ಸ್ನೇಹಿತರೆ ಸಿನಿಮಾ ರಂಗಗಳಲ್ಲಿ ವಿವಾಹವಾಗಲಿ ಎಂಗೇಜ್ಮೆಂಟ್ ಆಗಲಿ ಅರ್ಧಕ್ಕೆ ನಿಲ್ಲುವುದೂ ಸಾಮಾನ್ಯವಾಗಿದೆ. ಇದಕ್ಕೆ ಕೆಲವು ಮನಸ್ತಾಪಗಳಿರಬಹುದು, ಸರಿಯಾದ ಹೊಂದಾಣಿಕೆ ಇಲ್ಲದಿರಬಹುದು ಕೆಲವು ಕಾರಣದಿಂದಾಗಿ ಸಂಬಂಧಗಳು ಮುರಿದು ಬೀಳುತ್ತವೆ. ಈ ಪೈಕಿ ನಮ್ಮ ಕನ್ನಡ ಚಿತ್ರರಂಗದ ನಟ ಹಾಗೂ ನಟಿಯಾಗಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಸಂಬಂಧವು ಒಂದು.
ರಶ್ಮಿಕಾ ಮಂದಣ್ಣ ರವರು ಈಗಾಗಲೇ ತೆಲುಗು ತಮಿಳ್ ಹಾಗೂ ಇವುಗಳನ್ನು ಮೀರಿ ಬಾಲಿವುಡ್ ನಲ್ಲಿ ಕೂಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಹಾಗೆ ರಕ್ಷಿತ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಅವರ ನಟನೆಯಿಂದ ಹಾಗೂ ಅವರ ಮುಗ್ಧ ನಗುವಿನಿಂದ ಸಿಂಪಲ್ ಹುಡುಗ ಎಂದು ಪ್ರಖ್ಯಾತವಾಗಿದ್ದಾರೆ ಅವರ ಚಾರ್ಲಿ 777 ಚಿತ್ರವು ದೇಶದಾದ್ಯಂತ ಹೆಚ್ಚು ಮನ್ನಣೆಯನ್ನು ಗಳಿಸಿದೆ.
ಸ್ವಲ್ಪ ದಿನಗಳ ಹಿಂದೆ ವೇದಿಕೆ ಒಂದರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ರವರು ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲಾಗಿದೆ. ಈ ಹಿಂದೆ ಸೈಮ ಅವಾರ್ಡ್ ವೇದಿಕೆಯಲ್ಲಿ ಬೆಸ್ಟ್ ಎಂಟರ್ಟೈನ್ರ್ ಆಫ್ ದಿ ಇಯರ್ ಎಂಬಾ ಪ್ರಶಸ್ತಿಯು ರಕ್ಷಿತ್ ಶೆಟ್ಟಿ ಅವರಿಗೆ ಸಿಕ್ಕಿದೆ. ಈ ವೇಳೆ ಅಕುಲ್ ಬಾಲಾಜಿ ಅವರು ಕಾರ್ಯಕ್ರಮ ನಡೆಯುವಾಗ ರಶ್ಮಿಕ ಅವರವರನ್ನು ವೇದಿಕೆ ಮೇಲೆ ಕರೆಯುತ್ತಾರೆ.
ಆ ವೇಳೆಯಲ್ಲಿ ರಶ್ಮಿಕ ಹಾಗೂ ರಕ್ಷಿತ್ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿರುವುದು ಎಲ್ಲಾ ಚಿತ್ರರಂಗದವರಿಗೂ ಸಂತೋಷವನ್ನು ಉಂಟು ಮಾಡಿದೆ. ರಶ್ಮಿಕಾ ಮಂದಣ್ಣ ರವರು ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಹಾಗೆ ಇದೇ ಕಿರಿಕ್ ಪಾರ್ಟಿ ಚಿತ್ರವು ರಕ್ಷಿತ್ ಶೆಟ್ಟಿ ಅವರಿಗೆ ಹೆಸರನ್ನು ತಂದುಕೊಟ್ಟಿದೆ. ಈ ಚಿತ್ರದ ಮೂಲಕ ಜೋಡಿಯಾಗಿ ಕಾಣಿಸಿದ ಇವರಿಬ್ಬರು, ಇವರಿಗೆ ಅಭಿಮಾನಿಗಳು ಪ್ರೋತ್ಸಾಹಿಸುವ ಮೂಲಕ ಒಪ್ಪಿಗೆ ನೀಡಿದ್ದರು.
ಈ ಚಿತ್ರದ ಮೂಲಕ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ಎಂಗೇಜ್ಮೆಂಟ್ ವರೆಗೂ ತಲುಪಿತ್ತು. ಕೊಡಗಿನ ವಿರಾಜ್ ಪೇಟೆಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ರವರ ನಿಶ್ಚಿತಾರ್ಥವು 2017 ಜುಲೈ 3ರಂದು ಬಹಳ ಅದ್ದೂರಿಯಿಂದ ಜರುಗಿತು. ವಿರಾಜಪೇಟೆಯ ಫೆರ್ನಿಟಿ ಹಾಲಲ್ಲಿ ಇವರಿಬ್ಬರು ಪರಸ್ಪರ ಉಂಗುರಗಳನ್ನು ಬದಲಾಯಿಸುವ ಮೂಲಕ ತಮ್ಮ ಸಂಬಂಧಗಳನ್ನು ಅದ್ಭುತವಾಗಿ ಘೋಷಣೆ ಮಾಡಿಕೊಂಡಿದ್ದರು.
ನಿಶ್ಚಿತಾರ್ಥದಲ್ಲಿ ಕೇಕ್ ಅನ್ನು ಕತ್ತರಿಸಿ ಹಿರಿಯರ ಸಮ್ಮುಖದಲ್ಲಿ ಸಂಭ್ರಮವನ್ನು ಆಚರಿಸಿದರು. ಈ ಸಮಾರಂಭಕ್ಕೆ ನಟ ವಿಜಯ ರಾಘವೇಂದ್ರ ರಿಷಬ್ ಶೆಟ್ಟಿ, ನಟಿರಾದ ಯಜ್ಞಾ ಶೆಟ್ಟಿ, ಮೇಘನ ರಾಜ್ ಹಾಗೂ ಶೀತ ಶೆಟ್ಟಿ ಅವರು ಕೂಡ ಭಾಗವಹಿಸಿ, ಇವರಿಬ್ಬರಿಗೂ ಶುಭವನ್ನು ಹಾರೈಸಿದರು.ಆದರೆ ಈ ನಿಶ್ಚಿತಾರ್ಥವು ಬಹಳ ದಿನದವರೆಗೆ ಇರಲಿಲ್ಲ ಕೆಲವೊಂದು ಇವರ ಮಧ್ಯ ಇದ್ದ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ಸಂಬಂಧವು ಮುರಿದುಬಿತ್ತು.
ಇದಾದ ಬಳಿಕ ರಶ್ಮಿಕಾ ಮಂದಣ್ಣ ರವರು ದಕ್ಷಿಣ ಚಿತ್ರರಂಗದಲ್ಲಿ ಬಹಳ ಬಿಸಿ ಇದ್ದರು, ರಶ್ಮಿಕ ಮಂದಣ್ಣ ರವರು ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಷಯವಾಗಿ ಸಾಮಾನ್ಯವಾಗಿ ಟ್ರೋಲ್ ಆಗುತ್ತಿರುತ್ತಾರೆ. ಸಧ್ಯ ರಕ್ಷಿತ್ ಶೆಟ್ಟಿ ಅವರು ಕೂಡ ತನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಾರ್ಲಿ 777 ಗಳಂತಹ ಒಳ್ಳೊಳ್ಳೆ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತುಂಬಾ ದಿನದ ಬಳಿಕ ಇವರು ಸೈಮಾ ವೇದಿಕೆ ಮೇಲೆ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು.