Home Blog Page 316

ಅಪ್ಪು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ ನೋಡಿ.

ಅಪ್ಪು ಅವರು ಕರ್ನಾಟಕ ಕಂಡ ಅದ್ಭುತ ವ್ಯಕ್ತಿ ಅವರು ಮಾತ್ರವಲ್ಲದೆ ರಾಜ್ ಕುಟುಂಬ ಇಡೀ ಕರ್ನಾಟಕಕ್ಕೆ ಹಿರಿ ಮನೆ ಎನ್ನಬಹುದು. ಯಾಕೆಂದರೆ ಅಣ್ಣವರನ್ನು ಇಡೀ ಕರ್ನಾಟಕದ ಜನತೆಗೆ ಹಿರಿ ಅಣ್ಣನ ರೀತಿ ಕಾಣುತ್ತಿತ್ತು. ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕನ್ನಡದ ಹೆಸರನ್ನು ಇಂದು ವಿಶ್ವಮಟ್ಟಕ್ಕೆ ಗುರುತಿಸುವ ಹಾಗೆ ಮಾಡುವಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಭಾವ ಎಷ್ಟು ಎನ್ನುವುದು ಇಲ್ಲಿನ ಪ್ರತಿಯೊಬ್ಬ ಜನತೆಗೂ ಕೂಡ ತಿಳಿದಿದೆ. ಹೀಗಾಗಿ ಕನ್ನಡ ಸಿನಿ ರಸಿಕರಿಗೆ ದೊಡ್ಮನೆ ಕುಟುಂಬದ ಮೇಲೆ ಅಪಾರವಾದ ಅಭಿಮಾನವಿದೆ. ಅದಕ್ಕೆ ತಕ್ಕ ಹಾಗೆ ದೊಡ್ಮನೆ ಜನರು ಕೂಡ ಅಭಿಮಾನಿಗಳನ್ನೇ ದೇವರು ಎಂದು ಹೇಳಿದ್ದಾರೆ ಹಾಗೆಯೇ ನಡೆದುಕೊಂಡಿದ್ದಾರೆ. ಪದ್ಮಭೂಷಣ ಗಾನಗಂಧರ್ವ ಕಂಠೀರವ ಮೇರು ನಟ ಡಾ. ರಾಜಕುಮಾರ್ ಅವರ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಅವರ ಹಾಡು ಧ್ವನಿ, ಅಭಿನಯ, ಸರಳತೆ, ಸಂಸ್ಕಾರ ಎಲ್ಲವೂ ಕೂಡ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿದಿದೆ.

ಹೀಗಾಗಿ ಅವರು ಆಗಲಿ ಅಷ್ಟು ವರ್ಷವಾಗಿದ್ದರು ಇನ್ನೂ ಕನ್ನಡಿಗರ ನಾಲಿಗೆಯಲ್ಲಿ ಅವರ ಹೆಸರು ರಾರಾಜಿಸುತ್ತಿದೆ. ಅದೇ ಸಾಲಿನಲ್ಲಿ ಅಣ್ಣಾವ್ರ ಪ್ರೀತಿಯ ಮಗನಾದ ಅಪ್ಪು ಅವರು ಕೂಡ ಎಲ್ಲರೂ ಮೆಚ್ಚುವ ರೀತಿ ಬದುಕಿ ಒಂದು ಆದರ್ಶ ಜೀವನವನ್ನು ನಡೆಸಿದರು. ಅಪ್ಪನ ಸಾಲಿನಲ್ಲೇ ನಡೆದ ಇವರು ಅಪ್ಪನಂತೆಯೇ ಗಾಯನ ಅಭಿನಯ ಎಲ್ಲಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲಿ ಮತ್ತು ಅಭಿಮಾನಿಗಳ ಹೃದಯವನ್ನು ಗೆಲ್ಲುವಲ್ಲಿ ತಂದೆಯನ್ನು ಕೂಡ ಮೀರಿಸಿದ್ದಾರೆ ಎನ್ನಬಹುದು. ಅಪ್ಪು ಅವರನ್ನು ಇಂದು ಕರ್ನಾಟಕದ ಜನರು ದೇವರಂತೆ ಕಾಣುತ್ತಿದ್ದಾರೆ. ಅದರಲ್ಲೂ ಅಪ್ಪು ಅಗಲಿದ ಬಳಿಕ ಅವರ ಗುಣದ ಬಗ್ಗೆ ಒಂದೊಂದೇ ವಿಷಯಗಳು ಗೊತ್ತಾಗುತ್ತಿದ್ದು ಈಗ ಕರ್ನಾಟಕದ ತುಂಬೆಲ್ಲ ಅಪ್ಪುವಿನ ಹೆಸರು ಹೇಳಿದರೆ ಒಂದು ದೀರ್ಘ ಮೌನ ಆವರಿಸುತ್ತದೆ.

ಅಷ್ಟರ ಮಟ್ಟಿಗೆ ಆ ಅಕಾಲಿಕ ಸಾವು ಎಲ್ಲರ ಧ್ವನಿಯನ್ನು ಕಟ್ಟುತ್ತಿದೆ. ಅಭಿಮಾನಿಗಳು ಅಪ್ಪು ಅವರ ಬಗ್ಗೆ ತಿಳಿದುಕೊಳ್ಳಲು ಬಹಳ ಆಸಕ್ತಿ ತೋರುತ್ತಿದ್ದಾರೆ. ಅಪ್ಪು ಅಗಲಿಕೆ ನಂತರ ಇನ್ನು ಹೆಚ್ಚಿನ ವಿಷಯಗಳು ಅಪ್ಪು ಅವರ ಬಗ್ಗೆ ಅಭಿಮಾನಿಗಳಿಗೆ ಇತ್ತೀಚೆಗೆ ತಿಳಿಯುತ್ತಿದೆ. ಬಗೆದಷ್ಟು ಆಳ ಎನ್ನುವಂತೆ ಅಪ್ಪು ಅವರ ಬಗ್ಗೆ ಎಷ್ಟು ಕೇಳಿದರು ಸಾಲದು ಎನ್ನುವಂತಾಗಿದೆ. ಅಪ್ಪು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅಪ್ಪು ಅವರು ಅಶ್ವಿನಿ ಅವರನ್ನು ಡಿಸೆಂಬರ್ 1 1999ರಲ್ಲಿ ವಿವಾಹ ಆಗಿದ್ದವು. ಅವರಿಬ್ಬರದು ಮೊದಲು ಸ್ನೇಹವಾಗಿ ನಂತರ ಆ ಸ್ನೇಹ ಪ್ರೀತಿಯನ್ನು ತಿರುಗಿ ಗುರುಹಿರಿಯರ ಆಶೀರ್ವಾದದೊಂದಿಗೆ ಅದ್ದೂರಿಯಾಗಿ ಚಿಕ್ಕಮಗಳೂರಿನಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಸೋಶಿಯಲ್ ಮೀಡಿಯಾದ ತುಂಬೆಲ್ಲ ಅಪ್ಪು ಅವರ ಮದುವೆಗೆ ಸಂಬಂಧಪಟ್ಟ ಫೋಟೋಗಳು ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು.

ಅಪ್ಪು ಅವರು ಆ ಸಮಯದಲ್ಲಿ ಹೇಗಿದ್ದರು, ಅಲ್ಲದೆ ಅಣ್ಣಾವ್ರು ಮದುವೆ ದಿನ ಎಷ್ಟು ಖುಷಿಯಿಂದ ಇದ್ದರು ಎನ್ನುವುದನ್ನು ಎಲ್ಲರೂ ಬಹಳ ಸಂತೋಷದಿಂದ ನೋಡುತ್ತಿದ್ದಾರೆ. ಅಪ್ಪು ಅವರು ಅಶ್ವಿನಿ ಅವರ ಜೊತೆ ಎಲ್ಲಿಯೂ ಕೂಡ ಒಂದು ದಿನವೂ ಗಾಸಿಪ್ ಇಲ್ಲದ ರೀತಿ ಶುದ್ಧವಾದ ಜೀವನ ನಡೆಸಿಕೊಂಡು ಬಂದಿದ್ದಾರೆ. ಇವರ ವಿವಾಹಕ್ಕೆ ಸಾಕ್ಷಿಯಾಗಿ ವಂದಿತಾ ಹಾಗೂ ಧೃತಿ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ತಮ್ಮ ಕುಟುಂಬವನ್ನು ಬಹಳ ಇಷ್ಟ ಪಡುತ್ತಿದ್ದ ಅಪ್ಪು ಅವರು ಮಡದಿ ಹಾಗೂ ಮಕ್ಕಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಸಮಯ ಸಿಕ್ಕಾಗಲ್ಲ ಅವರೊಂದಿಗೆ ಪ್ರವಾಸ ಮಾಡಿ ಸಂತೋಷವಾಗಿ ಜೀವನ ಕಳೆಯುತ್ತಿದ್ದರು. ಇದೀಗ ಅಪ್ಪು ಅ.ಗ.ಲಿಕೆಯಿಂದ ಅಶ್ವಿನಿ ಹಾಗೂ ಮಕ್ಕಳಿಗೆ ಆಗುತ್ತಿರುವ ನೋ.ವು ಮತ್ತು ಸಂ.ಕ.ಟ.ದ ಆಳವನ್ನು ವಿವರಿಸಿಸಲು ಅಸಾಧ್ಯ.

ನಟಿ ಸುಧಾರಾಣಿ ಅವರ ಮನೆಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ.

ನಮ್ಮ ನಾಡಿನಲ್ಲಿ ಹಬ್ಬವೆಂದರೆ ಸಂಭ್ರಮ ಸಡಗರದಿಂದ ತುಂಬಿರುತ್ತದೆ, ಅದರಲ್ಲೂ ನಮ್ಮ ಹಿಂದೂ ಸಾಂಪ್ರದಾಯಿಕ ಹಬ್ಬಗಳೆಂದರೆ ವಿಶಿಷ್ಟ ವಿಭಿನ್ನಗಳಿಂದ ಕೂಡಿರುತ್ತದೆ. ಅವುಗಳಿಗೆ ಪುರಾಣದಲ್ಲಿ ನಿರ್ದಿಷ್ಟವಾದ ಕಾರಣಗಳು ಇವೆ, ನಾಡಿನ ಸಮಸ್ತ ಜನಗಳ ಮನೆಗಳಲ್ಲೂ ಬಾಗಲಿಗೆ ತೋರಣ, ಬಾಳೆ ಕಂದುಗಳು, ಮನೆಯ ಮುಂದೆ ರಂಗು ರಂಗಿನ ರಂಗೋಲಿ ಎಲ್ಲವೂ ಕಣ್ಣಿಗೆ ಆನಂದ ತಂದು ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಹಬ್ಬವು ಖುಷಿಯಿಂದ ಕೂಡಿದ್ದು ಎಲ್ಲರು ಹೊಸ ಬಟ್ಟೆಗಳನ್ನು ತೊಟ್ಟು ತಮ್ಮನ್ನು ಅಲಂಕರಿಸಿಕೊಂಡು ಬಂಧು-ಮಿತ್ರರ ಜೊತೆಯಲ್ಲಿ ಒಟ್ಟಾಗಿ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಆಚರಿಸುವ ಹಬ್ಬಗಳಲ್ಲಿ ಗೌರಿ ಗಣೇಶ ಹಬ್ಬವು ಒಂದಾಗಿದೆ.

ಗೌರಿ ಹಬ್ಬವು ಪಾರ್ವತಿ ದೇವಿಯ ಗೌರಿ ಅವತಾರಕ್ಕೆ ಸಮರ್ಪಿತವಾದ ಹಿಂದೂ ಹಬ್ಬವಾಗಿದೆ, ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ಹಬ್ಬವನ್ನು ಗಣೇಶ ಚತುರ್ಥಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಗೌರಿ ಹಬ್ಬವನ್ನು ಸ್ವರ್ಣಗೌರಿ ಹಬ್ಬವೆಂದೂ ಕರೆಯಲಾಗುತ್ತದೆ, ಗೌರಿ ಹಬ್ಬ ದಿನದಂದು ಗೌರಿ ದೇವಿಯನ್ನು ಪೂಜಿಸಲಾಗುತ್ತದೆ, ಗೌರಿಯು ಪಾರ್ವತಿ ದೇವಿಯ ಅತ್ಯಂತ ಸುಂದರವಾದ ಮೈಬಣ್ಣದ ಅವತಾರವಾಗಿದೆ. ಈ ಪವಿತ್ರ ಹಬ್ಬದಂದು ಸಂತೋಷದ ವೈವಾಹಿಕ ಜೀವನಕ್ಕಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಈ ದಿನ ಇತರ ಸಾಮಾನ್ಯ ವಿವಾಹಿತ ಮಹಿಳೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವಂತೆ ಗೌರಿ ದೇವಿಯು ಮನೆಗೆ ಬರುತ್ತಾಳೆ ಎಂದು ನಂಬಲಾಗಿದೆ.

ಮರುದಿನ ಮಾತೆ ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದುಕೊಂಡು ಹೋಗುವಂತೆ ಅವಳ ಮಗ ಗಣೇಶನು ಬರುತ್ತಾನೆ. ಈ ದಿನದಂದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹದಿನಾರು ರೀತಿಯ ಶೃಂಗಾರವನ್ನು ಮಾಡಿಕೊಂಡು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುತ್ತಾರೆ. ಈ ದಿನ ಮಹಿಳೆಯರು ಪಾರ್ವತಿ ದೇವಿಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ಅರ್ಪಿಸುತ್ತಾರೆ. ಈ ವಿಶಿಷ್ಟವಾದ ಗೌರಿ ಗಣೇಶ ಹಬ್ಬದಂದು ಮೋದಕವು ಗಣೇಶನಿಗೆ ಬಹಳ ಪ್ರಿಯವಾದ ತಿಂಡಿ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಹಬ್ಬಗಳು ಕೂಡ ಸೋಶಿಯಲ್ ಮೀಡಿಯಾ ದಲ್ಲಿ ಆಚರಣೆಗಳನ್ನು ಜೋರಾಗಿ ಆಚರಿಸಲಾಗುತ್ತದೆ. ಚಲನಚಿತ್ರ ನಟ ನಟಿಯರು ಹಾಗೂ ಸೋಶಿಯಲ್ ಮೀಡಿಯಾದ ಪ್ರಮುಖ ಕಲಾವಿದರು ಇವರೆಲ್ಲರೂ ತಮ್ಮ ಮನೆಯ ಹಬ್ಬದ ಆಚರಣೆಗಳನ್ನು ಮೀಡಿಯಾಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ.

ಈ ಬಾರಿ ಪ್ರಮುಖ ನಟ ನಟಿಯರ ಪೈಕಿ ಹಬ್ಬವನ್ನು ಆಚರಿಸುವಲ್ಲಿ ನಮ್ಮ ಕನ್ನಡ ಚಿತ್ರರಂಗ ಸೇರಿ ಕಿರುತೆರೆಯಲ್ಲೂ ಸಹ ಸಾಕಷ್ಟು ಬಾರಿ ಅಭಿನಯಿಸಿರುವ ನಟಿ ಸುಧಾರಣೆಯವರು ಇದ್ದಾರೆ. ಅವರ ಮನೆಯಲ್ಲಿ ಗೌರಿ ಗಣೇಶದ ಹಬ್ಬವು ಜೋರಾಗಿದ್ದು, ತಮ್ಮ ಮನೆಯ ಗೌರಿಯ ಮುಂದೆ ಮಗಳು ಕುಳಿತಿರುವ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸುಧಾರಣೆಯವರ ಮಗಳು ಸಾಂಪ್ರದಾಯಕ ಉಡುಪುಗಳಿಂದ ತುಂಬಾ ಮುದ್ದಾಗಿ ಕಂಡಿದ್ದು, ಆ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಅವರ ಕುಟುಂಬದೊಡನೆ ಸಂಭ್ರಮ ಆಚರಣೆಯ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರು ಸಹ ತಮ್ಮ ಪತಿಯ ಜೊತೆಗೆ ನಿಂತು ಹಸಿರು ಸೀರೆಯಿಂದ ಕಂಗೊಳಿಸುತ್ತಾ, ತಮ್ಮ ಮನೆಯ ಗೌರಿ ಬಳಿ ನಿಂತಿರುವ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಹಬ್ಬವನ್ನು ವಿಶಿಷ್ಟವಾಗಿ ವಿಭಿನ್ನವಾಗಿ ಆಚರಿಸಿದ್ದಾರೆ.

ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.

ಗೌರಿ ಹಬ್ಬ ಹೆಣ್ಣು ಮಕ್ಕಳ ಪಾಲಿಗೆ ತುಂಬಾ ವಿಶೇಷ. ಕಾರಣ ಇಷ್ಟೇ ಮದುವೆ ಆಗಿ ಗಂಡನ ಮನೆ ಅಲ್ಲಿ ಇರುವ ಹೆಣ್ಣು ಮಕ್ಕಳನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆಸಿ ತಂದೆ ಅಥವಾ ಅಣ್ಣ-ತಮ್ಮಂದಿರು ಬಾಗಿನವನ್ನು ಕೊಡುತ್ತಾರೆ. ಗಂಡನ ಮನೆಯಲ್ಲಿ ಎಷ್ಟೇ ಸಂಪತ್ತಿದ್ದರು ಕೂಡ ತವರು ಕಡೆಯಿಂದ ಬರುವ ಈ ಬಾಗಿನದ ಸಂತಸ ಹೆಣ್ಣುಮಕ್ಕಳ ಪಾಲಿಗೆ ಪದಗಳಲ್ಲಿ ವಿವರಿಸಲು ಅಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮತ್ತು ನಮ್ಮ ಕರ್ನಾಟಕದಲ್ಲಿ ಎಲ್ಲಾ ಭಾಗಗಳಲ್ಲೂ ಕೂಡ ಈ ಹಬ್ಬವನ್ನು ಇದೇ ರೀತಿ ಆಚರಿಸುತ್ತಾರೆ. ಆದರೆ ಈಗಿನ ಮಾಡಲ್ ಲೈಫ್ ಸ್ಟೈಲ್ ಗೆ ಹೊಂದಿಕೊಂಡಿರುವ ಈಗಿನ ಸಂಬಂಧಗಳು ಇತ್ತೀಚೆಗೆ ಇದರ ಮೌಲ್ಯವನ್ನು ಮರೆತು ಬಿಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೂ ಕೂಡ ಮನದಾಳದಲ್ಲಿ ಸಾಧ್ಯವಾದಷ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಂಬಲ ಇನ್ನು ಹಲವಾರು ಮನಗಳಲ್ಲಿ ಇವೆ. ಎಷ್ಟೋ ಕಂಪನಿಗಳಲ್ಲಿ ಈ ಹಬ್ಬಕ್ಕೆ ಅವರ ಸಂಸ್ಥೆಯ ವತಿಯಿಂದ ಹೆಣ್ಣು ಮಕ್ಕಳಿಗೆ ಬೋನಸ್ ಕೊಡುತ್ತಾರೆ ತಂದೆಯ ಪ್ರೀತಿ ಅಥವಾ ಅಣ್ಣಂದಿರಿಂದ ಉಡುಗೊರೆ ಸಿಗದಿದ್ದರೂ ಯಾರೋ ಆ ಸ್ಥಾನದಲ್ಲಿ ನಿಂತು ಅದನ್ನು ನಡೆಸಿಕೊಟ್ಟಾಗ ಮನತುಂಬಿ ಬರುತ್ತದೆ. ಮತ್ತು ಶಾಲಾ ಕಾಲೇಜು ದಿನಗಳಲ್ಲಿ ಜೊತೆಯಾದ ಸ್ನೇಹಿತರು ಅಥವಾ ಕಚೇರಿಯಲ್ಲಿ ಅಣ್ಣ-ತಮ್ಮಂದಿರಾಗಿ ಬೆರೆತು ಹೋದ ಸಹೋದ್ಯೋಗಿಗಳು ಕೂಡ ಸಹೋದರಿಯ ರೂಪದಲ್ಲಿ ಕಾಣುವವರಿಗೆ ತಾವೇ ಆ ಸ್ಥಾನದಲ್ಲಿ ನಿಂತು ಹೆಣ್ಣು ಮಕ್ಕಳ ಉಡಿ ತುಂಬಿಸುತ್ತಾರೆ. ನಿಜವಾಗಿಯೂ ಈ ಭಾಂಧವ್ಯ ಹಾಗೂ ಭಾವನೆ ಬಾಗಿನ ಮತ್ತು ಉಡುಗೊರೆಗೆ ಮಾತ್ರ ಮೀಸಲಲ್ಲ. ಅದನ್ನು ಮೀರಿ ಒಂದು ಸಾಂತ್ವನ ಹಾಗೂ ಭಾತೃತ್ವದ ರೂಪದಲ್ಲಿ ಅದು ಹೆಣ್ಣು ಮಕ್ಕಳಿಗೆ ಶಕ್ತಿಯಾಗುತ್ತದೆ.

ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಈ ವರ್ಷದಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುವ ಎಲ್ಲ ಮುತ್ತೈದೆ ಹೆಣ್ಣು ಮಕ್ಕಳಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ಬಾಗಿನ ಕೊಡುವ ಕಾರ್ಯ ಮಾಡಬೇಕು ಎಂದು ನಿರ್ಧರಿಸಿ, ಈ ವಿಷಯವನ್ನು ಬಾಮ ಹರೀಶ್ ಅವರು ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ಅವರೊಂದಿಗೆ ಈ ಹಂಚಿಕೊಂಡು ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಹೇಳಿದಾಗ ಇಬ್ಬರು ಕೂಡ ಸಂತೋಷದಿಂದ ಒಪ್ಪಿಕೊಂಡು ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದರ ಭಾಗವಾಗಿ ಗೌರಿ ಹಬ್ಬದ ದಿನದಂದು ಕನ್ನಡ ಇಂಡಸ್ಟ್ರಿಯ ಹೆಣ್ಣು ಮಕ್ಕಳಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಹೀಗೆ ಬಂದ ನಟಿಯರು, ಸಹ ಕಲಾವಿದೆಯರು ಹಿನ್ನೆಲೆ ಗಾಯಕಿಯರು ಎಲ್ಲರಿಗೂ ಕೂಡ ಪ್ರಮೀಳಾ ಜೋಶಾಯ್ ಅವರು ಬಾಗಿನ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದವರು ಪ್ರಮೀಳಾ ಜೋಶಿ ಅವರ ಪತಿ ಸುಂದರರಾಜ್ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವೀಡಿಯೋಗಳು ಹರಿದಾಡುತ್ತಿದ್ದು, ವೀಡಿಯೋವನ್ನು ನೋಡಿದವರು ಪ್ರಮೀಳಾ ಜೋಶಿ ಅವರ ಮುಖದಲ್ಲಿ ಇದ್ದ ದುಃಖದ ಭಾವವನ್ನು ಗುರುತಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇದಕ್ಕೆ ಕಾರಣ ಇಷ್ಟೇ ಇರಬಹುದು ಎಲ್ಲರಿಗೂ ಭಾಗ್ಯ ಕೊಡುತ್ತಿದ್ದೇನೆ. ನನ್ನ ಮಗಳಿಗೆ ಆ ಭಾಗ್ಯ ಇಲ್ಲವಲ್ಲ ಎಂದು ಕಣ್ಣೀರು ಹಾಕಿದ್ದಾರೆ ತಾಯಿ ನಟಿ ಆಗಿರಬೇಕು ಅಥವಾ ಸಾಧಾರಣ ಮಹಿಳೆ ಆಗಿರಬಹುದು ಆದರೆ ತನ್ನ ಮಗಳು ಮುತ್ತೈದೆ ಆಗಿ ಇರಬೇಕು ಅಂತ ಬಯಸುತ್ತಾಳೆ ಆದರೆ ಮೇಘನ್ ರಾಜ್ ಗೆ ಈ ಸೌಭಾಗ್ಯ ದೊರೆಯಲೇ ಇಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾಳೆ ಚಿರು ಬದುಕಿದ್ದಾರೆ ಮೇಘಾನ ಇಂದು ಎಲ್ಲರಂತೆ ಬಾಗೀನ ಪಡೆಯುತ್ತಿದ್ದರು ನಿಜಕ್ಕೂ ಈ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಪ್ರೀತಿಗೆ ಕಣ್ಣಿಲ್ಲ ಎಂಬುದು ಇದಕ್ಕೆ ನೋಡಿ.

ತಮಿಳಿನಾ ಜನಪ್ರಿಯ ಖ್ಯಾತ ನಟಿ ಮತ್ತು ನಿರೂಪಕಿ ಆದಂತಹ ಮಹಾಲಕ್ಷ್ಮಿಯವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಮಹಾಲಕ್ಷ್ಮಿಯವರು ಮದುವೆಯಾಗಿರುವ ಫೋಟೋಸ್ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ನೆಟ್ಟಿಗರು ನಕಾರಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಎರಡು ರೀತಿಯಲ್ಲೂ ಕೂಡ ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಏನೆಂದರೆ ಸಾಮಾನ್ಯವಾಗಿ ನಟಿಯರು ಆಗಿರಬಹುದು ಅಥವಾ ನಟರು ಆಗಿರಬಹುದು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಬಹಳಷ್ಟು ಯೋಚನೆ ಮಾಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ರೂಪದಲ್ಲಿ ಇರಬಹುದು ಸಿರಿವಂತಿಕೆಯಲ್ಲಿ ಇರಬಹುದು ವಯಸ್ಸಿನಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ತಮಗೆ ಮ್ಯಾಚ್ ಆಗುವಂತಹ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ ಮಹಾಲಕ್ಷ್ಮಿಯವರು ಮಾತ್ರ ಈ ಎಲ್ಲಾ ವಿಚಾರಗಳಿಗೂ ಕೂಡ ತದ್ವಿರುದ್ಧವಾದಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ‌. ಹೌದು ನಟಿ ಮಹಾಲಕ್ಷ್ಮಿಯವರು ನೋಡುವುದಕ್ಕೆ ಸಾಕ್ಷಾತ್ ಮಹಾಲಕ್ಷ್ಮಿಯ ರೀತಿಯೇ ಕಾಣುತ್ತಾರೆ. ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಾಲು ಸಾಲು ಆಫರ್ ಗಳಿವೆ ಖ್ಯಾತ ನಿರೂಪಕಿಯು ಕೂಡ ಹೌದು ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ ಆದರೂ ಕೂಡ ಇದೀಗ ನಿರ್ಮಾಪಕ ಆದಂತಹ ಚಂದ್ರಶೇಖರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ ಚಂದ್ರಶೇಖರ್ ನೋಡುವುದಕ್ಕೆ ದೇಹದಾಢ್ಯ ಅಷ್ಟೇ ಅಲ್ಲದೆ ಕಪ್ಪು ಬಣ್ಣದಿಂದ ಕೂಡಿದ್ದರೆ ಇವರಿಬ್ಬರಿಗೂ ಜೋಡಿ ಇಲ್ಲ ಎಂಬುದೇ ಕೆಲವು ಅಭಿಮಾನಿಗಳ ಅಭಿಪ್ರಾಯ ಇದೆ ಆದರೂ ಕೂಡ ಇದೀಗ ಇವರು ಪ್ರೀತಿಸಿ ಮದುವೆಯಾಗಿರುವಂತಹ ವಿಚಾರ ಎಲ್ಲರಲ್ಲೂ ಕೂಡ ಅಚ್ಚರಿ ಮೂಡಿಸಿದೆ.

ಮಹಾಲಕ್ಷ್ಮಿ ಹಾಗೂ ಚಂದ್ರಶೇಖರನ್ ಇಬ್ಬರೂ ಕೂಡ ತಿರುಪತಿಯಲ್ಲಿ ಮದುವೆಯಾಗಿದ್ದಾರೆ ಈ ಮದುವೆಗೆ ಕುಟುಂಬಸ್ಥರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿದೆ ಸದ್ಯಕ್ಕೆ ಮಹಾಲಕ್ಷ್ಮಿಯವರು ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಇದರ ಜೊತೆಗೆ ”ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..” ಎಂಬ ಅಡಿ ಬರೆದು ಕೊಂಡಿದ್ದಾರೆ. ಮಹಾಲಕ್ಷ್ಮಿ ಅವರು ನಿರೂಪಕಿಯಾಗಿ ಮಾತ್ರವಲ್ಲದೆ ನಟಿಯಾಗಿಯೂ ಕೂಡ ಮಹಾಲಕ್ಷ್ಮೀ ಅವರು ಗಮನ ಸೆಳೆದಿದ್ದಾರೆ. ವಿಶೇಷವೆಂದರೆ, ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದರು ಇನ್ನು, ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ.

ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಹಾಗೆಯೇ, ರವೀಂದರ್‌ ಚಂದ್ರಶೇಖರನ್‌ ಅವರು ಕೂಡ ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಮಹಾಲಕ್ಷ್ಮಿ ಅವರು ಹಂಚಿಕೊಂಡಿರುವಂತಹ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಒಂದು ಸಂಚಲನವನ್ನು ಸೃಷ್ಟಿ ಮಾಡಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ಫೋಟೋ ನೋಡಿದಂತಹ ನಿಟ್ಟಿಗರು ಪ್ರೀತಿಗೆ ಕಣ್ಣಿಲ್ಲ ಎಂಬುದು ಸತ್ಯ ಎಂಬುದನ್ನು ಈ ನಟಿ ಇದೀಗ ಸಾಬೀತುಪಡಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

 

ಕಿರುತೆರೆ, ಜಾಹೀರಾತಿನ ನಂತರ ಸಿನಿಮಾದಲ್ಲು ನಟಿಸಲು ಮುಂದಾದ ವಂಶಿಕಾ, ಯಾವ ಹೀರೋ ಜೊತೆ ನಟಿಸುತ್ತಿದ್ದಾರೆ ನೋಡಿ.

ನಟಿ ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಮುಗ್ಧ ಪ್ರತಿಭೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ ಕಿರಿಕರೆಯಲ್ಲಿ ಪ್ರಾರಂಭವಾದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕದಲ್ಲಿ ನಟಿ ವಂಶಿಕ ಕಾಣಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ವಿಜೇತಳಾದಳು. ಇಲ್ಲಿಂದ ವಂಶಿಕ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಒಂದು ಕಾಲದಲ್ಲಿ ಯಾರಿಗೂ ತಿಳಿಯದಂತಹ ವಂಶಿಕ ಇದೀಗ ಕರ್ನಾಟಕದ ಅತ್ಯಂತ ಫೇಮಸ್ ಆಗಿದ್ದಾರೆ ಅಷ್ಟೇ ಅಲ್ಲದೆ ವಂಶಿಕ ಕಾರ್ಯಕ್ರಮ ಅಂದರೆ ಸಾಕು ಜನ ಮುಗಿದು ನೋಡುತ್ತಾರೆ, ಅಷ್ಟರ ಮಟ್ಟಿಗೆ ಕ್ರೇಜ್ ಬಳಸಿಕೊಂಡಿದ್ದಾರೆ.

ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಶೋನಲ್ಲಿಯೂ ಕೂಡ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ. ವಂಶಿಕ ಅವರಿಗೆ ಎಷ್ಟು ಪ್ರತಿಭೆ ಇದೆ ಅಂದರೆ ಅದನ್ನು ನಾವು ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ತಂದೆಗಿಂತ ನೂರು ಪಟ್ಟು ಹೆಚ್ಚು ಪ್ರತಿಭೆಯನ್ನು ಹೊಂದಿದ್ದಾರೆ ಅಂತ ಹೇಳಬಹುದು ಯಾವುದೇ ಸ್ಕ್ರಿಪ್ಟ್ ಇರಬಹುದು ಅಥವಾ ಯಾವುದೇ ಡೈಲಾಗ್ ಇರಬಹುದು ಅಥವಾ ಯಾವುದೇ ಸಂಭಾಷಣೆ ಇರಬಹುದು ಹೇಳಿದ ತಕ್ಷಣವೇ ಕ್ಯಾಚ್ ಮಾಡಿಕೊಂಡು ಅದೇ ರೀತಿಯಾಗಿ ಹೇಳುತ್ತಾರೆ. ಒಟ್ಟಾರಿಯಾಗಿ ಹೇಳುವುದಾದರೆ ಪುಟ್ಟ ಬಾಲಕಿ ಇಷ್ಟೊಂದು ಪ್ರತಿಭೆಯನ್ನು ಹೊಂದಿದ್ದಾಳೆ ಅದನ್ನು ನಾವು ಪ್ರಶಂಶಿಸಲೇಬೇಕಾದಂತಹ ವಿಚಾರ.

ಕೇವಲ ಕಿರುತೆರೆಯಲ್ಲಿ ಮಾತ್ರ ಹೆಸರುವಾಸಿಯಾಗಿದಂತಹ ವಂಶಿಕ ಅವರು ಜಾಹೀರಾತಿನಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಹೌದು ವಿಕ್ಸ್ ಜಾಹಿರಾತಿನಲ್ಲಿ ನಟಿ ವಂಶಿಕ ಮಾತ್ರವಲ್ಲದೆ ಮಾಸ್ಟರ್ ಆನಂದ್ ಆಗುವ ಧರ್ಮಪತ್ನಿ ಯಶು ಅವರು ಕೂಡ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಜಾಹೀರಾತು ಇದೀಗ ಎಲ್ಲಾ ಟಿವಿ ಚಾನೆಲ್ ಗಳಲ್ಲೂ ಪ್ರಸಾರವಾಗುತ್ತಿದೆ ಇವುಗಳನ್ನು ನೋಡಿದಂತಹ ಕೆಲವು ನೆಟ್ಟಿಗರು ಸಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಎರಡು ರೀತಿಯಲ್ಲೂ ಕೂಡ ಕಾಮೆಂಟ್ ಮಾಡಿದ್ದಾರೆ. ಹೌದು ಕೇವಲ ಕಿರುತರೆ ಮತ್ತು ರಿಯಾಲಿಟಿ ಶೋನಲ್ಲಿ ನಟಿ ವಂಶಿಕಾ ಕಾಣಿಸಿಕೊಂಡರೆ ಆದರೆ ವಿದ್ಯಾಭ್ಯಾಸದ ಗತಿ ಏನು ಎಂದು ಕೆಲವು ನೆಟ್ಟಿಗರು ಹೇಳಿದರು ಹಾಗಾಗಿ ಕೆಲ ದಿನಗಳ ಕಾಲ ವಂಶಿಕ ಅವರು ಎಲ್ಲದರಿಂದಲೂ ದೂರ ಉಳಿದಿದ್ದರು

ಆದರೆ ಇದೀಗ ಮತ್ತೆ ವಂಶಿಕಾ ಸಿಹಿ ಸುದ್ದಿಯನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಹೌದು ನಟಿ ವಂಶಿಕ ಇದೀಗ ಬೆಳ್ಳಿತೆರೆಯಲ್ಲಿ ನಟನೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಬೆಳ್ಳಿ ತೆರಿಗೆ ಪಾದರ್ಪಣೆ ಮಾಡುತ್ತಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ವಂಶಿಕ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಬಾಲನಟಿಯಾಗಿ ವಂಶಿಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾಳೆ ವಂಶಿಕಾ ನಡನೆಯ ಮೊದಲ ಸಿನಿಮಾ ”ಲವ್ ಲಿ” ನಟ ವಸಿಷ್ಠ ಸಿಂಹ ಅಭಿನಯದ ಈ ಚಿತ್ರದಲ್ಲಿ ವಂಶಿಕ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಗಣೇಶ ಹಬ್ಬದ ಪ್ರಯುಕ್ತ ವಂಶಿಕ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ ಹಾಗಾಗಿ ಇನ್ನು ಮುಂದೆ ಕಿರುತೆರೆಯಲ್ಲಿ ಮಾತ್ರವಲ್ಲ ವಂಶಿಕಾಳನ್ನು ದೊಡ್ಡ ಪರದೆಯ ಮೇಲೆ ನೋಡಬಹುದು.

ಇದು ಒಂದು ರೀತಿಯಲ್ಲಿ ಖುಷಿ ಪಡಬೇಕಾದ ವಿಚಾರವೇ ಆದರೆ ಕೇವಲ ರಿಯಾಲಿಟಿ ಶೋ ಕಿರುತೆರೆ ಬೆಳ್ಳಿ ತೆರೆಯಲಿ ನಟಿಸಲು ಮುಂದಾದರೆ ಮುಂದೆ ಈಕೆಯ ವಿದ್ಯಾಭ್ಯಾಸ ಹೇಗೆ ಎಂಬುದೇ ಕೆಲವು ನೆಟ್ಟಿಗರ ಪ್ರಶ್ನೆಯಾಗಿದೆ. ದಿನದ ಸಂಪೂರ್ಣ ಕಾಲ ಚಿತ್ರಿಕರಣದಲ್ಲೇ ಪಾಲ್ಗೊಂಡರೆ ಈಕೆ ವಿದ್ಯಾಭ್ಯಾಸ ಮಾಡುವುದು ಹೇಗೆ ಕಲಿಯುವುದಾದರೂ ಹೇಗೆ ಮಕ್ಕಳ ಜೊತೆ ಒಡನಾಟ ಬೆಳೆಸುವುದಾದರೂ ಹೇಗೆ ಎಂಬುದು ಕೆಲವರ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಫೋಟೋ ದೇವರ ಮನೆಯಲ್ಲಿ ಇಟ್ಟು ಪೂಜಿಸುವ ಏಕೈಕ ನಟ ಯಾರು ಗೊತ್ತ. ? ನಿಜಕ್ಕೂ ಆಶ್ಚರ್ಯ ಆಗುತ್ತೆ ಆದರೂ ಸತ್ಯ

ರಾಜ್ ಕುಟುಂಬ ಅಭಿಮಾನಿಗಳನ್ನೇ ದೇವರು ಎಂದು ನಂಬಿತ್ತು ಹಾಗೆ ರಾಜಣ್ಣ ಕೂಡ ಅಭಿಮಾನಿ ದೇವರು ಎಂದೇ ಜನರನ್ನು ಸಂಭೋಧನೆ ಮಾಡುತ್ತಿದ್ದರು. ಮುಂದುವರೆದು ಅಣ್ಣಾವ್ರ ಮಕ್ಕಳು ಕೂಡ ಇದೇ ರೀತಿ ನಡೆದುಕೊಂಡರು ಪುನೀತ್ ರಾಜಕುಮಾರ್ ಅವರು ತಮ್ಮ ಒಂದು ಸಿನಿಮಾದ ಹಾಡಿನಲ್ಲಿ ಅಭಿಮಾನಿಗಳೇ ನಮ್ಮ ಮನೆ ದೇವರು ಎಂದು ಕೂಡ ಹಾಡಿದ್ದಾರೆ. ಆದರೆ ಇದೀಗ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ಮನೆಗಳಲ್ಲೂ ದೇವರಂತೆ ಕಾಣುತ್ತಿದ್ದಾರೆ ಈಗ ಕರ್ನಾಟಕ ಅಪ್ಪು ಅವರನ್ನು ಅಭಿಮಾನಿಗಳ ದೇವರು ಎಂದು ಹೇಳುತ್ತಿದ್ದಾರೆ ಯಾಕೆಂದರೆ ಅಪ್ಪು ಅವರು ಕರ್ನಾಟಕದ ಜನತೆಗಾಗಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಮತ್ತು ಅವರು ಮಾಡಿರುವ ಒಳ್ಳೆಯ ಕೆಲಸಗಳು ಈಗ ಸಾವಿರಾರು ಜನಕ್ಕೆ ಸ್ಪೂರ್ತಿಯಾಗಿ ಎಲ್ಲರೂ ಕೂಡ ಅಪ್ಪು ಅವರ ವ್ಯಕ್ತಿತ್ವವನ್ನು ಮಾದರಿಯಾಗಿ ತೆಗೆದುಕೊಂಡು ಅದೇ ರೀತಿ ಬದುಕಲು ಆಸೆ ಪಡುತ್ತಿದ್ದಾರೆ.

ಅಪ್ಪು ಅವರು ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಾಗಾಗಿ ಮೈಸೂರಿನ ಶಕ್ತಿಧಾಮದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಉಚಿತವಾಗಿ ವಿದ್ಯೆ ವಸತಿ ಸೌಲಭ್ಯ ಕಲ್ಲಿಸಿಕೊಟ್ಟಿದ್ದರು, ಇದಲ್ಲದೆ ಗೋಶಾಲೆಗಳು ಅನಾಥಾಶ್ರಮಗಳು ವೃದ್ಧಾಶ್ರಮಗಳು ಮತ್ತು ರೈತರು ಕರ್ನಾಟಕ ವನ್ಯ ಸಂಪತ್ತು ಇವುಗಳ ಮೇಲೆಲ್ಲಾ ಅಪ್ಪು ಅವರಿಗೆ ವಿಶೇಷ ಕಾಳಜಿ ಇತ್ತು. ತಮ್ಮ ಕೈಗೂ ಮೀರಿ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಸಹಾಯವನ್ನು ಅರಸಿ ಅಪ್ಪುವನ್ನು ಹುಡುಕಿಕೊಂಡು ಬರುತ್ತಿದ್ದ ಯಾರೊಬ್ಬರನ್ನು ಯಾರನ್ನೂ ಬರಿ ಕೈಯಲ್ಲಿ ಅಪ್ಪು ಹಿಂದಿರುಗಿಸುತ್ತಿರಲಿಲ್ಲ. ಹೀಗಾಗಿ ಇಡೀ ಕರ್ನಾಟಕ ಇಂದು ತಮ್ಮ ಮನೆ ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗು ಹೋಗಿದೆ. ಇದರ ನಡುವೆ ಕರ್ನಾಟಕ ಚಲನಚಿತ್ರ ಮಂಡಳಿಯ ಅಪ್ಪು ಅವರ ಕುರಿತಾದ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮಕ್ಕೆ ತಮಿಳು ತೆಲುಗು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರು ಆಗಮಿಸಿದ್ದರು ಮತ್ತು ಕರ್ನಾಟಕದ ರಾಜಕೀಯ ಮುಖಂಡರುಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದರಲ್ಲಿ ಅಪ್ಪು ಅವರ ಇಡೀ ಜೀವನ ಕುರಿತಾದ ಮಾಹಿತಿ ಇದೆ 1975ರಲ್ಲಿ ಚೆನ್ನೈನ ಆಸ್ಪತ್ರೆಯಲ್ಲಿ ನಕ್ಷತ್ರ ಒಂದು ಜನಿಸಿತು ಎಂದು ಶುರುವಾಗುವ ಇದು ಬಾಲ್ಯ ಜೀವನ ಹೇಗಿತ್ತು ಮತ್ತೆ ಅವರು ಸಿನಿಮಾ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದು ಹೇಗೆ ಮತ್ತು ಕುಟುಂಬದವರ ಜೊತೆ ಅವರ ಒಡನಾಟ ಕೊನೆಗೆ ಅಪ್ಪು ಮಾಡಿದ ಸಾಧನೆಗೆ ಅವರ ಸಾವಿನ ದಿನ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದು ಸಲ್ಲಿಸಿದ ಗೌರವ ಈ ಎಲ್ಲವನ್ನು ಕೂಡ ಅದು ಒಳಗೊಂಡಿದೆ. ಈ ಕಿರುಚಿತ್ರವನ್ನು ನೋಡುತ್ತಿದ್ದ ಹಾಗೆಯೇ ಶಿವಣ್ಣ ಅವರು ಅಲ್ಲೇ ಭಾವುಕರಾಗಿದ್ದಾರೆ. ಅಪ್ಪು ಆಗಲಿಲ್ಲ ದಿನದಿಂದಲೂ ಶಿವಣ್ಣ ಅವರು ಭಾವನಾತ್ಮಕವಾಗಿ ಕುಸಿದು ಹೋಗಿದ್ದಾರೆ ಎಂದೇ ಹೇಳಬಹುದು. ಅಪ್ಪು ಅವರು ಒಬ್ಬ ನಟ ಅನ್ನುವುದಕ್ಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲಿ ಅವರು ಗುರುತಿಸಿಕೊಂಡ ಪರಿಯಿಂದ ಇಡೀ ಕರ್ನಾಟಕದ ಜನತೆ ಇಂದು ಅವರನ್ನು ದೇವರ ರೂಪದಲ್ಲಿ ಕಾಣುತ್ತಿದ್ದಾರೆ.

ಯಾವುದೇ ಜಾತ್ರೆ ಇದ್ದರೂ ಕೂಡ ಅಲ್ಲಿ ಅಪ್ಪು ಫೋಟೋ ಕೂಡ ಮೆರವಣಿಗೆ ಹೊರಡುತ್ತದೆ. ಈಗ ಗಣೇಶ ಹಬ್ಬದ ಪ್ರಯುಕ್ತ ಗಣೇಶನ ವಿಗ್ರಹದ ಜೊತೆ ಅಪ್ಪುವಿನ ವಿಗ್ರಹ ಕೂಡ ತಯಾರಾಗುತ್ತಿದೆ. ಇದರಲ್ಲಿ ಗಣೇಶನಿಗೆ ಮೋದಕ ಬೀಸುತ್ತಿರುವ ಅಪ್ಪು ಗಣೇಶನ ಪಕ್ಕ ಕುಳಿತಿರುವ ಹಪ್ಪು ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಅಪ್ಪು ಎದುರುಗಡೆ ಕುಳಿತಿರುವ ಗಣೇಶ, ಗಣೇಶ ಅಪ್ಪು ಅವರ ಕೆನ್ನೆ ಸವರಿತ್ತಿರುವುದು ಈ ರೀತಿ ಅನೇಕ ವಿಗ್ರಹಗಳು ತಯಾರಾಗಿ ಅಭಿಮಾನಿಗಳು ಈ ವಿಗ್ರಹಗಳನ್ನು ಖರೀದಿಸಿ ಇಬ್ಬರಿಗೂ ಪೂಜೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಇನ್ನೊಂದು ವಿಶೇಷ ಏನೆಂದರೆ, ಕನ್ನಡದ ನಟ ನೀನಾಸಂ ಸತೀಶ್ ಅವರು ಅವರ ದೇವರ ಮನೆಯಲ್ಲಿ ಉಳಿದ ಫೋಟೋಗಳ ಜೊತೆ ಅಪ್ಪು ಅವರ ಫೋಟೋವನ್ನು ಕೂಡ ಇಟ್ಟು ಪ್ರತಿದಿನ ತಾವೇ ಪೂಜೆ ಮಾಡುತ್ತಿದ್ದಾರೆ.

ಮನೆ ಬಾಗಿಲಿಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪುವಿನ ಹೆಸರಿಟ್ಟು ಉಡುಗೊರೆ ಕೊಟ್ಟ ರಾಘಣ್ಣ ಈ ವಿಡಿಯೋ ನೋಡಿ.

ಇಡೀ ಕರ್ನಾಟಕದ ತುಂಬೆಲ್ಲ ಗಣೇಶ ಚತುರ್ಥಿಯ ಸಂಭ್ರಮ, ತಿಂಗಳುಗಳ ಹಿಂದೆಯಿಂದಲೇ ಇದಕ್ಕಾಗಿ ಭಾರತದಾದ್ಯಂತ ತಯಾರಿ ಶುರುವಾಗಿದೆ. ಆದರೆ ಕರ್ನಾಟಕದ ಮಟ್ಟಕ್ಕೆ ಈ ಬಾರಿ ಗಣೇಶನ ಉತ್ಸವದಲ್ಲಿ ಒಂಚೂರು ಮಂಕು ಕವಿದ ಭಾವ ಜೊತೆಗೆ ದೊಡ್ಮನೆಗೆ ವರ್ಷದಿಂದ ಯಾವುದೇ ಹಬ್ಬದ ಸಂಭ್ರಮವೇ ಇಲ್ಲ. ಕಾರಣ ಕರುನಾಡಿನ ಮಗನನ್ನು ಕಳೆದುಕೊಂಡಿರುವ ಆ ನೋವು ದುಃಖ. ಆಗಸ್ಟ್ 29ಕ್ಕೆ ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 10 ತಿಂಗಳು ತುಂಬಿದೆ. ಈ ಪ್ರಯುಕ್ತ ಕುಟುಂಬಸ್ಥರೆಲ್ಲ ಕಂಠೀರವ ಸ್ಟುಡಿಯೋ ಅಲ್ಲಿರುವ ಅಪ್ಪು ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿ ಬಂದಿದ್ದಾರೆ. ದಿನ ದಿನ ಕಳೆಯುತ್ತಿದ್ದಂತೆ ನೋವು ಕರಗುತ್ತದ್ದೆ ಎಂದು ಎಲ್ಲರು ಹೇಳುತ್ತಾರೆ ಆದರೆ ಅಪ್ಪು ಇಲ್ಲದ ನೋವು ಮಾತ್ರ ದಿನಗಳ ಅಂತರ ಹೆಚ್ಚಾದಷ್ಟು ಎದೆಯಾಳವನ್ನು ಇರಿಯುತ್ತಿದೆ.

ಕಳೆದ 10 ತಿಂಗಳಿಂದ ಕರ್ನಾಟಕದ ಪ್ರತಿ ಹಬ್ಬ ಪ್ರತಿ ಜಾತ್ರೆ ಪ್ರತಿ ಸಭೆ ಪ್ರತಿ ಸಮಾರಂಭ ಹೀಗೆ ಪ್ರತಿದಿನವೂ ಕೂಡ ಅಪ್ಪುವಿನ ಜಪ ತಪ್ಪದೇ ನಡೆಯುತ್ತಿದೆ ಈಗಾಗಲೇ ದಾಖಲೆ ಮಟ್ಟದಷ್ಟು ಅಪ್ಪುವಿನ ಹೆಸರಿನಲ್ಲಿ ಅನೇಕ ಒಳ್ಳೆಯ ಕೆಲಸಗಳು ಕೂಡ ನಡೆದಿವೆ. ಇದಕ್ಕೆಲ್ಲ ಸ್ಫೂರ್ತಿ ಅಪ್ಪು ಅವರೇ, ಅವರು ಬದುಕನ್ನು ನೋಡಿದ ರೀತಿ ಹಾಗೂ ಅವರ ಬದುಕನ್ನು ಸಮಾಜಕ್ಕಾಗಿ ಮೀಸಲಿಟ್ಟ ಅವರ ಗುಣ ಅಪ್ಪು ಅಕಾಲಿಕದ ಮರಣದ ಬಳಿಕ ಹೃದಯಗಳ ಕಣ್ ತೆರೆದಿದೆ ಎನ್ನಬಹುದು. ಇದುವರೆಗೂ ಅಭಿಮಾನಿಗಳು ಅಷ್ಟೇ ಆಗಿದ್ದ ಕರ್ನಾಟಕದ ಜನತೆ ಈಗ ಅಪ್ಪುವಿಗೆ ಭಕ್ತರೇ ಆಗಿ ಹೋಗಿದ್ದಾರೆ, ಅಪ್ಪುವಿನ ಹಾದಿಯಲ್ಲಿ ತಮ್ಮಿಂದದಷ್ಟು ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೆಜ್ಜೆ ಇಡುತ್ತಿದ್ದಾರೆ. ಎಲ್ಲರ ಮನೆಯಲ್ಲೂ ಕೂಡ ಅಪ್ಪುವಿನ ರೀತಿ ಒಬ್ಬ ಮಗ ಇರಬೇಕು ಎನ್ನುವುದು ಎಲ್ಲ ತಂದೆ ತಾಯಿಯ ಆಶಯ.

ಈಗ ಇದೇ ರೀತಿ ದಂಪತಿಯೊಬ್ಬರು ತಮ್ಮ ಮಗುವಿಗೆ ಅಪ್ಪುವಿನ ಹೆಸರಿಸಿಕೊಳ್ಳುವ ಮೂಲಕ ಅವರು ಅಪ್ಪುವಂತೆ ಆಗಬೇಕು ಎಂದು ಆಸೆ ಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಸಬಾ ಸಮೀಪದ ಗ್ರಾಮದ ದಂಪತಿಗಳಾದ ಮಾರುತಿ ಬೆಳವಣಿಕಿ ಮತ್ತು ಸಂಗೀತ ಎನ್ನುವ ದಂಪತಿಗೆ ಗಂಡು ಮಗುವನ್ನು 22 ದಿನಗಳ ಹಿಂದೆ ಜನಿಸಿದೆ. ಜೊತೆಗೆ ಮಾರುತಿ ಅವರು ಅಪ್ಪು ಅವರ ಅಭಿಮಾನಿ ಆಗಿದ್ದು ಚಿಕ್ಕ ವಯಸ್ಸಿನಿಂದಲೂ ಕೂಡ ಅಪ್ಪು ಅವರನ್ನು ಬಹಳ ಇಷ್ಟಪಡುತ್ತಿದ್ದರು. ಅಲ್ಲದೆ ಅಪ್ಪುವಿನ ಯಾವುದೇ ಸಿನಿಮಾ ರಿಲೀಸ್ ಆದರೂ ಕೂಡ ಅದನ್ನು ಹಬ್ಬದಂತೆ ಸಂಭವಿಸುತ್ತಿದ್ದ ಇವರು ಆ ಭಾಗದಲ್ಲೆಲ್ಲಾ ಅಪ್ಪು ಎಂದು ಫೇಮಸ್ ಆಗಿದ್ದಾರೆ. ಅಪ್ಪು ಅವರು ಇಹ ಲೋಕ ತಿಳಿಸಿದ ಬಳಿಕ ಬಹಳ ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದ ಮಾರುತಿ ಕುಟುಂಬ ಈಗ ಮರಿ ಅಪ್ಪುವನ್ನು ಕಾಣುತ್ತಿದ್ದಾರೆ.

ಈಗ ತಮ್ಮ ಮಗುವಿಗೆ ಅಪ್ಪು ಅವರ ಹೆಸರನ್ನೇ ಇಡಬೇಕು ಎಂದು ನಿರ್ಧರಿಸುವ ದಂಪತಿ ಈ ಕಾರ್ಯಕ್ರಮವನ್ನು ಶಿವಣ್ಣ ಅಥವಾ ರಾಘಣ್ಣನ ಕೈಯಿಂದ ಮಾಡಿಸಬೇಕು ಎಂದು ಬಯಸಿದ್ದರು ಅವರ ಆಸೆಯನ್ನು ಈಡೇರಿಸಿದ ರಾಘಣ್ಣ ಅವರು ತಮ್ಮ ನಿವಾಸದಲ್ಲಿ ಅಪ್ಪು ಅಭಿಮಾನಿಯ ಮಗನ ಕಿವಿಯಲ್ಲಿ ಮೂರು ಬಾರಿ ಪುನೀತ್ ರಾಜಕುಮಾರ್ ಎಂದು ಹೇಳುವ ಮೂಲಕ ಆ ಮಗುವಿಗೆ ಪ್ರೀತಿಯ ತಮ್ಮನ ಹೆಸರಿಟ್ಟಿದ್ದಾರೆ ಹಾಗೂ ಈ ಖುಷಿಯ ಸಂಭ್ರಮದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಘಣ್ಣ ಅವರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಅದರಲ್ಲಿ ಅತಿ ಹೆಚ್ಚು ಸುದ್ದಿಯನ್ನು ಕುಟುಂಬಸ್ಥರ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.

ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಎಷ್ಟೋ ಎಂಗೆಳೆಯರ ಸ್ಪೂರ್ತಿ ಹೇಗೆ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಎನ್ನುವ ಹುಡುಗ ಹಠದಿಂದ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟ ಬಿದ್ದು ಸಾಮ್ರಾಜ್ಯ ಕಟ್ಟುತ್ತಾನೋ ಹಾಗೆ ನಿಜ ಜೀವನದಲ್ಲೂ ಕೂಡ ಯಶ್ ಅವರಿಗೆ ಆ ವ್ಯಕ್ತಿತ್ವ ಹೋಲುತ್ತದೆ ಎನ್ನಬಹುದು. ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರು ಕಠಿಣ ಪರಿಶ್ರಮದ ನಂತರ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಕೆಜಿಎಫ್ ಟು ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದ ನಾಯಕನಾದ ನಂತರ ಈ ಖ್ಯಾತಿ ದೇಶ ಮತ್ತು ದೇಶದ ಗಡಿಯಿಂದ ಆಚೆಗೂ ಕೂಡ ಹಬ್ಬಿದೆ. ಈಗ ಭಾರತದ ಸೂಪರ್ ಸ್ಟಾರ್ ಆಗಿರುವ ಯಶ್ ಅವರು ಮಾಡಿದ್ದಲ್ಲವೂ ನ್ಯೂಸ್ ಆಗುತ್ತಿದೆ. ಅವರದ್ದೇ ಡೈಲಾಗ್ ಇರುವ ರೀತಿ ಈಗ ಭಾರತದ ತುಂಬೆಲ್ಲಾ ಯಶ್ ಹವಾ.

ಒಬ್ಬ ಸೆಲೆಬ್ರಿಟಿ ಆದಮೇಲೆ ಬದುಕು ಮತ್ತಷ್ಟು ಜವಾಬ್ದಾರಿಯುತವಾಗುತ್ತದೆ ಸಂಸಾರ ಹಾಗೂ ಸಮಾಜವನ್ನು ಕೂಡ ಸರಿದೂಗಿಸಿಕೊಂಡು ಹೋಗುವ ತಾಳ್ಮೆ ಈ ಸಿನಿಮಾ ನಾಯಕರಲ್ಲಿ ಇರಬೇಕಾಗುತ್ತದೆ. ಒಂದರ್ಥದಲ್ಲಿ ಯಶ್ ಅವರು ವೈಯಕ್ತಿಕ ಜೀವನವನ್ನು ಕೂಡ ಬಹಳ ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎರಡು ಮುದ್ದಾದ ಮಕ್ಕಳ ಜೊತೆ ಹಾಗೂ ಪತ್ನಿಯ ಜೊತೆ ಸಮಯ ಸಿಕ್ಕಾಗಲಿಲ್ಲ ಸಂತಸದ ಕ್ಷಣಗಳನ್ನು ಕಳೆದು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡು ಖುಷಿ ಪಡುವ ಯಶ್ ಅವರು ಅಭಿಮಾನಿಗಳ ಜೊತೆಗೂ ಕೂಡ ಕುಟುಂಬಸ್ಥರಂತೆ ವರ್ತಿಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅವರ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ ಆ ವಿಡಿಯೋಗಳನ್ನು ನೋಡಿ ಯಶ್ ಅವರು ಎಷ್ಟು ಸಿಂಪಲ್ ಎಂದು ನಾವೆಲ್ಲಾ ಹೊಗಳಿದ್ದೇವೆ.

ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಮೇಲೆ ಎಲ್ಲರೂ ಯಶ್ ಅವರ ವರ್ತನೆ ಕಂಡು ಜನ ಬೇಸರಿಸಿಕೊಂಡಿದ್ದಾರೆ. ಕಾರಣ ಇಷ್ಟೇ ಕೆಜಿಎಫ್ ಟೂ ಸಿನಿಮಾದ ಬಳಿಕ ಯಶ್ ಅವರನ್ನು ಭಾರತದ ಎಲ್ಲಾ ಜನರು ಕೂಡ ಗುರುತಿಸುವಷ್ಟು ಬೆಳೆದಿದ್ದಾರೆ. ಇತ್ತೀಚೆಗೆ ಮುಂಬೈ ಮತ್ತು ಹೈದರಾಬಾದ್ ಅಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಯಶ್ ಅವರನ್ನು ಕಂಡಾಗಲೆಲ್ಲಾ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಆಸೆಪಡುತ್ತಿದ್ದಾರೆ ಸಾಕಷ್ಟು ಬಾರಿ ಯಶ್ ಅವರು ತಮ್ಮ ಬಳಿ ಬಂದ ಎಲ್ಲರಿಗೂ ಕೂಡ ಫೋಟೋ ಕ್ಲಿಕ್ಕಿಸಿಕೊಳ್ಳುವ ಅವಕಾಶವನ್ನು ಕೊಟ್ಟಿದ್ದಾರೆ. ಹೀಗೆ ಮೊನ್ನೆ ಮುಂಬೈ ಅಲ್ಲಿ ಯಶ್ ಅವರನ್ನು ಕಂಡು ಜನರೆಲ್ಲರೂ ಅವರ ಬಳಿ ಮುಗಿಬಿದ್ದು ಫೋಟೋ ತೆಗೆಸಿಕೊಳ್ಳುತ್ತಿದ್ದರು ಅದರಲ್ಲಿ ಹುಡುಗ ಹುಡುಗಿ ಮಹಿಳೆ ಚಿಕ್ಕ ಚಿಕ್ಕ ಮಕ್ಕಳು ಹೀಗೆ ಎಲ್ಲರೂ ಕೂಡ ರಾಕಿ ಭಾಯ್ ರಾಕಿ ಭಾಯ್ ಎಂದು ಕಿರುಚುತ್ತಾ ಫೋಟೋ ತೆಗೆಸಿಕೊಂಡು ಸಂತೋಷಪಡುತ್ತಿದ್ದರು.

ಯಶ್ ಅವರು ಕೂಡ ಆದಷ್ಟು ಅವಕಾಶವನ್ನು ನೀಡಿದರು ಕೊನೆಯಲ್ಲಿ ಅವರಿಗೆ ಸಮಯ ಆಗುತ್ತಿತ್ತು ಹೀಗಾಗಿ ಹೊರಡುವ ಅನಿವಾರ್ಯ ಇದ್ದರಿಂದ ಕಾರಣ ಕಡೆ ತೆರಳಿದರು. ಅವರು ಹೆಜ್ಜೆ ಹಾಕುತ್ತಿದ್ದರು ಸಹ ಹಿಂದೆಯಿಂದ ಬಂದು ಜನರು ಫೋಟೋ ಕೇಳುತ್ತಿದ್ದರು. ಆಗ ಬೀದಿಯಲ್ಲಿ ಇರುವ ಪುಟ್ಟ ಹೆಣ್ಣು ಮಗುವೊಂದು ಯಶ್ ಅವರನ್ನು ಗುರುತಿಸಿ ಹಿಂದೆಯಿಂದ ಬಂದು ರಾಕಿ ಬಾಯ್ಕ ರಾಕಿ ಭಾಯ್ ಎಂದು ಕಿರುಚುತ್ತಿತ್ತು. ಯಶ್ ಅವರು ಅದನ್ನು ಕೇಳಿಸಿಕೊಳ್ಳದೆ ಕಾರು ಹತ್ತಿ ಹೊರಟೆ ಬಿಟ್ಟರು ಈ ವಿಡಿಯೋ ನೋಡಿದ ಮೇಲೆ ಯಶ್ ಅವರನ್ನು ಪುನೀತ್ ನೋಡಿ ನೀವು ಕಲಿಯಬೇಕು ಎನ್ನುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಇಂದು ಬದ್ಧ ವೈರಿ ಆದರೆ ಅಂದು ದರ್ಶನ್ ಮತ್ತು ಸುದೀಪ್ ಎಷ್ಟು ಆತ್ಮೀಯವಾಗಿದ್ದರೂ ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಕರ್ನಾಟಕದ ಪಾಲಿಗೆ ಎರಡು ಕಣ್ಣುಗಳು ಇದ್ದಹಾಗೆ ಇಬ್ಬರೂ ಕೂಡ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು. ಇಬ್ಬರೂ ಕೂಡ ತಮ್ಮದೇ ಆದ ವಿಶೇಷ ರೀತಿಯ ಆಕರ್ಷಣೆಯನ್ನು ಹೊಂದಿದ್ದಾರೆ ಇಬ್ಬರನ್ನು ಕೂಡ ಕರ್ನಾಟಕದಲ್ಲಿ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರ ಸಿನಿಮಾಗಳು ಒಟ್ಟಿಗೆ ಒಂದೇ ದಿನ ರಿಲೀಸ್ ಆದರೂ ಕೂಡ ಒಬ್ಬರ ಬಗ್ಗೆ ಒಬ್ಬರು ಎಲ್ಲೂ ನೆಗೆಟಿವ್ ಆಗಿ ಆಗಲೇ ಪಾಸಿಟಿವ್ ಆಗಿಯೇ ಆಗಲಿ ಮಾತನಾಡಿದವರಲ್ಲ. ಇಬ್ಬರು ಒಂದೇ ಸಿನಿಮಾ ಇಂಡಸ್ಟ್ರಿಯಲ್ ಇದ್ದರೂ ಕೂಡ ಹಲವು ವರ್ಷಗಳ ವರೆಗೆ ಇವರಿಬ್ಬರ ನಡುವೆ ಇದ್ದ ಸಂಬಂಧ ಏನು ಎನ್ನುವುದು ತಿಳಿಯದೇ ಎಲ್ಲರಿಗೂ ಕನ್ಫ್ಯೂಸ್ ಆಗಿತ್ತು.

ಯಾಕೆಂದರೆ ಅದೊಂದು ಇನ್ಸಿಡೆಂಟ್ ಆಗುವವರೆಗೂ ಒಬ್ಬರನ್ನೊಬ್ಬರು ಮಾತು ಸಹ ಆಡಿಸಿದ ಅಷ್ಟು ಅಪರಿಚಿತ ರೀತಿ ಇಬ್ಬರು ಇದ್ದರು ದರ್ಶನ್ ಅವರ ವೈಯಕ್ತಿಕ ಬದುಕಿನಲ್ಲಿ ನಡೆದ ಒಂದು ದುರ್ಘಟನೆ ಬಳಿಕ ದರ್ಶನ್ ಅವರ ಸಿನಿಮಾಗಳು ಸೋಲಲು ಆರಂಭಿಸುತ್ತದೆ. ದರ್ಶನ್ ಅವರ ಸಾರಥಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸುದೀಪ್ ಅವರು ದಚ್ಚು ಅವರ ಬೆಂಬಲಕ್ಕೆ ನಿಂತರು. ಅಲ್ಲದೆ ದರ್ಶನ್ ಅವರ ಸಿನಿಮಾ ಜರ್ನಿ ಯಲ್ಲಿ ಒಂದು ಬೆಂಚ್ ಮಾರ್ಕ್ ಎಂದು ಕರೆಯಬಹುದಾದ ಅದ್ಭುತ ಸಿನಿಮಾವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾಕ್ಕೆ ಸುದೀಪ್ ಅವರು ಪ್ರಚಾರದ ರೀತಿ ಸಿನಿಮಾ ಆರಂಭಕ್ಕೂ ಮುನ್ನ ಹಾಗೂ ಪ್ರತಿ ಹಾಡಿನ ಆರಂಭಕ್ಕೂ ತಮ್ಮ ಕಂಚಿನ ಕಂಠದಿಂದ ಸಿನಿಮಾ ಕುರಿತಾಗಿ ಪ್ರಮೋಷನ್ ನೀಡಿದ್ದರು.

ಒಂದರ್ಥದಲ್ಲಿ ದರ್ಶನ್ ಅವರ ಸಿನಿ ಬದುಕಿಗೆ ಅದು ಮತ್ತೊಮ್ಮೆ ಉಸಿರು ತಂದಿತು ಎಂದೇ ಹೇಳಬಹುದು. ಇದಾದ ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳಲು ಶುರುವಾದರೂ ಸಿಸಿಎಲ್ ಅಲ್ಲಿ ಕೂಡ ಎಂದು ಆಟವಾಡದ ದರ್ಶನ್ ಸುದೀಪ್ ಇದ್ದ ಕಾರಣ ಆ ವರ್ಷದ ಸಿಸಿಎಲ್ ಅಲ್ಲಿ ಪಾಲ್ಗೊಂಡರು ಇಬ್ಬರು ಅಣ್ಣತಮ್ಮಂದಿರಿಗಿಂತ ಹೆಚ್ಚಾಗಿ ಒಬ್ಬರ ಜೊತೆ ಒಬ್ಬರು ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೆ ಕಾರ್ಯಕ್ರಮ ಒಂದರಲ್ಲಿ ಇಬ್ಬರು ಕುಚಿಕು ಕುಚಿಕು ಎಂದು ಹಾಡಿಗೆ ಹೆಜ್ಜೆ ಹಾಕುತ್ತಾ ಸ್ಟೇಜ್ ಮೇಲೆ ವಿಜೃಂಭಿಸಿದ್ದರು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಈ ಸ್ನೇಹದ ಮೇಲೆ ಬಿತ್ತೋ ಗೊತ್ತಿಲ್ಲ. ಇಬ್ಬರು ಈಗ ಬದ್ಧ ವೈರಿಗಳ ರೀತಿ ವರ್ತಿಸುತ್ತಿದ್ದಾರೆ.

ಅದರಲ್ಲೂ ದರ್ಶನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮಿಬ್ಬರ ನಡುವೆ ಏನು ಇಲ್ಲ ಇಬ್ಬರು ಒಂದೇ ಇಂಡಸ್ಟ್ರಿಯ ನಾಯಕರು ಅಷ್ಟೇ ಎಂದು ಹೇಳುವ ಮೂಲಕ ಸುದೀಪ್ ಅವರು ತನಗೆ ಏನೇನು ಅಲ್ಲ ಎಂದು ಹೇಳಿಬಿಟ್ಟಿದ್ದಾರೆ. ಇದರ ನಡುವೆ ಸ್ಟಾರ್ ವಾರ್ ಕೂಡ ತಾರಕಕ್ಕೇರಿ ಇಬ್ಬರ ನಡುವೆ ಬಾಂಧವ್ಯ ಬೆಸೆಯ ಬೇಕಾಗಿದ್ದ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಇಬ್ಬರ ನಡುವೆ ದ್ವೇಷ ಹೆಚ್ಚಾಗುವ ರೀತಿ ಕೆಲಸ ಮಾಡುತ್ತಿದ್ದಾರೆ. ಈ ಬೇಸರ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅಂಬಿ ಏರ್ಪಡಿಸಿದ್ದ ಒಂದು ಔತಣಕೂಟದಲ್ಲಿ ಪಕ್ಕಪಕ್ಕದಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡಿ ನಂತರ ಇಬ್ಬರು ಒಟ್ಟಿಗೆ ದರ್ಶನ್ ಅವರಿಗೆ ಅವರ ಪತ್ನಿ ಗಿಫ್ಟ್ ಕೊಟ್ಟಿದ್ದ ಜಾಗ್ವಾರ್ ಕಾರಿನಲ್ಲಿ ತೆರಳಿದ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ನೀವು ಡಿ ಬಾಸ್ ಮತ್ತೆ ಕಿಚ್ಚ ಬಾಸ್ ಒಂದಾಗುವುದನ್ನು ಬಯಸುವುದಾದರೆ ಕಾಮೆಂಟ್ ಮಾಡಿ.

ಹಬ್ಬದ ದಿನವೇ ಶುಭ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ.

ಕನ್ನಡ ಚಿತ್ರರಂಗದ ಮೋಹಕ ತಾರೆ ಎಂದು ಕರೆಸಿಕೊಂಡಿರುವ ಹಲವು ವರ್ಷಗಳ ವರೆಗೆ ಚಂದನವನವನ್ನು ಆಳಿದ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸೇರಿ ಸಿನಿಮಾ ರಂಗದ ಪದ್ಮಾವತಿ ಎಂದು ಕರೆಸಿಕೊಂಡಿರುವ ರಮ್ಯ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಅವರು ಮಂಡ್ಯ ಕ್ಷೇತ್ರದಲ್ಲಿ ತಮ್ಮಿಂದ ಆದಷ್ಟು ಜನಸೇವೆ ಮಾಡುತ್ತಾ ಎಲ್ಲಾ ರಾಜಕೀಯ ನಾಯಕರುಗಳಿಗೆ ಮಾದರಿ ಆಗಿ ಕೆಲಸ ಮಾಡಿ ತೋರಿಸಿದ್ದರು. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಮೊದಲಿನಿಂದ ಬಹಳ ಆಗಿರುವ ರಮ್ಯಾ ಅವರು ತಮ್ಮ ವೈಯಕ್ತಿಕ ಬದುಕು ಅಥವಾ ರಾಜಕೀಯ ಅಥವಾ ಯಾವುದೇ ಪ್ರಮುಖ ಆಗುಹೋಗುಗಳ ಬಗ್ಗೆ ಮತ್ತು ಸಿನಿಮಾ ಸಂಬಂಧಿತ ವಿಷಯಗಳ ಬಗ್ಗೆ ಕೂಡ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ರಮ್ಯಾ ಅವರನ್ನು ರಾಜಕೀಯಕ್ಕಿಂತ ಅಭಿಮಾನಿಗಳು ಸಿನಿಮಾ ರಂಗದಲ್ಲಿ ಹೆಚ್ಚಾಗಿ ನೋಡಲು ಆಸೆಪಡುತ್ತಾರೆ. ರಮ್ಯಾ ಅವರನ್ನು ಯಾವಾಗಲೂ ಅಭಿಮಾನಿಗಳು ಯಾವಾಗ ಕಮ್ ಬ್ಯಾಕ್ ಮಾಡುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿರುತ್ತಾರೆ. ಅಲ್ಲದೇ ಈಗಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಮ್ಯಾ ಅವರಿಗೆ ಬಹಳ ಬೇಡಿಕೆ ಇದೆ. ಕನ್ನಡದಲ್ಲಿ ಅಭಿ ಎಸ್‌ಎಸ್‌ಎಲ್‌ಸಿ ಮುಸ್ಸಂಜೆ ಮಾತು ದತ್ತ ಸಂಜು ವೆಡ್ಸ್ ಗೀತಾ ಲಕ್ಕಿ ಮುಂತಾದ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿರುವ ರಮ್ಯಾ ಅವರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಪುನೀತ್ ರಾಜಕುಮಾರ್ ಶಿವಣ್ಣ ಉಪೇಂದ್ರ ಯಶ್ ಗಣೇಶ್ ದರ್ಶನ್ ಸುದೀಪ್ ಹೀಗೆ ಕನ್ನಡದ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿರುವ ರಮ್ಯ ಅವರು ಕಥೆಯ ಆಯ್ಕೆ ವಿಚಾರದಲ್ಲಿ ಬಹಳ ಚ್ಯೂಸಿ ಆಗಿದ್ದಾರೆ.

ಹಾಗಾಗಿ ಅಭಿಮಾನಿಗಳಿಗೆ ಒಳ್ಳೆ ಕಥೆ ಸಿಕ್ಕಾಗ ಖಂಡಿತ ಅಭಿನಯಿಸುತ್ತೇನೆ ಎಂದು ಹೇಳುತ್ತಾ ಬರುತ್ತಿದ್ದರು ಇದೀಗ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ. ಅಭಿಮಾನಿಗಳಿಗೆ ಸಂತಸ ಸುದ್ದಿಯನ್ನು ನೀಡಿದ್ದಾರೆ ರಮ್ಯಾ ಅವರು ಮಾಡಿರುವ ಪೋಸ್ಟ್ ನಲ್ಲಿ ತಮ್ಮ ಕಂಬ್ಯಾಕ್ ಬಗ್ಗೆ ಅಭಿಮಾನಿಗಳ ಜೊತೆ ವಿಷಯ ಹಂಚಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರೊಂದಿಗೆ ಕಂಬ್ಯಾಕ್ ಮಾಡಬೇಕು ಎನ್ನುವುದು ರಮ್ಯಾ ಅವರ ಆಸೆ ಆಗಿತ್ತು ಅದಕ್ಕಾಗಿ ಜೇಮ್ಸ್ ಸಿನಿಮಾವನ್ನು ಕೂಡ ಆಫರ್ ಮಾಡಿದ್ದರು ಆದರೆ ಕಥೆ ಇಷ್ಟವಾದ ಕಾರಣ ಸಿನಿಮಾ ಒಪ್ಪಿಕೊಳ್ಳದೆ ರಮ್ಯಾ ಅವರು ರಿಜೆಕ್ಟ್ ಮಾಡಿದ್ದರು. ಆದರೆ ಈ ಬಾರಿ ರಮ್ಯಾ ಅವರು ನಟಿಯಾಗಿ ಅಲ್ಲದೆ ನಿರ್ಮಾಪಕ್ಕೆ ಆಗಿ ಸಿನಿಮಾ ರಂಗದ ಕಡೆ ಮತ್ತೆ ಮುಖ ಮಾಡಿದ್ದಾರೆ.

ಆಪಲ್ ಬಾಕ್ಸ್ ಎನ್ನುವ ಸಂಸ್ಥೆಯ ನಿರ್ಮಾಪಕಿ ಆಗಿ ಚಿತ್ರರಂಗಕ್ಕೆ ಹಿಂದಿರುಗಲಿದ್ದಾರೆ ಈಗಾಗಲೇ ಸಂಸ್ಥೆಯ ಕಡೆಯಿಂದ ಎರಡು ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಒಂದು ಓಟಿಟಿ ಪ್ಲಾಟ್ ಫಾರ್ಮ್ ಅಲ್ಲಿ ಕೂಡ ರಿಲೀಸ್ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ಹಂಚಿಕೊಂಡಿರುವ ಇವರು ಇದುವರೆಗೆ ನನಗೆ ಸಹಾಯ ಮಾಡಿದ ಸಿನಿಮಾರಂಗದ ಎಲ್ಲಾ ವಿಶೇಷ ವತ್ತಿಗಳಿಗೆ ಧನ್ಯವಾದಗಳು ಎಂದು ಹೇಳಿ ಮತ್ತು ಸಿನಿಮಾ ರಂಗದಲ್ಲಿ ಇಷ್ಟು ದಿನ ಇರಲು ಕಾರಣರಾದ ಎಲ್ಲಾ ಅಭಿಮಾನಿಗಳಿಗೂ ಕೂಡ ಹೃದಯಪೂರ್ವಕವಾಗಿ ಧನ್ಯವಾದಗಳು ಎನ್ನುತ್ತಾ ಇಷ್ಟು ದಿನ ಆಶೀರ್ವದಿಸಿದ್ದೀರಾ ಇನ್ನು ಮುಂದಿನ ಪ್ರಾಜೆಕ್ಟ್ ಗಳ ಮೇಲೂ ಕೂಡ ನಿಮ್ಮ ಪ್ರೀತಿ ಹಾರೈಕೆ ಇರಲಿ ಎಂದು ನಟಿ ರಮ್ಯ ಕೇಳಿಕೊಂಡಿದ್ದಾರೆ.