Home Blog Page 325

ಸಂತಸದ ಸುದ್ದಿ ಹಂಚಿಕೊಂಡ ನಟಿ ಅನುಪಮಾ ಗೌಡ, ಕೊನೆಗೂ ತಮ್ಮ ಬದುಕಿಗೆ ಬಂದ ಹೊಸ ಅತಿಥಿ.

ನಟಿ ಅನುಪಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಟಿಸಿ ಜನ ಮನ್ನಣೆಯನ್ನು ಗಳಿಸಿಕೊಂಡವರು. ಈ ಧಾರಾವಾಹಿಯ ನಂತರ ಇವರು ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸುತ್ತಾರೆ ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಇವರ ಅದೃಷ್ಟವೇ ಬದಲಾಯಿತು ಅಂತ ಹೇಳಬಹುದು ಕನ್ನಡ ಕೋಗಿಲೆ ಎಂಬ ಕಾರ್ಯಕ್ರಮ ಒಂದರಲ್ಲಿ ಮೊದಲ ಬಾರಿಗೆ ಆಂಕರಿಂಗ್ ವೃತ್ತಿಯನ್ನು ಆರಂಭಿಸಿದರು. ತದನಂತರ ಮಜಾ ಭಾರತ ಎಂಬ ಕಾಮಿಡಿ ಕಿಲಾಡಿ ಶೋಗಳನ್ನು ಕೂಡ ಆಂಕರಿಂಗ್ ಮಾಡುತ್ತಾರೆ ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ರಾಜ ರಾಣಿ ಕಾರ್ಯಕ್ರಮವನ್ನು ಕೂಡ ನಡೆಸಿಕೊಟ್ಟರು.

ಹೀಗೆ ಕನ್ನಡದಲ್ಲಿ ಖ್ಯಾತ ಟಾಪ್ ಆಂಕರ್ ಆದಂತಹ ಅನುಶ್ರೀ ಅವರನ್ನು ಬಿಟ್ಟರೆ ಎರಡನೇ ಸ್ಥಾನವನ್ನು ಪಡೆಯುವಂತಹ ಆಂಕರ್ ಅಂದರೆ ಅದು ಅನುಪಮ ಗೌಡ ಅಂತಾನೆ ಹೇಳಬಹುದು. ಆದರೆ ಅನುಪಮ ಗೌಡ ಅವರ ಜೀವನ ಹೇಳುವಷ್ಟು ಸುಖಕರವಾಗಿ ಇರಲಿಲ್ಲ ಗಾರ್ಮೆಂಟ್ ಒಂದರಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಂತಹ ಇವರ ಬದುಕು ಇಷ್ಟು ಎತ್ತರದ ಸ್ಥಾನಕ್ಕೆ ಬೆಳೆದಿದೆ ಅಂದರೆ ಇವರು ಬದುಕಿನಲ್ಲಿ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಎಂಬುದು ಇವರಿಗೆ ಮಾತ್ರ ಗೊತ್ತು. ಒಂದು ಕಡೆ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಂತಹ ಜಗನ್ ಅವರು ಕೂಡ ಅರ್ಧದಲ್ಲಿಯೇ ಕೈ ಬಿಟ್ಟರು ಮದುವೆ ಅರ್ಧಕ್ಕೆ ನಿಂತು ಹೋಯಿತು. ಮತ್ತೊಂದು ಕಡೆ ಧಾರಾವಾಹಿಯಲ್ಲು ಕೂಡ ಅವಕಾಶಗಳು ತಪ್ಪು ಹೋದವು ಈ ಸಮಯದಲ್ಲಿ ಬಹಳ ಖಿನ್ನತೆಗೆ ಒಳಗಾದಂತಹ ಅನುಪಮ ಗೌಡ ಅವರು ಎಲ್ಲದರಿಂದಲೂ ದೂರ ಇದ್ದರು.

ಆದರೆ ಬದುಕು ಎಂಬುವುದು ಕೇವಲ ಇದು ಇಷ್ಟಕ್ಕೆ ಮುಗಿಯುವುದಿಲ್ಲ ಎಂಬ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಂತಹ ಅನುಪಮಾ ಗೌಡ ಅವರು ತಮ್ಮ ಎಲ್ಲಾ ನೋವನ್ನು ಕೂಡ ಬದಿಗಿಟ್ಟು ಹೊಸ ಜೀವನವನ್ನು ಆರಂಭಿಸಲು ಮುನ್ನುಗ್ಗುತ್ತಾರೆ. ತದ ನಂತರ ಬೆಳ್ಳಿತೆರೆಯಲ್ಲಿ ಆ ಕರಳ ರಾತ್ರಿ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಕೇವಲ ಇದು ಮಾತ್ರವಲ್ಲದೆ ಇನ್ನು ಹಲವಾರು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಯಶಸ್ಸು ಎಂಬುದು ಇವರ ಬೆನ್ನ ಹಿಂದೆಯೇ ಬರತೊಡಗುತ್ತದೆ. ಜೀವನದಲ್ಲಿ ಸಾಕಷ್ಟು ನೊಂದು ಬಿಂದು ಹೋಗಿದಂತಹ ಅನುಪಮಾ ಅವರಿಗೆ ಒಂದು ಭರವಸೆ ಎಂಬುವುದು ಬರುತ್ತದೆ. ಸದ್ಯಕ್ಕೆ ಯಾವುದೇ ರಿಯಾಲಿಟಿ ಶೋನಲ್ಲಿ ಭಾಗವಹಿಸದೆ ಇದ್ದರೂ ಕೂಡ ತಮ್ಮದೇ ಆದಂತಹ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದುಕೊಂಡಿದ್ದಾರೆ ಇದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ಅನುಪಮ ಗೌಡ ಅವರಿಗೆ ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯುವುದು ಜಾಲಿ ರೈಡ್ ಹೋಗುವುದು ಟ್ರಿಪ್ ಮಾಡುವುದು ಎಂದರೆ ಬಹಳನೇ ಇಷ್ಟ. ಈ ಕಾರಣಕ್ಕಾಗಿ ತಿಂಗಳಿಗೆ ಒಂದು ಬಾರಿಯಾದರೂ ಕೂಡ ಯಾವುದಾದರೂ ವಿಶೇಷ ಪ್ರದೇಶಕ್ಕೆ ಸ್ನೇಹಿತರೊಟ್ಟಿಗೆ ಭೇಟಿ ನೀಡುತ್ತಾರೆ. ಅನುಪಮಾ ಗೌಡ ಅವರಿಗೆ ಟ್ರಾವೆಲಿಂಗ್ ಅಂದ್ರೆ ಕ್ರೇಜ್ ಅವರ ಬಳಿ ಇದ್ದ ಕ್ರೆಟ ಕಾರಿನಲ್ಲಿ ಸಾಕಷ್ಟು ಪ್ರಯಾಣ ಮಾಡಿದ್ದಾರೆ ಕಳೆದ ನಾಲ್ಕು ವರ್ಷಗಳಿಂದ ಅವರ ಬಳಿ ಇದ್ದ ಈ ಕಾರಿನಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಗೆಳೆಯನಂತಿದ್ದ ತನ್ನ ಕಾರಿಗೆ ಇದೀಗ ಗುಡ್ ಬಾಯ್ ಹೇಳಿದ್ದಾರೆ ಅನುಪಮಾ ಹೌದು ಅನುಪಮಾ ಗೌಡ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಬಳಿ ಇದ್ದ ಕಾರನ್ನು ಮಾರಿ ಹೊಸ ಕಾರ್ ಖರೀದಿಸಿದ್ದಾರೆ ಕೆಂಪು ಕಪ್ಪು ಬಣ್ಣದ ಮಹೇಂದ್ರ ತಾರ್ ಕಾರನ್ನು ಅನುಪಮಾ ಗೌಡ ಖರೀದಿಸಿದ್ದು.

ಹಳೆಯ ಕಾರಿಗೆ ಗುಡ್ ಬಾಯ್ ಹೇಳಿ ಹೊಸ ಕಾರಿನೊಂದಿಗೆ ಇನ್ನು ತನ್ನ ಪ್ರಯಾಣ ಆರಂಭ ಅಂತ ಸಣ್ಣ ವಿಡಿಯೋ ಒಂದನ್ನ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಬೆಲೆ ಸುಮಾರು 17 ಲಕ್ಷಕ್ಕೂ ಅಧಿಕ ತಮ್ಮ ಸ್ವಂತ ದುಡಿಮೆಯಿಂದ ಹಂತ ಹಂತವಾಗಿ ಮೇಲೆ ಬರುತ್ತಿರುವ ಅನುಪಮಾ ಗೌಡ ಅವರ ಬಗ್ಗೆ ಸಾಕಷ್ಟು ಜನರಿಗೆ ಅಭಿಮಾನವಿದೆ. ನಟಿಯಾಗಿ ನಿರೂಪಕರಾಗಿ ಹಾಗೂ ಜಾಹೀರಾತಿನಲ್ಲಿಯೂ ಕೂಡ ಕಾಣಿಸಿಕೊಳ್ಳುವ ನಟಿ ಅನುಪಮಾ ಗೌಡ ಕರ್ನಾಟಕದ ಪ್ರಖ್ಯಾತ ಫೇಸ್‌ಗಳಲ್ಲಿ ಒಬ್ಬರು. ಸದ್ಯಕ್ಕೆ ಹೊಸ ಅತಿಥಿಯನ್ನು ಮನೆಗೆ ಬರ ಮಾಡಿಕೊಂಡ ಖುಷಿಯಲ್ಲಿ ನಟಿ ಅನುಪಮಾ ಗೌಡ ಅವರು ಇದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ಕಾರಿನ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಅನುಪಮಾ ಅವರು ಹೊಸ ಕಾರನ್ನು ಖರೀದಿ ಮಾಡಿದಕ್ಕಾಗಿ ಅಭಿಮಾನಿಗಳು ಶುಭಾಶಯಗಳು ಸಲ್ಲಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಟೇಜ್ ಮೇಲೆ ಹಾಟ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಶ್ಮಿಕಾ ಮಂದಣ್ಣ, ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಬಹುಬೇಡಿಕೆಯ ನಟಿ ಮೊದಲೆಲ್ಲ ತೆಲುಗಿನಲ್ಲಿ ಮಾತ್ರ ಫೇಮಸ್ ಆಗಿದ್ದರು ಆದರೆ ಇತ್ತೀಚಿನ ದಿನದಲ್ಲಿ ತೆಲುಗು ಬಿಟ್ಟು ಬಾಲಿವುಡ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಎರಡು ಸಿನಿಮಾ ಮಾಡಿದ್ದು ಈ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಿದೆ‌. ಇದರ ಜೊತೆಗೆ ಜಾಹೀರಾತಿನಲ್ಲಿಯೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ ಹೌದು ಮೇಕ್ ಡೊನಾಲ್ಡ್ ಜಾಹೀರಾತಿನಲ್ಲಿ ಮೊದಲು ಕಾಣಿಸಿಕೊಳ್ಳುತ್ತಿದ್ದಂತಹ ರಶ್ಮಿಕ ಮದ್ದಣ್ಣ ಅವರು ಇದ್ದಕ್ಕಿದ್ದ ಹಾಗೆ ಇದೀಗ ಒಳ ಉಡುಪು ಜಾಹೀರಾತಿನಲ್ಲಿ ನಟನೆ ಮಾಡುವುದರ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಹೋಗುತ್ತಿರುವಂತಹ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಗಳಿಗೆ ಆಗಿರಬಹುದು ಅಥವಾ ಟೀಕೆಗಳಿಗೆ ಆಗಿರಬಹುದು ಅಥವಾ ಕಾಂಟ್ರವರ್ಸಿಗಳಿಗೆ ಆಗಿರಬಹುದು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.

ತಮ್ಮ ಖುಷಿ ಸಂತೋಷವನ್ನು ಮಾತ್ರ ಅವರು ನೋಡುತ್ತಾರೆ ಇನ್ನು ರಶ್ಮಿಕ ಮಂದಣ್ಣ ಅವರು ಈಗಾಗಲೇ ಪುಷ್ಪಾ ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ನಂತರ ತಮಿಳುನಾಡು ದಳಪತಿ ವಿಜಯ್ ಅವರ ಜೊತೆಗೆ ವಾರಸುಡು ಎಂಬ ಸಿನಿಮಾದಲ್ಲಿ ನಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಸಿನಿಮಾದ ನಂತರ ಪುಷ್ಪ 2 ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರಂತೆ. ಒಟ್ಟಾರೆಯಾಗಿ ಹೇಳುವುದಾದರೆ ಸಾಲು ಸಾಲು ಸಿನಿಮಾದ ಬೇಡಿಕೆಯನ್ನು ಗೆಟ್ಟಿಸಿಕೊಂಡಿದ್ದಾರೆ ಇವೆಲ್ಲದರ ಬೆನ್ನಲ್ಲೇ ಇದೀಗ ರಶ್ಮಿಕಾ ಮದ್ದಣ್ಣ ಅವರು ಸ್ಟೇಜ್ ಮೇಲೆ ಮಾಡಿದಂತಹ ಪರ್ಫಾರ್ಮೆನ್ಸ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು ರಶ್ಮಿಕಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅಲ್ಲಿ ಅವರ ಕೈನಲ್ಲಿ ಒಂದು ನೃತ್ಯವನ್ನು ಮಾಡಿಸಲಾಗುತ್ತದೆ ಇದಕ್ಕೆ ಮುಖ್ಯ ಕಾರಣ ಪುಷ್ಪ ಸಿನಿಮಾದಲ್ಲಿ ಇರುವಂತಹ ವಿಶೇಷವಾದಂತಹ ಸಾಮಿ ಸಾಮಿ ಎಂಬ ಹಾಡು ಬಹಳ ಮನಮೋಹಕವಾಗಿ ಮೂಡಿ ಬಂದಿತು ಈ ಹಾಡಿನಲ್ಲಿ ರಶ್ಮಿಕ ಮಂದಣ್ಣ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದರೂ ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಮತ್ತು ಫ್ಯಾನ್ ಫಾಲೋವರ್ಸ್ ಈ ಹಾಡಿಗೆ ನೃತ್ಯ ಮಾಡುವಂತೆ ಬೇಡಿಕೆ ಇಡುತ್ತಾರೆ. ರಶ್ಮಿಕಾ ಮಂದಣ್ಣ ಅವರ ಈ ಒಂದು ಸ್ವಾಮಿ ಸ್ವಾಮಿ ಎನ್ನುವ ಹಾಡು ಎಷ್ಟರ ಮಟ್ಟಿಗೆ ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದು ಅಂದರೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಕೂಡ ಈ ಹಾಡಿಗೆ ಹೆಜ್ಜೆಯನ್ನು ಹಾಕಿ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಅಪ್ಲೋಡ್ ಮಾಡಿದ್ದರು.

ಇನ್ನು ರಶ್ಮಿಕಾ ಮಂದಣ್ಣ ಯಾವುದೇ ಕಾರ್ಯಕ್ರಮಕ್ಕೆ ಹೋದರು ಅವರ ಬಳಿ ಹಾಡಿಗೆ ನೃತ್ಯ ಮಾಡಿಸಲಾಗುತ್ತೆ. ಇತ್ತೀಚೆಗೆ ಸಾಮಿ ಸಾಮಿ ಹಾಡಿಗೆ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಬಣ್ಣದ ಪಿಂಕ್ ಕಲರ್ ಸಾರಿ ಉಟ್ಟು ನೃತ್ಯ ಮಾಡಿದ್ರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ನೃತ್ಯದ ಮೂಲಕ ರಶ್ಮಿಕ ಮಂದಣ್ಣ ಮತ್ತೆ ಪಡ್ಡೆ ಹುಡುಗರ ನಿದ್ದೆಗಡಿಸಿದ್ದಾರೆ ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಫಾಲೋವರ್ ಗಳಿಗಂತೂ ಕಮ್ಮಿ ಇಲ್ಲ. ಇಂದಿಗೂ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ ಅವರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಜನ ಕಾಯುತ್ತಿರುತ್ತಾರೆ. ನೀವು ಕೂಡ ರಶ್ಮಿಕಾ ಮಂದಣ್ಣ ಅವರ ಈ ಹಾಟ್ ವಿಡಿಯೋ ನೋಡಿ ಎಷ್ಟು ಚಂದ ಡಾನ್ಸ್ ಮಾಡುತ್ತಾರಂತ ಈ ವಿಡಿಯೋ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

ದರ್ಶನ್ ಅವರು ನೇರ ನುಡಿಗೆ ಬಾಜಿನಾರಾದಂತಹ ವ್ಯಕ್ತಿ ಕೆಲವೊಮ್ಮೆ ಇವರು ಹೇಳುವಂತಹ ನೇರ ನುಡಿಗಳಿಂದಲೇ ಹಲವಾರು ಕಾಂಟ್ರವರ್ಸಿ ಹುಟ್ಟಿಕೊಳ್ಳುತ್ತದೆ. ಆದರೆ ದರ್ಶನ್ ಅವರು ಎಷ್ಟೇ ವಿವಾದವಾದರೂ ಕೂಡ ಕಾಂಟ್ರವರ್ಸಿ ಹುಟ್ಟಿಕೊಂಡರೂ ಕೂಡ ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾದರೂ ಕೂಡ ಅದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಚಾರವನ್ನು ಹೇಳಬೇಕಾದರೂ ಕೂಡ ಅದನ್ನು ಬಹಳ ಸ್ಪಷ್ಟವಾಗಿ ನಿಖರವಾಗಿ ಆ ವ್ಯಕ್ತಿಗೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಎಲ್ಲಿಯೂ ಕೂಡ ಇವರು ತಮ್ಮ ಮಾತಿನಲ್ಲಿ ಫಿಲ್ಟರ್ ಮಾಡುವುದಿಲ್ಲ. ಇತ್ತೀಚಿಗಷ್ಟೇ ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯಕಾಗಿ ಯೂಟ್ಯೂಬರ್ ಚಾನೆಲ್ ಒಂದರ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು ಈ ಸಮಯದಲ್ಲಿ ನಿರೂಪಕಿ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾದ ಬಗ್ಗೆ ಪ್ರಶ್ನೆ ಎಂದನ್ನು ಕೇಳುತ್ತಾರೆ.

ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ಈ ಸಿನಿಮಾ ಮೂಡಿ ಬರುತ್ತದೆಯಾ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪ್ರಶ್ನೆಗೆ ನೇರವಾಗಿಯೇ ಉತ್ತರಿಸಿದಂತಹ ದರ್ಶನ ಅವರವ ನಾನು ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಅಥವಾ ಬೇರೆ ಸಿನಿಮಾ ಇಂಡಸ್ಟ್ರಿಯವರ ಬಳಿ ಹೋಗಿ ಕಾಕಾ ಹಿಡಿಯುವ ಕೆಲಸವನ್ನು ಮಾಡುವುದಿಲ್ಲ. ಸಿನಿಮಾ ಗೋಸ್ಕರ ಯಾರಿಗೂ ಬಕೆಟ್ ಹಿಡಿಯುವಂತಹ ಕೆಲಸ ಆಗಿರಬಹುದು ಅಥವಾ ಇನ್ಯಾರದೋ ಕಾಲಿಗೆ ಬೀಳುವಂತಹ ಕೆಲಸವನ್ನಾಗಲಿ ನಾನು ಮಾಡುವುದಿಲ್ಲ. ನನಗೆ ನನ್ನದೇ ಆದಂತಹ ಒಂದು ಟೆರಿಟರಿ ಅಥವಾ ಬೌಂಡರಿ ಇದೆ ನಾನು ಆ ಬೌಂಡರಿಯನ್ನು ಬಿಟ್ಟು ಎಂದಿಗೂ ಕೂಡ ಆಚೆ ಹೋಗುವುದಿಲ್ಲ.

ನಾನು ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಎಲ್ಲಾ ಕೆಲಸವನ್ನು ಮಾಡಿಕೊಡುತ್ತೇನೆ ಅಷ್ಟೇ ಅಲ್ಲದೆ ಎಷ್ಟೇ ಪ್ರಮೋಷನ್ ಕಾರ್ಯವಿರಲಿ ಅಥವಾ ಸಿನಿಮಾ ಬಿಡುಗಡೆ ಕಾರ್ಯಕ್ರಮ ಇದರಲ್ಲಿ ಎಲ್ಲ ಕೂಡ ನಾನು ಭಾಗವಹಿಸುತ್ತೇನೆ. ಎಲ್ಲದರ ಕೆಲಸವನ್ನು ಕೂಡ ನಾನು ಅಷ್ಟೇ ನಿಷ್ಠೆಯಿಂದ ಮಾಡುತ್ತೇನೆ ನಾನು ಕನ್ನಡಕ್ಕೆ ಮಾತ್ರ ಸೀಮಿತ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲೂ ಕೂಡ ನನ್ನ ಸಿನಿಮಾ ರಿಲೀಸ್ ಆಗುತ್ತದೆ ಡಬ್ಬಿಂಗ್ ಆಗುತ್ತದೆ. ಆದರೆ ಬೇರೆ ಬೇರೆ ರಾಜ್ಯಕ್ಕೆ ಹೋಗಿ ನನ್ನ ಸಿನಿಮಾದ ಬಗ್ಗೆ ಪ್ರಚಾರ ಮಾಡುವುದು ಇರಲಿ ಅಥವಾ ಬೇರೆಯವರ ಬಳಿ ಹೋಗಿ ವಿನಮ್ರತೆಯಿಂದ ಕೇಳಿಕೊಳ್ಳುವುದಾಗಲಿ ಅಥವಾ ಅವರಿಗೆ ಬಕೆಟ್ ಹಿಡಿಯುವುದಾಗಲಿ ಅಥವಾ ಅವರನ್ನು ಒಲಿಸಿಕೊಳ್ಳುವುದಕ್ಕೆ ನಾನಾ ರೀತಿಯಾದಂತಹ ಪ್ರಯತ್ನ ಮಾಡುವುದಾಗಲಿ ಇದು ಯಾವುದನ್ನು ಕೂಡ ನಾನು ಮಾಡುವುದಿಲ್ಲ. ಸಿನಿಮಾವನ್ನು ಡಬ್ಬಿಂಗ್ ಮಾಡಿ ಕೊಡುತ್ತೇವೆ ನನ್ನ ಸಿನಿಮಾ ಅವರು ನೋಡಲಿ ಚೆನ್ನಾಗಿದ್ದರೆ ಬಿಡುಗಡೆ ಮಾಡಲಿ ಇಲ್ಲದಿದ್ದರೆ ಇಲ್ಲ ಅಷ್ಟೇ ಎಂದು ಖಡಕ್ಕಾಗಿ ಹೇಳಿದ್ದಾರೆ.

ಸದ್ಯಕ್ಕೆ ಯೌಟ್ಯೂಬ್ ವಾಹಿನಿ ಒಂದರಲ್ಲಿ ನಟ ದರ್ಶನ್ ಅವರು ಹೇಳಿದಂತಹ ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದು ಬೇರೊಬ್ಬ ಸ್ಟಾರ್ ನಟನಿಗೆ ಟಂಗ್ ಕೊಡುವ ಮಾದರಿಯಲ್ಲಿ ಅಥವಾ ಟಕ್ಕರ್ ಕೊಡುವ ಮಾದರಿಯಲ್ಲಿ ಇದೆ ಎಂಬುದು ಕೆಲವು ಸಿಹಿ ರಸಿಕರ ಅಭಿಪ್ರಾಯವಾಗಿದೆ. ಏಕೆಂದರೆ ಈಗಾಗಲೇ ತೆರೆಕಟ್ಟಿರುವಂತಹ ಕೆಜಿಎಫ್ ಸಿನಿಮಾ ಆಗಿರಬಹುದು ಅಥವಾ ವಿಕ್ರಂತ್ ರೋಣ ಸಿನಿಮಾ ಆಗಿರಬಹುದು ಇವೆರಡು ಕೂಡ ಪ್ಲಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲದೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿದೆ. ಈ ಎಲ್ಲಾ ಡಬ್ಬಿಂಗ್ ಕೆಲಸಕ್ಕೂ ಹಾಗೂ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಮೋಷನ್ ಕಾರ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಚ್ಚ ಸುದೀಪ್ ಅವರು ಹೋಗಿದ್ದಾರೆ. ಎಲ್ಲಾ ಕಡೆಯಲ್ಲೂ ಕೂಡ ಭರ್ಜರಿ ಪ್ರಚಾರವನ್ನು ಮಾಡಿದ್ದಾರೆ ಹಾಗಾಗಿ ಈ ಇಬ್ಬರು ನಟರಿಗೆ ಏನಾದರೂ ದರ್ಶನ್ ಅವರು ಈ ರೀತಿ ಟಂಗ್ ಕೊಟ್ಟಿರಬಹುದ ಎಂಬ ಹಲವಾರು ಅನುಮಾನಗಳಿಗೆ ದರ್ಶನವರು ಕೊಟ್ಟಿರುವಂತಹ ಈ ಹೇಳಿಕೆ ಹೆಡೆ ಮಾಡಿಕೊಟ್ಟಿದೆ.

ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾ ಭಾರತದಲ್ಲಿಯೇ ಒಂದು ದೊಡ್ಡ ಕ್ರಾಂತಿಯನ್ನು ಹುಟ್ಟು ಹಾಕಬಹುದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಬಹುದು ಎಂಬ ನೀರಿಕ್ಷೆಯಲ್ಲಿ ಇದ್ದರೂ. ಆದರೆ ಇದೀಗ ನಟ ದರ್ಶನ್ ಅವರೆ ಸ್ವತಃ ಕ್ರಾಂತಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಏಕೆಂದರೆ ನಾನು ಕನ್ನಡಕ್ಕೆ ಮಾತ್ರ ಸೀಮಿತ ನಾನು ಕನ್ನಡಿಗರ ಪ್ರಮೋಷನ್ ಕಾರ್ಯದಲ್ಲಿ ಮಾತ್ರ ಭಾಗವಹಿಸುತ್ತೆನೆ ಎಂಬುದನ್ನು ಹೇಳಿಕೊಂಡಿದ್ದಾರೆ. ಇದಲ್ಲದೆ ಕ್ರಾಂತಿ ಸಿನಿಮಾಗೆ ಯಾವುದೇ ಮಾಧ್ಯಮಗಳ ಸಪೋರ್ಟ್ ಇಲ್ಲ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಇವೆಲ್ಲದರ ಬೆನ್ನಲ್ಲೇ ನಟ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ಇಂತಹದೊಂದು ನಿರ್ಧಾರವನ್ನು ತೆಗೆದುಕೊಂಡಿರಬಹುದು. ಇನ್ನು ಸಂದರ್ಶನದಲ್ಲಿ ಮಾತನಾಡುವಾಗ ದರ್ಶನ್ ಅವರು ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ಭಾವುಕಾರಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.

ಮಗಳಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ದುನಿಯಾ ವಿಜಯ್ ಇದರ ಬೆಲೆ ಕೇಳಿದರೆ ಕುಳಿತಲ್ಲೇ ದಂಗಾಗಿ ಹೋಗುತ್ತೀರಾ.

ದುನಿಯಾ ವಿಜಯ್ ಸ್ಯಾಂಡಲ್ ವುಡ್ ನ ಬ್ಲಾಕ್ ಕೋಬ್ರಾ ಅಂತಾನೆ ಹೆಸರು ಪಡೆದಿರುವಂತಹ ದುನಿಯಾ ವಿಜಯ ಅವರು 2007ರಲ್ಲಿ ತೆರೆಕಂಡ ದುನಿಯಾ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಇದಕ್ಕಿಂತಲೂ ಮುಂಚೆ ಚಿಕ್ಕ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮಿದ ಸಿನಿಮಾ ಅಂದರೆ ಅದು ದುನಿಯಾ ಅಂತಾನೆ ಹೇಳಬಹುದು. ಅಂದಿನ ಕಾಲದಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಅಷ್ಟೇ ಅಲ್ಲದೆ ಸುಮಾರು ನೂರು ದಿನಗಳನ್ನು ಪೂರೈಸಿತು. ದುನಿಯಾ ಸಿನಿಮಾದ ಸಕ್ಸಸ್ ನಂತರ ದುನಿಯಾ ವಿಜಯ್ ಅವರು ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಾರೆ.

ಮೊದಲೆಲ್ಲಾ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಂತಹ ದುನಿಯಾ ವಿಜಯ ಅವರು ದಿನ ಕಳೆದಂತೆ ನಿರ್ದೇಶಕರಾಗಿಯೂ ಕೂಡ ಕಾಣಿಸಿಕೊಳ್ಳುತ್ತಾರೆ. ಹೌದು ಇತ್ತೀಚಿಗಷ್ಟೇ ತೆರೆಕಂಡ ಸಲಗ ಸಿನಿಮಾ ವನ್ನು ನಟ ದುನಿಯಾ ವಿಜಯ ಅವರೇ ನಿರ್ದೇಶನ ಮಾಡಿದ್ದಾರೆ ಅಷ್ಟೇ ಅಲ್ಲದೆ ಈ ಸಿನಿಮಾಗೆ ಬಂಡವಾಳವನ್ನು ಕೂಡ ಅವರೇ ಹೂಡಿಕೆ ಮಾಡಿದ್ದರು. ಈ ಸಿನಿಮಾವು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನು ಪಡೆಯುವುದು ಈ ಸಿನಿಮಾದ ಮೂಲಕ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ನಿರ್ದೇಶಕರಾಗಿ ಕೂಡ ಕಾಣಿಸಿಕೊಂಡರು. ಸದ್ಯಕ್ಕೆ ದುನಿಯಾ ವಿಜಯ್ ಅವರು ಸಲಗ ಸಿನಿಮಾದ ಸಕ್ಸಸ್ ನಂತರ ಭೀಮ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಈ ಸಿನಿಮಾದಲ್ಲೂ ಕೂಡ ಇವರೇ ನಿರ್ಮಾಪಕ ಮತ್ತು ನಿರ್ದೇಶಕ.

ದುನಿಯಾ ವಿಜಯ್ ಅವರು ಕನ್ನಡ ಸಿನಿಮಾ ರಂಗಕ್ಕೆ ಬಂದು ಸುಮಾರು ಎರಡು ದಶಕಗಳಾಯಿತು ಆದರೆ ಕನ್ನಡ ಸಿನಿಮಾ ವನ್ನು ಹೊರತು ಪಡಿಸಿ ಬೇರೆ ಯಾವ ಸಿನಿಮಾದಲ್ಲೂ ಕೂಡ ನಟನೆ ಮಾಡಿಲ್ಲ. ಆದರೆ ಇತ್ತೀಚಿಗಷ್ಟೇ ತೆಲುಗು ಸಿನಿಮಾ ಒಂದರಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ದುನಿಯ ವಿಜಯ ಅವರೇ ರಿವೀಲ್ ಮಾಡಿದರು. ಇನ್ನು ಮುಂದೆ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಕೂಡ ದುನಿಯಾ ವಿಜಯ್ ಅವರು ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಕೇಳಿದಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದರು. ಇನ್ನು ವೈಯಕ್ತಿಕ ಜೀವನಕ್ಕೆ ಬರುವುದಾದರೆ ದುನಿಯಾ ವಿಜಯ ಅವರಿಗೆ ನಾಗರತ್ನ ಎಂಬ ಪತ್ನಿ ಇದು ಆಕೆಗೆ ಮೂರು ಜನ ಮಕ್ಕಳಿದ್ದರೆ.

ಆದರೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ದುನಿಯಾ ವಿಜಯ್ ಅವರು ತಮ್ಮ ಮೊದಲ ಪತ್ತೆ ನಾಗರತ್ನ ಅವರಿಗೆ ವಿ‌ಚ್ಚೇ.ದ.ನ ಕೊಟ್ಟು ಸ್ಯಾಂಡಲ್ವುಡ್ನ ನಟಿ ಆದಂತಹ ಕೀರ್ತಿ ಅವರೊಟ್ಟಿಗೆ ಸಪ್ತಪದಿ ತುಳಿದದ್ದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ ದುನಿಯಾ ವಿಜಯ ಅವರು ಕೀರ್ತಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದಾರೆ ಆದರೂ ಕೂಡ ತಮ್ಮ ಮೂರು ಜನ ಮಕ್ಕಳನ್ನು ಇನ್ನೂ ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ನಟ ದುನಿಯಾ ವಿಜಯ ಅವರು ಅವರ ಹಿರಿಯ ಪುತ್ರಿ ಆದಂತಹ ಮೋನಿಕಾಗೆ ದುಬಾರಿ ಬೆಲೆಯ ಕಾರು ಒಂದನ್ನು ಗಿಫ್ಟ್ ನೀಡಿದ್ದಾರೆ. ಮೋನಿಕ ’ಲವ್ ಯು ಅಪ್ಪ’ ಅಂತ ಕಾರ್ ಮುಂದೆ ತೆಗೆಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮಗಳಾದ ಮೋನಿಕಾ ವಿಜಯ್ ಅವರಿಗೆ ’’ಸೇಫ್ ರೈಡ್’’ ಅಂತ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ವಿಜಯ್ ಪುತ್ರಿ ಮೋನಿಕಾ ಅಪ್ಪ ಕೊಡಿಸಿದ ಕೊಸ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುವ ವಿಡಿಯೋ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಪ್ಪ ಮಗಳ ಸಂಬಂಧ ಎಂಬುವುದು ಅವಿನ ಭಾವನಾ ಸಂಬಂಧ ಅಪ್ಪನಿಗೆ ಮಗಳೇ ಮೊದಲ ಆದ್ಯತೆ ಆಗಿರುತ್ತಾಳೆ ಹಾಗೆಯೇ ಮಗಳಿಗೆ ಅಪ್ಪನೇ ಮೊದಲ ಹೀರೋ ಆಗಿರುತ್ತಾನೆ. ಈ ಕಾರಣಕ್ಕಾಗಿಯೇ ಮೋನಿಕಾ ಅವರ ಅಮ್ಮ ದುನಿಯಾ ವಿಜಯ್ ಅವರಿಂದ ದೂರಾಗಿದ್ದರು ಕೂಡ ಅಪ್ಪನೊಟ್ಟಿಗೆ ಈಗಲೂ ಕೂಡ ಅವಿನಭಾವನ ಸಂಬಂಧವನ್ನು ಹೊಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಇಂಡಿಪೆಂಡೆನ್ಸ್ ಡೇ ಆಚರಣೆ ಹೇಗಿತ್ತು ನೋಡಿ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 75 ವರ್ಷಗಳಾಗಿದೆ ಹಾಗಾಗಿ ಈ ಒಂದು 75ನೇ ವರ್ಷದ ಪ್ರಯುಕ್ತ ಪ್ರಧಾನ ಮೋದಿಯವರು ಅರ್ ಘರ್ ತಿರಂಗ ಎಂಬ ಹೊಸ ಯೋಜನೆಯನ್ನು ಆಯೋಜನೆಗೆ ತಂದರು. ಈ ಒಂದು ಯೋಜನೆಯ ಮೂಲ ಉದ್ದೇಶ ಎಂದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಭಾರತದ ರಾಷ್ಟ್ರ ಧ್ವಜವನ್ನು ಆರಾಡಿಸುವಂತಹದು. ಸಾಮಾನ್ಯವಾಗಿ ನಮ್ಮಲ್ಲಿ ಸ್ವತಂತ್ರ ದಿನಾಚರಣೆ ಬಂದರೆ ನಾವು ಓದುತ್ತಿದ್ದಂತಹ ಶಾಲೆ ಕಾಲೇಜು ಸರ್ಕಾರಿ ಕಚೇರಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಧ್ವಜಾರೋಹಣ ಮಾಡಲಾಗುತ್ತಿದ್ದು. ಈ ದ್ವಜಾರೋಹಣಕ್ಕೆ ಕೆಲವು ಸದಸ್ಯರು ಹೋಗುತ್ತಿದ್ದರು ಇನ್ನು ಕೆಲವು ಸದಸ್ಯರು ಹೋಗುತ್ತಿರಲಿಲ್ಲ. ಹಾಗಾಗಿ ಈ ಉದ್ದೇಶವನ್ನು ಮತ್ತು ಈ ನಿಯಮವನ್ನು ಬದಲಾಯಿಸಬೇಕು ಎಂಬ ಕಾರಣದಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸದೊಂದು ಯೋಜನೆಗೆ ಚಾಲನೆ ನೀಡಿದರು.

ಹೌದು ಆ ಯೋಜನೆಯೇ ಹರ್ ಘರ್ ತಿರಂಗ ಈ ಒಂದು ಯೋಜನೆಯ ಮೂಲಕ ಇದೀಗ ಭಾರತದ ಎಲ್ಲಾ ಮನೆ ಮನೆಗಳಲ್ಲಿಯೂ ಕೂಡ ರಾಷ್ಟ್ರ ಧ್ವಜ ಹರಡುತ್ತಿದೆ. ಮೊದಲೆಲ್ಲ ಒಂದು ಪ್ರದೇಶದಲ್ಲಿ ಮಾತ್ರ ಸೀಮಿತವಾಗಿ ಇದ್ದಂತಹ ಧ್ವಜಾರೋಹಣ ಇದೀಗ ಪ್ರತಿ ಮನೆಯಲ್ಲೂ ಕೂಡ ರಾರಾಜಿಸುತ್ತಿದೆ. ಅಷ್ಟೇ ಅಲ್ಲದೆ ಕೆಲವು ಜನರು ಈ ಒಂದು ರಾಷ್ಟ್ರಧ್ವಜ ಹಾರಾಡಿಸುವಾಗ ಭಾಗಿಯಾಗುತ್ತಿದ್ದರು ಇನ್ನು ಕೆಲವು ಜನ ಬಾಗಿಯಾಗುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಕೂಡ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟುವುದರ ಮೂಲಕ ಎಲ್ಲರೂ ಕೂಡ ಪಾಲ್ಗೊಳ್ಳುತ್ತಿದ್ದರೆ. ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲರಲ್ಲೂ ಕೂಡ ದೇಶದ ಮೇಲೆ ಭಾವೈಕ್ಯತೆ ಮೂಡುತ್ತಿರುವುದು ಸತ್ಯ.

ಇನ್ನು ನಮ್ಮ ಸ್ಯಾಂಡಲ್ ವುಡ್ ನ ವಿಚಾರಕ್ಕೆ ಬರುವುದಾದರೆ ಕೇವಲ ಸಾಮಾನ್ಯರು ಮಾತ್ರವಲ್ಲದೆ ಸ್ಯಾಂಡಲ್ ವುಡ್ನ ಸಾಕಷ್ಟು ಸೆಲೆಬ್ರೆಟಿಗಳು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಾಡಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ಕೊಟ್ಟಿದ್ದಾರೆ. ಅದರಲ್ಲಿಯೂ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಾಡಿಸಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಹಾಗೂ ಅವರ ಮಗ ಆದಂತಹ ಸರ್ಜಾ ಅವರು ಕೂಡ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಇನ್ನು ಸ್ಯಾಂಡಲ್ವುಡ್ ನ ಮೋಸ್ಟ್ ಬ್ಯೂಟಿಫುಲ್ ನಟಿ ಅಂತಾನೆ ಹೆಸರು ಪಡೆದಂತಹ ಹರ್ಷಿಕ ಪೂಣಚ್ಛ ಅವರು ಕೂಡ ವಿಧಾನಸೌಧದ ಮುಂದೆ ನಿಂತು ಭಾರತದ ಧ್ವಜವನ್ನು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡಿ ಬಾವುಟವನ್ನು ಹಾರಿಸುವುದರ ಮೂಲಕ ನಮ್ಮ ದೇಶಕ್ಕೆ ಮತ್ತು ನಮ್ಮ ರಾಷ್ಟ್ರಧ್ವಜಕ್ಕೆ ಗೌರವವನ್ನು ಸಲ್ಲಿಸಿದರೆ. ಕೇವಲ ಇದಿಷ್ಟು ಜನ ಮಾತ್ರವಲ್ಲದೆ ಕಿಚ್ಚ ಸುದೀಪ್ ನಟ ದರ್ಶನ್ ಶಿವರಾಜ್ ಕುಮಾರ್ ಉಪೇಂದ್ರ ಹೀಗೆ ಕನ್ನಡದ ಸಾಕಷ್ಟು ನಟ ನಟಿಯರು ತಮ್ಮ ಮನೆಯಲ್ಲಿಯೇ ರಾಷ್ಟ್ರಧ್ವಜವನ್ನು ಹಾರಾಟ ಮಾಡಿದ್ದಾರೆ,.

ನಿಜಕ್ಕೂ ಕೂಡ ಇದೊಂದು ಅಭೂತಪೂರ್ವ ಸಂಗಮ ಹಾಗೂ ಅಭೂತ ಪೂರ್ವವಾದಂತಹ ಯೋಜನೆ ಅಂತಾನೇ ಹೇಳಬಹುದು. ಒಂದು ವೇಳೆ ಈ ಯೋಜನೆಯನ್ನು ಆಚರಣೆಗೆ ತರದಿದ್ದರೆ ಇಂದು ಯಾರೂ ಕೂಡ ಅಷ್ಟಾಗಿ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮಿಸುತ್ತ ಇರಲಿಲ್ಲ ಅಂತ ಅನಿಸುತ್ತದೆ. ಸೆಲೆಬ್ರಿಟಿಗಳ ಮನೆಯಲ್ಲಿ ರಾರಾಜಿಸುತ್ತಿರುವಂತಹ ಈ ರಾಷ್ಟ್ರಧ್ವಜ ನಿಮಗೆ ಇಷ್ಟ ಆದರೆ ತಪ್ಪದೇ ಈ ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಖ್ಯಾತ ನಟಿ, ಇವರ ಅಭಿಮಾನವನ್ನು ಎಲ್ಲರೂ ಮೆಚ್ಚಲೇಬೇಕು.

ಅಪ್ಪು ಇದೊಂದು ಹೆಸರಲ್ಲ ಬದಲಾಗಿ ಶಕ್ತಿ ಅಂತಾನೆ ಹೇಳಬಹುದು ಅಪ್ಪು ಅವರು ನಮ್ಮೆಲ್ಲರನ್ನು ಅಗಲಿ ಈಗಾಗಲೇ ಹತ್ತು ತಿಂಗಳ ಸಮೀಪವಾಗಿದೆ. ಆದರೂ ಕೂಡ ಅಪ್ಪು ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಇವೆಲ್ಲ ಒಂದು ಕಡೆಯಾದರೆ ಪ್ರತಿನಿತ್ಯ ಅಪ್ಪುಗಾಗಿ ಅಭಿಮಾನಿಗಳು ವಿಶೇಷವಾದಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಅಥವಾ ಅಪ್ಪು ಹೆಸರಿನಲ್ಲಿ ದಾನ ಧರ್ಮ ಮಾಡುವುದು ಅಥವಾ ಸಮಾಜ ಸೇವೆ ಮಾಡುವುದು ಇಂತಹ ಕೆಲವೊಂದು ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಜನರಿಗೆ ಉಪಯೋಗವಾಗುವಂತಹ ಕೆಲಸವನ್ನು ಮಾಡುತ್ತಿರುವುದನ್ನು ನೀವು ಈಗಾಗಲೇ ನೋಡಿರಬಹುದು. ಇದಕ್ಕೂ ಮೊದಲು ಯಾರು ಕೂಡ ಇಂತಹದೊಂದು ಸಾಹಸಕ್ಕೆ ಕೈ ಹಾಕಿರಲಿಲ್ಲ ಆದರೆ ಅಪ್ಪು ಅವರು ಅಗಲಿದ ನಂತರ ಅಪ್ಪು ಅವರು ನಡೆಸಿಕೊಂಡು ಹೋಗುತ್ತಿದ್ದಂತಹ ಸಮಾಜ ಸೇವೆಯನ್ನು ಇನ್ನು ಮುಂದೆ ಅವರ ಅಭಿಮಾನಿಗಳು ನಡೆಸಬೇಕೆಂಬ ಉದ್ದೇಶದಿಂದಾಗಿ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಇನ್ನು ಅಪ್ಪು ಅಂದರೆ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ ಸೆಲೆಬ್ರೇಟಿಗಳಿಗೂ ನಟ ನಟಿಯರಿಗೂ ಕೂಡ ಪಂಚಪ್ರಾಣ ಈ ಕಾರಣಕ್ಕಾಗಿಯೇ ಯಾವುದೇ ಸಮಾರಂಭ ಇರಲಿ ಸನ್ನಿವೇಶ ಇರಲಿ ಎಲ್ಲರೂ ಕೂಡ ಮೊದಲು ಅಪ್ಪು ಅವರನ್ನು ಸ್ಮರಿಸಿದ ನಂತರವಷ್ಟೇ ಆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಇನ್ನು ವಿಚಾರಕ್ಕೆ ಬರುವುದಾದರೆ ನಾಗಿಣಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವಂತಹ ನಟಿ ಅಮೃತ ಅವರಿಗೆ ಅಪ್ಪು ಎಂದರೆ ಬಹಳನೇ ಪ್ರೀತಿ ಎಲ್ಲಿಲ್ಲದ ಅಭಿಮಾನ ಈ ಕಾರಣಕ್ಕಾಗಿಯೇ ಅಪ್ಪು ಅವರ ಹುಟ್ಟುಹಬ್ಬದ ದಿನದಂದು ಅವರ ಕೈ ಮೇಲೆ ಪುನೀತ್ ರಾಜಕುಮಾರ್ ಎಂಬ ಟ್ಯಾಟೋ ಅನ್ನು ಹಾಕಿಸಿಕೊಂಡಿದ್ದಾರೆ‌‌. ವಿಶೇಷವಾದ ಫಾಂಟ್ ಸ್ಟೈಲ್ ನಲ್ಲಿ ಪುನೀತ್ ರಾಜಕುಮಾರ್ ಎಂದು ತಮ್ಮ ಬಲಗೈ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಟಿ ನಮೃತ ಅವರು ಹಾಕಿಸಿಕೊಂಡಿರುವಂತಹ ಟ್ಯಾಟೋ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ ಅಷ್ಟೇ ಅಲ್ಲದೆ ಅಪ್ಪು ಅಭಿಮಾನಿಗಳು ಈ ಟ್ಯಾಟೋ ನೋಡಿ ಮೆಚ್ಚಿಕೊಂಡಿದ್ದಾರೆ.

ನಮ್ರಾತ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕೂಡ ಅಪ್ಪು ಎಂದರೆ ಪಂಚಪ್ರಾಣ ಅವರ ಪ್ರತಿಯೊಂದು ಸಿನಿಮಾವನ್ನು ಕೂಡ ಮಿಸ್ ಮಾಡದೆ ನೋಡುತ್ತಿದ್ದರ ಇನ್ನು ಅಪ್ಪು ಅವರನ್ನು ಭೇಟಿ ಮಾಡುವಂತಹ ಅವಕಾಶಕ್ಕಾಗಿ ಸದಾ ಕಾಲ ಪರಿತಪಿಸುತ್ತಿದ್ದರು. ಆದರೆ ಅಪ್ಪು ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದಾಗ ನಿಜಕ್ಕೂ ಅವರು ತುಂಬಾನೇ ಬೇಸರಗೊಂಡರು ಅಷ್ಟೇ ಅಲ್ಲದೆ ಈ ಜೀವನವೇ ಬೇಡ ಎನಿಸುವಷ್ಟು ಬೇಸರವಾಗಿತಂತೆ. ತಮ್ಮ ನೆಚ್ಚಿನ ನಟನನ್ನು ಇನ್ನು ಮುಂದೆ ಜೀವಂತವಾಗಿ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ನನ್ನ ಜೀವ ಇರುವವರೆಗೂ ಕೂಡ ಅಪ್ಪು ನನ್ನ ಜೊತೆಯಲ್ಲೇ ಇರಬೇಕು ಎಂಬ ಉದ್ದೇಶದಿಂದಾಗಿ ಅಪ್ಪು ಅವರ ಹೆಸರನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರಂತೆ ನಟಿ ಅಮೃತ ಅವರು.

ನಿಜಕ್ಕೂ ನಟಿ ಅಮೃತ ಅವರ ಈ ಮಾತುಗಳನ್ನು ಕೇಳಿದರೆ ನಮಗೆ ಅರಿಯದೆ ಕಣ್ಣಂಚಿನಲ್ಲಿ ನೀರು ಬರುವುದಂತು ಸತ್ಯ ಏಕೆಂದರೆ ಅಪ್ಪುಗೆ ಬಹಳಷ್ಟು ಅಭಿಮಾನಿಗಳು ಇದ್ದರೆ ಆದರೆ ಯಾವ ಸೆಲೆಬ್ರಿಟಿಯೂ ಕೂಡ ಅಪ್ಪು ಅವರ ಹೆಸರನ್ನು ಇಲ್ಲಿಯವರೆಗೂ ಟಾಟಾ ಹಾಕಿಸಿಕೊಂಡಿರಲಿಲ್ಲ. ಆದರೆ ಮೊದಲ ಬಾರಿಗೆ ನಟಿ ಅಮೃತ ಅವರು ಮಾತ್ರ ಅಪ್ಪು ಅವರ ಹೆಸರನ್ನು ಟ್ಯಾಟೋ ಹಾಕಿಸಿಕೊಂಡು ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರ ಮೇಲೆ ಇವರು ಎಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದರು ಎಂಬುದನ್ನು ತೋರ್ಪಡಿಸಿದ್ದಾರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನೋಡಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ನಟಿ ನಮ್ರಾತ ಅವರು ಮಾಡಿರುವ ಈ ಕೆಲಸ ಇಷ್ಟ ಆದರೆ ಈ ಮಾಹಿತಿಯನ್ನು ಲೈಕ್ ಕೊಟ್ಟು ಶೇರ್ ಮಾಡಿ.

ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಕಾಫಿ ನಾಡು ಚಂದು.

ಕಾಫಿ ನಾಡು ಚಂದು ಈ ಹೆಸರು ಹೇಳಿದ ತಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಹಾಯ್ ನಾನು ಶಿವಣ್ಣನ ಅಭಿಮಾನಿ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳಿಕೊಂಡು ಎಲ್ಲಾ ಸೆಲೆಬ್ರಿಟಿಗಳಿಗೆ ಬರ್ತಡೆಗೆ ವಿಶ್ ಮಾಡುವ ಮತ್ತು ಬರ್ತಡೇ ಸಾಂಗ್ ಮಾಡುವ ಫೇಮಸ್ ಆಗಿರುವ ಆಟೋ ಡ್ರೈವರ್ ಚಿಕ್ಕಮಗಳೂರಿನ ಈ ಯುವಕ. ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿರುವ ಕಾಫಿ ನಾಡು ಚಂದು ಎಂದು ಹೆಸರುವಾಸಿ ಆಗಿರುವ ಚಂದು ಅವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಇವರು ತಮ್ಮ ಆಟೋ ಮೇಲೂ ಸಹ ಶಿವಣ್ಣ ಹಾಗೂ ಪುನೀತ್ ಅಣ್ಣನ ಭಾವಚಿತ್ರಗಳನ್ನು ಅಂಟಿಸಿಕೊಂಡು ತಮ್ಮ ಅಭಿಮಾನಿ ಮೆರೆಯುತ್ತಿದ್ದಾರೆ.

ಅಲ್ಲದೆ ತಾನೊಬ್ಬ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಸಮಾಜ ಸೇವೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತೇನೆ ಎಂದು ಹೇಳಿಕೊಳ್ಳುವ ಇವರು ತಮ್ಮ ಕೈಯಿಂದ ಆದಷ್ಟು ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ ಎನ್ನುವುದು ಬಹಳ ವಿಶೇಷ. ದಿನೇ ದಿನೇ ಕಾಫಿನಾಡು ಚಂದು ಅವರ ಇನ್ಸ್ಟಾಗ್ರಾಮ್ ಫಾಲವರ್ ಸಂಖ್ಯೆ ಹಾಗೂ ಅಭಿಮಾನಿಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಫಿ ನಾಡು ಚಂದು ಹೋಗುವುದು ಬಹುತೇಕ ಕಂಫರ್ಮ್ ಎಂದು ಎಲ್ಲರೂ ಮಾತನಾಡುತ್ತಿದ್ದರು. ಅಲ್ಲದೆ ಈಗಾಗಲೇ ಶುರುವಾಗಿರುವ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವವರಿಗೆ ಹೆಚ್ಚು ಮಾನ್ಯತೆ ಕೊಟ್ಟಿದ್ದರಿಂದ ಅಲ್ಲಿ ಕಾಫಿ ನಾಡು ಚಂದು ಇರುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು.

ಆದರೆ ಬಿಗ್ ಬಾಸ್ ಓಟಿಪಿ ಅಲ್ಲಿ ಕಾಫಿ ನಾಡು ಚಂದು ಅವರು ಭಾಗವಹಿಸದೆ ಇರುವುದು ಬಹಳ ಜನರಿಗೆ ಬೇಸರ ಮೂಡಿಸಿದೆ. ಅಲ್ಲದೆ ಕಾಫಿ ನಾಡು ಚಂದು ಅವರಿಗೂ ಕೂಡ ಬಿಗ್ ಬಾಸ್ ಅಲ್ಲಿ ಭಾಗವಹಿಸಲು ಬಹಳ ಆಸೆ ಇದೆಯಂತೆ ಅದಕ್ಕಾಗಿ ಅವರು ಬಿಗ್ ಬಾಸ್ ಅಲ್ಲಿ ತಾವು ಭಾಗವಹಿಸಬೇಕು ಎನ್ನುವ ಆಸೆಯಿಂದ ಹೊಸದೊಂದು ಐಡಿಯಾ ಮಾಡುತ್ತಿದ್ದಾರೆ ತಾನೂ ಬಿಗ್​ಬಾಸ್​ ಮನೆಗೆ ಹೋಗಬೇಕೆಂದು ಹಲವಾರು ಬಾರಿ ಕಾಫಿ ನಾಡಿನ ಚಂದು ಹೇಳಿಕೊಂಡಿದ್ದರು. ಅದು ಕೊನೆಗೂ ಸಾಧ್ಯವಾಗಲಿಲ್ಲ. ಆದರೂ ಸುಮ್ಮನೆ ಕೂರದ ಕಾಫಿ ನಾಡಿನ ಚಂದು ಹೊಸದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಹೊಸ ಅಭಿಯಾನವೊಂದನ್ನು ತಾವೇ ಶುರು ಮಾಡಿಕೊಂಡಿದ್ದಾರೆ.

ಎಲ್ಲರ ಬಳಿ ತೆರಳಿ ಕಾಫಿ ನಾಡಿನ ಚಂದು ಅವರನ್ನು ಬಿಗ್​ಬಾಸ್​ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ ಶುರುವಾಗಿದೆ. ಹೌದು, ಬಿಗ್​ಬಾಸ್​ ಮನೆಗೆ ಚಂದು ಹೋಗುವುದು ಖಚಿತ ಅಂತ ಜನರು ಕೂಡ ಅಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚಂದು ಎಲ್ಲರ ಬಳಿ ತೆರಳಿ ತನ್ನನ್ನು ಬಿಗ್​ಬಾಸ್​ ಮನೆಗೆ ಕಳುಹಿಸುವಂತೆ ವಿಡಿಯೋ ಮಾಡಿಸಿ ಅಪ್ಲೋಡ್​ ಮಾಡಿಸುತ್ತಿದ್ದಾರೆ. ಪ್ರತಿ ದಿನ ಸಮಯ ವ್ಯರ್ಥ ಮಾಡದೇ ಈ ಅಭಿಯಾನವನ್ನು ಕಾಫಿ ನಾಡಿನ ಚಂದು ಶುರು ಮಾಡಿದ್ದಾರಂತೆ. ಸಣ್ಣ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯ ಬಳಿ ತೆರಳಿ ತನಗೆ ಸಪೋರ್ಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಬಿಗ್ ಬಾಸ್ ಬಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವುದಕ್ಕೆ ಈ ರೀತಿ ಕಸರತ್ತು ಮಾಡುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.

ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಟರ ಪೈಕಿ ದರ್ಶನ್ ಅವರು ಕೂಡ ಒಬ್ಬರು ಅಂತ ಹೇಳಬಹುದು ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಫಾಲೋವರ್ಸ್ ಬೇರೆ ಯಾವ ನಟನಿಗೂ ಕೂಡ ಇಲ್ಲ ಎಂಬ ಮಾತುಗಳು ಹಾಗಾಗಿ ಕೇಳಿ ಬರುತ್ತದೆ. ಇದಕ್ಕೆ ಕಾರಣ ಏನೆಂದರೆ ದರ್ಶನ್ ಅವರನ್ನು ಎಲ್ಲ ಮಾಧ್ಯಮಗಳು ಕೂಡ ಬ್ಯಾನ್ ಮಾಡಿದೆ ಹಾಗಾಗಿ ದರ್ಶನ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಸ್ವತಃ ಅಭಿಮಾನಿಗಳೇ ತಾವೇ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ನೆಟ್ಟಿಗರು ಹಾಗೂ ಸಿಹಿ ರಸಿಕರು ದರ್ಶನ್ ಅವರಿಗೆ ಹೆಚ್ಚು ಫ್ಯಾನ್ ಫಾಲೋವರ್ಸ್ ಇದ್ದಾರೆ ಯಾವುದೇ ಮೀಡಿಯಾ ಸಪೋರ್ಟ್ ಮಾಡದೆ ಇದ್ದರೂ ಕೂಡ ಇವರು ಕ್ರಾಂತಿ ಸಿನಿಮಾದಲ್ಲಿ ಗೆಲ್ಲುತ್ತಾರೆ ಅಂತ ಹೇಳುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಅವರು ಚಿತ್ರರಂಗಕ್ಕೆ ಬಂದು ಇಂದಿಗೆ 25 ವರ್ಷ ಪೂರೈಸಿದೆ.

ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಆದ ಕಾರಣ ಇದೀಗ ದರ್ಶನ್ ಅವರ 25ನೇ ವರ್ಷದ ಸಿನಿ ಜರ್ನಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನ 1997 ಆಗಸ್ಟ್ 11 ರಂದು ಎಸ್‌. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ”ಮೆಜೆಸ್ಟಿಕ್” ಸಿನಿಮಾ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು ದರ್ಶನ್ ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಹೊಸ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ ಇನ್ನು ಕನ್ನಡದ ಹಲವು ಸಿನಿಮಾ ಸ್ನೇಹಿತರ ಜೊತೆಗೆ ನಟ ದರ್ಶನ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ನಟ ದರ್ಶನ್ ತಮ್ಮ ಸಿನಿಮಾ ಬದುಕಿನಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಇದರ ಪ್ರಯುಕ್ತ ನಟ ದರ್ಶನ್ ಯಾವುದೇ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ತಡವಾಗಿ ಅವರ ಹಲವು ಸ್ನೇಹಿತರು ಸೇರಿ, ದರ್ಶನ್‌ ರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಕ್ಕಾಗಿ ವಿಶೇಷವಾದ ಕೇಕ್ ತಯಾರಾಗಿದ್ದು, ದರ್ಶನ್ ನಟನೆಯ ಎಲ್ಲಾ ಸಿನಿಮಾಗಳ ಹೆಸರನ್ನು ಕೇಕ್ ಮೇಲೆ ಬರೆಸಲಾಗಿತ್ತು. ನಟ ದರ್ಶನ್‌ ಗಾಗಿ ಅವರ ಸ್ನೇಹಿತ ಬಳಗ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು ಇಲ್ಲಿ ದರ್ಶನ್ ಸಿನಿಮಾರಂಗಕ್ಕೆ ಬಂದು 25 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲಾಯಿತು. ನಟ ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್ ಸೇರಿದಂತೆ ಹಲವು ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿವೆ.

ನಟ ದರ್ಶನ್ ಸಿನಿಮಾರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ ಎನ್ನುವ ಸಂಭ್ರಮವನ್ನು ಸಿನಿಮಾ ಮಂದಿ ಕೂಡ ಆಚರಿಸುತ್ತಿದ್ದಾರೆ. ಹಲವು ಸಿನಿಮಾ ತಾರೆಯರು ದರ್ಶನ್‌ಗೆ ಸೋಷಿಯಲ್ ಮೀಡಿಯಾದ ಮೂಲಕ ಶುಭಕೋರಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್, ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ದರ್ಶನ್ 25 ವರ್ಷಗಳನ್ನು ಪೂರೈಸಿದ್ದಕ್ಕೆ ಶುಭಕೋರಿದ್ದಾರೆ ಜೊತೆಗೆ ನಟ ಧನ್ವೀರ್ ಮತ್ತು ಅಯ್ಯಂಗಾರ್ ಕೂಡ ವಿಶ್ ಮಾಡಿದ್ದಾರೆ. ಇನ್ನು ಕೆಲವು ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಒಟ್ಟಾಗಿ ಇರುವಂತಹ ಫೋಟೋಗಳು ಎಡಿಟ್ ಆಗಿದ್ದು ಅದು ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ದರ್ಶನ ಅವರ 25ನೇ ವರ್ಷದ ಸಿನಿ ಕಾರ್ಯಕ್ರಮಕ್ಕೆ ಸುದೀಪ ಅವರು ಆಗಮಿಸಿದ್ದಾರೆ ಅಂತ ಅಂದುಕೊಂಡಿದ್ದರು.

ಅಷ್ಟೇ ಅಲ್ಲದೆ ಇದನ್ನು ನೋಡಿದಂತಹ ಅಭಿಮಾನಿಗಳು ಸದ್ಯ ನಮ್ಮ ನೆಚ್ಚಿನ ನಟರು ಇಬ್ಬರು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ಎಲ್ಲಾ ವೈ ಮನಸ್ಸನ್ನು ಮರೆತು ಒಂದಾಗಿದ್ದಾರೆ ಎಂಬ ಸಂತಸದಲ್ಲಿದ್ದರು. ಆದರೆ ಇದು ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಚಿತ್ರವಾಗಿದೆ ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಚಿತ್ರ ಆದಷ್ಟು ಬೇಗ ಸತ್ಯವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಈ ಎಡಿಟೆಡ್ ಚಿತ್ರವನ್ನು ನೋಡಿದರೆ ನಿಮಗೆ ಏನನಿಸುತ್ತದೆ ತಪ್ಪದೇ ನಮಗೆ ಕಾಮೆಂಟ್ ಮಾಡಿ ಹಾಗೂ ನೀವು ಕೂಡ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರು ಒಂದಾಗುವುದನ್ನು ಬಯಸುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ಕಿಚ್ಚ ಮತ್ತು ದಚ್ಚು ಎಂದು ಕಾಮೆಂಟ್ ಮಾಡಿ.

 

ಎರಡನೇ ಮದುವೆಯಾದ ನಟಿ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ಕೊಟ್ಟಿದ್ದು ಯಾಕೆ ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶ್ರುತಿ ಅವರು ಮಹೇಂದ್ರ ಎನ್ನುವವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿದೇ ಇದೆ. ಇನ್ನು ಮದುವೆಯಾದ ಹೊಸದರಲ್ಲಿ ನಟಿ ಶ್ರುತಿ ಮತ್ತು ನಿರ್ದೇಶಕ ಮಹೇಂದ್ರ ಅವರು ತುಂಬಾನೇ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಈ ದಂಪತಿಗಳಿಗೆ ಗೌರಿ ಎಂಬ ಒಂದು ಹೆಣ್ಣು ಮಗು ಕೂಡ ಜನನವಾಯಿತು ಮಗಳಿಗೆ ಐದು ವರ್ಷ ವಾಗುವ ತನಕವೂ ಕೂಡ ಇವರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಇವರಿಬ್ಬರ ಸಂಸಾರದಲ್ಲಿ ಹಾಗೂ ಸಂಬಂಧದಲ್ಲಿ ಕೆಲವು ಭಿನ್ನ ಅಭಿಪ್ರಾಯಗಳು ಬಂದ ಕಾರಣ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ವಿ.ಚ್ಛೇ.ದ.ನವನ್ನು ಪಡೆದುಕೊಳ್ಳುತ್ತಾರೆ. ತದನಂತರ ನಟಿ ಶ್ರುತಿ ಅವರು ತಮ್ಮ ಮಗಳೊಟ್ಟಿಗೆ ಒಂಟಿ ಜೀವನವನ್ನು ಸಾಗಿಸುವುದಕ್ಕೆ ಪ್ರಾರಂಭಿಸುತ್ತಾರೆ.
ಶ್ರುತಿ ಅವರಿಂದ ವಿ.ಚ್ಛೇ.ದ.ನ ಪಡೆದ ಮಹೇಂದ್ರ ಅವರು ಮೈಸೂರಿನ ಮೂಲದ ಹುಡುಗಿಯರುಗಳನ್ನು ಮತ್ತೊಂದು ಮದುವೆಯಾಗಿ ಇದೀಗ ಅವರೊಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.

ಇದಾದ ಕೆಲವೇ ದಿನದಲ್ಲಿ ನಟಿ ಶೃತಿ ಅವರು ಕೂಡ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಆದಂತಹ ಚಕ್ರವರ್ತಿ ಚಂದ್ರಚೂಡ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅಂದ ಹಾಗೆ ಚಕ್ರವರ್ತಿ ಚಂದ್ರಚೂಡಾ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಇದಕ್ಕೂ ಮೊದಲೇ ಅವರಿಗೆ ಮದುವೆಯಾಗಿ ಒಟ್ಟು ಮೂರು ಜನ ಮಕ್ಕಳಿದ್ದಾರೆ. ಆದರೂ ಕೂಡ ನಟಿ ಶ್ರುತಿಯವರು ಚಕ್ರವರ್ತಿ ಚಂದ್ರಚೂಡ ಅವರನ್ನು 2013ನೇ ಇಸ್ವಿಯಲ್ಲಿ ಎರಡನೇ ಮದುವೆ ಯಾಗುತ್ತಾರೆ. ಈ ಮದುವೆ ನಿಜಕ್ಕೂ ಕೂಡ ಅಂದಿನ ಕಾಲದಲ್ಲಿ ಒಂದು ಸೆನ್ಸಿಯೆಷನ್ ಕ್ರಿಯೇಟ್ ಮಾಡಿದಂತಹ ವಿಚಾರ ಅಂತ ಹೇಳಬಹುದು. ಏಕೆಂದರೆ ನಟಿ ಶ್ರುತಿ ಅವರು ಮದುವೆಯಾಗುತ್ತಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ ನಟಿ ಶ್ರುತಿ ಅವರ ಮದುವೆಯ ಫೋಟೋ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಆಶ್ಚರ್ಯ ಚಿಕಿತರಾದರು.

ಆದರೆ ಈ ವಿವಾಹ ಹೆಚ್ಚು ದಿನ ಉಳಿಯಲಿಲ್ಲ ಮದುವೆಯಾದ ಕೇವಲ ಒಂದೇ ವರ್ಷಕ್ಕೆ ಚಕ್ರವರ್ತಿ ಚಂದ್ರಚೂಡ ಅವರಿಗೆ ಶ್ರುತಿ ಅವರು ವಿ.ಚ್ಛೇ.ಧನ. ನೀಡುತ್ತಾರೆ. ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಶೃತಿಯವರು ವಿ.ಚ್ಛೇ.ದ.ನ ನೀಡುವುದಕ್ಕೆ ಕಾರಣವೇನು ಪ್ರೀತಿಸಿ ಮದುವೆಯಾದಂತಹ ಈ ಜೋಡಿ ಒಂದು ವರ್ಷವೂ ಕೂಡ ಜೊತೆಗೆ ಯಾಕೆ ಉಳಿಯಲಿಲ್ಲ ಎಂಬ ಅನುಮಾನಗಳು ಅಭಿಮಾನಿಗಳಲ್ಲಿ ಮತ್ತು ನೆಟ್ಟಿಗಳಲ್ಲಿ ಕಾಡ ತೊಡಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಶೃತಿ ಅವರು ಒಂದು ಸಂದರ್ಶನ ಒಂದರಲ್ಲಿ ರಿವೀಲ್ ಮಾಡಿದ್ದಾರೆ ಹೌದು ಅದೇನೆಂದರೆ. ನಟಿ ಶೃತಿ ಅವರ ಎಲ್ಲಾ ವ್ಯವಹಾರಕ್ಕೂ ಕೂಡ ಚಕ್ರವರ್ತಿ ಚಂದ್ರಚೂಡ ಅವರು ಕೈ ಹಾಕುತ್ತಿದ್ದರಂತೆ ಅಷ್ಟೇ ಅಲ್ಲದೆ ಶ್ರುತಿ ಅವರ ವೃತ್ತಿ ಜೀವನದಲ್ಲಿಯೂ ಕೂಡ ಎಲ್ಲಾ ನಾನು ಹೇಳಿದ ಮಾದರಿಯಲ್ಲೇ ನಡೆಯಬೇಕು ಎಂಬ ಕಂಡಿಶನ್ ಹಾಕುತ್ತಿದ್ದರಂತೆ.

ಸಾಮಾನ್ಯವಾಗಿ ಬೆಳ್ಳಿತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ ಅಂದಮೇಲೆ ಅವರಿಗೆ ಸಹಜವಾಗಿ ನಿರ್ಮಾಪಕರು ನಿರ್ದೇಶಕರು ಅಥವಾ ನಟ ನಟಿಯರು ಕರೆ ಮಾಡುವುದು ಸಹಜ. ಆದರೆ ಯಾರೇ ಕರೆ ಮಾಡಿದರು ಕೂಡ ಅವುಗಳೆಲ್ಲವನ್ನು ಕೂಡ ಎನ್ಕ್ವೈರಿ ಮಾಡುವುದು ಪ್ರಶ್ನೆ ಮಾಡುವುದು ತುಂಬಾ ಕಿರಿ ಕಿರಿ ಮಾಡುವುದನ್ನು ಮಾಡುತ್ತಿದ್ದರಂತೆ. ಈ ವಿಚಾರಕ್ಕಾಗಿಯೇ ಸಾಕಷ್ಟು ಬಾರಿ ಇವರಿಬ್ಬರ ನಡುವೆ ಕಲಹ ನಡೆಯಿತಂತೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಚಕ್ರವರ್ತಿ ಚಂದ್ರಚೂಡ ಅವರ ಮೊದಲ ಹೆಂಡತಿ ಮಂಜುಳಾ ಅವರು ನನಗೆ ಚಕ್ರವರ್ತಿ ಚಂದ್ರ ಚೂಡಾ ಅವರು ವಿ.ಚ್ಛೇ.ದ.ನ ಕೊಟ್ಟಿಲ್ಲ ಆದರೂ ಕೂಡ ಶ್ರುತಿ ಅವರನ್ನು ಮದುವೆಯಾಗಿದ್ದಾರೆ ಎಂದು ಕೋರ್ಟ್ ಮೆಟ್ಟಿಲು ಏರಿದರಂತೆ.

ಈ ಎಲ್ಲಾ ವಿಚಾರವನ್ನು ಮನಗೊಂಡಂತಹ ಶ್ರುತಿ ಅವರು ಚಕ್ರವರ್ತಿ ಚಂದ್ರಚೂಡ ಅವರು ನನಗೆ ಸರಿಯಾದ ಸಂಗಾತಿ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಕೂಡ ನನಗೆ ಹೊಂದಾಣಿಕೆಯಾಗುತ್ತಿಲ್ಲ ಇನ್ನು ಸಾಂಸಾರಿಕ ವಿಚಾರಕ್ಕೆ ಬರುವುದಾದರೆ ಮೊದಲ ಹೆಂಡತಿಗೆ ವಿ.ಚ್ಛೇ.ದ.ನ ನೀಡಿದ್ದೇನೆ ಎಂದು ಸುಳ್ಳು ಹೇಳಿ ನನ್ನನ್ನು ಮದುವೆಯಾಗಿದ್ದಾರೆ. ಹಾಗಾಗಿ ಇಂತಹ ವ್ಯಕ್ತಿಯ ಜೊತೆ ನಾನು ಜೀವನ ಸಾಗಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿ ಮೊದಲನೇ ಹೆಂಡತಿ ಮಂಜುಳಾ ಅವರ ಬಳಿ ಮಾತನಾಡಿ ನಾನು ವಿ.ಚ್ಛೇ.ದ.ನ ಪಡೆದುಕೊಳ್ಳುತ್ತೇನೆ ನೀವು ನಿಮ್ಮ ಪತಿಯೊಟ್ಟಿಗೆ ಸಂಸಾರವನ್ನು ನಡೆಸಿ ಎಂದು ಮಹತ್ತರವಾದಂತಹ ನಿರ್ಧಾರವನ್ನು ಕೈಗೊಂಡು ಚಕ್ರವರ್ತಿ ಚಂದ್ರಚೂಡಾ ಅವರಿಗೂ ಕೂಡ ಮದುವೆಯಾದ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ನೀಡಿದರು. ಶ್ರುತಿ ಅವರ ಬದುಕಿನಲ್ಲಿ ಇಷ್ಟೆಲ್ಲ ಏಳು ಬೀಳುಗಳನ್ನು ನೋಡಿದಂತಹ ಅಭಿಮಾನಿಗಳು ನಟಿ ಶ್ರುತಿ ಅವರಿಗೆ ಇದೆಲ್ಲ ಬೇಕಿತ್ತಾ.? ಮೊದಲನೇ ಗಂಡನಿಗೆ ವಿ.ಚ್ಛೇ.ದ.ನ ಕೊಟ್ಟು ಎರಡನೇ ಮದುವೆಯಾದರೂ ಆದರೆ ಎರಡನೇ ಮದುವೆಯೂ ಕೂಡ ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು ಎಂದು ಮಾತನಾಡುವುದಕ್ಕೆ ಪ್ರಾರಂಭಿಸಿದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸಾನ್ಯಾ ಅಯ್ಯರ್ ಅವರ ಈ ವಿಡಿಯೋ ನೋಡಿದರೆ ನಿಜಕ್ಕೂ ನಿಬ್ಬೆರಗಾಗಿ ಹೋಗುತ್ತೀರಾ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಎಂಬ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿದಂತಹ ನಟಿ ಸಾನಿಯಾ ಅಯ್ಯರ್ ಅವರು ಸದ್ಯಕ್ಕೆ ಓಟಿಟಿಯಲ್ಲಿ ಪ್ರಾರಂಭವಾಗಿರುವ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಂಟೆಸ್ಟೆಂಟ್ ಆಗಿ ಕಾಲಿಟ್ಟಿರುವ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸುತ್ತಿರುವ ಸಾನ್ಯಾ ಅವರನ್ನು ನೋಡಿದರೆ ನಿಜಕ್ಕೂ ಕೂಡ ನಮಗೆ ಆಶ್ಚರ್ಯ ಎನಿಸುತ್ತದೆ. ಏಕೆಂದರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಪುಟ್ಟಗೌರಿ ಧಾರವಾಹಿಯಲ್ಲಿ ಪುಟ್ಟ ಪುಟ್ಟ ಮಾತುಗಳನ್ನ ಆಡುತ್ತಾಳೆ ಜನ ಮನ್ನಣೆ ಗಳಿಸಿದಂತಹ ಹುಡುಗಿ ಇದು ಇಷ್ಟು ಬೇಗ ದೊಡ್ಡ ಹುಡುಗಿಯಾಗಿ ಬೆಳೆದಳ ಎಂಬ ಅನುಮಾನ ನಮ್ಮಲ್ಲಿ ಮೂಡುವುದು ಸಹಜ.

ಇನ್ನು ಪುಟ್ಟಗೌರಿ ಪಾತ್ರದಿಂದ ಹೊರಬಂದಂತಹ ಸಾನ್ಯಾ ಅಯ್ಯರ್ ಅವರು ಸಂಪೂರ್ಣವಾಗಿ ಕಿರುತೆರೆಯಿಂದ ದೂರ ಉಳಿದು ತಮ್ಮ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಆದರೂ ಕೂಡ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲೂ ಕೂಡ ಭಾಗವಹಿಸಿದ್ದರು. ಇನ್ನು ಸಾನ್ಯಾ ಅವರ ತಾಯಿ ದೀಪಾ ಅವರೂ ಕೂಡ ಮೂತಲಹಃ ರಂಗಭೂಮಿ ಅವರು ಅಷ್ಟೇ ಅಲ್ಲದೆ ಹಲವಾರು ಸೀರಿಯಲ್ ನಲ್ಲೂ ಕೂಡ ನಟನೆ ಮಾಡಿದ್ದಾರೆ ಹಾಗಾಗಿ ಕಿರುತೆರೆ ನಂಟನ್ನು ಹೊಂದಿರುವಂತಹ ದೀಪಾ ಅವರಿಗೆ ತಮ್ಮ ಮಗಳನ್ನು ಕೂಡ ಕಿರುತೆರೆಯಲ್ಲಿ ನಾಯಕ ನಟಿಯನ್ನಾಗಿ ಮಾಡಬೇಕು ಎಂಬ ಆಸೆ ಇದೆ ಈ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಗೆ ಈ ಬಾರಿ ಕಳುಹಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಪೈಕಿ ಸಾನ್ಯಾ ರವರು ಕೂಡ ಒಬ್ಬರು ಏಕೆಂದರೆ 22 ವರ್ಷದ ಸಾನ್ಯಾ ತನ್ನ ವಯಸ್ಸಿಗೂ ಮೀರಿದ ವರ್ತನೆಯನ್ನು ಬಿಗ್ ಬಾಸ್ ಮನೆಯಲ್ಲಿ ತೋರಿಸುತ್ತಿದ್ದಾರೆ. ಏಕೆಂದರೆ ಆರ್ಯವರ್ಧನ್ ಗುರೂಜಿ ಅವರಿಗೆ ಐ ಲವ್ ಯು ಗುರೂಜಿ ಅವರೇ ನೀವು ನೋಡಲು ಬಹಳ ಮುದ್ದಾಗಿದ್ದೀರಾ ನನ್ನ ಜೀವನಕ್ಕೆ ಬರುತ್ತೀರಾ ಎಂದು ಕಾಲೆಳಿದಿದ್ದಾರೆ. ಅಷ್ಟೇ ಅಲ್ಲದೆ ನನ್ನನ್ನು ಮದುವೆಯಾಗಲು ನಿಮಗೆ ಒಪ್ಪಿಗೆ ಇದೆ ಎಂದು ಹೇಳಿದರೆ ಈ ಮಾತನ್ನು ಕೇಳಿ ಕಕ್ಕಾಬಿಕ್ಕಿ ಆದಂತಹ ಆರ್ಯವರ್ಧನ್ ಗುರೂಜಿ ಅವರು ನನಗೆ ಎರಡು ದಿನದ ಸಮಯ ಅವಕಾಶ ಕೊಡು ಅಂತ ಹೇಳಿ ಆ ವಿಚಾರದಿಂದ ತಪ್ಪಿಸಿಕೊಂಡು ಹೋಗುತ್ತಾರೆ ಇವೆಲ್ಲವನ್ನು ನೋಡಿದಂತಹ ಪ್ರಕ್ಷಕರಿಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಏಕೆಂದರೆ ಬಿಗ್ ಬಾಸ್ ನಲ್ಲಿ ಫೇಮಸ್ ಆಗುವುದಕ್ಕಾಗಿ ಇಷ್ಟೆಲ್ಲ ಮಾತನಾಡಬೇಕಾ ಇಷ್ಟೆಲ್ಲಾ ಡ್ರಾಮಾ ಮಾಡಬೇಕಾ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೆ‌. ಇದೆಲ್ಲ ಒಂದು ಕಡೆಯಾದರೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸಾನ್ಯಾ ಆಗಾಗ ವಿಡಿಯೋ ಮಾಡುವುದರ ಮೂಲಕ ಅದನ್ನು ಅಪ್ಲೋಡ್ ಮಾಡುತ್ತಾರೆ‌‌‌. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ಫ್ಯಾನ್ ಫಾಲ್ಲೋರ್ಸ್ ವಿಚಾರದಲ್ಲೂ ಕೂಡ ಸಾನ್ಯಾ ಅಯ್ಯರ್ ಯಾವ ನಟಿಗಿಂತ ಏನು ಕಡಿಮೆ ಇಲ್ಲ ಹೌದು ಲಕ್ಷಗಟ್ಟಲೆ ಫಾಲೋವರ್ಸ್ ಸಾನ್ಯಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕಳೆದ ಬಾರಿ ಅಷ್ಟೇ ಸಾನ್ಯಾ ಅಯ್ಯರ್ ಅವರು ಅಪ್ಲೋಡ್ ಮಾಡಿದಂತಹ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿ ಮಾಡಿದೆ ಅಂತಾನೆ ಹೇಳಬಹುದು. ಈ ವಿಡಿಯೋ ನೋಡಿದರೆ ನಿಜಕ್ಕೂ ಫಿದಾ ಆಗದವರೇ ಇಲ್ಲ ಅಂತ ಅನಿಸುತ್ತದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.