ಪ್ರಕೃತಿಯು ಎಷ್ಟು ಸುಂದರವಾಗಿದೆ ನಮ್ಮ ನಂಬಿಕೆಗಳ ಪ್ರಕಾರ ಈ ಜೀವರಾಶಿಯ ಅಣು ಅಣುವು ಕೂಡ ಭಗವಂತನ ಸೃಷ್ಟಿಯೇ ಆಗಿದೆ. ಭಗವಂತನ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಶಕೂಡ ಜರುಗುವುದಿಲ್ಲ ಎಂದು ಹೇಳುತ್ತಾರೆ ಕೂಡ. ಹಾಗೆಯೇ ಭಗವಂತನ ಸಾಕ್ಷಾತ್ಕಾರ ಇದ್ದರೆ ಏನು ಬೇಕಾದರೂ ಬದಲಾಗಬಹುದು.
ಇದನ್ನು ಅರಿತಿದ್ದ ಬಸವಣ್ಣನವರು ನೀನೊಲಿದರೆ ಕೊರಡು ಕೊನರುವುದಯ್ಯ ಎನ್ನುವ ವಚನವನ್ನು ಬರೆದರು. ವೇದ, ಉಪನಿಷತ್ತು, ಧರ್ಮ ಗ್ರಂಥಗಳು, ವಚನ, ಕೀರ್ತನೆ ಎಲ್ಲದರ ಸಾರವೂ ಇದೇ. ಇಲ್ಲಿ ಎಲ್ಲವೂ ದೈವೇಚ್ಛೆ ನಾವು ನೆಪ ಮಾತ್ರ, ಸೂತ್ರಧಾರನ ಕೈಯಲ್ಲಿ ಕುಣಿಯುವ ಪಾತ್ರಧಾರಿಗಳು ನಾವೆಲ್ಲಾ ಎಂದು.
ಇಷ್ಟೆಲ್ಲ ಗೊತ್ತಿದ್ದರೂ ನಮ್ಮಲ್ಲಿ ಎಷ್ಟು ಜನರು ತಮ್ಮ ಬದುಕಿನ ಬಗ್ಗೆ ತೃಪ್ತಿಪಟ್ಟು ಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಇರುವುದೆಲ್ಲವನ್ನು ಬಿಟ್ಟು ಇಲ್ಲದಿದ್ದರ ಬಗೆಗೆ ಯೋಚನೆ, ಪ್ರತಿನಿತ್ಯವೂ ದೇವರಿಗೆ ಪೂಜೆ ಮಾಡುವುದೇ ತಮ್ಮ ಇಷ್ಟಾರ್ಥಗಳಿಗೆ ಅರ್ಜಿ ಹಾಕುವುದಕ್ಕೆ ಎಂದುಕೊಂಡು ಬಿಟ್ಟಿದ್ದಾರೆ.
ಈ ಸುದ್ದಿ ಓದಿ:- ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?
ಒಂದಾದರ ಮೇಲೆ ಒಂದರಂತೆ ಇವರ ಕೋರಿಕೆಯ ಪಟ್ಟಿಗಳು ಬೆಳೆಯುತ್ತಲೇ ಹೋಗುತ್ತದೆ ಮತ್ತು ಇನ್ನೂ ಒಂದು ವರ್ಗ ಇದೆ ಅವರು ಅನುದಿನವೂ ದೇವರಿಗೆ ಶಾಪ ಹಾಕುತ್ತಿರುತ್ತಾರೆ, ದೇವರಿಗೆ ನಿಂದಿಸುತ್ತಿರುತ್ತಾರೆ. ನಾನು ಅಂದುಕೊಂಡ ರೀತಿ ನೀನು ನಡೆಸಿಕೊಡುತ್ತಿಲ್ಲ ಎಂದು ಕೋ’ಪ ತೋರುತ್ತಿರುತ್ತಾರೆ.
ಹಾಗಾದರೆ ಭಗವಂತನನ್ನು ಒಲಿಸಿಕೊಳ್ಳುವ ಪರಿ ಯಾವುದು? ನಾವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದಾದರೆ ಅದನ್ನು ಹೇಗೆ ಕೇಳಬೇಕು ಗೊತ್ತಾ? ಮಹಾ ಭಾರತದಲ್ಲಿ ಶ್ರೀ ಕೃಷ್ಣ “ಕರ್ಮಣ್ಯೈ ವಾಧಿಕಾರಸ್ತೆ ಮಾ ಫಲೇಶು ಕದಾಚನ” ಎಂದು ಹೇಳಿದ್ದಾರೆ ಇದರ ಅರ್ಥ ನಾವು ನಮ್ಮ ಕರ್ಮವನ್ನು ಮಾಡಿದರೆ ಕರ್ಮಕ್ಕೆ ಅನುಸಾರವಾದ ಫಲಿತಾಂಶವನ್ನು ಭಗವಂತ ನೀಡುತ್ತಾನೆ ಎಲ್ಲವನ್ನು ಅವನ ಇಚ್ಛೆಗೆ ಬಿಟ್ಟು ನಮ್ಮ ಕಾರ್ಯವನ್ನು ನಾವು ಮಾಡಬೇಕು ಎಂದು.
ಈ ಸೃಷ್ಟಿಯಲ್ಲಿ ಒಂದು ಹೂವಿಗೆ ಇರುವ ಪರಿಮಳ, ಮತ್ತೊಂದು ಹೂವಿಗೆ ಇಲ್ಲ ಒಂದು ಪಕ್ಷಿಗೆ ಇರುವ ಬಣ್ಣ ಮತ್ತೊಂದು ಪಕ್ಷಿಗೆ ಇಲ್ಲ, ಒಂದು ಹಣ್ಣು ಕೊಡುವ ರುಚಿಯನ್ನು ಮತ್ತೊಂದು ಹಣ್ಣು ಕೊಡುವುದಿಲ್ಲ ಹಾಗೆಯೇ ಮನುಷ್ಯ ಗಣಕ್ಕೂ ಕೂಡ. ಒಬ್ಬ ಮನುಷ್ಯನ ಬದುಕಿನ ರೀತಿ ಮತ್ತೊಬ್ಬ ಮನುಷ್ಯನು ಇರುವುದಿಲ್ಲ ಎಲ್ಲದಕ್ಕೂ ಎಷ್ಟೆಷ್ಟು ಸಲ್ಲಬೇಕು ಎನ್ನುವುದನ್ನು ಭಗವಂತ ಈಗಾಗಲೇ ನಿರ್ಣಯಿಸಿರುತ್ತಾನೆ.
ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!
ನಮ್ಮ ಆಲೋಚನೆಗಳಿಗಿಂತಲೂ ಭಗವಂತನ ಆಲೋಚನೆ 100 ಪಟ್ಟು ಉತ್ತಮವಾಗಿರುತ್ತದೆ ಇದನ್ನು ನಂಬಿ ಭಗವಂತನ ಮೇಲೆ ಎಲ್ಲಾ ಭಾರವನ್ನು ಹಾಕಿ ಸತ್ಕಾರ್ಯಗಳಲ್ಲಿ ತೊಡಗಿಕೊಂಡು ಸದ್ಬುದ್ದಿಯನ್ನು ಕಲಿತು ಧರ್ಮ ಮಾರ್ಗದಲ್ಲಿ ನಾವು ಸಾಗಬೇಕು. ನೀವು ಬಹಳ ಪ್ರೀತಿಯಿಂದ ಸಾಕುತ್ತಿರುವ ನಿಮ್ಮ ಮಕ್ಕಳಿಗಾಗಿ ನೀವು ಎಷ್ಟು ಕಷ್ಟ ಪಡುತ್ತಿರುತ್ತೀರಾ ಮಕ್ಕಳ ಭವಿಷ್ಯಕ್ಕಾಗಿ ಒಳ್ಳೆ ಶಾಲೆಗೆ ಸೇರಿಸಿರುತ್ತೀರಾ ಆದರೆ ಪ್ರತಿನಿತ್ಯ ಮಕ್ಕಳು ಬಂದು ಒಂದಲ್ಲ ಒಂದು ದೂರು ಹೇಳುತ್ತಿದ್ದರೆ ನಿಮಗೆ ಹೇಗಾಗುತ್ತದೆ.
ಭಗವಂತನಿಗೂ ಹೀಗೆ ಅಲ್ಲವೇ ಹಾಗಾಗಿ ನಿಮಗೆ ಏನೇ ಸಿಕ್ಕಿದ್ದರು ಅದು ದೇವರ ಇಚ್ಛೆ ಆಗಿದೆ ಹಾಗಾಗಿ ಇರುವುದರ ಬಗ್ಗೆ ತೃಪ್ತಿ ಇರಲಿ ಅದನ್ನು ಕೂಡ ಪಡೆಯಲಾಗದವರ ಸ್ಥಿತಿ ಹೇಗಿದೆ ಎಂದು ಒಮ್ಮೆ ಯೋಚಿಸಿ. ದಿನ ಎದ್ದು ಭಗವಂತನಿಗೆ ನೂರಾರು ದೂರು ಹೇಳುವ ಬದಲು ನಿಮ್ಮ ಜೀವನವನ್ನು ಸ್ವಲ್ಪವಾದರೂ ಉತ್ತಮವಾಗಿ ಇಟ್ಟಿರುವುದಕ್ಕೆ ಕೃತಜ್ಞತೆಯನ್ನು ಹೇಳಿ. ನಿಮ್ಮ ಜೀವನದಲ್ಲಿ ಏಳಿಗೆಯಾಗಲು ನಿಮ್ಮ ಕನಸಿನಂತೆ ನೀವು ಬದುಕಲು ಪ್ರಾಮಾಣಿಕವಾದ ಪ್ರಯತ್ನ ಹಾಕಿ ಒಳ್ಳೆಯ ರೀತಿಯಲ್ಲಿ ಕಷ್ಟ ಪಡಿ ಆಗ ಖಂಡಿತ ಭಗವಂತ ದಯೆ ದಾರಿ ತೋರಿಸುತ್ತಾನೆ.