ಹರಿಪ್ರಿಯಾ ಮೂಲತಃ ಚಿಕ್ಕಮಗಳೂರಿನವರಾದ ಇವರು 1991 ರಲ್ಲಿ ಜನಿಸಿ, ಬಾಲ್ಯ ಮತ್ತು ಶಿಕ್ಷಣವನ್ನೆಲ್ಲಾ ಅಲ್ಲೇ ಮುಗಿಸಿದರು. ಭರತನಾಟ್ಯದಲ್ಲಿ ಬಹಳ ಆಸಕ್ತಿ ಇಟ್ಟು ಕೊಂಡಿದ್ದ ಇವರು ಅದರ ತರಬೇತಿ ಪಡೆದು ನಂತರ ಸಿನಿಮಾ ಅವಕಾಶಗಳನ್ನು ಹರಸುತ್ತಾ ಬೆಂಗಳೂರಿನತ್ತ ಮುಖ ಮಾಡಿದರು. ಮೊದಮೊದಲಿಗೆ ಮನಸುಗಳ ಮಾತು ಮಧುರ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಹರಿಪ್ರಿಯಾ ಅವರು ತಮ್ಮ ಮುದ್ದು ಮುಖ ಹಾಗೂ ಅದ್ಭುತವಾದ ಅಭಿನಯದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುವ ಪ್ರತಿಭೆ ಎನಿಸಿಕೊಂಡರು. ಸಿನಿಮಾ ಇಂಡಸ್ಟ್ರಿ ಗೆ ಬಂದ ಮೇಲೆ ಇವರ ನಿಜ ಹೆಸರಾದ ಶ್ರುತಿ ಎನ್ನುವ ಹೆಸರನ್ನು ಹರಿಪ್ರಿಯಾ ಎಂದು ಬದಲಾಯಿಸಲಾಯಿತು. ನಂತರ ಕಳ್ಳರ ಸಂತೆ, ಸಾಗರ್, ಸೂಪರ್ ಶಾಸ್ತ್ರಿ, ಭಲೇ ಜೋಡಿ, ನೀರ್ ದೋಸೆ ಇನ್ನೂ ಮುಂತಾದ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡರು.
ಆದರೆ ಯಾಕೋ ಅದ್ಯಾವ ಸಿನಿಮಾಗಳು ಕೂಡ ಕನ್ನಡ ಸಿನಿಮಾ ರಂಗದಲ್ಲಿ ಅಷ್ಟೇನೂ ಹೆಸರು ಗಳಿಸಲಿಲ್ಲ. ಹಾಗಾಗಿ ತೀರ ಕಡಿಮೆ ಅವಕಾಶಗಳನ್ನು ಕನ್ನಡದಲ್ಲಿ ಕಂಡ ಇವರು ನಂತರ ಬೇರೆ ಭಾಷೆಯ ಸಿನಿಮಾಗಳಲ್ಲೂ ಕೂಡ ಅಭಿನಯಿಸಲು ಶುರು ಮಾಡಿದರು. ಮತ್ತೊಮ್ಮೆ ಇವರ ವೃತ್ತಿ ಬದುಕಿನಲ್ಲಿ ಬ್ರೇಕ್ ನೀಡಿದ ಸಿನಿಮಾ ಎಂದರೆ ಉಗ್ರಂ ಚಿತ್ರ. ಉಗ್ರಂ ಎನ್ನುವ ಒಂದು ಸಿನಿಮಾವು ಸಿನಿಮಾದ ನಾಯಕನಾದ ಮುರಳಿ ಹಾಗೂ ನಾಯಕಿಯಾದ ಹರಿಪ್ರಿಯ ಮತ್ತು ನಿರ್ದೇಶಕರಾದ ಪ್ರಶಾಂತ್ ಎಲ್ಲರಿಗೂ ಕೂಡ ಮತ್ತೊಂದು ಸೆಕೆಂಡ್ ಇನ್ನಿಂಗ್ಸ್ ಕನ್ನಡದಲ್ಲಿ ಶುರು ಮಾಡಲು ದೊಡ್ಡ ವೇದಿಕೆ ಸೃಷ್ಟಿಸಿ ಕೊಟ್ಟಿತು. ಇದಾದ ಬಳಿಕ ಈ ಎಲ್ಲಾ ಕಲಾವಿದರು ಕೂಡ ತುಂಬಾ ಬ್ಯುಸಿ ಆಗಿ ಬಿಟ್ಟರು. ಹರಿಪ್ರಿಯಾ ಅವರ ಪಾಲಿಗಂತೂ ಸಾಲು ಸಾಲು ಅವಕಾಶಗಳು ಬರಲು ಶುರುವಾದವು.
ಉಗ್ರಂ ಸಿನಿಮಾದ ನಂತರ ರನ್ನ, ಭರ್ಜರಿ, ಬೆಲ್ ಬಾಟಮ್ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲೂ ನಾಯಕಿಯಾದ ಇವರು ದರ್ಶನ್ ಅವರೊಂದಿಗೆ ಕುರುಕ್ಷೇತ್ರ ಸಿನಿಮಾದಲ್ಲೂ ಕೂಡ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಜೊತೆಗೆ ಕೆಲವು ಪ್ರಯೋಗಾತ್ಮಕ ಸಿನಿಮಾಗಳಾದ ಸೂಜಿದಾರ, ನೀರ್ ದೋಸೆ ಮುಂತಾದ ಸಿನಿಮಾಗಳ ಬೋಲ್ಡ್ ಪಾತ್ರಗಳನ್ನು ಕೂಡ ಹರಿಪ್ರಿಯಾ ಅವರು ಕಾಣಿಸಿಕೊಳ್ಳಲು ಶುರುವಾದರು. ಆ ಸಮಯದಲ್ಲಿ ಅವಕಾಶಗಳ ಕೊರತೆಯಿಂದ ಹರಿಪ್ರಿಯ ಅವರು ಈ ರೀತಿ ಸಿಕ್ಕಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಅಪವಾದ ಕೂಡ ಅವರ ಮೇಲಿತ್ತು. ಆದರೆ ಕಲಾವಿದೆ ಎಂದ ಮೇಲೆ ಎಲ್ಲಾ ಪಾತ್ರಗಳಲ್ಲೂ ಕೂಡ ಅದಕ್ಕೆ ನ್ಯಾಯ ಒದಗಿಸುವಂತೆ ನಡೆದುಕೊಳ್ಳುವುದು ಆ ಪಾತ್ರಧಾರಿಯ ಜವಾಬ್ದಾರಿ ಆಗಿರುತ್ತದೆ. ಹಾಗೂ ಕಲಾವಿದನೊಬ್ಬನ ಕನಸು ಕೂಡ ಅದೇ ರೀತಿ ಇರುತ್ತದೆ. ನಾನು ಅಭಿನಯಿಸುವ ಪಾತ್ರವನ್ನು ಜನರು ನೈಜ ಅಭಿನಯ ಎಂದುಕೊಂಡು ಮೆಚ್ಚಿಕೊಳ್ಳಬೇಕು ಎನ್ನುವುದೇ ಅವರ ಬಹುದೊಡ್ಡ ಬಯಕೆ.
ಆದರೆ ಹರಿಪ್ರಿಯ ಅವರ ಪಾಲಿಗಂತು ಈ ರೀತಿ ಪಾತ್ರಗಳೇ ಹರಸಿ ಬರುತ್ತಿರುವುದು ತೀರ ಆಶ್ಚರ್ಯ. ಇತ್ತೀಚೆಗೆ ತನ್ನ ಟ್ರೈಲರ್ ಮೂಲಕ ಪಡ್ಡೆ ಹೈಕಳಿಗಳಿಗೆಲ್ಲಾ ಪ್ರಿಯವಾದ ಪೆಟ್ರೋ ಮ್ಯಾಕ್ಸ್ ಸಿನಿಮಾದಲ್ಲೂ ಕೂಡ ಇಂಥಹ ಪಾತ್ರವನ್ನು ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ಗಳು ವೈರಲ್ ಆಗಿದ್ದು ಜನ ಸಿನಿಮಾದಲ್ಲಿರುವ ಪೋಲಿ ಡೈಲಾಗ್ ಮತ್ತು ಬೋಲ್ಡ್ ಸೀನ್ ಗಳಿಗೆ ಫಿದಾ ಆಗಿ ಹೋಗಿದ್ದಾರೆ. ಮತ್ತು ಹರಿಪ್ರಿಯ ಅವರು ಈ ಸಿನಿಮಾಗಾಗಿ ತೆಗೆದುಕೊಂಡಿರುವ ಸಂಭಾವನೆ ಈಗ ಬಾರಿ ಚರ್ಚೆಯಲ್ಲಿದೆ. ಕೆಲ ವರದಿಗಳ ಪ್ರಕಾರ ಹರಿಪ್ರಿಯ ಅವರು ಈ ಸಿನಿಮಾಗಾಗಿ ಬರೋಬ್ಬರಿ 70 ರಿಂದ 80 ಲಕ್ಷದವರೆಗೆ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಆದರೂ ಈ ಸಿನಿಮಾದಲ್ಲಿ ಹರಿಪ್ರಿಯಾ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಹಣಕ್ಕಾಗಿ ಇಂಥ ಸೀನ್ ಮಾಡಬೇಕಿತ್ತ.? ಎಂಬುದೇ ಇದೀಗ ನೆಟ್ಟಿಗರ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.