Home Blog Page 323

ಈ ನಾಲ್ವರಲ್ಲಿ ಅತಿ ಉದ್ದದ ಹೆಸರಿನ ರಸ್ತೆಯನ್ನು ಹೊಂದಿರುವ ಏಕೈಕ ನಟ ಯಾರು ಗೊತ್ತಾ.?

ಸಿನಿ ಬದುಕು ಎಂಬುವುದು ಒಂದು ಬಣ್ಣದ ಬದುಕು ಅಂತಾನೇ ಹೇಳಬಹುದು ಈ ಒಂದು ಚಿತ್ರರಂಗಕ್ಕೆ ಕಾಲಿಡುವುದು ಸುಲಭವಾದ ಮಾತಲ್ಲ ಇನ್ನು ಕೆಲವರು ಅದೃಷ್ಟದಿಂದಲೋ ಅಥವಾ ಕೆಲವರ ಇನ್ಫ್ಲುಯೆನ್ಸ್ ಇಂದರೋ ಕಾಲಿಡುತ್ತಾರೆ. ಆದರೆ ಕಾಲಿಟ್ಟವರು ಸದಾ ಕಾಲ ಅಲ್ಲೇ ಉಳಿಯುವುದಕ್ಕೆ ಸಾಧ್ಯವಿಲ್ಲ ಸ್ವಂತ ಪರಿಶ್ರಮ ಯಶಸ್ಸು ಮತ್ತು ಅಭಿಮಾನಿಗಳನ್ನು ಪಡೆದಿರುವಂತವರು ಮಾತ್ರ ಕೊನೆಯವರೆಗೂ ಕೂಡ ಸಿನಿಮಾ ರಂಗದಲ್ಲಿ ಉಳಿಯುವುದಕ್ಕೆ ಸಾಧ್ಯ. ಇನ್ನೂ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಎಲ್ಲರಿಗೂ ಕೂಡ ಒಂದೇ ರೀತಿಯಾದಂತಹ ಗೌರವ ಸ್ಥಾನ ಮಾನ ಎಂಬುದು ದೊರೆಯುವುದಿಲ್ಲ ಕೆಲವು ನಟರಿಗೆ ಗೌರವ ಸ್ಥಾನಮಾನ ದೊರೆತರೆ ಇನ್ನೂ ಕೆಲವು ನಟರಿಗೆ ಇದು ಯಾವುದು ಕೂಡ ದೊರೆಯುವುದಿಲ್ಲ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮಲ್ಲಿ ಸಾಕಷ್ಟು ರಸ್ತೆಗಳಿಗೆ ನಟರ ಹೆಸರನ್ನು ಸೂಚಿಸುವುದನ್ನು ನಾವು ನೋಡಬಹುದು ಇದಕ್ಕೆ ಮುಖ್ಯ ಕಾರಣ ಕೆಲವು ನಟರು ನಮ್ಮನ್ನು ಬಿಟ್ಟು ಶಾರೀರಿಕವಾಗಿ ದೂರ ಆಗಿರುತ್ತಾರೆ. ಅವರು ಮಾಡಿರುವಂತಹ ಸಾಧನೆ ಮತ್ತು ಅವರು ಚಿತ್ರರಂಗಕ್ಕೆ ನೀಡಿರುವಂತಹ ಕೊಡುಗೆಯನ್ನು ಸ್ಮರಣೆ ಮಾಡುವುದಕ್ಕಾಗಿ ಕೆಲವು ನಟರ ಹೆಸರನ್ನು ರಸ್ತೆಗಳಿಗೆ ಇಡುವುದನ್ನು ನಾವು ಕಾಣಬಹುದಾಗಿದೆ. ಈಗಾಗಲೇ ಹಲವಾರು ರಸ್ತೆಗಳಿಗೆ ಡಾಕ್ಟರ್ ರಾಜಕುಮಾರ್ ಡಾಕ್ಟರ್, ವಿಷ್ಣುವರ್ಧನ್ ರಸ್ತೆ ಡಾಕ್ಟರ್, ಪುನೀತ್ ರಾಜಕುಮಾರ್ ರಸ್ತೆ ತೂಗುದೀಪ ಶ್ರೀನಿವಾಸ ರಸ್ತೆ , ಶಂಕರ್ ನಾಗ್ ರಸ್ತೆ ಹೀಗೆ ಹಲವಾರು ನಾಯಕ ನಟರ ಹೆಸರನ್ನು ರಸ್ತೆಗೆ ಸೂಚಿಸಲಾಗಿದೆ. ಹಾಗಾಗಿ ಈ ಎಲ್ಲಾ ನಾಯಕ ನಟರ ಪೈಕಿ ಅತಿ ಹೆಚ್ಚು ಉದ್ದದ ರಸ್ತೆಯನ್ನು ಹೊಂದಿರುವಂತಹ ಏಕೈಕ ನಟ ಯಾರು ಎಂಬುದನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.

ಮೊದಲನೆಯದಾಗಿ ಚಂದನವನದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಉದ್ದದ ರಸ್ತೆ ಇದೆ ಈ ಮೈಸೂರು ರಸ್ತೆ ನಾಯಂಡಳ್ಳಿ ಜಂಕ್ಷನ್ ನಿಂದ  ಹಿಡಿದು ಬನ್ನೇರುಘಟ್ಟ ರಸ್ತೆಯ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಹೆಸರು ಇಡಲಾಗಿದೆ. ಇನ್ನು 12 ಕಿಲೋಮೀಟರ್ ಇರುವ ರಸ್ತೆ ಇದಾಗಿದ್ದು ನಿಜಕ್ಕೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಅದೇ ರೀತಿ ಇದು ಕನ್ನಡ ನಟನ ಹೆಸರಿನಲ್ಲಿರುವ ಉದ್ದದ ರಸ್ತೆ ಇದಾಗಿದೆ. ಎರಡನೆಯದಾಗಿ ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಹೆಸರನ್ನು ಸಾಕಷ್ಟು ರಸ್ತೆಗಳಿಗೆ ಇಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸಾಕಷ್ಟು ರಸ್ತೆಗಳು ರಾಜಕುಮಾರ್ ಅವರ ಹೆಸರಿನಲ್ಲಿದೆ, ಅದರಲ್ಲಿ ಬಹಳ ಮುಖ್ಯವಾಗಿ ರಾಜಾಜಿನಗರದ ಡಾಕ್ಟರ್ ರಾಜಕುಮಾರ್ ಜನಪ್ರಿಯವಾಗಿದೆ ಅದರ ಜೊತೆಗೆ ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲೂ ಕೂಡ ಹಲವಾರು ರಸ್ತೆಗಳಿವೆ.

ಅವರ ಹೆಸರನ್ನು ಕೂಡ ಅನೇಕ ರಸ್ತೆಗಳಿಗೆ ಇಡಲಾಗಿದೆ. ಅದಲ್ಲದೆ, ಸಿನಿಮಾರಂಗಕ್ಕೆ ಅವರು ನೀಡಿದ ಕೊಡುಗೆ ನೀಡಿದ್ದಾರೆ ಪಾರ್ವತಮ್ಮ ರಾಜ್ ಕುಮಾರ್ ಹೀಗಾಗಿ ದೊಡ್ಮನೆ ಕುಟುಂಬದ ಸೊಸೆಯ ಹೆಸರನ್ನು ರಸ್ತೆಗಳಿಗೆ ಇಡಲಾಗಿರುವುದು ವಿಶೇಷ. ಇನ್ನು ಡಾಕ್ಟರ್ ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ದೊಡ್ಡ ದಾಖಲೆಯ ರಸ್ತೆಯಾಗಿದೆ. ಅಂದಹಾಗೆ, ವಿಷ್ಣುವರ್ಧನ್ ಅವರ ಹೆಸರಿನಲ್ಲಿರುವ ರಸ್ತೆ ಬಹಳ ಉದ್ದದ ರಸ್ತೆ ಆಗಿದೆ. ಆ ರಸ್ತೆಯೂ 14.5 ಕಿಲೋಮೀಟರ್ ಉದ್ದ ಇರುವ ಬನಶಂಕರಿಯಿಂದ ಹಿಡಿದು ಕೆಂಗೇರಿವರೆಗೂ ಇರುವ ರಸ್ತೆಗೆ ಡಾಕ್ಟರ್ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಇದು ಕನ್ನಡ ನಟನಾ ಹೆಸರಿನಲ್ಲಿರುವ ಅತಿ ಉದ್ದದ ರಸ್ತೆ ಎಂದು ಖ್ಯಾತಿ ಗಳಿಸಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ವಿಷ್ಣುವರ್ಧನ್ ಅವರು ತುಂಬಾ ಸರಳ ವ್ಯಕ್ತಿ ಅಷ್ಟೇ ಅಲ್ಲದೆ ಮೃದು ಸ್ವಭಾವದವರು ಸಹಜ ವ್ಯಕ್ತಿತ್ವವನ್ನು ಹೊಂದಿರುವವರು ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?

ರವಿಚಂದ್ರನ್ ಹಾಗೂ ಹಂಸಲೇಖ ಅವರ ಸ್ನೇಹ ಎಂತಹದ್ದು ಅಂತ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಏಕೆಂದರೆ ಇಬ್ಬರೂ ಕೂಡ ಒಂದೇ ಕಾಲಘಟ್ಟದಲ್ಲಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದವರು. ಪ್ರೇಮಲೋಕ ಎಂಬ ಸಿನಿಮಾದಿಂದ ರವಿಚಂದ್ರನ್ ಅವರು ನಾಯಕ ನಟರಾಗಿ ಹೊರಹೊಮ್ಮಿದರೆ ಅದೇ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಹಂಸಲೇಖಾ ಅವರು ಕೂಡ ಹೊರಹೊಮ್ಮುತ್ತಾರೆ. ಹಂಸಲೇಖ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಆಗಬೇಕು ಎಂಬ ಆಸೆ ಕನಸು ಇರುತ್ತದೆ ಅದಕ್ಕೆ ಸಕಲ ತಯಾರಿಯನ್ನು ಕೂಡ ಮಾಡಿಕೊಂಡಿರುತ್ತಾರೆ. ಆದರೆ ಹಂಸಲೇಖ ಅವರಿಗೆ ಯಾರೂ ಕೂಡ ಅವಕಾಶವನ್ನು ನೀಡುವುದಿಲ್ಲ ಆ ಸಮಯದಲ್ಲಿ ರವಿಚಂದ್ರನ್ ಅವರ ಕಣ್ಣಿಗೆ ಬಿದ್ದ ವ್ಯಕ್ತಿ ಹಂಸಲೇಖ ರವಿಚಂದ್ರನವರು ತಮ್ಮ ಸಿನಿಮಾಗೆ ಹಂಸಲೇಖ ಅವರನ್ನು ಹಾಕಿಕೊಳ್ಳಬೇಕು ಇವರಿಂದ ಸಂಗೀತ ನಿರ್ದೇಶನವನ್ನು ಮಾಡಿಸಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ.

ಇವರು ಕೂಡ ಒಂದೇ ಕಾಲಘಟ್ಟದವರಾಗಿದ್ದರಿಂದ ಯಶಸ್ಸು ಎಂಬುದನ್ನು ಇವರು ಕೂಡ ಬಯಸುತ್ತಾರೆ ಅಷ್ಟೇ ಅಲ್ಲದೆ ಪ್ರಾರಂಭದ ದಿನದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಇಬ್ಬರೂ ಕೂಡ ಕಠಿಣ ಪರಿಶ್ರಮವನ್ನು ವಹಿಸಿ ಪ್ರೇಮಲೋಕ ಎಂಬ ಒಂದು ಮ್ಯೂಸಿಕ್ ಸಿನಿಮಾವನ್ನು ತಯಾರಿ ಮಾಡುತ್ತಾರೆ. ಈ ಸಿನಿಮಾದಲ್ಲಿ ಬರೋಬ್ಬರಿ 11 ಹಾಡುಗಳು ಇರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಈ ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಪ್ರೇಮಲೋಕ ಸಿನಿಮಾದಿಂದ ಆರಂಭವಾದ ಇವರ ಜರ್ನಿ ಸುಮಾರು ದಶಕಗಳವರೆಗೂ ಕೂಡ ಮುಂದುವರೆಯುತ್ತದೆ. ರವಿಚಂದ್ರನ್ ಸಿನಿಮಾ ಅಂದರೆ ಅಲ್ಲಿ ಹಂಸಲೇಖ ಅವರು ಹಾಡು ಇದ್ದೇ ಇರುತ್ತದೆ ಇಬ್ಬರು ಕೂಡ ಬಹಳ ಆತ್ಮೀಯ ಸ್ನೇಹಿತರಾಗಿ ಹೊರಹೊಮ್ಮುತ್ತಾರೆ. ಹಂಸಲೇಖ ಇಲ್ಲದೆ ರವಿಚಂದ್ರನ್ ರವಿಚಂದ್ರನ್ ಇಲ್ಲದೆ ಹಂಸಲೇಖ ಸಿನಿಮಾವನ್ನು ಮಾಡುತ್ತಲೇ ಇರಲಿಲ್ಲ ಅಷ್ಟೊಂದು ಅವಿನಾಭವನ ಸಂಬಂಧವನ್ನು ಒಳಗೊಂಡಿದ್ದರು.

ಆದರೆ ಕೆಲವು ವರ್ಷಗಳಿಂದ ಹಂಸಲೇಖ ಮತ್ತು ರವಿಚಂದ್ರನ್ ಇಬ್ಬರೂ ಕೂಡ ಬೇರೆಯಾಗಿದ್ದಾರೆ ಇವರಿಬ್ಬರ ನಡುವೆ ವೈ ಮನಸು ಇದೆ ಸರಿಯಾಗಿ ಮಾತನಾಡುವುದಿಲ್ಲ ಎಂಬ ವದಂತಿಗಳು ಕೇಳಿ ಬರುತ್ತಿತ್ತು. ಇದಕ್ಕೆ ಸ್ಪಷ್ಟನೇ ನೀಡಿದಂತಹ ರವಿಚಂದ್ರನ್ ಯಾರಿಗೂ ತಿಳಿಯದ ಒಂದು ರೋಚಕ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ‌. ಹೌದು ಕೆಲವು ಕಾರಣಾಂತರಗಳಿಂದ ಚಿಕ್ಕಪುಟ್ಟ ವಿಚಾರಗಳಿಗೂ ಹಂಸಲೇಖ ಮತ್ತು ರವಿಚಂದ್ರನ್ ಅವರ ನಡುವೆ ಮನಸ್ತಾಪ ಇತ್ತಂತೆ. ಇವೆಲ್ಲವೂ ಕೂಡ ಬೆಳೆದು ದೊಡ್ಡದಾಗಿ ಕೆಲವು ವರ್ಷಗಳ ಕಾಲ ಅವರಿಬ್ಬರೂ ಭೇಟಿಯೇ ಆಗಿಲ್ಲ ಹಾಗೂ ಒಟ್ಟಾಗಿ ಸಿನಿಮಾ ಕೂಡ ಮಾಡಿಲ್ಲ. ಇದೇ ಸಮಯದಲ್ಲಿ ರವಿಚಂದ್ರನ್ ಅಭಿನಯದ ಮಲ್ಲ, ಯಾರೇ ನೀನು ಚೆಲುವೆ, ಕನಸುಗಾರ ಇನ್ನಿತರ ಸಿನಿಮಾಗಳು ತೆರೆ ಕಾಣುತ್ತದೆ.

ರವಿಚಂದ್ರನ್ ಅವರು ಈ ಸಮಯದಲ್ಲಿ ತುಂಬಾನೇ ಆರ್ಥಿಕ ಮುಗ್ಗಟ್ಟನು ಎದುರಿಸಬೇಕಾಗುತ್ತದೆ ಆದರೂ ಕೂಡ ರಾಕ್ ಲೈನ್ ವೆಂಕಟೇಶ್ ಅವರ ಪ್ರೊಡಕ್ಷನ್ ನಲ್ಲಿ ಮೂಡಿಬಂದಂತಹ ಯಾರೇ ನೀನು ಚೆಲುವೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅಡ್ವಾನ್ಸ್ ಪಡೆದಿರುತ್ತಾರೆ. ಈ ಸಮಯದಲ್ಲಿ ಹಂಸಲೇಖ ಅವರ ಬಳಿಯಿಂದ ಮ್ಯೂಸಿಕ್ ಮಾಡಿಸಿ ಕೊಳ್ಳೋಣ ಅಂತ ರವಿಚಂದ್ರನ್ ಅವರು ಸಲಹೆ ನೀಡುತ್ತಾರೆ. ಆದರೆ ರಾಕ್ಲೈನ್ ವೆಂಕಟೇಶ್ ಅವರು ಮಾತ್ರ ಅವರಿಂದ ಬೇಡ ಮನೋಹರ್ ಅವರಿಂದ ಸಂಗೀತ ಸಂಯೋಜನೆ ಮಾಡಿಸಿ ಕೊಳ್ಳೋಣ ಅಂತ ಹೇಳುತ್ತಾರೆ. ರವಿಚಂದ್ರನ್ ಅವರು ಹಂಸಲೇಖ ಅವರಿಂದಲೇ ಮಾಡಿಸಿ ಕೊಳ್ಳೋಣ ಎಂದು ಹೇಳಿದಾಗ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಬಿಡೋಣ ಬಿಡಿ ನಾನು ಅವರ ಬಳಿ ಮಾತನಾಡುವುದಿಲ್ಲ ಅಂತ ಹೇಳುತ್ತಾರೆ. ಆ ಸಮಯದಲ್ಲಿ ರವಿಚಂದ್ರನ್ ಅವರ ಖುದ್ದಾಗಿ ಹೋಗಿ ಹಂಸಲೇಖ ಅವರನ್ನು ಭೇಟಿ ಮಾಡಿ ಹಾಡುಗಳನ್ನು ಸಂಯೋಜನೆ ಮಾಡಿಸಿಕೊಳ್ಳುತ್ತಾರೆ.

ಈ ಸಮಯದಲ್ಲಿ ಯಾರೆ ನೀನು ಚೆಲುವೆ ಎಂಬ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಹಿಟ್ ಆಗುತ್ತದೆ ಅಷ್ಟೇ ಅಲ್ಲದೆ ಒಳ್ಳೆಯ ಕಲೆಕ್ಷನ್ ಅನ್ನು ಕೂಡ ಮಾಡುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ರವಿಚಂದ್ರನ್ ನವರು ಹೊರಬರುವ ಚಿತ್ರತಂಡದವರು ಈ ಒಂದು ಸಿನಿಮಾದ ಸಕ್ಸಸ್ ಪಾರ್ಟಿಯನ್ನು ಏರ್ಪಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಇದರ ಜೊತೆಗೆ ಒಂದು ಇನ್ವಿಟೇಶನ್ ಸಿದ್ಧಪಡಿಸಬೇಕು ಅಂತ ಹೇಳಿದಾಗ ರಾಕ್ ಲೈನ್ ವೆಂಕಟೇಶ್ ಅವರಿಗೆ ಇದರ ಬಗ್ಗೆ ಹೆಚ್ಚಾಗಿ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ರವಿಚಂದ್ರನ್ ಅವರನ್ನು ಖುದ್ದಾಗಿ ಭೇಟಿ ನೀಡಿ ನೀವೇ ಈ ಒಂದು ಇನ್ವಿಟೇಶನ್ ಡಿಸೈನ್ ಮಾಡಿಸಿ ಅಂತ ಹೇಳುತ್ತಾರೆ. ಆ ಸಮಯದಲ್ಲಿ ಇನ್ವಿಟೇಶನ್ ಬಗ್ಗೆ ಎಲ್ಲವನ್ನು ಕೂಡ ಹಾಕಿಕೊಡುತ್ತಾರೆ ಆದರೆ ಇನ್ವಿಟೇಶನ್ ಮಾಡುವಂತಹ ವ್ಯಕ್ತಿ ಹಂಸಲೇಖ ಅವರ ಹೆಸರನ್ನು ಬರೆಯುವುದನ್ನು ಮರೆತಿರುತ್ತಾರೆ. ಈ ಇನ್ವಿಟೇಶನ್ ನೋಡಿದಂತಹ ಹಂಸಲೇಖ ಅವರಿಗೆ ಬೇಸರವಾಗುತ್ತದೆ ಅಲ್ಲಿಂದ ಇವರಿಬ್ಬರ ನಡುವೆ ಇರಿಸಿ ಮುರಿಸು ಪ್ರಾರಂಭವಾಗುತ್ತದೆ.

ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದಂತಹ ರವಿಚಂದ್ರನ್ ಹಾಗೂ ಹಂಸಲೇಖಾ ಅವರು ಕಾಲ ಕಳೆದಂತೆ ಇಬ್ಬರು ಕೂಡ ದೂರ ಆಗುವುದಕ್ಕೆ ಪ್ರಾರಂಭವಾಗುತ್ತಾರೆ ಇಂತಹ ಚಿಕ್ಕಪುಟ್ಟ ವಿಚಾರಗಳಿಗೂ ಕೂಡ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದರೆ ಆತ ಏನು ಕೆಲಸ ಮಾಡಿದರು ಕೂಡ ನಮಗೆ ಒಳ್ಳೆಯದಾಗಿಯೇ ಕಾಣುತ್ತದೆ. ಅದೇ ರೀತಿ ಆ ವ್ಯಕ್ತಿಯ ಬಗ್ಗೆ ನಮ್ಮ ಮೇಲೆ ಕೆಟ್ಟ ಅಭಿಪ್ರಾಯ ಒಂದು ಬಾರಿ ಬಂದರೆ ಆತ ಏನೇ ಒಳ್ಳೆ ಕೆಲಸ ಮಾಡಿದರು ಕೂಡ ಅದು ನಮಗೆ ತಪ್ಪಾಗಿಯೇ ಕಾಣುತ್ತದೆ. ಹಾಗೆಯೇ ರವಿಚಂದ್ರನ್ ಅವರು ಯಾವುದೇ ಕೆಲಸ ಮಾಡಿದರು ಏನೇ ಮಾತನಾಡಿದರು ಕೂಡ ಅವೆಲ್ಲವೂ ಹಂಸಲೇಖ ಅವರ ಕಣ್ಣಿಗೆ ತಪ್ಪಾಗಿಯೇ ಕಾಣುತ್ತದೆ. ಇವರಿಬ್ಬರ ನಡುವೆ ಇದ್ದಂತಹ ಒಡನಾಟ ಹಾಗೂ ಅರ್ಥ ಮಾಡಿಕೊಳ್ಳುವಂತಹ ಗುಣ ಕಾಲ ಕಳೆದಂತ ಮಾಯವಾಗುತ್ತದೆ. ಈ ಕಾರಣದಿಂದಾಗಿಯೇ ರವಿಚಂದ್ರನ್ ಕೂಡ ದೂರ ಇರುವುದು ಈ ವಿಚಾರದ ಬಗ್ಗೆ ಸ್ವತಹ ರವಿಚಂದ್ರನ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವಿಡಿಯೋ ಈ ಕೆಳಕಂಡಂತೆ ಇದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

ನಾನು ಪುನೀತ್ ಅಣ್ಣ ಮತ್ತು ಶಿವಣ್ಣನ ಅಭಿಮಾನಿ ಅಂತಾನೇ ಸೋಶಿಯಲ್ ಮೀಡಿಯಾದಲ್ಲಿ ಬರ್ತಡೇ ಹಾಡುಗಳನ್ನು ಹಾಡುವುದರ ಮೂಲಕ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ನಿಮ್ಮೆಲ್ಲರಿಗೂ ಗೊತ್ತೇ ಇದ್ದಾರೆ. ಕಳೆದ ನಾಲ್ಕು ಐದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರು ಕೂಡ ಗುರುತು ಹಿಡಿಯುತ್ತಿರಲಿಲ್ಲ. ಆದರೆ ಈಗ ಕಾಫಿನಾಡು ಚಂದು ಅಂದರೆ ಸಾಕು, ಹುಟ್ಟು ಹಬ್ಬದ ಹಾಡುವುದಕ್ಕೆ ಫೇಮಸ್ ಅಂತಾನೆ ಹೇಳುತ್ತಾರೆ ಅಷ್ಟೇ ಅಲ್ಲದೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ. ಹೌದು ಕಾಫಿ ನಾಡು ಚಂದು ಅವರ ಬಳಿ ಹಾಡನ್ನು ಹೇಳಿಸಬೇಕು ಅಂತ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಇರುತ್ತಾರೆ.

ಇನ್ನು ಕಾಫಿನಾಡು ಚಂದು ಅವರು ಮಾತ್ರ ಯಾವುದೇ ವಿಡಿಯೋ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಕ್ಕಿಂತ ಮುಂಚೆ ನಾನು ಶಿವಣ್ಣ ಮತ್ತು ಪುನೀತ್ ಅಣ್ಣ ಅವರ ಅಭಿಮಾನಿ ಅಂತ ಹೇಳಿಕೊಳ್ಳುವುದನ್ನು ನೀವು ಕೇಳೇ ಇರುತ್ತೀರ. ಈ ಕಾರಣಕ್ಕಾಗಿ ಕಾಫಿ ನಾಡು ಚಂದು ಅವರು ಅನುಶ್ರೀ ಅವರ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದರು ಹೇಗಾದರೂ ಮಾಡಿ ನನ್ನನ್ನು ಒಂದು ಬಾರಿ ಶಿವಣ್ಣ ಅವರ ಬಳಿಗೆ ಕರೆದುಕೊಂಡು ಹೋಗಿ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು. ಹೌದು ಅನುಶ್ರೀ ಅವರಿಗಾಗಿ ಕಾಫಿ ನಾಡು ಚಂದು ಅವರು ಹೊಸದಾದಂತಹ ಹಾಡೋದನ್ನು ಸೃಷ್ಟಿ ಮಾಡಿದರು ಈ ಹಾಡನ್ನು ಅವರಿಗೆ ಅರ್ಪಿಸಿದರು.

ಈ ಹಾಡನ್ನು ಕೇಳಿ ಫಿದಾ ಆದಂತಹ ಅನುಶ್ರೀ ಅವರು ಕಾಫಿ ನಾಡು ಚಂದು ಅವರ ಧ್ವನಿಗೆ ಹಾಗೂ ಅವರ ಟ್ಯಾಲೆಂಟ್ ಗೆ ಮಾರು ಹೋಗಿದ್ದರು‌. ಈ ಸಮಯದಲ್ಲಿ ಕಾಫಿ ನಾಡು ಚಂದು ಅವರಿಗೆ ಮೆಸೇಜ್ ಮಾಡಿದಂತಹ ಅನುಶ್ರೀ ಅವರು ಧನ್ಯವಾದವನ್ನು ಹೇಳಿದರು. ಆ ಸಮಯದಲ್ಲಿ ಕಾಫಿ ನಾಡು ಚಂದು ಅವರು ನನ್ನನ್ನು ಒಂದು ಬಾರಿ ಶಿವಣ್ಣ ಅವರ ಮನೆಗೆ ಕರೆದುಕೊಂಡು ಹೋಗಿ ಅಥವಾ ಶಿವಣ್ಣ ಅವರನ್ನು ಹೇಗಾದರೂ ಮಾಡಿ ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದರು. ಕಾಫಿ ನಾಡು ಚಂದು ಅವರ ಬಹುದಿನದ ಆಸೆ ಕನಸು ಇದೀಗ ನೆರವೇರಿದೆ ಅಂತಾನೇ ಹೇಳಬಹುದು ಹೌದು ನಿನ್ನೆ ಎಷ್ಟೇ ಕಾಫಿನಾಡು ಚಂದು ಅನುಶ್ರೀ ಅವರನ್ನು ಭೇಟಿಯಾಗಿದ್ದಾರೆ.

ಈ ಹಾಡನ್ನು ಸ್ವತಃ ಕಾಫಿ ನಾಡು ಚಂದು ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೀಗ ಶಿವಣ್ಣ ಅವರನ್ನು ಭೇಟಿಯಾಗಿರುವಂತಹ ವಿಡಿಯೋ ಮತ್ತು ಫೋಟೋಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರು ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಅನುಶ್ರೀ ಅವರು ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದು ನಿಮಗೆ ತಿಳಿದೇ ಇದೆ.

ಹಾಗಾಗಿ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಗೆ ಕಾಫಿ ನಾಡು ಚಂದು ಅವರನ್ನು ಅನುಶ್ರೀ ಅವರು ಕರೆದುಕೊಂಡು ಹೋಗಿದ್ದಾರೆ ಈ ಸಮಯದಲ್ಲಿ ಕಾಫಿ ನಾಡು ಚಂದು ಅವರು ಶಿವಣ್ಣನವರನ್ನು ನೋಡಿ ಭಾವುಕರಾಗಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಅಭಿಮಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಶಿವಣ್ಣಗಾಗಿ ವಿಶೇಷ ಹಾಡುವುದನ್ನು ರಚಿಸಿ ಅದನ್ನು ವೇದಿಕೆಯ ಮೇಲೆ ಹಾಡಿದರೆ ಈ ಹಾಡನ್ನು ಕೇಳಿದಂತಹ ಶಿವಣ್ಣ ಅವರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾತ್ರೋರಾತ್ರಿ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಕಾಫಿ ನಾಡು ಚಂದು ಅವರು ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಯಾಕೋ ಒಟಿಟಿಯಲ್ಲಿ ಇವರು ಸೆಲೆಕ್ಟ್ ಆಗಿಲ್ಲ ಹಾಗಾಗಿ ಈ ಬಾರಿ 9ನೇ ಆವೃತ್ತಿಯಲ್ಲಾದರೂ ಕೂಡ ಭಾಗವಹಿಸಬಹುದು ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಪರಸ್ಪರ ಒಬ್ಬರನ್ನೊಬ್ಬರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಇನ್ನು ಮೇಘನಾ ರಾಜ್ ಅವರು ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಚಿರಂಜೀವಿ ಸರ್ಜಾ ಅವರು ಹಿಂದೂ ಕುಟುಂಬಕ್ಕೆ ಸೇರಿದವರು. ಆದರೂ ಕೂಡ ಪ್ರೀತಿ ಎಂಬುದಕ್ಕೆ ಯಾವುದೇ ಜಾತಿ ಭೇದ ಮತವಿಲ್ಲ ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ಮನೆವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾದರೂ. ಹೌದು ಎರಡು ಧರ್ಮದವರಿಗೂ ಕೂಡ ಯಾವುದೇ ರೀತಿಯಾದಂತಹ ಧರ್ಮ ಸಂಕಟ ಉಂಟಾಗುವುದು ಬೇಡ ಅಂತ ಮೊದಲು ಕ್ರಿಶ್ಚಿಯನ್ ಪದ್ದತಿಯಲ್ಲಿ ಚರ್ಚ್ ನಲ್ಲಿ ಉಂಗುರವನ್ನು ಬದಲಾಯಿಸಿಕೊಳ್ಳುವುದರ ಮೂಲಕ ಮದುವೆಯಾದರು ತದನಂತರ ಹಿಂದೂ ಸಂಪ್ರದಾಯದಂತೆ ಮಾಂಗಲ್ಯ ಧಾರಣೆಯನ್ನು ಕೂಡ ಮಾಡಿಸಿಕೊಂಡರು.

ಮದುವೆಯಾದ ನಂತರ ಮೂರು ವರ್ಷಗಳ ಕಾಲ ಸುಖ ಜೀವನವನ್ನು ನಡೆಸಿದರು ಆದರೆ ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಮೇಘನಾ ರಾಜ್ ಅವರ ಬದುಕಿನಲ್ಲಿ ಎಂದು ಕಂಡು ಕೇಳರಿಯದ ಕಾರಣ ದಿನ ಬಂತು ಅಂತಾನೆ ಹೇಳಬಹುದು. ಏಕೆಂದರೆ ಇದೇ ದಿನ ಚಿರಂಜೀವಿ ಸರ್ಜಾ ಅವರು ಮಧ್ಯಾಹ್ನ 1:45 ನಿಮಿಷದ ಹೊತ್ತಿಗೆ ಹೃದಯ.ಘಾ‌.ತ.ದಿಂದ ವಿ.ಧಿ.ವ.ಶ.ರಾಗುತ್ತಾರೆ. ಈ ಸಂದರ್ಭದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿರುತ್ತಾರೆ ಇಂತಹ ಸಂ.ಕ.ಷ್ಟ.ದ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಕೂಡ ಬರಬಾರದು. ಏಕೆಂದರೆ ಒಂದು ಕಡೆ ಪತಿ ಅ.ಗ.ಲಿ.ಕೆ ಮತ್ತೊಂದು ಕಡೆ ತಾಯಿಯಾಗುತ್ತಿರುವಂತಹ ಸಂಭ್ರಮ ಇವೆರಡನ್ನು ಕೂಡ ನಿಭಾಯಿಸುವುದಕ್ಕೆ ಮೇಘನಾ ರಾಜ್ ಅವರಿಗೆ ಬಹಳಾನೇ ಕ.ಷ್ಟವಾಯಿತು.

ಹೇಗೋ ತಮ್ಮ ಮಗುವಿನ ಮುಖವನ್ನು ನೋಡಿಕೊಂಡು ಮೇಘನಾ ರಾಜ್ ಅವರು ಜೀವನ ಸಾಗಿಸುವುದಕ್ಕೆ ಪ್ರಾರಂಭಿಸುತ್ತಾರೆ ಚಿರು ಅವರು ಅಗಲಿದ ಐದು ತಿಂಗಳ ಬಳಿಕ ಮೇಘನಾ ರಾಜ್ ಅವರು ಗಂಡು ಮಗು ಒಂದಕ್ಕೆ ಜನ್ಮ ನೀಡುತ್ತಾರೆ. ಸದ್ಯಕ್ಕೆ ಮೇಘನಾ ರಾಜ್ ಅವರು ಮಗುವಿನ ಲಾಲನೇ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದೆರಡು ವರ್ಷ ಚಿತ್ರರಂಗದಿಂದ ದೂರ ಉಳಿದಂತಹ ಮೇಘನಾ ರಾಜ್ ಅವರು ಇದೀಗ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಜಾಹೀರಾತಿನಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ಸಿನಿಮ ರಂಗಕ್ಕೂ ಕೂಡ ಕಂಬ್ಯಾಕ್ ನೀಡಿದ್ದಾರೆ. ಹೌದು ಪನ್ನಗ ಭರಣ ಅವರ ನಿರ್ದೇಶನದ ಸಿನಿಮಾ ಒಂದರಲ್ಲಿ ಮೇಘನಾ ರಾಜ್ ಅವರು ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹಳೆಯ ನೋವನ್ನು ಅಲ್ಲ ಮರೆತು ಇದೀಗ ತಮ್ಮ ವೃತ್ತಿ ಜೀವನಕ್ಕೆ ಮರಳಿ ಬಂದಿದ್ದಾರೆ. ಈ ಸಮಯದಲ್ಲಿ ಮೇಘನಾ ರಾಜ್ ಅವರು ಹಿಂದಿ ಕಾರ್ಯಕ್ರಮ ಒಂದಕ್ಕೆ ಭಾಗವಹಿಸುತ್ತಾರೆ ಅಲ್ಲಿ ಮೇಘನಾ ರಾಜ್ ಅವರ ಮದುವೆಯ ವಿಚಾರದ ಬಗ್ಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ.

ಹೌದು ಮೇಘನಾ ರಾಜ್ ಅವರನ್ನು ನೀವು ಎರಡನೇ ಮದುವೆಯಾಗುತ್ತೀರಾ ಈ ಒಂದು ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ವಿಚಾರಕ್ಕೆ ಮೇಘನಾ ರಾಜ್ ಅವರು ಎರಡು ರೀತಿಯಾದಂತಹ ಉತ್ತರವನ್ನು ನೀಡುತ್ತಾರೆ. ನನ್ನ ಸುತ್ತಲೂ ಇರುವಂತಹ ಜನರಲ್ಲಿ ಎರಡು ಗುಂಪುಗಳು ಇವೆ ಒಂದು ಗುಂಪುಗಳು ಮದುವೆಯಾಗು ಜೀವನ ಇನ್ನು ಮುಂದೆ ಬಹಳ ಇದೆ, ಇಷ್ಟು ಚಿಕ್ಕವಯಸ್ಸಿಗೆ ಒಂಟಿ ಜೀವನ ಸಾಗಿಸುವುದು ತುಂಬಾನೇ ಕಷ್ಟ ನಿನ್ನನ್ನು ಅರ್ಥ ಮಾಡಿಕೊಳ್ಳುವಂತಹ ವ್ಯಕ್ತಿ ಸಿಕ್ಕರೆ ನೀನು ಮದುವೆಯಾಗುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವಂತಹ ಒಂದು ಸಮೂಹವಿದೆ. ಅದೇ ರೀತಿ ಬೇರೊಂದು ಮದುವೆ ಬೇಡ ನಿನ್ನ ಮಗನ ಸಂತೋಷದಲ್ಲಿ ಜೀವನವನ್ನು ನೆಡೆಸು ಎಂದು ಹೇಳುವ ಗುಂಪು ಇದೆ. ಈ ಎರಡು ಗುಂಪಿನವರ ಮಾತಿನಲ್ಲಿ ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ ಗೊಂದಲಮಯವಾದ ಜೀವನವನ್ನು ಸಾಗಿಸುತ್ತಿದ್ದೇನೆ.

ಆದರೆ ಚಿರಂಜೀವಿ ಸರ್ಜಾ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ನೀನು ಯಾರ ಮಾತನ್ನು ಕೇಳಬೇಡ ನಿನ್ನ ಮನಸ್ಸಿನ ಮಾತನ್ನು ಮಾತ್ರ ಕೇಳು. ನಿನ್ನ ಮನಸ್ಸು ಯಾವುದನ್ನು ಬಯಸುತ್ತದೆಯೋ ಅದನ್ನು ಮಾತ್ರ ಮಾಡು ಬೇರೆಯವರ ಮಾತಿಗೆ ತಲೆ ತೂಗಬೇಡ ಅಂತ ಹೇಳುತ್ತಿದ್ದರು. ಹಾಗಾಗಿ ನಾನು ಚಿರು ಅವರನ್ನು ನೆನಪಿಸಿಕೊಳ್ಳುತ್ತೇನೆ ಅವರು ಹೇಳಿದಂತಹ ಮಾತನ್ನು ಯಾವಾಗಲೂ ಕೂಡ ಸ್ಮರಿಸಿಕೊಳ್ಳುತ್ತೇನೆ. ನನ್ನ ಮನಸ್ಸು ಇನ್ನೂ ಕೂಡ ಎರಡನೇ ಮದುವೆಯತ್ತ ವಾಲಿಲ್ಲ ಹಾಗಾಗಿ ನಾನು ಆ ವಿಚಾರದ ಬಗ್ಗೆ ಗಮನ ಹರಿಸುವುದಿಲ್ಲ. ಒಂದು ವೇಳೆ ನನ್ನ ಮನಸ್ಸಿನಲ್ಲಿ ಎರಡನೇ ಮದುವೆ ಯೋಚನೆ ಬಂದರೆ ಖಂಡಿತವಾಗಿಯೂ ಕೂಡ ಅದರ ಬಗ್ಗೆ ಯೋಚಿಸಿ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಆ ವಿಚಾರದಿಂದ ದೂರ ಉಳಿಯುವುದಕ್ಕೆ ಇಷ್ಟಪಡುತ್ತೇನೆ ನಾನು ನನ್ನ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿದೆ. ಆತನಿಗೆ ಒಂದು ಉತ್ತಮ ಭವಿಷ್ಯವನ್ನು ಕಲ್ಪಿಸಿ ಕೊಡಬೇಕಾಗಿದೆ ಹಾಗಾಗಿ ಚಿತ್ರರಂಗಕ್ಕೆ ಮರಳಿ ಬಂದಿದ್ದೇನೆ ಒಳ್ಳೆಯ ಸಿನಿಮಾವನ್ನು ನೀಡಬೇಕು ಒಳ್ಳೆಯ ಬದುಕನ್ನು ನನ್ನ ಮಗನಿಗೆ ಕಟ್ಟಿಕೊಡಬೇಕು ಎಂಬುದಷ್ಟೇ ನನ್ನ ಆಶಯ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ನಿಜಕ್ಕೂ ಮೇಘನಾ ರಾಜ್ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ಕಣ್ಣಂಚಲ್ಲಿ ನೀರು ಬರುವುದು ಸಹಜ ಏಕೆಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಮೂರು ತಿಂಗಳಿಗೆ ಆರು ತಿಂಗಳಿಗೆ ವಿ.ಚ್ಛೇ.ದ.ನ ಕೊಡುತ್ತಿರುವುದನ್ನು ನೀವು ನೋಡಿರಬಹುದು. ಅಷ್ಟೇ ಅಲ್ಲದೆ ವಿ.ಚ್ಛೇ.ದ.ನ ಕೊಟ್ಟ ಎರಡೇ ತಿಂಗಳಿಗೆ ಬೇರೆ ಮದುವೆಯಾಗುವುದನ್ನು ನೀವು ನೋಡಿರಬಹುದು ಆದರೆ ಚಿರು ಅವರು ಆದರೆ ಎರಡು ವರ್ಷದ ಮೇಲಾಗಿದೆ ಆದರೂ ಕೂಡ ಮೇಘನಾ ರಾಜ್ ಇನ್ನು ಕೂಡ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ. ಎರಡನೇ ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ ಇದೆಲ್ಲವನ್ನು ನೋಡುತ್ತಿದ್ದರೆ ನಿಜಕ್ಕೂ ಇವರಿಬ್ಬರ ಪ್ರೀತಿ ಎಂತಹದು ಎಂಬುದು ಅರ್ಥವಾಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಮೇಘನಾ ರಾಜ್ ಅವರು ಮತ್ತೊಂದು ಮದುವೆಯಾಗುವುದು ಸೂಕ್ತನಾ ಅಥವಾ ಇಲ್ಲವೇ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಎಂಬ ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಉತ್ತಮ ಪ್ರದರ್ಶನವನ್ನೇ ಕಂಡಿತು. ಇನ್ನು ಟಿ ಆರ್ ಪಿ ವಿಚಾರಕ್ಕೆ ಬರುವುದಾದರೆ ಯಾವಾಗಲೂ ಕೂಡ ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಧಾರಾವಾಹಿಯಲ್ಲಿ ಕಥೆಯನ್ನು ಬದಲಾವಣೆ ಮಾಡಲಾಗಿದೆ ಮೊದಮೊದಲು ಎಲ್ಲರೂ ಕೂಡ ಆರ್ಯವರ್ಧನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಈ ಧಾರವಾಹಿಯ ರಿಯಲ್ ಹೀರೋ ಅಂತ ಮೆಚ್ಚಿಕೊಳ್ಳುತ್ತಿದ್ದರು. ಆದರೆ ಯಾವಾಗ ಆರ್ಯವರ್ಧನ್ ಅವರ ಅಸಲಿ ಮುಖ ಹೊರಬಂದು ಅಲ್ಲಿಂದ ಪ್ರೇಕ್ಷಕರು ಕೂಡ ಈ ಧಾರಾವಾಹಿಯ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಅನಿರುದ್ಧ್ ಪಾತ್ರದ ಬಗ್ಗೆಯೂ ಕೂಡ ಕಿಡಿ ಕಾರಿದ್ದರು.

ಆದರೆ ಇದೀಗ ಆರ್ಯವರ್ಧನ್ ಆಗಿ ಅಭಿನಯಿಸುತ್ತಿರುವಂತಹ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದಿಂದ ಹೊರ ಬಂದಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. ಹೌದು ಮೊನ್ನೆಯಷ್ಟೇ ಅನಿರುದ್ಧ್ ಅವರು ಜೊತೆ ಜೊತೆಯಲಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರಡಿದ್ದಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ. “ಜೊತೆಜೊತೆಯಲಿ” ಧಾರಾವಾಹಿ ಮೂಲಕ ಆರ್ಯವರ್ಧನ್ ಅಂತಲೇ ಜನಪ್ರಿಯವಾಗಿರುವ ಅನಿರುದ್ಧ್ ಹಾಗೂ ತಂಡದ ನಡುವೆ ಮೊದಲಿನಿಂದಲೂ ವೈಮಸ್ಸು ಇತ್ತು. ಇಂದು (ಆಗಸ್ಟ್ 18) ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅದನ್ನು ತಂಡ ಒಪ್ಪದೇ ಇದ್ದಾಗ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಹೊರನಡೆದಿದ್ದಾರೆ. ಅನಿರುದ್ಧ್ ಅವರ ಈ ವರ್ತನೆಯಿಂದ ಬೇಸತ್ತಿರೋ ತಂಡ ಈ ಬಾರಿ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಅನಿರುದ್ದ್ ”ಜೊತೆಜೊತೆಯಲಿ” ಧಾರಾವಾಹಿ ಶೂಟಿಂಗ್‌ ನಿಂದ ಹೊರ ಬೀಳುತ್ತಿದ್ದಂತೆ ಇತ್ತ ನಿರ್ಮಾಪಕ ಆರೂರು ಜಗದೀಶ್ ಹಾಗೂ ನಿರ್ದೇಶಕ ಮಧು ಉತ್ತಮ್ ಇಬ್ಬರೂ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಈ ವೇಳೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಸಿ ಇನ್ನು ಮುಂದೆ ಯಾವುದೇ ನಿರ್ಮಾಪಕರು ಧಾರಾವಾಹಿಯಲ್ಲಿ ಅನಿರುದ್ದ್‌ ಗ್ ಅವಕಾಶ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಕೂಡ ಕಿರುತೆರೆವಲಯದಲ್ಲಿ ಕೇಳಿ ಬರುತ್ತಿದೆ. ಅನಿರುದ್ಧ್ ಅವರು ಇದೇ ಮೊದಲ ಬಾರಿ ಇಂತಹ ಕಿರಿಕ್ ಮಾಡಿಕೊಂಡಿಲ್ಲ ಇದಕ್ಕೂ ಮೊದಲೇ ಎರಡರಿಂದ ಮೂರು ಬಾರಿ ಶೂಟಿಂಗ್ ನಡೆಯುವಂತಹ ಸಂದರ್ಭದಲ್ಲಿ ಪಾತ್ರವನ್ನು ಅರ್ಧಕ್ಕೆ ಬಿಟ್ಟು ಹೋರ ನಡೆದಿದ್ದರೆ. ಆದರೆ ಅಂತ ಸಂದರ್ಭದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರೂ ಕೂಡ ಅನಿರುದ್ಧ್ ಅವರ ಬಳಿ ಮಾತನಾಡಿ ಅವರನ್ನು ಸಮಾಧಾನಪಡಿಸಿ ವಾಪಸ್ ಕರೆದುಕೊಂಡು ಬಂದಿದ್ದರು.

ಆದರೆ ಪದೇ ಪದೇ ಅನಿರುದ್ಧ್ ಅವರ ತಮ್ಮ ಅತೀವ ವರ್ತನೆಯಿಂದ ಈ ರೀತಿ ಮಾಡುವುದನ್ನು ಖಂಡಿಸಿದಂತಹ ನಿರ್ಮಾಪಕರು ಈ ಬಾರಿ ಕಠಿಣವಾದ ನಿರ್ಧಾರವನ್ನ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಜೊತೆಯಲ್ಲಿ ಧಾರವಾಹಿಯಲ್ಲಿ ಅನಿರುದ್ಧ್ ಅವರ ಪಾತ್ರವನ್ನು ಯಾವುದೇ ಕಾರಣಕ್ಕೂ ಮುಂದೆವರಿಸುವುದು ಬೇಡ ಆ ಪಾತ್ರಕ್ಕೆ ಬೇರೆಯವರನ್ನು ತರೋಣ ಎಂಬ ನಿರ್ಧಾರವನ್ನು ಮಾಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಅನಿರುದ್ಧವರು ನೋಡುವುದಕ್ಕೆ ಮಾತ್ರ ಸಾಫ್ಟ್ ಆಗಿ ಕಾಣಿಸುತ್ತಾರೆ ಆದರೆ ಧಾರಾವಾಹಿಯ ಕಿತಕರಣದಲ್ಲಿ ಬಹಳಷ್ಟು ಕಂಡೀಶನ್ ಹಾಕುತ್ತಾರೆ ಪಾತ್ರವನ್ನು ಮಾಡುವುದಿಲ್ಲ ಎಂದು ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ಆದರೆ ಧಾರಾವಾಹಿಯನ್ನು ಮುನ್ನಡೆಸಿಕೊಂಡು ಹೋಗುವುದಾದರೂ ಹೇಗೆ ಎಂಬುದು ಸೀರಿಯಲ್ ತಂಡದ ವಾದವಾಗಿದೆ.

ಚಿತ್ರರಂಗದಲ್ಲಿ ಅವಕಾಶಗಳು ಇಲ್ಲದೆ ಇದ್ದಾಗ ಅನಿರುದ್ಧ್ ಅವರನ್ನು ಕೈಬೀಸಿ ಕರೆದದ್ದು ಜೀ ಕನ್ನಡ ವಾಹಿನಿ ಮತ್ತು ಜೊತೆ ಜೊತೆಯಲಿ ಧಾರಾವಾಹಿ ತಂಡ. ಈ ಒಂದು ಧಾರವಾಹಿಯಿಂದ ಅನಿರುಧ್ ಅವರಿಗೆ ಎಲ್ಲಿಲ್ಲದ ಪ್ರಶಂಸೆ ಕೀರ್ತಿ ಹೆಸರು ಎಲ್ಲವು ದೊರೆಯಿತು ಆದರೆ ಈ ಒಂದು ಖ್ಯಾತಿ ಹೆಚ್ಚು ದಿನ ಉಳಿಯಲಿಲ್ಲ ಅಂತ ಅನಿಸುತ್ತದೆ. ಅನಿರುದ್ಧ್ ಅವರು ತಾವೇ ತಮ್ಮ ಕೈಯಾರೆ ಎಡವಟ್ಟು ಮಾಡಿಕೊಂಡು ಇದೀಗ ಜನರ ಟೀಕೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ಅನುರುದ್ದ್ ಅವರು ಧಾರವಾಹಿ ತಂಡದಿಂದ ಹೊರ ಬಂದಿದ್ದಾರೆ ಎಂಬುದು ಖಚಿತವಾದ ಮಾಹಿತಿಯಾಗಿದೆ. ಮುಂದೆ ಈ ಆರ್ಯವರ್ಧನ್ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎಂಬುದೇ ಒಂದು ದೊಡ್ಡ ಸವಾಲಿನ ಪ್ರಶ್ನೆಯಾಗಿದೆ ಈ ಒಂದು ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅನುಶ್ರೀಯನ್ನು ಭೇಟಿಯಾದ ಕಾಫಿನಾಡು ಚಂದು, ಅನುಶ್ರೀಗಾಗಿ ಹೊಸದೊಂದು ಹಾಡನ್ನು ಹಾಡಿದ್ದಾರೆ ಈ ಹಾಡು ಒಮ್ಮೆ ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ ಪಕ್ಕಾ.

ಕಾಫಿ ನಾಡು, ಚಂದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದಂತಹ ಹಾಡುಗಳಿಂದಲೇ ಫೇಮಸ್ ಆದವರು ತಮ್ಮ ಬಾಯಿಗೆ ಬಂದಂತಹ ಪದಗಳನ್ನು ಜೋಡಣೆ ಮಾಡಿ ಅಮೋಘವಾದಂತಹ ಹಾಡನ್ನು ರಚಿಸುವಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಫೇಮಸ್ ಆದ ವ್ಯಕ್ತಿಗಳ ಪೈಕಿ ಕಾಫಿ ನಾಡು ಚಂದು ಅವರು ಕೂಡ ಒಬ್ಬರು‌ ಕಳೆದ ನಾಲ್ಕೈದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರೂ ಕೂಡ ತಿಳಿದಿರಲಿಲ್ಲ ಆದರೆ ಇಂದು ಕರ್ನಾಟಕದಾದ್ಯಂತ ಕಾಫಿನಾಡು ಚಂದು ಎಂಬ ಹೆಸರನ್ನು ಹೇಳಿದರೆ ಸಾಕು ಎಲ್ಲರು ಕೂಡ ಹುಟ್ಟು ಹಬ್ಬದ ಹಾಡನ್ನು ಆಡುವುದಕ್ಕೆ ಫೇಮಸ್ ಅಂತ ಹೇಳುತ್ತಾರೆ ಅಷ್ಟರ ಮಟ್ಟಿಗೆ ಇವರು ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.

ಕಾಫಿನಾಡು ಚಂದು ಯಾವುದೇ ವಿಡಿಯೋವನ್ನು ರೆಕಾರ್ಡ್ ಮಾಡುವುದಕ್ಕಿಂತ ಮುಂಚೆ ನಾನು ಪುನೀತ್ ಅಣ್ಣ ಶಿವಣ್ಣ ಅವರ ಅಭಿಮಾನಿ ಅಂತ ಹೇಳುವುದರಿಂದಲೇ ಇಂದು ಸಾಕಷ್ಟು ಫ್ಯಾನ್ ಫಾಲೋವರ್ಸ್ ಅನ್ನು ಗಿಟ್ಟಿಸಿಕೊಂಡಿದ್ದಾರೆ ಅಂತ ಹೇಳಬಹುದು. ಹೌದು ನೀವು ಕಾಫಿ ನಾಡು ಚಂದು ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಒಮ್ಮೆ ನೋಡಿದರೆ ಇದು ನಿಮಗೆ ತಿಳಿಯುತ್ತದೆ. ಏಕೆಂದರೆ ಇವರಿಗೆ ಇರುವಂತಹ ಫ್ಯಾನ್ ಪಾಲವರ್ಸ್ ಸಂಗೀತ ಮಾಂತ್ರಿಕ ಆದಂತಹ ಅರ್ಜುನ್ ಜನ್ಯ ಅವರಿಗೂ ಇಲ್ಲ ಹಾಗೂ ಡಾಕ್ಟರ್ ಶಿವರಾಜಕುಮಾರ್ ಅವರಿಗೂ ಕೂಡ ಇಲ್ಲ. ಕಾಫಿನಾಡು ಚಂದು ಅವರಿಗೆ instagram ಖಾತೆಯಲ್ಲಿ ಸುಮಾರು 369K ಗೂ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.

ಮೊದಲೆಲ್ಲಾ ತಮ್ಮ ಊರಿನಲ್ಲಿ ಮತ್ತು ಅಕ್ಕಪಕ್ಕದಲ್ಲಿ ಇರುವಂತಹ ಹುಡುಗಿಯರಿಗೆ ಮತ್ತು ಹುಡುಗರಿಗೆ ಹುಟ್ಟು ಹಬ್ಬದ ಹಾಡನ್ನು ಹೇಳುವುದರ ಮೂಲಕ ರಂಜಿಸುತ್ತಿದ್ದರು. ಆದರೆ ರಾತ್ರೋರಾತ್ರಿ ಇವರ ಹಾಡುಗಳು ಫೇಮಸ್ ಆಗಿ ಸ್ಯಾಂಡಲ್ವುಡ್ ನ ಸಾಕಷ್ಟು ನಟ ನಟಿಯರ ಹುಟ್ಟುಹಬ್ಬಕ್ಕೂ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡುತ್ತಿದ್ದಾರೆ‌‌. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಲವ್ ಮೊಕ್ಟೈಲ್ ಸಿನಿಮಾದಲ್ಲಿ ನಟಿಸಿರುವಂತಹ ಜೋ ಅವರ ಹುಟ್ಟುಹಬ್ಬಕ್ಕೂ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡಿದ್ದರು. ಕೇವಲ ಇದಿಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಹಾಗೂ ಸ್ಯಾಂಡಲ್ ವುಡ್ ನ ಸಾಕಷ್ಟು ಸೆಲೆಬ್ರೆಟಿಗಳ ಹುಟ್ಟುಹಬ್ಬ ಕೂಡ ಕಾಫಿ ನಾಡು ಚಂದು ಅವರೇ ಹಾಡನ್ನು ಹಾಡಿದ್ದಾರೆ.

ಇನ್ನು ಕಾಫಿನಾಡು ಚಂದು ಅವರಿಗೆ ಫಿದಾ ಆಗದವರೆ ಇಲ್ಲ ಅಂತ ಹೇಳಬಹುದು ತಮ್ಮ ಮುಗ್ಧತೆಯಿಂದಲೇ ಸಾಕಷ್ಟು ಜನರ ಗಮನವನ್ನು ಸೆಳೆದಿದ್ದರೆ ಈ ಪೈಕಿ ನಟಿ ಅನುಶ್ರೀ ಅವರು ಕೂಡ ಕಾಫಿ ನಾಡು ಚಂದು ಅವರ ಹಾಡಿಗೆ ಫಿದಾ ಆಗಿದ್ದಾರೆ. ಕಾಫಿ ನೋಡು ಚಂದು ಅವರು ಒಮ್ಮೆ ಅನುಶ್ರೀ ಅವರನ್ನು ಭೇಟಿಯಾಗಿ ದಯವಿಟ್ಟು ಹೇಗಾದರೂ ಮಾಡಿ ನನ್ನನ್ನು ಶಿವಣ್ಣ ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿ ಅಂತ ಹೇಳಿಕೊಂಡಿದ್ದರು. ಆದರೆ ಇದನ್ನು ಸೋಶಿಯಲ್ ಮೀಡಿಯಾದ ಮುಖಾಂತರ ಮನವಿ ಮಾಡಿಕೊಂಡಿದ್ದರು ಆದರೆ ಇದೀಗ ಕಾಫಿ ನಾಡು ಚಂದು ಅವರು ನೇರವಾಗಿ ಅನುಶ್ರೀ ಅವರನ್ನೇ ಭೇಟಿಯಾಗಿದ್ದಾರೆ. ಬೆಂಗಳೂರಿಗೆ ಬಂದಿರುವಂತಹ ಕಾಫಿ ನಾಡು ಚಂದು ಅವರು ಅನುಶ್ರೀ ಅವರನ್ನು ಭೇಟಿಯಾಗಿ ಅವರಿಗಾಗಿ ಒಂದು ವಿಶೇಷ ಹಾಡೊಂದನ್ನು ರಚಿಸಿದ್ದಾರೆ. ಈ ಹಾಡನ್ನು ಕೇಳಿ ಸ್ವತಃ ಅನುಶ್ರೀಯವರೆ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಸದ್ಯಕ್ಕೆ ಕಾಫಿ ನಾಡು ಚಂದು ಅವರು ಅನುಶ್ರೀ ಅವರಿಗಾಗಿ ರಚನೆ ಮಾಡಿದಂತಹ ಈ ಹಾಡು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ಹಾಡನ್ನು ಒಮ್ಮೆ ನೀವು ಕೇಳಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಈ ಹಾಡು ಇಷ್ಟ ಆದರೆ ಲೈಕ್ ಕೊಟ್ಟು ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

ನಟಿ ಮೇಘನಾ ರಾಜ್ ಕನ್ನಡ ನಾಡು ಕಂಡಂತಹ ಅದ್ಭುತ ಕಲಾವಿದೆ ಮೊದಲ ಬಾರಿಗೆ ಮಲಯಾಳಂನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಲೂಸ್ ಮಾದ ಯೋಗೀಶ್ ಅವರ ಜೊತೆ ಪುಂಡ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹುಲಿ ಸಿನಿಮಾ ಅಂತಾನೆ ಹೇಳಬಹುದು. ಸಹಜ ಸೌಂದರ್ಯಕ್ಕೆ ಇವರು ಹೆಸರುವಾಸಿಯಾದವರು ಮಲಯಾಳಂನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ‌. ಕನ್ನಡದಲ್ಲಿ ರಾಜಾಹುಲಿ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರು ಚಿರಂಜೀವಿ ಸರ್ಜಾ ಅವರ ಅಭಿನಯದ ಆಟಗಾರ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಾರೆ.

ಲಕ್ಷ್ಮಣ, ಭುಜಂಗ, ನೂರೊಂದು ನೆನಪು, ಅಲ್ಲಮ, ಕುರುಕ್ಷೇತ್ರ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಈ ರೀತಿ ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿರುವಂತಹ ಮೇಘನಾ ರಾಜ್ ಅವರು ಬಹು ಬೇಡಿಕೆಯ ನಟಿ. ಇನ್ನು ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಆದರೆ ವಿಧಿ ಆಟ ಎಂಬುವುದೇ ಬೇರೆ ಇತ್ತು ಮೇಘನಾ ರಾಜ್ ಅವರು ಕೇವಲ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಬಿಟ್ಟು ಹೋದರು‌. ಈ ನೋವನ್ನು ಮೇಘನಾ ರಾಜ್ ಅವರಿಂದ ಸಹಿಸುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಆದರೆ ತಮ್ಮ ಮಗ ರಾಯಾನ್ ರಾಜ್ ಸರ್ಜಾಗಾಗಿ ಇದೀಗ ಎಲ್ಲಾ ನೋವನ್ನು ಮರೆತು ಹೊಸ ಜೀವನ ಕಟ್ಟಿಕೊಳ್ಳುವಂತಹ ಪರಿಸ್ಥಿತಿ ಏರ್ಪಟ್ಟಿದೆ.

ಮದುವೆಯಾದ ನಂತರ ಮಗುವಾದ ನಂತರ ಮೇಘನಾ ರಾಜ್ ಅವರು ಸಿನಿಮಾದಲ್ಲಿ ನಟನೆ ಮಾಡುತ್ತಿರುವುದು ತೀರ ಕಡಿಮೆ ಆದರೆ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಮೇಘನಾ ರಾಜ್ ಅವರು ಮತ್ತೆ ಮಹತ್ವದ ನಿರ್ಧಾರವನ್ನು ಕೈಗೆತ್ತಿಕೊಂಡಿದ್ದಾರೆ. ಹೌದು, ತಮ್ಮ ಮಗನ ಭವಿಷ್ಯಕ್ಕಾಗಿ ಮೇಘನಾ ರಾಜ್ ಅವರು ಇದೀಗ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಅದೇನಂದರೆ ಮೇಘನಾ ರಾಜ್ ಅವರು ಇದೀಗ ಹೊಸ ಪ್ರೊಡಕ್ಷನ್ ಅನ್ನು ತೆರೆಯಬೇಕು ಅಂತ ಅಂದುಕೊಂಡಿದ್ದರೆ. ಈ ಒಂದು ಪ್ರೊಡಕ್ಷನ್ ಮುಖಾಂತರ ಸಿನಿಮಾದ ಸಂಬಂಧ ಪಟ್ಟಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತಹ ನಿರ್ಧಾರ ಮಾಡಿದ್ದಾರೆ.

ಈ ಒಂದು ಪ್ರೊಡಕ್ಷನ್ ಹೌಸ್ ಕೆಲಸಕ್ಕೆ ಮೇಘನಾ ರಾಜ್ ಅವರ ತಂದೆ ಆದಂತಹ ಸುಂದರ್ ರಾಜ್ ಅವರು ಬೆಂಬಲ ನೀಡಿದ್ದಾರೆ ಅಷ್ಟೇ ಅಲ್ಲದೆ ಚಿರಂಜೀವಿ ಸರ್ಜಾ ಅವರ ತಮ್ಮ ಆದಂತಹ ಧ್ರುವ ಸರ್ಜಾ ಅವರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಅತ್ತಿಗೆಗೆ ಹೊಸದೊಂದು ಬದುಕು ಕಟ್ಟಿಕೊಡುವುದಕ್ಕಾಗಿ ಧ್ರುವ ಸರ್ಜಾ ಅವರು ಕೂಡ ಎಲ್ಲಾ ರೀತಿಯಾದಂತಹ ಸಹಾಯವನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಮೇಘನಾ ರಾಜ್ ಅವರು ಪ್ರೊಡಕ್ಷನ್ ಹೌಸ್ ಕೆಲಸದಲ್ಲಿ ಬಿಜಿಯಾಗಿದ್ದಾರೆ ಅಂದುಕೊಂಡಂತೆ ಎಲ್ಲವೂ ಆದರೆ ಇದೇ ವರ್ಷದ ಕೊನೆಯಲ್ಲಿ ಈ ಒಂದು ಪ್ರೊಡಕ್ಷನ್ ನಿರ್ಮಾಣವಾಗುತ್ತದೆ. ಈ ಒಂದು ಪ್ರೊಡಕ್ಷನ್ ನಲ್ಲಿ ಪ್ರತಿಭೆ ಇರುವಂತಹ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮೇಘನಾ ರಾಜ್ ಅವರು ಇದೀಗ ತಮ್ಮ ಎಲ್ಲ ನೋವನ್ನು ಮರೆತು ಹೊಸ ಆರಂಭ ಮಾಡಿದ್ದಾರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಅವರಿಗೆ ಶುಭವಾಗಲಿ ಈ ಒಂದು ಕೆಲಸದಿಂದ ಅವರ ಜೀವನದ ದಿಕ್ಕು ಬದಲಾಗಲಿ ಎಂದು ಶುಭ ಹಾರೈಸಿದ್ದಾರೆ. ನಿಮ್ಮ ಪ್ರಕಾರ ಮೇಘನಾ ರಾಜ್ ಅವರು ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಜೊತೆ ರಾಧಿಕಾ ಕುಮಾರಸ್ವಾಮಿ ಕೊನೆಯ ಬಾರಿ ಮಾಡಿದ ಈ ಡಾನ್ಸ್ ನೋಡಿ ಎಷ್ಟು ಮುದ್ದಾಗಿದೆ.

ರಾಧಿಕಾ ಕುಮಾರಸ್ವಾಮಿ ಅವರು ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದರು ಬಹು ಬೇಡಿಕೆಯ ನಟಿಯಾಗಿಯೂ ಕೂಡ ಗುರುತಿಸಿಕೊಂಡಿದ್ದರು. 2000ನೇ ಇಸ್ವಿಯಲ್ಲಿ ಯಾವುದೇ ಸಿನಿಮಾ ಆದರೂ ಕೂಡ ಆ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಇದ್ದಾರೆ ಎಂದರೆ ಬಹುತೇಕ ಆ ಸಿನಿಮಾ ಹಿಟ್ ಆದಂತೆಯ ಲೆಕ್ಕ. ಇನ್ನು ನಟಿಯಾಗಿ ಹೆಚ್ಚು ಜನಮನನ್ನೇ ಗಳಿಸುವುದಕ್ಕಿಂತಲೂ ಕೂಡ ತಂಗಿಯಾಗಿ ಪೋಷಕ ಪಾತ್ರದಲ್ಲಿಯೇ ಹೆಚ್ಚಾಗಿ ಗಮನ ಸೆಳೆದವರು.

ಜಾಹೀರಾತು:-ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ತೊಟ್ಟಿಲು, ಕರುಳಿನ ಕೂಗು, ಸ್ವೀಟಿ, ಹೂ, ಧಮಯಂತಿ, ರುದ್ರತಾಂಡವ, ರವಿ ಬೋಪಣ್ಣ, ರಿಷಿ, ಅನಾಥರು ಹೀಗೆ ಸಾಲು ಸಾಲು ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಹೆಚ್ಚಾಗಿ ನಟಿಸಿದ್ದಾರೆ. ಇದನ್ನು ಹೊರತುಪಡಿಸಿ ದರ್ಶನ್, ಆದಿತ್ಯ, ಸುನಿಲ್ ರಾವ್, ರವಿಚಂದ್ರನ್, ವಿಜಯ ರಾಘವೇಂದ್ರ, ಹೀಗೆ ಕನ್ನಡದ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಹೆಚ್ಚಾಗಿ ಸಿನಿಮಾದಲ್ಲಿ ನಟನೆ ಮಾಡುತ್ತಿಲ್ಲ ಇದರ ಬದಲಾಗಿ ಇವರು ನಿರ್ಮಾಪಕವಾಗಿ ಗುರುತಿಸಿಕೊಂಡಿದ್ದಾರೆ. ಹೌದು ತಮ್ಮ ಮಗಳ ಹೆಸರಿನಲ್ಲಿ ಶಮಿಕಾ ಎಂಟರ್ಪ್ರೈಸಸ್ ಎಂಬ ಸಂಸ್ಥೆಯೊಂದನ್ನು ತೆರೆದು ಈ ಒಂದು ಸಂಸ್ಥೆಯ ಮುಖಾಂತರ ಹಲವಾರು ಸಿನಿಮಾಗಳಿಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಂತಹ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ನಿರ್ಮಾಪಕವಾಗಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಿಂದ ಕಣ್ಮರೆಯಾಗಿದ್ದರೂ ಕೂಡ ಡ್ಯಾನ್ಸ್ ಮಾಡುವುದರಲ್ಲಿ ನಿಸ್ಸಿಮರು ಡ್ಯಾನ್ಸ್ ಎಂದರೆ ಇವರಿಗೆ ಬಹಳನೇ ಕ್ರೇಜ್ ಮತ್ತು ಎಲ್ಲಿಲ್ಲದ ಒಲವು ಪ್ರೀತಿ.

ಈ ಕಾರಣಕ್ಕಾಗಿಯೇ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಕೂಡ ಆಗಾಗ ಡ್ಯಾನ್ಸ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳು ಒಟ್ಟಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲಿಯೂ ರಾಧಿಕಾ ಕುಮಾರಸ್ವಾಮಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಆಗಮಿಸಿದ್ದರು ಅಪ್ಪು ಅವರ ಜೊತೆಗೆ ರಾಧಿಲಾ ರಾಜ್ ಸಿನಿಮಾದ ಪಾರು ಎಂಬ ಹಾಡಿಗೆ ಹೆಜ್ಜೆಯನ್ನು ಹಾಕಿದ್ದರು. ಸದ್ಯಕ್ಕೆ ಅಪ್ಪು ಮತ್ತು ರಾಧಿಕಾ ಕುಮಾರಸ್ವಾಮಿ ಅವರು ಮಾಡಿದಂತಹ ಈ ಸ್ಟೇಜ್ ಪರ್ಫಾರ್ಮೆನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ ಅಪ್ಪು ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

ನಟ ದರ್ಶನ್ ಅವರ ಜೊತೆಗೆ ಸ್ನೇಹ ಇಟ್ಟುಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಧಮಯಂತಿ ಚಿತ್ರದ ಟ್ರೈಲರ್ ವೇಳೆ ದರ್ಶನ್ ಅವರು ಸಹ ಆಗಮಿಸಿದ್ದನ್ನು ನೀವು ನೋಡಿದಿರಿ. ನಟಿ ರಾಧಿಕಾ ಅವರು ಸಕತ್ ಬೋಲ್ಡ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಎನ್ನಬಹುದು ಅವರ ಸೌಂದರ್ಯ ಈಗಲೂ ಕೂಡ ಹಾಗೆಯೇ ಇದೆ. ಅಷ್ಟು ಅದ್ಭುತವಾಗಿ ಸುಂದರವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ರಾಧಿಕಾ ಕುಮಾರಸ್ವಾಮಿ. ನಟಿ ರಾಧಿಕಾ ಕುಮಾರಸ್ವಾಮಿ ಅವರು ಈಗಾಗಲೇ ಕೆಲ ಡಾನ್ಸ್ ರಿಯಾಲಿಟಿ ಷೋಗೆ ಆಗಮಿಸಿದ್ದಾರೆ. ಅದರ ವಿಡಿಯೋ ತುಣುಕು ಇದೀಗ ವೈರಲಾಗುತ್ತಿದೆ. ಇನ್ನು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪು ಅವರನ್ನು ಹೊರತು ಪಡಿಸಿದರೆ ಅವರ ರೀತಿಯಲ್ಲಿ ಡಾನ್ಸ್ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ ಒಂದು ರೀತಿಯಲ್ಲಿ ಹೇಳುವುದಾದರೆ ಕನ್ನಡದ ಮೈಕಲ್ ಜಾಕ್ಸನ್ ಅಂತಾನೆ ಹೇಳಬಹುದು. ಸದ್ಯಕ್ಕೆ ಅಪ್ಪು ಮತ್ತು ರಾಧಿಕಾ ಕುಮಾರಸ್ವಾಮಿ ಅವರು ಮಾಡಿದಂತಹ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಈ ವಿಡಿಯೋ ಇಷ್ಟ ಆದರೆ ಲೈಕ್ ಕೊಟ್ಟು ಶೇರ್ ಮಾಡಿ.

 

ಅಭಿಮಾನಿ ಪ್ರೀತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನು ಸ್ವೀಕರಿಸಿದ ದರ್ಶನ್ ನಂತರ ಮಾಡಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ ದರ್ಶನ್ ಗುಣ ಎಂತಹದ್ದು ಅಂತ ನಿಮಗೆ ತಿಳಿಯುತ್ತದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳೇ ಕಳೆದು ಹೋಗಿದೆ ಕಳೆದ ವಾರವಷ್ಟೇ ಈ ಒಂದು ಸಂಭ್ರಮಾಚರಣೆಯನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ. ಇನ್ನು ದರ್ಶನ್ ಅವರು ನೋಡುವುದಕ್ಕೆ ಹೊರಟಾಗಿ ಕಂಡರು ಕೂಡ ತುಂಬಾ ಒರಟಾಗಿ ಮಾತನಾಡಿದರು ಕೂಡ ಅವರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವನ್ನು ಇರುವುದಿಲ್ಲ. ಇದ್ದ ಮಾತನ್ನು ಇದ್ದಹಾಗೆ ನೇರವಾಗಿ ಹೇಳುವಂತಹ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ ಅಂದಿನ ಕಾಲದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಯಾವ ರೀತಿ ನೇರ ವ್ಯಕ್ತಿತ್ವಕ್ಕೆ ಗುರಿಯಾಗಿದ್ದರೂ. ಅದೇ ರೀತಿ ಈಗಿನ ಕಾಲಕ್ಕೆ ಚಿತ್ರರಂಗದಲ್ಲಿ ಇದ್ದ ವಿಚಾರವನ್ನು ಇದ್ದಹಾಗೆ ಮುಖಕ್ಕೆ ಒಡೆದ ರೀತಿಯಲ್ಲಿ ಹೇಳುವಂತಹ ಧೈರ್ಯ ಇರುವುದು ದರ್ಶನ್ ಅವರಿಗೆ ಮಾತ್ರ.

ಈ ಒಂದು ಕಾರಣಕ್ಕಾಗಿಯೇ ದರ್ಶನ್ ಅವರು ಮಾಧ್ಯಮದಿಂದ ಬ್ಯಾನ್ ಆಗಿದ್ದಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಹೌದು ಮಾಧ್ಯಮ ಮಿತ್ರರಿಗೆ ಇರೋ ವಿಚಾರವನ್ನು ಇದ್ದಹಾಗೆ ಹೇಳಿದ್ದಕ್ಕಾಗಿ ಮಾಧ್ಯಮ ಮಿತ್ರರೆಲ್ಲರೂ ಕೂಡ ಕೋಪಗೊಂಡು ದರ್ಶನ ಅವರನ್ನು ಬ್ಯಾನ್ ಮಾಡಿದ್ದಾರೆ. ಈ ವಿಚಾರಕ್ಕಾಗಿಯೇ ದರ್ಶನ್ ಅವರ ಯಾವುದೇ ಸಿನಿಮಾ ಅಪ್ಡೇಟ್ಸ್ ಗಳನ್ನು ಕೂಡ ಟಿವಿ ಮಾಧ್ಯಮದಲ್ಲಿ ತೋರಿಸುವದಿಲ್ಲ. ಆದರೂ ಕೂಡ ದರ್ಶನ್ ಅವರು ಇದು ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಿಲ್ಲ ನನ್ನ ಅಭಿಮಾನಿಗಳು ನನ್ನ ಸೆಲೆಬ್ರೆಟಿಗಳು ನನ್ನನ್ನು ಕೈ ಬಿಡುವುದಿಲ್ಲ ನಾನು ಏನು ಎಂಬುವುದು ನನ್ನ ಅಭಿಮಾನಿಗಳಿಗೆ ಗೊತ್ತು ಆದಷ್ಟು ಸಾಕು ಅವರ ಪ್ರೀತಿ ಒಂದೇ ಸಾಕು ಅದೇ ನನಗೆ ಶ್ರೀ ರಕ್ಷೆ ನನ್ನ ಸಿನಿಮಾವನ್ನು ಅಭಿಮಾನಿಗಳೇ ಗೆಲ್ಲಿಸಿ ಕೊಡುತ್ತಾರೆ ಅಂತ youtube ವಾಹಿನಿಯೊಂದರಲ್ಲಿ ಹೇಳಿಕೊಂಡಿದ್ದರು.

ಇನ್ನು ಮೊನ್ನೆ ಎಷ್ಟೇ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಸುತ್ತಾರೆ ಈ ಸಮಯದಲ್ಲಿ ದರ್ಶನ್ ಅವರು ಮಾತನಾಡಿ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ಗಾಂಧೀಜಿ, ನೆಹರು, ಅಂಬೇಡ್ಕರ್, ಭಗತ್ ಸಿಂಗ್, ಸರ್ದಾರ್ ವಲ್ಲಬಾಯ್ ಪಟೇಲ್ ಸರ್ವಕರ್ ಹೀಗೆ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ ಇವರೆಲ್ಲರೂ ಕೂಡ ನಮಗೆ ಗೊತ್ತಿರುವಂತಹ ವ್ಯಕ್ತಿಗಳು. ಆದರೆ ಇವರ ಬೆನ್ನೆ ಹಿಂದೆ ಹಲವಾರು ಜನ ಸ್ವಾತಂತ್ರ ಹೋರಾಟಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಅಂತಹ ವೀರ ಯೋಧರಿಗೆ ನಾವು ಎರಡು ನಿಮಿಷ ನಮನವನ್ನು ಸಲ್ಲಿಸೋಣ ಎಂದು ಕಳಕಳಿಯಿಂದ ವಿನಂತಿಸಿಕೊಂಡು ಎರಡು ನಿಮಿಷ ಮೌನಚರಣೆಯನ್ನು ಮಾಡುತ್ತಾರೆ.

ತದನಂತರ ನಾನೊಬ್ಬ ಕಂಟ್ರೋವರ್ಸಿ ಹೀರೋ ನಾನು ಏನು ಮಾತನಾಡಿದರು ಕೂಡ ಅದು ಕಂಟ್ರೋವರ್ಸಿಯಾಗುತ್ತದೆ ಈ ಕಾರಣಕ್ಕಾಗಿ ನನಗೆ ಏನು ಮಾತನಾಡುವುದಕ್ಕೂ ಕೂಡ ಭಯ ಆಗುತ್ತದೆ ಎಂದು ದರ್ಶನ್ ಅವರು ಹೇಳಿಕೊಂಡರು. ಆದರೂ ಕೂಡ ನಾನು ಒಂದು ಮಾತನ್ನು ಹೇಳಲೇಬೇಕು ಕ್ರಾಂತಿ ಸಿನಿಮಾ ನೀವು ಅಂದುಕೊಂಡ ಮಾದರಿಯಲ್ಲೇ ಒಳ್ಳೆಯ ಕಥೆಯನ್ನು ಒಳಗೊಂಡಿದೆ. ನೀವು ನಿರೀಕ್ಷೆ ಮಾಡಿದಂತೆಯೇ ನಾವು ಸಿನಿಮಾವನ್ನು ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನ್ನಂತ ಕಾಂಟ್ರವರ್ಸಿ ಕಲಾವಿದನ ಮೇಲೆ ನಿಮ್ಮ ಕರುಣೆ ಆಶೀರ್ವಾದ ಎಂಬುದು ಸದಾ ಕಾಲ ಇರಲಿ ನನ್ನನ್ನು ಪ್ರೋತ್ಸಾಹಿಸಿ ನನ್ನನ್ನು ಅರಸಿ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಅಭಿಮಾನಿಯೊಬ್ಬರು ವೇದಿಕೆಯ ಮೇಲೆ ಬಂದು ಬೆಳ್ಳಿ ಗದೆಯನ್ನು ದರ್ಶನವರಿಗೆ ಉಡುಗೊರೆಯಾಗಿ ನೀಡುತ್ತಾರೆ ಅಭಿಮಾನಿ ನೀಡಿದಂತಹ ಬೆಳ್ಳಿ ಗದೆಯನ್ನು ದರ್ಶನವರು ಸ್ವೀಕರಿಸುತ್ತಾರೆ.

ಆದರೆ ಈ ಬೆಳ್ಳಿ ಗದೆಯನ್ನು ನಾನು ನನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದಕ್ಕೆ ಇಷ್ಟ ಇಲ್ಲ ಇದನ್ನು ದಯವಿಟ್ಟು ಯಾರಾದರೂ ಚೆನ್ನಾಗಿ ಓದುವಂತಹ ಮಕ್ಕಳಿಗೆ ದಾನವಾಗಿ ನೀಡಿ ಅಂತ ಹೇಳುತ್ತಾರೆ. ಎಚ್ಎಸ್ಆರ್ ಲೇಔಟ್ ನಲ್ಲಿ ಆಯೋಜನೆ ಮಾಡಿದಂತಹ ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಅವರು ಮುಖ್ಯ ಅತಿಥಿಯಾಗಿ ಬರುತ್ತಾರೆ. ಹಾಗಾಗಿ ಈ ಒಂದು ಕ್ಷೇತ್ರದಲ್ಲಿ ಓದುವಂತಹ ಬಡ ಮಕ್ಕಳಿಗೆ ಈ ಬೆಳ್ಳಿ ಗದೆಯಿಂದ ಏನಾದರೂ ಸಹಾಯ ಮಾಡಿ ಶಿಕ್ಷಣಕ್ಕೆ ಉಪಯೋಗ ಆಗುವಂತಹ ವಸ್ತುಗಳನ್ನು ಕೊಡಿಸಿ ಬಡ ಮಕ್ಕಳಿಗೆ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಸದ್ಯಕ್ಕೆ ದರ್ಶನವರು ಬೆಳ್ಳಿ ಗದೆಯನ್ನು ಅಭಿಮಾನಿಗಳಿಗೆ ಹಿಂತಿರುಗಿಸಿ ಕೊಟ್ಟಂತಹ ವಿಡಿಯೋ ಹಾಗೂ ಶಿಕ್ಷಣದ ಬಗ್ಗೆ ಇವರ ಹೊಂದಿರುವಂತಹ ಕಾಳಜಿ ಬಡ ಮಕ್ಕಳ ಬಗ್ಗೆ ಇರುವಂತಹ ಕರುಣೆ ಇವೆಲ್ಲವನ್ನೂ ನೋಡಿದಂತಹ ಅಭಿಮಾನಿಗಳು ದಾಸನ ಮೇಲೆ ಇಟ್ಟಿರುವಂತಹ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ.

ದರ್ಶನ್ ಅವರು ಮಾತನಾಡಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರು ಮಾಧ್ಯಮದಿಂದ ಮಾತ್ರ ಬ್ಯಾನ್ ಆಗಿದ್ದಾರೆ‌. ಆದರೆ ನಮ್ಮ ಹೃದಯದಿಂದ ಅವರು ಎಂದಿಗೂ ಕೂಡ ಬ್ಯಾನ್ ಆಗುವುದಿಲ್ಲ ನಮ್ಮ ಮನಸ್ಸಿನಲ್ಲಿ ಸದಾ ಕಾಲ ಇರುತ್ತಾರೆ ಯಾರೇ ದೂರ ಮಾಡಿದರು ಕೂಡ ಅವರ ಅಭಿಮಾನಿಗಳು ಮಾತ್ರ ಅವರನ್ನು ಎಂದಿಗೂ ಕೂಡ ದೂರ ಮಾಡುವುದಿಲ್ಲ ಎಂದು ಹೇಳಿದ್ದಾರೆ.. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಕ್ರಾಂತಿ ಸಿನಿಮಾವನ್ನು ನೀವು ಪ್ರೋತ್ಸಾಹಿಸುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ಕ್ರಾಂತಿ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಒಂದು ಕಾಲದಲ್ಲಿ ಟಾಪ್ ಕಲಾವಿದ ಆಗಿದ್ದ ಶೋಭರಾಜ್ ಅವಕಾಶಗಳಿಲ್ಲದೆ ಈಗ ಯಾವ ಪರಿಸ್ಥಿತಿಯಲ್ಲಿದ್ದರೆ ಗೊತ್ತಾ.? ಚಿತ್ರರಂಗ ಕಡೆಗಣಿಸಿತ ಈ ಅದ್ಭುತ ನಟನನ್ನು.!

ನಟ ಶೋಭರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಯಾವುದೇ ಪಾತ್ರ ಕೊಟ್ಟರು ಕೂಡ ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಕಲಾವಿದ ಒಂದು ಕಾಲದಲ್ಲಿ ಖ್ಯಾತ ಕಳನಾಯಕನ ಪಾತ್ರದಲ್ಲಿ ಗುರುತಿಸಿಕೊಂಡವರು. ಸಾಲು ಸಾಲು ಸಿನಿಮಾದಲ್ಲಿ ನಟಿಸಿದರು ಶೋಭರಾಜು ಸಿನಿಮಾದಲ್ಲಿ ಇದ್ದರೆ ಅಂದರೆ ಅದರಲ್ಲೇನೋ ಒಂದು ವಿಶೇಷ ಇರುತ್ತಿತ್ತು. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ನೋಡುಗರ ಮನಸ್ಸನ್ನು ಗೆದ್ದಿದ್ದರು. ಚಿತ್ರರಂಗಕ್ಕೆ ನಟ ಶೋಭರಾಜ್ ಅವರು ಬಂದು ಮೂರು ದಶಕಗಳೇ ಆಗಿದೆ ಈ ಮೂರು ದಶಕಗಳಲ್ಲಿ ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ತಮ್ಮ ಚಾಪನ್ನು ಮೂಡಿಸಿದ್ದಾರೆ.

ನಟ ಶೋಭರಾಜ್ ಅವರು ಮೊದಲ ಬಾರಿಗೆ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇವರಿಗೆ ಚಿತ್ರರಂಗದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ ಆದರೆ ಒಮ್ಮೆ ಇವರನ್ನು ಖ್ಯಾತ ನಿರ್ದೇಶಕ ಎಟಿ ರಘು ಅವರು ನೋಡಿ ಶೋಭರಾಜ್ ಅವರು ವಿಲನ್ ಪಾತ್ರದಲ್ಲಿ ನಟನೆ ಮಾಡಿದರೆ ತುಂಬಾ ಚೆನ್ನಾಗಿರುತ್ತೆ ಆ ಪಾತ್ರಕ್ಕೆ ಇವರು ಸೂಕ್ತ ಎಂದು ಸಲಹೆ ನೀಡಿದ್ದರಂತೆ. ಎಸ್. ನಾರಾಯಣ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಎಂಬ ಸಿನಿಮಾವ ಚಿತ್ರೀಕರಣ ಪ್ರಾರಂಭವಾಗಿರುತ್ತದೆ. ಆ ಸಮಯದಲ್ಲಿ ಎಸ್ ನಾರಾಯಣ್ ಅವರು ಶೋಬವರಾಜ್ ಅವರನ್ನು ವಿಲನ್ ಪಾತ್ರಕ್ಕೆ ಹಾಕಿಕೊಳ್ಳುತ್ತಾರಂತೆ ತಾವು ನಟನೆ ಮಾಡಿದ ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಈ ಸಿನಿಮಾ ಶತದಿನೋತ್ಸವವನ್ನು ಪೂರೈಸುತ್ತದೆ ಆ ಕಾಲದಲ್ಲಿಯೇ ದೊಡ್ಡಮಟ್ಟದ ದಾಖಲೆಯನ್ನು ಬರೆಯುತ್ತದೆ ಈ ಸಿನಿಮಾದ ಮೂಲಕ ಹೆಸರು ಕೀರ್ತಿಯನ್ನು ಗಳಿಸುತ್ತಾರೆ.

ತದನಂತರ ಎಸ್ ನಾರಾಯಣ್ ಅವರ ಜೊತೆಯೇ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ, ಸಾಕಷ್ಟು ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು ತದನಂತರ ಪೋಷಕ ಪಾತ್ರದಲ್ಲಿಯೂ ಕೂಡ ಕಾಣಿಸಿಕೊಂಡರು. ಆದರೆ ಇತ್ತೀಚಿಗೆ ಬರುತ್ತಿರುವಂತಹ ಸಿನಿಮಾದಲ್ಲಿ ಹಾಸ್ಯಮಯವಾದ ಪಾತ್ರವನ್ನು ಕೂಡ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಸುಮಾರು 30 ವರ್ಷದಿಂದಲೂ ಕೂಡ ನಟ ಶೋಭರಾಜ್ ಅವರು ಬೆಳ್ಳಿ ತೆರೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಆದರೆ ವಿಪರ್ಯಾಸ ಏನೆಂದರೆ ಇತ್ತೀಚಿನ ದಿನದಲ್ಲಿ ಯಾವ ಸಿನಿಮಾದಲ್ಲೂ ಕೂಡ ನಟ ಶೋಭರಾಜ್ ಅವರು ಕಾಣಿಸಿಕೊಳ್ಳುತ್ತಿಲ್ಲ ಇದನ್ನು ನೋಡಿದಂತಹ ಕೆಲವು ಸಿಹಿ ರಸಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿನ ಕಾಲದ ನಟರನ್ನು ಕಡೆಗಣಿಸಿ ಇತ್ತೀಚಿನ ದಿನದಲ್ಲಿ ಹೊಸ ಕಲಾವಿದರಿಗೆ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಚಿತ್ರರಂಗ ಅಂದಮೇಲೆ ಅಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಆದರೆ ತೀರ ಎಲ್ಲರೂ ಕೂಡ ಹೊಸಬರೇ ಇದ್ದರೆ ಹಳೆಯ ಕಲಾವಿದರು ಕಣ್ಮರೆಯಾಗುತ್ತಾರೆ. ಈಗಾಗಲೇ ನೀವು ಸಾಕಷ್ಟು ಕಲಾವಿದರನ್ನು ನೋಡಿರಬಹುದು ಬ್ಯಾಂಕ್ ಜನಾರ್ಧನ್, ಟೆನ್ನಿಸ್ ಕೃಷ್ಣ, ಶೋಭರಾಜು, ದೊಡ್ಡಣ್ಣ, ಮಿತ್ರ, ಕೋಮಲ್, ಶಂಕರ್ ಅಶ್ವಥ್ ಇವರೆಲ್ಲರೂ ಕೂಡ ಒಂದು ಕಾಲದಲ್ಲಿ ದೊಡ್ಡ ದೊಡ್ಡ ನಟರ ಜೊತೆ ಅಭಿನಯ ಮಾಡಿದಂತಹ ವ್ಯಕ್ತಿಗಳು. ಸಾಕಷ್ಟು ಅನುಭವವನ್ನು ಹೊಂದಿದ್ದಾರೆ ಅಷ್ಟೇ ಅಲ್ಲದೆ ನಟನೆ ಮಾಡುವುದರಲ್ಲಿ ನಿಸಿಮ್ಮರು ಆದರೆ ಈ ಎಲ್ಲಾ ಹಿರಿಯ ಕಲಾವಿದರನ್ನು ಕಡೆಗಣಿಸಿ ಇದೀಗ ಬೇರೆಯವರಿಗೆ ಅವಕಾಶವನ್ನು ನೀಡುತ್ತಿದ್ದಾರೆ. ಆ ಪೈಕಿ ನಟ ಶೋಭರಾಜ್ ಅವರು ಕೂಡ ಒಬ್ಬರು ಸದ್ಯಕ್ಕೆ ಯಾವುದೇ ಸಿನಿಮಾ ಅವಕಾಶವಿಲ್ಲದೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ. ನಿಜಕ್ಕೂ ಈ ಖ್ಯಾತ ನಟನ ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡರೆ ಬೇಸರವಾಗುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.