Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeNewsಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ...

ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.

ಬಿಗ್ ಬಾಸ್ ಮನೇಲಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್

ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರು ಶೋವನ್ನು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸದ್ಯಕ್ಕೆ ಮನೋರಂಜನೆಯನ್ನು ನೀಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿಯವರು ಬೆಲ್ಲಿ ಡಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಹೌದು ಅನುಪಮಾ ಗೌಡರವರಿಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದು.

ಪ್ರತಿ ಬಾರಿಯೂ ನೀರು ಕುಡಿಯುವ ಪುರುಷ ಸದಸ್ಯನಿಗೆ ನೃತ್ಯ ಕಲಿಸಿಕೊಡಬೇಕು ಎಂದು ಆದೇಶ ನೀಡಲಾಗಿದೆ. ಬಿಗ್ ಬಾಸ್ ಆದೇಶದಂತೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿಯವರಿಗೆ ನೃತ್ಯ ಕಲಿಸಿಕೊಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಶಾಂತ್ ಸಂಬರ್ಗಿ ಹುಡುಗಿಯರ ಬಟ್ಟೆ ತೊಟ್ಟು ಗಮನ ಸೆಳೆದಿದ್ದಾರೆ.

ಬಿಗ್ ಬಾಸ್ ಪುರುಷ ಸ್ಪರ್ಧಿಗಳಾದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಬೆಲ್ಲಿ ಡಾನ್ಸ್ ಮಾಡಲು ಕಷ್ಟ ಪಟ್ಟಿದ್ದಾರೆ. ಸದ್ಯ ಈ Video ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ಟಫ್‌ ಕಾಂಪಿಟೇಶನ್‌ ಆಗುತ್ತಿದೆ.

ಇದೀಗ ಬಿಗ್ ಬಾಸ್ ಮನೆಯಿಂದ ಕಾವ್ಯಶ್ರೀ ಗೌಡ ಔಟ್‌ ಆಗಿದ್ದಾರೆ. ಹೌದು, ಮಂಗಳ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ 17ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದರು. ಚನ್ನಪಟ್ಟಣ ಊರಿನವರಾದ ಇವರು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಮನೆಯೇ ಮಂತ್ರಾಲಯ ಧಾರಾವಾಹಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.

ಪ್ರಾರಂಭದಲ್ಲಿಯೇ ಕಾವ್ಯಶ್ರೀ ಗೌಡ ಅವರ ಹೆಸರು ರೂಪೇಶ್‌ ಶೆಟ್ಟಿ ಅವರ ಜತೆ ತುಳಕು ಹಾಕಿಕೊಂಡಿತ್ತು. ಅಂದ ಹಾಗೆ, ಎಲಿಮಿನೇಟ್‌ ಆದ ಎರಡು ವಾರಗಳ ಹಿಂದೆ ವಿನೋದ್‌ ಗೊಬ್ಬರಗಾಲ ಅವರು ಕಾವ್ಯಶ್ರೀ ಅವರನ್ನು ಎಲಿಮಿನೇಷನ್‌ನಿಂದ ಪಾರು ಮಾಡಿದ್ದರು. ಸಾನ್ಯ ಅಯ್ಯರ್, ವಿನೋದ್ ಗೊಬ್ಬರಗಾಲ, ಎಲಿಮಿನೇಷನ್ ನಂತರ ಇದೀಗ ಕಾವ್ಯಶ್ರೀ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.

ಹೌದು ಕಾವ್ಯಶ್ರೀ ಅವರ ಬಿಗ್ ಬಾಸ್ ಆಟ ಕೊನೆಯಾಗಿದೆ‌. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಿಗ್ ಬಾಸ್ ಸೀಸನ್ 9 ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಎನ್ನುವ ಕುತೂಹಲ ಪ್ರೇಕ್ಷಕ ವರ್ಗಕ್ಕೆ ಇದೆ.