ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನಾವು ಕನ್ನಡಿಯನ್ನು ಕಾಣು ತ್ತೇವೆ ಆದರೆ ಕೆಲವೊಂದಷ್ಟು ಜನ ಸಿಕ್ಕ ಸಿಕ್ಕ ಕಡೆ ಎಲ್ಲಾ ಕಡೆಯಲ್ಲಿಯೂ ಕೂಡ ಕನ್ನಡಿಯನ್ನು ಇಟ್ಟಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಸಿಕ್ಕಸಿಕ ಜಾಗಗಳಲ್ಲಿ ಇಡಬಾರದು ಅದು ಕೆಲವೊಮ್ಮೆ ನಮಗೆ ನೆಗೆಟಿವ್ ಎನರ್ಜಿಯಾಗಿ ಪರಿಣಮಿಸುತ್ತದೆ.
ಮನೆಯಲ್ಲಿ ಇಲ್ಲ ಸಲ್ಲದೆ ಜಗಳಗಳು ಮನಸ್ತಾಪ ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗುವುದು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಹಿರಿಯರ ಆರೋಗ್ಯದಲ್ಲಿ ಸಮಸ್ಯೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಕುಂಠಿತ ವಾಗುವುದು. ಹೀಗೆ ಒಂದಲ್ಲ ಒಂದು ರೀತಿಯಾಗಿ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತಾ ಹೋಗುತ್ತದೆ.
ಆದರೆ ಯಾರೂ ಕೂಡ ಈ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತಿದೆ ಎನ್ನುವುದರ ಆಲೋಚನೆಯನ್ನು ಸಹ ಮಾಡುವುದಿಲ್ಲ. ಇದೆಲ್ಲದಕ್ಕೂ ಕೂಡ ಬಹಳ ಪ್ರಮುಖವಾದಂತಹ ಕಾರಣ ಯಾವುದು ಎಂದರೆ ನಮ್ಮ ಮನೆಯಲ್ಲಿ ನಾವು ಯಾವ ದಿಕ್ಕಿನಲ್ಲಿ ಕನ್ನಡಿ ಇಟ್ಟಿದ್ದೀವಿ ಎನ್ನುವುದು.
ಹೌದು ಕೆಲವೊಂದಷ್ಟು ಜನ ಬಾತ್ರೂಮ್ ಗಳಲ್ಲಿಯೂ ಸಹ ಕನ್ನಡಿಯನ್ನು ಇಟ್ಟಿರುತ್ತಾರೆ ಇಲ್ಲಿ ಇಟ್ಟರೆ ನಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಬರುವುದಿಲ್ಲ ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿ ಯನ್ನು ಬಾತ್ರೂಮ್ ನಲ್ಲಿ ಇದ್ದರೆ ನಮ್ಮ ಹಣಕಾಸಿನ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿರುತ್ತಾರೆ.
ಆದರೆ ಇದು ತಪ್ಪು ಯಾವುದೇ ಕಾರಣಕ್ಕೂ ನೀವು ಕನ್ನಡಿಯನ್ನು ನಿಮ್ಮ ಬಾತ್ರೂಮ್ ನಲ್ಲಿ ಇಡಕೂಡದು. ಇದು ನಿಮಗೆ ಒಂದು ರೀತಿಯ ಋಣಾತ್ಮಕ ಪರಿಣಾಮ ವನ್ನು ಬೀರುತ್ತದೆ. ಹಾಗಾದರೆ ಈ ದಿನ ಮನೆಯಲ್ಲಿ ಯಾವ ಒಂದು ಸ್ಥಳದಲ್ಲಿ ಕನ್ನಡಿಯನ್ನು ಇಡಬೇಕು.
ಹಾಗೂ ಯಾವ ಸ್ಥಳದಲ್ಲಿ ಇದ್ದರೆ ಅದು ನಮಗೆ ಪರಿಣಾಮಕಾರಿಯಾಗಿ ಯಶಸ್ಸನ್ನು ತಂದುಕೊಡುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಮೊದಲು ನಾವು ಕನ್ನಡಿಯನ್ನು ನಮ್ಮ ಮನೆಯಲ್ಲಿ ಇಡುವುದಕ್ಕೂ ಮುನ್ನ ನಾವು ಸರಿಯಾದ ದಿಕ್ಕುಗಳನ್ನು ತಿಳಿದುಕೊಳ್ಳಬೇಕು ಮೊದಲ ನೆಯದಾಗಿ ನಮ್ಮ ಮನೆಗೆ ಕನ್ನಡಿಯನ್ನು ಹಾಕುತ್ತಿದ್ದರೆ ನಾರ್ತ್ ಅಂದರೆ ಉತ್ತರ ದಿಕ್ಕಿನ ಗೋಡೆಗೆ ನೇತು ಹಾಕುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಆಗುತ್ತಾ ಹೋಗುತ್ತದೆ.
* ಅದೇ ರೀತಿಯಾಗಿ ಪೂರ್ವ ದಿಕ್ಕಿಗೆ ನೀವು ಕನ್ನಡಿಯನ್ನು ನೇತು ಹಾಕುವುದರಿಂದ ಅದು ನಿಮಗೆ ಒಳ್ಳೆಯ ಆರೋಗ್ಯ ಭಾಗ್ಯವನ್ನು ತಂದುಕೊಡುತ್ತದೆ ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಕೂಡ ನಿಮ್ಮ ಆರೋಗ್ಯದ ವಿಚಾರವಾಗಿ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಅದು ನಿಮ್ಮನ್ನು ಕಾಪಾಡುತ್ತದೆ.
* ಅದೇ ರೀತಿ ನೈರುತ್ಯ ಭಾಗದಲ್ಲಿ ಯಾವುದೇ ಕಾರಣಕ್ಕೂ ಕೂಡ ನಾವು ಕನ್ನಡಿಯನ್ನು ನೇತು ಹಾಕಬಾರದು. ಅದೇ ರೀತಿಯಾಗಿ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಮಲಗುವಂತಹ ಕೋಣೆಯಲ್ಲಿ ಕನ್ನಡಿ ಇರಬಾರದು ಅದು ನಿಶಿದ್ಧ ಎಂದು ಹೇಳಬಹುದು. ಆದರೆ ಮಕ್ಕಳು ಮಲಗುವಂತಹ ಕೋಣೆಗಳಲ್ಲಿ ಕನ್ನಡಿಯನ್ನು ಇಡಬಹುದು. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.
* ಕೆಲವೊಂದಷ್ಟು ಜನ ಬಾತ್ರೂಮ್ ನಲ್ಲಿ ಅಂದರೆ ಕಮೋಡ್ ಮುಂಭಾ ಗದಲ್ಲಿ ಕನ್ನಡಿಯನ್ನು ನೇತು ಹಾಕಿರುತ್ತಾರೆ ಆದರೆ ಯಾವುದೇ ಕಾರಣ ಕ್ಕೂ ಈ ರೀತಿ ಹಾಕಬಾರದು ಈ ರೀತಿ ಹಾಕುವುದರಿಂದ ಆ ಒಂದು ಸ್ಥಳದಲ್ಲಿ ಉತ್ಪತ್ತಿಯಾಗುವಂತಹ ಋಣಾತ್ಮಕ ಶಕ್ತಿಗಳು ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಆದ್ದರಿಂದ ಆದಷ್ಟು ಕನ್ನಡಿಯನ್ನು ನಿಮ್ಮ ಬಾತ್ರೂಮ್ ನಲ್ಲಿ ಹಾಕುವುದನ್ನು ತಪ್ಪಿಸಬೇಕು.
* ಮನೆಯ ಮುಂಭಾಗಲಿನ ಒಳಗಡೆ ಬಂದ ತಕ್ಷಣವೇ ಕನ್ನಡಿ ಇರ ಬಾರದು ಏಕೆಂದರೆ ನಮ್ಮ ಮನೆಗೆ ಕೆಲವೊಮ್ಮೆ ಧನಾತ್ಮಕ ಶಕ್ತಿಗಳು ಕೂಡ ಬರುತ್ತಿರುತ್ತದೆ ಕೆಲವೊಮ್ಮೆ ಋಣಾತ್ಮಕ ಶಕ್ತಿಗಳು ಕೂಡ ಬರುತ್ತಿರುತ್ತದೆ. ಋಣಾತ್ಮಕ ಶಕ್ತಿ ಬಂದಂತಹ ಸಂದರ್ಭದಲ್ಲಿ ಅದು ಮತ್ತಷ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯ ಮುಂಭಾಗಲಿನ ನೇರವಾಗಿ ಕನ್ನಡಿಯನ್ನು ಹಾಕುವುದು ನಿಶಿದ್ಧ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.