Sunday, June 4, 2023
HomeViral Newsಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ...

ಆಕ್ಸಿ-ಡೆಂಟ್ ಆಗೋಕೆ ಕುಡಿದು ಗಾಡಿ ಓಡಿಸಿದ್ದೇ ಕಾರಣ ನಾ.? ನಮ್ಮ ಕಮ್ಯುನಿಟಿಯಲ್ಲಿ ಬಾಟಲ್ ಓಪನ್ ಮಾಡದಿದ್ದರೆ ದೊಡ್ಡವರು ಬೈತಾರೆ ಎಂದಿದ್ದಕ್ಕೆ ರಿಷಿಕಾ.!

 

 

ಆಕ್ಸಿ-ಡೆಂಟ್ ಆದಾಗ ನೀವು ಕುಡಿದಿದ್ರಾ.? ನಮ್ ಕಮ್ಯೂನಿಟಿಲಿ ಬಾಟಲ್ ಓಪನ್ ಮಾಡ್ಲಿಲ್ಲ ಅಂದ್ರೆ ದೊಡ್ಡೊರು ಬೈತಾರೆ. ನಟಿ ರಿಷಿಕಾ ಕೊಟ್ಟ ಸಂಚಲನಾತ್ಮಕ ಹೇಳಿಕೆ. ಕನ್ನಡದ ಉದಯೋನ್ಮುಕ ನಟಿ ರಿಷಿಕ ಸಿಂಗ್ (Rishika Singh) ಅವರು ವರ್ಷದ ಬಳಿಕ ತಮಗಾದ ಅಪಘಾತದಿಂದ (Accident) ಸುಧಾರಿಸಿಕೊಂಡಿದ್ದಾರೆ. ಇನ್ನೇನು ಆ ಅಪಘಾತದಿಂದ ನಟಿಯ ಬದುಕೇ ಮುಗಿದು ಹೋಯಿತು ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಇದೀಗ ಫೀನಿಕ್ಸ್ ಪಕ್ಷಿಯಂತೆ ಎದ್ದಿರುವ ರಿಷಿಕ ಸಿಂಗ್ ರವರು ನೆನ್ನೆ ಅಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದಿನಗಳ ತನ್ನ ಚಿಕಿತ್ಸೆ ಹಾಗೂ ತನಗೆ ಫ್ಯಾಮಿಲಿ ಯಾವ ರೀತಿ ಸಪೋರ್ಟ್ ಇದೆ ಎಷ್ಟರಮಟ್ಟಿಗೆ ಮರಳಿ ಎದ್ದಿ ಬರುತ್ತಿದ್ದೇವೆ ಎನ್ನುವುದೆಲ್ಲಾ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇಂದು ನ್ಯೂಸ್ ಚಾನೆಲ್ ಒಂದು ಅವರ ಇಂಟರ್ವ್ಯೂ ಸಹ ಮಾಡಿದ್ದು ಆ ದಿನದ ಘಟನೆಗೆ ಕಾರಣ ಏನು ಎಂದು ಕೇಳಿದೆ. ಅದಕ್ಕೆ ರಿಷಿಕಾ ಸಿಂಗ್ ಅವರು ಕೊಟ್ಟ ಉತ್ತರ ಹೀಗಿತ್ತು.

ಆಗಷ್ಟೇ ಲಾಕ್ಡೌನ್ ಓಪನ್ ಆಗಿತ್ತು, ಆ ತನಕ ನಾವೆಲ್ಲರೂ ಯಾವುದೇ ಪಾರ್ಟಿ ಅಥವಾ ಬರ್ಥ್ ಡೇ ಮಾಡಬೇಕು ಎಂದರು ನಮ್ಮ ಮನೆ ಮೇಲೆ ಅಥವಾ ನಮ್ಮ ಅತ್ತೆ ಮನೆ ಮೇಲೆ ಮಾಡುತ್ತಿದ್ದೆವು. ಹಾಗಾಗಿ ಎಲ್ಲರಿಗೂ ಇದು ಬೋರ್ ಆಗಿ ಹೋಗಿತ್ತು ಚೇಂಜ್ ಬೇಕು ಎಂದು ಬೇರೆ ಕಡೆ ನಮ್ಮ ಫ್ಯಾಮಿಲಿಯವರ ಒಬ್ಬರ ಬರ್ಡೇ ಅರೇಂಜ್ ಮಾಡಿದೆವು ಇಡೀ ಕುಟುಂಬ ಹಾಗೂ ಹೆಚ್ಚಿನ ಫ್ರೆಂಡ್ಸ್ ಎಲ್ಲಾ ಸೇರಿದ್ದೆವು. ದೊಡ್ಡವರೆಲ್ಲಾ ಮೂರು ಗಂಟೆಗೆ ನೀವು ಇಲ್ಲೇ ಇರಿ ಎಂದು ಮನೆಗೆ ಬಂದು ಬಿಟ್ಟರು.

ಆದರೆ ನನಗೆ 5:30 ಅಷ್ಟರಲ್ಲಿ ಒಂದು ಕರೆ ಬಂದಿತ್ತು ಹಾಗಾಗಿ ನಾನು ನನ್ನ ಫ್ರೆಂಡ್ ಅನ್ನು ಕರೆದುಕೊಂಡು ಮನೆಗೆ ಬಿಡು ಎಂದು ಫೋರ್ಸ್ ಮಾಡಿ ಎಬ್ಬಿಸಿದೆ. ಅಂದು ಗಾಡಿ ಓಡಿಸುತ್ತಿದ್ದು ನಾನು ಅಲ್ಲ ನನ್ನ ಫ್ರೆಂಡ್ ಆದರೆ ಆತನಿಗೆ ಅದು ಆಟೋಮೆಟಿಕ್ ಕಾರು ಎಂದು ಗೊತ್ತಾಗಲಿಲ್ಲ ಮ್ಯಾನುವೆಲ್ ಕಾರು ರೈಡ್ ಮಾಡುವ ರೀತಿ ಮಾಡಿದ್ದಾನೆ. ಹಾಗಾಗಿ ಆತನ ಎಡವಟ್ಟಿನಿಂದ ಈ ರೀತಿ ಆಗಿದೆ ಸಂಪೂರ್ಣವಾಗಿ ನಾನು ಅದಕ್ಕೆ ಅವನನ್ನೇ ಹೊಣೆ ಮಾಡುವುದಿಲ್ಲ.

ಜೊತೆಗೆ ನಾನು ಮನೆಗೆ ಹೋಗುವಷ್ಟರಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಸೀಟ್ ಮೇಲೆ ಮಲಗಿದ್ದ ಕಾರಣ ಸೀಟ್ ಬೆಲ್ಟ್ ಧರಿಸಲಿಲ್ಲ ಅಷ್ಟು ಘಟನೆ ಆಗುವವರೆಗೂ ನಿದ್ರೆಯಲ್ಲಿದ್ದೆ. ಹಾಗಾಗಿ ಹೆಚ್ಚಿನ ನೋವು ಗೊತ್ತಾಗಲಿಲ್ಲ ಮತ್ತೆ ನನಗೆ ಜ್ಞಾನ ಬರುವಷ್ಟರಲ್ಲಿ ಆಸ್ಪತ್ರೆಯಲ್ಲಿದ್ದೆ ಆದರೆ ಹೆಚ್ಚಿನ ಜನ ನಾನೇ ಡ್ರಿಂಕ್ ಮಾಡಿ ನಾನೇ ಡ್ರೈವ್ ಮಾಡಿಕೊಂಡು ಬಂದು ಆ.ಕ್ಸಿ.ಡೆಂ.ಟ್ ಮಾಡಿಕೊಂಡಿದ್ದೇನೆ ಎಂದುಕೊಂಡಿದ್ದಾರೆ.

ನಾನು ಎಷ್ಟೋ ಬಾರಿ ಡ್ರಿಂಕ್ ಮಾಡಿ ಗಾಡಿ ಓಡಿಸಲೇಬೇಕಾದ ಪರಿಸ್ಥಿತಿ ಎದುರಿಸಿದ್ದೇನೆ ಆದರೆ ಎಂದು ಕೂಡ ಒಂದು ಸಣ್ಣ ಸ್ಕ್ರಾಚ್ ಕೂಡ ಮಾಡಿಕೊಂಡಿಲ್ಲ. ಜೊತೆಗೆ ಕೊರೋನ ಸಮಯದಲ್ಲಿ ನಾನು ನಮ್ಮ ಅಪ್ಪ ಎಲ್ಲರೂ ಡ್ರಿಂಕ್ ಬಿಡುವ ನಿರ್ಧಾರ ಮಾಡಿದ್ದೆವು ಹಾಗಾಗಿ, ಆ ಸಮಯದಲ್ಲಿ ನಾನು ಡ್ರಿಂಕ್ ಮುಟ್ಟುತ್ತಲೇ ಇರಲಿಲ್ಲ ಜೊತೆಗೆ ನಮ್ಮ ಕಮ್ಯುನಿಟಿಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ಬಾಟಲ್ ಓಪನ್ ಮಾಡದೇ ಇದ್ದರೆ ದೊಡ್ಡವರೆ ಬೈಯುತ್ತಾರೆ.

ನಮ್ಮ ಕಮ್ಯುನಿಟಿ, ಕೂರ್ಗಿಸ್, ಮಲಿಯಾಳಿ, ಪಂಜಾಬಿ ಇವರೆಲ್ಲ ಬಾಟಲಿ ಓಪನ್ ಮಾಡದೆ ಫಂಕ್ಷನ್ ಮುಗಿಸೋದೇ ಇಲ್ಲ ಕೆಲವು ಕಡೆ ದೇವರಿಗೆ ನೈವೇದ್ಯವಾಗಿಯೂ ಇಡುತ್ತಾರೆ. ಜನರ ಮೆಂಟಾಲಿಟಿ ಬದಲಾಗಬೇಕು ಅಷ್ಟೇ. ಕುಡಿಯುವುದೇ ದೊಡ್ಡ ತಪ್ಪು ಎಂದುಕೊಳ್ಳುತ್ತಾರೆ ಆದರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎನ್ನುವ ಅರಿವು ಇರಬೇಕು. ಆದರೆ ನಾವು ಎಂದು ಕೂಡ ಕುಡಿದು ಗಾಡಿ ಓಡಿಸುವುದಿಲ್ಲ ಆ ದಿನದ ನನ್ನ ಕೆಟ್ಟ ಸಮಯ ಇದಕ್ಕೆಲ್ಲ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.