ್ಟು ಲೈಕ್ ಕಾಮೆಂಟ್ ಮಾಡಿದ್ದರೆ ಉಳಿದ ಹೀರೋ ಗಳ ಫ್ಯಾನ್ಸ್ ಆಕ್ರೋಶದಿಂದ ಕಿಡಿ ಕಾರಿದ್ದಾರೆ. ಇದಕ್ಕೆ ಕಾರಣ ಕೇವಲ ಮೂವರು ಹೀರೋ ಹೆಸರು ಬಳಸಿಕೊಂಡಿರುವ ಫುಟ್ ಬಾಲ್ ಕ್ಲಬ್ ಉಳಿದ ಹೀರೋ ಗಳು ಅದರಲ್ಲೂ ಹೆಚ್ಚಾಗಿ ಡಿ ಬಾಸ್ ಅಪ್ಪು ಹೆಸರು ಬಳಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದಿಷ್ಟೇ ಅಲ್ಲದೇ ಕ್ಯಾಪ್ಶನ್ ನಲ್ಲಿ ಇವರಂತೆ ಯಾರೂ ಇಲ್ಲ ಎಂದು ಬರೆದುಕೊಂಡಿರುವ ಬಗ್ಗೆ ತೀ.ವ್ರವಾಗಿ ಖಂಡಿಸಿ ಅಪ್ಪು ಹಾಗೂ ಡಿ ಬಾಸ್ ಅಭಿಮಾನಿಗಳು ಆ.ಕ್ರೋ.ಶ ಹೊರ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳು ನಮ್ಮ ಡಿ ಬಾಸ್ ಅವರು ನಿಮಗೆ ಏನು ಮಾಡಿದ್ದಾರೆ ಅವರು ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಹಿಂದೆ ಇದೇ ಬೆಂಗಳೂರು fc ಖಾತೆ ಡಿ ಬಾಸ್ ಅವರ ಯಜಮಾನ ಚಿತ್ರದ ಡಿ ಬಾಸ್ ಫೋಟೋ ಹಾಕಿ ಆನೆ ನಡೆದಿದ್ದೆ ದಾರಿ ಎನ್ನುವ ಡೈಲಾಗ್ ಗೆ ತಮ್ಮದೇ ಆದ ರೀತಿಯಲ್ಲಿ bfc ನಡೆದಿದ್ದೆ ದಾರಿ ಎನ್ನುವ ಕ್ಯಾಪ್ಶನ್ ಬಳಸಿ ಹಾಕಿದ್ದ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ನಮ್ಮ ಡಿ ಬಾಸ್ ಯಾವಾಗಲೂ ಆನೆಯ ತರಹ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಆದರೆ ಅಪ್ಪು ಅಭಿಮಾನಿಗಳು ನಮ್ಮ ಅಪ್ಪು ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಕೈ ಬಿಟ್ಟು ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ ಇವರ ತರಹ ಅಪ್ಪು ಇರಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವು ಜನರು ಈ ರೀತಿಯ ಪೋಸ್ಟ್ ನಿಂದ ಫ್ಯಾನ್ಸ್ ವಾರ್ ಶುರು ಆಗುವುದಲ್ಲದೆ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗುತ್ತದೆ ಮೊದಲು ಈ ಕ್ಯಾಪ್ಶನ್ ತೆಗೆದು ಹಾಕಿ ಎಂದು ವಾರ್ನ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಬದುಕಿಲ್ಲ ಎಂಬ ಕಾರಣಕ್ಕಾಗಿ ಅಪ್ಪು ಅವರನ್ನು ಕಡೆಗಣಿಸಿದ್ದಾರೆ, ದರ್ಶನ್ ಅವರನ್ನು ಮಾಧ್ಯಮದವರು ಬ್ಯಾನ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ದರ್ಶನ್ ಅವರನ್ನು ಕಡೆಗಣಿಸಿ.

ಸದ್ಯಕ್ಕೆ ಪ್ರಚಲಿತದಲ್ಲಿ ಇರುವಂತಹ ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ಮತ್ತು ಯಶ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನಟ ಬದುಕಿರಲಿ ಬಿಡಲಿ ಆತನಿಗೆ ಸಿಗಬೇಕಾದಂತಹ ಗೌರವವನ್ನು ಸಲ್ಲಿಸಬೇಕು. ಮಾಧ್ಯಮದಿಂದ ದರ್ಶನ ಅವರನ್ನು ಬ್ಯಾನ್ ಮಾಡಿರಬಹುದು ಆದರೆ ಸಾಮಾಜಿಕ ಜಾಲತಾಣದಲ್ಲಿ ಏನು ಬ್ಯಾನ್ ಮಾಡಿಲ್ಲ. ಎಲ್ಲಾ ನಟರನ್ನು ಒಂದೇ ರೀತಿಯಾಗಿ ಕಾಣುವುದು ನಮ್ಮ ಕರ್ತವ್ಯ ಆದರೆ ಈ ರೀತಿ ಈ ತಾರತಮ್ಯ ಮಾಡುತ್ತಿರುವುದು ಎಷ್ಟು ಸರಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಶಾಸ್ತ್ರಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ಗೊತ್ತಾ.? ಈ ವಿಡಿಯೋ ನೋಡಿ

ಮೊನ್ನೆಯಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಾವು ತಂದೆಯಾಗುತ್ತಿರುವಂತಹ ವಿಚಾರವನ್ನು ಫೋಟೋಶೂಟ್ ಮಾಡಿಸುವುದರ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕೂ ಮುಂಚೆ ತಮ್ಮ ಪತ್ನಿ ಪ್ರೇರಣಾ ಅವರು ಗರ್ಭಿಣಿ ಎಂಬ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ತಮ್ಮ ಹೆಂಡತಿ ತುಂಬು ಗರ್ಭಿಣಿಯಾದ ನಂತರವಷ್ಟೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ‌. ಈ ಸಂತಸದ ವಿಚಾರವನ್ನು ಇಷ್ಟು ದಿನ ಮುಚ್ಚು ಇಡುವುದಕ್ಕೆ ಮತ್ತೊಂದು ಕಾರಣವೂ ಕೂಡ ಇದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ಅವರಿಗೆ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅಂದರೆ ಬಹಳನೇ ಪ್ರೀತಿ ಎಲ್ಲಿಲ್ಲದ ಅಕ್ಕರೆ.

ಆದ ಕಾರಣ ಅಣ್ಣ ಇಲ್ಲದೆ ಇರುವಂತಹ ಅನುಪಾತ ಸ್ಥಿತಿಯಲ್ಲಿ ಈ ಸಂತಸದ ವಿಚಾರವನ್ನು ಹೇಗೆ ಹೇಳಿಕೊಳ್ಳುವುದು ಎಂಬ ಚಿಂತೆಯಲ್ಲಿಯೇ ಇಷ್ಟು ದಿನವಾದರೂ ಕೂಡ ಧ್ರುವ ಸರ್ಜಾ ಅವರು ತಾವು ತಂದೆ ಆಗುತ್ತಿರುವಂತಹ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಕಳೆದ ತಿಂಗಳಷ್ಟೇ ಧ್ರುವ ಸರ್ಜಾ ಅವರು ಬಹಳ ಪ್ರೀತಿಸುತ್ತಿದ್ದಂತಹ ಅವರ ಅಜ್ಜಿ ಲಕ್ಷ್ಮಮ್ಮ ಅವರು ಕೂಡ ವಿ.ಧಿ.ವ.ಶರಾಗಿದ್ದರು. ಸಾಲು ಸಾಲು ನೋವುಗಳಿಂದ ಬೇಸತ್ತಾ ಧ್ರುವ ಸರ್ಜಾ ಅವರು ಈ ವಿಚಾರವನ್ನು ಹೊರಗೆ ಹೇಳಲೇ ಇಲ್ಲ ಆದರೂ ಕೂಡ ಅನಿವಾರ್ಯದ ಪರಿಸ್ಥಿತಿಯಿಂದ ಈ ವಿಚಾರವನ್ನು ಹೆಚ್ಚು ಜನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತಂತಹ ಧ್ರುವ ಸರ್ಜಾ ಅವರು ಫೋಟೋಶೂಟ್ ಮಾಡಿಸುವುದರ ಮೂಲಕ ಪ್ರೇರಣಾ ತಾಯಿ ಆಗುತ್ತಿರುವಂತಹ ವಿಚಾರವನ್ನು ಹೊರ ಹೇಳಿದರು.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಸಂತಸವನ್ನು ವ್ಯಕ್ತಪಡಿಸಿದರೂ ಅಷ್ಟೇ ಅಲ್ಲದೆ ಇಬ್ಬರಿಗೂ ಕೂಡ ಅಭಿಮಾನಿಗಳು ಶುಭಾಶಯಗಳು ಕೋರಿದರು. ಇದೀಗ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅದ್ದೂರಿ ಸೀಮಂತ ಕಾರ್ಯಕ್ರಮವನ್ನು ಕೂಡ ಏರ್ಪಡಿಸಿದ್ದಾರೆ. ಹೌದು ಈ ಒಂದು ಸೀಮಂತ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ಅವರ ಕುಟುಂಬಸ್ಥರು ಪ್ರೇರಣಾಅವರ ಕುಟುಂಬಸ್ಥರು ಮೇಘನಾ ರಾಜ್ ಮತ್ತು ಸುಂದರ್ ರಾಜ್ ಕುಟುಂಬಸ್ಥರು ಅಷ್ಟೇ ಅಲ್ಲದೆ ತಮ್ಮ ಅಣ್ಣನ ಮಗು ಆದಂತಹ ಎಲ್ಲರೂ ಕೂಡ ಭಾಗವಹಿಸಿ ಪ್ರೇರಣಾ ಅವರಿಗೆ ಶಾಸ್ತ್ರ ಸಂಪ್ರದಾಯದಂತೆ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.

ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ಪ್ರೇರಣ ಹಾಗೂ ಮಗುವಿಗೆ ಒಳ್ಳೆಯದು ಆಗಲಿ ಯಾವುದೇ ರೀತಿಯಾದಂತಹ ಅಡೆತಡೆಗಳು ಇಲ್ಲದೆ ಮಗುವಿಗೆ ಜನ್ಮ ನೀಡಲಿ ಎಂದು ಶುಭಾಶಯ ಕೋರಿದ್ದಾರೆ‌‌. ಕಳೆದ ಎರಡು ವರ್ಷಗಳಲ್ಲಿ ಎರಡು ಮುತ್ತುಗಳನ್ನು ಕಳೆದುಕೊಂಡ ಸರ್ಜಾ ಕುಟುಂಬಕ್ಕೆ ರಾಯನ್ ಎಂಬ ಒಂದು ಮುತ್ತು ಸಿಕ್ಕಿದೆ. ಇದೀಗ ದ್ರುವ ಸರ್ಜಾ ಅವರ ಮಗುವಿನ ಜನನದಿಂದ ಮರಳಿ ಹೋದಂತಹ ಎರಡು ಜೀವಗಳು ಕೂಡ ಅದೇ ಮನೆ ಸೇರಲಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಕಳೆದು ಹೋದಂತಹ ಜೀವ ಮರಳಿ ಇವರ ಮನೆಗೆ ಬರುತ್ತಿರುವಂತಹ ಸಂತಸದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗಳು ಇದ್ದಾರೆ. ಧ್ರುವ ಸರ್ಜಾ ಅವರಿಗೆ ತಮ್ಮ ಅಣ್ಣನೆ ಮತ್ತೆ ಜನಿಸಿ ಬರಬೇಕು ಎಂಬ ಆಸೆ ಇದೆ ಹಾಗಾಗಿ ಧ್ರುವ ಸರ್ಜಾ ಅವರಿಗೆ ಯಾವ ಮಗು ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರ ಈ ಒಂದು ಸೀಮಂತ ಶಾಸ್ತ್ರದ ಫೋಟೋ ಇಷ್ಟ ಆದರೆ ತಪ್ಪದೇ ಲೈಕ್ ಕೊಟ್ಟು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

ಶಿವಣ್ಣನ ಜೊತೆ ಮೈ ಮರೆತು ಡ್ಯಾನ್ಸ್ ಮಾಡಿದ ಶ್ವೇತಾ ಚಂಗಪ್ಪ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಸೆಂಚುರಿ ಸ್ಟಾಲ್ ಶಿವರಾಜ್ ಕುಮಾರ್ ಅವರು ಇದೀಗ ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಹೌದು ಶಿವಣ್ಣ ಅವರು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರೆ ಇದಕ್ಕೂ ಮೊದಲು ಹಲವಾರು ಕಿರುತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಆದರೆ ಎಲ್ಲಿಯೂ ಕೂಡ ಜಡ್ಜ್ ಆಗಿರಲಿಲ್ಲ ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ವೇದಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದಾರೆ. ಈಗಾಗಲೇ ಈ ಒಂದು ಡಿ ಕೆ ಡಿ ವೇದಿಕೆ ಕೊನೆಯ ಹಂತಕ್ಕೆ ಬಂದು ತಲುಪಿದೆ ಹೌದು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯು ಇನ್ನೇನು ಮುಕ್ತಾಯಗೊಳ್ಳುತ್ತಿದೆ.

ಇದೇ ಕಾರಣಕ್ಕಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿರುವಂತಹ ಮತ್ತೊಂದು ರಿಯಾಲಿಟಿ ಶೋ ಆದಂತಹ ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಶಿವಣ್ಣ ಅವರು ಕಾಣಿಸಿಕೊಂಡಿದ್ದಾರೆ. ಪ್ರತಿವಾರವೂ ಕೂಡ ಡಾನ್ಸ್ ಕರ್ನಾಟಕ ಡಾನ್ಸ್ ಹಾಗೂ ಜೋಡಿ ನಂಬರ್ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಆದರೆ ಈ ಬಾರಿ ವಿಶೇಷವಾಗಿ ಈ ಒಂದು ಕಾರ್ಯಕ್ರಮವನ್ನು ಏರ್ಪಡಿಸಬೇಕು ಎಂಬ ಕಾರಣಕ್ಕಾಗಿ ಮಹಾಸಂಗಮವನ್ನು ಮಾಡಿದ್ದಾರೆ. ಆದಕಾರಣ ಜೋಡಿ ನಂಬರ್ ಒಂದು ಕಾರ್ಯಕ್ರಮದ ಜಡ್ಜ್ ಆದಂತಹ ನೆನಪಿರಲಿ ಪ್ರೇಮ್ ಮಾಳವಿಕಾ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಜಡ್ಜ್ ಆಗಿರುವಂತಹ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ, ಚಿನ್ನಿ ಪ್ರಕಾಶ್ ಡಾ. ಶಿವರಾಜಕುಮಾರ್ ಎಲ್ಲರೂ ಕೂಡ ಒಂದೇ ವೇದಿಕೆಯಲ್ಲಿ ನೆರದಿದ್ದಾರೆ.

ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಅವರು ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಅದೇ ರೀತಿ ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮವನ್ನು ನಿರೂಪಕಿ ಶ್ವೇತ ಚಂಗಪ್ಪ ಅವರ ನಡೆಸಿಕೊಂಡು ಹೋಗುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಶ್ವೇತ ಚಂಗಪ್ಪ ಅವರು ಕಿರುತೆರೆಯಲ್ಲಿ ಹಲವಾರು ಧಾರವಾಹಿಯಲ್ಲಿ ನಟನೆ ಮಾಡಿದ್ದಾರೆ ಬೆಳ್ಳಿತೆರೆಯಲ್ಲೂ ಕೂಡ ಹಲವು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇದನ್ನು ಹೊರತು ಪಡಿಸಿದರೆ ಬಿಗ್ ಬಾಸ್ ನಾಲ್ಕರಲ್ಲೂ ಕೂಡ ಸ್ಪರ್ಧಿಯಾಗಿದ್ದರು.

ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ರಾಣಿ ಎಂಬ ಹೆಸರಿನ ಪಾತ್ರಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಈ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಿಂದಲೇ ಶ್ವೇತ ಚಂಗಪ್ಪ ಅವರಿಗೆ ಹೆಚ್ಚಿನ ಹೆಸರು ಮತ್ತು ಖ್ಯಾತಿ ಪಡೆದರು ಮಜಾ ಟಾಕೀಸ್ ನಿಂದ ಹೊರಬಂದ ನಂತರ ಯಾವುದೇ ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಸಮಯದಲ್ಲಿ ಡಾಕ್ಟರ್ ಶಿವರಾಜಕುಮಾರ್ ಅವರ ಜೊತೆಗೆ ಹಾಡುಂದಕ್ಕೆ ಹೆಜ್ಜೆ ಹಾಕಿದ್ದಾರೆ ಶ್ವೇತ ಚೆಂಗಪ್ಪ ಅವರು ಶಿವಣ್ಣ ಅವರ ಜೊತೆ ಮಾಡಿರುವಂತಹ ಡಾನ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಅಷ್ಟೇ ಅಲ್ಲದೆ ಶಿವಣ್ಣನ ಅಭಿಮಾನಿಗಳು ಈ ಡಾನ್ಸ್ ನೋಡಿ ಫಿದಾ ಆಗಿದ್ದಾರೆ 60 ವಯಸ್ಸು ಆದರೂ ಕೂಡ ಇಷ್ಟು ಯಂಗ್ ಮತ್ತು ಎನರ್ಜಿಟಿಕ್ ಆಗಿ ಡಾನ್ಸ್ ಮಾಡುವ ಕಲೆ ಶಿವಣ್ಣನಿಗೆ ಬಿಟ್ಟರೆ ಬೇರೆ ಇನ್ಯಾರಿಗೂ ಕೂಡ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ಭೇಟಿ ಮಾಡಿ ಬಂದಾಗಿನಿಂದ ಹೆಂಗೆಗೋ ಆಡ್ತಿರೋ ನಿರೂಪಕಿ ಹೇಮಲತಾ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸಿನಿಮಾರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಇರುವಂತಹ ಸಾಕಷ್ಟು ಕಲಾವಿದರಿಗೆ ಕ್ರೇಜ್. ಹೌದು ಈ ಅಭಿಮಾನಿಗಳ ಪೈಕಿ ನಿರೂಪಕಿ ಹೇಮಲತಾ ಅವರು ಕೂಡ ಒಬ್ಬರು ಹೇಮಲತಾ ಅವರಿಗೆ ದರ್ಶನ್ ಅವರು ಅಂದರೆ ಬಹಳ ಪ್ರೀತಿ ಹಾಗೂ ಎಲ್ಲದ ಗೌರವ ಈ ದಿನ ದರ್ಶನ್ ಅವರ ಮನೆಗೆ ಕೆಲ ಕಾಲ ಕಳೆದಿದ್ದಾರೆ. ಸಿನಿಮಾಗೆ ಸಂಬಂಧಪಟ್ಟಂತಹ ಕೆಲವು ವಿಚಾರಗಳನ್ನು ಮಾತನಾಡಿದ್ದಾರೆ ಇದರ ಜೊತೆಗೆ ದರ್ಶನ್ ಅವರ ಒಟ್ಟಿಗೆ ಒಂದು ಫೋಟೋವನ್ನು ಕೂಡ ತೆಗೆಸಿಕೊಂಡು ಆ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಡಾರ್ಲಿಂಗ್ ದರ್ಶನ್ ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಅವರ ಜೊತೆ ಕೆಲಕಾಲ ಮಾತನಾಡಿದ ನಂತರ ಮನೆಗೆ ಆಗಮಿಸುವಂತಹ ಸಂದರ್ಭದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದಂತಹ ಸಂತಸದಲ್ಲಿ ಇದೀಗ ಹೇಮಲತಾ ಅವರು ಹೇಗೆಗೋ ಆಡುತ್ತಿದ್ದಾರೆ. ಇದಕ್ಕೆ ಪೂರಕವಾದಂತಹ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾದರೆ ಮನಸ್ಸಿಗೆ ಎಷ್ಟು ಸಂತೋಷವಾಗುತ್ತದೆ ಎಂಬುದನ್ನು ವ್ಯಕ್ತಪಡಿಸುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಹೇಮಲತಾ ಅವರು ಕೂಡ ತಮ್ಮ ಸಂತೋಷವನ್ನು ಈ ಪೈಕಿ ವ್ಯಕ್ತಪಡಿಸುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ ಥ್ರಿಲ್ಲಾಗಿದ್ದಾರೆ ದರ್ಶನ್ ನಟನೆಯ ಸಿನಿಮಾ ಸಾಂಗ್ಸ್‌ ನಾ ಎಂಜಾಯ್‌ ಮಾಡುತ್ತಾ ಹಾಡಿ ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ.

ಹೇಮಲತಾ ನೆಚ್ಚಿನ ನಟ ದರ್ಶನ್ ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿದ್ದಾರೆ “ಡಾರ್ಲಿಂಗ್‌ ದರ್ಶನ್” ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಹಾಡುತ್ತಿದ್ದಾರೆ ಆ ಫೋಟೊವನ್ನು ನೋಡುತ್ತಾ ದರ್ಶನ್ ಸೂಪರ್ ಹಿಟ್‌ ಸಾಂಗ್ ಕೇಳ್ತಾ ಕುಣಿದಾಡುತ್ತಿದ್ದಾರೆ. ದರ್ಶನ್‌ ಭೇಟಿ ಮಾಡಿ ಬಂದ ಮೇಲೆ ಹುಚ್ಚು ಹಿಡಿದು ಬಿಟ್ಟಿದೆ ಎಂದು ಬರೆದು ಕೊಂಡಿದ್ದಾರೆ ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಕಾರಿನಲ್ಲಿ ಮನೆ ಹೊರಟ ಹೇಮಲತಾ ‘ಮಿಸ್ಟರ್ ಐರಾವತ’ ಚಿತ್ರದ ಹಾಡುಗಳನ್ನು ಕೇಳುತ್ತಾ, ಕುಣಿಯುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

ಅದರಲ್ಲೂ ಟೈಟಲ್‌ ಸಾಂಗ್‌ನಲ್ಲಿರೋ ‘ಹೆಣ್ಣುಮಕ್ಕಳಿಗೆ ಅಣ್ಣಾ ಸಾರ್’ ಅನ್ನುವ ಸಾಲನ್ನು ಹಾಡೋದಕ್ಕೂ ಹೇಮಲತಾ ಸಿದ್ಧರಿಲ್ಲ. ಅದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಹೇಮಲತಾ ದರ್ಶನ್ ನೋಡಿದ ಮೇಲೆ ಹೇಗೆಗೋ ಆಡುತ್ತಿದ್ದಾರೆ. ಆದರೆ ಇವೆಲ್ಲವೂ ಕೂಡ ದರ್ಶನ್ ಮೇಲೆ ಇಟ್ಟಿರುವಂತಹ ಪ್ರೀತಿ ಮತ್ತು ಅಭಿಮಾನಕ್ಕಾಗಿ ಈಗಾಗಲೇ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದ್ದು ಅಭಿಮಾನಿಗಳೇ ಕರ್ನಾಟಕದಾದ್ಯಂತ ಎಲ್ಲಾ ಕಡೆ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ದರ್ಶನ ಅವರ 56ನೇ ಸಿನಿಮಾ ಕೂಡ ಸೆಟ್ಟೇರುತ್ತಿದೆ.

ಒಂದರ ಹಿಂದೆ ಒಂದರಂತೆ ಶುಭ ಸುದ್ದಿಯನ್ನು ನೀಡುತ್ತಿರುವಂತಹ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಬೆಳ್ಳಿತೆರೆಯ ಮೇಲೆ ರಸದೂತನ ನೀಡುವುದಕ್ಕೆ ಸಜ್ಜಗಿದ್ದಾರೆ. ಸದ್ಯಕ್ಕೆ ಎಲ್ಲೇ ನೋಡಿದರೂ ಕೂಡ ಕ್ರಾಂತಿ ಸಿನಿಮಾದ ಪೋಸ್ಟರ್ ಗಳು ಹರಿದಾಡುತ್ತಿದೆ ಈ ಸಿನಿಮಾದಲ್ಲಿ ದರ್ಶನ್ ಅವರು ಯಾವ ರೀತಿ ನಟನೆ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ. ಮಾಧ್ಯಮಗಳ ಯಾವುದೇ ಸಹಾಯವಿಲ್ಲದೆ ಇದ್ದರೂ ಪ್ರಚಾರವಿಲ್ಲದೆ ಇದ್ದರೂ ಕೂಡ ಕ್ರಾಂತಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂಬುದು ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ‌‌. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ

ಬುದ್ಧಿಮಾಂಧ್ಯ ಮಗನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಳವಿಕಾ ಅವಿನಾಶ್ ಈ ಕರುಣಾಜನಕ ವಿಡಿಯೋ ನೋಡಿದ್ರೆ ಎಂಥವರಾದರೂ ಕಣ್ಣೀರು ಹಾಕ್ತಾರೆ.

ನಟಿ ಮಾಳವಿಕಾ ಅವಿನಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ವಿಭಿನ್ನವಾದ ಪಾತ್ರದಲ್ಲಿ ಅಭಿನಯ ಮಾಡುವುದರ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಬದುಕು ಜಟಕಾ ಬಂಡಿ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೋಡಿ ನಂಬರ್ ಒಂದು ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ‌. ಕಳೆದ ವಾರದ ಎಪಿಸೋಡ್ ನಲ್ಲಿ ಜೋಡಿ ನಂಬರ್ ಒಂದು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎರಡು ವೇದಿಕೆಯನ್ನು ಮಹಾಸಂಗಮ ಮಾಡಿ ಇಬ್ಬರು ಕಂಟೆಸ್ಟೆಂಟ್ಗಳನ್ನು ಒಂದೇ ವೇದಿಕೆಯ ಮೇಲೆ ತಂದು ಇಡುವಂತಹ ಪ್ರಯತ್ನವನ್ನು ಅನುಶ್ರೀ ಅವರು ಮಾಡಿದ್ದರು.

ಈ ಕಾರಣಕ್ಕಾಗಿ ಜೋಡಿ ನಂಬರ್ ಒಂದು ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯ ಸ್ಪರ್ಧಿಗಳು ಇಬ್ಬರೂ ಕೂಡ ಒಂದೇ ವೇದಿಕೆಯಲ್ಲಿ ಅಭಿನಯಿಸಿದ್ದರು. ಈ ಸಮಯದಲ್ಲಿ ಡಿಕೆಡಿ ವೇದಿಯಲ್ಲಿ ಸಹಾನ ಬೆಟ್ಟದ ಅಂಚಿಂದ ಅನ್ನೋ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ ಸಹನಾಗೆ ಕಿವಿ ಕೇಳಿಸಲ್ಲ ವಿಶೇಷ ಚೇತನಳಾಗಿದ್ರೂ ತನ್ನ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆಲ್ಲುತ್ತಾಳೆ. ಸಹನಾ ನೋಡಿ, ತನ್ನ ಮಗನನ್ನು ನೆನೆದ ಮಾಳವಿಕಾ ಅವಿನಾಶ್ ಭಾವುಕರಾಗಿದ್ದಾರೆ. ಎಲ್ಲ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ ಇಂತದ್ದೇ ಮನೆಯಲ್ಲಿ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ ದೇವರ ಪ್ರಸಾದ ಎಂದು ಸ್ವೀಕಾರ ಮಾಡ್ತೀವಿ.

ಭಗವಂತ ಯಾವುದನ್ನೋ ಕಿತ್ತುಕೊಂಡ್ರು ಇನ್ನೇನೋ ಕೊಡುತ್ತಾನೆ. ಅಪ್ಪ-ಅಮ್ಮನಿಗೆ ಅದೇ ಸಮಾಧಾನ ಎಂದು ಕಾರ್ಯಕ್ರಮದಲ್ಲಿ ಮಾಳವಿಕಾ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಮಾಡಬೇಕಾಗಿ ಹುಡುಗಿಯನ್ನು ನೆನೆಸಿಕೊಂಡು ಯಾಕೆ ಕಣ್ಣೀರು ಹಾಕಿದ್ದಾರೆ ಅಂದರೆ ಮಾಳವಿಕಾ ಅವಿನಾಶ್ ದಂಪತಿಗೆ ಜನಿಸಿರುವಂತಹ ಮಗುವು ಕೂಡ ವಿಶೇಷ ಚೇತನ ಮಗುವಾಗಿದೆ. ಮಾಳವಿಕಾ ಅವರ ಮಗನು ಬುದ್ಧಿಮಾಂದ್ಯ ಆತನಿಗೆ ಮಾತನಾಡುವುದಕ್ಕೆ ಬರುವುದಿಲ್ಲ ಅಷ್ಟೇ ಅಲ್ಲದೆ ನಡೆಯುವುದಕ್ಕೂ ಬರುವುದಿಲ್ಲ ಪ್ರತಿಯೊಂದ ಕೆಲಸವನ್ನು ಕೂಡ ತಂದೆ ಅಥವಾ ತಾಯಿಯೇ ನಡೆಸಬೇಕಾಗುತ್ತದೆ ತಮ್ಮ ಮಗನ ಪರಿಸ್ಥಿತಿಯನ್ನು ನೆನಪಿಸಿಕೊಂಡು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.

ಇದರ ಜೊತೆಗೆ ತಮ್ಮ ಮಗನ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರವನ್ನು ಹೇಳಿಕೊಂಡಿದ್ದಾರೆ ಹೌದು ನಟಿ ಮಾಳವಿಕಾ ಅವಿನಾಶ್ ದಂಪತಿಗಳ ಮಗನಿಗೆ ಸಂಗೀತವೆಂದರೆ ಬಲು ಇಷ್ಟ ಹಾಗಾಗಿ ಊಟ ಮಾಡಬೇಕಾದರೆ ಅಥವಾ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಹಾಡನ್ನು ಹಾಕಿದರೆ ಮಾತ್ರ ಮಾಡುವುದಂತೆ ಈ ಕಾರಣಕ್ಕಾಗಿಯೇ. ಡಾ. ರಾಜ್‍ಕುಮಾರ್, ಅರ್ಜುನ್ ಜನ್ಯ, ಶಿವಣ್ಣನ ಹಾಡುಗಳನ್ನು ಹಾಕುವುದರ ಮೂಲಕ ತಮ್ಮ ಮಗನಿಗೆ ಊಟ ತಿಂಡಿ ಮಾಡಿಸುತ್ತಾರಂತೆ. ಇನ್ನು ಅವಿನಾಶ್ ಅವರ ಮಗನಿಗೆ ಈ ಮೇಲಿನ ನಾಲ್ಕು ಜನರ ಹಾಡುಗಳೆಂದರೆ ಬಹಳ ಇಷ್ಟ ಅಂತೆ. 6-8ನೇ ತಿಂಗಳಿನಿಂದಲೇ ನನ್ನ ಮಗನಿಗೆ ಸಂಗೀತದ ಬಗ್ಗೆ ಅಭಿರುಚಿ ಇದೆ ಎಂದು ಮಾಳವಿಕಾ ಅವರು ಹೇಳಿದ್ದಾರೆ.

ಮಾಳವಿಕಾ ಅವಿನಾಶ್ ತಮ್ಮ ಪುತ್ರನಿಗೆ ಡಾ.ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅವರ ಹಾಡನ್ನು ತೋರಿಸಿ ಊಟ ಮಾಡಿಸುತ್ತಿರುವ ವಿಡಿಯೋವನ್ನು ವೇದಿಕೆ ಮೇಲೆ ಪ್ರಸಾರ ಮಾಡಲಾಗಿತ್ತು. ಇದನ್ನು ನೋಡಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭಾವುಕರಾಗುತ್ತಾರೆ ನಾವೆಲ್ಲರೂ ಅಂದುಕೊಳ್ಳುತ್ತೇವೆ, ಸೆಲಬ್ರೆಟಿಗಳಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಸುಖಕರವಾದ ಜೀವನ ಮಾಡುತ್ತಾರೆ ಅಂತ ಆದರೆ ಕಷ್ಟ ಸುಖ ಎಂಬುದನ್ನು ಭಗವಂತ ಸಮಪಾಲಾಗಿ ಹಂಚಿರುತ್ತಾನೆ. ಅದು ಸಾಮಾನ್ಯ ಜನರಿಗೂ ಕೂಡ ಹೌದು ಸೆಲೆಬ್ರೆಟಿಗಳಿಗೂ ಕೂಡ ಹೌದು ಎಂಬುವುದು ಇದೀಗ ಮಾಳವಿಕ ಅವರ ಬದುಕನ್ನು ನೋಡಿದ ಮೇಲೆಯೇ ತಿಳಿದಿದೆ. ಈ ವಿಡಿಯೋ ನೋಡಿ ನಿಜಕ್ಕೂ ಕೂಡ ಒಂದು ಕ್ಷಣ ನಿಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರಾಕೇಶ್ ಜಯಶ್ರೀಗೆ ಕಿಸ್ ಕೊಟ್ಟಿದ್ದನ್ನು ನೋಡಿದ ಸೋನು ಗೌಡ ನನಗೂ ಕೊಡು ಅಂತ ಹಿಂದೆ ಬಿದ್ದಿದ್ದಾಳೆ, ಬಿಗ್ ಬಾಸ್ ಮನೆಯಲ್ಲಿ ನೆಡೆಯುತ್ತಿದೆ ಕಿಸ್ಸಿನ ಸುರಿಮಳೆ

ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರತಿನಿತ್ಯವೂ ಕೂಡ ದಿನಕ್ಕೊಂದು ವಿಚಾರಕ್ಕೆ ಸುದಿಯಾಗುತ್ತಿರುವುದು ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಸೋನು ಗೌಡ ಅವರ ಹುಚ್ಚಾಟಕ್ಕೆ ಮಿತಿಯೇ ಇಲ್ಲ ಎಂದು ಬಿಗ್ ಬಾಸ್ ಮನೆಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು ಇಲಿಯವರೆಗೂ ಕೂಡ ಸೋನು ಗೌಡ ಅವರು ರಾಕೇಶ್ ಮೇಲೆ ವಿಶೇಷವಾದ ಆಕರ್ಷಣೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ರಾಕೇಶ್ ಎಲ್ಲೇ ಹೋದರು ಬಂದರೂ ಆತನ ಹಿಂದೆ ಸೋನು ಗೌಡ ಅವರ ಸುತ್ತಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗುವಂತೆ ರಾಕೇಶ್ ಕೂಡ ಸ್ಪಂದಿಸುತ್ತಿದ್ದಾರೆ ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಮತ್ತು ಪ್ರೇಕ್ಷಕರು ಹಾಗೂ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ಇವರಿಬ್ಬರೂ ನಡುವೆ ಲವ್ವಿ ಡವ್ವಿ ಪ್ರಾರಂಭ ಆಗಿರಬಹುದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ನೆನ್ನೆ ಎಪಿಸೋಡ್ ನಲ್ಲಿ ಬೆಡ್ ರೂಮ್ ಏರಿಯಾದಲ್ಲಿ ರಾಕೇಶ್ ಮತ್ತು ಜಯಶ್ರೀ ಹಾಗೂ ಸೋನು ಗೌಡ ಅವರು ಕುಳಿತುಕೊಂಡಿರುತ್ತಾರೆ. ಇದೆ ವೇಳೆಯಲ್ಲಿ ರಾಕೇಶ್ ಗೌಡ ಸೋನು ಗೌಡಗೆ ಬೇಸರವಾಗಬೇಕು ಆಕೆಗೆ ಕೋಪ ಬರಬೇಕು ಹಾಗೂ ತನ್ನ ಮೇಲೆ ಪೋಸೆಸಿವ್ ಇದಿಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಜಯಶ್ರೀ ಕೆನ್ನೆಗೆ ಮುತ್ತು ನೀಡುತ್ತಾನೆ.

ಇದನ್ನು ನೋಡಿದಂತಹ ಸೋನು ಗೌಡ ಬೇಸರ ವ್ಯಕ್ತಪಡಿಸಿ ಕೋಪ ಮಾಡಿಕೊಂಡು ಅಲ್ಲಿಂದ ಎದ್ದು ಹೋಗುತ್ತಾಳೆ ಅಷ್ಟೇ ಅಲ್ಲದೆ ಜಯಶ್ರೀ ನೀನು ನನಗೆ ಕಿಸ್ ಕೊಟ್ಟಿದ್ದಕ್ಕೆ ಸೋನು ಮುಖ ನೋಡು ಹೇಗಾಗಿದೆ ಎಂದು ಕಾಲೆಳೆಯುತ್ತಾಳೆ. ಆದರೆ ಸೋನು ಗೌಡ ನನಗೆ ಏನು ಆಗೇ ಇಲ್ಲ ಎಂಬ ಮಾದರಿಯಲ್ಲೇ ನಟಿಸಲು ಪ್ರಾರಂಭಿಸುತ್ತಾಳೆ ಆದರೆ ಆಕೆಯ ಮುಖದಲ್ಲಿ ಇದ್ದಂತಹ ಭಾವನೆ ಎದ್ದು ಕಾಣುತ್ತದೆ. ಇದರಿಂದಲೇ ತಿಳಿಯುತ್ತದೆ ರಾಕೇಶ್ ಅವರನ್ನು ಸೋಲು ಇಷ್ಟಪಡುತ್ತಿದ್ದಾರೆ ಅಂತ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್ ಬಳಿ ಬಂದಂತಹ ಸೋನು ಗೌಡ ನನಗೂ ಕೂಡ ಒಂದು ಕಿಸ್ ಕೊಡು ಅಂತ ಬಹಿರಂಗವಾಗಿ ಬಿಗ್ ಬಾಸ್ ಮನೆಯಲ್ಲಿ ಕೇಳುತ್ತಾಳೆ.

ಇದನ್ನು ಕೇಳಿದಂತಹ ರಾಕೇಶ್ ಗೆ ಒಂದು ಕ್ಷಣ ಆಶ್ಚರ್ಯ ಆಗುತ್ತದೆ ಆದರೂ ಹುಡುಗಿ ಕೇಳಿದ್ದಾಳಲ್ಲ ಅಂತ ಹೇಳಿ ಮರು ಯೋಚನೆ ಮಾಡದೆ ಸ್ವಲ್ಪವೂ ಕೂಡ ಹೆದರಿಕೆಯಿಲ್ಲದೆ ಸೋನು ಕೆನ್ನೆಗೆ ಮುತ್ತು ಕೊಟ್ಟೇ ಬಿಡುತ್ತಾನೆ. ಇದನ್ನು ನೋಡಿದಂತಹ ಬಿಗ್ ಬಾಸ್ ಸ್ಪರ್ಧೆಗಳೆಲ್ಲೆರೂ ಕೂಡ ಔಹಾರುತ್ತಾರೆ ಸದ್ಯಕ್ಕೆ ಈ ಎಪಿಸೋಡ್ ಓಟಿಟಿಯಲ್ಲಿ ಪ್ರಾರಂಭವಾಗಿದ್ದು ಈ ಎಪಿಸೋಡ್ ನೋಡಿದಂತಹ ನೆಟ್ಟಿಗರು ಸೋನು ಗೌಡ ಅವರಿಗೆ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ‌. ಅಷ್ಟೇ ಅಲ್ಲದೆ ಸಾಕಷ್ಟು ಟ್ರೋಲ್ ಕೂಡ ಮಾಡುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಮನೋಭಾವನೆ ಹೊಂದಿರುವ ಏಕೈಕ ವ್ಯಕ್ತಿ ಅಂದರೆ ಸೋನು ಗೌಡ ಅಂತಾನೆ ಹೇಳಬಹುದು.

ಆಕೆಯ ಮಾತಿಗೆ ಹಿತಿಮಿತಿಯೇ ಇರುವುದಿಲ್ಲ ಈ ಕಾರಣಕ್ಕಾಗಿಯೇ ಕಳೆದ ವಾರ ಪಂಚಾಯಿತಿ ಕಟ್ಟೆಯಲ್ಲಿ ಕಿಚ್ಚ ಸುದೀಪ್ ಅವರು ಸೋನು ಗೌಡ ಅವರಿಗೆ ಎಚ್ಚರಿಕೆ ನೀಡಿದ್ದರು‌. ಅಷ್ಟೇ ಅಲ್ಲದೆ ನೆನ್ನೆ ಎಪಿಸೋಡ್ ನಲ್ಲಿ ಆರ್ಯವರ್ಧನ್ ಗುರೂಜಿ ಕೂಡ ನಿನ್ನ ಬಾಯಿಗೆ ಕಸಬರಿಗೆ ಹಾಕಬೇಕಾಗುತ್ತದೆ ಸ್ವಲ್ಪ ಸುಮ್ಮನಿರು ಎಂದು ಗದರಿದ್ದರು. ಆದರೂ ಕೂಡ ಸೋನು ಗೌಡ ಅವರ ಹುಚ್ಚಾಟಕ್ಕೆ ಮಾತ್ರ ಕೊನೆ ಎಂಬುದೇ ಇಲ್ಲ ಸದ್ಯಕ್ಕೆ ರಾಕೇಶ್ ನಿಂದ ಕಿಸ್ ಪಡೆದುಕೊಂಡಂತಹ ಸೋನು ಅದೇ ಮೂಡ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.