ಕೈಮುಗಿದು ಬೇಡ್ಕೋತಿನಿ ಪ್ಲೀಸ್ ನನ್ನ ಸಿನಿಮಾ ನೋಡಿ ಅಂತ ಕಣ್ಣೀರು ಹಾಕ್ತಿರೋ ಪ್ರಥಮ್. ಸೋಷಿಯಲ್ ಮಿಡಿಯಾದಲ್ಲಿ ಪ್ರಥಮ್ ವಿಡಿಯೋ ವೈರಲ್ ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ನನ್ನ ಸಿನಿಮಾ ನೋಡಿ ಎಂದು ಕಣ್ಣೀರಿಟ್ಟು ಬೇಡಿಕೊಂಡ ಒಳ್ಳೆ ಹುಡುಗ ಪ್ರಥಮ್ ಕರ್ನಾಟಕದಲ್ಲಿ ಒಳ್ಳೆ ಹುಡುಗ (Olle huduga) ಎಂದು ಫೇಮಸ್ ಆಗಿರುವ ನಟ ಪ್ರಥಮ್ (Pratham) ಅವರು ದೇವರಂತಾ ಮನುಷ್ಯ (Devaranthara Manushya) ಆದ ಬಳಿಕ ಬಹಳ ಸಮಯ ತೆಗೆದುಕೊಂಡು ಮತ್ತೊಂದು ಸಿನಿಮಾ ಮಾಡಿದ್ದಾರೆ. ನಟಭಯಂಕರ (Nata bhayankara) ಎನ್ನುವ ಈ ಸಿನಿಮಾಗಾಗಿ ತೆರೆ ಹಿಂದೆ ಸಾಕಷ್ಟು ದಿನಗಳ ಪರಿಶ್ರಮ ಹಾಕಿದ್ದಾರೆ.

ನಟ ಭಯಂಕರ ಸಿನಿಮವು ಫೆಬ್ರವರಿ ಮೂರನೇ ತಾರೀಕಿನಂದು ರಿಲೀಸ್ ಕೂಡ ಆಗಿತ್ತು. ಈ ಸಿನಿಮಾ ಬಗ್ಗೆ ರಿಲೀಸ್ ಆಗುವ ತನಕವೂ ಪ್ರಥಮ್ ಅವರಿಗೆ ಒಳ್ಳೆ ಕಾನ್ಫಿಡೆಂಟ್ ಇತ್ತು, ಈ ಸಿನಿಮಾ ಈ ಸಬ್ಜೆಕ್ಟ್ ಗೆದ್ದೇ ಗೆಲ್ಲುತ್ತದೆ ಎನ್ನುವ ಆತ್ಮವಿಶ್ವಾಸ ಇತ್ತು. ಆದರೆ ಈಗ ಅವರ ಲೆಕ್ಕಾಚಾರ ಎಲ್ಲಾ ಬಿದ್ದು ಹೋಗಿದೆ. ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿರುವ ಸಂಖ್ಯೆ ಬಹಳ ಕಡಿಮೆ ಇದೆ ಈ ಬಗ್ಗೆ ನೊಂದುಕೊಂಡು ಕಣ್ಣೀರಿಟ್ಟು ಸ್ವತಃ ಪ್ರಥಮ್ ಅವರೇ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ತಮ್ಮ ಸಿನಿಮಾ ನೋಡುವಂತೆ ಕಳಕಳಿಯಿಂದ ಕನ್ನಡಿಗರ ಬಳಿ ಬೇಡಿಕೊಳ್ಳುತ್ತಿದ್ದಾರೆ ಈಗಷ್ಟೇ ವಿಡಿಯೋ ಒಂದನ್ನು ಮಾಡಿ ಹರಿ ಬಿಟ್ಟಿರುವ ಪ್ರಥಮ್ ಅವರು ಆ ವಿಡಿಯೋದಲ್ಲಿ ಈ ರೀತಿ ಮಾತನಾಡಿದ್ದಾರೆ. ನಾನು ಬಹಳ ಕಷ್ಟಪಟ್ಟು ಬೆಳೆದಿದ್ದೇನೆ ಎಲ್ಲೂ ಸಹ ಯಾರ ಬಳಿಯು ಕೈ ಚಾಚಿ, ಕೇಳಿ ನನಗೆ ಗೊತ್ತಿಲ್ಲ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇಳುತ್ತಿದ್ದೆ ಆಗ ನನ್ನ ಕೈ ಹಿಡಿದಿದ್ದೀರಾ ಅದನ್ನು ಬಿಟ್ಟು ಇಂದೇ ನಾನು ಕೇಳುತ್ತಿರುವುದು.

ಈ ಒಂದು ಸಿನಿಮಾ ಗೆದ್ದರೆ ನನಗೆ ಸಾಕಷ್ಟು ಚೈತನ್ಯ ಬರುತ್ತದೆ. ನಾನು ಮುಂದೆ ಹಲವು ಸಿನಿಮಾಗಳ ಪ್ಲಾನ್ ಹಾಕಿಕೊಂಡಿದ್ದೇನೆ ಒಂದು ವೇಳೆ ನೀವೆಲ್ಲಾ ಈ ಸಿನಿಮಾ ನೋಡಿ ಗೆಲ್ಲಿಸದೇ ಹೋದರೆ ನನ್ನ ಎಲ್ಲಾ ಕನಸುಗಳು ಚೂರಾಗುತ್ತದೆ. ನನಗೆ ಮತ್ತೆ ಏಳಲು ಆಗದೆ ಇರುವ ರೀತಿ ಹೊಡೆತ ಬಿದ್ದು ಬಿಡುತ್ತದೆ ಹಾಗಾಗಿ ದಯಮಾಡಿ ಎಲ್ಲರೂ ಒಂದೇ ಒಂದು ಬಾರಿ ನಿಮ್ಮ ಹತ್ತಿರದಲ್ಲಿರುವ ಸಿನಿಮಾ ಮಂದಿರಗಳಿಗೆ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಹೋಗಿ ಸಿನಿಮಾ ನೋಡಿ.

ನನ್ನ ಸಿನಿಮಾ ಬಗ್ಗೆ ಯಾರೋ ಒಬ್ಬ ಎಲ್ಲೋ ಕೂತ್ಕೊಂಡು ಅವರಿಗಿಷ್ಟ ಬಂದ ಏಜೆನ್ಸಿ ಅವರು ವಿಮರ್ಶೆ ಬರೆದರೆ ಖಂಡಿತ ನನಗೆ ನೋವಾಗುತ್ತದೆ. ನೀವು ನನಗೆ ರೈಟಿಂಗ್ ಕೊಡಬೇಕು, ನೀವು ನನ್ನ ಸಿನಿಮಾ ಬಗ್ಗೆ ರಿವ್ಯೂ ಕೊಡಬೇಕು ಅದು ಮುಖ್ಯ ಅದನ್ನು ನೀವು ಮಾಡದೆ ಹೋದರೆ ಸಿನಿಮಾ ರಂಗ ಈಗ ಹಿಂದಿನಂತೆ ಇಲ್ಲ ಮತ್ಯಾರೋ ಕೂತ್ಕೊಂಡು ಅದರ ಬಗ್ಗೆ ಬರೆದು ಬಿಡುತ್ತಾರೆ. ಆ ರೀತಿ ಆಗುವುದು ನನಗೆ ಇಷ್ಟ ಇಲ್ಲ ನಾನು ಪ್ರಾಮಾಣಿಕವಾಗಿ ಇದುವರೆಗೆ ಈ ಸಮಾಜಕ್ಕೆ ಬದುಕಿದ್ದೇನೆ ಎನ್ನುವ ನಂಬಿಕೆ ನಿಮ್ಮೆಲ್ಲರಿಗೂ ಇದ್ದರೆ ದಯಮಾಡಿ ಒಂದೇ ಒಂದು ಬಾರಿ ನನ್ನ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ.

ನಿಮಗೆ ನಂಬಿಕೆ ಇಲ್ಲ ಎಂದರೆ ಒಂದು ಬಾರಿ ಟ್ರೈಲರ್ ನೋಡಿ ಅಥವಾ ಸಿನಿಮಾ ವನ್ನು ನಿಜವಾಗಿ ನೋಡಿರುವವರ ಬಳಿ ರಿವ್ಯೂ ಕೇಳಿ ಆನಂತರ ಥಿಯೇಟರ್ ಗೆ ಹೋಗಿ. ಎಲ್ಲೂ ನಿಮ್ಮ ಹಣಕ್ಕೆ ಮೋಸ ಆಗುವುದಿಲ್ಲ ಸಿನಿಮಾ ಇಲ್ಲಿ ತನಕ ತರೋತನಕ ಎಷ್ಟು ಕಷ್ಟ ಪಟ್ಟಿದ್ದೇನೆ ಎಂದು ನನಗೆ ಗೊತ್ತು. ಇಲ್ಲಿ ತನಕ ಮಾತ್ರ ಅದು ಸಿನಿಮಾ, ಈಗ ಅದೆಲ್ಲವನ್ನು ನಿಮ್ಮ ಮುಂದೆ ಇಡು ತ್ತಿದ್ದೇನೆ ಇದು ಈಗ ನಿಮ್ಮ ಸಿನಿಮಾ. ದಯವಿಟ್ಟು ನನಗೆ ಒಂದೇ ಒಂದು ಅವಕಾಶ ಕೊಟ್ಟು ಈ ಸಿನಿಮಾ ನೋಡಿ ನನ್ನನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ. ನನಗೆ ಸೋಲುತ್ತೇನೆ ಎನ್ನುವ ಭಯ ಇಲ್ಲ ಆದರೆ ಬಲವಂತವಾಗಿ ನನ್ನನ್ನು ಸೋಲಿಸಿ ಬಿಡುತ್ತಾರಲ್ಲ ಎನ್ನುವ ಬೇಸರ ಇದೆ ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಪ್ರಥಮ್ ಕೇಳಿಕೊಂಡಿದ್ದಾರೆ.

Leave a Comment