Home Entertainment ಬುದ್ಧಿಮಾಂಧ್ಯ ಮಗನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಳವಿಕಾ ಅವಿನಾಶ್ ಈ ಕರುಣಾಜನಕ ವಿಡಿಯೋ ನೋಡಿದ್ರೆ ಎಂಥವರಾದರೂ ಕಣ್ಣೀರು ಹಾಕ್ತಾರೆ.

ಬುದ್ಧಿಮಾಂಧ್ಯ ಮಗನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಳವಿಕಾ ಅವಿನಾಶ್ ಈ ಕರುಣಾಜನಕ ವಿಡಿಯೋ ನೋಡಿದ್ರೆ ಎಂಥವರಾದರೂ ಕಣ್ಣೀರು ಹಾಕ್ತಾರೆ.

0
ಬುದ್ಧಿಮಾಂಧ್ಯ ಮಗನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಮಾಳವಿಕಾ ಅವಿನಾಶ್ ಈ ಕರುಣಾಜನಕ ವಿಡಿಯೋ ನೋಡಿದ್ರೆ ಎಂಥವರಾದರೂ ಕಣ್ಣೀರು ಹಾಕ್ತಾರೆ.

ನಟಿ ಮಾಳವಿಕಾ ಅವಿನಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ವಿಭಿನ್ನವಾದ ಪಾತ್ರದಲ್ಲಿ ಅಭಿನಯ ಮಾಡುವುದರ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲದೆ ಬದುಕು ಜಟಕಾ ಬಂಡಿ ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುವುದರ ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೋಡಿ ನಂಬರ್ ಒಂದು ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ‌. ಕಳೆದ ವಾರದ ಎಪಿಸೋಡ್ ನಲ್ಲಿ ಜೋಡಿ ನಂಬರ್ ಒಂದು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎರಡು ವೇದಿಕೆಯನ್ನು ಮಹಾಸಂಗಮ ಮಾಡಿ ಇಬ್ಬರು ಕಂಟೆಸ್ಟೆಂಟ್ಗಳನ್ನು ಒಂದೇ ವೇದಿಕೆಯ ಮೇಲೆ ತಂದು ಇಡುವಂತಹ ಪ್ರಯತ್ನವನ್ನು ಅನುಶ್ರೀ ಅವರು ಮಾಡಿದ್ದರು.

ಈ ಕಾರಣಕ್ಕಾಗಿ ಜೋಡಿ ನಂಬರ್ ಒಂದು ಕಾರ್ಯಕ್ರಮದ ಸ್ಪರ್ಧಿಗಳು ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯ ಸ್ಪರ್ಧಿಗಳು ಇಬ್ಬರೂ ಕೂಡ ಒಂದೇ ವೇದಿಕೆಯಲ್ಲಿ ಅಭಿನಯಿಸಿದ್ದರು. ಈ ಸಮಯದಲ್ಲಿ ಡಿಕೆಡಿ ವೇದಿಯಲ್ಲಿ ಸಹಾನ ಬೆಟ್ಟದ ಅಂಚಿಂದ ಅನ್ನೋ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ ಸಹನಾಗೆ ಕಿವಿ ಕೇಳಿಸಲ್ಲ ವಿಶೇಷ ಚೇತನಳಾಗಿದ್ರೂ ತನ್ನ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆಲ್ಲುತ್ತಾಳೆ. ಸಹನಾ ನೋಡಿ, ತನ್ನ ಮಗನನ್ನು ನೆನೆದ ಮಾಳವಿಕಾ ಅವಿನಾಶ್ ಭಾವುಕರಾಗಿದ್ದಾರೆ. ಎಲ್ಲ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ ಇಂತದ್ದೇ ಮನೆಯಲ್ಲಿ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ ದೇವರ ಪ್ರಸಾದ ಎಂದು ಸ್ವೀಕಾರ ಮಾಡ್ತೀವಿ.

ಭಗವಂತ ಯಾವುದನ್ನೋ ಕಿತ್ತುಕೊಂಡ್ರು ಇನ್ನೇನೋ ಕೊಡುತ್ತಾನೆ. ಅಪ್ಪ-ಅಮ್ಮನಿಗೆ ಅದೇ ಸಮಾಧಾನ ಎಂದು ಕಾರ್ಯಕ್ರಮದಲ್ಲಿ ಮಾಳವಿಕಾ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಮಾಡಬೇಕಾಗಿ ಹುಡುಗಿಯನ್ನು ನೆನೆಸಿಕೊಂಡು ಯಾಕೆ ಕಣ್ಣೀರು ಹಾಕಿದ್ದಾರೆ ಅಂದರೆ ಮಾಳವಿಕಾ ಅವಿನಾಶ್ ದಂಪತಿಗೆ ಜನಿಸಿರುವಂತಹ ಮಗುವು ಕೂಡ ವಿಶೇಷ ಚೇತನ ಮಗುವಾಗಿದೆ. ಮಾಳವಿಕಾ ಅವರ ಮಗನು ಬುದ್ಧಿಮಾಂದ್ಯ ಆತನಿಗೆ ಮಾತನಾಡುವುದಕ್ಕೆ ಬರುವುದಿಲ್ಲ ಅಷ್ಟೇ ಅಲ್ಲದೆ ನಡೆಯುವುದಕ್ಕೂ ಬರುವುದಿಲ್ಲ ಪ್ರತಿಯೊಂದ ಕೆಲಸವನ್ನು ಕೂಡ ತಂದೆ ಅಥವಾ ತಾಯಿಯೇ ನಡೆಸಬೇಕಾಗುತ್ತದೆ ತಮ್ಮ ಮಗನ ಪರಿಸ್ಥಿತಿಯನ್ನು ನೆನಪಿಸಿಕೊಂಡು ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ.

ಇದರ ಜೊತೆಗೆ ತಮ್ಮ ಮಗನ ಬಗ್ಗೆ ಕೆಲವು ಆಸಕ್ತಿದಾಯಕ ವಿಚಾರವನ್ನು ಹೇಳಿಕೊಂಡಿದ್ದಾರೆ ಹೌದು ನಟಿ ಮಾಳವಿಕಾ ಅವಿನಾಶ್ ದಂಪತಿಗಳ ಮಗನಿಗೆ ಸಂಗೀತವೆಂದರೆ ಬಲು ಇಷ್ಟ ಹಾಗಾಗಿ ಊಟ ಮಾಡಬೇಕಾದರೆ ಅಥವಾ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಹಾಡನ್ನು ಹಾಕಿದರೆ ಮಾತ್ರ ಮಾಡುವುದಂತೆ ಈ ಕಾರಣಕ್ಕಾಗಿಯೇ. ಡಾ. ರಾಜ್‍ಕುಮಾರ್, ಅರ್ಜುನ್ ಜನ್ಯ, ಶಿವಣ್ಣನ ಹಾಡುಗಳನ್ನು ಹಾಕುವುದರ ಮೂಲಕ ತಮ್ಮ ಮಗನಿಗೆ ಊಟ ತಿಂಡಿ ಮಾಡಿಸುತ್ತಾರಂತೆ. ಇನ್ನು ಅವಿನಾಶ್ ಅವರ ಮಗನಿಗೆ ಈ ಮೇಲಿನ ನಾಲ್ಕು ಜನರ ಹಾಡುಗಳೆಂದರೆ ಬಹಳ ಇಷ್ಟ ಅಂತೆ. 6-8ನೇ ತಿಂಗಳಿನಿಂದಲೇ ನನ್ನ ಮಗನಿಗೆ ಸಂಗೀತದ ಬಗ್ಗೆ ಅಭಿರುಚಿ ಇದೆ ಎಂದು ಮಾಳವಿಕಾ ಅವರು ಹೇಳಿದ್ದಾರೆ.

ಮಾಳವಿಕಾ ಅವಿನಾಶ್ ತಮ್ಮ ಪುತ್ರನಿಗೆ ಡಾ.ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅವರ ಹಾಡನ್ನು ತೋರಿಸಿ ಊಟ ಮಾಡಿಸುತ್ತಿರುವ ವಿಡಿಯೋವನ್ನು ವೇದಿಕೆ ಮೇಲೆ ಪ್ರಸಾರ ಮಾಡಲಾಗಿತ್ತು. ಇದನ್ನು ನೋಡಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಭಾವುಕರಾಗುತ್ತಾರೆ ನಾವೆಲ್ಲರೂ ಅಂದುಕೊಳ್ಳುತ್ತೇವೆ, ಸೆಲಬ್ರೆಟಿಗಳಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಸುಖಕರವಾದ ಜೀವನ ಮಾಡುತ್ತಾರೆ ಅಂತ ಆದರೆ ಕಷ್ಟ ಸುಖ ಎಂಬುದನ್ನು ಭಗವಂತ ಸಮಪಾಲಾಗಿ ಹಂಚಿರುತ್ತಾನೆ. ಅದು ಸಾಮಾನ್ಯ ಜನರಿಗೂ ಕೂಡ ಹೌದು ಸೆಲೆಬ್ರೆಟಿಗಳಿಗೂ ಕೂಡ ಹೌದು ಎಂಬುವುದು ಇದೀಗ ಮಾಳವಿಕ ಅವರ ಬದುಕನ್ನು ನೋಡಿದ ಮೇಲೆಯೇ ತಿಳಿದಿದೆ. ಈ ವಿಡಿಯೋ ನೋಡಿ ನಿಜಕ್ಕೂ ಕೂಡ ಒಂದು ಕ್ಷಣ ನಿಮ್ಮ ಕಣ್ಣಂಚಲ್ಲಿ ನೀರು ಬರುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here