ಸ್ನೇಹಿತರೆ ಒಂದು ಸಿನಿಮಾ ಯಶಸ್ವಿಯಾಗಿ ಪ್ರತಿಸಬೇಕು ಎಂದರೆ ಚಿತ್ರದ ಕಥೆ ಹಾಗೂ ನಿರ್ದೇಶನ ಬಹಳ ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ ಜನರು ಇತ್ತೀಚೆಗೆ ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿರುವ ಚಿತ್ರವೆಂದರೆ ಅದು ಕಾಂತಾರ. ಕಾಂತಾರ ಕನ್ನಡ ಚಿತ್ರ ಸಿನಿಮಾದ ಹೊಸ ಹೆಸರನ್ನು ತಂದಿದೆ ಹಾಗೆ ಇದು ಮೊದಲ ಕನ್ನಡದಲ್ಲಿ ತೆರೆಗೆ ಬಂದು ನಂತರ ಪಂಚ ಭಾಷೆಗಳಲ್ಲಿ ತೆರೆ ಕಂಡಿದೆ.
ಇನ್ನು ಈ ಚಿತ್ರವನ್ನು ನಿರ್ದೇಶಿಸಿ ಹಾಗೂ ನಾಯಕನಟನಾಗಿ ನಟನೆ ಮಾಡಿದ ರಿಷಬ್ ಶೆಟ್ಟಿಯವರು ಈ ಸಿನಿಮಾಗಾಗಿ ಹಲವು ತಿಂಗಳಿಂದ ಹೆಚ್ಚು ಶ್ರಮವನ್ನು ಪಟ್ಟಿದ್ದಾರೆ ಈ ಸಿನಿಮಾಗಾಗಿ ತಮ್ಮ ಕುಟುಂಬದಿಂದ ಕೆಲವು ದಿನಗಳ ಕಾಲ ದೂರ ಇದ್ದರು. ಇದರ ಜೊತೆಗೆ ಚಿತ್ರದಲ್ಲಿ ಬಹಳ ಅದ್ಭುತವಾಗಿ ನಟನೆಯಲ್ಲಿ ಪಳಗಿರುವ ನಟರನ್ನು ಆಯ್ಕೆ ಮಾಡಿದ್ದಾರೆ. ಸದ್ಯ ಕಾಂತಾರ ಚಿತ್ರವು ಪ್ರಪಂಚದಲ್ಲೆಡೆ ಕನ್ನಡದ ಕಲೆಯನ್ನು ಪ್ರತಿಬಿಂಬಿಸುತ್ತಿದೆ ಹಾಗೂ ಈ ಪ್ರಪಂಚದಲ್ಲಿಲ್ಲಡೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ತುಳಿನಾಡಿನ ಸಂಸ್ಕೃತಿಯಾದ ಭೂತಾರಾಧನೆ ಹಾಗೂ ಕೋಲವನ್ನು ವಿಶಿಷ್ಟ ಶೈಲಿಯಲ್ಲಿ ಚಿತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ಇಲ್ಲಿ ವ್ಯಕ್ತಪಡಿಸಿರುವ ಕಥೆಯನ್ನು ಹಾಗೂ ನಿರ್ದೇಶನವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಕೊನೆಯ 20 ನಿಮಿಷಗಳು ಸಿನಿಮಾ ನೋಡುವ ಜನರನ್ನು ಮೈ ಜುಮ್ ಅನ್ನುವಂತೆ ಮಾಡುತ್ತದೆ. ಈ ಸಿನಿಮವು ಹೊಂಬಾಳೆ ಫಿಲಂಸ್ ರವರ ಅಡಿಯಲ್ಲಿ ಕೇವಲ ಹದಿನಾರು ಕೋಟಿಯ ವೆಚ್ಚದಲ್ಲಿ ಮಾಡಲಾಗಿದೆ.
ಕಾಂತಾರ ಸಿನಿಮವು ಕನ್ನಡವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈಗಾಗಲೇ ಎಲ್ಲಾ ಭಾಷೆಯಲ್ಲಿ ಕೋಟಿ ಕೋಟಿ ಹಣವನ್ನು ದೋಚಿರುವ ಕಾಂತಾರವು ಹೆಚ್ಚು ಮುನ್ನಡೆಯನ್ನು ಭಾರತದಲ್ಲಿ ಕಂಡಿದೆ. ಕೋಟಿಯನ್ನು ದೋಚುವ ಮೂಲಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಪುಡಿಪುಡಿ ಮಾಡಿದೆ. ಇನ್ನು ಕಾಂತಾರ ಚಿತ್ರವನ್ನು ವೀಕ್ಷಿಸಿದ ದೊಡ್ಡ ದೊಡ್ಡ ಈ ಚಿತ್ರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನು ತಮಿಳ್ ತಲೈವಾ ಎಂದು ಹೆಸರುವಾಸಿಯಾದ ರಜನಿಕಾಂತ್ ರವರು ಕೂಡ ಈ ಸಿನಿಮಾವನ್ನು ಹೊಗಳಿದ್ದಾರೆ.
ಕಾಂತಾರವನ್ನು ಭಾರತದ ಮಾಸ್ಟರ್ ಪೀಸ್ ಎಂದು ಹೇಳಿದ್ದಾರೆ ಈ ಸಿನಿಮಾದಲ್ಲಿ ನಟಿಸಿರುವ ಒಬೊಬ್ಬ ಕಲಾವಿದರು ಕೂಡ ಅವರದೇ ಆದ ಚಾಪನ್ನು ಚಿತ್ರದಲ್ಲಿ ಮೂಡಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರ ಸಂಭಾವನೆಗೆ ಬಂದರೆ ಅದರಲ್ಲೂ ರಿಷಬ್ ಶಟ್ಟಿ ಅವರ ಸ್ನೇಹಿತನಾದ ಪ್ರಮೋದ್ ಶೆಟ್ಟಿ ಅವರ ಸಂಭಾವನೆ ಕುರಿತು ಇಲ್ಲಿ ಹೇಳಲಾಗಿದೆ ಪ್ರಮೋದ್ ಶೆಟ್ಟಿಯವರು ಇಲ್ಲಿ ರಾಜಕೀಯ ವ್ಯಕ್ತಿಯಾಗಿ ನಟಿಸಿದ್ದಾರೆ.
ಸಾಮಾನ್ಯವಾಗಿ ಪ್ರಮೋದ್ರವರು ರಿಷಬ್ ಹಾಗೂ ರಕ್ಷಿತ್ ಶೆಟ್ಟಿಯವರ ಜೊತೆಗೆ ನಟಿಸುವುದು ಎಲ್ಲರಿಗೂ ತಿಳಿದಿರುವ ವಿಷಯ ಅವರು ಈಗಾಗಲೇ ಉಳಿದವರು ಕಂಡಂತೆ, ಅವನ ಶ್ರೀಮನ್ನಾರಾಯಣ, ಹರಿಕಥೆಯಲ್ಲ ಗಿರಿಕಥೆ, ಚಿತ್ರಗಳಲ್ಲಿ ನಟಿಸಿದ್ದಾರೆ ಇವರ ಅದ್ಭುತವಾದ ನಟನೆಯು ಇವರನ್ನು ಬಹು ಬೇಡಿಕೆ ನಟರನ್ನಾಗಿ ಮಾಡಿದೆ ಎಂದು ಹೇಳಿದರೆ ಸುಳ್ಳಾಗದು.
ಕಾಂತಾರ ಚಿತ್ರದಲ್ಲಿ ಕೆಲವು ಸಮಯಗಳ ಕಾಲ ಪ್ರೇಕ್ಷಕರನ್ನು ಹಾಸ್ಯಮಯವಾಗಿ ನಗಿಸುವ ಪಾತ್ರವು ಇವರದ್ದಾಗಿದೆ ಇನ್ನು ಸಂಭಾವನೆ ವಿಷಯಕ್ಕೆ ಬಂದರೆ ಪ್ರಮೋದ್ ಶೆಟ್ಟಿ ಅವರು ಕಾಂತಾರ ಸಿನಿಮಾಗಾಗೀ 50 ಲಕ್ಷಗಳನ್ನು ಸಂಭಾವನೆ ಪಡೆದಿದ್ದಾರೆ. ಇನ್ನು ಈ ಚಿತ್ರವು ನೂರು ದಿನಗಳು ಪ್ರದರ್ಶನ ಕಂಡರೆ ಮತ್ತೆ ಈ ಚಿತ್ರದಲ್ಲಿ ನಟಿಸಿರುವ ಕಲಾವಿದರಿಗೆ ಸಂಭಾವನೆಯನ್ನು ಇನ್ನಷ್ಟು ಕೊಡಲಾಗುವುದು ಎಂದು ಹೇಳಲಾಗಿದೆ ಹೊಂಬಾಳೆ ಫಿಲ್ಸಂ ನವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.