Home Blog Page 326

ಧಾರಾವಾಹಿಯಲ್ಲಿ ನಟಿಸುತ್ತಲೇ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ ಚಂದನ್ ಹಾಗೂ ಕವಿತಾ ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತ.?

ನಟ ಚಂದನ್ ಮತ್ತು ಕವಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟ ನಟಿಯಾಗಿ ಕಾಣಿಸಿಕೊಂಡಿದ್ದರು ಇದಕ್ಕೂ ಮುಂಚೆಯೇ ಚಂದನ್ ಅವರು ಸಾಕಷ್ಟು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಕೀರ್ತಿ ಮತ್ತು ಯಶಸ್ಸನ್ನು ತಂದುಕೊಟ್ಟ ಧಾರವಾಹಿ ಅಂದರೆ ಅದು ಲಕ್ಷ್ಮಿ ಬಾರಮ್ಮ ಅಂತಾನೆ ಹೇಳಬಹುದು. ಧಾರವಾಹಿಯಲ್ಲಿ ಗಂಡ ಹೆಂಡತಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಚಂದನ್ ಹಾಗೂ ಕವಿತಾ ನಿಜ ಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ನಿಮಗೆ ತಿಳಿದೇ ಇದೆ ಸುಮಾರು 9 ವರ್ಷ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಳೆದ ವರ್ಷವಷ್ಟೇ ಕಾಲಿಟ್ಟಿದ್ದಾರೆ.

ಅದ್ದೂರಿಯಾಗಿ ಖಾಸಗಿ ಹೋಟೆಲ್ ಒಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಆದರೆ ಇವರ ಮದುವೆಯ ಸಮಯದಲ್ಲಿ ಕೋವಿಡ್ ಇದ್ದ ಕಾರಣ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. ಮದುವೆಯಾದ ನಂತರ ಕವಿತಾ ಅವರು ಸಂಪೂರ್ಣವಾಗಿ ಕಿರುತೆರೆ ಲೋಕದಿಂದ ದೂರ ಉಳಿದಿದ್ದಾರೆ. ಅಂದರೆ ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿಲ್ಲ ಆದರೆ ಕವಿತಾ ಅವರು ಕ್ಲಾಸಿಕಲ್ ಡ್ಯಾನ್ಸರ್ ಈ ಕಾರಣಕ್ಕಾಗಿ ತಮ್ಮ ಮನೆಯಲ್ಲಿ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಚಂದನ್ ಅವರು ಮಾತ್ರ ಸಿಕ್ಕಾಪಟ್ಟೆ ಬ್ಯುಸಿ ಕನ್ನಡ ತೆಲುಗು ಸೇರಿದಂತೆ ಎರಡು ಭಾಷೆಯನ್ನು ಕೂಡ ನಟನೆ ಮಾಡುತ್ತಿದ್ದಾರೆ. ಇನ್ನು ಚಂದನ್ ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ಗುರುತಿಸಿಕೊಂಡಿಲ್ಲ ಇದರ ಹೊರತಾಗಿ ಹಲವರು ಬಿಸಿನೆಸ್ ಮಾಡುತ್ತಿದ್ದಾರೆ ಹೌದು, ರಿಯಲ್ ಎಸ್ಟೇಟ್ ಸೇರಿದಂತೆ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ಒಂದನ್ನು ಹೊಂದಿದ್ದಾರೆ.

ಒಟ್ಟಾರಿಯಾಗಿ ಹೇಳುವುದಾದರೆ ಇವರ ಆದಾಯವು ಕೂಡ ಅಧಿಕ ಅಂತಾನೆ ಹೇಳಬಹುದು ಏಕೆಂದರೆ ಒಂದು ಕಡೆ ನಟನೆಯಿಂದ ಆದಾಯ ಬರುತ್ತಿದೆ ಮತ್ತೊಂದು ಕಡೆ ಬಿಸಿನೆಸ್ ನಿಂದಲೂ ಕೂಡ ಆದಾಯ ಬರುತ್ತಿದ್ದರೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಇದ್ದರೂ ಕೂಡ ಕಳೆದ ತಿಂಗಳಿನ ಅಷ್ಟೇ ಅಪಾರ್ಟ್ಮೆಂಟ್ ಒಂದನ್ನು ಖರೀದಿ ಮಾಡಿದರು. ಇದರ ಜೊತೆಗೆ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕಾಗಿ ಬೆಲೆಬಾಳುವಂತಹ ದುಬಾರಿ ಚಿನ್ನಭರಣವನ್ನು ಕೂಡ ಉಡುಗೊರೆಯಾಗಿ ನೀಡಿದ್ದಾರೆ ಇವೆಲ್ಲವನ್ನು ನೋಡುತ್ತಿದ್ದಂತಹ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಆಶ್ಚರ್ಯವಾಗಿದೆ. ಅಷ್ಟೇ ಅಲ್ಲದೆ ಚಂದನ್ ಮತ್ತು ಕವಿತಾ ಅವರ ಆಸ್ತಿ ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲವೂ ಕೂಡ ಇದೆ.

ಹೌದು ಸಾಮಾನ್ಯವಾಗಿ ಸೆಲೆಬ್ರೆಟಿಗಳಾಗಿರಲಿ ಅಥವಾ ಕಿರುತರೆ ನಟ ನಟಿಯರಾಗಿರಲಿ ಅವರ ಆಸ್ತಿ ವಿವರವನ್ನು ವೆಬ್ಸೈಟ್ ಒಂದರಲ್ಲಿ ಪ್ರಕಟಿಸಲಾಗುತ್ತದೆ. ಈ ವೆಬ್ ಸೈಟ್ ನಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ನಟ ಚಂದನ್ ಅವರು ಸೀರಿಯಲ್ ಗಳಲ್ಲಿ ನಟನೆ ಮಾಡುತ್ತಲೇ ಸುಮಾರು 30 ಕೋಟಿ ಹಣವನ್ನು ಸಂಪಾದನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಕವಿತ ಗೌಡ ಅವರ ವಿಚಾರಕ್ಕೆ ಬರುವುದಾದರೆ ಈಗಾಗಲೇ 20 ಕೋಟಿ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ ಒಟ್ಟಾರೆಯಾಗಿ ಹೇಳುವುದಾದರೆ ಗಂಡ ಹೆಂಡತಿ ಇಬ್ಬರೂ ಕೂಡ ಇದೀಗ 50 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

ಆದರೆ ಕಳೆದ ತಿಂಗಳಷ್ಟೇ ನಟ ಚಂದನ್ ಅವರು ತೆಲುಗು ಕಿರುತೆರೆ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಹೌದು ಧಾರವಾಹಿ ಟೆಕ್ನಿಕಲ್ ತಂಡದಲ್ಲಿ ಇದ್ದಂತಹ ಯುವಕನಿಗೆ ಅ.ವ್ಯಾ.ಚ ಪದಗಳಿಂದ ನಿಂ.ದ.ನೆ ಮಾಡಿದ್ದಾರೆ ಎಂಬ ಕಾರಣದಿಂದಾಗಿ ನಟ ಚಂದನ್ ಮೇಲೆ ಟೆಕ್ನಿಷಿಯನ್ ಟೀಮ್ ಅವರು ಕೈ ಮಾಡಿದ್ದಾರು. ಈ ಕಾರಣದಿಂದ ಬಹಳ ನೋವನ್ನು ಅನುಭವಿಸಿದಂತಹ ಚಂದನ್ ಅವರು ಇನ್ನು ಮುಂದೆ ನಾನು ತೆಲುಗು ಸೀರಿಯಲ್ ನಲ್ಲಿ ಅಭಿನಯಿಸುವುದಿಲ್ಲ ಎಂದು ಕೋಪ ಮಾಡಿಕೊಂಡು ಸೀರಿಯಲ್ಸ್ ನಿಂದ ಹೊರಬಂದ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ. ಸದ್ಯಕ್ಕೆ ಚಂದನ್ ಅವರು ತೆಲುಗು ಕಿರುತೆರೆ ರಂಗವನ್ನು ಬಿಟ್ಟು ಕನ್ನಡಕ್ಕೆ ಮರಳಿ ಬಂದಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮೈಚಳಿ ಬಿಟ್ಟು ಪ್ರಿಯಾಮಣಿ ಮಾಡಿದ ಈ ಚಿಂದಿ ಡ್ಯಾನ್ಸ್ ನೋಡಿ ಹಬ್ಬಾಬ್ಬ ಏನ್ ಮಸ್ತ್ ಡ್ಯಾನ್ಸ್ ಮಾಡ್ತಾರೆ.

ಪ್ರಿಯಮಣಿ ಮೂಲತಃ ಕನ್ನಡದವರೆ ಬೆಂಗಳೂರಿನಲ್ಲಿ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮಾಡೆಲಿಂಗ್ ಕ್ಷೇತ್ರದಲ್ಲಿ ತುಂಬಾನೇ ಹೆಸರುವಾಸಿಯಾಗಿದಂತಹ ಪ್ರಿಯಮಣಿ ಅವರು ಸ್ಯಾಂಡಲ್ವುಡ್ ಕೂಡ ಕಾಲಿಡುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಅಣ್ಣ ಬಾಂಡ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಂಬರೀಶ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಇಂತಿ ನಿನ್ನ ಪ್ರೀತಿಯ, ಡಾಕ್ಟರ್ ಶಿವರಾಜಕುಮಾರ್ ಅವರ ಜೊತೆ ಲಕ್ಷ್ಮಿ ಹೀಗೆ ಕನ್ನಡದ ದಿಗ್ಗಜ ನಟರ ಜೊತೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟಿಸಿದ್ದಾರೆ.

ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸಿಂಗ್ ಕಾರ್ಯಕ್ರಮ ಒಂದರಲ್ಲೂ ಕೂಡ ಜಡ್ಜ್ ಆಗಿ ಪಾಲ್ಗೊಂಡಿದ್ದರು. ಇದಾದ ನಂತರ ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿಯೂ ಕೂಡ ಕೆಲಸ ಮಾಡಿದ್ದಾರೆ. ನಟಿ ಪ್ರಿಯಾಮಣಿ ಅವರ ಬದುಕಿನಲ್ಲಿ ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಒಳ್ಳೆಯ ಹೆಸರು ಕೀರ್ತಿ ಜೊತೆಗೆ ನಟನೆಯ ಅವಕಾಶ ಎಲವೂ ಕೂಡ ದೊರೆಯುತ್ತಿತ್ತು ಆದರೆ ಇವರು ತಮ್ಮ ಜೀವನದಲ್ಲಿ ತಮ್ಮ ಬಾಳ ಸಂಗಾತಿಯನ್ನು ತಪ್ಪಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೌದು ಫೇಮಸ್ ಬಿಜಿನೆಸ್ ಮ್ಯಾನ್ ಆದಂತಹ ಮುಸ್ತಫ ಅವರನ್ನು ವಿವಾಹ ಆಗುತ್ತಾರೆ ಆದರೆ ಮುಸ್ತಫ ಅವರು ಮೂಲತಃ ಮುಂಬೈನವರು ಮುಸ್ಲಿಂ ಕುಟುಂಬಕ್ಕೆ ಸೇರಿದಂತವರು. ಈಗಾಗಲೇ ಮುಸ್ತಫ ಅವರಿಗೆ ಒಂದು ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದರು ಆ ಮೊದಲ ಪತ್ರಿಕೆ ವಿ.ಚ್ಛೇ.ದ.ನ ನೀಡಿದ ನಂತರ ಪ್ರಿಯಾಮಣಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.

ಮದುವೆಯಾದ ನಂತರ ಪ್ರಿಯಾಮಣಿ ಅವರು ಚಿತ್ರರಂಗದಿಂದ ಕಣ್ಮರೆಯಾದರೂ ಅಂತಾನೇ ಹೇಳಬಹುದು ಏಕೆಂದರೆ ಮದುವೆಯ ನಂತರ ಇವರು ಅಷ್ಟಾಗಿ ಯಾವ ಸಿನಿಮಾದಲ್ಲಿಯೂ ಕೂಡ ನಟಿಸಲಿಲ್ಲ ಸದ್ಯಕ್ಕೆ ತಮ್ಮ ಪತಿಯ ಬಿಸಿನೆಸ್ ನೋಡಿಕೊಂಡು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಆಗಾಗ ಯಾವುದಾದರೂ ಸಿನಿಮಾ ಕಾರ್ಯಕ್ರಮ ಇತ್ತು ಅಂದರೆ ಅಂದರೆ ಮಾತ್ರ ಇವರು ಕಾಣಿಸಿಕೊಳ್ಳುತ್ತಾರೆ. ಇನ್ನು ಚಿತ್ರರಂಗದಿಂದ ಕಣ್ಮರೆಯಾಗಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದಾರೆ ಹೌದು ಸೋಶಿಯಲ್ ಮೀಡಿಯಾದ ಮುಖಾಂತರ ತಮ್ಮ ಅಭಿಮಾನಿಗಳು ಟಿಕೆಟ್ ನಲ್ಲಿ ಇರುವಂತಹ ಪ್ರಿಯ ಆಗಾಗ ಫೇಸ್ ಬುಕ್ ನಲ್ಲಿ ಲೈವ್ ಬರುತ್ತಾರೆ ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಹಲವಾರು ಫೋಟೋಸ್ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಕಳೆದ ತಿಂಗಳಷ್ಟೇ ಹಾಡೊಂದಕ್ಕೆ ಸಕತ್ತಾಗಿ ಸ್ಟೆಪ್ ಹಾಕಿದರೆ ಸದ್ಯಕ್ಕೆ ಪ್ರಿಯಾಮಣಿ ಅವರು ಮಾಡಿದಂತಹ ಈ ಡಾನ್ಸ್ ನೋಡಿದಂತಹ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡಿರುವುದಂತೂ ಸತ್ಯ ಸಕ್ಕತ್ ರೋಮ್ಯಾಂಟಿಕ್ ಆಗಿ ಕಾಣುವಂತಹ ಪ್ರಿಯಾಮಣಿ ಅವರು ಈ ಹಾಡಿಗೆ ತಮ್ಮಿಷ್ಟದ ಹೆಜ್ಜೆಯನ್ನು ಹಾಕಿದ್ದಾರೆ. ಈ ಡ್ಯಾನ್ಸ್ ನೋಡುಗರ ಕಣ್ಮನವನ್ನು ಸೆಳೆದಿದೆ ಅಷ್ಟೇ ಅಲ್ಲದೆ ಪ್ರಿಯಾಮಣಿ ಅಭಿಮಾನಿಗಳು ಈ ಡ್ಯಾನ್ಸ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವಂತಹ ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ನೆಟ್ಟಿಗರು ಪ್ರಿಯಾಮಣಿಯವರು ಇದೇನು ಈ ರೀತಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ ಅದೇನೇ ಇರಲಿ ಸದ್ಯಕ್ಕೆ ಪ್ರಿಯಾಮಣಿ ಅವರು ಮಾಡಿದಂತಹ ಈ ಸೋಶಿಯಲ್ ಮೀಡಿಯಾದಲ್ಲಿ ಒಂದು ಸೆನ್ಸೇಶನ್ ಕ್ರಿಯೇಟ್ ಮಾಡಿರುವುದಂತೂ ಸತ್ಯ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕೊಟ್ಯಾಧಿಪತಿ ಕಾರ್ಯಕ್ರಮದಿಂದ ಪಡೆಯುತ್ತಿದ್ದ ಸಂಭಾವನೆಯನ್ನು ಅಪ್ಪು ಯಾವುದಕ್ಕಾಗಿ ಖರ್ಚು ಮಾಡುತ್ತಿದ್ದರು ಗೊತ್ತಾ.?

ಅಪ್ಪು ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಎಂದಿಗೂ ಕೂಡ ತಾನು ಮಾಡಿದಂತಹ ದಾನ ಧರ್ಮವನ್ನು ಮತ್ತೊಬ್ಬರೊಟ್ಟಿಗೆ ಹೇಳಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲದೆ ಸಹಾಯ ಪಡೆದಂತಹ ವ್ಯಕ್ತಿಗೂ ಕೂಡ ನಾನೇ ಇದನ್ನು ಮಾಡಿದ್ದೇನು ಎಂಬುದನ್ನು ಯಾರಿಗೂ ಕೂಡ ಹೇಳಬಾರದು ಎಂಬ ಮಾತನ್ನು ತೆಗೆದುಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯಬಾರದು ಅಂತಹ ವ್ಯಕ್ತಿತ್ವವನ್ನು ಒಳಗೊಂಡಿದ್ದರು. ಇಂತಹ ಒಳ್ಳೆಯ ವ್ಯಕ್ತಿ ಇದ್ದಕ್ಕಿದ್ದ ಹಾಗೆ ನಮ್ಮೆಲ್ಲರನ್ನು ಬಿಟ್ಟು ಹೋದರು ಅಂದರೆ ಆ ದಿನವನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಅಪ್ಪು ಅವರು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ನಮ್ಮಿಂದ ಈಗಲೂ ಕೂಡ ಸಾಧ್ಯವಾಗುತ್ತಿಲ್ಲ.

ಅಪ್ಪು ಕೇವಲ ನಟ ಮಾತ್ರ ಅಲ್ಲ ಅದ್ಬುತ ಡ್ಯಾನ್ಸರ್ ಉತ್ತಮ ಸಂಗೀತಗಾರ ಇನ್ನ ಸಮಾಜ ಸೇವೆ ವಿಷಯದಲ್ಲಿ ಹೇಳಬೇಕಾದ ಅಗತ್ಯವೇ ಇಲ್ಲ. ಏಕೆಂದರೆ ನಿಮ್ಮೆಲ್ಲರಿಗೂ ಕೂಡ ಈಗಾಗಲೇ ತಿಳಿದಿದೆ ಅಪ್ಪು ಅವರು ವಿಧಿವಶಾರಾದ ಮೇಲೆ ಅವರು ಎಷ್ಟು ಸಹಾಯ ಮಾಡಿದರು ಎಂಬ ವಿಚಾರ ತಿಳಿದೇ ಇದೆ. ಇನ್ನು ಸಮಾಜಸೇವೆ ವಿಚಾರವನ್ನು ಬಿಟ್ಟು ದೇಶಭಿಮಾನ ಹಾಗೂ ನಾಡು ನುಡಿ ನೆಲ ಜಲದ ವಿಚಾರಕ್ಕೆ ಬಂದರೆ ಅವರೇ ಮೊದಲು ನಿಂತುಕೊಳ್ಳುತ್ತಿದ್ದರು ಕನ್ನಡದ ಮೇಲೆ ಅಷ್ಟೊಂದು ಅಪಾರ ಪ್ರೀತಿಯನ್ನು ಹೊಂದಿದ್ದರು. ಅಪ್ಪು ಅವರ ಬಳಿ ಸಮಸ್ಯೆ ಅಂತ ಹೋದಾಗ ಅದನ್ನು ಬಗೆಹರಿಸುತ್ತಿದ್ದರು ಅಪ್ಪು ಅವರ ಮನೆಗೆ ಹೋಗಿ ಬರಿಗೈನಲ್ಲಿ ಬಂದಂತಹ ವ್ಯಕ್ತಿಗೆ ಇಲ್ಲ ಅಂತಾನೆ ಹೇಳಬಹುದು‌.

ಇದೆಲ್ಲ ಒಂದು ಕಡೆಯಾದರೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದದ್ದು ನಿಮಗೆಲ್ಲರಿಗೂ ತಿಳಿದೇ ಇದೆ ಸುಮಾರು ನಾಲ್ಕು ಸೀಸನ್ಗಳನ್ನು ನಡೆಸಿ ಕೊಟ್ಟರು. ಸಾಮಾನ್ಯವಾಗಿ ನಟ ಆಗಿರ ಬಹುದು ನಿರೂಪಕ ಆಗಿರಬಹುದು ಯಾವುದೇ ಕಾರ್ಯಕ್ರಮ ನಡೆಸಿಕೊಟ್ಟರು ಕೂಡ ಅದಕ್ಕೆ ಇಂತಿಷ್ಟು ಸಂಭಾವನೆ ಅಂತ ಮೊದಲೇ ನಿಗದಿ ಮಾಡಿರುತ್ತಾರೆ. ಹಾಗಾಗಿ ಅಪ್ಪು ಅವರಿಗೂ ಕೂಡ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಒಂದು ಸೀಸನ್ಗೆ ಎಂಟು ಕೋಟಿ ಅಂತ ನಿಗದಿ ಮಾಡಿದ್ದರು. ಪ್ರತಿ ಸೀಸನ್ನಲ್ಲಿಯೂ ಪಡೆದಂತಹ ಸಂಭಾವನೆಯನ್ನು ಅಪ್ಪು ಅವರು ಎಂದಿಗೂ ಕೂಡ ತಮ್ಮ ವೈಯಕ್ತಿಕ ವಿಚಾರಗಳಿಗೆ ಖರ್ಚು ಮಾಡಿಲ್ಲ. ಹೌದು ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬಂದಂತಹ ಹಣವನ್ನು ಶಕ್ತಿಧಾಮ ಎಂಬ ಸಂಸ್ಥೆಗೆ ವಿನಿಯೋಗ ಮಾಡುತ್ತಿದ್ದರು.

ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅವರು ನಿರ್ಮಾಣ ಮಾಡಿದಂತಹ ಶಕ್ತಿ ಧಾಮ ಎಂಬ ಸಂಸ್ಥೆ ಮೈಸೂರಿನಲ್ಲಿ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಲ್ಲಿ ಸುಮಾರು 1800ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರೆ. ಅದರಲ್ಲಿಯೂ ಕೂಡ ಎಲ್ಲರೂ ಬಡವರ್ಗದಿಂದ ಬಂದಂತಹ ಹೆಣ್ಣು ಮಕ್ಕಳೆ ಹಾಗಾಗಿ ಈ ಹೆಣ್ಣು ಮಕ್ಕಳಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಮತ್ತು ಶಿಕ್ಷಣ ನೀಡುವುದು ಸಲುವಾಗಿ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ಅಪ್ಪು ಅವರು ಒದಗಿಸಿ ಕೊಡುತ್ತಿದ್ದರು. ಈ ಒಂದು ಸಂಸ್ಥೆಯನ್ನು ಮುನ್ನಡೆಸಿ ಕೊಡುವುದಕ್ಕೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮದಿಂದ ಬರುತ್ತಿದ್ದಂತಹ ಸಂಭಾವನೆಯನ್ನು ವಿನಿಯೋಗ ಮಾಡುತ್ತಿದ್ದರು. ಈ ವಿಚಾರವನ್ನು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಆದಂತಹ ಭಗವಾನ್ ಸತ್ಯ ಅವರು ಬಿಚ್ಚಿಟ್ಟಿದ್ದಾರೆ. ಭಗವಾನ್ ಸತ್ಯ ಹಾಗೂ ರಾಜಕುಮಾರ್ ಕುಟುಂಬಕ್ಕೆ ಅವಿನ ಭಾವನ ಸಂಬಂಧ ಈ ಕುಟುಂಬದ ಬಹುತೇಕ ವಿಚಾರಗಳು ಭಗವಾನ್ ಅವರಿಗೆ ತಿಳಿದೆ ಇತ್ತು.

ಸಂದರ್ಶನದಲ್ಲಿ ಮಾತನಾಡಬೇಕಾದರೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಬರುತ್ತಿದ್ದಂತಹ ಸಂಭಾವನೆ ಹಣವನ್ನು ಶಕ್ತಿಧಾಮ ಕೇಂದ್ರಕ್ಕಾಗಿ ವಿನಿಯೋಗ ಮಾಡುತ್ತಿದ್ದರು ಎಂಬ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ನಿಜಕ್ಕೂ ಅಪ್ಪು ಅವರ ಸಮಾಜ ಸೇವೆಯನ್ನು ನಾವೆಲ್ಲರೂ ಮೆಚ್ಚಲೇಬೇಕು ಅಷ್ಟೇ ಅಲ್ಲದೆ ಇವರ ವ್ಯಕ್ತಿತ್ವಕ್ಕೆ ನಾವು ಒಂದು ಸಲಾಂ ಹೊಡೆಯಲೇಬೇಕು. ಏಕೆಂದರೆ ತಮಗೆ ಬರುವಂತಹ ಸಂಭಾವನೆಯನ್ನು ಅವರ ವೈಯಕ್ತಿಕ ವಿಚಾರಕ್ಕೆ ಬಳಕೆ ಮಾಡದೆ ಕೇವಲ ಸಮಾಜಕ್ಕಾಗಿ ಬಡ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಒಳ್ಳೆಯ ಮನಸ್ಸನ್ನು ಹೊಂದಿದ್ದಕ್ಕೆ ಏನೋ ಅಪ್ಪು ಅವರು ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ಅಂತ ಅನಿಸುತ್ತದೆ. ನಿಜಕ್ಕೂ ದೇವರಿಗೂ ಕೂಡ ಹಿಡಿ ಶಾಪವಿರಲಿ ನಮ್ಮ ಅಪ್ಪು ಅವರನ್ನು ಕರೆದುಕೊಂಡಿದ್ದಕ್ಕಾಗಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.

ದೇಹದ ಇಂಚಿಂಚಿಗೂ ಟ್ಯಾಟೋ ಹಾಕಿಸಿಕೊಂಡ ಹಾಲಿವುಡ್ ನಾ ಖ್ಯಾತ ನಟಿ, ಟ್ಯಾಟೋ ಹಾಕಿಸಿಕೊಂಡ ಅನುಭವದ ಮಾತು ಕೇಳಿದ್ರೆ ಎಂಥವರಾದರು ದಂಗಾಗಿ ಹೋಗುತ್ತಾರೆ.

ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿನ ಯುವ ಜನತೆಯ ಕ್ರೇಜ್ ಅಂತ ಹೇಳಬಹುದು ಯುವಕರು ಮತ್ತು ಯುವತಿಯರು ತಮ್ಮಿಷ್ಟದ ಹೆಸರನ್ನು ಅಥವಾ ತಮ್ಮಿಷ್ಟದ ಚಿತ್ರವನ್ನು ದೇವರ ಫೋಟೋಗಳನ್ನು ಟ್ಯಾಟೋ ಹಾಕಿಸಿಕೊಳ್ಳುವುದನ್ನು ನಾವು ನೋಡಬಹುದು. ಸಾಮಾನ್ಯವಾಗಿ ಟ್ಯಾಟೋ ಅನ್ನು ಕೈ ಮೇಲೆ ಅಥವಾ ಕುತ್ತಿಗೆ ಭಾಗದಲ್ಲಿ ಹಾಕಿಕೊಳ್ಳುವುದನ್ನು ನಾವು ನೋಡಬಹುದು. ಆದರೆ ಇಂದಿನ ಯುವ ಪೀಳಿಗೆ ಟ್ಯಾಟೋ ಅನ್ನು ಹಾಕಬಾರದ ಜಾಗದಲ್ಲೆಲ್ಲ ಹಾಕಿಕೊಳ್ಳುತ್ತಿದ್ದಾರೆ ಹೌದು. ಕೈಯಿ ಕಾಲು ಕುತ್ತಿಗೆ ಬೆನ್ನು ಹೊರತುಪಡಿಸಿ ದೇಹದ ಇನ್ನಿತರ ಗುಪ್ತಂಗ ಭಾಗಗಳಿಗೂ ಕೂಡ ಹಾಕಿಸಿಕೊಳ್ಳುವುದು ಇತ್ತೀಚಿನ ದಿನದಲ್ಲಿ ಟ್ರೆಂಡ್ ಆಗಿದೆ. ಟ್ಯಾಟನ್ನು ಸಾಮಾನ್ಯವಾಗಿ ಸಾಮಾನ್ಯ ಜನರು ಕೂಡ ಹಾಕಿಸಿಕೊಳ್ಳುತ್ತಾರೆ ಆದರೆ ನಟ ನಟಿಯರು ಬಾಡಿ ಬಿಲ್ಡರ್ಸ್ ಗಳು ಮಾಡೆಲ್ ಗಳು ಅಥವಾ ಕ್ರಿಕೆಟರ್ಸ್ ಹಾಕಿಸಿಕೊಂಡರೆ ಅದು ಹೆಚ್ಚು ಸದ್ದು ಮಾಡುತ್ತದೆ.

ಆದರೆ ಇಲ್ಲೊಬ್ಬ ಹಾಲಿವುಡ್ ನಟಿ ಮಾತ್ರ ಟ್ಯಾಟೋ ಅನ್ನು ಯಾವ ರೀತಿ ಹಾಕಿಸಿಕೊಂಡಿದ್ದಾರೆ ಅಂದರೆ ಮುಖ ಒಂದನ್ನು ಬಿಟ್ಟರೆ ಅವರ ದೇಹದ ಇಂಚಿಂಚಿಗೂ ಕೂಡ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಹೌದು ಹಾಲಿವುಡ್ ಚಿತ್ರರಂಗದ ಖ್ಯಾತ ನಟಿ ಅನಿಸಿಕೊಂಡಿರುವ ಬೆಕಿ ಹಾಲ್ಟ್ ಮೈತುಂಬ ಟ್ಯಾಟೂ ಹಾಕಿಕೊಂಡು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ದೇಹದ ಎಲ್ಲಾ ಭಾಗಕ್ಕೂ ಬೆಕಿ ಹಾಲ್ಟ್ ಟ್ಯಾಟೂ ಹಾಕಿಕೊಂಡಿದ್ದು ಸದ್ಯ ನಟಿ ಕೊಟ್ಟ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ. ಸತತ ಒಂದು ವರ್ಷಗಳಿಂದ ಟ್ಯಾಟೂ ಹಾಕಿಕೊಳ್ಳಲು ಪ್ರಯತ್ನವನ್ನ ಮಾಡುತ್ತಿರುವ ನಟಿ ಬೆಕಿ ಹಾಲ್ಟ್ ಅವರು ಕೊನೆಗೂ ವರ್ಷಗಳ ಪ್ರಯತ್ನದಿಂದ ಮೈತುಂಬ ಟ್ಯಾಟೂ ಹಾಕಿಕೊಂಡು ದೊಡ್ಡ ದಾಖಲೆಯನ್ನ ಮಾಡಿದ್ದಾಳೆ. ಜನರು ಶಾ.ಕ್ ಆಗುವ ವಿಷಯ ಏನು ಅಂದರೆ ಈಕೆ ತನ್ನ ಜನನಾಂಗಕ್ಕೂ ಟ್ಯಾಟೂ ಹಾಕಿಕೊಂಡು ಅದರ ಅನುಭವವನ್ನ ಕೂಡ ಹೇಳಿಕೊಂಡಿದ್ದಾಳೆ.

ಹೌದು ನಟಿ ಬೆಕಿ ಹಾಲ್ಟ್ ಜನನಾಂಗಕ್ಕೂ ಟ್ಯಾಟೂ ಹಾಕಿಕೊಂಡು ಆ ಜಾಗದಲ್ಲಿ ಟ್ಯಾಟೂ ಹಾಕಿಕೊಳ್ಳುವಾಗ ಬಹಳ ನೋವಾಯಿತು ಮತ್ತು ಜೀವವೇ ಹೋದಂತೆ ಆಯಿತು ಎಂದು ಹೇಳಿದ್ದಾರೆ. ಆ ಜಾಗದಲ್ಲಿ ಟ್ಯಾಟೂ ಹಾಕಿಕೊಳ್ಳುವ ಸಮಯದಲ್ಲಿ ನಾನು ಐದು ಭಾರಿ ವಿಶ್ರಾಂತಿಯನ್ನ ಪಡೆದುಕೊಂಡಿದ್ದೇನೆ ಎಂದು ನಟಿ ಬೆಕಿ ಹಾಲ್ಟ್ ಹೇಳಿದ್ದಾರೆ. ನಟಿ ಬೆಕಿ ಹಾಲ್ಟ್ ಮೈತುಂಬ ಟ್ಯಾಟೂ ಹಾಕಿಕೊಳ್ಳಲು ಬರೋಬ್ಬರಿ 34 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರಂತೆ ದೇಹದ ಎಲ್ಲಾ ಭಾಗಕ್ಕೂ ನಟಿ ಬೆಕಿ ಹಾಲ್ಟ್ ಟ್ಯಾಟೂ ಹಾಕಿಕೊಂಡಿದ್ದು ಈ ಸಾಧನೆಯನ್ನ ಕೆಲವೇ ಕೆಲವು ಮಹಿಳೆಯರು ಮಾತ್ರ ಮಾಡಿದ್ದಾರೆ. ಸದ್ಯ ನಟಿ ಬೆಕಿ ಹಾಲ್ಟ್ ಹೊಸ ಸಾಧನೆಯನ್ನ ಮಾಡ್ದಿದು ಈ ಸಾಧನೆಯನ್ನ ಮಾಡಲು ಬರೊಬ್ಬರು ಒಂದು ವರ್ಷ ಕಾಲ ಆಯಿತು ಮತ್ತು ಅದಕ್ಕಾಗಿ ಬರೋಬ್ಬರಿ 34 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ನಟಿ ಬೆಕಿ ಹಾಲ್ಟ್

ಸದ್ಯ ಈ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ ಕೆಲವು ನೆಟ್ಟಿಗರು ಈ ಟ್ಯಾಟೂ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ಈಕೆಗೆ ಛೀಮಾರಿಯನ್ನು ಹಾಕಿದ್ದಾರೆ. ಏಕೆಂದರೆ ದೇಹದ ಕೈ ಕಾಲು ಅಥವಾ ಸೊಂಟಕ್ಕೆ ಟ್ಯಾಟೋ ಹಾಕಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಆದರೆ ಕೆಲವು ಗುಪ್ತಾಂಗಗಳಿಗೂ ಕೂಡ ಈ ರೀತಿ ಟ್ಯಾಟು ಹಾಕಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನೆ ಮಾಡಿದ್ದಾರೆ. ಜನನಾಂಗಕ್ಕೆ ಟ್ಯಾಟು ಹಾಕಿಸಿಕೊಳ್ಳುವುದು ಅಂದರೆ ತಮಾಷೆ ಮಾತಾ.? ಇದರಿಂದ ಜೀವಕ್ಕೆ ಕುತ್ತು ಕೂಡ ಬರಬಹುದು. ಸ್ವಲ್ಪ ಆಯತಪ್ಪಿದರೂ ಕೂಡ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಹೆಣ್ಣು ಅಂದ ಮೇಲೆ ಆಕೆಗೆ ಒಂದು ಗೌರವ ಇರುತ್ತದೆ. ಟ್ಯಾಟೋ ಹಾಕಿಸಿಕೊಳ್ಳುವುದಕ್ಕಾಗಿ ಆತನ ಮುಂದೆ ಬೆತ್ತಲಾಗುವುದು ನಿಜಕ್ಕೂ ತಪ್ಪು ಎಂದು ನೆಟ್ಟಿಗರು ತಮ್ಮ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಈಕೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡಿದೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

ಮೈಸೂರಿನಲ್ಲಿ ಮೈಸೂರು ವಿವಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿ ಯುವಪೀಳಿಗೆಯನ್ನು ಉದ್ದೇಶಿಸಿ ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಾರೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದು ಕೂಗಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕಾಲೇಜು ದಿನಗಳಲ್ಲಿ ನಾನೇನು ತಂದೆ-ತಾಯಿಗಳು ಇಚ್ಛೆ ಪಡುವ ರೀತಿಯಲ್ಲಿ ಜವಾಬ್ದಾರಿಯುತ ಮಗನಾಗಿರದೆ ಅಂದಿನ ದಿನಗಳಲ್ಲಿ ಅಲ್ಲಿ ಇಲ್ಲಿ ಸ್ಟಂಟ್ ಮಾಡುತ್ತ ಹುಡುಗರ ಜೊತೆ ಪಡುವಾರಳ್ಳಿ, ಗಂಗೋತ್ರಿ, ಒಂಟಿಕೊಪ್ಪಲ್, ಕಾಳಿದಾಸ ರಸ್ತೆಗಳಲ್ಲಿ ಅಲೆಯುತ್ತಿದ್ದೆ ಎಂದು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇಂದು ಅದೇ ಊರಿನಲ್ಲಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ದೇಶದ ಧ್ವಜ ಹಿಡಿಯುವ ಪುಣ್ಯದ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿಗಳ ಎದುರು ನಾನು ಹೆಚ್ಚು ಮಾತನಾಡಲು ಬಯಸುತ್ತೇನೆ ಇದಕ್ಕೆ ಕಾರಣ ವಿದ್ಯಾರ್ಥಿ ಜೀವನದಲ್ಲಿ ಅನೇಕ ಗೊಂದಲಗಳಿರುತ್ತವೆ ಇಂತಹ ಗೊಂದಲಗಳನ್ನು ದಾಟಿ ಬಂದಿರುವ ನಾನು ನಿಮ್ಮೆದುರು ಮಾತನಾಡಲು ಬಯಸುತ್ತೇನೆ ಎಂದು ಮಾತನ್ನು ಆರಂಭಿಸಿದ ಯಶ್ ಅವರು ವಿದ್ಯಾರ್ಥಿ ಜೀವನದಲ್ಲಿ ನಾನೂ ಸಹ ಬೇಜವಾಬ್ದಾರಿಯಿಂದ ಇದ್ದುದಲ್ಲದೆ ಇದೇ ಊರಿನಲ್ಲಿ ಬೆಳೆದ ನಾನು ಇಂದು ಈ ಮಟ್ಟಕ್ಕೆ ನಿಲ್ಲಲು ಕಾರಣ ಸರಳ ಬದಲಾವಣೆಗಳು ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಎಲ್ಲವನ್ನೂ ಬಿಟ್ಟು ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ ಆದರೆ ಸಣ್ಣ ಸಣ್ಣ ಬದಲಾವಣೆಗಳಿಂದ ನಾವು ಏನನ್ನಾದರೂ ಸಾಧಿಸಬಹುದು ಇದಕ್ಕೆ ತಕ್ಕಂತೆ ಆತ್ಮವಿಶ್ವಾಸ ಇರಬೇಕು ಎಂದು ಮುಂದುವರೆಸಿ ತಮ್ಮ ಕೆಜಿಎಫ್ ಸಿನಿಮಾ ಕುರಿತಾಗಿ ಒಂದಿಷ್ಟು ಮಾತುಗಳನ್ನ ಆಡುತ್ತಾರೆ.

ಇಂದು ಕನ್ನಡ ಸಿನಿಮಾ ಇಷ್ಟು ದೊಡ್ಡ ಯಶಸ್ಸನ್ನು ಗಳಿಸುತ್ತದೆ ಎಂದು ಯಾರಾದರೂ ಯೋಚಿಸಿದ್ದಿರಾ?. ಆದರೆ ಇಂದು ಕನ್ನಡ ಸಿನಿಮಾ ಆ ಯಶಸ್ಸನ್ನು ಗಳಿಸಿರುವ ಬಗ್ಗೆ ನನಗೆ ಹೆಮ್ಮೆ ಇದ್ದು ಇದನ್ನು ನಾನು ಸಂಕೋಚವಿಲ್ಲದೆ ನೇರವಾಗಿ ಹೇಳಿಕೊಳ್ಳುತ್ತೇನೆ ಎಂದು ತಮ್ಮ ಸ್ಫೂರ್ತಿದಾಯಕ ನುಡಿಗಳನ್ನು ಮುಂದುವರೆಸುತ್ತಾರೆ. ಓಪನ್ ಆಗಿ ಮಾತನಾಡುವುದರಿಂದ ನಮ್ಮಲ್ಲಿ ಸಕರಾತ್ಮಕ ಶಕ್ತಿ ಬೆಳೆಯುತ್ತದೆ ಈ ರೀತಿ ಮಾತನಾಡುವುದರಿಂದ ಕೆಲವರು ನಮಗೆ ಅಹಂಭಾವ ಇದೆ ಎಂದು ಭಾವಿಸುತ್ತಾರೆ ಆದರೆ ನಾವು ಒಳ್ಳೆಯದನ್ನು ಮಾತನಾಡಿದರೆ ಯೋಚಿಸಿದರೆ ಈ ಮಾತುಗಳಿಂದ ಸ್ವಲ್ಪ ಜನರಾದರೂ ಸಹ ಒಳ್ಳೆಯವರು ಇದ್ದೇ ಇರುತ್ತಾರೆ ಎಂದು ತಮ್ಮ ಸ್ಟ್ರೈಟ್ ಫಾರ್ವರ್ಡ್ ಮಾತುಗಳನ್ನ ಆಡುತ್ತಾರೆ. ಸರ್ಕಾರಗಳು ತಮ್ಮ ಕೆಲಸಗಳನ್ನು ಮಾಡುತ್ತಿರುತ್ತವೆ ಆದರೆ ನಮ್ಮೊಳಗೇ ಒಂದು ಸರ್ಕಾರ ಹುಟ್ಟಿ ಅಲ್ಲಿ ನಮ್ಮದೇ ಆದ ಇಲಾಖೆಗಳನ್ನು ನಾವೇ ಸ್ಥಾಪಿಸಿಕೊಂಡರೆ ದೇಶದ ಪ್ರತಿಯೊಬ್ಬ ಪ್ರಜೆ ಉನ್ನತಿ ಸಾಧಿಸಿವುದಲ್ಲದೆ ದೇಶವೂ ಸಹ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳುತ್ತಾರೆ.

ಹೀಗೆ ತಮ್ಮ ಸ್ಪೂರ್ತಿದಾಯಕ ಮಾತುಗಳನ್ನು ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಮನ ಮುಟ್ಟುವ ಹಾಗೆ ದೀರ್ಘ ಸಂಭಾಷಣೆಯನ್ನು ರಾಕಿಂಗ್ ಸ್ಟಾರ್ ಯಶ್ ಅವರು ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ಯುವಪೀಳಿಗೆಗೆ ಉಪಯುಕ್ತ ಆಗುವ ಯಶಸ್ಸಿನ ಹಾದಿಯ ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಸ್ನೇಹಿತರೆಲ್ಲರೊಂದಿಗೂ ಬೆರೆತು ಹೆಚ್ಚು ಗಂಭೀರವಾಗಿರದೆ ಚಿಕ್ಕ ಚಿಕ್ಕ ವಿಷಯಗಳನ್ನು ಎಂಜಾಯ್ ಮಾಡಿ ಯಶಸ್ಸಿನ ಕಡೆಗೆ ಚಿತ್ತವನ್ನು ಹರಿಸಿ ಎಂದು ಯುವ ಪೀಳಿಗೆಗೆ ಕಿವಿ ಮಾತನ್ನು ಹೇಳುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

ಕಿಚ್ಚ ಸುದೀಪ್ ಮತ್ರು ದರ್ಶನ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಸ್ನೇಹಿತರು ಅಂದರೆ ಹೀಗಿರಬೇಕು ಅಂತ ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು. ಒಂದು ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಸ್ನೇಹಕ್ಕೆ ಉದಾಹರಣೆಯನ್ನಾಗಿ ನೀಡುತ್ತಿದ್ದರು. ಅದೇ ರೀತಿಯಾಗಿ 2000ನೇ ಇಸ್ವಿಯ ಕಾಲಘಟ್ಟದಲ್ಲಿ ಸ್ನೇಹಿತರು ಅಂದರೆ ಸುದೀಪ್ ಮತ್ತು ದರ್ಶನ್ ಅವರ ಮಾದರಿಯಲ್ಲಿ ಇರಬೇಕು ಅಂತ ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದರು. ಇಷ್ಟು ಅಚ್ಚುಕಟ್ಟಾಗಿ ಇದ್ದಂತಹ ಸ್ನೇಹ ಸಂಬಂಧದಲ್ಲಿ ಅದ್ಯಾರೋ ಹುಳಿ ಹಿಂಡಿದರು ಏನೋ ಗೊತ್ತಿಲ್ಲ ಈ ಬಾಂಧವ್ಯ ನಂಟು ಎಂಬುವುದು ಹೆಚ್ಚು ಕಾಲ ಉಳಿಯಲಿಲ್ಲ. ಸದ್ಯಕ್ಕೆ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರೂ ಕೂಡ ಬೇರೆಯಾಗಿರುವ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ ಆದರೂ ಕೂಡ ಒಬ್ಬರ ಚಿತ್ರಕ್ಕೆ ಮತ್ತೊಬ್ಬರ ಸಪೋರ್ಟ್ ಮಾಡುತ್ತಾರೆ.

ವೈ ಮನಸು ಎಂಬುದು ಮನಸ್ಸಿನಲ್ಲಿ ಇದೆಯ ಹೊರತು ವೃತ್ತಿ ಜೀವನದಲ್ಲಿ ಈ ಇಬ್ಬರು ನಟರು ಕೂಡ ಹೊಂದಿಲ್ಲ ಈ ಕಾರಣಕ್ಕಾಗಿ ಕುರುಕ್ಷೇತ್ರ ಸಿನಿಮಾಗೆ ಕಿಚ್ಚ ಸುದೀಪ್ ಅವರು ಶುಭಾಶಯ ಸಲ್ಲಿಸಿದರು ಅದೇ ರೀತಿ ಪೈಲ್ವಾನ್ ಸಿನಿಮಾಗಳು ಕೂಡ ದರ್ಶನ್ ಅವರ ಶುಭಾಶಯ ಸಲ್ಲಿಸಿದರು. ಒಬ್ಬರನ್ನೊಬ್ಬರು ಮಾತನಾಡದೆ ಇದ್ದರೂ ಕೂಡ ಇಬ್ಬರ ಸಿನಿಮಾಗೆ ಶುಭವನ್ನು ಹಾರೈಸಿದನ್ನು ನೋಡಿದಂತಹ ಅಭಿಮಾನಿಗಳು ಆದಷ್ಟು ಶೀಘ್ರ ಇವರಿಬ್ಬರು ಒಂದಾಗಲಿ ಎಂದು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲ ಒಂದು ವಿಚಾರವಾದರೆ ಈಗ ಮತ್ತೊಂದು ರೋಚಕ ಸುದ್ದಿ ಎಂದು ಹೊರ ಬಂದಿದೆ ಹೌದು ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಈಗ ಒಬ್ಬ ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಬೇಕಾದರೆ ಮತ್ತೊಬ್ಬ ಸ್ಟಾರ್ ನಟ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಹಿಂದೆಟು ಹಾಕುತ್ತಾನೆ, ಇದಕ್ಕೆ ಮುಖ್ಯ ಕಾರಣ ಅಭಿಮಾನಿಗಳ ಬಳಗ ಯಾರಿಗೆ ಎಷ್ಟು ಇದೆ ಎಂಬುದನ್ನು ಲೆಕ್ಕಾಚಾರ ಹಾಕುತ್ತಾರೆ. ಈ ಕಾರಣಕ್ಕಾಗಿ ಸ್ಟಾರ್ ನಟರ ಸಿನಿಮಾವನ್ನು ಒಟ್ಟಿಗೆ ಒಂದೇ ದಿನ ಬಿಡುಗಡೆ ಮಾಡುವುದಿಲ್ಲ.

ಏಕೆಂದರೆ ಒಬ್ಬ ಸ್ಟಾರ್ ಗೆದ್ದರೆ ಮತ್ತೊಬ್ಬ ಸ್ಟಾರ್ ಅಭಿಮಾನಿಗಳಿಗೆ ಬೇಸರವಾಗುತ್ತದೆ ಸಿನಿಮಾಗೂ ನಷ್ಟ ಆಗುತ್ತದೆ ಎಂಬ ಕಾರಣದಿಂದ. ಇತ್ತೀಚಿನ ದಿನದಲ್ಲಿ ಅದರಲ್ಲಿಯೂ ಕನ್ನಡ ಸಿನಿಮಾಗಳಿಗೆ ಸಂಬಂಧಪಟ್ಟ ಹಾಗೆ ದೊಡ್ಡ ಸ್ಟಾರ್ ನಟರ ಸಿನಿಮಾವನ್ನು ಏಕಕಾಲಕ್ಕೆ ಬಿಡುಗಡೆ ಮಾಡುವುದಿಲ್ಲ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯಾದಂತಹ ಯಾವ ನಿಯಮ ಕೂಡ ಇರಲಿಲ್ಲ ಯಾವ ಸ್ಟಾರ್ ನಟ ಆದರೂ ಸರಿಯ ಸಾಮಾನ್ಯ ನಟ ಆದರೂ ಸರಿ ಒಂದೇ ದಿನಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಿದ್ದರು. ಆ ಪೈಕಿ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾವನ್ನು ಒಂದೇ ದಿನ ಬಿಡುಗಡೆ ಮಾಡಿದ್ದರು. ಹೌದು ದರ್ಶನ್ ಅವರು ಅಭಿನಯಿಸಿದಂತಹ ಸುಂಟರಗಾಳಿ ಹಾಗೂ ಕಿಚ್ಚ ಸುದೀಪ್ ಅವರು ಅಭಿನಯಿಸಿದಂತಹ ಮೈ ಆಟೋಗ್ರಾಫ್ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು

ಈ ಎರಡು ಸಿನಿಮಾಗಳಲ್ಲಿ ಗೆದ್ದ ಸಿನಿಮಾ ಯಾವುದು ಸೋತ ಸಿನಿಮಾ ಯಾವುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಅಭಿಮಾನಿಗಳಿಗೆ ಇತ್ತು. ಆದರೆ ದರ್ಶನ್ ಅವರ ಸುಂಟರಗಾಳಿ ಸಿನಿಮಾ ಬಿಡುಗಡೆಯಾದ ನಂತರ ದರ್ಶನ್ ಚಿಂತೆ ಮಾಡುವುದಿಲ್ಲ ಏಕೆಂದರೆ ಇದಾಗಲೇ ದರ್ಶನವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದರು. ಅಷ್ಟೇ ಅಲ್ಲದೆ ಆ ಕಾಲದಲ್ಲಿಯೇ ಪಾನ್ ಫಾಲ್ಲೋರ್ಸ್ ಗಿಟ್ಟಿಸಿಕೊಂಡು ಸ್ಯಾಂಡಲ್ವುಡ್ ನಲ್ಲಿ ಆಳುತ್ತಿದ್ದಂತಹ ನಟನಾಗಿದ್ದರು ಜೊತೆಗೆ ಸುಂಟರಗಾಳಿ ಸಿನಿಮಾ 50 ದಿನ ಯಶಸ್ವಿ ಪೂರ್ಣವಾಗಿ 100ನೇ ದಿನದತ್ತ ಕಾಲು ಹಾಕಿತ್ತು. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಎಷ್ಟೇ ಶ್ರಮವಹಿಸಿ ಕೆಲಸ ಮಾಡಿದರು ಕೂಡ ಒಳ್ಳೆಯ ಸಿನಿಮಾ ನೀಡಿದರು ಕೂಡ ಅಂದಿನ ಕಾಲದಲ್ಲಿ ಕಿಚ್ಚ ಸುದೀಪ್ ಅವರ ಸಿನಿಮಾ ಹೆಚ್ಚು ಸದ್ದು ಮಾಡುತ್ತಿರಲಿಲ್ಲ ಹಾಗಾಗಿ ಕಿಚ್ಚ ಸುದೀಪ್ ಒಂದು ನಿರ್ಧಾರಕ್ಕೆ ಬರುತ್ತಾರೆ.

ನಾನೇ ಒಂದು ಸಿನಿಮಾವನ್ನು ನಿರ್ದೇಶನ ಮಾಡಬೇಕು ಅಂತ ಈ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರು ಮೈ ಆಟೋಗ್ರಾಫ್ ಎಂಬ ಸಿನಿಮಾವನ್ನು ಸ್ವತಃ ತಾವೇ ನಿರ್ದೇಶನ ಮಾಡಿ ಅದರಲ್ಲಿ ತಾವೇ ನಟನಾಗಿ ಅಭಿನಯಿಸುತ್ತಾರೆ. ಬಾಲ್ಯ ಯೌವನ ವೃತ್ತಿ ಜೀವನ ಹೀಗೆ ಹಲವಾರು ಕಥೆಯನ್ನು ಒಳಗೊಂಡಿದ್ದಂತಹ ಮೈ ಆಟೋಗ್ರಾಫ್ ಸಿನಿಮಾ ಪ್ರೇಕ್ಷಕರನ್ನು ತನ್ನತ್ತ ಗಮನ ಸೆಳೆಯುತ್ತದೆ. ಸಾಲು ಸಾಲು ಸಿನಿಮ ಗಳಿಂದ ಸೋತಂತಹ ಸುದೀಪ್ ಅವರಿಗೆ ಇದೊಂದು ಸಿನಿಮಾ ಮೈಲುಗಲ್ಲು ಆಗುತ್ತದೆ. ಅಷ್ಟೇ ಅಲ್ಲದೆ ನಟನಾಗಿ ನಿರ್ದೇಶಕನಾಗಿ ಅಭಿನಯಿಸಿದ ಸುದೀಪ್ ಅವರ ಈ ಸಿನಿಮಾ ದೊಡ್ಡಮಟ್ಟದಲ್ಲಿಯೇ ಹಿಟ್ ಆಗುತ್ತದೆ ಅಷ್ಟೇ ಅಲ್ಲದೆ ಈ ಸಿನಿಮಾಗೆ ಹೂಡಿಕೆ ಮಾಡಿದಂತಹ ಬಂಡವಾಳ ದುಪ್ಪಟ್ಟು ದೊರೆಯುತ್ತದೆ‌. ನಿಮ್ಮ ಪ್ರಕಾರ ಈ ಎರಡು ಸಿನಿಮಾದಲ್ಲಿ ಯಾವ ಸಿನಿಮಾ ಉತ್ತಮ.? ಸುಂಟರಗಾಳಿನ ಅಥವಾ ಮೈ ಆಟೋಗ್ರಾಫ್ ಆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.

ನವರಸ ನಾಯಕ ಜಗ್ಗೇಶ್ ಹಾಸ್ಯ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು 4 ದಶಕಗಳ ಕಳೆದು ಹೋಗಿದೆ ಅಂದಿನಿಂದ ಇಂದಿನವರೆಗೂ ಕೂಡ ಎಲ್ಲಾ ಸಿನಿ ರಸಿಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗ್ಗೇಶ್ ಅವರು ಇತ್ತೀಚಿನ ದಿನದಲ್ಲಿ ನಾಯಕ ನಟನಾಗಿ ಪೋಷಕ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದರು.

ರಾಜಕೀಯದಲ್ಲೂ ಸಕ್ರಿಯೆಯಾಗಿ ಇರುವಂತಹ ಜಗ್ಗೇಶ್ ಅವರು ಕೆಲವು ವರ್ಷಗಳ ಕಾಲ ಕಾಂಗ್ರೆಸ್ ಪಾರ್ಟಿಯಲ್ಲಿ ಇದ್ದರು ತದನಂತರ ಬಿಜೆಪಿಗೆ ಬಂದು ಇದೀಗ ರಾಜ್ಯಸಭೆಯ ಸಂಸದರಾಗಿಯು ಕೂಡ ಆಯ್ಕೆಯಾಗಿದ್ದಾರೆ. ರಾಯರನ್ನು ಅಪಾರವಾಗಿ ನಂಬುವಂತಹ ಜಗ್ಗೇಶ್ ಅವರು ತಮ್ಮ ಜೀವನದಲ್ಲಿ ಏನೇ ಆದರೂ ಕೂಡ ಅದೆಲ್ಲದಕ್ಕು ರಾಯರೇ ಕಾರಣ ಎಂದು ಸದಾ ಕಾಲ ದೇವರನ್ನು ಸ್ಮರಿಸುತ್ತಾರೆ ಇವರ ದೇವರ ಭಕ್ತಿಗೆ ಮೆಚ್ಚದವರೇ ಇಲ್ಲ. ಸದ್ಯಕ್ಕೆ ರಾಜಕೀಯ ಸಿನಿಮಾ ಕಿರುತೆರೆ ಮೂರು ಮೂರು ಕಡೆಯಲು ನಿರತರಾಗಿರುವಂತಹ ಜಗ್ಗೇಶ್ ಅವರು ತಮ್ಮ ಕುಟುಂಬದೊಟ್ಟಿಗೂ ಕೂಡ ಅಷ್ಟೇ ಸಮಯವನ್ನು ಕಳೆಯುತ್ತಾರೆ. ಅದರಲ್ಲಿಯೂ ಕೂಡ ತಮ್ಮ ಮನೆಯಲ್ಲಿ ಇರುವಂತಹ ಶ್ವಾನದೊಟ್ಟಿಗೆ ಮಾಡಿದಂತಹ ಈ ಸಂವಾದ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿದೆ.

ಹೌದು ಜಗ್ಗೇಶ್ ಅವರು ವಿಶೇಷವಾದ ವಿಡಿಯೋ ಒಂದನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ ಹಲೋ ಮೈ ಡಿಯರ್ ಫ್ರೆಂಡ್ಸ್ ನಮ್ಮ ಮನೆಯಲ್ಲಿ ಒಬ್ಬ ಅತಿಥಿ ಇದ್ದಾರೆ ಅವರ ನನಗಿಂತಲೂ ಕೂಡ ಚೆನ್ನಾಗಿ ಸಂಗೀತವನ್ನು ಹಾಡುತ್ತಾರೆ ಎಂದು ಮಾತನ್ನು ಪ್ರಾರಂಭಿಸಿ. ತಮ್ಮ ಮನೆಯಲ್ಲಿ ಇದ್ದಂತಹ ಶ್ವಾನದ ಬಳಿ ಹೋಗಿದ್ದಾರೆ ತಾವು ಹಾಡಲು ಪ್ರಾರಂಭ ಮಾಡುತ್ತಾರೆ ಜಗ್ಗೇಶ್ ಯಾವ ರೀತಿ ಹಾಡುತ್ತಾರೋ ಶ್ವಾನವೂ ಕೂಡ ಅದಕ್ಕೆ ಪ್ರತಿಕ್ರಿಯೆ ನೀಡಿದೆ. ಇದನ್ನು ನೋಡಿದಂತಹ ಜಗ್ಗೇಶ್ ಅವರು ನಮ್ಮ ಮನೆಯಲ್ಲಿ ಒಬ್ಬ ಸಂಗೀತ ವಿದ್ವಾಂಸರಿದ್ದಾರೆ ಅವರನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ ನೋಡಿ ಅಂತ ಹೇಳುತ್ತಾರೆ. ಜಗ್ಗೇಶ್ ಅವರು ಹಾಡುವುದನ್ನು ಅನುಕರಣೆ ಮಾಡಿದಂತಹ ಶ್ವಾನದ ಈ ವಿಡಿಯೋ ನೋಡಿದರೆ ಎಂತವರಾದರೂ ಕೂಡ ನಗದೆ ಸುಮ್ಮನಿರಲು ಸಾಧ್ಯವಿಲ್ಲ.

ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಜಗ್ಗೇಶ್ ಅವರು ತಮ್ಮ ಸುತ್ತಮುತ್ತಲು ಹಾಗೂ ತಮ್ಮ ದಿನಾಚರಣೆ ಹಾಗೂ ತಮ್ಮ ಜೀವನದಲ್ಲಿ ಹಾಗೂ ಹೋಗುವ ಎಲ್ಲಾ ಸಂತೋಷದ ಮತ್ತು ದುಃಖದ ಸಂಗತಿಯನ್ನು ಹಂಚಿಕೊಳ್ಳುತ್ತಾರೆ. ಸದ್ಯಕ್ಕೆ ತಮ್ಮ ಮನೆಯಲ್ಲಿ ಇರುವಂತಹ ಪ್ರೀತಿಯ ಶ್ವಾನವೂ ಕೂಡ ಸಂಗೀತದ ಬಗ್ಗೆ ಒಲವು ಇಟ್ಟುಕೊಂಡಿರುವುದು ಹಾಗೂ ತನ್ನ ಮಾದರಿಯಲ್ಲೇ ಅನುಕರಣೆ ಮಾಡುವಂತಹ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಒಮ್ಮೆ ಈ ವಿಡಿಯೋ ನೋಡಿ ಎಷ್ಟು ಮಜಬೂತಾಗಿ ಶ್ವಾನ ಜಗ್ಗೇಶ್ ಅವರನ್ನೇ ಅನುಕರಣೆ ಮಾಡುತ್ತದೆ ಎಂಬುದು ತಿಳಿಯುತ್ತದೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಶ್ವಾನ ಪ್ರಿಯರು ಈ ಮಾಹಿತಿಯನ್ನು ಲೈಕ್ ಮತ್ತು ಶೇರ್ ಮಾಡೇ ಮಾಡುತ್ತಾರೆ. ಹಾಗೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರಶ್ಮಿಕಾ ಧರಿಸಿರುವ ಈ ಬಟ್ಟೆ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ದಂಗಾಗಿ ಹೋಗುತ್ತೀರಾ. ಈಕೆ ಧರಿಸಿರುವ ಒಂದು ಜೊತೆ ಬಟ್ಟೆಯ ದುಡ್ಡಿನಲ್ಲಿ ನೀವು 100 ಜೊತೆ ಬಟ್ಟೆ ಖರೀದಿ ಮಾಡಬಹುದು.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಯಾವುದೇ ಚಿತ್ರರಂಗದಲ್ಲಿಯೂ ನೋಡಿದರೂ ಕೂಡ ಅಲ್ಲೆಲ್ಲ ರಶ್ಮಿಕಾ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿರುವುದನ್ನು ನೀವು ಕಾಣಬಹುದು. ಹೌದು ತೆಲುಗು ಚಿತ್ರರಂಗಕ್ಕೆ ಹೋದರು ಕೂಡ ಅಲ್ಲಿಯೂ ರಶ್ಮಿಕಾ ಅವರ ಸುದ್ದಿಗಳೇ ತಮಿಳು ಚಿತ್ರರಂಗಕ್ಕೆ ಹೋದರು ಅಲ್ಲಿಯೂ ಇವರ ವಿಚಾರಗಳೇ ಇನ್ನೂ ಮಲಯಾಳಂ ಗೆ ಹೋದರೆ ಅಲ್ಲೂ ಕೂಡ ಇವರ ಬಗ್ಗೆ ಸುದ್ದಿಯಾಗುತ್ತಿದೆ ಇನ್ನು ಬಾಲಿವುಡ್ ಗೆ ಹೋದರೆ ಅಲ್ಲಿಯೂ ಕೂಡ ರಶ್ಮಿಕಾ ಅವರ ಬಗ್ಗೆಯೇ ವಿಚಾರಗಳು ಕೇಳಿ ಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಭಾರತೀಯ ಚಿತ್ರರಂಗವನ್ನು ಆಳುತ್ತಿರುವ ಏಕೈಕ ನಟಿ ಅಂದರೆ ಅದು ರಶ್ಮಿಕಾ ಮದ್ದಣ್ಣ ಅವರು ಅಂತಾನೇ ಹೇಳಿದರು ತಪ್ಪಾಗಲಾರದು.

ಕೊಡಗಿನ ಕುವರಿಯಾದಂತಹ ಇವರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಮಾತ್ರ ಗುರುತಿಸಿಕೊಂಡಿದ್ದರು ಆದರೆ ಇದೀಗ ಭಾರತದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇವರು ಸಾಲು ಸಾಲು ಸಿನಿಮಾದಲ್ಲಿ ನಟಿಸಿದ್ದು ಮತ್ತು ಈ ಸಿನಿಮಾಗಳೆಲ್ಲವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸದ್ದು ಮತ್ತು ಕಲೆಕ್ಷನ್ ಮಾಡಿದ್ದು. ರಶ್ಮಿಕಾ ಸದ್ಯಕ್ಕೆ ಕೇವಲ ಸಿನಿಮಾದಲ್ಲಿ ಮಾತ್ರ ಗುರುತಿಸಿಕೊಂಡಿಲ್ಲ ಹಲವಾರು ಜಾಹೀರಾತುಗಳಲ್ಲಿ ನಟನೆ ಮಾಡಿದ್ದಾರೆ, ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಸದಾ ಕಾಲ ಸಕ್ರಿಯವಾಗಿ ಇರುವಂತಹ ನಟಿ ಈ ಕಾರಣಕ್ಕಾಗಿ ರಶ್ಮಿಕಾ ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ.

ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿಗಳಿಸಿದಂತಹ ವ್ಯಕ್ತಿ ಅಂದರೆ ಅದು ರಶ್ಮಿಕಾ ಮಂದಣ್ಣ ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಾದ ಮಾತಲ್ಲ ಆದರೆ ಚಿತ್ರರಂಗಕ್ಕೆ ಬಂದು ಕೇವಲ ಐದೇ ವರ್ಷಕ್ಕೆ ಬಾಲಿವುಡ್ ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿರುವುದನ್ನು ನೋಡಿದರೆ ರಶ್ಮಿಕ ಅವರು ಸಾಮಾನ್ಯದವರಲ್ಲ ಎಂಬುದು ನಿಮಗೆ ತಿಳಿಯುತ್ತದೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ರಶ್ಮಿಕಾ ಮಂದಣ್ಣ ಅವರು ಇನ್ನೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದರೆ. ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಆಗುವುದು ಅಥವಾ ಸುದ್ದಿಗೆ ಬರುವುದು ಇದೇ ಮೊದಲ ಏನಲ್ಲ ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ ಆದರೆ ಈ ಬಾರಿ ಟ್ರೋಲ್ ಆಗಿರುವುದು ಮಾತ್ರ ಅವರ ಬಟ್ಟೆಯ ವಿಚಾರಕ್ಕಾಗಿ.

ಹೌದು ರಶ್ಮಿಕಾ ಮಂದಣ್ಣ ಅವರು ಮುಂಬೈನ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರ ಕಚೇರಿಯ ಹೊರಗೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿದ ನಂತರ ಮಾಧ್ಯಮದವರು ಫೋಟೋ ತೆಗೆದಿದ್ದು, ರಶ್ಮಿಕಾ ಧರಿಸಿರುವ ಡ್ರೆಸ್ ಈಗ ವೈರಲ್ ಆಗುತ್ತಿದೆ. ಪೋನಿ ಟೇಲ್ ಹೇರ್ ಸ್ಟೈಲ್ ನಲ್ಲಿ ರಶ್ಮಿಕಾ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು ಆದರೆ ಆಕೆ ತೊಟ್ಟಿದ್ದ ಉಡುಪಿನ ಬೆಲೆ ಎಷ್ಟು ಎಂದು ಜನ ಕೇಳಿದ್ದಾರೆ. ಆದರೆ ಈಗ ಈ ಡ್ರೆಸ್ ಬೆಲೆ ಗೊತ್ತಾದ್ರೆ ಶಾಕ್ ಆಗ್ರೀರಾ. ರಶ್ಮಿಕಾ ಧರಿಸಿರುವ ಈ ಡ್ರೆಸ್ ಬೆಲೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗುತ್ತಿದೆ. ತುಂಬಾ ಸಿಂಪಲ್ ಆಗಿ ಕಾಣುವ ಈ ಡ್ರೆಸ್ ನ ಬೆಲೆ 1 ಲಕ್ಷದ 26 ಸಾವಿರದ 440 ರೂಪಾಯಿ ಇದೀಗ ಈ ಬೆಲೆ ತಿಳಿದ ಅಭಿಮಾನಿಗಳು ಶಾ.ಕ್ ಆಗಿದ್ದಾರೆ ಇಷ್ಟು ಸರಳವಾದ ಬಟ್ಟೆ ತುಂಬಾ ದುಬಾರಿ ಎಂದು ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲದೆ ಇಷ್ಟು ದುಡ್ಡು ಕೊಟ್ಟು ಕೇವಲ ಒಂದೇ ಒಂದು ಡ್ರೆಸ್ ಅನ್ನು ಖರೀದಿ ಮಾಡುವ ಅಗತ್ಯವಾದರೂ ಇತ್ತ ಈ ಹಣದಿಂದ ಸಾಮಾನ್ಯ ಜನರು ಸುಮಾರು 100 ಜೊತೆಗಿಂತಲೂ ಅಧಿಕ ಬಟ್ಟೆಯನ್ನು ಖರೀದಿ ಮಾಡುತ್ತಿದ್ದರು ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ.

ಆದರೆ ಸೆಲಬ್ರೆಟಿಗಳು ಲಕ್ಷ ಬೆಲೆಬಾಳುವ ಬಟ್ಟೆ ಧರಿಸುವುದು ಹೊಸದೇನಲ್ಲ ಮತ್ತು ವಿಶೇಷವೂ ಏನೆಲ್ಲಾ ತಮ್ಮ ಸ್ಟೇಟಸ್ ಗೆ ತಕ್ಕಂತೆ ಅವರ ಬಟ್ಟೆ ಹಾವಭಾವ ಎಲ್ಲವೂ ಕೂಡ ಇರುತ್ತದೆ. ರಶ್ಮಿಕಾ ಅದೃಷ್ಟ ಚೆನ್ನಾಗಿದೆ ಹಾಗಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಖ್ಯಾತಿಗಳಿಸಿ ಕೋಟಿಗಟ್ಟಲೆ ಹಣವನ್ನು ಗಳಿಸಿ ಇದೀಗ ಈ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ರಶ್ಮಿಕಾ ಬಾಲಿವುಡ್‌ ‌ನಾ ಖ್ಯಾತ ನಾಯಕ ವಿಕ್ಕಿ ಕೌಶಲ್ ಅವರೊಂದಿಗೆ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಈಗಾಗಲೇ ಒಳ ಉಡುಪು ಜಾಹೀರಾತಿನಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರಂತೆ ಏನು ರಶ್ಮಿಕಾ ಮಂದಣ್ಣ ಅವರು ಇಷ್ಟು ದುಬಾರಿ ಬೆಲೆಯ ಉಡುಪನ್ನು ಹಾಕಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರಾಧಿಕಾ & ಕುಮಾರಸ್ವಾಮಿ ದೂರ ಆಗೋಕೆ ನಿಜವಾದ ಕಾರಣ ಏನು ಗೊತ್ತ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ತಿಳಿದೇ ಇದೆ. ಇವರಿಬ್ಬರು ಮುದುವೆಯಾಗಿ ಸುಮಾರು ನಾಲ್ಕು ವರ್ಷವಾದರೂ ಕೂಡ ಈ ವಿಚಾರ ಹೊರ ಬಂದಿರಲಿಲ್ಲ ಆದರೆ ಇದ್ದಕ್ಕಿದ್ದ ಹಾಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಂತಹ ರಾಧಿಕಾ ಅವರು ನಾನು ಮತ್ತು ಕುಮಾರಸ್ವಾಮಿ ಇಬ್ಬರು ಮದುವೆಯಾಗಿದ್ದೇವೆ ನಮ್ಮಿಬ್ಬರಿಗೂ ಶಮಿಕಾ ಎಂಬ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ ಎಂಬ ವಿಚಾರವನ್ನು ರಿವೀಲ್ ಮಾಡುತ್ತಾರೆ. ಅಷ್ಟೇ ಅಲ್ಲದೆ ರಾಧಿಕಾ ಮತ್ತು ಕುಮಾರಸ್ವಾಮಿ ಹಾಗೂ ಮಗಳು ಶಮಿಕಾ ಜೊತೆ ಇದ್ದಂತಹ ಫೋಟೋಗಳನ್ನು ಕೂಡ ತೋರಿಸುತ್ತಾರೆ ಇದನ್ನು ನೋಡಿದಂತಹ ರಾಧಿಕಾ ಅಭಿಮಾನಿಗಳಿಗೆ ಮತ್ತು ಕರುನಾಡ ಜನತೆಗೆ ನಿಜಕ್ಕೂ ಒಂದು ಕ್ಷಣ ಶಾ.ಕ್ ಆಗುತ್ತದೆ.

ಇನ್ನು ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೊದಲೇ ಮದುವೆಯಾಗಿದ್ದು ಪತಿ ಅನಿತಾ ಅವರಿಂದ ವಿ.ಚ್ಛೇ.ದ.ನ ಪಡೆಯದೆ ಇದ್ದರೂ ಕೂಡ ರಾಧಿಕಾ ಕುಮಾರಸ್ವಾಮಿ ಅವರನ್ನು ಮದುವೆಯಾಗುವುದಕ್ಕೆ ಹೇಗೆ ಸಾಧ್ಯ ಎಂಬ ಹಲವಾರು ಅನುಮಾನಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೆ ಈ ಪ್ರಕರಣ ಕೋರ್ಟಿನ ಮೆಟ್ಟಿಲು ಕೂಡ ಏರಿತು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರು ಕೂಡ ಒಟ್ಟಾಗಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಅಷ್ಟೊತ್ತಿಗೆ ನಿಖಿಲ್ ಕುಮಾರಸ್ವಾಮಿ ಕೂಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಜಾಗ್ವಾರ್ ಸಿನಿಮಾ ಹಿಟ್ಟಾದ ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹೀಗೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ. ಸಿನಿಮಾ ಕೆರಿಯರ್ ಮುಂದುವರೆದಂತೆ ಅವರ ಮದುವೆಯ ವಿಚಾರವೂ ಕೂಡ ಪ್ರಸ್ತಾಪಕ್ಕೆ ಬರುತ್ತದೆ.

ತಂದೆಯಂತೆ ಮಗನು ಕೂಡ ಇದಾಗಲೇ ಬೇರೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೂಡ ಆ ನಿಶ್ಚಿತಾರ್ಥವನ್ನು ಬ್ರೇಕ್ ಅಪ್ ಮಾಡಿಕೊಂಡು ಬೇರೆ ಹುಡುಗಿ ಜೊತೆ ಮದುವೆಯಾಗುತ್ತಾರೆ. ಈ ಮದುವೆಯ ಸಮಯದಲ್ಲಿ ಕುಮಾರಸ್ವಾಮಿ ಮತ್ತು ರಾಧಿಕಾ ಇಬ್ಬರ ನಡುವೆ ಏನೋ ಸಮಸ್ಯೆಯಾಗಿ ಇಬ್ಬರೂ ಕೂಡ ದೂರಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ವಿಚಾರದ ಬಗ್ಗೆ ಇಬ್ಬರು ಕೂಡ ಪ್ರತಿಕ್ರಿಯೆ ನೀಡಿರಲಿಲ್ಲ ಒಂದು ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮದ ಮುಂದೆ ಕಾಣಿಸಿಕೊಂಡಾಗ ಮಾಧ್ಯಮ ಮಿತ್ರರು ನೀವು ಶಮಿಕಾ ಅವರನ್ನು ನಿಮ್ಮ ತಂಗಿ ಅಂತ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದಕ್ಕೆ ಖಡಕ್ಕಾಗಿ ಉತ್ತರ ನೀಡಿದಂತಹ ನಿಖಿಲ್ ಯಾವುದೇ ಕಾರಣಕ್ಕೂ ಕೂಡ ನಾನು ಆಕೆಯನ್ನು ತಂಗಿ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.

ನಿಖಿಲ್ ಕುಮಾರಸ್ವಾಮಿ ಹೇಳಿದಂತಹ ಹೇಳಿಕೆಯನ್ನು ಕೇಳಿದಂತಹ ರಾಧಿಕಾ ಕುಮಾರಸ್ವಾಮಿ ಅವರು ಕೋಪಗೊಳ್ಳುತ್ತಾರೆ ಅಷ್ಟೇ ಅಲ್ಲದೆ ಮತ್ತೊಂದು ಹೇಳಿಕೆಯನ್ನು ನೀಡುವುದರ ಮೂಲಕ ನಿಖಿಲ್ ಕುಮಾರಸ್ವಾಮಿಗೆ ತಿರುಗಿತು ನೀಡುತ್ತಾರೆ. ಶಮಿಕಾಳನ್ನು ನಿಖಿಲ್ ಮಾತ್ರವಲ್ಲದೆ ಯಾರೇ ಒಪ್ಪಿಕೊಂಡರು ಅಷ್ಟೇ ಒಪ್ಪಿಕೊಳ್ಳದೆ ಇದ್ದರೂ ಅಷ್ಟೇ ಆಕೆ ಕುಮಾರಸ್ವಾಮಿಯವರ ಮಗಳು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಮುಂದೆಯೂ ಕೂಡ ಆಕೆಯ ತಂದೆ ಆತನೇ ಎಂದು ಎಲ್ಲರೂ ಕೂಡ ತಿಳಿದುಕೊಳ್ಳುತ್ತಾರೆ ನನ್ನ ಮಗಳನ್ನು ಯಾರು ಒಪ್ಪಿಕೊಳ್ಳುವುದು ಬೇಡ ಒಪ್ಪಿಕೊಳ್ಳದೆ ಇರುವುದು ಬೇಡ ಎಂದು ತಿರುಗೇಟು ನೀಡಿದ್ದರು. ನಿಖಿಲ್ ಕುಮಾರಸ್ವಾಮಿ ಈ ರೀತಿ ಮಾತನಾಡಿದ ಪರಿಣಾಮವೇ ರಾಧಿಕಾ ಮತ್ತು ಕುಮಾರಸ್ವಾಮಿ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಹದಗೆಟ್ಟಿತು ಅಂತ ಹೇಳಬಹುದು‌

ಇದರ ಬೆನ್ನೆಲೆ ಕಳೆದ ವರ್ಷವಷ್ಟೇ ಹಣದ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರು ಸಿಸಿಬಿ ಕೋರ್ಟ್ ಮೊರೆ ಹೋಗಬೇಕಿತ್ತು ಅಷ್ಟೇ ಅಲ್ಲದೆ ಕೆಲವು ವಿಚಾರಣೆಗಳನ್ನು ಕೂಡ ಎದುರಿಸಬೇಕಾಯಿತು. ಅಕ್ರಮವಾಗಿ ಹಣವನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಮಾಧ್ಯಮ ಮಿತ್ರರು ಕುಮಾರಸ್ವಾಮಿಯವರನ್ನು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ರಾಧಿಕಾ ಅವರಿಗೆ ನೀವು ಯಾವ ರೀತಿ ಸಹಾಯ ಮಾಡುತ್ತೀರಾ ಅಂತ ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದಂತಹ ಕುಮಾರಸ್ವಾಮಿ ಅವರು ಯಾವ ರಾಧಿಕಾ, ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಅನ್ನುವ ಅಧ್ಯಾಯ ಮುಗಿದೆ ಹೋಯಿತು ಅಂತ ಹೇಳಿ ಅಲ್ಲಿಂದ ವಾಪಸ್ ಹೋಗುತ್ತಾರೆ.

ಇದನ್ನು ಕೇಳಿದಂತಹ ಕರುನಾಡ ಜನತೆಗೆ ನಿಜಕ್ಕೂ ಕೂಡ ಒಂದು ಕ್ಷಣ ಆಚರಿಯಾಗುತ್ತದೆ ಏಕೆಂದರೆ ಇಷ್ಟು ದಿನಗಳ ಕಾಲ ಹೆಂಡತಿಯಾಗಿ ನೋಡಿಕೊಂಡು ಒಂದು ಮಗುವನ್ನು ಕೂಡ ಹುಟ್ಟಿಸಿ ಇದೀಗ ಇದಕ್ಕಿಂತ ಹಾಗೆ ರಾಧಿಕಾ ಅನ್ನುವವರೇ ನನಗೆ ತಿಳಿದಿಲ್ಲ ರಾಧಿಕಾ ಯಾರು ನನಗೆ ಗೊತ್ತಿಲ್ಲ ಅಂತ ಹೇಳಿ ಹೋಗುತ್ತಿದ್ದಾರೆ. ಇವರಿಗೆ ಸಂಸಾರಕ್ಕಿಂತ ಭಾವನೆಗಳಿಗಿಂತ ಅಧಿಕಾರವೇ ದೊಡ್ಡದಾಯಿತು ಅಂತ ಹೇಳಿದ್ದಾರೆ ಮಗ ನಿಖಿಲ್ ಕುಮಾರಸ್ವಾಮಿಗೆ ಸಪೋರ್ಟ್ ಮಾಡಲು ಆತನ ಭವಿಷ್ಯವನ್ನು ಕಟ್ಟಿಕೊಳ್ಳಲು ಈ ರೀತಿ ರಾಧಿಕಾ ಅವರನ್ನು ದೂರ ಇಟ್ಟಿದ್ದಾರೆ ಹಾಗೂ ಮಗಳನ್ನು ಕೂಡ ದೂರ ಇಡುತ್ತಿದ್ದಾರೆ ಎಂಬ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ. ಇವೆಲ್ಲದರಿಂದಲೂ ನೊಂದಂತಹ ರಾಧಿಕಾ ಅವರು ಇದೀಗ ಸದ್ಯಕ್ಕೆ ಕುಮಾರಸ್ವಾಮಿ ಅವರನ್ನು ಬಿಟ್ಟು ಒಂಟಿ ಜೀವನವನ್ನು ಸಾಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಮಲಿ ಧಾರಾವಾಹಿಯ ಅನಿಕಾ & ಶಂಭು ಈ ಅಂತರ್ಜಾತಿ ವಿವಾಹ ಯಾವ ರೀತಿ ನಡೆಯಲಿದೆ ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಧಾರವಾಹಿ ಅದರಲ್ಲಿಯೂ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಅನಿಕಾ ಪಾತ್ರ ಬಹಳನೇ ವಿಶೇಷವಾಗಿತ್ತು ತನ್ನ ವಿಭಿನ್ನ ನಟನೆಯ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು. ಈಕೆಯ ಮೂಲ ಹೆಸರು ಗ್ಯಾಬ್ರಿಯಾಲ ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು, ಇನ್ನು ಇದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಶಂಭು ಅಲಿಯಾಸ್ ಸುಹಾಸ್ ಅವರು ಕೂಡ ಹಳ್ಳಿ ಹುಡುಗನ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ನಿಸ್ಸಿಮಾರಾಗಿದ್ದರು. ಇದೀಗ ಒಂದೇ ದಾರವಾಹಿಯಲ್ಲಿ ನಟಿಸುತ್ತಿದ್ದಂತಹ ಕಿರುತರೆ ಕಲಾವಿದರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವ ಹಂತಕ್ಕೆ ತಲುಪಿದ್ದಾರೆ.

ವಿಶೇಷ ಏನೆಂದರೆ ಗ್ಯಾಬ್ರಿಯಾಲ ಮತ್ತು ಸುಹಾಸ್ ಇಬ್ಬರೂ ಕೂಡ ಮೂರು ವರ್ಷದಿಂದಲೂ ಕೂಡ ಪ್ರೀತಿಸುತ್ತಿದ್ದರು ಆದರೆ ತಮ್ಮ ಪ್ರೀತಿಯ ವಿಚಾರವನ್ನು ಎಲ್ಲಿಯೂ ಕೂಡ ವ್ಯಕ್ತಪಡಿಸಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಮಾಧ್ಯಮ ಒಂದರ ಮುಂದೆ ಬಂದು ತಾವಿಬ್ಬರೂ ಪ್ರೀತಿಸುತ್ತಿರುವಂತಹ ವಿಚಾರವನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ತಿಂಗಳು ತಾವು ಕೋರ್ಟ್‌ ನಿಯಮದ ಪ್ರಕಾರ ಮದುವೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಸಾಂಪ್ರದಾಯದಂತೆ ಮದುವೆಯಾಗುವುದನ್ನು ಬಿಟ್ಟು ಯಾಕೆ ಈ ರೀತಿ ಕೋರ್ಟ್ ವಿವಾಹ ಆಗುತ್ತಿದ್ದರೆ ಎಂಬುದನ್ನು ನೋಡುವುದಾದರೆ. ಗ್ಯಾಬ್ರಿಯಾಲ ಮೂಲತಃ ಕ್ರಿಶ್ಚಿಯನ್ ಇನ್ನು ಸುಹಾಸ್ ಪಕ್ಕ ಬ್ರಾಹ್ಮಣ ಹುಡುಗ ಇಬ್ಬರಲ್ಲೂ ಕೂಡ ಜಾತಿಯ ಭೇದವಿದೆ.

ಒಂದು ಜಾತಿಯಂತೆ ವಿವಾಹವಾದರೆ ಮತ್ತೊಂದು ಜಾತಿಗೆ ಮುಜುಗರ ಆಗಬಹುದು ಹಾಗಾಗಿ ಇಬ್ಬರೂ ಕೂಡ ಕೂತು ಮಾತನಾಡಿ ಭಾರತೀಯ ಸರ್ಕಾರದ ಆದೇಶದ ಮೇರೆಗೆ ಕೋರ್ಟ್ ನಲ್ಲಿ ಮದುವೆಯಾಗಲಿದ್ದಾರಂತೆ. ಆದರೆ ಈ ಮದುವೆ ಬಹಳ ಸರಳವಾಗಿರುತ್ತದೆ ಮದುವೆಗೆ ಕುಟುಂಬಸ್ಥರನ್ನು ಹೊರತುಪಡಿಸಿ ಯಾರನ್ನು ಕೂಡ ಆಹ್ವಾನಿಸುವುದಿಲ್ಲವಂತೆ. ಮದುವೆಯಾದ ನಂತರ ಅದ್ದೂರಿಯಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳುತ್ತಾರಂತೆ. ಈ ಒಂದು ಕಾರ್ಯಕ್ರಮಕ್ಕೆ ಕಿರುತೆರೆ ಬೆಳ್ಳಿತರೆ ಹಾಗೂ ಸ್ನೇಹಿತರು ಎಲ್ಲರನ್ನೂ ಕೂಡ ಆಹ್ವಾನಿಸುತ್ತಾರಂತೆ. ಮಾಧ್ಯಮದವರು ನಿಮ್ಮ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇದಕ್ಕೆ ಉತ್ತರಿಸಿದಂತಹ ಗ್ಯಾಬ್ರಿಯಾಲ ಅವರು ಪ್ರಾರಂಭದಲ್ಲಿ ಕಷ್ಟವಾಯಿತು ಮನೆಯವರ ಒಪ್ಪಿಗೆ ಪಡೆಯುವುದಕ್ಕೆ ಸುಮಾರು ಒಂದು ವರ್ಷವೇ ಬೇಕಾಯಿತು.

ನಾನು ಕ್ರಿಶ್ಚನ್ ಕುಟುಂಬಕ್ಕೆ ಸೇರಿದವಳು ನನ್ನ ತಾಯಿಗೆ ಈ ವಿಚಾರ ಹೇಳಿದಾಗ ಮದುವೆಯಾಗಲು ಹೇಗೆ ಸಾಧ್ಯ ಅವರು ಹಿಂದು ಕುಟುಂಬದವರು ಶಾಸ್ತ್ರ ಸಂಪ್ರದಾಯವನ್ನು ತುಂಬಾ ಪಾಲನೆ ಮಾಡುತ್ತಾರೆ ನೀನು ಮದುವೆಯಾದರೆ ನಿನಗೆ ಕಷ್ಟ ಆಗಬಹುದು ಅಂತ ಹೇಳಿದರು. ಇತ್ತ ಕಡೆ ಸುಹಾಸ್ ಮನೆಯಲ್ಲೂ ಕೂಡ ಪ್ರಾರಂಭದಲ್ಲಿ ಬಹಳ ವಿ.ರೋ.ಧ ವ್ಯಕ್ತವಾಯಿತು ಏಕೆಂದರೆ ಸುಹಾಸ್ ಮೂಲತಃ ಬ್ರಾಹ್ಮಣ ಕುಟುಂಬದವರು ಅವರ ಆಹಾರ ಪದ್ಧತಿ, ಆಚಾರ ವಿಚಾರ ಸಂಪ್ರದಾಯ ಎಲ್ಲವೂ ಕೂಡ ವಿಭಿನ್ನ ಹಾಗಾಗಿ ಅವರ ಮನೆಯಲ್ಲಿ ಮದುವೆಯ ವಿಚಾರ ಪ್ರಸ್ತಾಪವಾದಾಗ ಅವರ ತಾಯಿ ಬಹಳ ವಿ.ರೋ.ಧ ವ್ಯಕ್ತಪಡಿಸಿದರಂತೆ. ಆದರೆ ಸುಹಾಸ್ ತಮ್ಮ ತಾಯಿಗೆ ತಿಳಿ ಹೇಳಿ ತಾವೀಬ್ಬರು ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ದೇವೆ ಬಿಟ್ಟಿರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರ್ಥ ಮಾಡಿಸುತ್ತಾರಂತೆ.

ಮಕ್ಕಳ ಪ್ರೀತಿಯ ಮುಂದೆ ಜಾತಿಭೇದ ಇವೆಲ್ಲವೂ ಯಾವುದು ಇಲ್ಲ ಎಂಬುದನ್ನು ಮನಗಂಡಂತಹ ಪೋಷಕರು ಇದೀಗ ಇಬ್ಬರ ಮದುವೆಗೆ ಒಪ್ಪಿಗೆಯನ್ನು ಸೂಚಿಸಿದ್ದಾರಂತೆ. ಅಕ್ಟೋಬರ್ ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ ನಾವಿಬ್ಬರು ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಹಾಗಾಗಿ ಮುಂದೆ ಜೀವನದಲ್ಲಿಯೂ ಕೂಡ ಒಟ್ಟಾಗಿ ಬದುಕುತ್ತೇವೆ ಎಂಬ ಭರವಸೆ ನಮ್ಮಲ್ಲಿ ಇದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಮಲಿ ಸೀರಿಯಲ್ ಸೆಟ್ನಲ್ಲಿ ಪ್ರಾರಂಭವಾದಂತ ಇವರ ಪರಿಚಯ ಸ್ನೇಹವಾಗಿ ಬೆಳೆದು, ಪ್ರೀತಿಗಾಗಿ ತಿರುಗಿ, ಇದೀಗ ಮದುವೆ ಹಂತಕ್ಕೆ ಬಂದು ತಲುಪಿದೆ. ಈ ಅಂತರ್ಜಾತಿ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಜೋಡಿ ಮದುವೆ ಆದರೆ ಮುಂದಿನ ದಿನದಲ್ಲಿ ಹೇಗಿರುತ್ತಾರೆ.? ಶಂಭು ಅನಿಕಾಗೆ ಪ್ರೊಪೋಸ್ ಮಾಡಿದ ವಿಡಿಯೋ ಈ ಕೆಳಗಿದೆ ನೋಡಿ.