ಇತ್ತೀಚಿನ ದಿನಗಳಲ್ಲಿ ಆನ್ಲೈಲ್ ಶಾಪಿಂಗ್ ಗೆ ಜನ ಮೋರೆ ಹೋಗಿದ್ದಾರೆ. ತಮ್ಮ ಬ್ಯುಸಿ ಜೀವನದಲ್ಲಿ ಹೊರಗಡೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಕಾಲದ ಅಭಾವದಿಂದ ಕೂತಲ್ಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸುಲಭ ಮಾರ್ಗ ಆನ್ಲೈನ್ ಶಾಪಿಂಗ್. ಅಮೇಜಾನ್, ಪ್ಲಿಪ್ಕಾರ್ಟ್, ಮೀಶೋ ಇವು ಆನ್ಲೈನ್ ಶಾಪಿಂಗ್ ಆ್ಯಪ್ ಗಳು. ಒಬ್ಬ ಮಹಿಳೆ Meesho ನಲ್ಲಿ ರೂಪಾಯಿ 366 ಗಳಿಗೆ ಒಂದು ಚೂಡೀದಾರವನ್ನು ಇಷ್ಟ ಪಟ್ಟು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾಳೆ.
ನಂತರ ನಿಮಗೆ Meesho ಯಿಂದ 6 ಲಕ್ಷದ ಕಾರು ಬಹುಮಾಮವಾಗಿ ಬಂದಿದೆ ಎಂದು ಹೇಳಿ ಅವಳಿಗೆ ಒಂದು ಕರೆ ಬರುತ್ತದೆ. ಆ ಕರೆಯಿಂದ ಸುಮಾರು 50 ಸಾವಿರಗಳನ್ನು ಕೊಟ್ಟು ಮೋಸ ಹೋದಂತಹ ಒಂದು ಘಟನೆ. ತಮಿಳುನಾಡಿನ ತಿರುವಳೂರು ಜಿಲ್ಲೆಯ ಕೊತ್ತನೂರು ಗ್ರಾಮದ ನಿವಾಸಿ ಆಗಿರುವ ಧನಲಕ್ಷ್ಮಿ ಎಂಬ ಮಹಿಳೆ Meesho ಆ್ಯಪ್ ನಲ್ಲಿ ರೂ. 366 ಕ್ಕೆ ಒಂದು ಚೂಢೀದಾರವನ್ನು ಖರೀದಿಸಿದ್ದಾಳೆ ಚೂಡೀದಾರ ಬಂದ ಕೆಲವೇ ನಿಮಿಷಕ್ಕೆ ಧನಲಕ್ಷ್ಮಿಗೆ ಒಂದು ಕರೆ ಬರುತ್ತದೆ.
ಅದರಲ್ಲಿ ಮೇಡಂ ನಮಸ್ತೆ ನಾವು Meesho ಕಂಪನಿಯಿಂದ ಮಾತನಾಡುತ್ತಿದ್ದೇವೆ. ನೀವು ಇಂದು Meesho app ನಲ್ಲಿ ಒಂದು ಚೂಡೀದಾರವನ್ನು ಖರೀದಿಸಿದ್ದೀರಿ ಅದಕ್ಕಾಗಿ ನಿಮಗೆ ಆರು ಲಕ್ಷದ ಕಾರು ಬಹುಮಾನ ಬಂದಿದೆ ಎಂದು ಹೇಳಿದ. ನಿಮಗೆ ಕಾರು ಬೇಕಾ? ಅಥವಾ ದುಡ್ಡು ಬೇಕಾ? ಎಂದು ಧನಲಕ್ಷ್ಮಿಯನ್ನು ಕೇಳಿದ್ದಾನೆ. ನಿಮಗೆ ಕಾರು ಬೇಕಾದರೆ ನಿಮ್ಮ ಮನೆಯ ಬಳಿ ಕಾರು ಬರಲು ಮೂರು ದಿನ ಸಮಯ ಬೇಕಾಗುತ್ತದೆ. ನಿಮಗೆ ದುಡ್ಡು ಬೇಕಾದರೆ ಈ ಕೂಡಲೆ ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ ಎಂದು ಹೇಳುತ್ತಾನೆ.
ತನಗೆ ಬಹುಮಾನ ಬಂದಿದೆ ಎಂದು ಕೇಳಿದಾಗ ಧನಲಕ್ಷ್ಮಿ ತುಂಬಾ ಖುಷಿ ಪಟ್ಟಳು. ಕಾರಿನ ಬದಲು ಹಣ ಬೇಕಾದರೆ ನೀವು ಮೊದಲಿಗೆ 3250 ರೂಗಳನ್ನು ಮೊದಲು ಕಟ್ಟಬೇಕು ನಂತರ ಅರ್ಧ ಗಂಟೆಯೊಳಗೆ ನಿಮಗೆ ಹಣ ಬರುತ್ತದೆ ಎಂದು ಫೋನ್ ಮಾಡಿದವನು ಹೇಳಿದ್ದಾನೆ. ಇದನ್ನು ನಂಬಿ ಅವಳು 3250 ಗಳನ್ನು ಗೂಗಲ್ ಪೇ ಮೂಲಕ ಕಳುಹಿಸಿ ಅರ್ಧ ಗಂಟೆ ಕಾಯುತ್ತಾಳೆ. ಅದಾದ ಬಳಿಕ ಅವಳ ಅಕೌಂಟ್ಗೆ ಹಣ ಬರಲಿಲ್ಲ. ಆಗ ತಕ್ಷಣ ಫೋನ್ ಬಂದಿದ್ದ ನಂಬರ್ ಗೆ ಇವಳು ಫೋನ್ ಮಾಡುತ್ತಾಳೆ.
ಆಗ ಆತ ಮತ್ತಷ್ಟು ಹಣವನ್ನು ಜಿಎಸ್ ಟಿ ಆಗಿ ಸರ್ಕಾರಕ್ಕೆ ಕಟ್ಟಬೇಕು ನಂತರ ನಿಮಗೆ ಹಣ ಸಿಗುತ್ತದೆ ಎಂದು ಹೇಳುತ್ತಾನೆ ಅದನ್ನು ನಂಬಿ ಹಣವನ್ನು ಕಳುಹಿಸಿ ನಂತರ 6 ಲಕ್ಷ ಹಣ ಬರುತ್ತದೆ ಎಂದು ಒಂದು ಕಾಯುತ್ತಾಳೆ ಮತ್ತೆ ಅವನಿಗೆ ಕರೆ ಮಾಡಿ ಹಣ ಬರಲಿಲ್ಲ ಎಂದು ಕೇಳಿದಾಗ ಮತ್ತಷ್ಟು ಹಣ ಕಟ್ಟಬೇಕು ಎಂದು ಹೇಳಿ ಸುಮಾರು 50 ಸಾವಿರಗಳವರೆಗೆ ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸುತ್ತಾಳೆ.
ಆದರೂ ಹಣ ಬಾರದೆ ಇದ್ದಾಗ ಗಾಬರಿಯಿಂದ ಅವನಿಗೆ ಫೋನ್ ಮಾಡುತ್ತಾಳೆ ಆದರೆ ಅಷ್ಟರಲ್ಲಿ ಫೋನ್ ಸ್ವಿಚ್ ಆಫ್ ಆಗಿ ಬಿಟ್ಟಿರುತ್ತದೆ. ನಂತರ ಅವಳು ಸೈಬರ್ ಕ್ರೈಮ್ ಪೋಲೀಸರಿಗೆ ದೂರು ನೀಡುತ್ತಾಳೆ. ತಾನು ಹಣ ಕಳುಹಿಸಿದ್ದಕ್ಕೆ ಇದ್ದ ದಾಖಲೆಗಳು, ಕಾಲ್ ರೆಕಾರ್ಡ್ ಗಳು ಎಲ್ಲವನ್ನು ಪೋಲೀಸರಿಗೆ ನೀಡುತ್ತಾಳೆ. ದೂರು ದಾಖಲಿಸಿಕೊಂಡ ಪೋಲೀಸರು ಧನಲಕ್ಷ್ಮಿಗೆ ಮೋಸ ಮಾಡಿದ ಆರೋಪಿಗೆ ಹುಡುಕಾಡುತ್ತಿದ್ದಾರೆ. ಹೀಗೆ 365 ರೂ ಚೂಡೀದಾರ ಖರೀದಿಸಿ 50 ಸಾವಿರಗಳನ್ನು ಕಳೆದುಕೊಂಡಳು. ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರಿಕೆ ವಹಿಸಬೇಕು.