ತಮಿಳುನಾಡಿನ ಪ್ರಿಯ ಎಂಬ ಹುಡುಗಿಯು ತನ್ನ ಮದುವೆಯ ದಿನದಂದು ತಾಳಿ ಕಟ್ಟಿಸಿಕೊಂಡ 5 ನಿಮಿಷದ ಒಳಗಾಗಿ ಕಿತ್ತು ಬಿಸಾಡಿದ್ದಾಳೆ. ಆಕೆಯ ವಯಸ್ಸು 20 ವರ್ಷ. ಆಕೆಗೆ ತಾಳಿ ಕಟ್ಟಿದ್ದ ಹುಡುಗನ ಹೆಸರು ಚೆಲ್ಲಪಾಂಡಿ. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಹುಡುಗ ಹುಡುಗಿಯ ಒಪ್ಪಿಗೆಯನ್ನು ಪಡೆದೆ ಮದುವೆಯ ದಿನವನ್ನು ಫಿಕ್ಸ್ ಮಾಡಲಾಗಿತ್ತು. ಅದೊಂದು ಕಾರಣಕ್ಕಾಗಿ ಪ್ರಿಯಾಳಿಗೆ ಚೆಲ್ಲಪಾಂಡಿ ಜೊತೆಗಿನ ವಿವಾಹ ಜೀವನವು ಬೇಡವೆಂದು ಅನಿಸಿ ಹೋಯ್ತು.
ಹಿರಿಯರು ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ಅಥವಾ ಹುಡುಗಿಯೊಂದಿಗೆ ವಿವಾಹವಾಗುವ ಕಾಲವೊಂದಿತ್ತು. ಆದರೆ ಈಗಿನ ಕಾಲದಲ್ಲಿ ತಾವು ಇಚ್ಛಿಸಿದ ರೀತಿಯ ಬಾಳ ಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ. ಇಲ್ಲವೇ ತಂದೆ ತಾಯಿ ಅಥವಾ ಹಿರಿಯರು ನೋಡಿದ ಹುಡುಗನನ್ನು ತಮಗೆ ಸರಿ ಹೊಂದುತ್ತಾನೇ? ಇಲ್ಲವೇ? ಎಂದು ಪರೀಕ್ಷಿಸಿಕೊಂಡು ನಿರ್ಧರಿಸುತ್ತಾರೆ. ಅವರಿವರ ಮಾತಿಗೆ ಒಪ್ಪಿ ವಿವಾಹವಾಗುವುದಿಲ್ಲ. ಆಗಿನ ಕಾಲದಲ್ಲಿ ಮದುವೆಯಾಗುವ ಹುಡುಗಿಯನ್ನು ವರ ಹಾಗೂ ಆತನ ಕುಟುಂಬವು ನಾನಾ ವಿಧದ ಪ್ರಶ್ನೆಗಳನ್ನು ಕೇಳಿ ಪರೀಕ್ಷಿಸುತ್ತಿದ್ದರು.
ಈಗಿನ ಕಾಲದಲ್ಲಿ ವರನನ್ನು ಕೂಡ ಪರೀಕ್ಷಿಸಿಯೇ ಕೈಹಿಡಿಯುತ್ತಾರೆ. ಆದರೂ ಮೇಲೆ ಹೇಳಿದಂತಹ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆದು ಬೆಳಕಿಗೆ ಬರುತ್ತಲೇ ಇರುತ್ತವೆ. ಮದುವೆ ಎಂಬುದು ಪವಿತ್ರ ಬಂಧ. ಜೀವನಪರ್ಯಂತ ಯಾವುದೇ ಕಷ್ಟ ನಷ್ಟಗಳು ಎದುರಾದರೂ ಒಟ್ಟಾಗಿ ಸಾಗುತ್ತೇವೆ ಎಂದು ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮಾಂಗಲ್ಯ ಧಾರಣೆಯನ್ನು ಮಾಡುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಅಥವಾ ಸಂದರ್ಭಗಳು ಮದುವೆಯನ್ನೇ ಎಡವಟ್ಟು ಮಾಡುತ್ತಾರೆ.
ಪ್ರಿಯಾಳಿಗೆ ಹರೆಯದ ವಯಸ್ಸು ತುಂಬುತ್ತಿದ್ದಂತಲೇ ಮನೆಯಲ್ಲಿ ಹುಡುಗನನ್ನು ಹುಡುಕಿ ಮದುವೆ ಮಾಡಲು ನಿರ್ಧರಿಸುತ್ತಾರೆ. ಯಾವ ರೀತಿಯ ವರ ಬೇಕೆಂದು ಪ್ರಶ್ನಿಸಿದಾಗ ಆಕೆ ‘ಯಾವುದೇ ಕಾರಣಕ್ಕೂ ನಾನು ಕೈಹಿಡಿಯುವ ವರ ಕುಡುಕನಾಗಿರಬಾರದು’ ಎಂಬ ಕಂಡೀಶನ್ ಅನ್ನು ತಿಳಿಸುತ್ತಾಳೆ. ಅದೇ ರೀತಿ ಹತ್ತಾರು ಹುಡುಗರನ್ನು ನೋಡಿದ ಬಳಿಕ ಒಬ್ಬನು ಆಯ್ಕೆಯಾಗಿ ವಿವಾಹ ಮಾಡಲು ಮನೆಯವರು ನಿರ್ಧರಿಸುತ್ತಾರೆ. ಹುಡುಗ ಹುಡುಗಿಯ ಹಾಗೂ ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆಯ ದಿನಾಂಕವನ್ನು ಫಿಕ್ಸ್ ಮಾಡಿದರು.
ಚೆಲ್ಲಪಾಂಡಿ ನೋಡಲು ಚೆನ್ನಾಗಿದ್ದ ಜೊತೆಯಲ್ಲಿ ಉತ್ತಮ ಉದ್ಯೋಗವನ್ನು ಮಾಡುತ್ತಿದ್ದ. ಮದುವೆಯ ಮುಹೂರ್ತಕ್ಕೆ ಮುಂಚಿತವಾಗಿಯೇ ಮಂಟಪದಲ್ಲಿ ಚೆಲ್ಲಪಾಂಡಿ ಹಾಜರಿದ್ದ. ಪ್ರಿಯಾ ಹಾಗೂ ಚೆಲ್ಲಪಾಂಡಿಯ ವಿವಾಹ ಕಾರ್ಯವು ಅಂದುಕೊಂಡಂತೆ ನೆರವೇರುತ್ತಾ ಇರುತ್ತದೆ. ಬೆಳಗಿನ ಹೇಳು ಗಂಟೆಗೆ ಮುಹೂರ್ತವಿತ್ತು. ಪ್ರಿಯ ವರನ ಸಮೀಪಕ್ಕೆ ಬರುತ್ತಿದ್ದಂತಲೇ ಆಕೆಗೇನೊ ವಾಸನೆ ಬಂದಂತಾಯಿತು. ತಾಳಿಯನ್ನು ಕಟ್ಟುವ ಸಂದರ್ಭದಲ್ಲಿ ಇನ್ನೂ ಸಮೇತ ಬಂದಾಗ ಚೆಲ್ಲಪಾಂಡೆಯಿಂದ ದುರ್ವಾಸನೆ ಬಂತು. ಆತ ಕುಡಿದುಕೊಂಡು ಬಂದಿದ್ದ.
ಕುಡಿದ ಮತ್ತಿನಲ್ಲಿ ಚೆಲ್ಲಪಾಂಡಿ ಏನೇನೋ ಮಾತನಾಡುತ್ತಿದ್ದ. ಮದುವೆಯ ಮನೆಯಲ್ಲಿ ಸೇರಿದ ಅತಿಥಿಗಳಿಗೆ ಕೈ ತೋರಿಸಿ ಏನನ್ನೊ ಹೇಳುತ್ತಿದ್ದ. ಈ ರೀತಿಯಾದ ಅಸಭ್ಯ ವರ್ತನೆಯನ್ನು ಉಳಿದು ಬಂದು ತೋರಿಸಿದ ಚೆಲ್ಲಪಾಂಡಿಯ ಮೇಲಿನ ಗೌರವವೇ ಪ್ರಿಯಾಳಲ್ಲಿ ಕಡಿಮೆಯಾಯಿತು. ಈತನೊಂದಿಗೆ ಬದುಕಲು ಅಸಾಧ್ಯ ಎಂದು ಅನಿಸಿತು. ತಕ್ಷಣವೇ ಕಟ್ಟಿಸಿಕೊಂಡ ತಾಳಿಯನ್ನು ಕಿತ್ತು ತೆಗೆದು ಚೆಲ್ಲಪಾಂಡಿಯ ಮುಖದ ಮೇಲೆ ಪ್ರಿಯಾ ಬಿಸಾಡಿದಳು.
ತಂದೆ ತಾಯಿಗಳು ಮಗಳ ಈ ನಿರ್ಧಾರಕ್ಕೆ ಯಾವುದೇ ಅಡ್ಡಿ ತರದೆ ಚೆಲ್ಲಪಾಂಡಿಯಲ್ಲಿ ಇನ್ನೊಮ್ಮೆ ತಮ್ಮ ಮಗಳ ಜೀವನಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿ ಮದುವೆ ಮಂಟಪದಿಂದ ಹೊರಟರು. ಕುಡುಕನ ಜೊತೆ ನೋವು ಅನುಭವಿಸುತ್ತಾ ಜೀವನ ಕಳೆಯುವುದಕ್ಕಿಂತ ಪ್ರಿಯಾ ತೆಗೆದುಕೊಂಡ ನಿರ್ಧಾರವೇ ಸರಿ ಎಂದು ಹಲವಾರು ಹೆಣ್ಣು ಮಕ್ಕಳು ಹೇಳಿದರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸ